Oppanna.com

ಕೆಕ್ಕಾರು ಮಠ- ಆಹಾರೋತ್ಸವ

ಬರದೋರು :   ವಿಜಯತ್ತೆ    on   27/08/2014    3 ಒಪ್ಪಂಗೊ

ಕೆಕ್ಕಾರು ಮಠದ , ಆಹಾರೋತ್ಸವಲ್ಲಿ ನಮ್ಮ ಅಕ್ಕ-ತಂಗೆಕ್ಕೊ

ನಿತ್ಯಾನಂದಕರೀ ವರಾ ಭಯಕರೀ| ಸೌಂದರ್ಯ ರತ್ನಾಕರೀ| ನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷಮಾಹೇಶ್ವರೀ|ಪ್ರಾಲೇಯಚಲವಂಶಪಾವನಕರೀ|ಕಾಶೀಪುರಾಧೀಶ್ವರೀ|ಭಿಕ್ಷಾಂದೇಹಿಕೃಪಾವಲಂಬನಕರೀ|ಮಾತಾನ್ನಪೂರ್ಣೇಶ್ವರೀ||

ನಮ್ಮ ಹೊಟ್ಟೆ ತುಂಬಲೆ ಕಾರಣವಾದ ಅನ್ನಪೂರ್ಣೇಶ್ವರಿಗೆ   ನಮಸ್ಕರಿಸುತ್ತಾ  ಶ್ರೀ ಗುರುಗೊಕ್ಕೆ ಸಾಷ್ಟಾಂಗ ಮಾಡುತ್ತೆ.  ನಮ್ಮ ಶ್ರೀಸಂಸ್ಥಾನದವರ ಜಯಚಾತುರ್ಮಾಸ್ಯಲ್ಲಿ ಶ್ರೀಗುರುಗೊ  ಮದಾಲು ಯೋಜಿಸಿಕೊಟ್ಟದು ಮಾತೃವಿಭಾಗಕ್ಕೆ.
|ಶರೀರ ಮಾಧ್ಯಮ್ ಖಲುಧರ್ಮ ಸಾಧನಂ| ಹೇಳುವ ಹಾಂಗೆ, ಯಾವುದೇ ಕರ್ಮ ಸಾಧನೆ ಮಾಡೆಕ್ಕಾದರೆ; ಶರೀರಕ್ಕೆ ಆರೋಗ್ಯ ಅತೀಅಗತ್ಯ. ದೇಹ ಆರೋಗ್ಯಲ್ಲಿರೆಕಾದರೆ; ಅದರಲ್ಲಿ ನಾವು ಸೇವಿಸುವ ಆಹಾರವೇ ಮುಖ್ಯ.ಇದು ಶ್ರೀಗುರುಗಳ ಆಶೀರ್ವಚನಲ್ಲಿ ಬಂದ ವಿಚಾರ!. ಅಡಿಗೆ ಹೇಳಿದ ಕೂಡ್ಳೆ ನೆಂಪಪ್ಪದು ಕ್ರಮವಾಗಿ ಅಜ್ಜಿ, ಅಬ್ಬೆ ,ಅತ್ತೆಕ್ಕೊ, ಅಕ್ಕ,ತಂಗೆಕ್ಕೊ! ಒಟ್ಟಿಲ್ಲಿ ಮಾತೃವಿಭಾಗ!. ಇಂದಿನ ದಿನಂಗಳಲ್ಲಿ ಅಡುಗೆ ಸತ್ವಯುತವಾಗಿರೆಕಾರೆ  ಸಾವಯವವಾಗಿಪ್ಪ  ಜೀನಸುಗೊ, ತರಕಾರಿ ಸಿಕ್ಕೆಕ್ಕು! ಅದಕ್ಕಾಗಿ ತರಕಾರಿಗಳ ನಮ್ಮ ಕೈತೋಟಲ್ಲಿ ನಾವೇ ಬೆಳೆಶಿಗೊಳೆಕ್ಕು. ಹೇಳುವದೂ ಶ್ರೀಗುರುಗಳ ಅಪೇಕ್ಷೆ.

ನಮ್ಮಲ್ಲಿ ದಕ್ಷಿಣಕನ್ನಡದವರ ಅಡಿಗೆ,ಉತ್ತರಕನ್ನಡದವರ, ಮಡಿಕೇರಿಹೊಡೆಯಾಣ ಅಡಿಗೆ ಹೇಳಿ ಮೇಲ್ನೋಟಕ್ಕೆ ಎರಡು ಮೂರು ವಿಭಾಗ ಹೇಳಿ ಕಂಡರೂ ಕೆಲವು;  ಒಂದು ಸೀಮೆಂದ ಮತ್ತೊಂದು ಸೀಮಗೇ ವೆತ್ಯಾಸ ಇರ್ತು. ಸಾದಾರಣ ಇದೆಲ್ಲವೂ ಅನಾವರಣಗೊಂಡಿದು ಕೆಕ್ಕಾರು ಮಠಲ್ಲಿ.

ಒಟ್ಟು ೬೦ ದಿನಲ್ಲಿ  ೫೮ ದಿನ ಆಹಾರೋತ್ಸವದ ಗೌಜಿ! ರುಚಿ-ರುಚಿಯಾದ  ಭಕ್ಷ್ಯ ಭೋಜ್ಯಂಗೊ ಆರಿಂಗೆ ಹಿತ-ಸಂತೋಷ ಆಗದ್ದದು!?. ಹವ್ಯಕರ ತರಹೇವಾರಿ ಅಡಿಗೆ ಕೆಕ್ಕಾರಿಲ್ಲಿ ಸಂಪನ್ನಗೊಂಡದು; ಶ್ರೀ ಸಂಸ್ಥಾನದವರ ಆದೇಶಾನುಸಾರ, ಮಹಿಳಾಮಣಿಗಳ ವಿಶಾಲ ಕರ್ತೃತ್ವದ ದ್ಯೋತಕ!. ಅದರಲ್ಲೂ ಮಹಾಮಂಡಲ ಮಾತೃಪ್ರಧಾನರಾದ ಬೇರ್ಕಡವು ಈಶ್ವರಿ ಅಕ್ಕ ಒಂದುದಿನವೂ ಗೈರು ಹಾಜರಿ ಇಲ್ಲದ್ದೆ ಮೇಲ್ತನಿಕೆ ನೋಡಿಗೊಂಡ ಫಲ!!.ದಿನಕ್ಕೆರಡು ವಲಯದ ಹಾಂಗೆ ವಿಭಾಗಿಸಿಯೊಂಡು ಆಯಾವಲಯದ ಮಾತೃಪ್ರಧಾನರು ಉಳಿದವರ ಸಕಾಯಲ್ಲಿ; ಮುನ್ನಾಣ ದಿನವೇ ಬಂದು ಅದರ ಜವಾಬ್ದಾರಿಕೆ ತೆಕ್ಕಂಡು ಮರುದಿನಕ್ಕಿದ್ದ ಉಪಾಹಾರ, ಹೊರುದತಿಂಡಿ, ಭಕ್ಷ್ಯಂಗೊ ,ಇದರೆಲ್ಲ ಮಾಡುತ್ತಾ ಇದ್ದವು. ನಮ್ಮ ಕುಂಬಳೆ ವಲಯಂದಲೂ ಶ್ರೀಮತಿ ಪದ್ಮಾವತಿ ಡಿ.ಪಿ ಭಟ್ಟರ ನೇತೃತ್ವಲ್ಲಿ ಎಂಗೊಲ್ಲ ಎಡಿಗಾದ್ದದರ ತೆಕ್ಕೊಂಡು ಜುಲೈ16ಕ್ಕೆ  ಹೋಗಿ; ಪತ್ರೊಡೆ, ಸಜ್ಜಿಗೆಲಾಡು, ಪೆರಟಿಪಾಯಸ, ಉರಗೆ ತಂಬುಳಿ,ಮೊದಲಾದ್ದಕ್ಕೆಲ್ಲ ಸಕಾಯ ಮಾಡಿದ್ದಿತ್ತಿದ್ಯೊ°. ಹೀಂಗೆ ಅವರವರ ಊರಿಲ್ಲಿ ಬೆಳೆಸಿದ ಸಾವಯವ ಸೊಪ್ಪುಗಳ, ತರಕಾರಿಗಳ ತಂದು; ಎಲ್ಲಾವಲಯದವೂ ಬಗೆ-ಬಗೆಯ ಅಡಿಗೆ, ತಿಂಡಿ ಮಾಡಿ ಮೆಚ್ಚಿಗೆ, ಹೆಚ್ಚಿಗೆ ಗಳಿಸಿದ್ದು  ಮಹಾಸಾಧನೆಯೇ ಸರಿ!.

ತರಹೇವಾರಿ ಅಡಿಗೆಃ
ಉಪಾಹಾರದತಿಂಡಿಗೊ, ಪತ್ರೊಡೆ, ಸೇಮಗೆ, ಹಲವಾರು ನಮೂನೆ ಕೊಟ್ಟಿಗೆ, ವಿಧ-ವಿಧ ದೋಸಗೊ, ಮಜ್ಜಾನದ ಬೆಂದಿ ಮೇಲಾರಂಗೊ, ತಂಬುಳಿಗೊ, ತರ-ತರದ ತಾಳುಗೊ, ಸಾಸಮೆ, ಮೆಣಸು ಬೆಂದಿಗೊ, ಮೆಣಸುಕಾಯಿಗೊ, ಹೊತ್ತೋಪಾಣ ಕಾಫಿಗೆ ಕೂಡ್ಳೆ ಹೊರುದ ತಿಂಡಿಗೊ, ಒಂದೊಂದು ದಿನ ಒಂದೊಂದು, ವಾಹ್..ನಮ್ಮೆಲ್ಲ ಅಕ್ಕ-ತಂಗೆಕ್ಕಳೊಟ್ಟಿಂಗೆ ನಮ್ಮೂರ ಅಡಿಗೆಗೊ ಅಲ್ಲಿ ಅನಾವರಣ ಆಗಿ, ವಿಶ್ವದಾಖಲೆ ಆತು!. ನಮ್ಮ ಭಕ್ಷ್ಯಭೋಜ್ಯಂಗೊ ಎಲ್ಲವೂ ಪಾಕ ಆಗಿ, ಲಕ್ಷಗಟ್ಳೆ ಜೆನ ಉಂಡು ತೃಪ್ತಿಗೊಂಡು ತೇಗಿದ್ದಲ್ಲದ್ದೆ ಆಯಾ ದಿನ ಬಂದ ಗಣ್ಯಜೆನಂಗೊ ಹೊಗಳಿದ್ದವು ಕೆಕ್ಕಾರು ಮಠದ ಚಾತುರ್ಮಾಸ್ಯಲ್ಲಿ!!.  ಈ ಎಲ್ಲ ಅಡುಗೆಗಳ ಮಾಡುವ ವಿಧಾನ,  ಪ್ರತಿಯೊಂದರ ಪೌಷ್ಟಿಕಾಂಶಗಳ ವಿವರ ಇದೆಲ್ಲ ಸೇರಿದ ಒಂದು ಸಿ.ಡಿ  ಚಾತುರ್ಮಾಸ್ಯದ ಅಕೇರಿಗೆ ಶ್ರೀ ಗುರುಗಳಿಂದಲೇ ಬಿಡುಗಡೆ ಆವುತ್ತು ಹೇಳುತ್ತವು ಮಹಾಮಂಡಲದ  ಮಾತೃಪ್ರಧಾನರಾದ ಬೇರ್ಕಡವು ಈಶ್ವರಿ. ಇದೊಂದು ಅತ್ಯಂತ ಪ್ರಯೋಜನ ಅಪ್ಪ ಸಂಗತಿ!. ಮನುಷ್ಯ,  “ ಸಾಕು” ಹೇಳುದು ಊಟ ಕೊಟ್ಟಪ್ಪಗ  ಮಾಂತ್ರ ಆಡ!!

1.ಆಸರಿಂಗಗೆ,  ಪಾನಕ , ಪುನರ್ಪುಳಿ ಶರ್ಬತ್ತು, ಮಜ್ಜಿಗೆನೀರು ಹೀಂಗೆ ವಿದ-ವಿದಲ್ಲಿ ಇದ್ದತ್ತು.

2.ಉದಿಯಪ್ಪಾಣ ಪಲಾರದ ತಿಂಡಿಗೊಃ- ಕೊಟ್ಟೆಕಡುಬು, ಕೆಸವಿನ ಸೊಪ್ಪಿನ ಪತ್ರೊಡೆ, ಕೆಸುಸೊಪ್ಪಿನ ಇಡ್ಲಿ, ಸೇಮಗೆರಸಾಯನ, ರವೆಇಡ್ಲಿ, ಮೆಂತೆದೋಸೆ, ನೀರುದೋಸೆ, ಹಲಸಿನಕಾಯಿದೋಸೆ, ವಡಪೆ, ಹಲಸಿನಹಣ್ಣಿನಕೊಟ್ಟಿಗೆ, ಸೊಳೆರೊಟ್ಟಿ, ತಾಳಿಪಿಟ್ಟು, ಪೂರಿಸಾಗು, ಕಾಯಿದೋಸೆ, ಬದನೆಕಾಯಿಬಾತ್, ತರಕಾರಿಪಡ್ಡು, ಓಡುಪ್ಪಾಳೆ-ಕಾಯಲು,ದಾಸನಹೂಗಿನ ಇಡ್ಲಿ, ಬಾಳೆದಂಡಿನ ಇಡ್ಲಿ, ಬಪ್ಪಂಗಾಯಿ ಕೊಟ್ಟಿಗೆ,

3.ಬಗೆಬಗೆಭಕ್ಷ್ಯಂಗೊಃ ಹೋಳಿಗೆ, ಲಾಡು, (ನಾಲ್ಕಾರುವಿಧದ್ದು), ಸಾಟು, ಸುಕ್ಕಿನುಂಡೆ, ಸಕ್ಕರೆಬೆರಟಿ, ಕುಂಬ್ಳಕಾಯಿಹಲ್ವ, ರಾಗಿಮಣ್ಣಿ, ಹಲಸಿನಬೇಳೆಹೋಳಿಗೆ, ಅತಿರಸ, ಖರ್ಜೂರದಹೋಳಿಗೆ, ಬಾಳೆಕಾಯಿಸಂಜೀವಿನಿ, ದಾರಳೆಕಾಯಿಸಂಜೀವಿನಿ, ಹಲಸಿನಬೇಳೆಹಲ್ವಾ, ಗೋದಿಹಲ್ವ, ಬಾಳೆಹಣ್ಣಿನಹಲ್ವ, ಕೇಸರಿಬಾತ್, ಅವಲಕ್ಕಿಮನಾರ, ಕರ್ಜಿಕಾಯಿ, ಗೆಣಸಲೆ, ಸಾಬಕ್ಕಿಲಾಡು, ತೊಡದೇವ್, ಕಾಯಿಹೋಳಿಗೆ, ಹಯಗ್ರೀವ,

4.ಹೊರುದ ತಿಂಡಿಗೊ.- ಪೋಡಿ, ಚೀಪ್ಸ್, ಒಡೆ, ಮಿಕ್ಚರು

5.ಪಾಯಸಂಗೊಃ.., ಹಸರುಪಾಯಸ, ಕಡ್ಳೆಬೇಳೆಪಾಯಸ, ಖರ್ಜೂರಪಾಯಸ, ಹಾಲಿಟ್ಟಿನಪಾಯಸ, ಪೆರಟಿಪಾಯಸ, ಗೆಣಂಗುಪಾಯಸ, ಬಾಳೆಹಣ್ಣುಪ್ರಥಮ, ದಾರಳೆಪಾಯಸ, ತರಕಾರಿಪಾಯಸ, ಪಪ್ಪಾಯಿಹಣ್ಣಿನ ಪಾಯಸ, ಅವಲಕ್ಕಿ ಪಾಯಸ, ಕ್ಯಾರೆಟ್  ಪಾಯಸ, ಬಗೆ ಬಗೆ ರಸಾಯನಂಗೊ

6.ವ್ಯಂಜನಂಗೊಃ-ಉರಗೆ, ಬಿಲ್ವಪತ್ರೆಂದ ಹಿಡುದು ಸಾದಾರಣ ಎಲ್ಲಾ ತರದ ಹೊಲಕ್ಕೊಡಿ ತಂಬ್ಳಿಗೊ!, ಒಳ್ಳೆಮೆಣಸಿನ ಸಾರಿಂದ ಮುರಗಲ ಸಾರಿನ ವರೆಗೆ!, ಹಾಗಲ, ಮಾವು, ಅನನಾಸು, ಮೆಣಸು ಕಾಯಿಗೊ,

8.ತರ-ತರದ ತಾಳುಗೊ,ಅವಿಲು.ಹಪ್ಪಳ,  ಸೆಂಡಗೆ,ಬಾಳುಕ್ಕುಗೊ,ಉಪ್ಪಿನಕಾಯಿಗೊ

9.ಬೆಂದಿ-ಮೇಲಾರಂಗೊಃ- ಕಾನಕಲಟೆ ಮೇಲಾರಂದ ಹಿಡುದು ಮುಂಡಿಗೆಂಡೆ ಮೇಲಾರದವರೆಗೆ! ದೀಗುಜ್ಜೆ ಸಾಂಬಾರಿಂದ ಹಿಡುದು ಚೀನಿಕಾಯಿ-ಬಾಳೆಕಾಯಿ, ಸೌತೆಕಾಯಿ ಸಾಂಬಾರಿನವರೆಗೆ!

ಇನ್ನೂ ಅನೇಕಾನೇಕ ಇದ್ದು. ಪ್ರತಿಯೊಂದು ವಿವರವಾಗಿ ಬರೆತ್ತರೆ  ಅದೆಷ್ಟೋ ಅಕ್ಕು!.

ಈ 60 ದಿನಂಗಳ (ಇದುವರೆಗೂ), ಇರುಳು-ಉದಿಕಾಲಕ್ಕೆ ಹೇಳಿ ಬೇರ್ಕಡವು ಈಶ್ವರಿ ಅಕ್ಕನ ಒಟ್ಟಿಂಗೆ ಆಹಾರ ತಯಾರಿಕೆಲಿ, ಹಳೆಮನೆ ಸುಲೋಚನ, ಮಲ್ಲಿಕಾ, ಗೀತಾ. ಇನ್ನೂ ಕೆಲವಾರು ಅಕ್ಕ-ತಂಗೆಕ್ಕೊ ಗುರುಸೇವೆ, ಜೆನಸೇವೆ ಮಾಡ್ತಾಇದ್ದವು ಹೇಳುದರ ಮರವಲಾಗ.

——೦——–

3 thoughts on “ಕೆಕ್ಕಾರು ಮಠ- ಆಹಾರೋತ್ಸವ

  1. ಒಳ್ಳೆದು , ರುಚಿನೋಡುಸ್ಸು ಮಾಂತ್ರ ಅಲ್ಲ , ಬೇಕಷ್ಟು ತಿಂಬಲಕ್ಕು . ಧನ್ಯವಾದ .(ಮಾಡಿದವಕ್ಕೆ ತೃಪ್ತಿ ಆಯೆಕ್ಕಾರೆ ತಿಂಬವು ಬೇಕೇಬೇಕು )

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×