ಜಾಹೀರಾತು ನೋಡಿ ಮರುಳಾದರೆಂತಕ್ಕು!

ಆರಿಂಗಾರು ಒಂದು ವಿಷಯಲ್ಲಿ ಅತೀವ ಆಸಕ್ತಿ ಇದ್ದರೆ ಅದು ಒಂದು ರೀತಿಯ ಚಟವೇ ಸರಿ.
ಅದನ್ನೇ ಕೆಲವು ಜೆನ ಗೇಲಿ ಮಾಡಿ ಮೋಜು ಪಡವವ್ವೂ ಇದ್ದವು. ಚಟ ಇಪ್ಪವ ರಜಾ ಬೋಸುತನ ತೋರ್ಸಿದನೋ ಅದನ್ನೇ ಹಂಗುಸಲೂ ಸುರುಮಾಡುವದೂ ಇದ್ದು.
ಹಾಂಗೇ ಹಂಗುಸುವವು ಮಹಾ ಬುದ್ದಿವಂತಂಗೊ ಹೇಳಿ ಅವರ ತಪ್ಪು ಅನಿಸಿಕೆ ಅವಕ್ಕೆ ಅರ್ಥ ಆಪ್ಪದು ಬೋಸನ ಕೈಂದ ಒಂದಿನ ಮಂಗಳಾರತಿ ಆಗಿಯಪ್ಪಗಳೇ.

ಎನ್ನ ಹಾಂಗಿರ್ತ ನಾಕು ಜೆನಕ್ಕೆ ಯಕ್ಷಗಾನ ಮರುಳು.
ಎನ್ನ ನೆರೆಕರೆ ತೊಂಡ ಒಬ್ಬ ಕಾಂಬಗ ಕಾಂಬಗ ಕೇಳುವದು – ಹಾಮ್, ಇಂದೆಲ್ಲಿ?… ಇಂದಿದ್ದೋ?.. ನಿನಗೆಂತರ?.
ಅದರ ಮೇಗೆಂದ ಬೋಸು ಹಾ.. ಹೋ.. ಹೂ.. ಹೇಳಿ ಕೇಡು ಉದ್ಘಾರ ಬೇರೆ.
ಒಂದಿನ ಹೇಳಿದೆ ‘ಇಂದು ಎಲ್ಲಿಯೂ ಇಲ್ಲೆ, ನಿಂಗಳಲ್ಲೇ ಮಾಡುವೋ, ಬಂದವಕ್ಕೆ ಎಂತೂ ಬೇಡ , ಎಡೆಲಿ ಒಂದು ಚಾಯ ಕೊಟ್ರೆ ಸಾಕು. ಹೇಂಗೆ?’. ಅಂದಿಂದ ಬಾಯಿ ಮುಚ್ಚಿತ್ತು ಅಜ್ಜ.
ಇರಲಿ ಬಿಡಿ. ನಮ್ಮ ಸುತ್ತ ಮುತ್ತ ಯೆವತ್ತೂ ನಡವದೇ ಇದು ಅಪ್ಪೋ.
ಹಾಂಗೇ ನೋಡ್ಳೆ ಹೋದರೆ ಪ್ರತಿಯೊಬ್ಬನೂ ಒಂದಲ್ಲ ಒಂದು ವಿಷಯಲ್ಲಿ ಬೋಸನೇ.
ನವಗರಡಿಯದ್ದ ಅದೆಷ್ಟೋ ವಿಷಯ ನಮ್ಮ ನಿತ್ಯ ಜೀವನಲ್ಲೇ ಇದ್ದು. ಅಂದರೂ ಇದೆಲ್ಲ ಎನಗರಡಿಗು ಹೇಳಿ ಸ್ವ ಬೆನ್ನು ತಟ್ಟಿ ಹೆಡ್ಡ ಅಪ್ಪೋದು ಅದೆಷ್ಟೋ ಸರ್ತಿ ನಡದಿಕ್ಕೀತು.
ಒಬ್ಬನ ಬಲಹೀನತೆಯನ್ನೇ ಸದುಪಯೋಗಪಡಿಸಿ (ಅಲ್ಲಾ ಇದು ದುರುಪಯೋಗ ಹೇಳೇಕೋ?!) ಲಾಭ ಪಡವದು ಒಂದು ರೀತಿಯ ಮಾರ್ಕೆಟಿಂಗ್ ಟೆಕ್ನಿಕ್ಕೋ?. ಅಲ್ಲಾ ಹೇಳ್ಳೂ ಬತ್ತಿಲ್ಲೆ.
ಇದಾ ಮೊನ್ನೆ ಓ ಆ ಮನೇಲಿ ಕೆಲವು ದಿನಂದ ಟಿ.ವಿ. ಸರಿ ಕಾಣುತ್ತಿಲ್ಲೆ.
ಇಪ್ಪ ಹಾಂಗೇ ಬಂದಷ್ಟು ನೋಡಿಯೊಂಡಿತ್ತಿದ್ದು. ಅಂಬಗಂಬಗ ಎದ್ದು ಅದರ ಒಂದರಿ ತಟ್ಟಿರೆ, ಮುಟ್ಟಿರೆ ರಜ ಹೊತ್ತು ಸರಿ ಆವ್ತು . ಪುನಃ ಎದ್ದು ಹೋಗಿ ತಟಪಟ ಮಾಡಿಕ್ಕಿ ಬಂದು ಕೂರೆಕ್ಕು.
ಈ ತಟ್ಟುತ್ತ ಟಿ.ವಿ ಏರ್ಪಾಡು ಆತಿಲ್ಲೆ ಹೇಳಿ ಟಿ.ವಿ ರಿಪೈರ್ ಮಾಡುವದು ಹೇಳಿ ಅಂತಿಮ ತೀರ್ಮಾನಕ್ಕೆ ಬತ್ತು.
ಕಂಪೆನಿ ಸರ್ವಿಸ್ ಮಾಡಿರೆ ವಿಪರೀತ ಬಿಲ್ಲು ಮಾಡುಗು ಹೇಳಿ ಲೋಕಲ್ ಪೇಪರ್ ನೋಡಿಯಪ್ಪಗ ಅಲ್ಲಿ ಒಂದು ಜಾಹೀರಾತು – “ಫೋನಾಯಿಸಿ, ಮೂರೇ ಗಂಟೆಗಳಲ್ಲಿ ನಿಮ್ಮ ಮನೆಯಲ್ಲೇ ಟಿ.ವಿ ಸರಿಮಾಡಿ ಬಿಡುತ್ತೇವೆ.
ಓಹ್ ಇದು ಇಲ್ಯಾಣ ಹತ್ರೆ ಇಪ್ಪ ಮನುಷ್ಯನೇ ಆತನ್ನೇ ಹೇಳಿ ಫೋನ್ ಮಾಡಿತ್ತು.
‘ಸ್ವಾಮಿ ನಾನೀಗ ಓ ಅಲ್ಲಿ ಒಂದು ಕೆಲಸದಲ್ಲಿ ಇದ್ದೇನೆ. ಸಾಯಂಕಾಲ ಬರುತ್ತೇನೆ” ಹೇಳಿ ಭಾರೀ ನಯ ವಿನಯ ಉತ್ತರ .
ಸಾಯಂಕಾಲ ಫೋನ್ ಮಾಡಿಯಪ್ಪಗ ಫೋನ್ ತೆಗದ್ದಿಲ್ಲೆ. ಸರಿ ಬಿಟ್ಟತ್ತು. ಮರುದಿನ ಉದಿಯಪ್ಪಗಳೇ ಫೋನ್ ಮಾಡಿ ಆತು.

