Oppanna.com

ನಂದಿದ ಮಹಾನಂದಿ

ಬರದೋರು :   Admin    on   26/06/2011    15 ಒಪ್ಪಂಗೊ

ಬೈಲಿಂಗಿದೊಂದು ಬೇಜಾರದ ಶುದ್ದಿ.

ನಮ್ಮ ಮಠದ ಗುರುತಾಗಿದ್ದ, ಎಲ್ಲರ ಪ್ರೀತಿಯ ಹೋರಿ “ಮಹಾನಂದಿ” ನಿನ್ನೆ ದೇವರ ಪಾದ ಸೇರಿತ್ತಡ.

ಈ ಬಗ್ಗೆ ಗುರುಗೊ ಹರೇರಾಮ(http://hareraama.in) ಬೈಲಿಲಿ “ಶ್ರೀಮುಖ” ಶುದ್ದಿಲಿ ತಿಳುಸಿದ್ದವು.
ಸಂಕೊಲೆ: http://hareraama.in/articles/srimukha/ಮಹಾನಂದಿ-ಕೈಲಾಸವಾಸಿ/

ಶ್ರೀಗುರುಗೊ, "ಅಸ್ಮದತ್ಯಂತ ಪ್ರಿಯಶಿಷ್ಯ"ನೊಟ್ಟಿಂಗೆ..


ಗುರುಗಳ ಗೋಪ್ರೇಮ ಹೆಚ್ಚಪ್ಪಲೆ, ಭಾರತೀಯ ಗೋಯಾತ್ರೆ, ವಿಶ್ವಮಂಗಲ ಗೋಗ್ರಾಮ ಯಾತ್ರೆಗೊಕ್ಕೆ ಪ್ರೇರೇಪಣೆ ಕೊಟ್ಟ ಶ್ರೀಮಠದ ಶೆಗ್ತಿ ಅಸ್ತಂಗತ ಆದ್ಸಕ್ಕೆ ಬೈಲಿನ ಕಂಬನಿ.

ಇನ್ನೊಂದರಿ ಶ್ರೀಮಠಲ್ಲೇ ಹುಟ್ಟಿಬಂದು ಪೀಠದ ಸೇವೆ ಮುಂದುವರುಸುವ ಅವಕಾಶ ಸಿಕ್ಕಲಿ ಹೇಳ್ತದು ಬೈಲಿನ ಹಾರಯಿಕೆ.
ಹರೇರಾಮ.

15 thoughts on “ನಂದಿದ ಮಹಾನಂದಿ

  1. ವಿಷಯ ತಿಳುದು ತುಂಬಾ ಬೇಜಾರಾತು.

  2. ನಿನ್ನೆಣ ಉದಯವಾಣಿ ಪತ್ರಿಕೆಲ್ಲಿ ಓದಿದೆ… “ಇಂದು ಮಾನವ ಮೊಲೆ ಹಾಲಿನ ಬ್ಯಾಂಕ್ ಉದ್ಘಾಟನೆ” . ಗುರುಗಳು ನಮಗೆ ೨ ವರ್ಷದ ಮೊದಲೇ ನೀಡಿದ ಎಚ್ಚರಿಕೆಯ ಕರೆಯ ನಾವು ಇನ್ನೊಂದರಿ ನೆನಪಿಸಿಗೊಲ್ಳೆಕ್ಕು…
    “http://hareraama.in/blog/if-you-would-be-there/#comment-೪೮೫೨”. ನಾವು ಇನ್ನುದೆ ಮೈ ಚಳಿ ಬಿಟ್ಟು ಏಳದ್ದರೆ… ಗುರುಗಳು ನಮಗೆ ನೀಡುತ್ತ ಇಪ್ಪ ಎಚ್ಚರಿಕೆಯ ಕರೆಗಳ ಗಂಭೀರವಾಗಿ ತೆಕ್ಕೊಳ್ಳದ್ದರೆ… ದುಡ್ಡು,ಪ್ರತಿಷ್ಠೆ ಹೇಳುವ ಮಾಯೆಯ ಹಿಂದೆ ಓಡುದರ ಬಿಟ್ಟು ನೆಮ್ಮದಿಯ ಜೀವನಕ್ಕೆ ಹಿಂದುರಗದ್ದರೆ… ಮುಂದೆ “ಛೆ! ಭಾರತದ ಅವಸ್ಥೆ ಹೀನ್ಗಾತನ್ನೇ ಹೇಳಿ ಮಾತಾಡಿಗೊಮ್ಬದಕ್ಕೆ ಅರ್ಥವೇ ಇಲ್ಲೆ… ಅಲ್ಲದ…??”

  3. ಆನು ಮಹಾನ೦ದಿಯ ಶ್ರಿ ಮಠಲ್ಲಿ ನೊಡಿದ್ದೆ… ಈಗ ಈ ಸ೦ಗತಿ ಕೆಳಿ ತು೦ಬಾ ಬೆಜಾರಾವ್ತಾಇದ್ದು…..

  4. RaamadEvara pooje aavtaa ippa samayalli Mahaanandi Raamana seriddu…avana aatmakke shaanti sikkali …manassinge duhkha aatu…………………………………

  5. ಭಾರೀ ಬೇಜಾರದ ಸಂಗತಿ. ಹೆಚ್ಚಿಗೆ ಹೇಳುಲೆ ಮಾತು ಬತ್ತಿಲ್ಲೆ.

  6. ಬಲಭೀಮನ ಹಾಂಗೆ ಬೃಹತ್ ಕಾಯ; ಧರ್ಮಜನ ಹಾಂಗೆ ಮೃದು ಸ್ವಭಾವ ಇದ್ದಿದ್ದ ಮಹಾನಂದಿ ಇನ್ನು ನೆಂಪು ಮಾತ್ರ..
    ಈ ನೆಂಪು ಶಾಶ್ವತವಾಗಿ ಇಪ್ಪಲೆ ಶ್ರೀಗುರುಗಳ ಆದೇಶಾನುಸಾರ ಮಠದ ಗೋಶಾಲೆಲಿ ಮಹಾನಂದಿಗೆ ಸಮಾಧಿ ನಿರ್ಮಿಸುತ್ತವು ಹೇಳ್ತ ಮಾಹಿತಿ ಸಿಕ್ಕಿದ್ದು.
    ಗುರುಗಳಿಂಗೂ ಶಿಷ್ಯ ಸಮೂಹಕ್ಕೂ ಮಹಾನಂದವ ಕೊಟ್ಟ ಮಹಾನಂದಿಗೆ ಭಕ್ತಿಪೂರ್ವಕ ವಿದಾಯ..
    ಎಂಗಳ ಮುಳ್ಳೇರಿಯ ಮಂಡಲ ಸಭೆಲಿಯೂ ಈ ಮಹಾವೃಷಭಂಗೆ ಶ್ರದ್ಧಾಂಜಲಿ ಸಂದಿದು

  7. ಹರೇರಾಮ ಗುರಿಕ್ಕಾರ್ರೆ.

    ತನ್ನ ಜೀವಿತ ಕಾಲಲ್ಲಿ ತನ್ನ ಜನ್ಮ ಸಾರ್ಥಕ ಮಾಡ್ತಂತಹ ಕೆಲಸ ಮಾಡಿ, ತನ್ನ ಬಾಂಧವರಿಂಗೆ ಬೇಕಾಗಿ ಅವರ ಲಾಂಛನ ಆಗಿ ಎಂದೆಂದೂ ನಮ್ಮ ನೆನಪುಗಳಲ್ಲಿ, ಶ್ರೀ ಮಠದ ಇತಿಹಾಸಲ್ಲಿ ಒಂದು ಮುದ್ರೆ ಹಾಕಿ, ಕಾಲನ ಕರೆಗೆ ಓಗೊಟ್ಟು, ಸಾಮ್ರಾಟನ ದಾರಿಲೇ ನಡದ ಆ ಪುಣ್ಯ ಚೇತನಕ್ಕೆ ಮನದುಂಬಿದ ಕಂಬನಿ.

    ನಿಂಗೋ ಹೇಳಿದ ಹಾಂಗೆ ಇನ್ನೊಂದರಿ ಶ್ರೀಮಠಲ್ಲಿ ಹುಟ್ಟಿ ಬಂದು, ಪೀಠದ ಸೇವೆ ಮಾಡುಲೆ ಅವಕಾಶ ಸಿಕ್ಕಿ, ನವಗೆಲ್ಲರಿಂಗೂ ಪೀಠ ಸೇವೆಗೆ, ಗೋಮಾತೆಸೇವೆಗೆ ಪುನಃ ಪ್ರೇರಣೆ ಅಪ್ಪ ಹಾಂಗೆ ಆಗಲಿ..

    ಹರೇರಾಮ.

  8. ವಂದೇ ಗೋ ಮಾತರಂ
    ಇಂದು ಮಂಗಳೂರು ಮಂಡಲ ಸಭೆಲಿ ಮತ್ತೆ ಎಂಗಳ ವಲಯ ಸಭೆಲಿ ಎರಡು ನಿಮಿಶ ಮೌನವಾಗಿ ನಿಂದು ಶ್ರದ್ಧಾಂಜಲಿ ಸಲ್ಲಿಸಿದೆಯೊ.

  9. ಹರೇರಾಮ.
    ಶ್ರೀಗುರುಗಳ ಸಾನ್ನಿಧಲ್ಲಿ ಇದ್ದುಗೊಂಡು ಈಗ ಶಿವ ಸಾನ್ನಿಧ್ಯ ಸೇರಿದ ‘ಮಹಾನಂದಿ’ ಎಲ್ಲೋರಿಂಗೂ ಗೋಪ್ರೇಮದ ಸಂದೇಶವ ಸದಾ ಬೆಳಗಿಸಿಗೊಂಡಿರಿಲಿ.

    ವಂದೇ ಗೋಮಾತರಂ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×