Oppanna.com

ಮಾತೆ – ಗೋವು

ಬರದೋರು :   ಶೇಡಿಗುಮ್ಮೆ ಪುಳ್ಳಿ    on   10/01/2012    14 ಒಪ್ಪಂಗೊ

ಮಾತೆಗೋವಿನ ಶುದ್ದ ಹಾಲಿಂದು
ನವಗೆ ಕುಡಿವಲೆ ಸಿಕ್ಕುಗೋ
ಯಾವ ಪಾಪವ ಮಾಡಿ ಹುಟ್ಟಿದ್ದೋ
ಪೇಕೆಟ್ ಹಾಲಿನ ಕುಡಿವಲೇ ||೨|| ( ಪ )

ಪೇಟೆ-ಜೀವನ ಬಯಸಿಬಂದದು
ಭಾರಿ ದೊಡ್ಡೊಂದು ತಪ್ಪಾತೋ || ೨ ||
ಊರಜಾಗೆಯ ತೋಟದೊಳವೇ
ಹುಲ್ಲು ಇಲ್ಲದ್ದೆ ಭಣ-ಭಣಾ || ಮಾತೆ ||

ಸುತ್ತ ಹಾಕಿದ ಬೇಲಿಯಿಂದು
ಒರಳೆ ಹಿಡುದು ಹೋಯಿದೋ
ನೀರು ಇಲ್ಲದ್ದ ಒಣಕ್ಕು ತೋಟಲ್ಲಿ
ಹುಲ್ಲು ಹುಡುಕ್ಕುದು ತಪ್ಪಲ್ಲೋ || ಮಾತೆ ||

ವಿಶ ವಿಶವಾಯಿದು ಪ್ರಾಣ
ವಿಶ ವಿಶವಾಯಿದು ಪ್ರಾಣ – ಹಃ
ಪರವಶವು ನಮ್ಮೀ ಜೀವನಾ ||೨||
ಇಪ್ಪ ಸೌಖ್ಯವ ಬಿಟ್ಟು – ಪೇಟೆಯ
ಹುಡುಕ್ಕಿ ಹೊರಟಿದು ಜೀವನಾ || ಮಾತೆ ||

14 thoughts on “ಮಾತೆ – ಗೋವು

  1. ಒಪ್ಪ ಕೊಟ್ಟ ಎಲ್ಲೋರಿಂಗೂ ಒಪ್ಪಂಗೊ,
    ಕುಂಬ್ಳೆ ಜಾತ್ರೆ ಆವುತ್ತಾ ಇದ್ದು ಯಾರೆಲ್ಲಾ ನೋಡುಲೆ ಹೋಯಿದಿ….?

  2. ಭಾರೀ ಭಾವನಾತ್ಮಕ ಸಾಹಿತ್ಯ.
    ನಾವೇ ಕಟ್ಟಿಗೊ೦ಡಿಪ್ಪ ಸ್ವರ್ಗ (!) ಅಲ್ಲದೋ ಇದು?
    ಹಾಲಿನ ಕಲಬೆರಕೆಯ ಶುದ್ದಿ ಪತ್ರಿಕೆಗಳಲ್ಲಿಯೂ ಬತ್ತಾ ಇದ್ದು,ಎರಡು ದಿನ೦ದ.

  3. ಪ್ರತಿಯೊಂದು ಸಾಲೂ ಲಾಯಕ ಆಯ್ದು, ತೂಕ ಇದ್ದು. ಮನ ನಾಟುತ್ತು. ಅರ್ಥಗರ್ಭಿತವಾಗಿದ್ದು. ಆದರೆ ‘ಉದರನಿಮಿತ್ಥಂ ಬಹುಕೃತವೇಶಂ’ ತಪ್ಪುಸಲೆಡಿಗೊ!. ಒಪ್ಪದ ಪದ್ಯಕ್ಕೊಂದು ಒಪ್ಪ ಹೇಳಿತ್ತು – ‘ಚೆನ್ನೈವಾಣಿ’

    1. ‘ಉದರನಿಮಿತ್ಥಂ ಬಹುಕೃತವೇಶಂ’ ಖಂಡಿತವಾಗಿಯೂ ಅನಿವಾರ್ಯ… ಆದರೂ ಇಂದು ನಮ್ಮೆಲ್ಲರ ಒಳಿತಿಂಗೆ ಬೇಕಾಗಿ ನಾವು ಸಾಧ್ಯ ಆದಷ್ಟು ಗೋಮಾತೆಯ ಕಣ್ಣೀರು ಒರಸುಲೆ ಪ್ರಯತ್ನ ಮಾಡೆಕ್ಕು… ಪೇಟೆಲ್ಲಿಪ್ಪವ ಆದರೆ ಊರು ಮನೇಲಿ ಒಂದಾದರೂ ಊರು ದನ ಒಳಿವ ಹಾಂಗೆ ಎಂತ ಮಾಡುದು ಹೇಳಿ ಆಲೋಚನೆ ಮಾಡೆಕ್ಕು… “necessity is the mother of invention” ಆದ ಕಾರಣ ನಾವು ಪೇಟೆಲ್ಲಿಪ್ಪವು ಹಳ್ಳಿಲ್ಲಿ ಊರ ದನ ಒಳಿಶುಲೆ ಬೇಕಾಗಿ necessity create ಮಾಡುಲಕ್ಕು… ಉದಾಹರಣೆಗೆ ಪುಳ್ಳಿಗೆ ಊರ ದನದ ಹಾಲೇ ಇಷ್ಟ ಹೇಳಿ ಆದರೆ ಅಜ್ಜ/ಅಜ್ಜಿ ಪುಳ್ಳಿಗೆ ಬೇಕಾಗಿ ಕಷ್ಟ ಪಟ್ಟು ಆದರೂ ಒಂದು ಊರ ದನವ ಸಾಂಕದ್ದೆ ಇರವು… ಮತ್ತೆ ಹೆಚ್ಚಿನ ಊರು ಮನೆಗಳಲ್ಲಿ ಪೇಟೆಲ್ಲಿ ಇಪ್ಪವು ಮಾದರಿ… ಹೇಳಿರೆ ಪೇಟೆಲ್ಲಿಪ್ಪ ಮಕ್ಕೊಗೆ ಬೇಕಾಗಿ ಅವು ಕಷ್ಟಪಟ್ಟು ಆದರೂ ಪೇಟೆಲ್ಲಿಪ್ಪಕ್ಕೆ ಬೇಕಾದ ಹಾಂಗೆ ಪರಿವರ್ತನೆ ಮಾಡುತ್ತವು… ಉದಾಹರಣೆಗೆ ಪೇಟೆಲ್ಲಿಪ್ಪವು ಬತ್ತವು ಹೇಳಿ ಆದರೆ ಆ ದಿನ ತೋಟಂದ ಬಾಳೆಕಾಯಿ ತಂದು ತಾಳು ಮಾಡುವ ಬದಲು ಪೇಟೆಂದ ಕ್ಯಾಬೇಜ್ ತಂದು ತಾಳು ಮಾಡುತ್ತವು… ಹಾಂಗಾರೆ ಪೇಟೆಲ್ಲಿಪ್ಪವು ಊರು ಮನೆಗೆ ಹೋಪಗ ಆದರೂ ಎಂಗೊಗೆ ಊರ ಕ್ರಮಂಗೋ ಇಷ್ಟ ಹೇಳಿ ಆಸಕ್ತಿ ತೋರುಸಿರೆ ಕೊನೆ ಪಕ್ಷ ಊರು ಮನೆಗಳಲ್ಲಿ ಆದರೂ ಕ್ರಮಂಗ ಒಳಿಗು… ಊರ ದನದ ಹಾಲಿಂಗೆ ಪೇಟೆಲ್ಲಿ ಪ್ಯಾಕೆಟ್ ಹಾಲಿಗಿಂತ ಹೆಚ್ಚಿಗೆ ಕ್ರಯ ಇದ್ದು… ನಿತ್ಯ ಪೇಟೆಗೆ ಹೋಗಿ ಬಪ್ಪವ ಆದರೆ ಊರಿನವಕ್ಕೆ ಎಂತಾರೂ ಸಹಾಯ ಮಾಡುಲೆ ಎಡಿಗೋ ಹೇಳಿ ಆಲೋಚನೆ ಮಾಡುಲಕ್ಕು…

      ಇದ್ಯಾವುದೇ ಅವಕಾಶ ಇಲ್ಲೇ ಹೇಳಿ ಆದರೆ ದಿನಬಳಕೆಗೆ maa goa product ಬಳಸುಲೇ ಎಡಿತ್ತ ಹೇಳಿ ಆದರೂ ಪ್ರಯತ್ನ ಮಾಡುಲಕ್ಕು… ಊರ ದನಗಳ ಎಂತಕೆ ಒಳಿಷೆಕ್ಕು, ದೇಶ ಒಳಿಯೇಕ್ಕಾರೆ ಎಂತಕೆ ಅದಷ್ಟು ಅನಿವಾರ್ಯ ಹೇಳುವ ಮಾಹಿತಿಗಳ ಸಂಗ್ರಹ ಮಾಡಿ ಪ್ರಚಾರ ಮಾಡುವ ಕೆಲಸ ಆದರೂ ಮಾಡುಲಕ್ಕು… ಒಟ್ಟಾರೆ ಹೇಳುತ್ತರೆ “ಊರ ದನಗಳ ಒಳಿಶುಲೆ ಎನ್ನ ಕೈಲಾದ ಪ್ರಯತ್ನ ಮಾಡುತ್ತೆ” ಹೇಳಿ ನಮಗೆ ನಾವೇ ಸಂಕಲ್ಪ ಮಾಡಿಗೊಂಡರೆ ಅವಕಾಶಂಗ ಕಾಣುತ್ತಾ ಹೋವುತ್ತು…

  4. ವಂದೇ ಗೋಮಾತರಂ!!! ಪುಳ್ಳಿಗೆ ಧನ್ಯವಾದಂಗೋ…

  5. ಇಂದ್ರಾಣ ವಾಸ್ತವವ ಬರದ್ದು ಲಾಯಿಕ ಆಯಿದು.
    ಪೇಟೆಲಿ ಇಪ್ಪವಕ್ಕೆ ಹಾಲಿಂಗೆ ಬೇರೆ ಗತಿ ಇಲ್ಲೆನ್ನೆ. ಬೆಳಿ ನೀರಿನ (ಶುದ್ಧ ನೀರು ಆದರೆ ತೊಂದರೆ ಇತ್ತಿಲ್ಲೆ, ಅದಕ್ಕೆ ಇನ್ನೆಂತ ವಿಶಂಗಳ ಹಾಕುತ್ತವೋ) ಹಾಲು ಹೇಳಿ ಕುಡಿಯೆಕ್ಕಷ್ಟೆ.
    ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನನ್ನನು… ಧಾಟಿ ಹಿಡಿತ್ತು.

  6. ತುಂಬಾ ಒಳ್ಳೆ ಪ್ರಯತ್ನ…
    ಶೇಡಿಗುಮ್ಮೆ ಪುಳ್ಳಿಯ ಸಾಹಿತ್ಯಂಗೊ ಒಂದರಿಂದ ಒಂದು ಚೆಂದಕೆ ಬತ್ತಾ ಇದ್ದು.
    ಶುಭಾಶಯಂಗೊ.

  7. ಒಳ್ಳೆ ಪ್ರಯತ್ನ. ಒಳ್ಳೆ ವಿಷಯವುದೆ.
    ಇದೇ ವಿಷಯ ಹಿಡ್ಕೊಂಡು, ನಿನ್ನದೇ ಧಾಟಿಲಿ ಬರದರೆ ಕವನ ಎಷ್ಟು ಅದ್ಬುತ ಅಕ್ಕು ಹೇಳಿ ಒಂದು ಆಲೋಚನೆ ಎನ್ನ ಮನಸ್ಸಿಂಗೆ ಕಂಡದು. ಇನ್ನೊಂದು ಪ್ರಯತ್ನ ಏಕೆ ಮಾಡಲಾಗ..?

  8. ಲಾಯಕಾಯಿದು ಅಣ್ಣೋ…
    ಇನ್ನೂ ಬರೆತ್ತಾ ಇರು..
    ಈ ಪದ್ಯ ಓದಿ ೨ ಜೆನರ ನೆಂಪಾತು.
    ೧. ಗಾಯಕರಾದ ರಾಜು ಅನಂತಸ್ವಾಮಿ ಮತ್ತು ಸಿ ಅಶ್ವಥ್.
    ೨. “ತಬ್ಬಲಿಯು ನೀನಾದೆ ಮಗನೆ” ಹೇಳ್ತ ಸಿನಿಮಾದ ಬಟ್ಟಮಾವ˚ (ಪಾತ್ರ ನಿರ್ವಹಣೆ ಮಾಡಿದ್ದು ನಾಸಿರುದ್ದೀನ್ ಶಾಃ)

    1. ಧನ್ಯವಾದಂಗೊ,
      ಪ್ರಯತ್ನ ಮಾಡ್ತೆ ಆತೊ,

  9. ಧರಣಿಮಂಡಲ ಮಧ್ಯದೊಳಗೆ ಹೇಳ್ತ ರಾಗವೋ ಹೇಳಿ ಗ್ರೇಶಿದೆ. ಕಡೆಂಗೆ ವಿಷದ ವಿಷಯ ಕೇಳಿ ಅಪ್ಪಗ ಮನಸ್ಸಿಂಗೆ ಬಂತದ. ಏವ ಮೋಹನ ಮುರಳಿ ಹೇಳಿ. ಒಳ್ಳೆ ಭಾವನೆಲಿ, ಒಳ್ಳೆ ರಾಗಲ್ಲಿ ಬಂದಂತಹ ಶೇಡಿಗುಮ್ಮೆ ಪುಳ್ಳಿಯ ಅಣಕು ಭಾವಗೀತೆ ಲಾಯಕಾತದ. ಅಭಿನಂದನೆಗೊ. ಹೇಂಗೆ, ಹವ್ಯಕ ಕಾರ್ಯಕ್ರಮಕ್ಕೆ ಬುಕ್ಕಿಂಗು ಮಾಡುವನೊ ?

    1. ಮಾವಾ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದಂಗೊ ,
      ಈ ಬುಕ್ಕುದೆಲ್ಲ ಬೇಡ ಆತೊ,
      ಇದು ಅಣಕು ಆದರುದೆ ಎನಗೆ ನಮ್ಮ ಇಂದಿನ ಪರಿಸ್ಥಿತಿ ಹೀಂಗಿದ್ದು ಹೇಳಿ ಕಂಡತ್ತು. “ಹಾಲು ಹೇಳಿ ಹಾಲಿನ ಶವವ ಕುಡಿತ್ತು” ಒಂದುಸರ್ತಿ ಗುರುಗೊ ನಮ್ಮ ಬಯಲಿಲಿ ಹೇಳಿದ ಮಾತು , ನಮ್ಮ ಮಾನಸಿಕ ನೆಮ್ಮದಿಯ ಹಸಿರು ಹುಲ್ಲಿಂಗೆ ಹೋಲುಸಿದರೆ ಅದು ಇಲ್ಲದ್ದೇ ಆಯಿದು, ನಮ್ಮ ಸಂಸ್ಕ್ರುತಿ, ನಮ್ಮ ಸಂಸ್ಕಾರ ಹೇಳ್ತ ಬೇಲಿಗೆ ಇಂದು ಒರಳೆ ಹಿಡಿತ್ತಾ ಇದ್ದು, ತೋಟಕ್ಕೆ ಈಟು ನೀರು ಹಾಕದ್ದೆ ಒಳ್ಳೆ ಫಸಲು ಬರೆಕ್ಕು ಹೇಳಿರೆ ಅಕ್ಕೋ ಹಾಂಗೇ ನಾವು ನಮ್ಮ ಮುಂದಾಣ ತಲೆಮಾರಿಂಗೆ ನಮ್ಮ ಸಂಸ್ಕೃತಿ ಸಂಸ್ಕಾರಂಗಳ ಬಗ್ಗೆ ಕಲುಶದ್ದೆ ಅವರಿಂದ ಅದರ ಬಯಸುದು ತಪ್ಪು ಅಲ್ಲದೋ? ನಾವು ತಿಂಬದೆಲ್ಲವೂ ವಿಷವಾದ ಹಾಂಗೇ ನಮ್ಮ ಮನಸ್ಸುದೇ ವಿಷ ವಾವುತ್ತ ಇದ್ದು, ನಾವು ಯಾರಿಂಗೋ ಬೇಕಾಗಿ ಇನ್ನೊಬ್ಬರ ಅಧೀನರಾಗಿ ಕೆಲಸ ಮಾಡ್ತಾ ಇದ್ದು ನಮ್ಮ ಜೀವನ ಹೇಳ್ತದು ಪೇಟೆಯ ವಾಹನ ಸಂಚಾರದ ಹಾಂಗೆ ಆಯಿದು ಅಲ್ಲದೋ…?

      1. ಸರಿಯಾಗಿ ಹೇಳಿದೆ ಪುಳ್ಳಿ. ಭಾವನೆಯ ಪೂರ್ತಿ ಪದ್ಯಲ್ಲಿ ಇಳುಸಿದ್ದೆ ನೋಡು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×