ಇದೋ ಈಗ ೨ ಗಂಟೇಲಿ ನಿಂಗಳ ಮನಗೆ ಎತ್ತುವೆ ಹೇಳಿದ್ದು ಅಂದಿಡೀ ಇಲ್ಲೆ. ಸುಭಗಣ್ಣನ ಸುಂದರನ ಹಾಂಗೇ.
ಪುನಃ ಮರುದಿನ ಫೋನ್ ಮಾಡಿತ್ತು. ಸಾರಿ ಸಾರ್ ನಿನ್ನೆ ಬೇರೆಂದು ಕೆಲಸಲ್ಲಿ ಬಾಕಿ ಆದೆ. ಇಂದು ಖಂಡಿತಾ ಆನೇ ಬಂದು ಮುಗುಸಿಕೊಡುತ್ತು ಹೇಳಿ ಭರವಸೆ ಸಿಕ್ಕಿತ್ತು.
ಪಾಪ ಪುಣ್ಯಾದಿಗ ಬಂತು ಹೊತ್ತೋಪಗ ಐದು ಗಂಟಗೆ ಕಳಚ್ಚಿ ನೋಡಿತ್ತು. ಏ.ವಿ. ಹೊಯ್ದು. ಅದರ ಬದಲ್ಸೇಕು , ಕೇಬಲ್ ಸರಿ ಇಲ್ಲೆ. ಅದ್ರ ಉಪಯೋಗ್ಸೇಡಿ .
ಹೆಂಗೂ ಡಿಶ್ ಇದ್ದನ್ನೇ ಅದರಲ್ಲೇ ನೋಡಿ ಹೇಳಿ ಸಾಂತ್ವನ ಹೇಳಿ ಎಂತದೋ ಗುರುಟಿಕ್ಕಿ ಅದರ ಬದಲ್ಸಿದ್ದೆ ಹೇಳಿ 1000/- ವಸೂಲು ಮಾಡಿಯೊಂಡು ಹೋತು.
ಮರುದಿನ ಟಿ.ವಿ. ಅದೇ ಹಳೇ ತಟಪಟ. ಅಂದಿಂದ ಎರಡು ತಿಂಗಳು ದಿನ ನಿತ್ಯ ಹೇಳ್ವಾಂಗೆ ಫೋನ್ ಮಾಡಿತ್ತು.
ಆದರೆ, ಬತ್ತೆ ಬತ್ತೆ ಹೇಳಿದ್ದಲ್ಲದ್ದೆ ಬಯಿಂದೇ ಇಲ್ಲೆ. ಸುಭಗಣ್ಣನ್ಗಾದರೆ ಸುಂದರನೇ ಆಯೇಕ್ಕಷ್ಟೇ. ಸರಿ, ಈ ಪಂಚಾತಿಗೆ ಆತಿಲ್ಲೆ ಹೇಳಿ ನೇರ ಎಲ್.ಜಿ. ಸರ್ವಿಸ್ ಸೆಂಟರಿಂಗೆ ಸಂಪರ್ಕಿಸಿತ್ತು.
ಅದು ಒಂದು ಗಂಟೇಲಿ ಬಂತು. ಬೋರ್ಡ್ ನೋಡಿತ್ತು. ಅಲ್ಲಿ ಏನೋ ಮಿಸ್ಟಿಕ್ಕು ಉಂಟು ಹೇಳಿ ಅಯೇಕ್ಕಾದ್ದರ ಮಾಡಿಕ್ಕಿ ಸಾಮಾನು ಸರ್ವೀಸ್ ಚಾರ್ಜು ಹೇಳಿ 750/- ತೆಕ್ಕೊಂಡು ಹೋತು.
ಟಿ.ವಿ. ಈಗ ನಿಜಕ್ಕೂ ಸರಿ ಆತು. ನೆಮ್ಮದಿ! (ಅಸಲೆಷ್ಟಾತು?!).
ಇದಾ ಪೇಟಗಳಲ್ಲಿ ಕನ್ನಡಕ ಅಂಗಡಿಗೊಕ್ಕೇ ಏನೂ ಕಮ್ಮಿ ಇಲ್ಲೆ. ಒಂದು ಸ್ಟ್ರೀಟಿಲ್ಲಿ ಎರಡರ ಹಾಂಗೆ ಇರ್ತು.
Computerized eye testing ಹೇಳಿ ಆಕರ್ಷಕ ಬೋರ್ಡ್ ಕೂಡ ಇರುತ್ತು.
ಫ್ರೀ ಕಣ್ಣು ಟೆಸ್ಟ್ ಅಲ್ಲಿ ಆವ್ತುದೆ. ವಾಸನಿಂಗೆ ಹೋದರೆ ಬರೇ ಪರೀಕ್ಷೆ ಮಾಡ್ಳೆ 500/- ಕೊಡೆಕ್ಕನ್ನೇ ಹೇಳಿ ಹೊಟ್ಟೆ ಉರಿತ್ತು. ಅಲ್ಲ ಕಣ್ಣಿನ ದಾಕುಟ್ರ ಹತ್ರೆ ಹೋದರೆ ಕಣ್ಣು ಪರೀಕ್ಷೆ ಹೇಳಿ 250/- ಆವ್ತಿಲ್ಲಿ.
ಈ ಸಂಕಟ ಅರ್ಥ ಮಾಡಿಯೊಂಡು ಒಬ್ಬ ದೋಸ್ತಿ ಹೋದ ಕಂಪ್ಯೂಟರ್ ಐ ಟೆಸ್ಟ್ ಮಾಡ್ಳೆ. ಧರ್ಮಕ್ಕೆ ಟೆಸ್ಟೂ ಆತು. ನಿಂಗೊಗೆ ಪವರ್ ಏರಿದ್ದು. ನಿಂಗೊ ಪ್ರೋಗ್ರೆಸ್ಸಿವ್ ಲೆನ್ಸ್ ಹಾಕೆಕು ಹೇಳಿ ಬರದು ಕೊಟ್ಟತ್ತು.
ಇವನ ಮದಲಾಣ ಕನ್ನಡಕ 800/- ಕ್ಕೇ ಮುಗುದ್ದು ಎರಡು ವರ್ಷ ಮದಲೆ. ಈಗ ಈ ವಿಶೇಷ ಕನ್ನಡಕಕ್ಕೇ 3500/- ಆತು. ತೆಕ್ಕೊಂಡ. ನಡವಲೆ ಎಡಿಯ. ಓದುಲೆ ಎಡಿಯಾ.
ಆ ಡಾಕುಟರ ಹೇಳಿತ್ತು ಒಂದೆರಡು ದಿನ ಹಾಕಿ ಅಭ್ಯಾಸ ಆಯೇಕ್ಕು . ಅಷ್ಟಪ್ಪಗ ಸರಿ ಅಕ್ಕು ಹೇಳಿ. ಆತು ಹೇಳಿ ಬಾಯಿ ಮುಚ್ಚಿ ಬಂದ. ಒಂದು ವಾರ ಆದರೂ ಇದರ ಹಾಕಿ ಎಂತ ಮಾಡ್ಲೆ ಎಡಿತ್ತಿಲ್ಲೆ.
ವಾಪಾಸು ಹೋದ. ಇಲ್ಲೆ ಕನ್ನಡಕ ಸರಿ ಇದ್ದು. ನಿಂಗೊ ಸರಿ ಕಾಣುತ್ತು ಹೇಳಿದ ಪವರ್ ಇದು ಹೇಳಿ ಒಂದೇ ಅದರ ತರ್ಕ. ಎಂತ ವಾದ ಮಾಡಿರು ಅದು ಒಪ್ಪಿತ್ತಿಲ್ಲೇ. ಹಾಳಾಗಿ ಹೋಗಲಿ ಹೇಳಿಕ್ಕಿ ಬೇರೊಂದು ಅಂಗಡಿಗೆ ಹೋದ.

ಅಲ್ಲಿ ಪರೀಕ್ಷೆ ಮಾಡಿಯಪ್ಪಗ ಇದೆಲ್ಲ ಬೇಡ. ಸಾಧಾರಣ ಲೆನ್ಸ್ ಸಾಕು ಹೇಳಿ ಆತು. ರೂ 1200/ರ ಒಳ ಕನ್ನಡಕ ಮಾಡಿಸಿ ಆತು. ಇವನ ಕಣ್ಣಿನ ಪ್ರಾಬ್ಲಮ್ ಸರಿ ಆತು ಕೂಡ.
ಮೂರು ವರ್ಷ ಕಳುದು ಈ ಅಂಗಡಿಗೆ ವಾಪಾಸು ಹೋದ. ನಿಜವಾಗಿ ಇವಂಗೆ ಕಣ್ಣು ಅರಚ್ಚುತ್ತು ಹೇಳ್ವ ಸಮಸ್ಯೆ ಮಾತ್ರ ಈಗ. ಹೇಂಗೂ ಅಲ್ಲಿ ಕಣ್ಣು ಪರೀಕ್ಷೆ ಮಾಡ್ತ ದಾಕುಟ್ರ ಇರ್ತನ್ನೇ.
ಧರ್ಮಕ್ಕೆ ಕಣ್ಣು ಪರೀಕ್ಷೆಯೂ ಆವ್ತು . ಕಣ್ಣಿಂಗೆ ಮದ್ದು ಬರದು ತೆಕ್ಕೊಂಡ್ರೆ ಆತಿದಾ ಹೇಳಿ ಲೆಕ್ಕಾಚಾರ ಇವಂದು. ಈ ಸರ್ತಿ ಈ ಅಂಗಡಿಲಿ ಡಾಕುಟರ ಬೇರೆ.
ಕೂರ್ಸಿ ಟೆಸ್ಟ್ ಆತು, ಕಣ್ಣು ಏನೂ ತೊಂದರೆ ಇಲ್ಲೆ, ಈ ಪವರ್ ಸಾಕಾವ್ತಿಲ್ಲೇ, ಹೆಚ್ಚಿಗಾಣ ಪವರ್ ಕಣ್ಣಡಕ ಹಾಕೆಕು ಹೇಳಿ 4200/- ರ ಏರ್ಪಾಡಿನ ವಹಿವಾಟು ಆತುದೇ.

ಕನ್ನಡಕ ಮರುದಿನವೇ ಬಂತು. ಆದರೇ, ಅದ್ರ ಹಾಕಿ ಇವಂಗೆ ನಡವಲೂ ಎಡಿತ್ತಿಲ್ಲೆ, ಓದಲೂ ಎಡಿತ್ತಿಲ್ಲೆ.
ಹೀಂಗೆ ನಾವು ಬದುಕ್ಕಿಲ್ಲಿ ಕಮ್ಮಿಗೆ ಆಯೇಕ್ಕು, ಧರ್ಮಕ್ಕೆ ಆಯೇಕ್ಕು ಹೇಳಿ ಆಸೆ ಮಾಡಿ, ತಜ್ನರ ಬಳಿಗೆ ಹೋಗದ್ದೆ, ಜಾಹೀರಾತು ಮೊರೆ ಹೋಗಿ ಪೈಸೆ ಹಾಳು ಮಾಡೆಕ್ಕಾದ ಪರಿಸ್ಥಿತಿ, ಅನಾವಶ್ಯ ಅಲೆದಾಟ ತಲೆಹರಟೆ.
ಹೀಂಗೇ, ಇನ್ನೂ ಅನೇಕ ಎಂ.ಎಲ್.ಎಂ ಕಂಪನಿಗೊ ತಲೆ ಎತ್ತಿಯೊಂಡು ಇದ್ದು. ಅದರಲ್ಲಿ ಬಪ್ಪ ಪ್ರಾಡಕ್ಟುಗೊ ಆರೋಗ್ಯಕರ, ಅರೋಗ್ಯಕ್ಕೆ ಅತ್ಯುಪಯುಕ್ತ, ನಿಂಗಳ ಆರೋಗ್ಯ ನಿಂಗಳೇ ಕಾಪಾಡದ್ರೆ ಹೇಂಗೆ ಹೇಳಿ ಮರ್ಳು ಕಟ್ಟಿ ಜನ ಸೇರ್ಸಿ ಅವ್ವುದೇ ಇದೇ ರೀತಿ ಬೇರೆ ಜನರ ಮರ್ಳು ಕಟ್ಟಿಸಿ ಮಾಡುವದಿದ್ದು.
SSLC, PUC, BA , BCOM ಕಲ್ತವ ಆರೋಗ್ಯದ ಬಗ್ಗೆ ಮಾತಾಡ್ಳೆ ಯಾವ ರೀತಿ ಅರ್ಹತೆ ಇರುತ್ತು ಹೇಳಿ ಚಿಂತುಸೆಕ್ಕಾದ ವಿಚಾರ.

ಮನುಷ್ಯನ ರಕ್ತ ಪರಿಚಲನೆ, ಹಾರ್ಮೋನ್, ನರ , ನಾಡಿ , ಸಕ್ಕರೆ ಖಾಯಿಲೆ ವಿಚಾರ ಇವಕ್ಕೆಷ್ಟು ಗೊಂತಿರ್ತು?
ಅದೇವುದನ್ನೂ ಲಕ್ಕಿಸದೆ ಈ ಪ್ರಾಡಕ್ಟುಗಳ ತೆಕ್ಕೊಂಡ್ರೆ ಮತ್ತೆ ಉಪದ್ರ ಎದುರುಸೋದು ಆರು.
ಅದೇ ರೀತಿ ಮೆಡಿಕಲ್ ಶಾಪಿಲ್ಲಿ ಹೋಗಿ ಜ್ವರಕ್ಕೆ ಮದ್ದು , ಶೀತಕ್ಕೆ ಮದ್ದು , ಬೇನಗೆ ಮದ್ದು ಹೇಳಿ ತೆಕ್ಕೊಂಬದು ಆರೋಗ್ಯಕರವಲ್ಲ.

ಜಾಹೀರಾತು ನೋಡಿ ಮರುಳಾದಾರೆ ಶುದ್ದ ಮರುಳು ನವಗಕ್ಕು.

ಚೆನ್ನೈ ಬಾವ°

   

You may also like...

18 Responses

 1. ರಘು ಮುಳಿಯ says:

  ಮಾಧ್ಯಮದ ಜಾಹೀರಾತು ನೋಡಿ,ಅವು ಕೊಡುವ ‘ಉಚಿತ’೦ಗಳ ಆಸೆಲಿ ವ್ಯವಹಾರ ಮಾಡಿರೆ ಮ೦ಗ ಅಪ್ಪದ ನಿಘ೦ಟು ಹೇಳ್ತದು ನೀತಿ.
  ಕಳುದ ಎರಡು ವರುಷ ಫೋನು ಮಾಡಿ ‘ನಿಮಗೆ ಬಹುಮಾನ ಬ೦ದಿದೆ,ಪ೦ಚತಾರಾ ಹೋಟೆಲಿಗೆ ನಿಮ್ಮ ಪತ್ನಿಯೊದನೆ ಬ೦ದು ಸ್ವೀಕರಿಸಿ” ಹೇಳಿ ಮ೦ಗ ಮಾಡಿಗೊ೦ಡಿತ್ತಿದ್ದವು.ನ೦ಬಿ ಹೋದರೆ ಟೊಪ್ಪಿ ಗ್ಯಾರ೦ಟಿ.ಬಹುಮಾನವನ್ನು ನಮ್ಮ ವಿಳಾಸಕ್ಕೆ ಕಳಿಸಿ ಹೇಳಿರೆ ಬಹುಮಾನವೂ ಇಲ್ಲೆ,ಎನ್ತ್ಸೂ ಇಲ್ಲೆ,ಹೇ೦ಗೇ?
  ಚೆನ್ನೈಭಾವನ ಲೇಖನ ಲಾಯ್ಕ ಆಯಿದು.

 2. ಎಷ್ಟೇ ಉಶಾರಿಯವಾದರೂ ಒಂದೊಂದು ಸರ್ತಿ “ಬೋಸ” ಆಗಿಯೇ ಆವ್ತವು… 😉
  ಲೇಖನ ಒಪ್ಪ ಆಯಿದು…

 3. Gopalakrishna BHAT S.K. says:

  ಕೆಲವು ಸಾಮಾನಿನ ಒಟ್ಟಿಂಗೆ ವಾರಂಟಿ ಕಾರ್ಡ್ ಹೇಳಿ ಸಿಕ್ಕುತ್ತು.ಅದರ ಸರೀ ಓದಿ ನೋಡಿರೆ ಅದರಲ್ಲಿ ಆ ಸಾಮಾನು ಹಾಳಾವುತ್ತ ಸಾಧ್ಯತೆ ಇಪ್ಪ ಹಲವಾರು ಕಾರಣಂಗೊಕ್ಕೆ ಇದು ಅನ್ವಯ ಆವುತ್ತಿಲ್ಲೆ ಹೇಳಿ ಇರುತ್ತು.ಅದರಿಂದ ಗ್ರಾಹಕರಿಂಗೆ ಯಾವ ಗ್ಯಾರಂಟಿ ಯೂ ಇಲ್ಲೆ!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *