ಮಂಗಳೂರು ಹವ್ಯಕಸಭಾದ ವಾರ್ಷಿಕೋತ್ಸವ

“ಒಬ್ಬ ಮಾಡಿದ ಒಳ್ಳೆ ಕೆಲಸವ ಮೆಚ್ಚಲೆ, ಹೊಗಳಲೆ ಹಿಂಜರೆಯೆಕು ಹೇಳಿ ಇಲ್ಲೆ.   ಆದರೆ, ತೆಗಳೆಕಾರೆ ಒಂದು ರಜಾ ಆಲೋಚನೆ ಮಾಡಿ.  ಇದರ ನಮ್ಮ ಜೀವನಲ್ಲಿ ಪಾಲಿಸಿದರೆ, ಒಳ್ಳೆ ಗುಣ ಸಿಕ್ಕುತ್ತು !  ಸರಕಾರಿ ಕಚೇರಿಗಳಲ್ಲು ಲಂಚ ಕೊಡೆಕಾದ ಅವಸ್ಥೆ ಇದ್ದರೆ, ಲಂಚ ಕೊಡದ್ದೆ ನಿಂಗಳ ಕೆಲಸ ಮಾಡುಸೆಂಬಲಕ್ಕು!  ಒಂದು ಸಂಘ  ಕಟ್ಟೆಕಾರೆ, ಬೆಳೆಸೆಕಾರೆ ಎಷ್ಟು  ಕಷ್ಟ ಇದ್ದು ಹೇಳಿ ಎನಗೆ ಗೊಂತಿದ್ದು.  ಮಂಗಳೂರು ಹವ್ಯಕ ಸಭಾ ಈ ಹದಿನೈದು ವರ್ಶಲ್ಲಿ ಒಳ್ಳೆ ಬೆಳವಣಿಗೆ ಕಂಡಿದು.  ಒಳ್ಳೊಳ್ಳೆ ಕಾರ್ಯಕ್ರಮಂಗಳ ಮಾಡುತ್ತಾ ಇದ್ದು” ಹೇಳಿ ಪಾಣಾಜೆಯ ಡಾ.ಪಿ.ಕೆ.ಶಂಕರನಾರಾಯಣ ಭಟ್ರು ಹೇಳಿದವು.

ಅವು ಮಂಗಳೂರು ಹವ್ಯಕ ಸಭಾದ ವಾರ್ಷಿಕೋತ್ಸವಲ್ಲಿ ಮುಖ್ಯ ಅತಿಥಿಯ ಸ್ಥಾನಲ್ಲಿ ಇದ್ದು ಮಾತನಾಡಿದವು.
ಅವರ ಒಳ್ಳೆ ಹಾಸ್ಯ ಮಿಶ್ರಿತ, ಮೊನಚಿನ ಭಾಷಣ ಎಲ್ಲೋರ ಮನಸ್ಸಿಂಗು ನಾಟಿತ್ತು ಹಾಂಗೆ, ಕೊಶಿ ಕೊಟ್ಟತ್ತು.
ಮನ್ನೆ ಆದಿತ್ಯ ವಾರ (9.01.2011) ಕತ್ಲೆ ಅಪ್ಪಗ 5.00 ಗಂಟೆಗೆ ಸಭಾ ಕಾರ್ಯಕ್ರಮ ಸುರು ಆತು.
ಈ ಸಂದರ್ಭಲ್ಲಿ,  ಸಾಹಿತ್ಯ ಕ್ಷೇತ್ರಲ್ಲಿ, ಯಕ್ಷಗಾನ ರಂಗಲ್ಲಿ ತೊಡಗಿಸೆಂಡು, ಹವ್ಯಕ ಪರಿಷತ್ತು/ಸಭೆಗಳಲ್ಲಿ  ಸಕ್ರಿಯರಾಗಿ ತೊಡಗಿಸೆಂಡ ಶ್ರೀ ಜಿ.ಕೆ.ಭಟ್ ಸೇರಾಜೆ ಮತ್ತೆ, ಪತ್ರಿಕಾ ಛಾಯಾಗ್ರಹಣಲ್ಲಿ ಖ್ಯಾತಿ ಪಡೆದ ಶ್ರೀ ರವಿ ಪೊಸವಣಿಕೆ ಯವರ ಸನ್ಮಾಸಿದವು.
ಬೇರೆ ಬೇರೆ ರಂಗಂಗಳಲ್ಲಿ ಸಾಧನೆ ಗೈದವರನ್ನೂ ಸನ್ಮಾನಿಸಿದವು.
ಸಭಾದ ಅಧ್ಯಕ್ಷ  ಶ್ರೀ ಪಳ್ಳ ಪದ್ಮನಾಭ ಭಟ್,  ನಿಕಟ ಪೂರ್ವ ಅಧ್ಯಕ್ಷೆ, ಸುಕನ್ಯಾ ಭಟ್ ಉರಿಮಜಲು,  ಉಪಾಧ್ಯಕ್ಷರಾದ ಶ್ರೀ ಕೆ.ಎಸ್.ಶಾಸ್ತ್ರಿ, ಕೆ.ಈಶ್ವರ ಭಟ್, ಕಾರ್ಯದರ್ಶಿ, ಎಮ್.ಟಿ.ಭಟ್, ಸಾವಿತ್ರಿ ಗೋಪಾಲಕೃಷ್ಣ,  ಈ ಸಮೆಲಿ ವೇದಿಕೆಲಿ ಇದ್ದಿದ್ದವು.  ಶ್ರೀಮತಿ ವಸಂತ ಲಕ್ಷ್ಮಿ ಕಾರ್ಯಕ್ರಮವ ನಿರೂಪಿಸಿದವು.

ಮತ್ತೆ,  ಮನೋರಂಜನ ಕಾರ್ಯಕ್ರಮಲ್ಲಿ,  ಹಾಡುಗೊ, ನೃತ್ಯಂಗೊ, ಕಿರು ಪ್ರಹಸನ ಎಲ್ಲ ಎಲ್ಲೋರ ಮನ ರಂಜಿಸಿತ್ತು.    ಕಡೆಂಗೆ ಗಡದ್ದು ಊಟವುದೆ ಇತ್ತು ಹೇಳಿ ಪ್ರತ್ಯೇಕ ಹೇಳೆಕಾಗಿ ಇಲ್ಲೆನೆ ?
ಕಾರ್ಯಕ್ರಮದ ಕೆಲವು ಪಟಂಗಳ ಸಿಕ್ಕುಸಿದ್ದೆ.
~
ಬೊಳುಂಬುಮಾವ°

ಬೊಳುಂಬು ಮಾವ°

   

You may also like...

3 Responses

  1. ರಘುಮುಳಿಯ says:

    ಕೊಷಿ ಆತು,ಶುದ್ದಿ ನೋಡಿ.ಸೇರಾಜೆ ಮಾವ ಯಕ್ಷಗಾನ ರಂಗಲ್ಲಿ ಒಳ್ಳೆ ಕೆಲಸ ಮಾಡಿಗೊಂಡು ಇದ್ದವು.ಈ ಸನ್ಮಾನ ಅವರ ಇನ್ನೂ ಹೆಚ್ಚಿನ ಕೆಲಸ ಮಾಡುವ ಉಮೇದು ಕೊಡಲಿ ಹೇಳಿ ಹಾರೈಕೆಗೋ .
    ಅಪ್ಪೂ…ಅಜ್ಜಿ ಹೋಗಿ ಅಜ್ಜ ಬಂದು ಥೈ ಥಕ ಥೈ ಆಯಿದನ್ನೇ.ಅಭಿನಯದ ಕ್ರಮ ನೋಡೋಗ ಒಳ್ಳೆ ರೈಸಿಕ್ಕು,ನಿಂಗಳ ಹೋರಾಟ.

  2. ಲಾಯ್ಕ ಶುದ್ದಿ ಸಿಕ್ಕಿತ್ತು

  3. padmanabha Bhat Palla says:

    Vishaya elloringu gonthavuttu Santhosha.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *