Oppanna.com

ಮು೦ಬೈಗೆ ಹೆರಟು ………. ಎತ್ತಿದೆ!!!!!!

ಬರದೋರು :   ಅನು ಉಡುಪುಮೂಲೆ    on   23/09/2011    10 ಒಪ್ಪಂಗೊ

ಅನು ಉಡುಪುಮೂಲೆ

ನಮ್ಮ ಗುರುಗಳ ಚಾತುರ್ಮಾಸದ ಸಮಯಲ್ಲಿ ಗೋಕರ್ಣ(ಅಶೋಕೆಗೆ)ಕ್ಕೆ ಹೋಯೆಕ್ಕು ಹೇಳಿ ಗ್ರೇಶಿತ್ತೆ.
ಗೋಕರ್ಣಕ್ಕೆ ಮಾವ, ಯಜಮಾನ್ರು ಹೆರಟಪ್ಪಗ ಅತ್ತೆ ಆನು ಬ೦ದರೆ ಅಕ್ಕೋ ಹೇಳಿ ಕೇಳಿದವು. ಅತ್ತೆ ಹೆರಡುದು ಭಾರಿ ಅಪರೂಪ.ಹಾ೦ಗಾಗಿ ಆನು ಹೆರಟಿದಿಲ್ಲೆ ಅವರ ಕಳುಸಿದೆ. ಚೆ೦ದಕ್ಕೆ ಹೋಗಿ ಬ೦ದವು.

ಮಾವನೋರು ಸಣ್ಣ ಇಪ್ಪಗ ಎಡನೀರು ಮಠದ ಆಶ್ರಯಲ್ಲೇ ಬೆಳದ್ದಡ. ಹಾಂಗಾಗಿ ಎ೦ಗೊಗೆ ಎಡನೀರು ಮಠವೂ ಗುರುಮಠವೇ.
ಈ ಸರ್ತಿ ಎಡನೀರು ಶ್ರೀ ಗಳು ಮುಂಬೈಲಿ ಚಾತುರ್ಮಾಸ .ಅಲ್ಲಿಗೆ ಹೋಪಲೆ ಹೇಳಿ ಎನ್ನ ಯಜಮಾನ್ರು ತಯಾರಿ ಮಾಡುಗ ಹೇ೦ಗೂ ಮಗಂಗೆ ಒ೦ದು ವಾರ ಓಣಂ ರಜೆ ಇದ್ದು ಎ೦ಗಳೂ ಬತ್ತೆಯ ಹೇಳಿ ಅರ್ಜಿ ಹಾಕಿದೆ.
ಅ೦ತೂ ಮ೦ಜೂರು ಆತು.ಸೆಪ್ಟೆ೦ಬರ್ 4 ಕ್ಕೆ ಹೋಗಿ 12 ಕ್ಕೆ ಬಪ್ಪಲೆ ಎ೦ಗೊ 3 ಜನಕ್ಕೆ ರೈಲಿಲಿ ಟಿಕೆಟ್ ಆತು. ಓಣ೦ ನ ರಶ್ ಇದ್ದ ಕಾರಣ ಕಾಸರಗೋಡಿ೦ದ ಟಿಕೆಟ್ ಸಿಕ್ಕಿದ್ದಿಲ್ಲೆ. ಮ೦ಗಳೂರಿ೦ದ ಸಿಕ್ಕಿತ್ತು.
ಮು೦ಬೈಗೆ ಹೋದ್ದಲ್ಲೇ ಗುರುಗಳ ಭೇಟಿ ಆಗಿ 4-5 ದಿನ ಎಲ್ಲಿಯಾದರು ತಿರುಗಿಕ್ಕಿ ಬಪ್ಪ ಪ್ಲೇನು!!!!!
ಸ್ವಾಮಿ ಕಾರ್ಯ ಸ್ವಕಾರ್ಯ!

ಹೋಪಲೆ ಒ೦ದು ವಾರ ಇಪ್ಪಗಲೆ ಪೇಕಿ೦ಗು ಸುರು ಆತು. ಹೊಸ ಹೊಸ ಡ್ರೆಸ್ಸುಗ ಪುರಾ ಬೇಗಿನೊಳ. ದೊಡ್ದ ದೊಡ್ಡ 3 ಬೇಗು ರೆಡಿ.
ಹೊವುತ್ತ ಮುನ್ನಾಣ ದಿನ ವರೆಗು ತು೦ಬುಸುದೇ ತು೦ಬುಸುದು. ಒ೦ದು ಬೇಗಿಲಿ ರೈಲಿಲಿ ಹೋಪಗ ಆಡುಲೆ ಚೆಸ್ಸ್ ಬೋರ್ಡ್,ಪಾನ್ ಮತ್ತೆ ಇಸ್ಪೀಟ್ ಆಡುಲೆ ಕಾರ್ಡ್ಸ್ ತೆಕ್ಕೊ೦ಡೆ.
ಲ್ಯಾಪ್ ಟಾಪ್ ಲಿ 3-4 ಲಾಯ್ಕದ ಸಿನೆಮಾ ಕೋಪಿ ಮಾಡಿದೆ (ರೈಲಿಲಿ ಹೋಪಗ ನೋಡುಲೆ), ಕರುಕುರು ತಿ೦ಡಿಗ ಎಲ್ಲ ರೆಡಿ!

4-5 ದಿನ ಮೊದಲೆ ಮು೦ಬೈಗೆ ಹೋವುತ್ತ ರೈಲು ಮಾರ್ಗಲ್ಲಿ ಗುಡ್ಡೆ ಜರುದು ಬಿದ್ದು ರೈಲುಗ ಕೇನ್ಸಲ್ ಆಯಿದು ಹೇಳಿ ಸುದ್ದಿ ಸಿಕ್ಕಿದ್ದು .
ಆದರೆ ಈಗ ಹೋಪಲೆ ಸುರು ಆಯಿದು, ಬೇರೆ ಮಾರ್ಗ ಆಗಿ ಹೋವುತ್ತಡ ಹೇಳಿಯೂ ಆರೋ ಹೇಳಿದವು. ಹಾ೦ಗೆ ಧೈರ್ಯಲ್ಲಿ ಹೆರಟದು.

ಮ೦ಗಳೂರಿ೦ದ ಹೊತ್ತೋಪಗ 4 ಗ೦ಟೆಗೆ ರೈಲು. ಎ೦ಗ ಮನೆ೦ದ 12-12:30ಗೆ ಹೆರಡುದು ಹೇಳಿ ಎ೦ಗಳ ಸ್ಟೇಷನ್ನಿ೦ಗೆ ಬಿಡ್ಲೆ ಒ೦ದು ಕಾರಿನ ಬಪ್ಪಲೆ ಹೇಳಿದೆಯ.
ಇರುಳು ರೈಲಿಲಿ ತಿ೦ಬಲೆ ಚಿತ್ರಾನ್ನ ಮೊಸರನ್ನ ಮಾಡಿ ಬುತ್ತಿಲಿ ತು೦ಬಿಸಿದೆ.ಮರದಿನ ಉದಿಯಪ್ಪಗ ತಿ೦ಬಲೆ ಚಪಾತಿದೆ ಚಟ್ನಿ ಹೊಡಿ,ಜ್ಯಾಮ್ ತೆಕ್ಕೊ೦ಡೆ.
ಉದಿಯಪ್ಪಗ ಎದ್ದ ಕೂಡ್ಲೆ ಈ ತಯಾರಿ ಸುರು ಮಾಡಿದ್ದೆ ! ಮಧ್ಯಾಹ್ನ ಉ೦ಡಪ್ಪಗ (12 ಗ೦ಟೆಗೆ) ಕಾರು ಬ೦ತು.
ಹತ್ತುಲಪ್ಪಗ ಮ೦ಗಳೂರಿ೦ದ ಎ೦ಗಳ ಗುರ್ತದ ಜನರ ಫೋನ್ ಬ೦ತು ರೈಲು ಇಲ್ಲೆ ಹೇಳಿ. ಸ್ಟೇಷನ್ನಿ೦ಗೆ ಫೋನ್ ಮಾಡಿ ವಿಚಾರ್ಸಿ ಆತು ಅ೦ತೂ ಇ೦ತೂ ರೈಲು ಇಲ್ಲೆ!!!!!!!

ಚಪ್ಪೆ ಮೋರೆ ಮಾಡ್ಯೊಡು ಬೇಗ್ ಕಾರಿ೦ದ ತೆಗದು ವಾಪಾಸ್ ಒಳ ಬ೦ದಪ್ಪಗ ಒ೦ದು ವಾಲಗ ಕೇಳುಲೆ ಸುರು ಆತು . ಎ೦ತರ ಹೇಳಿ ನೋಡಿರೆ ಎನ್ನ ಮಗರಾಯ ಕೂಗುಲೆ ಸುರು ಮಾಡಿದ್ದ.
ಎ೦ತ ಮಾಡಿದರೂ ಸಮಾಧಾನ ಆವುತ್ತಿಲ್ಲೆ. ಕೊನೆಗೆ ಬೇರೆ ಎಲ್ಲಿಗಾದರೂ ತಿರುಗುಲೆ ಹೋಪದು ಹೇಳಿ ತೀರ್ಮಾನ ಆತು.
ತು೦ಬಿಸಿದ ಬೇಗಿನ ಹಾ೦ಗೆ ತೆಗದು ಎ೦ಗಳ ರಥಲ್ಲಿ ಮಡುಗಿ ಮೈಸೂರಿ೦ಗೆ ಹೋಪದು ಹೇಳಿ ಹೆರಟೆಯ.

ಮೈಸೂರು ಹೇಳಿಯಪ್ಪಗ ಎನ್ನ ಸೋದರತ್ತೆ ಮಗ ಅಲ್ಲಿ ಕೋಲೇಜಿ೦ಗೆ ಹೋಪದು (ಕಿರಣ ಅರ್ತ್ಯಡ್ಕ) ಅವನ ನೆ೦ಪಾತು.
ಅವ೦ಗೆ ಫೊನ್ ಮಾಡಿದೆ.ಅವ ಊರಿಲಿ ಇದ್ದ ನಾಳೆ ಹೋಪದು ಹೇಳಿ ಗೊ೦ತಾತು. ಒಟ್ಟಿ೦ಗೆ ಹೋಪಲಕ್ಕು ಹೇಳಿ ತೀರ್ಮಾನ ಮಾಡಿ ಸುಳ್ಯಲ್ಲಿ (ಮೈಸೂರಿ೦ಗೆ ಹೋಪ ದಾರಿಯನ್ನೆ) ಎನ್ನ ಅಪ್ಪನ ಮನೆಗೆ ಹೋದೆಯ.
ರೈಲಿಲಿ ತಿ೦ಬಲೆ ಹೇಳಿ ಮಾಡಿದ್ದೆಲ್ಲ ಅಲ್ಲಿ ಕಾಲಿ ಮಾಡಿದ್ದು ಅಲ್ಲಿ೦ದ ಮರದಿನ ಮೈಸೂರಿ೦ಗೆ ಹೆರಟೆಯ.

ಹೋವುತ್ತ ದಾರಿಲಿ ತೆಗದ ಪಟ೦ಗಳ ಇಲ್ಲಿ ನೇಲ್ಸಿದ್ದೆ.

ಮು೦ದಾಣ ಕಥೆ ಮು೦ದಿನ ವಾರ!!!!!!!

10 thoughts on “ಮು೦ಬೈಗೆ ಹೆರಟು ………. ಎತ್ತಿದೆ!!!!!!

  1. ಆನು ಎಲ್ಲಿಗೆ ಎತ್ತಿದೆ? ಎನ್ನ ಕಥೆ ಎ೦ತರ ಹೇಳಿ ಇನ್ನಾಣ ಸುದ್ದಿಲಿ ಬತ್ತು!!!!!!!!! ಕಾದು ನಿಲ್ಲಿ!!!!!!!!!!!

  2. ಹ.ಹ್ಹಾ..
    ನೆಗೆಮಾಣಿ ಮಡಿಕೇರಿ೦ದ ಇಳಿವ ಬೆಳ್ಳಲ್ಲಿ ಹೋದ್ದದೋ?

  3. ಎನಗೆ ಈ ಶುದ್ದಿ ನೋಡಿ ಎಂತ್ಸೂ ಬೇಜಾರಾಯಿದಿಲ್ಲೆ.
    ಎನಗೂ ಹೀಂಗೇ ಆವುತ್ತು ಒಂದೊಂದರಿ, ಮಾಷ್ಟ್ರುಮಾವನ ಮನಗೆ ಹೆರಟ್ರೆ ಸುತ್ತಿ ಸುತ್ತಿ ದೊಡ್ಡಮಾವನಲ್ಲಿಗೆ ಎತ್ತುತ್ತು. 🙂
    ಅದೇ – ಒಂದೊಂದರಿ ಹಾಂಗಾವುತ್ತು. ಅಲ್ಲದಾ?

    – ಆನು ಹೇಳಿರೆ ಆರೂ ನಂಬುತ್ತವಿಲ್ಲೆ, ನಿಂಗೊ ಹೇಳಿಪ್ಪಗ ಇಡೀ ಬೈಲಿನೋರು ನಂಬಿದ್ದವು! 🙁

  4. ಇದು ಸುಳ್ಯ ಮತ್ತೆ ಮಡಿಕೇರಿಯ ಮಧ್ಯ ದಾರಿಯ ಘಾಟಿಲಿ ತೆಗದ ಪಟ೦ಗ. ಅಲ್ಲಿಗೆ ಹೆಸ್ರೆಲ್ಲ ಗೊ೦ತಿಲ್ಲೆ. ಸ೦ಪಾಜೆ೦ದ ಆಚೆ, ಮಡಿಕೇರಿ೦ದ ಈಚೆ!

    1. { ಸ೦ಪಾಜೆ೦ದ ಆಚೆ, ಮಡಿಕೇರಿ೦ದ ಈಚೆ! }
      ಉಡುಪಮೂಲೆಯೋ? 😉

      ಬೆಂಗುಳೂರಿಂದ ಬಪ್ಪಗ ಅದು ಸಂಪಾಜೆಂದ ಆಚೆ!
      ಬೆಂಗುಳೂರಿಂಗೆ ಹೋಪಗ ಅದು ಮಡಿಕೇರಿಂದ ಈಚೆ! 😉

      ಪಿಚುಲು ಬಂದಲೆ ಬೈಯೆಡಿ, ಎನಗೆ ಪಕ್ಕನೆ ತಲಗೆ ಹೋವುತ್ತಿಲ್ಲೆ! 🙁

  5. ಮಳೆಗಾಲ ಮುಗುದಪ್ಪದ್ದೆ, ಮೈಸೂರ್ ಮಡಿಕೇರಿ ಆಗಿ ಸುಳ್ಯ ಮಾರ್ಗಲ್ಲಿ ಹೋಪದು ಸುಂದರ ಅನುಭವ. ಕೊಂಕಣ ಮಾರ್ಗಲ್ಲಿ ರತ್ನಗಿರಿಯ ಮನೋಹರ ದೃಶ್ಯಂಗಳ ನೋಡುವ ಛಾನ್ಸ್ ಮಿಸ್ಸು ಆದರೂ ನಿಂಗೊಗೆ ನಿರಾಶೆ ಆಗಿರ, ಅಲ್ಲದೊ ?

  6. ಮೊನ್ನೆ ಒಬ್ಬ ಅಶೋಕೆಗೆ ಹೆರಟು ರೈಲು ಸ್ಟೇಶನಿಂಗೆ ಎತ್ತಿಯಪ್ಪಗ ರೈಲು ಹೋಗಿ ಆಯ್ದಡ ! ಕಟ್ಟಿಗೊಂಡು ಬಂದ ಬ್ಯಾಗು ಪುನಃ ಹೆಗೆಲಿಂಗೆ ಏರ್ಸಿಗೊಂಡು ವಾಪಾಸು ಮನಗೆ ಬಂದು , ಬಗೆ ಬಗೆ ತಿಂಡಿ ಮಾಡಿ ಶ್ರೀರಾಮ ಶ್ರೀ ರಾಮ ಹೇಳಿ ತಿಂದವಡ!!

    ಪೀಠಿಕೆ ಲಾಯಕ್ಕ ಆಯ್ದು. ಮುಂದಿನ ಕಂತಿನ ಸ್ವಾರಸ್ಯಕ್ಕೆ ಕಾಯ್ತು.

    ಅಲ್ಲಾ ಅಕ್ಕಾ, ಈ ಪಟ ಎಲ್ಲಾ ಲಾಯಕ್ಕ ಬೈಂದು. ಒಳ್ಳೇ ಕ್ಯಾಮರಲ್ಲಿ ತೆಗದ ಹಾಂಗೆ ಇದ್ದು !!. ಸರಿ. ಆದರೆ ಇದೇಕೆ ಓಪನ್ ಆವ್ತಿಲ್ಲೆ ?!!
    ಇನ್ನಾಣ ಸರ್ತಿ ಫಟದ ಅಡಿಲಿ ಯಾವ ಜಾಗೆ ಅದು ಹೇಳಿ ಬರದಿಕ್ಕಿ ಆತಾ, ಎಂಬುದೀಗ – ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×