Oppanna.com

ಕೋಳ್ಯೂರು ಶಂಕರನಾರಾಯಣ ದೇವಸ್ಥಾನ.

ಬರದೋರು :   ಕೋಳ್ಯೂರು ಕಿರಣ    on   14/03/2012    3 ಒಪ್ಪಂಗೊ

ನಮಸ್ಕಾರ ಎಲ್ಲರಿಂಗುದೆ,
ಸರಿಯಾಗಿ ಕಥೆ ಹೇಳ್ತೆ ಹೇಳಿ ಸುಮಾರು ಮೂರು ತಿಂಗಳಾತು . ಇನ್ನುದೆ ಕಥೆ ಹೇಳಿದ್ದಿಲ್ಲೆ ಹೇಳಿ ಎನಗೇ ಬೇಜಾರಾತು 🙁
ಎಂಗಳ ಊರು ತುಂಬಾ ಐತಿಹ್ಯ ಇಪ್ಪ ಊರು ಹೇಳಿ ಹೇಳ್ತವು.
ಸುಮಾರು ಕಥೆಗ ಇದ್ದು ದೇವಸ್ಥಾನದ ಬಗ್ಗೆ.

ಹೆಸರು ಬಂದದು ಹೇಂಗೆ ಹೇಳಿ ನೋಡುವಾಗ ಎರಡು ಕಥೆ ನೆನಪಿಂಗೆ ಬತ್ತು..

1. ದೇವಸ್ಥಾನ ಆದಮೇಲೆ ಒಂದು ಬಾವಿ ಬೇಡದಾ ? ಹಾಂಗೆ ದೇವಸ್ಥಾನಕ್ಕೆ ಬೇಕಾಗಿ ಒಂದು ಬಾವಿ ತೋಡುಲೆ ಶುರು ಮಾಡಿದವಡ.
ಎಷ್ಟು ಆಳಕ್ಕಿಳುದರುದೆ ನೀರೇ ಸಿಕ್ಕಿದ್ದಿಲ್ಲೆ. ಹಾಂಗೆ “ಇನ್ನು ಕೋಳಿ ಕೂಗುವವರೆಗೆ ಬಾವಿ ತೋಡುದು, ನೀರು ಸಿಕ್ಕದ್ದರೆ ದೇವರು ಗ್ರೇಶಿದಾಂಗೆ ಆಗಲಿ ” ಹೇಳಿ ಉದಿಯಪ್ಪಲ್ಲಿ ವರೆಗೆ ಬಾವಿ ತೋಡಿದವಡ.
ಆ ದಿನ ಕೋಳಿ ಕೂಗಿದ್ದುದೆ, ಬಾವಿಲಿ ನೀರು ಬಂದದುದೆ ಸರಿ ! ಹಾಂಗೆ ಕೋಳಿಯೂರು –> ಕೋಳ್ಯೂರು ಆದ್ದು ಹೇಳಿ ಆನು ಸಣ್ಣ ಇಪ್ಪಗ ಕೇಳಿದ ಒಂದು ಕಥೆ.

2. ಮತ್ತೆ ಇನ್ನೊಂದು ಕಥೆಯ ಪ್ರಕಾರ, ದೇವಸ್ಥಾನದ ಮೂರ್ತಿಗ (ತ್ರಿಮೂರ್ತಿ) ಗೋಳಿಮರಂದ ಒಡದು ಉದ್ಭವ ಆದ್ದು ಹೇಳುವ ಕಥೆಯೂ ಇದ್ದು.
ಗೋಳಿ+ಊರು , ಗೋಳಿಯೂರು ಹೋಗಿ ಈಗ ಕೋಳ್ಯೂರು ಆಯ್ದು ಹೇಳಿ ಕೂಡಾ ಈ ಕಥೆ .

ಮತ್ತೆ ಮುಂದಾಣ ಕಥೆ ಹೇಳ್ತೆ..
ಪುರಾಣಂದಲೂ “ಕೋಳ್ಯೂರು “ಕಥೆಗೆ  ಲಿಂಕ್ ಇದ್ದು… ತ್ರಿಪುರ ಮಥನ ಕಥೆಯ ಮುಂದಿನ ಭಾಗ , ಇನ್ನೊಂದು ಸರ್ತಿ ..

ತಪ್ಪಿದ್ದರೆ ಗಮನಕ್ಕೆ ತನ್ನಿ..
ನಮಸ್ಕಾರ

3 thoughts on “ಕೋಳ್ಯೂರು ಶಂಕರನಾರಾಯಣ ದೇವಸ್ಥಾನ.

  1. [ಮೂರು ತಿಂಗಳಾತು ] – ಕೋಳ್ಯೂರು ಹೆಸರು ಮಡಿಕ್ಕೊಂಡೂ, ಮೂರು ತಿಂಗಳ್ಳಿ ಎರಡೇ ಪಾಯಿಂಟು ಸಿಕ್ಕಿತ್ತಷ್ಟೆಯೋ ಭಾವ!!

    [ಇನ್ನೊಂದು ಸರ್ತಿ ] – ಅದಕ್ಕೆನ್ನು ಆರು ತಿಂಗಳಾಯೆಕೋ!!

    ಗೋಳಿ ಊರು ಕೋಳ್ಯೂರು ಆದ ಶುದ್ದಿ ಚಿಕ್ಕವಾಗಿ ಚೊಕ್ಕವಾಗಿ ಲಾಯಕ ಆಯ್ದು ಹೇಳಿಗೊಂಡು ಇನ್ನಷ್ಟು ಶುದ್ದಿ ಬೈಲಿಂಗೆ ಬರ್ಲಿ ಹೇಳಿ ಕೇಳಿಗೊಂಡು – ‘ಚೆನ್ನೈವಾಣಿ’.

  2. ಚಿಕ್ಕ ಮತ್ತು ಚೊಕ್ಕವಾಗಿ ಕೋಳ್ಯೂರಿನ ಕಥೆ ಓದಿ ಖುಷಿ ಆತು… ಮುಂದಿನ ಭಾಗಕ್ಕೆ ಕಾಯ್ತಾ ಇದ್ದೆಯಾ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×