ಮಕ್ಕಳ ತಾಳಮದ್ದಳೆ — ಒ೦ದು ಪ್ರಯೋಗ

ಪೌರಾಣಿಕ ಕಥೆಗೆ ವೈಚಾರಿಕೆ ವ್ಯಾಖ್ಯಾನ ಕೊಟ್ಟು ಚಿ೦ತನ ಮ೦ಥನ ನಡೆಸುವ ಬೌದ್ಧಿಕ ಆಯಾಮವೇ ತಾಳಮದ್ದಳೆ.
ಇದು ವಿದ್ವಾ೦ಸರಿ೦ದ ಮಾತ್ರ ಎಡಿಗಷ್ಟೆ.
ಆದರೆ ನಮ್ಮ ಪೆರ್ಲದ ಮಕ್ಕಳ ಮೇಳ ನಾಟ್ಯ ಗುರುಗ ಒ೦ದು ಹೊಸ ಪ್ರಯೋಗ ಮಾಡಿದವು.
ನಾಟ್ಯ ಕಲಿವ ಮಕ್ಕಳ ಕೂರುಸಿ ಅರ್ಥ ಹೇಳ್ಸಿದವು.
ಯಕ್ಷಗಾನಕ್ಕೆ ಹೇಳಿ ತಯಾರಾದ ಪ್ರಸ೦ಗದ ಅರ್ಥವನ್ನೇ ಹೇಳುದು. ಯಾವುದೇ ಚರ್ಚೆ ವಿಮರ್ಶೆ ಇಲ್ಲದರೂ ಕಥೆ ಚೆ೦ದಕ್ಕೆ ಹೋವುತ್ತು.
ಮಕ್ಕಳಲ್ಲಿ ಸ್ವ೦ತಿಕೆ ಇಲ್ಲದ್ದರೂ ಕಲ್ತದರ ಸ್ಪಷ್ಟವಾಗಿ ಹೇಳಿ ಜನಮೆಚ್ಚುಗೆ ಪಡದವು. ಮಕ್ಕೊಗೆ ನಾಟ್ಯ ಮಾಡುದರಿ೦ದಲೂ ಈ ಕೂದು ಹೇಳುವ ಕೆಲಸ ಭಾರೀ ಕಷ್ಟ ಅಡ!!!!
ಇದು ಮಕ್ಕಳದ್ದೇ ಅಭಿಪ್ರಾಯ. ಸುಮ್ಮನೆ ಕೂಪಲೆ ಎಡಿತ್ತಿಲ್ಲೆ.ಕೂರದ್ದೆ ಗೊ೦ತಿಲ್ಲೆ!!!!!!!!! 🙂

ಆದರೆ ಈ ಮಕ್ಕಳ ತಾಳ ಮದ್ದಳೆ ಯಶಸ್ವೀ ೧೦ ಪ್ರದರ್ಶನ ಕ೦ಡತ್ತು.
ಈ ಪ್ರಯೋಗ೦ದಾಗಿ ಮಕ್ಕಳಲ್ಲಿ ಪುರಾಣ ಜ್ಞಾನ ,ಸಾಹಿತ್ಯಾಸಕ್ತಿ , ವೈಚಾರಿಕತೆ ,ಯಕ್ಷಗಾನ ಮು೦ತಾದ ಕಲೆಗಳಲ್ಲಿ ಒಲವು ಹೆಚ್ಚುಗು.
ಮಾತಿನ ಮ೦ಟಪ ಕಟ್ಟುಲೆ ಇದುವೇ ಅಡಿಪಾಯ………

ಅನು ಉಡುಪುಮೂಲೆ

   

You may also like...

7 Responses

 1. ತೆಕ್ಕುಂಜ ಕುಮಾರ ಮಾವ° says:

  {ಮಕ್ಕಳಲ್ಲಿ ಪುರಾಣ ಜ್ನಾನ ,ಸಾಹಿತ್ಯಾಸಕ್ತಿ , ವೈಚಾರಿಕತೆ ,ಯಕ್ಷಗಾನ ಮು೦ತಾದ ಕಲೆಗಳಲ್ಲಿ ಒಲವು ಹೆಚ್ಚುಗು. ಮಾತಿನ ಮ೦ಟಪ ಕಟ್ಟುಲೆ ಇದುವೇ ಅಡಿಪಾಯ………}
  ನೂರಕ್ಕೆ ನೂರು ಸತ್ಯ. ಮಕ್ಕಳ ಸರ್ವತೋಮುಖ ಬೆಳವಣಿಗೆಗೂ ಇದು ಸಹಕಾರಿ. ಎಲ್ಲ ಮಕ್ಕೊ ಅಭಿನಂದನೀಯರು .

