ಮೂರು ಬಗೆಯ ಓಟ – ಅಮೆರಿಕಾ ಅನುಭವ

December 30, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಜೀವನಲ್ಲಿ  ನಾವು ಅನೇಕ ಹೊಸ ವಿಷಯಂಗಳ ನೋಡುತ್ತು. ಕೇಳುತ್ತು. ಹೀಂಗೆ ನೋಡಿದ ಕೇಳಿದ ವಿಷಯಂಗೊ ನಮ್ಮ ಜ್ಞಾನವ ಹೆಚ್ಚು ಮಾಡುತ್ತು. ಮನೆಯೊಳದಿಕ್ಕೇ ಕೂದರೆ,ಹೆರಾಣ ವಿಷಯಂಗೊ ಗೊಂತಾವುತ್ತಿಲ್ಲೆ. ಕೆಲವು ವಿಷಯ ಮಾಧ್ಯಮಂಗಳ ಮೂಲಕ ತಿಳುಕ್ಕೊಂಬಲಾವುತ್ತು. ಇನ್ನು ಕೆಲವು ಆಯಾ ಊರಿಂಗೆ ಹೋಗಿ ತಿಳಿವಲಾವುತ್ತು. ದೂರ ದೇಶಂಗಳ ವಿಷಯಂಗಳ ಹೋಗಿ ನೋಡಿಯೇ ತಿಳಿಯೆಕ್ಕಷ್ಟೆ.

ಕೆಲಸ ಹುಡುಕ್ಯೊಂಡು ಹೋಗಿ ಹೆರ ದೇಶಂಗಳಲ್ಲಿ ಇಪ್ಪ ಹೊಸ ಪೀಳಿಗೆಗಳ ನೋಡೆಕ್ಕು. ಹೊರ ದೇಶಂಗಳಲ್ಲಿ ಹೇಂಗೆ ಅವರ ಜೀವನ ಹೇಂಗೆ ಸಾಗುತ್ತು ಹೇಳುವದರ ಅಲ್ಲಿಗೇ ಹೋಗಿ ನೋಡೆಕ್ಕು. ಅವರೊಟ್ಟಿಂಗೆ ಇದ್ದರೆ ಅನುಭವಕ್ಕೆ ಬತ್ತು. ಊರು ಬಿಟ್ಟು ದೂರ ಹೋದ ಈಗಾಣ ಜವ್ವನಿಗರು ಹೇಂಗೆ ಮರ್ಯಾದಿಲ್ಲಿ ತಲೆ ನೆಗ್ಯೊಂಡು ಜೀವನವ ಅನುಭವಿಸುತ್ತವು ಹೇಳುವದರ ನೋಡುಲೆ ಎನಗೆ ಯೋಗ ಸಿಕ್ಕಿತ್ತು. ಎನ್ನ ಮಕ್ಕೊ ಅಮೇರಿಕಾಲ್ಲಿ ಇಪ್ಪದರಿಂದ, ಒಂದು ವರ್ಷಂದಲೂ ಹೆಚ್ಚ ಸಮಯ ಅವರೊಟ್ಟಿಂಗೆ ಇತ್ತಿದ್ದೆ.  ಧಾರ್ಮಿಕ ವಿಷಯಲ್ಲಿಯೂ ನಮ್ಮ ಕಟ್ಟಳೆಗಳ ಅವು ಬಿಟ್ಟುಕೊಡುತ್ತವಿಲ್ಲೆ ಹೇಳ್ತದರ ನೋಡಿ ತು೦ಬಾ ಕೊಶಿಪಟ್ಟಿದೆ. ಎನ್ನ ಮಗನ ಗೆಳೆಯ ಒಬ್ಬ ಅವನ ಮಗಂಗೆ ಎರಡು ವರ್ಷಂದ ಕೂದಲಿಂಗೆ ಕತ್ತರಿ ಮುಟ್ಟುಸದ್ದೆ ಮೊನ್ನೆ ಶೃಂಗೇರಿ ದೇವಸ್ಥಾನ ಒಂದರಲ್ಲಿ ಅಲ್ಲಿಯಾಣ ಭಟ್ಟಕ್ಕಳ ಮೂಲಕ ಚೌಲ ಕಾರ್ಯ ಮಾಡುಸಿಯೇ ಕ್ಷೌರ ಮಾಡಿಸಿತ್ತಿದ್ದ°. ಮರದಿನ ಒಂದು ಸತ್ಯ ನಾರಾಯಣ ಪೂಜೆಯನ್ನೂ ಮಾಡುಸುವದು ಹೇಳಿ ಯೋಚನೆ ಮಾಡಿದೋನು ಎನ್ನತ್ರೆ ಪೂಜೆ ಮಾಡುಸುಲೆಡಿಗೊ  ಹೇಳಿ ಕೇಳಿದ°. ಏಳೆಂಟು ಮನೆಯೋರ ಬಪ್ಪಲೆ ಹೇಳಿ ಗೌಜಿಲ್ಲಿ ಪೂಜೆ ಮತ್ತೆ ಊರ ಕ್ರಮಲ್ಲಿ ಊಟ ಎಲ್ಲ ಕಳುತ್ತು. ಬೇರೆ ಮನೆಯೋರುದೆ ಒಂದಲ್ಲ ಒಂದು ಕಾರಣ ಹುಡುಕ್ಯೊಂಡು  ಬಪ್ಪಲೆ ಹೇಳುವದು. ಮಗ ಎಂಗಳ ಕರಕ್ಕೊಂಡು ಹೋಪದು,ಹೀಂಗೆಲ್ಲ ಕೆಲವು ಜನಂಗೊ ಆತ್ಮೀಯರಾಗಿತ್ತಿದ್ದವು.

ಇಲ್ಲಿಯಾಣ ಜನಂಗಳೂ ಅಷ್ಟೆ ನಮ್ಮ ಸಂತೋಷಕ್ಕೆ ಅಡ್ಡಿ ಮಾಡುತ್ತವಿಲ್ಲೆ. ಅವುದೆ ಸಂತೋಷಕ್ಕಾಗಿ ವಾರದ ರಜೆಲ್ಲಿ ಒಂದೊಂದು ಕಾರ್ಯಕ್ರಮಂಗಳ ಮಾಡಿಕ್ಕೊಳ್ಳುತ್ತವು. ಬೇರೆ ಬೇರೆ ಊರಿಂಗೂ ಹೋವುತ್ತವು. ರಜಾದಿನಂಗಳಲ್ಲಿಯೂ ಬೇಕಾದ ಸಾಮಾನು ತಪ್ಪಲೆ ಹೋಪದು,ಅಲ್ಲದ್ದರೆ ತಿರುಗುಲೆ ಹೋಪದು. ಹೀಂಗೆ ಯಾವಾಗಳೂ ಮಾರ್ಗ ತುಂಬ ವಾಹನಂಗೊ ಇಕ್ಕು. ಅಂಗ್ಡಿಗೋ ದೂರ ಇಪ್ಪ ಕಾರಣ ಮನೆಯೋರೆಲ್ಲ ಒಟ್ಟಿಂಗೆ ಹೋಪದು.
ಅಮೇರಿಕದೋವು ವಾರದ ರಜೆಲ್ಲಿ ಒಂದಲ್ಲ ಒಂದು ಕಾರ್ಯಕ್ರಮಂಗಳ ಮಡಿಕ್ಕೊಂಡು ಜನಂಗೊಕ್ಕೆ ಕೊಶಿ ಅಪ್ಪ ಹಾಂಗೆ ನೋಡಿಗೊಳ್ಳುತ್ತವು. ಮತ್ತೆ ಬೇರೆ ರಾಜಕೀಯವಾಗಿ ನಮ್ಮ ದೇಶದಷ್ಟು ಗಲಾಟೆ ಮಾಡುಲೆ ಹೋವುತ್ತವಿಲ್ಲೆ. ಓಟು ಮುಗುದ ಮತ್ತೆ ಅಂತೆ ಪೇಪರಿಲ್ಲಿ ಎಂತ ಶುದ್ದಿ ಹೇಳಿ ನೋಡುವದು,ಟೀ ವಿ ನೋಡುವದಷ್ಟೆ.ಜಿಂದಾಬಾದ್ ಹಾಕುಲೆ ಹೋವುತ್ತವಿಲ್ಲೆ. ಕೆಲವು ಜನ ಬೇಸ್ ಬಾಲ್, ಸೋಕರ್ ಬಾಲ್,ಟೆನ್ನಿಸ್ ಹೀಂಗೆಲ್ಲ ಆಟ ಆಡುಲೋ ನೋಡುಲೋ ಹೋಪದಿದ್ದು. ಇನ್ನು ಮಾರಥೋನ್( ೪೦ ಕಿಲೋ ಮೀಟರ್ ನಷ್ಟು ಓಡುವದು) ಅದರಲ್ಲಿಯೂ ಅರ್ಧ ,ಕಾಲು ಹೀಂಗೆ ಸ್ಪ್ರ್ಧೆ ನಡೆಸುವದು ಕೆಲವು ಜನ ಭಾಗವಹಿಸುವದು ಅಂತೂ ಹೀಂಗಿಪ್ಪ ಸಾಹಸ ಮಯ ಕ್ರೀಡೆಗೊ ಇಲ್ಲಿ ಹೆಚ್ಚು. ಇಲ್ಲಿಯಾಣ ಜನಂಗೊ ಯಾವಾಗಳೂ ಉದಿಯಪ್ಪಗ ವಾಕ್ ಹೋಪದು ಹೇಳಿ ಅಲ್ಲ .ಜೋಗಿಂಗ್ ನಿಧಾನಕ್ಕೆ ಓಡಿಗೊಂಡಿಪ್ಪದು.ಒಂದರಿಯೇ ಎರಡು ಮೂರು ಮೈಲು ಓಡುತ್ತವು. ಅದಾದ ಮೇಲೆಯೇ ಉದಿಯಪ್ಪಗಾಣ ಉಪಾಹಾರ ತೆಕ್ಕೊಂಬದು. ಹೀಂಗಿಪ್ಪ ಸ್ಪರ್ಧೆಗಲಲ್ಲಿ ಭಾಗವಹುಸೆಕ್ಕಾದರೆ ಒಂದೆರಡು ದಿನದ ಆಭ್ಯಾಸ ಸಾಕಾಗ. ಒಂದನೆಯದಾಗಿ ಮನಸ್ಸು ಬೇಕು. ಅದಮ್ಯ ಉತ್ಸಾಹ ಇದ್ದೋರಿಂಗೆ ಮಾಂತ್ರ ಮನಸ್ಸಕ್ಕು. ಧೈರ್ಯವೂ ಬೇಕು. ಕೋಡಿ ಎತ್ತೆಕ್ಕಾದರೆ ಗುರಿಮುಟ್ಟೆಕ್ಕು ಹೇಳುವ ಛಲವೂ ಬೇಕು. ಇವೆಲ್ಲ ಇದ್ದೋರಿಂಗೆ ಮಾಂತ್ರ ಇಲ್ಲಿಯಾಣೋರೊಟ್ಟಿಂಗೆ ಸೇರಿಗೊಂಬಲೆ ಮನಸ್ಸಕ್ಕು. ಎನ್ನ ಮಗನೂ ಹೀಂಗಿಪ್ಪ ಓಟಂಗೊಕ್ಕೆ ಸೇರುತ್ತ°. ಈಜು ಸ್ಪರ್ಧೆ, ಸೈಕಲ್ ಸ್ಪರ್ಧೆ,ಹೀಂಗೆಲ್ಲ ಮಗನೂ ಭಾಗವಹಿಸುವದು ಇದ್ದು. ಆದರೆ ಒಂದರಿಯೋ ಎರಡು ಸರ್ತಿಯೋ ಮಾರಥೋನ್ ಓಟಕ್ಕೂ ಸೇರಿ ಅವರ ಮೆಡಲ್ ಸಿಕ್ಕಿದ್ದು. ಅರ್ಧ ಮಾರಥೋನ್, ಕಾಲು ಮಾರಥೋನ್ ಹೀಂಗೆಲ್ಲ ಅವ° ಭಾಗವಹಿಸ್ರುವದಿದ್ದು. ಅದರೆ ಎಂಗೊಗೆ ನೋಡುಲೆ ಎಂಗೊ ಇಲ್ಲಿ ಇತ್ತೇ ಇಲ್ಲೆನ್ನೆ!

ಅಂಬಗ..ಓ ಮೊನ್ನೆ ಒಂದರಿ ಅರ್ಧ ಕಿ.ಮೀ ಓಡಿ ಸೈಕಲ ಸವಾರಿ ಮಾಡಿದ್ದರ ಶುದ್ದಿ ಹೇಳಿತ್ತಿದ್ದ° . ಹತ್ತರಾಣ ಹೊಳೆಲ್ಲಿ ಈಜಿದ ಶುದ್ದಿ ಹೇಳಿತ್ತಿದ್ದ°.ಹೀಂಗೆಲ್ಲ ಸೇರುವಗ ಕೊಡೆಕ್ಕಾದ ಪೈಸವ ಕಂಪೆನಿಯೇ ಕೊಡುತ್ತಡೊ.ಈ ರೀತಿ ಪ್ರೋತ್ಸಾಹ ಕೊಡುವಗ ,ಮಗಂಗೆ ಉತ್ಸಾಹವೂ ಇಪ್ಪಗ,ಮಾಂತ್ರ ಅಲ್ಲ ಈಗ ಸಣ್ಣ ಪ್ರಾಯವೂ ಅಲ್ಲದೋ? ಸೇರಿದರೆ ತಪ್ಪಲ್ಲ.ಹೀಂಗಿಪ್ಪ ಸ್ಪರ್ಧೆಗೊಕ್ಕೆ ತುಂಬ ಫೀಸ್ ಕೊಡೆಕ್ಕಾವುತ್ತು. ನೂರೋ ಇನ್ನೂರೋ ಡಾಲರ್ ಕೊಡೆಕ್ಕಾಗಿದ್ದರೂ ಕೊಟ್ಟು ಜನಂಗೊ ಸೇರುತ್ತವು. ಬರೇ ಗೆಲ್ಲುವದು ಮಾಂತ್ರ ಉದ್ದೇಶ ಅಲ್ಲ. ಕೆಲವು ಜನಕ್ಕೆ ಜೀವಮಾನಲ್ಲಿ ಹೀಂಗಿಪ್ಪ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಏನೋ ಒಂದು ತೃಪ್ತಿ ಸಂತೋಷದೊಟ್ಟಿಂಗೆ ಸಾಧನೆಯ ಬಗ್ಗೆ ಹೆಮ್ಮೆ ಇರುತ್ತು. ಇಪ್ಪದೂ ತಪ್ಪಲ್ಲ. ಗುರಿ ಮುಟ್ಟಿದೋರಿಂಗೆ ಪದಕ ಕೊಡ್ಳೂ ಇದ್ದು. ಹಾಂಗೆ ಸಿಕ್ಕಿದ ಕೆಲವು ಪದಕಂಗೊ ಗೋಡೆಲ್ಲಿ ತೂಗಹಾಯ್ಕೊಂಡು ಇದ್ದು.Tri_swim_bike_run
ಮನ್ನೆ    ಹೊತ್ತೋಪಗ ಸೊಸೆ ಹೇಳಿ ಗೊಂತಾದ್ದು. ಅವರೊಳದಿಕ್ಕೆ ಚರ್ಚೆ ಆಗಿತ್ತಡೊ.ಬೇಡ ಹೇಳಿ ಸೊಸೆ; ಹೆಸರು ಕೊಟ್ಟಾಯಿದು. ಈ ಸರ್ತಿ ಸೇರದ್ದೆ ಆಗ ಹೇಳಿ ಮಗ ಚರ್ಚೆ ಮಾಡಿ ಕಡೆಂಗೆ ಇನ್ನು ಹೋವುತ್ತಿಲ್ಲೆ ಇದು ಕಡೆ ಹೇಳಿ ಒಪ್ಪಂದಲ್ಲಿ ಚರ್ಚೆ ನಿಂದತ್ತಡೊ. “ನಾಳಂಗೆ ಟ್ರೆತ್ಲೋನ್ ಹೇಳಿ ಮೂರು ಬಗೆಯ ಓಟ ಇದ್ದಡೊ. ಬೇಡ ಹೇಳಿದರೆ ಕೇಳಿದ್ದವಿಲ್ಲೆ. ಹೆಸರು ಕೊಟ್ಟಿದವಡಾ. ಈಸರ್ತಿ ಒಟ್ಟಿಂಗೆ ನಾವುದೇ ಹೋಪ°” ಹೇಳಿ ಹೇಳುವಗಳೇ ವಿಷಯ ಗೊಂತಾದ್ದು. ಎಂಗಳತ್ರೆ ಹೇಳದ್ದದು ಎಂಗೊ ಬೈಗು ಹೇಳಿಯೋ ಎಂತದೋ!ಸಣ್ಣಾಗಿಪ್ಪಗಳೇ ಸಣ್ಣ ಮಗ ರಜ ಛಲವಾದಿ. ಗ್ರೇಶಿದ ಕಾರ್ಯವ ಸಾಧುಸಿಯೇ ಬಿಡದ್ದರೆ ಅವಂಗೆ ತೃಪ್ತಿ ಸಮಾಧಾನ ಇಲ್ಲೆ. ಮಗನ ನಿರ್ಧಾರ ಸರಿ ಹೇಳಿ ಕಂಡರೂ ಸುಲಭಲ್ಲಿ ಒಪ್ಪುಲೆ ಮನಸ್ಸಾವುತ್ತೊ. ಒಪ್ಪದ್ದರೆ ಅವ ಬಿಡುತ್ತ ಇಲ್ಲೆ ಹೇಳಿ ಮದಲೆ ಗೊಂತಿದ್ದ ಕಾರಣ ಮಾತಾಡದ್ದಿಪ್ಪದು ಬುದ್ಧಿವಂತಿಕೆ ಹೇಳಿ ಕಂಡತ್ತು. ಸ್ಪರ್ಧೆಲ್ಲಿ ಭಾಗವಹಿಸುವೋವು ೧೫೦ಡಾಲರ್ ಕೊಡೆಕ್ಕಡೊ. ಮಗಂಗೆ ಅವನ ಕಂಪೆನಿಯೋರೇ ಕೊಡುಗಡೊ. ಕಂಪೆನಿಯ ದನಿಯೇ ಓಟಕ್ಕೆ ಸೇರಿತ್ತಿದ್ದನಡೊ.

ಉದಿಯಪ್ಪಗ ೬ ಗಂಟೇಗೆ ಹೆರಡುವದು ಹೇಳಿ ನಿಘಂಟು ಆತು. ಆದರೆ ಉದಿಯಪ್ಪಗ ಐದು ಗಂಟೆಗೇ ಎದ್ದು ನಿತ್ಯ ಯೋಗ, ವ್ಯಾಯಾಮ ಮತ್ತೆ ರುದ್ರ ಚಮೆ ಹೀಂಗೆಲ್ಲ ಹೇಳಿದ ಮತ್ತೆ ಒಳುದ ದಿನಚರಿಯ ಅಭ್ಯಾಸ. ಅದಕ್ಕೆ ಅಂದು ಬೇಗ ಹೋಪಲಿದ್ದ ಕಾರಣ ನಾಲ್ಕೂವರೆ ಗಂಟೆಗೇ ಎದ್ದು ತಯಾರಾತು.ಒಂದೆಡೆಲ್ಲಿ ಮನಸ್ಸಿಂಗೆ ಪುಕು ಪುಕು ಹೇಳಿ ಆವುತ್ತು.ಹೊಳೆಲ್ಲಿ ಈಜುವದರ ಗ್ರೇಶುವಗಲೇ ಹೆದರಿಕೆ ಆದ್ದು. ಮತ್ತಾಣದ್ದು ಹೇಂಗಾದರೂ ಅವಂಗೆ ಅಭ್ಯಾಸ ಇಪ್ಪದೇ,ತೊಂದರೆ ಇಲ್ಲೆ. ಅವನ ಛಲಕ್ಕೆ ಸಹಾಯ ಮಾಡಿಕ್ಕು ಹೇಳಿ ದೇವರತ್ರೆ ಸಾವಿರ ಸರ್ತಿ ಅಕ್ಕು ಕೇಳಿಗೊಂಡದು.ಒಂದು ಕಿಲೋಮೀಟರ್ ನಷ್ಟು ದೂರ, ನೂರು ಫೀಟು ಹೊಂಡ ಇಪ್ಪ ಹೊಳೆಲ್ಲಿ ಪ್ರವಾಹದ ಎದುರೆ ಆಗಿಯೂ,ಅಡ್ಡಕ್ಕೂ, ಕೆಳಂಗೂ ಈಜು ಮುಗಿಶಿಕ್ಕಿ, ೧೭ ಕಿ ಮೀ ಸೈಕಲ್ ಸವಾರಿ ಮಾಡಿಕ್ಕಿ  ಮೂರೂವರೆ ಮೈಲು ಓಡೆಕ್ಕು. ಮುನ್ನಾಣ ದಿನ ಮಳೆ ಬಂದು ಹೊಳೆ ತುಂಬ ನೀರಿತ್ತು. ಮಾತ್ರ ಅಲ್ಲ ಕಸವು ಕೊಳಕ್ಕು ಎಲ್ಲ ದೂರ ಮಾಡಿಗೊಂಡು ಹೋಯೆಕ್ಕು.

ಅಲ್ಲಿಗೆತ್ತುವಗ ಏಳೆಂಟು ಸಾವಿರ ಜನ ಸೇರಿತ್ತಿದ್ದವು. ಅಂದ್ರಾಣ ಓಟಕ್ಕೆ ಬೇಕಾಗಿ ಹುಡುಕ್ಕಿದ ಜಾಗೆ ಬೇರೆ ಸಮಯಲ್ಲಿ ಅಲ್ಲಿ ಜನವೇ ಇಲ್ಲೆಡೊ.ಹೊಳೆ ಕರೆಲ್ಲಿ,ದೊಡ್ಡ ಮರಂಗಳ ಎಡೆಲ್ಲಿ ಹೊಳೆಲ್ಲಿ ಈಜುವದರ ನೋಡುಲೆ ಆಯಿಗೊಂಡಿತ್ತಿಲ್ಲೆ.ಆಕಾಶಂದ ಸೂರ್ಯ ಮರಂಗಳ ಎಡೆಲ್ಲಿ ಇದರ ಎಲ್ಲ ನೋಡೆಕ್ಕು ಹೇಳಿಯೋ ಎಂತದೋ ಕದ್ದು ನೋಡ್ಯೊಂಡಿದ್ದ ಕಾರಣ ರಜ ರಜ ಬೆಶಿಲೂ ಇತ್ತು. ಒಂದು ಏಳೆಂಟು ಅಂಗ್ಡಿಗೊ ಬಂದೋರಿಂಗೆ ಆಸರಿಂಗೆ ಕೊಡುಲೆ ಹೇಳಿ ಅಲ್ಲ ವ್ಯಾಪಾರ ಜೋರು ಅಕ್ಕು ಹೇಳಿ ಬಂದದಾಗಿಕ್ಕು.ಬೆಶಿಲಿಂಗೆ ಅಲ್ಲಲ್ಲಿ ವಸ್ತ್ರದ ಮಾಡು  ಮಾಡಿ ಕುರ್ಚಿ ಮೇಜು ಎಲ್ಲ ಮಡಿಕ್ಕೊಂಡಿತ್ತು.ಕೂದು ನೋಡುವೋರಿಂಗುದೆ ಅನುಕೂಲ ಮಾಡಿತ್ತಿದ್ದವು. ಪೈಸೆ ತೆಕ್ಕೊಂಡರೂ ಖರ್ಚು ಮಾಡುತ್ತವು.  ಈಜು ಮುಗಿಶಿ ಬಪ್ಪೋರ ನೋಡ್ಯೊಂಡು ಮಗ° ಬಪ್ಪದರನ್ನೇ ನೋಡ್ಯೊಂಡು ಇತ್ತಿದ್ದೆಯೊ. ಹೆಸರು ಭರ್ತಿ ಮದಲೇ ಆಗಿದ್ದರೂ ಬೇಜ್ ಎಲ್ಲ ತೆಕ್ಕೊಂಡು ಈಜು ಮುಗಿಶಿಕ್ಕಿ ಬಪ್ಪಗ ಅವಂಗೆ ಅರ್ಧ ಗಂಟೆಯೇ ಬೇಕಾತು. ಆದರೆ ಅಷ್ಟು ಹೊಂಡ ಇಪ್ಪ ಹೊಳೆಲ್ಲಿ ಈಜಿಕ್ಕಿ ಮೇಲೆ ಬಪ್ಪಗ ಎಂಗೊಗೆ ಸಮಾಧಾನ ಆತು. ಎರಡು ಸಾವಿರಂದಲೂ ಮೇಲೆ ಸ್ಪರ್ಧಾಳುಗೊ ಇತ್ತಿದ್ದವಡೊ.ಹದಿನಾರು ವರ್ಷಂದ ಹಿಡುದು ೭೫ ವರ್ಷದ ವರೆಗಿನವುದೇ ಭಾಗವಹಿಸಿದ್ದರ ನೋಡುವಗ ಅಮೇರಿಕದೋರು ಎಷ್ಟು ಸಾಹಸ ಪ್ರಿಯರು ಹೇಳುವದರ ತಿಳುಕ್ಕೊಂಬಲಕ್ಕು. ಒಬ್ಬಂಗೆ ಎರಡುದೇ ಕೃತಕ ಕಾಲು! ಮತ್ತೊಬ್ಬಂಗೆ ಒಂದು ಕೃತಕ ಕೈ!ಹೆಮ್ಮಕ್ಕೊ, ಮಕ್ಕೊ ಹೀಂಗೆ ಹೊಳೆಂದ ಮೇಲೆ ಬಂದೊಂಡಿತ್ತಿದ್ದವು.
ಹೊಳೆಲ್ಲಿಯೂ ಅಲ್ಲಲ್ಲಿ ಈಜುಲೆಡಿಯದ್ದೆ ಸೋತು ಹೋಪೋರಿಂಗೆ ಸಹಾಯಕ್ಕಾಗಿ ಜನ ನೀರಿಲ್ಲಿಯೇ ಆಚೀಚೆ ಹೋಗ್ಯೊಂಡಿತ್ತಿದ್ದವು. ಜೀವರಕ್ಷಕಂಗೊ ಜಾಗ್ರತೆಂದ ಎಲ್ಲ ನೋಡ್ಯೊಂಡಿತ್ತಿದ್ದವು. ಎಡಿಯದ್ದೋವು ಹೆಲ್ಪ್ ಹೆಲ್ಪ್ ಹೇಳಿದರೆ ಓಡಿ ಬಂದು ಸಹಾಯ ಮಾಡ್ಯೊಂಡಿತ್ತಿದ್ದವಡೊ.ಮಾಂತ್ರ ಅಲ್ಲ ಸರಿಯಾಗಿ ಸ್ಪರ್ಧಾಳುಗೊ ಈಜುತ್ತವೋ ಹೇಳುವದರನ್ನೂ ನೋಡಿಗೊಳ್ಳೆಕ್ಕನ್ನೆ.ಶುರುವಿಂಗೆ ಒಂದೈದು ನಿಮಿಷ ಹೆರಡುವಲ್ಲಿಯೇ ಹೊಳೆಲ್ಲಿ ಕೈ ಹನಿಸಿಗೊಂಡು ನಿಲ್ಲೆಕ್ಕಡೊ. ಮತ್ತೆ ಈಜುವದಡೊ. ಇದರ ಎಲ್ಲ ಮತ್ತೆ ಮಗ° ಹೇಳಿದ. ಮಗನೂ ಮೇಲೆ ಬಂದೋನಿಂಗೆ ಎಂಗಳ ಕಂಡು ಕೊಶಿ ಆಗಿತ್ತಡೊ.ಮತ್ತೆ ಸೈಕಲ್ ಸವಾರಿ. ಒಂದು ಹಳತ್ತು ಸಾಮನ್ಯ ಸೈಕಲ್ ಮಗನತ್ರೆ ಇದ್ದದರನ್ನೇ ಅವ ತಂದದು. ಬೇರೆ ಎಲ್ಲ ೨೦೦೦ ಡಾಲರ್ ಬೆಲೆಯ ವೇಗವಾಗಿ ಹೋಪಲೆಡಿಗಾದ ಸೈಕಲ್ ತಂದಿತ್ತಿದ್ದವು. ಒಂದೇ ಗಂಟೆಲ್ಲಿ ಈ ಮೂರೂ ಓಟಂಗಳ ಮುಗುಶಿದೋರು ಮೊದಲನೆಯ ಸ್ಥಾನ ಪಡದಿತ್ತಿದ್ದವು.ಸೈಕಲ್ ಸವಾರಿ ಹೋವುತ್ತ ದಾರಿಲ್ಲಿ ಫರ್ಲಾಂಗಿಗೊಬ್ಬ ನಿಂದೊಂಡು, ಹೋಪೋವು ಸರಿದಾರಿಲ್ಲಿ ಹೋವುತ್ತವೋ ಹೇಳಿ  ನೋಡ್ಯೊಂಡಿತ್ತಿದ್ದವು. ಅವರ ಕಣ್ಣಿಂಗೆ ಬೀಳದ್ದೆ ಮುಂದೆ ಹೋಪಲೆಡಿಯ. ಆದರೆ ಈಜು ಮುಗಿಶಿಕ್ಕಿ ಕೆಲವು ಜನ ಮೇಲೆ ಹತ್ತಿದೋರು, ಅಲ್ಲಿಂದಲೇ ಹೋದೋರಿದ್ದವಡೊ.

ಆನೊಂದು ಗಾದೆ ಕೇಳಿತ್ತಿದ್ದೆ.ಆಳ ನೋಡಿ ಹಾರು ಗಾಳಿ ನೋಡಿ ತೂರು‘ಹೇಳಿ.ಹುಟ್ಟಿದ ಮೇಲೆ ಜಾಗೆಯನ್ನೆ ನೋಡದ್ದೋನು ಹೊಳೆಯ ಆಳವನ್ನೂ ನೋಡದ್ದೆ ಹೋದ್ದು ಏನೋ ಒಂದು ಪೊಟ್ಟು ಧೈರ್ಯಲ್ಲೇ ಅಲ್ಲದೋ?ಮತ್ತೆ ಅಲ್ಲಿದ್ದೋರು ಜೀವ ಹೋಪಲೆ ಬಿಡವು ಹೇಳುವ ಧೈರ್ಯವೂ ಮಗಂಗೆ ಬೆಂಗಾವಲಾಗಿತ್ತು ಹೇಳಿ ಕಾಣುತ್ತು.  ಮಗಂಗೆ ಸೈಕಲಿನ ತೊಂದರೆಂದ ಒಂದು ಗಂಟೆ ಅದಕ್ಕೇ ಬೇಕಾಗಿ ಬಂತಡೊ. ಮತ್ತೆ ಓಟ ಮುಗುಶಿ ಅವನ ಕಂಡದು ಒಟ್ಟಾರೆ ಮೂರು ಓಟ ಮುಗಿಶುಲೆ ಒಂದೂವರೆ ಗಂಟೆ ಬೇಕಾತಡೊ. ಎಂಗೊ ಅವ° ಬಂದೆತ್ತುವದರನ್ನೇ ಕಾದುಗೊಂಡು ಗುರಿಯ ಹತ್ತರೆ ನಿಂದಿತ್ತಿದ್ದೆಯೋ. ಬಂದು ಎತ್ತಿಯಪ್ಪಗ ಗುರಿ ಮುಟ್ಟಿದೋರಾ ಕೊರಳಿಂಗೆ ಪದಕ ಹಾಯ್ಕೊಂಡಿತ್ತಿದ್ದವು. ಪದಕ ಹಾಕುಸಿಗೊಂಡು ಹೆರ ಬಪ್ಪಗ ಅವನ ಮಗ° (ಎಂಗಳ ಪುಳ್ಳಿ)ಗೆ ಕೊಶಿಯೋ ಕೊಶಿ .ಓಡಿ ಹೋಗಿ ಅಪ್ಪಿ ಹಿಡುಕ್ಕೊಂಡ°. ಓಟ ಪೂರ್ತಿಗೊಳಿಸಿದ್ದಕ್ಕೆ ಅವಂಗೆ ಮೆಡಲ್ ಸಿಕ್ಕಿ ಅಪ್ಪಗ ಎಂಗೊ ಹಾರಿ ಕೊಣುದೆಯೊ°. ಇಡೀ ಎರಡು ಸಾವಿರ ಜನಂಗಳಲ್ಲಿ ಭಾರತೀಯ ಇವ ಮಾಂತ್ರ ಇದ್ದದು ಹೇಳಿ ಅಪ್ಪಗ ಎಂಗೊಗೂ ತುಂಬ ಕೊಶಿ ಆತು.ಎಲ್ಲ್ಯೋ ಭಾರತದ ಮೂಲೆಲ್ಲಿ ಹುಟ್ಟಿ ಬೆಳದು ಕೆಲಸ ಹುಡಿಕುಕ್ಕಿಗೊಂಡು ಇಲ್ಲಿಗೆ ಬಣ್ದ ಮೇಲೆ ಕೆಲಸದೊಟ್ಟಿಂಗೆ ಇಲ್ಲಿಯ ಜನಂಗಳೊಟ್ಟಿಂಗೆ ಆನುದೇ ಇದ್ದೆ ಹೇಳಿ ತೋರುಸಿದ್ದು  ಭಾರಿ ಅಭಿಮಾನದ ವಿಷಯ ಮಾಂತ್ರ ಅಲ್ಲ,ಯೋಗ ಭಾಗ್ಯಂಗಳೊಟ್ಟಿಂಗೆ ಹೆತ್ತೋರಿಂಗೂ ಮಾತೃಭೂಮಿಗೂ ಹೆಮ್ಮೆ ತಪ್ಪ ಸಾಧನೆ ಮಾಡಿದ್ದಕ್ಕೆ ಹೆತ್ತೋರಾದ ಎಂಗೊಗೆ ತುಂಬ ಕೊಶಿ ಆತು.

ಚಿತ್ರಕೃಪೆ ಃ ಅ೦ತರ್ಜಾಲ

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಅಷ್ಟೊಂದು ಜೆನಂಗಳ ಪೈಕಿ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸಿ ವಿಜಯಿಯಾಗಿ ಬಂದದಕ್ಕೆ ಅಭಿನಂದನೆಗೊ. ಓಳ್ಳೆ ಅನುಭವ ಕಥನ.

  [Reply]

  VN:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅಭಿನಂದನೆಗೊ.
  ನಿರೂಪಣೆ ಲಾಯಿಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 3. dentistmava

  shubhashayango subbanna mava
  bharathiya samskrithiya bidadde americadora ottinge sarisamanagi spardheli bhagavahisi medalu thekkondu ….
  antha magana padeda ningo dhanyaru.
  americalli kooda japa tapa rudra chame …kelidare khushi avuthu.
  hareraama.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°

  ಒಳ್ಳೆ ಒಂದು ಶುದ್ದಿ ಓದಿ ಕೊಶೀ ಆತಿದಾ.

  ಛೆ !! ನವಗೂ ಅಲ್ಲಿ ಹೋಗಿ ಕೂದರಕ್ಕೋದು ಕಾಣುತ್ತಪ್ಪ. ಆದ್ರೆ ಎಂತ… ನಮ್ಮ ಊರು ನಮ್ಮ ಊರೇ.

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಶುದ್ದಿಯ ಸುಮಾರು ಅ೦ಶ೦ಗೊ ಕೊಶಿ ಕೊಟ್ಟವು ಮಾವಾ.
  ದೂರದ ಊರಿ೦ಗೆ ಹೋದರೂ ನಮ್ಮತನ ಕಳಕ್ಕೊಳ್ಳದ್ದೆ ಬದುಕ್ಕೊದು,ಅಲ್ಲಿ ಪರಕೀಯರಾಗದ್ದೆ ಅವರ ನೆಡೂಕೆ ಚಟುವಟಿಕೆಗಳಲ್ಲಿ ಭಾಗವಹಿಸೊದು —ನವಗೆಲ್ಲಾ ನಿ೦ಗಳ ಮಗ ಮಾದರಿ ಅಪ್ಪೊದು ನಿಜ.
  ಅಮೇರಿಕದ ವಾರಾ೦ತ್ಯದ ಜೀವನ ಹೇ೦ಗಿರ್ತು ಹೇಳಿ ಮಾಹಿತಿಯೂ ಸಿಕ್ಕಿತ್ತು,”ಟ್ರೆತ್ಲೋನ್” ಕೇಳದ್ದ ಹೆಸರು.ಒಲಿ೦ಪಿಕ್ಸಿಲಿ ೩೦೦೦ ಮೀ ‘ಸ್ಟೀಪಲ್ ಚೇಸ್” ಹೇಳಿ ಒ೦ದು ಸ್ಪರ್ಧೆ ಇದ್ದು,ಆದರೆ ಅದರ್ಲಿ ನೀರಿಲಿ ಓಡೊದು ಹೇಳಿ ಎನ್ನ ನೆನಪ್ಪು.
  ಧನ್ಯವಾದ ಮಾವಾ.ಹೀ೦ಗೆಯೇ ನಿ೦ಗಳ ನೆನಪಿನ ಬುತ್ತಿಯ ಬೈಲಿಲಿಯೂ ಹ೦ಚಿಗೊ೦ಡಿರಿ.

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಅಭಿನಂದನೆಗೊ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಸುವರ್ಣಿನೀ ಕೊಣಲೆವೇಣೂರಣ್ಣಪ್ರಕಾಶಪ್ಪಚ್ಚಿಶರ್ಮಪ್ಪಚ್ಚಿಅಡ್ಕತ್ತಿಮಾರುಮಾವ°ಅನಿತಾ ನರೇಶ್, ಮಂಚಿಜಯಶ್ರೀ ನೀರಮೂಲೆಪುತ್ತೂರಿನ ಪುಟ್ಟಕ್ಕನೀರ್ಕಜೆ ಮಹೇಶವಿದ್ವಾನಣ್ಣvreddhiವಸಂತರಾಜ್ ಹಳೆಮನೆಶ್ಯಾಮಣ್ಣದೊಡ್ಮನೆ ಭಾವಶುದ್ದಿಕ್ಕಾರ°ಮುಳಿಯ ಭಾವಪಟಿಕಲ್ಲಪ್ಪಚ್ಚಿಸಂಪಾದಕ°ಪುಣಚ ಡಾಕ್ಟ್ರುಬಟ್ಟಮಾವ°ಗಣೇಶ ಮಾವ°ಡಾಮಹೇಶಣ್ಣಕೇಜಿಮಾವ°ಚೂರಿಬೈಲು ದೀಪಕ್ಕಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