ಖಗ್ರಾಸ ಚಂದ್ರಗ್ರಹಣ

ಇದಾ ತಿರುಗಾಟಲ್ಲಿಪ್ಪಗ ಎಲ್ಲೋರು ಗ್ರಹಣ ಹೇಳ್ತದು ಕೇಳಿತ್ತು. ರಜಾ ಮುಂದೆ ಹೋಪಗ ಜೋಯಿಶಮಾವ ಸಿಕ್ಕಿದವು. ಅವರತ್ರೆ ಈ ಬಗ್ಗೆ ಕೇಳಿಯಪ್ಪಗ ಹೇಳಿದ್ದರ ನಿಂಗೊಗೂ ಹೇಳ್ತಾ ಇದ್ದೆ.

ಖಗ್ರಾಸ ಚಂದ್ರಗ್ರಹಣ –

ಮಾರ್ಗಶಿರ ಶುಕ್ಲ ಪೂರ್ಣಿಮಾ ಶನಿವಾರ (10-12-2011)

ಸ್ಪರ್ಶ: ಸಾಯಂ 6:15

ನಿಮೀಲನ :  ಸಾಯಂ 7:37

ಮಧ್ಯ : ರಾತ್ರಿ  08:03

ಉನ್ಮೀಲನ : ರಾತ್ರಿ  8:29

ಮೋಕ್ಷ: ರಾತ್ರಿ 9:50

ಗ್ರಹಣ ಆದ್ಯಂತ ಕಾಲ 3:37 ಘಂಟೆ ಅವಧಿ

ರೋಹಿಣಿ, ಮೃಗಶಿರಾ, ಕೃತ್ತಿಕಾ, ಹಸ್ತ, ಶ್ರಾವಣ, ಧನಿಷ್ಠಾ ನಕ್ಷತ್ರ ಮತ್ತು ವೃಷಭ, ಮಿಥುನ, ತುಲಾ, ಧನುರಾಶಿಯೋರಿಂಗೆ ಗ್ರಹಣ ದೋಷ ಇರುತ್ತು.

ಗ್ರಹಣ ದಿನದ ಉದಿಯಪ್ಪಗ 9:15 ರಿಂದ ಗ್ರಹಣ ಮೋಕ್ಷ ಪರ್ಯಂತ ಆಹಾರ ನಿಷಿದ್ದ. ಬಾಲವೃದ್ಧಾತುರರಿಂಗೆ ಅಪರಾಹ್ನ 3 ರ ತನಕ ಭೋಜನ ವಿನಾಯತಿ. ಗ್ರಹಣ ಮೋಕ್ಷಾನಂತರ ಸ್ನಾನ ಮಾಡಿ ಅಡುಗೆ ಮಾಡಿ ಭೋಜನ ಮಾಡ್ಳಕ್ಕು,  ಈ ದಿನದ ಪೂರ್ಣಿಮಾ ಶ್ರಾದ್ಧವ ಕರ್ತೃಗೊ ಉಪವಾಸವಿದ್ದು ಮರುದಿನ ಮಾಡೆಕ್ಕಾದ್ದು.  ಗ್ರಹಣ ಕಾಲಲ್ಲಿ ಮಾಡುವ ಸ್ನಾನ ಜಪ ಪೂಜಾ ದಾನಾದಿಗಳಿಂದ ವಿಶೇಷ ಪುಣ್ಯ ಲಭಿಸುತ್ತಡ.

ಎಲ್ಲೋರಿಂಗೂ ಭಗವದ್ಕೃಪೆಯಾಗಲಿ.

~
ಶುದ್ದಿಕ್ಕಾರ°

ಶುದ್ದಿಕ್ಕಾರ°

   

You may also like...

15 Responses

 1. ಹಾ.. ಇಲ್ಲಿ ಜೋಯಿಸಪ್ಪಚ್ಚಿ ಹೇಳಿದ ಮತ್ತೆ ಸಂಶಯವೇ ಇಲ್ಲೆ. ಓಯಿ…. ನಮ್ಮ ನಕ್ಷತ್ರವೋ ರಾಶಿಯೋ ಹೆಸರು ಬೈಂದಿಲ್ಲೇಳಿ ಮೇಗೆ!!

  • ಗಣೇಶ ಪೆರ್ವ says:

   ಗ್ರಹಣದ ಫಲ೦ಗೊ ಊರಿ೦ದ ಊರಿ೦ಗೆ ಬದಲಾವ್ತಿಲ್ಲೆಯೋ? ಅದರ ಹೇ೦ಗೆ ಲೆಕ್ಕ ಹಾಕುವದು? ಆನು ದುಬಾಯಿಲಿ ಗ್ರಹಣದ ಸಮಯಲ್ಲಿ ಎಷ್ಟು ಸಮಯ೦ದ ಎಷ್ಟು ಸಮಯದ ವರೇ೦ಗೆ ಎ೦ತೆಲ್ಲ ಆಚರಣೆ ಮಾಡೆಕಪ್ಪಾ??!!!

   • ಚೆನ್ನೈ ಭಾವ says:

    ನಿಂಗೊಗೆ ಹಿಡಿವದು ಅಲ್ಲಿಯಾಣ 4.46 pm ಮತ್ತೆ ಮೋಕ್ಷ 8.18 pm
    ನಿಂಗೊ ಅಲ್ಲಿ ನಾಕುವರಗೆ ಮಿಂದು ಕೂದು (ಕಚ್ಚೆ ಕಟ್ಳೆ ಇಲ್ಲೆ ) ‘ಶ್ರೀ ರಾಮ ಜಯ ರಾಮ ಜಯ ಜಯ ರಾಮ’ ಹೇಳಿಗೊಂಡು ಕೂದರಾತು. ಬಿರುದ ಮತ್ತೆ ಮಿಂದಿಕ್ಕಿ ಒರಗಿ. ಬಾಕಿ ಎಲ್ಲಾ ಎಂಗೋ ನೋಡಿಗೋಳ್ತೆಯೋ ಇಲ್ಲಿ!!

 2. jayashree.neeramoole says:

  ಬಾಲವೃದ್ಧಾತುರರ ಕೋಟಾಕ್ಕೆ ಅಪ್ಲೈ ಮಾಡುದು ಸುಲಭವೋ… ಹೇಳಿ!

  • ರಘು ಮುಳಿಯ says:

   ಅದು ನವಗಾಗ ಅಕ್ಕೊ.. ಆತುರರಿ೦ಗೆ ಐಸ್ಕ್ರೀಮು ಹಾಕಿದ ಫ್ರುಟ್ ಸಲಾಡು ಕೊಡೊದು ಹೇಳಿ ನಿಗ೦ಟಾಗಿದ್ದರೆ ?!

   • jayashree.neeramoole says:

    ಹಾಂಗಾರೆ ಬೇಡ… ನಮಗೆ ಚೂರು ಕಷ್ಟ ಆದರೂ ತೊಂದರೆ ಇಲ್ಲೇ… ಐಸ್ ಕ್ರೀಂ ಎಲ್ಲ ತಿಂದು ಧರ್ಮದ ಮಾರ್ಗಂದ ಹಿಂದೆ ಬಪ್ಪಲಿಲ್ಲೇ. ಇಂದು ಹರೇ ರಾಮಲ್ಲಿ “Dharma – The Life Companion” ಹೇಳುವ ವಿಷಯ ಓದಿದ್ದಷ್ಟೇ ಬೇರೆ…

   • ತೆಕ್ಕುಂಜ ಕುಮಾರ ಮಾವ° says:

    ನಾವುದೇ “ಆತುರರ “ಕೋಟಕ್ಕೆ ಅಪ್ಪ್ಲೈ ಮಾಡುದೋ ಅಂದಾಜು ಮಾಡಿಯಪ್ಪಗ, ಜೊಯಿಶ ಮಾವ ಹೇಳಿದವು – ಆಗದ್ದೆ ಇಲ್ಲೆ, ಮಾಂತ್ರ ಅದಕ್ಕೆ ಪರಿಹಾರಾರ್ಥವಾಗಿ ಹತ್ತು ದಿನ ಮೌನ ವೃತ ಮಾಡೆಕ್ಕು ಹೇಳಿದವು.
    ನವಗೆ ಆಗ ಹೇಳಿ ಸುಮ್ಮನೆ ಕೂಯಿದೆ

    • ಪೆಂಗಣ್ಣ says:

     ಓಯೆ ಮಾವ ನಿಂಗೋ ಹಾಂಗೆ ಹೇಳಿಯೊಂಡೆ ಮವುನ ಶುರು ಮಾಡಿದಿರೋ?

     ನಾವು ಗ್ರಹಣ ಇಲ್ಲದ್ದ ದೇಶಕ್ಕೆ ಹೋದರೆಂತ ಹೇಳ್ತ ಯೇಚನೆಲಿದ್ದು.. ಹು..

  • ಶರ್ಮಪ್ಪಚ್ಚಿ says:

   ಇಲ್ಲಿ ಆತುರರು ಹೇಳಿರೆ ಅಂಬೆರ್ಪು ಇಪ್ಪವು, ಹಶು ತದವಲೆ ಎಡಿಯದ್ದವು ಹೇಳ್ತ ಅರ್ಥ ಅಲ್ಲ.
   ಆತುರರು ಹೇಳಿರೆ ರೋಗಿಗೊ ಅರ್ಥ.

   • jayashree.neeramoole says:

    ಗ್ರಹಣ ದಿನದ ಉದಿಯಪ್ಪಗ 9:15 ರಿಂದ ಗ್ರಹಣ ಮೋಕ್ಷ ಪರ್ಯಂತ ಆಹಾರ ಸೇವಿಸಿದ್ದಿಲ್ಲೇ… ಆದರೆ ಸಂಜೆವರೆಗೆ ನೀರು ಕುಡುದ್ದೆ… ಮರುದಿನ ಕೆಲವು ಜೆನ ಹೇಳಿದವು ನೀರು ಕೂಡ ಕುಡಿವಲಾಗ ಹೇಳಿ 🙁

 3. ಬಂಡಾಡಿ ಅಜ್ಜಿ says:

  ಗ್ರಾಣದ ವಿವರ ಕೊಟ್ಟದು ಒಳ್ಳೆದಾತದ..

 4. ಖರ ಸಂವತ್ಸ್ರರದ ಒಯಿಜಯಂತಿ ಪಂಚಾಂಗಲ್ಲಿ ಖಂಡಗ್ರಾಸ ಚಂದ್ರಗ್ರಹಣ ಹೇಳಿ ಬರದ್ದವು. ಅಮಾಸೆ ಚಂದ್ರನ ಚಿತ್ರ ಕೊಟ್ಟಿದವು.
  ನಿನ್ನಾಣ ಹೊಸ ದಿಗಂತಲ್ಲಿ ಖಗ್ರಾಸ ಚಂದ್ರಗ್ರಹಣ ಹೇಳಿ ಬರದು ಚೌತಿ ಚಂದ್ರನ ಚಿತ್ರ ಇದ್ದತ್ತು.

  ಶುದ್ಧಿಕ್ಕಾರನ ಶುದ್ಧಿ ಓದಿಯಪ್ಪಗ ಕೊಶಿ ಆತು.
  ಸಮರ್ಪಕ ವಿವರಣೆ ಕೊಟ್ಟಿದ°

  ರಗಳೆ ಬೇಡ ಹೇಳಿ, ಚಂದ್ರನ ಪಟ ಹಾಕಿದ್ದನೇ ಇಲ್ಲೆ 🙂

 5. ಓ ಎನಗೂ ಇದ್ದೋ ಅಂಬಗ ದೋಷ..!!
  ಆತುರ ಶಬ್ದದ ಅರ್ಥ ಅಪ್ಪಚ್ಚಿ ಕೊಟ್ಟಿದವಿದಾ? ಆನು ಅದರ ಓದುವ ಮೊದಲೇ ಉಂಡಾಗಿತ್ತು..!!
  ಇನ್ನೆಂತ ಮಾಡುದು?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *