Oppanna.com

“ಮಹಾಜನ” – ಬ್ಲೋಗಿಂಗೆ ನಾಕನೇ ಒರಿಶ!

ಬರದೋರು :   ಶುದ್ದಿಕ್ಕಾರ°    on   21/01/2012    9 ಒಪ್ಪಂಗೊ

ಬೈಲಿನ ಎಲ್ಲೋರಿಂಗೂ ನಮಸ್ಕಾರ.

ನಮ್ಮ ನೆರೆಕರೆಗೆ ಒಂದು ಸಂತೋಷದ ಶುದ್ದಿ.
ನಮ್ಮ ಬೈಲಿನ ದೊಡ್ಡಭಾವ ಪಾಟ ಮಾಡ್ತ “ದೊಡ್ಡ ಶಾಲೆ” ಯೇವದು ಗೊಂತಿದ್ದನ್ನೇ?
ನೀರ್ಚಾಲಿನ “ಮಹಾಜನ ಸಂಸ್ಕೃತ ಕೋಲೇಜು ಶಾಲೆ“.
ಗಡಿನಾಡಿಲಿ ಇದ್ದೊಂಡು ಹೆಮ್ಮೆಲಿ ಕನ್ನಡ ಪಾಟ ಮಾಡಿ, ಸಾವಿರಾರು ಜೆನಂಗಳ ವಿದ್ಯಾವಂತರಾಗುಸಿ ಸಮಾಜಕ್ಕೆ ಒದಗುಸೆಂಡಿದ್ದು.

http://mschsnirchal.blogspot.com

ಶಾಲೆಯ ಈಗಾಣ ವಿದ್ಯಾರ್ಥಿಗಳ ಚಟುವಟಿಕೆಗಳ, ಶಾಲೆಯ ಶುದ್ದಿಗಳ ಹಳೆವಿದ್ಯಾರ್ಥಿಗೊಕ್ಕೂ, ಆಸಕ್ತರಿಂಗೂ ಪ್ರಸಾರಮಾಡ್ಳೆ ಅದರದ್ದೇ ಆದ “ಬ್ಲೋಗು” ಸುರು ಆಯಿದು.
ಆ ಬ್ಲೋಗು ಸುರುಆಗಿ ಈಗ “ನಾಲ್ಕೊರಿಶ” ಆತು ಹೇಳ್ತದೇ ಈಗಾಣ ಸಂತೋಷದ ಶುದ್ದಿ.
ಕಂಡಿಗೆ ಅಜ್ಜನ ದೂರದೃಷ್ಟಿಂದ ಬೆಳದ ಶಾಲೆಗೆ ಈ-ಮಾಧ್ಯಮವನ್ನೂ ಕೊಟ್ಟು ಬೆಳೆಶಿದ ಕೀರ್ತಿ ನಮ್ಮ ಬೈಲಿನ ದೊಡ್ಡಬಾವಂಗೆ ಸಲ್ಲುತ್ತು.

ಶಾಲೆಯ ಹಾಂಗೇ, ಈ ಬ್ಲೋಗುದೇ ನೂರ್ಕಾಲ ಬೆಳಗಿ ಬಾಳಲಿ.
ಶಾಲೆಯ ಕನ್ನಡ ಕಂಪಿನ ಲೋಕಕ್ಕೆ ಎತ್ತುಸಲಿ.
ಎಲ್ಲೋರ ಸಂಪರ್ಕಕ್ಕೆ ಸಂಕ ಆಗಲಿ,
ಈ ಬ್ಲೋಗಿನ ಚೆಂದಕೆ ನಿರ್ವಹಿಸುವ ಶೆಗ್ತಿಯ ದೊಡ್ಡಬಾವ ಹಾಂಗೂ ಇತರ ಸಮ್ಮಂದ ಪಟ್ಟೋರಿಂಗೆ ಒದಗಿ ಬರಳಿ,
ಹೇಳ್ತದು ಬೈಲಿನ ಆಶಯ
~
ಬೈಲಿನ ಪರವಾಗಿ

ಸೂ:
ಬ್ಲೋಗಿನ ಸಂಕೊಲೆ: http://mschsnirchal.blogspot.com/

9 thoughts on ““ಮಹಾಜನ” – ಬ್ಲೋಗಿಂಗೆ ನಾಕನೇ ಒರಿಶ!

  1. ಬ್ಲೋಗಿಂಗೆ ನಾಕು ವರ್ಷ ! ಚೆಂದಕೆ ನೆಡಶುವ, ಸಮ್ಮಂದ ಪಟ್ತ ಎಲ್ಲೋರಿಂಗುದೇ ಒಪ್ಪಂಗೊ .ಹಾಂಗೆಯೇ ಮಹಾಜನ ವಿದ್ಯಾ ಸಂಸ್ಠೆಯ ಶತಮಾನೋತ್ಸವ ಹತ್ತರೆ ಬತ್ತಾ ಇದ್ದು . ಹಳೆ ವಿದ್ಯಾರ್ಠಿಗೊ, ವಿದ್ಯಾಭಿಮಾನಿಗೊ, ಎಲ್ಲೋರುದೇ ಎಲ್ಲಿದ್ದರುದೆ ಕೈ ಸೇರೆಕ್ಕಲ್ಲದೋ?
    ಅದುದೇ ಚೆಂದಕ್ಕೆ ನೆಡೆಯಲಿ ಹೇಳಿ ಆಶಯ.

  2. ಸತ್ಯಕ್ಕಾರು ಎನಗೆ ನೀರ್ಚಾಲ್ ಶಾಲೆಗೆ ಬ್ಲೋಗು ಇದ್ದೋಳಿಯಪ್ಪಗ ಖುಷಿ ಆತು. ಮಾಷ್ಟ್ರ ಕೆಲಸವ ಮೆಚ್ಚೆಕಾದ್ದೇ. ಚಂದಕ್ಕೆ ಮುನ್ನಡೆಯಲಿ ಹೇಳಿ ಶುಭಾಶಿಸುತ್ತೆ.

  3. ಮಹಾಜನ ಬ್ಲಾಗಿನ ಬಗ್ಗೆ ಒಳ್ಳೆ ಮಾತು ಹೇಳಿ ಪ್ರೋತ್ಸಾಹಿಸುತ್ತಾ ಇಪ್ಪ ನಿಂಗಳ ಬಗ್ಗೆ ಎನಗೆ ತುಂಬ ಖುಷಿಯಿದ್ದು. ಥ್ಯಾಂಕ್ಸ್…

  4. ದೊಡ್ಡಭಾವನ ಈ ಪ್ರಯತ್ನ ನಿರ೦ತರವಾಗಿ ಸಾಗಲಿ.ಬ್ಲೋಗಿಲಿ ಒಳ್ಳೆ ಶುದ್ದಿಗೊ ಬಪ್ಪ ಹಾ೦ಗೆ ವಿದ್ಯಾರ್ಥಿಗೊ ಚಟುವಟಿಕೆಗಳ ನೆಡೆಶಲಿ..ಶಾಲೆಗೂ ಹಳೆ ವಿದ್ಯಾರ್ಥಿಗೊಕ್ಕೂ ಸೇತುವಾಗಿ ಈ ಜಾಗೆ ಮು೦ದುವರಿಯಲಿ.
    ಶುಬಾಶಯ೦ಗೊ.

  5. ಶುದ್ದಿಕ್ಕಾರೋ..,

    ಚೀಪೆ ಶುದ್ದಿ!! ದೊಡ್ಡಭಾವನ ದೊಡ್ಡ ಶಾಲೆಲಿಯೇ ಲೋಕದ ಮೊದಲನೆಯ ಸಣ್ಣ ಮಕ್ಕೊಗೆ ಇಪ್ಪ ಬ್ಲೋಗ್ ಸುರು ಆದ್ದದು! ಹಿರಿಯ ಕಂಡಿಗೆ ಅಜ್ಜನ ಲೋಕದ ಒಟ್ಟಿಂಗೆ ನಡೆಯೆಕ್ಕು ಹೇಳುವ ಅನುಭವವೂ, ದೊಡ್ಡಭಾವನ ಅನುಭವ ಜ್ಞಾನವೂ ಸೇರಿ ಮಕ್ಕಳ ಶುದ್ದಿಗ, ಮಕ್ಕೋಗೆ ಇಪ್ಪ ಶುದ್ದಿಗ, ಶಾಲೆಲಿ ಆದ ಘಟನೆಗೋ ಎಲ್ಲವೂ ಚೆಂದಕ್ಕೇ ಬತ್ತಾ ಇದ್ದು.

    ‘ಮಹಾಜನ’ ದ ಈ ಬ್ಲೋಗ್ ಅಲ್ಲಿ ಕಲ್ತ ಈಗ ಲೋಕ ಇಡೀಕ ಇಪ್ಪ ಎಲ್ಲ ಹಿರಿಯ ಮಕ್ಕೊಗೆ ಅವ್ವು ಕಲ್ತ ಶಾಲೆಗೆ ಒಂದು ಕೊಂಡಿ ಇ-ಮಾಧ್ಯಮಲ್ಲಿ ಆಗಲಿ..
    ಈ ಬ್ಲೋಗಿನ ಹಿಂದೆ ಕೆಲಸ ಮಾಡ್ತಾ ಇಪ್ಪ ಎಲ್ಲರಿಂಗೆ ಇನ್ನು ಮುಂದೆಯೂ ಇದರ ಚೆಂದಕ್ಕೆ ವಿಸ್ತಾರ ಅಪ್ಪ ಹಾಂಗೆ ಮಾಡುವ ಹಾಂಗೆ ಆಗಲಿ..
    ಸಾವಿರದ ಸಂಕೆಲಿ ಜೆನಂಗ ಸೇರಿ ಬೆಳದು, ಬೆಳಗಲಿ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×