ಹೆರಿಯಮ್ಮಂಗೊಂದು ಹೊಸ ಸೀರೆ

January 4, 2014 ರ 9:30 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೆರಿಯಮ್ಮಂಗೊಂದು ಹೊಸ ಸೀರೆ

ಹೆತ್ತಮ್ಮ, ಹೊತ್ತಮ್ಮ(ಭೂಮಿ),ಪೊರೆದಮ್ಮ(ಗೋವು), ಹೀಂಗೆ ಮೂರುಜೆನ ಅಬ್ಬೆಕ್ಕಳೂ ನವಗೆ ಪ್ರಾತ:ಸ್ಮರಣೀಯರು ಹೇಳ್ತವು.ಅವರೊಟ್ಟಿಂಗೆ ವಿದ್ಯಾಮಾತೆಯನ್ನೂ ಸೇರ್ಸಿಗೊಳೆಕ್ಕಲ್ಲೊ? ಅಪ್ಪು. ವಿದ್ಯೆ,ಬುದ್ಧಿ ಇಲ್ಲದ್ದ ಮನುಷ್ಯ ಪಶುವಿಂಗೆ ಸಮಾನ”. ಬಲ್ಲವರ ಮಾತಿದು. ನಾವು ಕಲ್ತ ಶಾಲೆ, ವಿದ್ಯೆ ಕೊಟ್ಟ ಮಾತೆ ನಮ್ಮ ಮನಸಿನೊಳ ಗಟ್ಟಿಯಾಗಿ ಬೇರೂರಿದ ಬುತ್ತಿ. ನಮ್ಮ ಜೀವಮಾನಲ್ಲಿ ನವ ಬೇಕಪ್ಪಗೆಲ್ಲ ಹೆರ ತೆಗದು ಉಪಯೋಗಿಸುವ ಸುವಸ್ತು ಹೇಳುವದರಲ್ಲಿ ಸಂಶಯ ಇಲ್ಲೆ.ಇದು ನಮ್ಮ ಬಾಳಿಂಗೊಂದು ಕೈದೀಪವೂ ಅಪ್ಪು.

ಇದರೆಡೆಲಿ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನ ಶತಮಾನೋತ್ಸವ ಭಾರೀ ಗೌಜಿಲಿ ಕಳಾತು. ನಮ್ಮಒಪ್ಪಣ್ಣಬಯಲಿಲ್ಲಿಯೂ ಅದರ ನೇರ ಪ್ರಸಾರ ಮಾಡಿತ್ತಿದ್ದವು ಹೇಳ್ಲೆ ಸಂತೋಷಾವುತ್ತು. ಹಳೆ,ಶಿಥಿಲವಾದ ಶಾಲಾಭಾಗವ ತೆಗದು ಅಲ್ಲಿ ಹೊಸ ಕಟ್ಟೋಣ ಹಾಕಲೆ ಆಡಳಿತ ಸಮಿತಿಯವು ನಿರ್ಣಯ ಮಾಡಿದವು. ಕಾರ್ಯಕ್ರಮಕ್ಕೆ ನಾಲ್ಕೈದು ತಿಂಗಳು ಮದಲೆ ಅದರ ಕಾರ್ಯಕಾರೀ ಸಮಿತಿ ರೂಪುರೇಷೆ ಆತು. ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಗೆ ಎನ್ನನ್ನೂ ದೆನಿಗೇಳಿದವು (ಆನಲ್ಲಿಯ ಹಳೆ ವಿದ್ಯಾರ್ಥಿನಿ). ಸಮಿತಿಲಿ ಸಮಾಲೋಚನಗೆ ಒಂದೆರಡು ಸರ್ತಿ ಹೋಯೆಕ್ಕಾಗಿ ಬಂತು. ಸುರುವಾಣಸರ್ತಿ ಹೋಪಗ ಮದಲಾಣ ಹಾಂಗೆ ಇದ್ದಿದ್ದ ಶಾಲೆ, ಮತ್ತೊಂದರಿ ಹೋಪಗ ಶಾಲೆ ನೆಲಶಾಹಿಯಾಗಿರ್ಸರ ಕಂಡು ಎದೆ ಧಸಕ್ಕ ಹೇಳಿತ್ತಿದ ಒಂದಾರಿ! ಓದಿ, ಬರದು, ಓರಗೆ ಮಕ್ಕಳ  ಜೊತೆಗೂಡಿ, ಮಾಸ್ಟ್ರಕ್ಕಳ ಹತ್ರಂದ ಪಾಠ,ನೀತಿ,ನಿಯಮ,ಸಂಸ್ಕಾರ ಕಲ್ತೊಂಡು ಮೆರದ ಶಾಲೆ!. ತನ್ನ ದಿವ್ಯ ಗರ್ಭಂದ ಸಹಸ್ರಾರು ವಿದ್ವಾಂಸರ ಸಮಾಜಕ್ಕೆ ನೀಡಿದ ಅಪರೂಪದ ಅಬ್ಬೆ!!ಈಗ ಶೂನ್ಯವಾಗಿ ಕಂಡು, ರಜ ಹೊತ್ತು ಆ ಜಾಗೆಯನ್ನೇ ನೋಡಿದೆ!!.ಭಗವದ್ಗೀತೆಲಿ ಶ್ರೀಕೃಷ್ಣ ಹೇಳಿದ್ದು ನೆಂಪಾತು. ವಾಸಾಂಸಿ ಜೀರ್ಣಾನಿ ಯಥಾವಿಹಾಯ|ನವಾನಿ ಗೃಹ್ಣಾತಿ ನರೋsಪರಾಣಿ|  ಅಪ್ಪು, ಜೀರ್ಣಗೊಂಡ ಹಳತ್ತಿನ ತೆಗದು ನಮ್ಮ ಈ ಅಬ್ಬಗೆ ಹೊಸ ಸೀರೆ ಸುತ್ತುಸಲಿದ್ದನ್ನೆ!!!.ಮನಸ್ಸಿಲ್ಲಿ ಗುನುಗಿಕೊಂಡೆ. ಅದ! ಎಲ್ಲರೂ ಮೂಗಿಂಗೆ ಬೆರಳು ಮಡುಗುತ್ತ ಹಾಂಗೆ ಶತಮಾನೋತ್ಸವಕ್ಕಪ್ಪಗ ನಮ್ಮ ವಿದ್ಯಮ್ಮಂಗೆ ಹೊಸಸೀರೆ ಬಂತದ!

ಮೂರು ದಿನಗಳಕಾಲ (20/12/2013 ರಿಂದ22/12/2013ವರೆಗೆ) ಶತಮಾನೋತ್ಸವ ಕಾರ್ಯಕ್ರಮ ಸಂಪನ್ನಗೊಂಡತ್ತು. ಸಭಾವೇದಿಕೆಲಿ “ಹಳೆಬೇರಿನೊಟ್ಟಿಂಗೆ ಹೊಸಚಿಗುರು” ಹೇಳುವಹಾಂಗೆ ಹಿಂದಾಣ ಹೆಡ್ಮಾಸ್ಟ್ರಕ್ಕೊ, ಬೊಳುಂಬು ಸುಬ್ರಾಯ ಭಟ್ಟರು, ಪಡಿಯಡ್ಪು ಶಂಕರಭಟ್ಟರು,ಇವರೊಟ್ಟಿಂಗೆ ಅವರ ಹಳೆ ವಿದ್ಯಾರ್ಥಿಯೂ ಈಗಾಣ ಶಿಕ್ಷಣ  ಕ್ಷೇತ್ರದ  ಡಿ.ಇ.ಒ.ಆದ  ವೈ ಸತ್ಯನಾರಾಯಣ ಭಟ್ಟರು ಶೋಭಿಸಿದವು. ಹಾಂಗೇ ಹಳೆವಿದ್ಯಾರ್ಥಿಗೊಕ್ಕೆ ಏರ್ಪಡಿಸಿದ ಸ್ಪರ್ಧೆಲಿ ಎನಗೂ ಒಂದೆರಡು (ಜಾನಪದಗೀತೆ, ಭಕ್ತಿಗೀತೆ)ಬಹುಮಾನ ಬಂದಿದ್ದು, ವೇದಿಕಗೆ ಹೋಗಿ ತೆಕ್ಕಂಬಗ ಹಳೆ ವಿದ್ಯಾರ್ಥಿಜೀವನ ನೆಂಪಾತು. ವಿದ್ಯಾಮಾತೆಯ ಹೊಸ ಸೆರಗಿನೊಳಂಗೆ ಹೋಗಿ ಅಪ್ಪಿ ಬಂದ ಅನುಭವ ಆಗಿ ಪುಳಕಿತಗೊಂಡೆ!

~~~**~~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಶೀರ್ಷಿಕೆ ಲಾಯಕ ಆಯ್ದು ಶುದ್ದಿಗೆ.

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಲಾಯ್ಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 4. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ್

  ಹೆರಿಯಮ್ಮಂಗೊಂದು ಹೊಸ ಸೀರೆ ಯ ಮೂಲಕ ಶಾಲಾ ಜೀವನದ ನೆನಪಿನ ಮೆಲುಕು ಹಾಕಿದ್ದು ಭಾರಿ ಲಾಯ್ಕ,ಒಟ್ಟಿಂಗೆ ಹಾಡಿಲಿ ಬಹುಮಾನ ಬಂದದು ತಿಳಿದು ಕೊಷಿ ಆತು ವಿಜಯಕ್ಕ ,ಅಭಿನಂದನೆಗ

  [Reply]

  VN:F [1.9.22_1171]
  Rating: 0 (from 0 votes)
 5. ರವೀಂದ್ರ

  ಎನ್ ದೊಡ್ಡಾಯಿ ಯನ್ನತ್ರ ಮಾತಾಡ್ದಂಗಾತು. ಸಂಕ್ರಾಂತಿಯ ಶುಭ ನಿಂಗಕ್ಕೆಲ್ಲಕ್ಕೂ……

  [Reply]

  VA:F [1.9.22_1171]
  Rating: 0 (from 0 votes)
 6. ವಿಜಯತ್ತೆ
  ವಿಜಯತ್ತೆ

  ಹರೇರಾಮ, ಲಕ್ಶ್ಮಿಗೆ, ರವೀಂದ್ರಂಗೆ, ಗೋಪಾಲಂಗೆ, ಎಲ್ಲರಿಂಗೂ ಮಕರ ಸಂಕ್ರಾಂತಿಯ ಶುಭಾಶಯಂಗೊ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಪೆಂಗಣ್ಣ°ಜಯಗೌರಿ ಅಕ್ಕ°ಜಯಶ್ರೀ ನೀರಮೂಲೆವಿಜಯತ್ತೆನೀರ್ಕಜೆ ಮಹೇಶಪುತ್ತೂರುಬಾವಕಜೆವಸಂತ°ಕಳಾಯಿ ಗೀತತ್ತೆವೆಂಕಟ್ ಕೋಟೂರುಪುತ್ತೂರಿನ ಪುಟ್ಟಕ್ಕಮುಳಿಯ ಭಾವಶೀಲಾಲಕ್ಷ್ಮೀ ಕಾಸರಗೋಡುಚೆನ್ನೈ ಬಾವ°ದೊಡ್ಮನೆ ಭಾವತೆಕ್ಕುಂಜ ಕುಮಾರ ಮಾವ°ಸಂಪಾದಕ°ಶೇಡಿಗುಮ್ಮೆ ಪುಳ್ಳಿvreddhiಗಣೇಶ ಮಾವ°ಮಂಗ್ಳೂರ ಮಾಣಿವಸಂತರಾಜ್ ಹಳೆಮನೆಚೂರಿಬೈಲು ದೀಪಕ್ಕಪೆರ್ಲದಣ್ಣಯೇನಂಕೂಡ್ಳು ಅಣ್ಣಉಡುಪುಮೂಲೆ ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