ಹೋಯ್, ಕಾಲ ಬದಲಿತ್ತೋ? – ಜನ ಬದಲಿತ್ತೋ..!?

ಹೀಂಗೇ ಕೂದೊಂಡಿಪ್ಪಗ ಹೀಂಗೇ ಒಂದು ನೆಂಪು ಆತು. ನೆಂಪಾದ್ದರ ನಿಂಗಳತ್ರೆ ಹೇಳದ್ದೇ ಮನಸ್ಸೂ ಕೇಳುತ್ತಿಲ್ಲೆ ಇದಾ..
ಹಾಂಗೇಳಿ ಇದೆಂತ್ಸೂ ನಿಂಗೊಗೂ ಹೊಸತ್ತು ಹೇದು ಏನೂ ಆಗಿರ. ಹೀಂಗಿರ್ತು ನಿಂಗೊ ಅದೆಷ್ಟು ಕಂಡಿದ್ದೀರೋ.,
ಪೆಕೆಪೆಕೆ ನೆಗೆಮಾಡಿದ್ದೀರೋ ಎಂತ್ಸೋ. ಇರ್ಲಿ, ಅದು ಬಿಡಿ. ಈಗ ರಜಾ ಕಾರ್ಯಕ್ಕಾರು ಚಿಂತುಸುವೊ.

ಇದಾ ಆನು ಓ ಅಂದು ಒಂದು ಎಂಗಳ ಹತ್ರಾಣ ನೆಂಟ್ರ ಮದ್ವಗೆ ಹೋದ್ದು ಮಿನಿಯಾ. ನಾವು ಕೂಸಿನ ಕಡೆ. ಮದುವೆ ಕಳುತ್ತು ಚಂದಕ್ಕೆ.
ಎಡಿಗಾದ ಸುಧರಿಕೆಯೂ ಮಾಡಿದ್ದು. ಮರುದಿನ ಸಟ್ಟುಮುಡಿ. ಎಲ್ಲಿ?- ಓ ಆ ಮಡಿಕ್ಕೇರಿಂದ ರಜಾ ಮುಂದೆ. ಹೋಪಲೆ ಅಲ್ಪ ದಾರಿ ಇದ್ದು ಅಲ್ಲದೋ.
ಎರಡು ಮಿನಿ ಬಸ್ಸು ಇದ್ದತ್ತು ದಿಬ್ಬಾಣ ಹೋಪಲೆ. ಹೊಂಡಕುಳಿ ಮಾರ್ಗಲ್ಲಿ ಡಂಗಣ ಡಂಗಣ ಮಾಡಿಗೊಂಡು ಹೆರಟತ್ತು ಎಂಗಳ ದಿಬ್ಬಾಣ ಉದಿಗಾಲ ನಾಕುವರಗೆ ಹೆರಟುಗೊಂಡು.

ದಿಬ್ಬಾಣಲ್ಲಿ ಅವ್ವು ಇವ್ವು ಹೇಳಿ ಕಳಿಯಬಾರದ್ದ ನೆಂಟ್ರುಗೊ. ಕೆಲವು ಜೆನ ಅರೆ ಒರಕ್ಕಿಲ್ಲಿ ತೇಲಿಗೊಂಡಿತ್ತವು. ಒಳ್ಳೇ ಭಕ್ತಿಗೀತೆ ಬಸ್ಸಿಲ್ಲಿ ಕೇಳ್ತವಕ್ಕೆ ಹಾಕಿದ್ದು ಕೂಡ. ಒರಕ್ಕು ಬತ್ತವಂಗೆ ಎಲ್ಲಿಯೂ ಬತ್ತಿದಾ. ಹಾಂಗಾಗಿ ಅವಕ್ಕೆ ಇದೆಲ್ಲ ಉಪದ್ರ ಆಯ್ದಿಲ್ಲೆ. ಒರಕ್ಕು ಬಾರದ್ದವಂಗೆ ಅಲ್ಲದೋ ಸಂಕಟ. ಅವಕ್ಕೆ ಹೀಂಗೇ ಏನಾರು ಕೆಮಿಲಿ ಕೇಳಿಯೊಂಡಿದ್ದರೆ ಕಣ್ಣು ಮುಚ್ಚಿ ತಲೆತೂಗಿಯೊಂಡು ಕೂಬಲಾವ್ತಿದ. ಒಳ್ಳೇ ಶಾಸ್ತ್ರೀಯ ಸಂಗೀತ ಹಾಕಿದರೆ ನೆಗೆಮಾಣಿಯೂ ಅವಂಗೆ ಗೊಂತಿಪ್ಪ ತಾಳ ಹಾಕಿಯೊಂಡು ಆಸ್ವಾದುಸುವದಿದ್ದಿಡಾ.
ಹತ್ರೆ ಬಿಂಗಿ ಮಾಣಿ ಸಿಕ್ಕಿರೆ ತಟ್ಟಿ ಒರಗುಸಲೂ ಇದ್ದು, ಒರಗಿದವನ ಏಳುಸಲೂ ಇದ್ದಡಾ. ಹೀಂಗೇ.. ಬಸ್ಸು ಮುಂದೆ ಸಾಗಿಯೊಂಡಿತ್ತು.

ಅದಾ ಹೇಳ್ಳೆ ಬಿಟ್ಟೋದ್ದು – ನಮ್ಮ ಈ ಸೆಟ್ಟಿಲ್ಲಿ ಕೆಲವು ದೋಸ್ತಿ ಜವ್ವನಿಗರೂ ಇತ್ತಿದ್ದವು. ಹೊಂತಗಾರಿ ಯುವಕಂಗೋ.
ಎಷ್ಟಕ್ಕೂ ಸಾಕು. ಇರ್ಲಿ, ನಮ್ಮ ಮಾಣಿಯಂಗೊ ಯಾವಾಗಳೂ ಗಟ್ಟಿಗಂಗಳೇ. ಜವ್ವನಿಗರು ಹೇಳಿದಮತ್ತೆ ಕೇಳೆಕ್ಕೋ… ಕೈಲಿ ಒಂದು ಮೊಬೈಲು ಅದರ್ಲಿ ಎರಡೋ ಮೂರೋ ಸಿಮ್.
ಇನ್ನು ಕೆಲವರತ್ರೆ ಎರಡು ಮೂರು ಮೊಬೈಲು ಕೈಲಿ ಇಪ್ಪದು ಸಾಮಾನ್ಯ ಅಪ್ಪೋ. ಬಿಡಿ, ಚಿಂತಿಲ್ಲೇ. ಅವರವರ ವ್ಯವಹಾರ ಅವಕ್ಕವಕ್ಕೆ.
ಬಸ್ಸಿಲ್ಲಿ ಹಾಕಿದ ಪದ್ಯ ಬೇಡದ್ದವು ಅವರ ಮೊಬೈಲಿಲಿ ಇಪ್ಪ ಅವರ ಇಷ್ಟ ಪದ್ಯವ ಕೇಳಿಗೊಳ್ತವು. ಭಕ್ತಿಗೀತೆ , ಸುಗಮ ಗೀತೆ, ಚಿತ್ರಗೀತೆ, ಯಕ್ಷಗಾನ, ಹರಿಕಥೆ, ವೇದ, ಮಂತ್ರ, ಶ್ಲೋಕ, ಚೂರ್ಣಿಕೆ ಹೀಂಗೇ ಯಾವುದು ಬೇಕಾರು ಮೊಬೈಲಿಲಿ ಹಾಕಿ ಕೆಮಿಗೆ ಎರಡು ವಯರು ಸಿಕ್ಕಿಸಿ ಕೂದರೆ ಆರಿಂಗೂ ಉಪದ್ರ ಇರ್ತಿಲ್ಲೇ.
ಕೆಲವು ಹೀಂಗೇ ಇಪ್ಪ ಜವ್ವನಿಗರು, ಆ ಪದ್ಯ ಕೇಳಿಗೊಂಡು ಆಚ ಈಚವನ ಮೊರೆ ನೋಡಿಗೊಂಡು ಜೋರು ಜೋರು ನೆಗೆ ಮಾಡ್ಳೆ ಸುರುಮಾಡಿದವಯ್ಯ.
ಭಾರೀ ಖುಶೀ. ಎಂತದೋ ಮೊಬೈಲಿಲಿ ಪದ್ಯ ಕೇಳಿ ಸಾರ್ಥಕದ ಅನುಭವದ ಅಭಿವ್ಯಕ್ತವೊ ., ಉಮ್ಮಪ್ಪಾ!.
ಅಂತೇ ಒಬ್ಬನತ್ರೆ ಕೇಳಿದೆ ಎಂತರ ಮಾರಾಯ ವಿಷಯ ಅದು ಹೇಳಿ. ಅವ ಹೇಳಿದ.. ಇದಾ ಕೇಳು – ಭಾರೀ ಪಷ್ಟು ಇದ್ದು ಈ ಪದ್ಯ ಹೇಳಿ ಎನ್ನ ಕೆಮಿಗೂ ತುರ್ಕಿಸಿದ ಅದರ ವಯರ.
ಅಪ್ಪು ಪದ್ಯವೇ. ರಜಾ ಕೇಳಿದೆ . ಲಾಯಕ್ಕ ಇತ್ತು. ವಾಪಸು ಕೊಟ್ಟೆ.
ಹೋಯಿ., ‘ಕಾಲ ಬದಲಿತ್ತೋ – ಜನ ಬದಲಿತ್ತೋ’ ! ನವಗರಡಿಯ. ಆದರೆ ., ಮನುಷ್ಯರ ಅಭಿರುಚಿ ಹೀಂಗೂ ಆತನ್ನೇ ಹೇಳಿ ಗ್ರೇಶಿ ಹೋತು ಎನಗೆ.

~ ~ ~
ಪುಣ್ಯ ಕೋಟಿ ಗೋವಿನ ಹಾಡು – ಧರಣಿ ಮಂಡಲ ಮಧ್ಯದೊಳಗೆ …. ನಮ್ಮಲ್ಲಿ ಎಲ್ಲೆಡೆ ಸುಪ್ರಸಿದ್ದ .
ಭಾರೀ ಸತ್ವ , ಗುಣ, ಭಾವನೆ, ಆಶಯ ಇಪ್ಪ ಹಾಡು ಅದು. ಅದರ ಆಳ, ವಿಸ್ತಾರ, ತೂಕ – ಸವಿದಷ್ಟೂ ಹೆಚ್ಚಿಗೆಯೆ.
ಅಜ್ಞಾತ ಕವಿ ಬರದ ಈ ಅದ್ಭುತ ರಚನೆ ಪ್ರೀತಿ, ಸತ್ಯನಿಷ್ಠೆ , ಪ್ರಾಮಾಣಿಕತೆಯ ಸಾರುವ ಹಸು ತನ್ನ ತಾನೇ ಹುಲಿಗೆ ಅರ್ಪುಸುವ ಅಂತಃಕರಣ ಸಾರ ಅದರಲ್ಲಿ, ಕನ್ನಡ ಮಾತೆಯ ಹೆಮ್ಮೆಯ ಹಾಡು.
ಇದರ ವಿಶಿಷ್ಠತೆಯ ಮನಗಂಡು ಕಿರಿಯ ಪ್ರಾಥಮಿಕ ಶಾಲೆ ಪಾಠ ಪುಸ್ತಕಲ್ಲಿ ಸೇರ್ಸಿದ ಪದ್ಯ ಇದು.

ಈ ಅಧ್ಬುತ ಪದ್ಯವ ಈಗಾಣ ಕಾಲಕ್ಕೆ ಈಗಾಣ ಸಾಹಿತ್ಯವ ಹಾಕಿ ಅಶ್ಲೀಲ ವ್ಯಕ್ತಿಯ ಚಿತ್ರಣ ಮಾಡಿ ಅದೇ ಧಾಟಿಲಿ ಹಾಡಿ ಎಲ್ಲೆಡೆ ಭರದಿಂದ ಪ್ರಚಾರಕ್ಕೆ ಬಂದ ಪದ ಈಗ ಮೊಬೈಲ್ನೋಳವೂ ಹೊಕ್ಕು ಅದರ ಉದಿಯಪ್ಪಾಣ ಚಳಿ ಚಳಿ ಚಳಿಗೆ ಬಿಸಿ ಬಿಸಿ ಕೇಳ್ತಾ ಇಪ್ಪದು ಕಂಡತ್ತು.
ಅದೂ ಒಂದು ಸರ್ತಿ ಅಲ್ಲಾ ಎರಡು ಸರ್ತಿ ಅಲ್ಲಾ ಪದೇ ಪದೇ ಕೇಳಿ ಖುಶೀ ಪಡುತ್ತದರ ನೋಡಿ ನಿಜಕ್ಕೂ ಬಹಳ ಬೇಜಾರಾತು.
ಹಾಸ್ಯ ಹೇಳ್ವ ಹೆಸರಿಲ್ಲಿ ಈ ರೀತಿ ಮೋಜು ಮಾಡುತ್ತ ಇಪ್ಪದು ಪ್ರತಿಯೊಬ್ಬ ಕನ್ನಡಿಗ ಎಚ್ಚೆತ್ತು ಧ್ವನಿ ಎತ್ತೆಕ್ಕಾದ ಕರ್ತವ್ಯ ಇದ್ದು ಹೇಳಿ ಎನ ಕಾಣುತ್ತು.

ಮತ್ತೆ ನೋಡಿರೆ, ಇದೀ ರೀತಿ, ಶ್ರೀ ಪುರಂದರ ದಾಸರ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಪದವೂ ರಾಜಕಾರಣಿಗಳ ಚಿತ್ರರಂಗ ಕಲಾವಿದರ ಹೆಸರುಗಳ ಜೋಡಿಸಿ ದುರ್ಬಳಕೆ ಆಯ್ದು.
ಹೀಂಗೇ ಹುಡುಕ್ಕಿರೆ ಅದೆಷ್ಟು ಸುಪ್ರಸಿದ್ದ ಹಾಡುಗೊ, ಕೀರ್ತನೆಗೊ, ಎಂತಕೆ , ಮಂತ್ರಂಗಳೂ ಈ ರೀತಿ ಖ್ಯಾತಿ ಆಯ್ದೋ!!.
ಇದರ ಹಾಡಿದ್ದು ಆರು ಹೇಳಿ ಕೇಳಿರೆ ನಿಜವಾಗಿ ಇನ್ನೂ ಖೇದ – ಸಾಹಿತ್ಯಕ್ಕೆ ಆರು ತಲೆಬಾಗಿ ನಮಸ್ಕರಿಸಿ ಉಳಿಸಿ ಬೆಳೆಶೆಕ್ಕೋ ಅಂತಹ ( ಪ್ರಸಿದ್ಧ – ಮಧ್ಯಮ) ಖ್ಯಾತಿ ಪಡೆದ ಯುವ ಕಲಾವಿದರೇ !

ಚೆನ್ನೈವಾಣಿ:: ಉತ್ತಮ ಸಾಹಿತ್ಯವ ಬೆಳೆಸಿ, ಉಳುಸಲೆ ಪ್ರಯತ್ನಿಸಲೆ ಎಡಿಯದ್ದರೂ ಅಳುಸುವ, ಕಳಂಕುಸುವ ಪ್ರಯತ್ನ ಆಗದ್ದೇ ಇರಲಿ.

ಚೆನ್ನೈ ಬಾವ°

   

You may also like...

7 Responses

 1. ಬೊಳುಂಬು ಕೃಷ್ಣಭಾವ° says:

  ಬೇಗ ಪ್ರಸಿದ್ಧಿಗೆ ಬರೆಕ್ಕು ಹೇಳಿ ಆಲೋಚನೆ ಮಾಡುವವೇ ಹೀಂಗೆ ಮಾಡುವದು. ಸ್ವಂತ ರಾಗಸಂಯೋಜನೆ ಮಾಡ್ಲೋ ಸ್ವತಂತ್ರ ಸಾಹಿತ್ಯವ ಬರೆವಲೋ ಯೋಗ್ಯತೆ ಇಲ್ಲದ್ದರೆ ಎಂತ ಮಾಡುಗು?

 2. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಜೆನ ಬದಲಿದ್ದು,ಕಾಲ ಬದಲಿದ್ದಿಲ್ಲೆ.
  ಅಣಕವಾಡು ಹೇಳುವ ಒಂದು ಪ್ರಕಾರ ಇದ್ದನ್ನೆ.ಅದರ ಬರವವು ಮೂಲ ಕೃತಿಕಾರರಿಂಗೆ ಗೌರವ ತೋರಿಸಿ,ಒಂದು ಕ್ರಮಲ್ಲಿ ಅಣಕ ಮಾಡೆಕ್ಕು.ಅದಕ್ಕೆ ಒಂದು ಸೀಮಾರೇಖೆ ಎಳಕ್ಕೊಳೆಕ್ಕು.ಯಾವಾಗಲೂ ಅದು ಹಾಸ್ಯ ಹೋಗಿ ಬೇರೇನೋ ಅಪ್ಪಲಾಗ.ಅದರಲ್ಲೂ ನಮ್ಮ ಸಮಾಜ ಅತ್ಯಂತ ಗೌರವಿಸುವ ಸಾಹಿತ್ಯವ ಅಣಕ ಮಾಡುವಾಗ ಅಪಚಾರ ಆಗದ್ದ ಹಾಂಗೆ ನೋಡೆಕಾದ್ದು ಮುಖ್ಯ.
  ಉತ್ತಮ ಲೇಖನ.

 3. ಶರ್ಮಪ್ಪಚ್ಚಿ says:

  ಚೆನ್ನೈ ವಾಣಿ ಲಾಯಿಕ ಆಯಿದು.
  ಸತ್ಯವಂತರಿಗಿದು ಕಾಲವಲ್ಲ ಹೇಳಿ ದಾಸರೇ ಹಾಡಿದ್ದವು. ಎಲ್ಲಾ ಕಾಲಲ್ಲಿಯೂ ದಾರಿ ತಪ್ಪಿದ ಜೆನಂಗೊ ಇರ್ತವು. ಸರಿಯಾದ ಕಾಲಲ್ಲಿ ಸಂಸ್ಕಾರ ಸಿಕ್ಕದ್ದರೆ, ಹಾದಿ ತಪ್ಪುವ ಪ್ರಮಾಣ ಜಾಸ್ತಿ.
  ಪ್ರಸಿದ್ದಿ ಹೊಂದಿದವೇ ಹೀಂಗಿಪ್ಪ ಪದ್ಯಂಗೊಕ್ಕೆ ಸ್ವರ ಕೊಡ್ತವು, ರಾಗ ಸಂಯೋಜನೆ ಮಾಡ್ತವು ಹೇಳಿರೆ, ಅವು ಕಲೆಯ ಅರಾಧಕರಲ್ಲ. ಕಲೆಯ ಕೊಲೆ ಮಾಡುವವು.

 4. ತೆಕ್ಕುಂಜ ಕುಮಾರ ಮಾವ° says:

  ಜೆನಂಗಳ ಯೋಚನ ಪದ್ಧತಿ(thought process), ಬದಲಿದ್ದು. ಒಳ್ಳೆ ಸಂಸ್ಕಾರದ ಕೊರತೆ ಎದ್ದು ಕಾಣುತ್ತು.

 5. ರಘು ಮುಳಿಯ says:

  ಸ್ವ೦ತಿಕೆಯ ಕೊರತೆಯೂ,ಸ೦ಸ್ಕಾರದ ಅಭಾವವೂ ಒಟ್ತು ಸೇರಿರೆ ಹೀ೦ಗೇ ಅಕ್ಕಷ್ಟೆ..

 6. ಸ್ವತಃ ಪ್ರತ್ಯುತ್ಪನ್ನಮತಿ ಇಲ್ಲದ್ದ ಬೆಗುಡಂಗೊ, ಯೇವದಾರು ಇಪ್ಪದರ ಕುಟ್ಟೆ ತೆಗವಲೆ ಹೆರಡುದು.
  ಹೊಸತ್ತು ಮಾಡ್ಳೆ ಎಡಿಯದ್ದ ತಪ್ಪಿಂಗೆ ಹಳತ್ತರ ಲಗಾಡಿ ತೆಗೆತ್ಸು.
  ಆ ಮೂಲಕ ಆದರೂ ನಾಕು ಜೆನ ಆನು ಮಾಡಿದ್ದರ ಹೇಳಲಿ – ಹೇಳ್ತದು ಅದರ ಹಿಂದಾಣ ಭಾವನೆ – ಹೇಳಿದವು ಪಾರೆ ಮಗುಮಾವ.

  ಈ ಬುದ್ಧಿಯೂ ಹಾಂಗೇ ಅಡ.
  ಅಷ್ಟೊಳ್ಳೆ ಪದ್ಯವ ಹಾಂಗೆ ಪೆರಟ್ಟುಮಾಡಿ ಹೇಳಿದ್ದು ಪುಣ್ಯಕೋಟಿಗೆ ಗೊಂತಾಗಿದ್ದರೆ ಹುಲಿಯ ಬದಲು ಅದುವೇ ಹಾರಿ ಜೀವ ಬಿಡ್ತಿತೋ ಏನೋ!
  ಅಲ್ಲದೋ? 🙁

  ಶುದ್ದಿ ಲಾಯಿಕಾಯಿದು. ಹರೇರಾಮ

 7. ಎರುಂಬು ಅಪ್ಪಚ್ಚಿ says:

  ಚೆನ್ನೈ ಭಾವಾ ಕಾಲವುದೇ ಬದಲಿದ್ದು … ಜನಂಗಳೂ ಬದಲಿದ್ದವು … ಈಗಾಣ ಕಾಲಕ್ರಮಲ್ಲಿ ಹೆಚ್ಚು ಬದಲಿದವು ಹೇಳಿರೆ ನಮ್ಮ ಹವ್ಯಕ ಜವ್ವನಿಗಂಗ … ಅದಕ್ಕೆ ಹವ್ಯಕ ಮಕ್ಕಗೆ ಸಿಕ್ಕಿದ ಆಧುನಿಕತೆಯ ಗಾಳಿ ಕಾರಣವೋ ಅಥವಾ ಅವರ ಮನೆಯವರ ಸಲುಗೆಯೋ ಗೊಂತಿಲ್ಲೆ …. ನಮ್ಮವು ಬೇರೆಯವರೊಟ್ಟಿಂಗೆ ಸೇರಿ ಹಾಳಾವುತ್ತಾ ಇದ್ದವು … ನಮ್ಮವರಲ್ಲಿಪ್ಪ ಸಂಸ್ಕ್ರಾರ ಕಮ್ಮಿ ಆವುತ್ತಾ ಇದ್ದು …ಅಲ್ಲದೋ ..

  ಶುದ್ದಿ ಲಾಯಿಕ ಆಯಿದು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *