Oppanna.com

ಮಹಿಳಾ ದಿನದ ಶುಭಾಶಯಂಗೊ

ಬರದೋರು :   ಜಯಗೌರಿ ಅಕ್ಕ°    on   08/03/2013    19 ಒಪ್ಪಂಗೊ

ಜಯಗೌರಿ ಅಕ್ಕ°

ಸಮಸ್ಯಾಪೂರಣಲ್ಲಿ ಸಕ್ರಿಯವಾಗಿಪ್ಪ, ಬೈಲಿನ ಜಯಗೌರಿ ಅಕ್ಕ° ಮಹಿಳಾದಿನದ ದಿನ ಬೈಲಿಂಗೆ ವಿಶೇಷ ಶುದ್ದಿ ಹೇಳಿಗೊಂಡು ಬಂದವು.
ಎಲ್ಲೋರುದೇ ಸ್ವಾಗತಿಸಿ, ಅವರ ಶುದ್ದಿಗೊಕ್ಕೆ ಒಪ್ಪ ಕೊಟ್ಟು ಪ್ರೋತ್ಸಾಹಿಸುವೊ°.
ಜಯಗೌರಿಅಕ್ಕಂಗೆ, ಸ್ವಾಗತಮ್
~
ಬೈಲಿನ ಪರವಾಗಿ

ಮಹಿಳಾ ದಿನದ ಶುಭಾಶಯಂಗೊ

ಇಂದು ಮಹಿಳಾ ದಿನ.
ಬೈಲಿನ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಂಗೊ.

ಮಹಿಳಾ ದಿನ  (ಪಟ: ಮೋರೆಪುಟಂದ)
ಜೀವನಾವತಾರ

ನಮ್ಮ ಪ್ರತಿ ಹೆಜ್ಜೆಲಿಯೂ ನಮ್ಮೊಟ್ಟಿಗಿದ್ದು ಒಂದಲ್ಲ ಒಂದು ರೂಪಲ್ಲಿ ಪ್ರೋತ್ಸಾಹಿಸಿ ನಮ್ಮ ಶ್ರೇಯೋಭಿವೃದ್ಧಿಗೆ ತುಡಿಯುದು ದುಡಿಯುದು ಅಮ್ಮ, ಅಕ್ಕ-ತಂಗಿ, ಗೆಳತಿ, ಹೆಂಡತಿ, ಪ್ರೇಯಸಿ …..ಮತ್ತೂ ಏನೆಲ್ಲಾ!!.
ನಾವು ಪ್ರತಿ ದಿನ ಗಮನಿಸದೆ ಇದ್ದರೂ, ತನ್ನ ಕಡೆಗಣಿಸಿ ನಿರಂತರವಾಗಿ ಇತರರಿಂಗಾಗಿ ದುಡಿವ ಮಹಿಳೆಯ ಇಂದು ಒಂದು ದಿನವಾದರೂ ಅಭಿನಂದಿಸಿ ಕೃತಜ್ಞತೆ ತಿಳುಸುವ.
ಆಗ ಅವರ ಕಣ್ಣಿಲಿ ಕಾಂಬ ಸಂತೋಷವ ಮನತುಂಬಿಕೊಂಡು ಪ್ರತೀ ದಿನವೂ ಎಲ್ಲವೂ ಸಂತೋಷವಾಗಿಪ್ಪ.

ಈ ವಾಕ್ಯವೃಂದವು ನಮ್ಮೊಂದಿಗೆ ಪ್ರತಿಕ್ಷಣ ಇದ್ದು ನಮ್ಮಗಾಗಿ ಮಿಡಿವ ಹೆಣ್ಣಿಗೆ ಅರ್ಪಿತ..

ವಿ.ಸೂ: ಮಹನೀಯರ ದಿನ ನವೆಂಬರ್ ೧೯ಕ್ಕೆ ಅಡ. ಹಾಂಗಾಗಿ ಮಹನೀಯರು ಅಲ್ಲಿವರೆಗೆ ತಾಳ್ಮೆಲಿ ಕಾಯೆಕ್ಕು 🙂

ಪಟ: ಮೋರೆಪುಟಂದ

19 thoughts on “ಮಹಿಳಾ ದಿನದ ಶುಭಾಶಯಂಗೊ

  1. ಹಿಂದೊಮ್ಮೆ ನಾ ಹೇಳಿದ್ನಾಗಿತ್ತು, ಭಾಷೆ ಬಂದರೆ ಆಯ್ದಿಲ್ಲೆ ಭಾವವೂ ಬರವು ಹೇಳಿ. ಯಾರೋ ಯೆಲ್ಲೋ ಕೂತ್ಗಂಡು ನಿಶ್ಚಯ ಮಾಡಿದ್ದ ಈ Day ಗಳನ್ನು ನಂಗ ದೊಡ್ಡ ಮಾಡುದು ಸರಿ ಕಾಣ್ತಿಲ್ಲ, ಹಾಂಗೆ ನೋಡಿರೆ ಹೆಂಗಸರಿಗೆ ಹಿರಿಮೆ ಕೊಡುವ ನವರಾತ್ರಿ, ಗಂಗಾಷ್ಟಮಿ, ಗೌರಿತೃತೀಯಾ ಇವೆಲ್ಲ ನಮ್ಮ ಸಂಪ್ರದಾಯದಲ್ಲೇ ಇದ್ದು. ನಂಗ ಇಲ್ಲಿ ಒಂದಾಗಿಪ್ಪದು ಭಾಷೆ ಸಂತಿಗೆ ಸಂಸ್ಕಾರ ಸಂಸ್ಕೃತಿಯನ್ನೂ ಮುಂದೆ ತೆಕ್ಕಂಡ್ ಹೋಪುಲೆ ಅಂತ ಅಂದ್ಕಂಡಿದ್ದೆ. ಅದಲ್ಲ ಇದು ಕ್ರಿಶ್ಚಿಯನಿಟಿಯ ಅನುವಾದಿತ ರೂಪ ಅಂತಾದರೆ ನಂದೇನು ಅಭ್ಯಂತರ ಇಲ್ಲೆ. ಅದಲ್ಲ ಹೇಳಾದರೆ ನಮ್ಮ ಪಂಚಾಂಗದಲ್ಲಿ ಎಂಥ ದಿನವಿಶೇಷ ಬರೆಜವೋ ಅದ್ರನೇ ಎತ್ತಿ ತೋರ್ಸವ ಬರವಣಿಗೆ ಚಿಂತನೆ ಮಾಡ್ವ, ಪಂಚಪಾತ್ರೆ ಉದ್ಧರಣೆಯ ಬಳಶ್ಗಂಡು ತೀರ್ಥ ವಿತರಣೆ ಮಾಡ್ವ, ಬೇರೆಂಥದನ್ನೋ ಬೇಡ ಹೇಳಿ ಕಾಣ್ತು. ಈ ಡೇಗಳಿಗೆ ಪ್ರಾಶಸ್ತ್ಯ ಕಡಿಮೆ ಮಾಡಿರೆ ಜಯಂತಿ ವರ್ಧಂತಿಗಳು ಮೆರೆತು.

    1. ನಮಸ್ತೆ ಕಾಂತಣ್ಣ,

      ನಿಂಗಳ ಅಭಿಪ್ರಾಯಕ್ಕೆ ಎನ್ನ ಸಹಮತ ಇಲ್ಲೆ. ಪಾಶ್ಚಾತ್ಯ ದೇಶದವ್ವು ಮಾಡಿದ ದಿನ ಹೇಳುವ ಕಾರಣಕ್ಕೆ ಅದರ “ಕ್ರಿಶ್ಚಿಯಾನಿಟಿ” ಅಥವ “ಪಾಶ್ಚಾತ್ಯ” ಹೇಳುದು ತಪ್ಪಾವ್ತು.
      ಯಾಕೆ ಹೇಳಿರೆ ಇಂಥ ಕೆಲವು ದಿನಗೊ ಅಂತರರಾಷ್ಟ್ರೀಯ ಆಚರಣೆಗಾಗಿ ಮೀಸಲಾಗಿಪ್ಪ ದಿನಗೊ. ಇಡೀ ಪ್ರಪಂಚಕ್ಕೆ ಅನ್ವಯ ಅಪ್ಪಂಥದ್ದು.
      ಈಗ “earth day” ಹೇಳಿ ಯಾರೋ ಎಲ್ಲೋ ಕೂದುಗೊಂಡು ಮಾಡಿದ್ದವು. ಯಾಕಾಗಿ? ಭೂಮಿ, ಪರಿಸರ ಎಲ್ಲ ಹಾಳಾವ್ತ ಇಪ್ಪ ಇತ್ತೀಚಿನ ದಿನಂಗಳಲ್ಲಿ ಜನರಿಂಗೆ ಅವುಗಳ ಬಗ್ಗೆ ವರ್ಷಲ್ಲಿ “ಕನಿಷ್ಠ” ಒಂದು ದಿನವಾದರೂ ಕಾಳಜಿ ಬರಲಿ ಹೇಳಿ.
      ಒಂದು ಹೆಣ್ಣಿನ ಬಗ್ಗೆ ಎಷ್ಟು ಜನರಿಂಗೆ ಪ್ರೀತಿ, ಕಾಳಜಿ, ಆತ್ಮೀಯತೆ, ಗೌರವ ಇದ್ದು? ನಮ್ಮ ಸಮಾಜಲ್ಲಿ ನಡವ ಘಟನೆಗಳೇ ಹೇಳ್ತು ಹೆಣ್ಣಿಗೇನು ಬೆಲೆ ಹೇಳಿ.
      ಎಷ್ಟು ಜನ ಗಂಡಂದಿರು ಅವರ ಹೆಂಡತಿಯಕ್ಕಳ ಪ್ರೀತಿ, ಕಾಳಜಿ, ಆತ್ಮೀಯತೆ, ಗೌರವಲ್ಲಿ ಕಾಣ್ತವು?
      ನಿಂಗೊ ಹೇಳಿದ ಹಬ್ಬದ ದಿನಗಳಲ್ಲಿ ಹೆಣ್ಣು ದೇವತೆಗಳ ಪೂಜೆ ಮಾಡ್ತವೇ ಹೊರತು ಹೆಣ್ಣು ಜೀವಿಯ ಬಗ್ಗೆ ಆರು ಯೋಚನೆ ಮಾಡ್ತವು?

      ಹಾಂಗಾಗಿ ವರ್ಷಲ್ಲಿ “ಕನಿಷ್ಠ” ಒಂದು ದಿನವಾದರೂ ಹೆಣ್ಣಿನ ಬಗ್ಗೆ ಜನರು ಆದರ ತೋರಲಿ ಹೇಳಿ ಈ ದಿನ ಅಷ್ಟೆ.
      ಹೆಣ್ಣಿನ ಶೋಷಣೆ, ದೌರ್ಜನ್ಯ ಮುಂತಾದವುಗೊ ಇಲ್ಲದ್ದೇ ಇದ್ದಿದ್ದರೆ ಈ ದಿನದ ಅವಶ್ಯಕತೆಯೇ ಬತ್ತಿತ್ತಿಲ್ಲೆ.
      ಎಲ್ಲಾ ಗಂಡಸರು ಈ ದಿನವ ವಿಶಾಲ ಮನಸಿಂದ ಸ್ವೀಕರಿಸುತ್ತವು ಹೇಳಿ ಆನು ಗ್ರೇಶಿಗೊಳ್ತೆ.

      1. ವೈಯಕ್ತಿಕವಾಗಿ ಎನಗೆ ಈ ‘ಕ್ರಿಶ್ಚಿಯಾನಿಟಿ’, ಪಾಶ್ಚಿಮಾತ್ಯ ಸಂಸ್ಕೃತಿಯ ಅನುವಾದ, ರೂಪಾಂತರ, ಪ್ರಭಾವದ ಮೇಲೆ ನಂಬಿಕೆ ಇಲ್ಲೆ. ಎಲ್ಲಿ ಒಳ್ಳೆಯ ಕ್ರಮ ಇದ್ದೋ ಅಥವಾ ಎಲ್ಲಿ ನಮ್ಮ ಸಂಸ್ಕೃತಿ, ಸಮಾಜ, ಸಮುದಾಯದ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಉತ್ತಮವಾದ ಅಂಶ ಇದ್ದೋ, ಅದರ ಎಲ್ಲೋರು ತೆಕ್ಕಂಬಲಕ್ಕು. ಅದು ಹಿಂದೂಯೇತರ ಧರ್ಮ ಆದಿಕ್ಕು, ಹವ್ಯಕೇತರ ಜಾತಿ ಆದಿಕ್ಕು. ನಮ್ಮ ಸಮಾಜಕ್ಕೆ ಇನ್ನಷ್ಟು ಒಳಿತು ಮಾಡುವ ಅಂಶಗಳ ತೆಕ್ಕೊಂಡು ಉಳುದ ಕೆಟ್ಟ ವಿಚಾರಂಗಳ ಕೈ ಬಿಡೆಕು…
        ಪಾಶ್ಚಿಮಾತ್ಯ ಸಂಸ್ಕೃತಿಯ ಅನುಸರಿಸದ್ದೇ ಬೇರೆನು ಮಾಡ್ಳೆ ಎಡಿಯ ಹೇಳ್ತ ಪರಿಸ್ಥಿತಿ ಈಗ ನಿರ್ಮಾಣ ಆಯಿದು.. ನಮ್ಮ ದೇಶದಲ್ಲಿ ನಡೆತ್ತಿಪ್ಪ ಯಾವುದೇ ಯೋಜನೆಗಳ ತೆಕ್ಕೊಳ್ಳಿ ಅಥವಾ ಯಾವುದೇ ಸಂಘ ಸಂಸ್ಥೆ, ಮಠದ ಕಾರ್ಯಕ್ರಮಂಗಳ ತೆಕ್ಕೊಳ್ಳಿ ಪ್ರತಿಯೊಂದು ಕೂಡ ಆಧುನಿಕತೆ ತಳಹದಿಯ ಮೇಲೆ ನಿಂದದು. ‘ಆಧುನಿಕತೆ’ ಹೇಳ್ತ ಕಲ್ಪನೆಯ ಮೂಲಲ್ಲೇ ‘ಪಾಶ್ಚಿಮಾತ್ಯ ಸಂಸ್ಕೃತಿ’ ಇದ್ದು.
        ೨೧ನೇ ಶತಮಾನಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಲ್ಲಿ ಆಧುನಿಕತೆಯ ಸ್ಪರ್ಶ ಇಲ್ಲೆ ಹೇಳಿ ಆರಾರು ಹೇಳಲಿ ನೋಡ್ವ. ಸಾಧ್ಯವೇ ಇಲ್ಲೆ. ಆಧುನಿಕತೆಯ ಜೊತೆಜೊತೆಗೆ ನಮ್ಮ ಮೂಲ ಸಂಸ್ಕೃತಿ, ಸಂಸ್ಕಾರವ ಉಳುಶಲೆ ಪ್ರಯತ್ನ ಮಾಡೆಕ್ಕಷ್ಟೇ ಹೊರತು. ಅದು ಬೇಡ- ಇದು ಬೇಡ, ನಾವು ಹೀಂಗೆ ಇಪ್ಪ… ಹೇಳುದು ಅಷ್ಟೊಂದು ಸಮಂಜಸ ಆವುತ್ತಿಲ್ಲೆ ಹೇಳ್ತದು ಎನ್ನ ಭಾವನೆ.

      2. ಶ್ರೀಸೂಕ್ತ, ಪೃಥಿವೀಸೂಕ್ತ ಇತ್ಯಾದಿಗಳನ್ನ ಮರೆತ ಜನಂಗೊಕ್ಕೆ ಎಲ್ಲೋ ಕೂತವು ನೆನಪುಮಾಡುವ ಅಗತ್ಯ ಇದ್ದು, ಆದರೆ ಆ ಶಂಖದ ನೀರೇ ತೀರ್ಥ ಹೇಳಿ ತಿಳ್ಕಂಬವ್ಕೆ ಯನ್ನದೆಂತ ಸ್ಪಂದನೆ ಇಲ್ಲೆ. ಒಂದೇ ದಿನ ಆ ಭಾವನೆ ಇಪ್ಪ/ಬಪ್ಪ ಪರಿಕಲ್ಪನೆಯೇ ಡೇಂಜರಸ್ಸು.

    2. ಅಭಿಪ್ರಾಯ ತಿಳುಸಿದ ಕಾಂತಣ್ಣಗೆ ಧನ್ಯವಾದ.

      ಎನ್ನ ಅಭಿಪ್ರಾಯಲ್ಲಿ, ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗೊ ಖಂಡಿತವಾಗಿಯೂ ಒೞೆದರ ಕಲಿವಲೆ ಬೇಡ ಹೇಳ್ತಿಲ್ಲೆ. ನಮ್ಮ ಜಯಂತಿ,ವರ್ಧಂತಿಗೊ ನಮ್ಮ ಸಣ್ಣ ಕುಟುಂಬ,ಸಮುದಾಯಗಳ ನಡೂವೆ ನಡವಂತದ್ದು.ಇದು ಜಗದಾದ್ಯಂತ ಮೆರುದು ಎಲ್ಲರಲ್ಲೂ ಹೆಮ್ಮಕ್ಕಳ ಬಗ್ಗೆ ಗೌರವ ಮೂಡಿಸುವ ಹಾಂಗಿದ್ದರೆ ಅದಕ್ಕಿಂತ ಖುಶಿಯ ವಿಶಯ ಬೇರಿಲ್ಲೆ. ಆದರೆ ಅದಿತಿ ಅಕ್ಕ ಹೇಳಿದಾಂಗೆ ನಾವು ದೇವತಗಳ ಪೂಜೆ ಮಾಡ್ತೆ ಹೊರತು ಮಹಿಳೆಯರ ಹಕ್ಕು, ಗೌರವಗಳ ಬಗ್ಗೆ ಜಾಗೃತಿ ತಪ್ಪ ಪ್ರಯತ್ನ ಅಲ್ಲಿ ಇಲ್ಲೆ. ದೇಶಲ್ಲಿ ಎಲ್ಲರೂ ಆಸ್ತಿಕರಾಗಿರ್ತವೂಳಿ ಹೇೞೂ ಸಾಧ್ಯವಿಲ್ಲೆ. ಆ ನಿಟ್ಟಿಲಿ ಇಡೀ ಜಗತ್ತೇ ಒಂದಾಗಿ ಮಹಿಳೆಯರ ಬಗ್ಗೆ ಜಾಗೃತಿ ಮೂಡುಸುಲೆ ‘ಮಹಿಳಾದಿನ’ ದ ಮೂಲಕ ಪ್ರಯತ್ನಿಸುವಾಗ ನಾವೇಕೆ ಕೈಜೋಡುಸುಲಾಗ?
      ನಾವೀಗ ಉಪಯೋಗುಸುವ ಹೆಚ್ಚಿನ ವಸ್ತುಗೊ ಪಾಷ್ಚಾತ್ಯರ ಅನ್ವೇಷಣೆ.ನಮಗೆ ಅನುಕೂಲವಿದ್ದುದಕ್ಕೆ,ಉಪಯೋಗ ಇದ್ದದಕ್ಕೆ ಅದರ ಒಪ್ಪಿಕೊಂಡಿದು.ಹಾಂಗೆಯೆ ನಮಗೆ ಒೞೆದಪ್ಪದರ ಬಗ್ಗೆ ವಿಶಾಲವಾಗಿ ಆಲೋಚಿಸುವ..ನಮ್ಮ ಚಿಪ್ಪಿಂದ ಹೆರಬಂದು ವಿಶ್ವಮಾನವರಪ್ಪ ಕಡೆ ಹೆಜ್ಜೆ ಹಾಕುವ..

      1. ಖಂಡಿತ, ಆನೋಭದ್ರಾಃ ಕೃತವೋ ಯಂತು ವಿಶ್ವತಃ | ಎಂದು ಹೇಳಿದ ಜೆನ ನಂಗ. ಹಾಂಗೇ ಹೇಳಿ, ತೆರೆದಿಪ್ಪ ಕಿಟಕಿಯಲ್ಲಿ ಗಾಳಿಬೆಳಕು ಬಂದು ನಮ್ಮನ್ನೇ ಕೊಚ್ಚಿಕೊಂಡು ಹೋಪಲಾಗ. ನಮ್ಮ ದೇಶಕ್ಕಿಂತ ತೀರಾ ನಿಕೃಷ್ಟವಾಗಿ ಹೆಮ್ಮಕ್ಕಳನ್ನು ಕಾಂಬ, ನಮ್ಮದೇಶಕ್ಕಿಂತ 200% ಜಾಸ್ತಿ ರೇಪು, ಕೊಲೆ, ಸುಲಿಗೆ, ದರೋಡೆ ನಡೆವ ದೇಶಂಗಳು ತೇಲಿಬಿಡುವ ಚಿಂತನೆ ಅದೆಂಥ ಅಂತಾರಾಷ್ಟ್ರಿಯ ? ಮೇಲಿಂದ ನೋಡಿರೆ ಅನುವಾದ ಸಂಸ್ಕೃತಿ ಚೆಲೋ ಕಾಣ್ತು ಗೌರಿ, ರಜ ಆಳಕ್ಕೆ ಇಳಿಯೆಕ್ಕು.

        1. ಕಾಂತಣ್ಣನ ವಿಚಾರಕ್ಕೆ ಎನ್ನ ಸಹ ಮತ ಇದ್ದು…

          1. ಜಯಗೌರಿ ಅಕ್ಕನ ವಿಚಾರಂಗ ತಪ್ಪಲ್ಲ…. ಆದರೆ ಅದಕ್ಕೆ ನಮ ಸಂಸ್ಕೃತಿಯ ತಳಹದಿ ಇದ್ದರೆ ಒಳಿತು.
            (ಈ ‘ಳ’ ಕಾರಕ್ಕೆ ‘ಳ’ ಒತ್ತು ಕೊಡುದು ಹೇಂಗೆ? ಒಳ್+ಳ್= ಒೞೆ ಹೇಳಿ ಬತ್ತನ್ನೆ…! — ಅದಕ್ಕೆ ‘ಒಳಿತು’ ಹೇಳಿ ಹಾಕಿದ್ದೆ…)

          2. ಲ = la
            ಳ = La
            ಲ್ಲ = lla
            ಳ್ಳ = ” L , ಮತ್ತೆ shift + x ಕೀ ಒತ್ತಿಗೊಂಡು l ಮತ್ತೆ a ” ಒತ್ತಿ ನೋಡಿ = ಳ್ಳ

  2. ಒಪ್ಪ ಕೊಟ್ಟ ಎಲ್ಲವ್ಕೂ ತುಂಬಾ ತುಂಬಾ ಧನ್ಯವಾದಂಗೊಃ). ನಿಂಗಳೆಲ್ಲೊರ ಪ್ರೋತ್ಸಾಹ ಹೀಂಗೆ ನಿರಂತರವಾಗಿರಲಿ.ನಮ್ಮ ಇಡೀ ಪ್ರಪಂಚಲ್ಲಿಯೂ ನಿತ್ಯವೂ ಹೆಮ್ಮಕ್ಕಳ ದಿನವಾಗಿರಲಿ..

  3. ಹರೇರಾಮ ಜಯಗೌರಿ ಅಕ್ಕ°,
    ಸಮಸ್ಯಾಪೂರಣದ ಮೂಲಕ ಬೈಲಿಂಗೆ ಮದಲೇ ಪ್ರವೇಶ ಮಾಡಿದ್ದರೂ ಕೂಡ, ಶುದ್ದಿ ಹೇಳುವ ರೂಪಲ್ಲಿ ನಿಂಗೊಗೆ ಆತ್ಮೀಯ ಸ್ವಾಗತ.
    ಹೆಮ್ಮಕ್ಕಳದ್ದು ಹೆರಂದ ಕಾಂಬಲೆ ಒಂದು ರೂಪ ಆದಿಕ್ಕು, ಆದರೆ ನಿಭಾಯಿಸುವ ರೂಪಂಗ ಹಲವು ಇದ್ದಲ್ಲದಾ? ಒಂದು ಕೂಸು ಒಂದು ವಂಶವನ್ನೇ ಮುನ್ನಡೆಸುವೋಳು. ಎರಡು ಕುಟುಂಬವ ಲಾಯ್ಕಲ್ಲಿ ಹೊಂದುಸಿಗೊಂಡು ಹೋಪೋಳು. ಒಂದು ಮನೆಯ ಸಂಸ್ಕಾರ, ಸಂಸ್ಕೃತಿಗಳ ಪ್ರತಿನಿಧಿ.
    ನಮ್ಮ ಬೈಲಿಲಿ ನಿತ್ಯವೂ ಹೆಮ್ಮಕ್ಕಳ ದಿನವೇ! 🙂
    ಆದರೆ ಲೋಕರೂಢಿಯ ಹೆಮ್ಮಕ್ಕಳ ದಿನದ ಶುಭಾಶಯಂಗಳೊಟ್ಟಿಂಗೆ ಬೈಲಿಲಿ ನಿಂಗಳ ಶುದ್ದಿಗೊ ನಿರಂತರ ಬತ್ತಾ ಇರಲಿ ಹೇಳ್ತ ಹಾರೈಕೆ.
    ಹರೇರಾಮ.

  4. “ಯತ್ರ ನಾರ್ಯ೦ತು ಪೂಜ್ಯ೦ತೇ ರಮ೦ತೇ ತತ್ರ ದೇವತಾಃ ” ಹೇಳ್ತ ಮಾತುಗೊ ಹುಟ್ಟಿದ ನಮ್ಮ ದೇಶಲ್ಲಿ ಪ್ರತಿದಿನವೂ ಮಹಿಳೆಯರ ದಿನವೇ!
    ಆದರೆ ನಿನ್ನೆಯವರೆಗೆ ದೇವಿಯ ಸೌ೦ದರ್ಯ ಲಹರಿಯ ಆಸ್ವಾದನೆಲಿ ತನ್ಮಯವಾದ ನಮ್ಮ ಬೈಲಿಲಿ,ಜಯಗೌರಿ ಅಕ್ಕನ ಶುರುವಾಣ ಶುದ್ದಿ ಹೊಸ ಕೊಶಿ ಕೊಟ್ಟತ್ತು.
    ಹೊಸ ವಿಷಯ೦ಗೊ ಸದಾ ಬರಳಿ ಅಕ್ಕ.

  5. ಮಹಿಳಾ ದಿನಾಚರಣೆಯ ಶುಭದಿನಲ್ಲಿ ನಿಂಗಳ ಶುದ್ದಿ ಶುರುವಾದ್ದು – ಅಭಿನಂದನೆಗೊ.
    ಒಳ್ಳೊಳ್ಳೆ ಶುದ್ಧಿಗೊ ಬರಲಿ.

  6. ಎಲ್ಲಾ ಹೆಮ್ಮಕ್ಕೊಗೂ ಹೆಮ್ಮಕ್ಕಳ ದಿನದ ಶುಭಾಶಯಂಗೊ.ಇನ್ನು ಗೆಂಡುಮಕ್ಕಳ ದಿನವೂ ಬಪ್ಪಲಿದ್ದಡ.ಅಲ್ಲಿ ವರೆಗೆ ಕಾಯೆಕ್ಕಷ್ಟೆ.

  7. ಇಂದು ಮಾಂತ್ರ ಅಲ್ಲ…. ಎಂದೂ, ಎಂದೆಂದೂ ಮಹಿಳೆಯರ ಆಯಾ ಸ್ಥಾನಲ್ಲಿ ಗೌರವಿಸೆಕ್ಕಾದ್ದು ನಮ್ಮ ಧರ್ಮ. ಹರೇ ರಾಮ. ಶುಭಾಶಯಂಗೊ. ಜೀವನಾವತಾರ ಪಷ್ಟಾಯ್ದು ಹುಡ್ಕಿ ತಂದು ಮಡುಗಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×