 2. ಚೆನ್ನೈ ಭಾವ says:

  ಒಳ್ಳೆ ಶುದ್ದಿ. ಇತರರಿಂಗೂ ಮಾದರಿ. ಅಕ್ಕನ ಇನ್ನೂ ಹಲವು ಶುದ್ದಿಯ ಬೈಲು ನಿರೀಕ್ಷಿಸುತ್ತು. ಪಟಕ್ಕೆ ಮಾಂತ್ರ ಒಂದರಿ ಪಂಚಗವ್ಯ ತಳುದೇ ಹಾಯೆಕಕ್ಕು. ಓಪನ್ ಆವ್ತಿಲ್ಲೇದು. ಮಕ್ಕಳ ತಂಡಕ್ಕೆ ಶುಭಾಶಯ ಸಹಿತ ಇನ್ನಷ್ಟು ಉನ್ನತ ಯಶಸ್ಸು ಲಭಿಸಿ ಕಲೆಯ ಬೆಳೆಸಿ ಉಳುಸಿ ಕೀರ್ತಿತಪ್ಪಂತಾಗಲಿ ಹೇಳಿ ಬಯಸುತ್ತು -‘ಚೆನ್ನೈವಾಣಿ’.

 3. ಮಕ್ಕಳ ತಾಳಮದ್ದಳೆ ಒಂದು ಒಳ್ಳೆಯ ಪ್ರಯೋಗ. ಮುಂದಿನ ಪೀಳಿಗೆಗೆ ಈ ಒಂದು ಕಲೆಯ ಪರಿಚಯ ಮಾಡ್ಸುದು ತುಂಬಾ ಒಳ್ಳೆ ವಿಚಾರ.

 4. ರಘು ಮುಳಿಯ says:

  ಸಭಾಕ೦ಪನವ ದೂರಮಾಡುವದರಿ೦ದ ಹಿಡುದು ಪುರಾಣಪ್ರಜ್ಞೆಯ ಬೆಳೆಶುವಿಕೆಯವರೆಗೆ,ಮಾತುಗಾರಿಕೆಯಿ೦ದ ಹಿಡುದು ಸಾಹಿತ್ಯಾಭಿರುಚಿಯ ಬೆಳೆಶುವಿಕೆಯವರೆಗೆ ಈ ಪ್ರಯತ್ನ ಪರಿಣಾಮಕಾರಿ ಅಕ್ಕು. ಇದನ್ನೇ ಹೇಳೊದು ಅಲ್ಲದೋ? ತಮಸೋಮಾ ಜ್ಯೊತಿರ್ಗಮಯ ಹೇದು..
  ಸಬ್ಬಣ್ಣಕೋಡಿ ಗುರುಗಳಿ೦ಗೆ ನಮೋ ನಮೋ..

 5. ವಿದ್ಯಾ ರವಿಶಂಕರ್ says:

  ಹಾಯ್ ಅನುಪಮ ಇದು ತುಂಬಾ ಉತ್ತಮ ಕೆಲಸ. ಅಳಿತ್ತಾ ಇಪ್ಪ ಕಲೆಗಳ ಬೆಳೆಶಿದ ಹಾಂಗಾತು. ಪೆರ್ಲಲ್ಲಿ ಹೇಳುವಾಗ ಆನು ಕಲಿತ ಶಾಲೆಯ ನೆಂಪಾತು.

 6. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಒಳ್ಳೆದಾತು.ಶ್ಲಾಘನೀಯ ಪ್ರಯತ್ನ.

 7. ಅನುಪಮತ್ತೆ, ಒೞೇ ಶುದ್ದಿ.. ಖುಶಿ ಆತು…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *