ಮಿತ್ತೂರು ಸಂಪ್ರತಿಷ್ಠಾನ ಮಹಾಸಭೆ, ವೈದಿಕ ಸನ್ಮಾನ

ಶ್ರೀ ವೇದಬ್ರಹ್ಮ ಶುಳುವಾಲಮೂಲೆ ನಾರಾಯಣಭಟ್ರಿಂಗೆ ಮತ್ತೆ ಶ್ರೀ ವೇದಬ್ರಹ್ಮ ಪರಕಜೆ ಗಣಪತಿಭಟ್ರಿಂಗೆ ವೈದಿಕ ಸನ್ಮಾನ:

೧೬-೦೯-೨೦೧೨:
ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ) ಇದರ ೧೯ ನೇ ಮಹಾಸಭೆ ಶ್ರೀ ಪೋಳ್ಯ ಲಕ್ಷ್ಮೀ ವೆಂಕಟರಮಣ ಮಠದ ಸನ್ನಿದಿಲಿ ಇತ್ತೀಚೆಗೆ ನಡತ್ತು.
ಉದಿಯಪ್ಪಗ ೮.೩೦ ರಂದ ‘ಸತ್ಯಗಣಪತೀ ಪೂಜಾ ’ ಕಾರ್ಯಕ್ರಮ ನಡತ್ತು.
ಮಧ್ಯಾಹ್ನ ಮೇಲೆ ‘ಶ್ರೀ ಸತ್ಯಗಣಪತಿ ವ್ರತವಿಧಿ’ ಹೇಳುವ ಪುಸ್ತಕವ ಅನಾವರಣಗೊಳಿಸಿದವು.

ಈ ಸಂದರ್ಭಲ್ಲಿ ಗ್ರಂಥ ಸಂಪಾದಕರಾದ ಶ್ರೀ ಮಂಜಳಗಿರಿ ವೆಂಕಟರಮಣ ಭಟ್ರು ಗ್ರಂಥದ ವೈಶಿಷ್ಟ್ಯ ಮತ್ತೆ ಅದರ ಉಪಯೋಗದ ಬಗ್ಗೆ ಸಭೆಗೆ ಮಾಹಿತಿ ಕೊಟ್ಟವು.
ಶ್ರೀ ವೇದಬ್ರಹ್ಮ ಶುಳುವಾಲಮೂಲೆ ನಾರಾಯಣಭಟ್ರಿಂಗೆ ಮತ್ತೆ ಶ್ರೀ ವೇದಬ್ರಹ್ಮ ಪರಕಜೆ ಗಣಪತಿಭಟ್ರಿಂಗೆ ಸಂಪ್ರತಿಷ್ಠಾನದ ವತಿಂದ ವೈದಿಕ ಸನ್ಮಾನ ಮಾಡಿದವು.
ವಿಶೇಷ ಅಭ್ಯಾಗತರಾಗಿ ಡಾ| ಹರಿಕೃಷ್ಣ ಪಾಣಾಜೆ, ಪುತ್ತೂರು, ಹಾಂಗೆಯೇ ವಿಶೇಷ ಉಪಾನ್ಯಾಸಕರಾಗಿ ಡಾ| ಹೆಚ್. ಆರ್. ಲಕ್ಹ್ಮಿನಾರಾಯಣ ಭಟ್ರು, ಪ್ರಾಂಶುಪಾಲರು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಬ೦ದಿತ್ತಿದ್ದವು.

ವೈದಿಕ ಪ್ರಾರ್ಥನೆಯೊಟ್ಟಿಂಗೆ ಕಾರ್ಯಕ್ರಮ ಸುರುವಾಗಿ ಸ್ವಾಗತ ಮತ್ತೆ ಪರಿಚಯ ಕಾರ್ಯದರ್ಶಿ ರಮೇಶ ಭಟ್. ಬಿ. ಮಾಡಿದವು.
ಮಿತ್ತೂರು ರಾಮಚಂದ್ರ ಭಟ್ರು ಪ್ರಾಸ್ತಾವಿಕ ಬಾಷಣ ಮಾಡಿದವು; ವಂದನಾರ್ಪಣೆ ಮಿತ್ತೂರು ಈಶ್ವರ ಭಟ್ರು ನಡೆಸಿಕೊಟ್ಟವು.
ಸಭೆಲಿ ಗ್ರಂಥ ಸಂಪಾದಕರಾದ ಮಂಜಳಗಿರಿ ಶ್ರೀ ವೆಂಕಟರಮಣ ಭಟ್ಟರ ಗೌರವಿಸಿ ಗುರುತಿಸುವುದರೊಟ್ಟಿಂಗೆ ಶ್ರೀ ಬಲಿಪ ಭಾಗವತರ ಗೌರವಿಸಿದವು.

ಇದೇ ಸಂದರ್ಭಲ್ಲಿ ೨೯ ಮಂದಿ ವಿದ್ಯಾರ್ಥಿಗೊಕ್ಕೆ ನಗದು, ಪ್ರಶಸ್ತಿ ಪತ್ರ ಕೊಟ್ಟು ಗೌರವಿಸಿದವು.
ಈ ಸಂದರ್ಭಲ್ಲಿ ಸಂಪ್ರತಿಷ್ಠಾನವು ವೇದ ವಿದ್ಯಾ ಪ್ರೋತ್ಸಾಹದ ಅಂಗವಾಗಿ ವೇದಬ್ರಹ್ಮ ಚೂಂತಾರು ಶಿವಪ್ರಸಾದ ಭಟ್ರು ನಡೆಸುವ ‘ಸ್ಕಂದಕೃಪಾ ಗುರುಕುಲ ವಸಂತಶಿಬಿರ’ ಕ್ಕೆ ರೂಪಾಯಿ ೫,೦೦೦/- ಕೊಟ್ಟವು.

ಇಡೀ ಕಾರ್ಯಾಕ್ರಮದ ಜವಾಬ್ದಾರಿಯ ಸ೦ಪ್ರತಿಷ್ಟಾನದ ಸಂಚಾಲಕರಾದ ಮಿತ್ತೂರು ತಿರುಮಲೇಶ್ವರ ಭಟ್ರು ನಡೆಸಿಕೊಟ್ಟವು.
ಅಕೇರಿಗೆ ಹಿರಿಯ ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರ ನೇತೃತ್ವಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಅಂಗದಸಂಧಾನ’ ಯಕ್ಷಗಾನ ತಾಳಮದ್ದಳೆಯು ಜರಗಿತ್ತು.

ಕೆಲವು ಚಿತ್ರಂಗೊ:

ಶ್ರೀಪ್ರಕಾಶ ಕುಕ್ಕಿಲ

   

You may also like...

9 Responses

 1. ಚೆನ್ನೈ ಭಾವ° says:

  ಹರೇ ರಾಮ . ಉತ್ತಮ ಕಾರ್ಯಕ್ರಮ. ಪಟ ಸಹಿತ ಇಲ್ಲಿ ಶುದ್ದಿ ಕೊಟ್ಟದಕ್ಕೆ ಧನ್ಯವಾದಂಗೊ.

 2. ಗೋಪಾಲ ಬೊಳುಂಬು says:

  ಒಳ್ಳೆ ಕಾರ್ಯಕ್ರಮ. ವರದಿ ಒಪ್ಪುಸಿದ ಪ್ರಕಾಶಣ್ಣಂಗೆ ಧನ್ಯವಾದಂಗೊ. ಬೈಲಿಂಗೆ ಅಂಬಗಂಬಗ ಬತ್ತಾ ಇರಿ.

 3. jayalakshmi says:

  ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ಸನ್ಮಾನ ಸಮಾರಂಭಲ್ಲಿ ವೈದಿಕ ಸನ್ಮಾನದೊಟ್ಟಿಂಗೆ ಸಂಸ್ಕೃತವ ಪ್ರೋತ್ಸಾಹಿಸಿ, ಒಳಿಶಿ ಬೆಳೆಶುವ ದೃಷ್ಟಿಂದ ಹತ್ತನೇತರಗತಿ, ಪಿಯುಸಿ, ಪದವಿ ಹಾಂಗೇ ಸ್ನಾತಕೋತ್ತರ ಪದವಿಲಿ ಸಂಸ್ಕೃತಲ್ಲಿ ಅತ್ಯಧಿಕ ಅಂಕ ಗಳಿಸಿದ ೨೯ ಮಂದಿ ವಿದ್ಯಾರ್ಥಿಗೊಕ್ಕೆ ನಗದು, ಪ್ರಶಸ್ತಿ ಪತ್ರ ಕೊಟ್ಟು ಗೌರವಿಸಿದ್ದು ಗಮನಾರ್ಹ ಹಾಂಗೂ ಶ್ಲಾಘನೀಯ.

  – ಕುಕ್ಕಿಲ ಜಯತ್ತೆ.

 4. ಶರ್ಮಪ್ಪಚ್ಚಿ says:

  ಸ್ಲಾಘನೀಯ ಕಾರ್ಯ.
  ವರದಿ ನೀಡಿದ ಕುಕ್ಕಿಲ ಶ್ರೀ ಪ್ರಕಾಶಣ್ಣಂಗೆ ಧನ್ಯವಾದಂಗೊ

 5. Mitturu Thirumaleshwara Bhat says:

  Mitturu samprathishtaanadinda putturu parisrada shalakalejugala vidayrthigalannu nagadu ( sslc-Rs-500/- , puc-Rs-600/- ,padavi-Rs-700/- MA-Rs-800/-) mattu prashasthi ptravannu ittu gurutisiruttade. samskritadalli aayaa shalegalalli 1 ne sthana(samana anka padedalli yellarannoo ) padeda vidyarthigalannu guruthisikondu 17 varshagalinda koduttide.

 6. ವೈದೀಕರಿಗೆ ಸನ್ಮಾನ ಮಾಡಿದ್ದ ಶುದ್ದಿ ಕೇಳಿ ಸ೦ತೊಷ ಆತು. ಲೌಕಿಕ ಸಮಾಜ ಇವತ್ತು ವೈದೀಕನ್ನ ರಾಶಿ ಕಡೆಗಣಿಸ್ತಾ ಇದ್ದು. ಎ೦ಥಾ ಬೇಸರದ ಸ್ಥಿತಿ ಅ೦ದ್ರೆ ಮದುವೆ ಆಪುಲೆ ಹೆಣ್ಣು ಸಿಕ್ಕುತ್ವಿಲ್ಯಡ. ಸ೦ಪಾದನೆ ಚೊಲೋ ಇದ್ದರೂ ಎಷ್ಟೋ ಜೆನ ಭಟ್ಟಕ್ಕೊ ಗೃಹಸ್ಥರಾಗೊ ಯೋಗ ಬೈ೦ದಿಲ್ಯಡ.
  ಒ೦ದು ಕಾಲದಲ್ಲಿ ಅವುಕ್ಕೆ ಅತ್ಯುನ್ನತ ಸ್ಥಾನ ಇತ್ತಡ. ಕ್ರಮೇಣ ನ೦ಗಳಲ್ಲಿ ಧರ್ಮ ಶ್ರದ್ಧೆ ಕಡಿಮೆ ಯಾಗಿ, ಪಾಶ್ಚಾತ್ಯ ಸ೦ಸ್ಕೃತಿ ಜಾಸ್ತಿ ಆಗಿ, ’ನಿಜವಾದ’ ಬ್ರಾಹ್ಮಣರಿಗೆ ಉತ್ತೇಜನ ಕಮ್ಮಿಯಾಗಿ, ಈಗ ನಮ್ಮ ಇರವನ್ನೇ ಮರೆಯ ಹ೦ತಕ್ಕೆ ಬೈ೦ದ. ವಿಷೇಶವಾಗಿ ವೈದಿಕರು ನಮ್ಮ ಜ್ಞಾನ/ಧರ್ಮ/ಸ೦ಸ್ಕೃತಿಯ ಹರಿಕಾರರು. ಅವುಕ್ಕೆ ಪ್ರೋತ್ಸಾಹ, ಆಶ್ರಯ ಸಿಕ್ರೆ ಲೋಕ ಕಲ್ಯಾಣ ಖ೦ಡಿತಾ ಆಗ್ತು.

  ಶ್ರೀ ವೇದಬ್ರಹ್ಮ ಶುಳುವಾಲಮೂಲೆ ನಾರಾಯಣಭಟ್ರಿಂಗೆ ಮತ್ತೆ ಶ್ರೀ ವೇದಬ್ರಹ್ಮ ಪರಕಜೆ ಗಣಪತಿಭಟ್ರಿಂಗೆ ಸನ್ಮಾನಕ್ಕಾಗಿ ಅಭಿನ೦ದನೆಗೊ. ಇದಕ್ಕೆ ಕಾರಣರಾದ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ). ಇವರೂ ಅಭಿನ೦ದನೀಯ. ಶುದ್ದಿಯ ಪಟದ ಸಮೇತ ಹೇಳಿದ ಶ್ರೀ ಪ್ರಕಾಶ ಕುಕ್ಕಿಲರಿಗೆ ಧನ್ಯವಾದ೦ಗೊ

 7. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ವೈದಿಕರಿಂಗೆ ಸಮ್ಮಾನ,ನಮ್ಮ ಪರಂಪರೆಗೇ ಸಂದ ಗೌರವ.ಶ್ಲಾಘನೀಯ ಕಾರ್ಯ.

 8. Subramanya Prasad says:

  Ellaringu Namaskara,

  Mittur Samprathishtanada Pustakango bangalorile elli sikkuttu helle edigo?

  Namaskaragalu,

  Subramanya Prasad

 9. Mitturu Thirumaleshwara Bhat says:

  ಶುಭಮ್, ಮಿತ್ತೂರು ಸಂಪ್ರತಿಷ್ಥಾನದ ಪುಸ್ತಕಗಳು ಬೆಂಗಳೂರಿನ ಈ ಕೆಳಗಿನ ಅಂಗಡಿಗಳಲ್ಲಿ ಸಿಗುತ್ತವೆ.
  ೧. ವೇದಾಂತ ಪುಸ್ತಕ ಭಂಡಾರ ,ಉಮಾ ಟಾಕೀಸು ಹತ್ತಿರ,ಚಾಮರಾಜ ಪೇಟೆ ,ಬೆಂಗಳೂರು.
  ೨. ಪ್ರಚೇತಾ ಬುಕ್ ಹೌಸ್ ,ಶಾಂತಿಸಾಗರ ಹೋಟೇಲ್ ಕಟ್ಟಡ ,ಬುಲ್ ಟೆಂಪಲ್ ರೋಡ್ ಬೆಂಗಳೂರು.
  ೩.ವಂದನಾ ಬುಕ್ ಹೌಸ್ ,ಎನ್.ಆರ್.ಕೊಲೊನಿ. ಬೆಂಗಳೂರು.
  ೪,ಟಿ.ಎನ್.ಕ್ರಿಸ್ಣಯ್ಯ ಸೆಟ್ಟಿ & ಸನ್ಸ್ . ಬೆಂಗಳೂರು.
  ೫.ಗೀತಾ ಏಜನ್ಸೀಸ್, ಬಳೇಪೇಟೆ ಬೆಂಗಳೂರು.
  ೬. ಶ್ರೀ ರಾಮಾಶ್ರಮ ,ಬೆಂಗಳೂರು.
  ೭ . ಪೂಜಾ ಬುಕ್ ಹೌಸ್ ,ಚಾಮರಾಜ ಪೇಟೆ ,ಬೆಂಗಳೂರು.
  ೮. ರಾಷ್ತ್ರೋತ್ಥಾನ ಪರಿಷತ್, ಬೆಂಗಳೂರು.

  ಇತ್ಯಾದಿ ಕಡೆಗಳಲ್ಲಿ ಲಭ್ಯವಿವೆ. ವಂದನೆಗಳು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *