Oppanna.com

ಕಲ್ಲಿನ ಹೂಗಿನ ಚಟ್ಟಿ

ಬರದೋರು :   ಅನಿತಾ ನರೇಶ್, ಮಂಚಿ    on   03/03/2013    18 ಒಪ್ಪಂಗೊ

ಅನಿತಾ ನರೇಶ್, ಮಂಚಿ
Latest posts by ಅನಿತಾ ನರೇಶ್, ಮಂಚಿ (see all)

ಮೊನ್ನೆ ಎಂಗಳ ಸಣ್ಣಕ್ಕ ಮನೆಗೆ ಬಂದದು ಜಾಲಿಂದ ಮೇಲೇಯೇ ಬಾರ.ಹೂಗಿನ ಗೆಡುಗಳ ಗೆಬ್ಬಾಯ್ಸಿಕೊಂಡೇ ಬಾಕಿ. ‘ಒಂದು ಮುಕ್ಕುಳಿ ಕಾಫಿ ಕೊಡ್ತೆ ಮತ್ತೆ ನೋಡ್ಲಕ್ಕು ಆ ಗೆಡುಗಳ.. ನಿನಗೆ ಬೇಕಾದ್ದರ ಹೇಳು ಗೆಲ್ಲುದೇ ಕೊಡುವೆ’ ಹೇಳಿ ಹೇಳಿದೆ.
‘ಎನಗೆ ಗೆಡು ಎಂತದೂ ಬೇಡ ಅಕ್ಕ..ಆದರೆ ಆ ಕಲ್ಲಿನ ಹೂಗಿನ ಚಟ್ಟಿ ಇದ್ದನ್ನೆ ಅದು ಎಲ್ಲಿಂದ ತಂದದು ನಿಂಗ ಹೇಳಿ ಹೇಳಿಕ್ಕಿ. ಭಾರೀ ಚೆಂದ ಇದ್ದದು. ಎನಗೂ ನಾಲ್ಕು ತರ್ಸೆಕ್ಕು. ತುಂಬಾ ಪೈಸೆ ಇದ್ದಾದಿಕ್ಕು ಅಲ್ಲದಾ..’ ಹೇಳಿ ಕೇಳಿತ್ತು.
‘ಪೈಸೆ ಎಂತರ ಮಾರಾಯ್ತಿ .. ಅದು ಆನೇ ಮಾಡಿದ್ದು’ ಹೇಳಿ ಹೇಳಿದೆ.
ಅದರ ಕಣ್ಣು ಹೆರ ಉದುರುವಷ್ಟು ದೊಡ್ಡಾತು.. ‘ಅಯ್ಯೋ ಅಕ್ಕ ಎನಗೆ ಈಗಳೇ ಹೇಳಿ ಕೊಡು.. ಆನುದೇ ಮಾಡ್ತೆ ಹೇಳಿತ್ತು.’
ಈಗ ನಿಂಗಳೂ ಎಂತಕೆ ನಿಲ್ಕುದು.. ಎಲ್ಲೊರಿಂಗು ಹೇಳಿ ಕೊಡುವ ಕಲ್ತರೆ ಆರುದೇ ಮಾಡ್ಲಕ್ಕು ಇದರ.
ಈಗ ಬೇಕಪ್ಪ ಸಾಮಾನುಗ ಎಂತದು ಹೇಳಿ ನೋಡುವನಾ..

ಹೊಳೆ ಕರೆಲಿ ಸಿಕ್ಕುವ ಉರುಟು ಕಲ್ಲು ಇದು ಚಟ್ಟಿಯ ಗಾತ್ರ ಹೊಂದಿಕೊಂಡು ಬೇಕಾವ್ತು. ಆದರೂ ಸಾಧಾರಣ ಒಂದು ಚಟ್ಟಿಗೆ ಎಪ್ಪತ್ತೈದು ಕಲ್ಲು ಬೇಕಕ್ಕು.
ಇನ್ನು ಬೇಕಪ್ಪದು ಸಿಮೆಂಟು ಮತ್ತೆ ಹೊಯಿಗೆ
ಅದರ ಆಕಾರ ಕತ್ತರ್ಸುಲೆ ಹಳೇ ಪೇಪರ್.
ಕೈಗೆ ಹಾಯ್ಕೊಂಬಲೆ ಒಂದು ಗ್ಲೌಸ್.

ಎಲ್ಲಾ ಸಾಮಾನು ತಯಾರಾತೋ..
ಈಗ ಮಾಡುದು ಹೇಂಗೆ ಹೇಳಿ ನೋಡುವ ಆಗದೋ..
ಚಟ್ಟಿಯ ಆಕಾರ ಯಾವ ನಮೂನೆ ಬೇಕು ಹೇಳಿ ಆ ಆಕಾರಲ್ಲಿ ಕತ್ತರಿಸಿ ಮಡಿಕ್ಕೊಳ್ಳಿ. ಉಧಾ: ಆಯತ, ಚೌಕ, ಉರುಟು, ತ್ರಿಕೋನ.. ಹೀಂಗೆ..

ಮೊದಲು ಸಮ ಅಳತೆಲಿ ಸಿಮೆಂಟು ಮತ್ತೆ ಹೊಯಿಗೆ ತೆಕ್ಕೊಂಡು ನೀರು ಹಾಕಿ ಕಲಸಿ.
ಕತ್ತರಿಸಿದ ಪೇಪರಿನ ಸಮತಟ್ಟು ನೆಲಲ್ಲಿ ಮಡುಗಿ ಅದರ ಮೇಲೆ ಈ ಸಿಮೆಂಟು ಕಲಸಿದ್ದರ ಮುಕ್ಕಾಲು ಇಂಚು ದಪ್ಪಕ್ಕೆ ಹಾಕಿ, ಸಮವಾಗಿ ಹರಗಿ. ಮೂರೋ ನಾಲ್ಕೋ ಸಣ್ಣ ಒಟ್ಟೆ ಮಾಡಿ.
ಇದರ ಒಂದು ದಿನ ಹನ್ಸದ್ದೆ ಹಾಂಗೆ ಮಡುಗೆಕ್ಕು. ಮರುದಿನ ನೀರು ಹಾಕಿ. ಒಂದೆರಡು ದಿನ ಚೆಂಡಿ ವಸ್ತ್ರ ಹಾಕಿ ಮಡುಗಿ.
ಹೀಂಗೆ ಇದರ ಅಡಿಯಾಣ ಹೊಡೆ (ಬೇಸ್) ತಯಾರಾವ್ತು.

ಇನ್ನು ಚಟ್ಟಿ ಮಾಡುದು ಹೇಂಗೆ ಹೇಳ್ತೆ ಕೇಳಿ.
ಸಿಮೆಂಟಿಂಗೆ ನೀರು ಹಾಕಿ ಹಲ್ಲು ತಿಕ್ಕುವ ಪೇಸ್ಟಿನ ಹದಕ್ಕೆ ಕಲಸಿ. ತಯಾರಾದ ಅಡ್ಯಾಣ ಹೊಡೆಯ ಮಡಿಕ್ಕೊಳ್ಳಿ. ಕೈಗೆ ಗ್ಲೌಸ್ ಹಾಯ್ಕೊಳ್ಳಿ. ಅದರ ಅರುವಿಂಗೆ ಕೈಲಿ ಈ ಪೇಸ್ಟಿನ ಹಾಯ್ಕೊಂಡುಬನ್ನಿ. ಅದರ ಮೇಲೆ ಕಲ್ಲುಗಳ ಮಡಿಕ್ಕೊಂಡು ಬನ್ನಿ. ಈಗ ಕಲ್ಲಿನ ಮೇಲೆ ಪುನಾಃ ಸಿಮೆಂಟಿನ ಪೇಸ್ಟ್ ಹಾಕಿ ಅದರ ಮೇಲೆ ಕಲ್ಲು ನಿಧಾನಕ್ಕೆ ಮಡುಗಿ. ಚೂರು ಹೊತ್ತು ಬಿಟ್ಟು ಮತ್ತೆ ಸಿಮೆಂಟು ಹಾಕಿ ಅದರ ಮೇಲೆ ಕಲ್ಲು ಮಡುಗಿ. ಹೀಂಗೆ ನಿಂಗೊಗೆ ಚಟ್ಟಿ ಎಷ್ಟು ಎತ್ತರ ಬೇಕೋ ಅಷ್ಟು ಎತ್ತರ ಮಾಡಿಕೊಳ್ಳಿ. ಅದರ ಮೇಲೆ ಸಿಮೆಂಟಿನ ಪೇಸ್ಟಿನ ಹರಗಿ ಲೆವೆಲ್ ಸರಿ ಮಾಡಿ. ಇದರನ್ನುದೆ ಒಂದು ದಿನ ಹನ್ಸದ್ದೆ ಮಡುಗೆಕ್ಕು. ಮರುದಿನಂದ ಒಂದು ಹತ್ತು ದಿನ ಆದರೂ ನೀರು ಹಾಕಿ ಕ್ಯೂರಿಂಗ್ ಮಾಡಿ.
ಈಗ ನೋಡಿ ನಿಂಗೊಗೆ ಹೂಗಿನ ಗಿಡ ನೆಡ್ಲೆ ಚೆಂದದ ಚಟ್ಟಿ ತಯಾರಾವ್ತು. ಇದರ ಚೆಂದಕ್ಕೆ ಒಳ ಮಡುಗುದು ಹೇಳಿ ಆದರೆ ಒಂದು ಸರ್ತಿ ಮರಕ್ಕೆ ಕೊಡುವ ಟಚ್ ವುಡ್ ಕೊಡ್ಲಕ್ಕು.

ಇದರಲ್ಲಿ ನಿಂಗಳ ಕಲ್ಪನೆ ಉಪಯೋಗಿಸಿ ಪೆನ್ ಸ್ಟ್ಯಾಂಡ್, ಮೊಬೈಲ್ ಸ್ಟ್ಯಾಂಡ್ ಎಲ್ಲಾ ಮಾಡ್ಲಕ್ಕು. ಹತ್ತರಾಣವಕ್ಕೆ ಒಳ್ಳೇ ದಿನ್ನದ ಉಡುಗೊರೆ (ಕಲ್ಲು ಆದ ಕಾರಣ)ಆಗಿಯೂ ಕೊಡ್ಲಕ್ಕು.

ಸಣ್ಣಕ್ಕ ಕೂಡ್ಲೆ ಮಾಡುದೇ ಹೇಳಿ ಹೊಳೆ ಕರೆಂಗೆ ಕಲ್ಲು ತಪ್ಪಲೆ ಹೋದು.
ನಿಂಗಳೂ ಮಾಡ್ತಿ ಹೇಳಿ ಗ್ರೇಶುತ್ತೆ..

18 thoughts on “ಕಲ್ಲಿನ ಹೂಗಿನ ಚಟ್ಟಿ

  1. ಅನಿತಕ್ಕ , ಚಟ್ಟಿ ಭಾರಿ ಲಾಯ್ಕ ಇದ್ದು. ಎನಗೂ ಮಾಡಿದರೆ ಅಕ್ಕು ಹೇಳಿ ಕಾಣ್ತಾ ಇದ್ದು. ಹೇಳಿ ಕೊಟ್ಟದಕ್ಕೆ ಧನ್ಯವಾದಂಗೊ…

  2. ಅನಿತಕ್ಕ,
    ಕಲ್ಲಿನ ಚಟ್ಟಿ ಲಾಯ್ಕ ಆಯಿದು, ಮಾಡಿದ್ದದೂ… ಬರದ್ದದೂ ಕೂಡಾ! 🙂
    ಈಗ ಕಲ್ಲು ಯೇವ ಹೊಳೆಕರೆಲಿ ಸಿಕ್ಕುತ್ತು ಹೇಳಿ ಯೋಚನೆ ಆಯಿದು!!! ಸಾರಡಿ ತೋಡಕರೇಲಿ ಈ ನಮುನೆ ಕಲ್ಲು ಸಿಕ್ಕುಗಾ ಹೇಳಿ ಒಬ್ಬ° ಸುಭಗಣ್ಣನ ಹತ್ರೆ ವಿಚಾರ್ಸಿಗೊಂಡಿತ್ತಿದ್ದ° 😉

    ಅನಿತಕ್ಕ,
    ನಿಂಗಳದ್ದು ಶುದ್ದಿಗ ಬತ್ತಾ ಇರಲಿ…

  3. ಕಲ್ಲಿನ ಕೆತ್ತಿ ಶಿಲ್ಪಿ ಮೂರ್ತಿ ಮಾಡಿರೆ , ಅನಿತಕ್ಕ° ಮೆತ್ತಿ ಹೊಸರೂಪ ಕೊಟ್ಟಿದವು. ಹೂಗಿ೦ದ ಚಟ್ಟಿಯೇ ಕಾ೦ಗೋ ಹೇಳಿ,ಜಾಲಿಲಿ.
    ಒ೦ದು ಪ್ರಯತ್ನ ಮಾಡೇಕು.

  4. ಯಬ್ಬ.. ಆನುದೆ ಎಲ್ಲರ ಹಾಂಗೆ ಚಟ್ನಿ ಹೇಳಿ ಓದಿದ್ದು.. ನೋಡುವಗ ಚಟ್ಟಿ. ಲಾಯ್ಕಾತು, 🙂

    ಮನೆಗೆ ಬಂದರೆ ಒಂದು ಚಟ್ಟಿ ಹೊತ್ತೊಂಡೋಪಲಕ್ಕು 🙂

  5. ನಿಂಗೊ ಎಲ್ಲರು ಅದರ ಚಟ್ನಿ ಹೇಳಿ ಓದಿ ಎನ್ನ ಚಟ್ನಿ ಮಾಡ್ತಿರನ್ನೆ 🙂 🙂

  6. ನೆಗೆ ಮಾಣಿ ಹೇಳಿದರಲ್ಲಿ ತಪ್ಪಿಲ್ಲೆ ಆನುದೆ ಚಟ್ನಿ ಹೇಳಿ ಗ್ರೇಶಿದೆ ಇರಲಿ ಚಟ್ಟಿ ಲಾಯ್ಕಾಯ್ದು..

  7. ಭಾರೀ ಲಾಯಿಕಾಯಿದು ಚಟ್ಟಿ ಮಾಡುದರ ಫೋಟೋ ಸಮೇತ ಬರದ್ದು.
    ಸುರುವಿಂಗೆ ಆನುದೆ ನೆಗೆ ಮಾಣಿಯ ಹಾಂಗೆ ಚಟ್ನಿ ಹೇಳಿ ಓದಿದೆ….

    1. ಒಳ್ಳೇ ತೂಕದ್ದು ಹೇಳಿ ಆಗಡದೋ.. ಭಾರ ಇರ್ತು 🙂 🙂

  8. ಹೋ, ಚಟ್ಟಿಯೋ…
    ಪಕ್ಕನೆ ಅಂಬೆರ್ಪಿಲಿ ಓದುವಗ “ಚಟ್ಣಿ” ಹೇಳಿ ಆತೊಂದರಿ.

    ಈ ಕಲ್ಲಿನ ಹೂಗಿನ ಚಟ್ಣಿ ಎಂತರಪ್ಪಾ..? ವೇಣಿಅಕ್ಕಂಗೆ ಇಷ್ಟು ಸಮೆಯ ಗೊಂತಿತ್ತಿಲ್ಲೆಯೋ – ಗೊಂತಿದ್ದಿದ್ದರೆ ಬೈಲಿಂಗೆ ಹೇಳ್ತಿತವನ್ನೇ – ಹೇಳಿ ಗ್ರೇಶಿಂಡಿದ್ದಿದ್ದೆ..

    ಚಟ್ಟಿ ಪಷ್ಟಿದ್ದು. ಮಾವಿನಮೆಡಿ ಎಳತ್ತು – ಸಣ್ಣದು ಸಿಕ್ಕಿರೆ ಇದರ್ಲಿ ಬಿತ್ತಾಕಲಕ್ಕೋ ಹೇಳಿ ಆಲೋಚನೆ ಮಾಡುದು ಆನು! 😀

    1. ಆನೂ ಪಕ್ಕನೆ ಕಲ್ಲಿನ ಹೂಗಿನ ಚಟ್ನಿ ಹೇಳಿ ಓದಿದೆ!
      ಪಾರೆ ಹೂಗಿನ ಚಟ್ನಿ ಮಾಡಲೆ ಎಡಿತ್ತೋ ಏನೊ! ದೀಪಾವಳಿಗೆ ದನಂಗೊಕ್ಕೆ ಮಾಲೆ ಮಾಡಿ ಹಾಕುವ ಹೂಗು-ಪಾರೆ ಹೂಗು.

  9. ತುಂಬಾ ಚೆಂದ ಇದ್ದು . ಇದು ಎಷ್ಟು ಸಮಯ ಬಾಳತರ ಬತ್ತು ? ಕಲ್ಲು ಬರೆ ಸಿಮೆಂಟಿನ ಪೇಷ್ಟಿ೦ದ ಅ೦ಟುಸುವ ಕಾರಣ ಬೆಶಿಲಿಂಗೆ ಚೆಪ್ಪೆ ಎಳಕ್ಕಿ ಬತ್ತೊ?

  10. ತುಂಬಾ ಲಾಯಕ್ಕಿತ್ತು ಐಡಿಯಾ! ಆನೂ ಮನಸ್ಸಲ್ಲೇ ಒಂದು ಚಟ್ಟಿ ಮಾಡಿ ಗಿಡ ನಟ್ಟೆ! Best, ಪೆಜತ್ತಾಯ ಮಾಮ

  11. ಹಾ° ಚಟ್ಟಿ ಕೆಣಿ ಗೊಂತಾತು. ಲಾಯಕ ಆತಿದು. ಇನ್ನಾಣ ಸರ್ತಿ ಸಾರಡಿ ತೋಡ ಕರೇಂಗೆ ಹೋಪಗ ದಾಸನ ಅಲ್ಲ., ಕಲ್ಲಗಳನ್ನೇ ಹುಡುಕ್ಕುಸ್ಸು. ಮನಗೆ ತಂದು ರಜಾ ಸಿಮೆಂಟು ಉದ್ದಿಮಡಗಿರೆ ದಾಸನ ಗೆಡು ನೆಡ್ಲೂ ಆತು.. ಗುಲಾಬಿ ಗೆಡು ನೆಡ್ಳೂ ಆವ್ತಪ್ಪೊ.

    ಸುಂದರಿ ಎಂಕ್ಲಾ ಬೋಡು ಹೇಳಿರೂ ಹೇಳುಗಪ್ಪೋ.

    ಅಕ್ಕೋ… ಪಷ್ಟ್ಲಾಸು ಸುದ್ದಿ ಇದು ಹೇದೊಪ್ಪ.

    ಚಟ್ಟಿ ರಜಾ ದೊಡ್ಡಕೆ ಮಾಡಿ ಸಿಮೆಂಟು ಒಳವೂ ಉದ್ದಿರೆ ಕಾಲುತೊಳೆತ್ತಲ್ಲಿ, ಪಾತ್ರೆ ತೊಳವಲ್ಲಿಂಗೂ ಉಪಯೋಗುಸಲಕ್ಕಪ್ಪೋ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×