ನಾಲಗೆ

July 18, 2012 ರ 10:10 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾರಾಯಣ ದೇವರ ಹಾಸಿಗೆಯಾಗಿಪ್ಪ ಶೇಷಂಗೆ ಸಾವಿರ ನಾಲಗೆಯಡ.
ಕವಿಗೊ ಹೇಳುಗು – ದೇವರ ಮಹಿಮೆಯ ಹೊಗಳುಲೆ ಆದಿಶೇಷಂಗೂ ಎಡಿಯ ಹೇಳಿ.
ಒಂದು ನಾಲಗೆಲ್ಲಿ ಹೊಗಳಿದ್ದರ ಕೇಳುಲೆ ನಮ್ಮ ರಡು ಕಿವಿಯೇ ಸಾಕು. ಚಿತ್ರಂಗಳಲ್ಲಿಪ್ಪಂತೆ ದೇವರಿಂಗೆ ಎರಡೇ ಕೆಮಿ ಇಪ್ಪದು. ಹಾಂಗಾದರೆ ಸಾವಿರ ನಾಲಗೆಲ್ಲಿ ಹೊಗಳಿದ್ದರ ಅವ ಹೇಂಗೆ ಕೇಳಿಗೊಳ್ಳುತ್ತನೋ!

ಮತ್ತೆ ನಮಗೆ ಈ ಒಂದು ನಾಲಗೆಯೇ ಕೆಲವೊಂದರಿ ತುಂಬ ಕಷ್ಟ ಆಗಿ ಹೋವುತ್ತು.
ಇಪ್ಪದು ಬಾಯಿಯೊಳದಿಕ್ಕಾದರೂ ಅದರ ಕಾರುಭಾರು ಭಯಂಕರ.ಸುತ್ತಲೂ ಇಪ್ಪ ಹಲ್ಲುಗಳ ಬೇಲಿ ದಾಂಟಿಕ್ಕಿ ಅದು ಹೆರ ಬಾರದ್ದರೂ ಒಳಂದಲೇ ಅದರ ಕಾರುಭಾರು ಜಾಸ್ತಿ.
ಹೇಳುತ್ತವಪ್ಪ ಅವಂಗೆ ಕೊರಳು ಸುತ್ತಲೂ ನಾಲಗೆ ಹೇಳಿ. ಆದರೆ ನಾಲಗೆ ಒಳದಿಕ್ಕೇ ಇಪ್ಪದಾದರೂ ಹೇಂಗೆ ಬೇಕಾದರೂ ತಿರುಗುತ್ತಲ್ಲದೋ?
ನಾವು ತಿಂಬ ಆಹಾರ ಅಗಿವಗ ನಾಲಗೆ ಸಟ್ಟುಗಿನ ಹಾಂಗೆ ಮೊಗಚ್ಚಿ ಕೊಡದ್ದರೆ, ಹಲ್ಲಿಂಗೆ ಅಗಿವಲೆಡಿಯ.
ಅಗುದು ಸಣ್ಣ ಆಯೆಕ್ಕಾರೆ ನಾಲಗೆ ತೊಳಸುತ್ತಾ ಇರೆಕ್ಕು. ಹಲ್ಲಿನೆಡೆಲ್ಲಿ ಸಿಕ್ಕಿದ್ದರನ್ನೂ ಹೆರ ಎಳದು ಹಾಕಿ ನುಂಗುಲೆಡಿತ್ತು. ಅಂಬಗ ಆಹಾರ ಜೀರ್ಣಕ್ರಿಯೆಯ ಮೊದಲ ಕಾರಸ್ಥಾನ ಹಲ್ಲಾದರೂ ನಾಲಗೆಯ ಉಪಯೋಗ ದೊಡ್ಡದು.

ರುಚಿ ನೊಡೆಕ್ಕಾರೂ ನಾಲಗೆಯೇ ಆಯೆಕ್ಕು. ಮೂಗಿಂಗೆ ವಾಸನೆ ಬಡಿದರೆ ಮತ್ತೆ ತಿನ್ನೆಕ್ಕೋ ಬೇಡದೋ ಹೇಳುವದು ನಾಲಗೆ.
ಕೊಡಿನಾಲಗೆಲ್ಲಿ ಉಪ್ಪು ಹಿಡುದ್ದೋ ಇಲ್ಲೆಯೋ ಹೇಳಿ ರುಚಿ ನೋಡಿದ ಮೇಲೆಯೇ ಪಾಕ ಸರಿಮಾಡುವದು. ಷಡ್ರಸಂಗಳ ಬೇರೆ ಬೇರೆ ಗುರ್ತು ಹಿಡಿವದು ನಾಲಗೆ.
ರುಚಿಯಾಗಿದ್ದು ಹೇಳಿ ಆದರೆ ಮತ್ತೆ ತಿಂದುಗೊಂಬದು ಹೇಳಿ ಮನಸ್ಸಿಂಗಾಗಿ ತಿಂಬಲೆ ಶುರು.
ನಾಲಗೆಯ ಚಪಲ ಹೆಚ್ಚಾದರೆ ಕೆಲವು ಜನಕ್ಕೆ ಉಪ್ಪು ಸಾಕಾವುತ್ತಿಲ್ಲೆ. ಖಾರ ಸರಿಯಿರುತ್ತಿಲ್ಲೆ. ಕೊದಿಲಿಂಗೂ ಸೀವು ಹಾಯೆಕ್ಕಾವುತ್ತು. ಒಟ್ಟಾರೆ ಮತ್ತೆ ಹೊಟ್ಟೆ ತುಂಬ್ಯೊಂಡು ಬಪ್ಪಗ ಮೆಚ್ಚದ್ದ ಅಶನಲ್ಲಿ, ಮೊಸರಿಲ್ಲೂ ಕಲ್ಲಿರುತ್ತಡೊ.
ಕೆಲವು ಜನಕ್ಕೆ ನಾಲಗೆಯ ತೀಟೆ ತೀರುಸುಲೆ ಬೈಗಳು ತಿನ್ನೆಕ್ಕಾಗಿ ಬಂದರೂ ಬೇಜಾರಾವುತ್ತಿಲ್ಲೆ.
ಬೇಕು ಹೇಳಿ ಮನಸ್ಸಿಂಗೆ ಕಂಡರೆ ಬೇರೆಯೋರಿಂಗೆ ಕಾಣದ್ದೆ ಆದರೂ ತಿಂದು ಹೋವುತ್ತು. ಆಸೆ ಹುಟ್ತಿದರೆ ಕೊದಿ ತಡಕ್ಕೊಂಬಲಎಡಿತ್ತಿಲ್ಲೆ.
ಮಕ್ಕೊ ಅದರೆ ಅರಡಿತ್ತಿಲ್ಲೆ. ದೊಡ್ಡೋರಾದರೂ ತಿನ್ನೆಕ್ಕು ಹೇಳಿ ತೋರಿದರೆ ಕೇಳಿ ಆದರೂ ತಿಂತವು. ಎಲೆ ತಿಂಬೋರು ಹೇಳುವದು ಕೇಳಿದ್ದೆ.
ಹೊಗೆಸೊಪ್ಪಿನ ರುಚಿ ಹಿಡುದರೆ ಸಾಮಾನ್ಯ ಹೊಗೆಸೊಪ್ಪು ಅವಕ್ಕೆ ಕಣ್ಣಿಂಗೇ ಕಾಣುತ್ತಿಲ್ಲೆಡೊ. ಕುಣಿಯ ಇದ್ದೋ? ಹೇಳಿ ಕೇಳುತ್ತವಡೊ.

ಅಲ್ಲಿ ನಾಲಗೆಂದ ಹೆಚ್ಚು ಹಲ್ಲಿಂಗೆ ದೂರು ಬೀಳುತ್ತು. ಅವರವರ ಮನಸ್ಸಿಂಗೆ ಹೀಂಗೆಲ್ಲ ತೋರುವದರ ನಾಲಗೆಯ ಮೇಲಂಗೋ ಹಲ್ಲಿನ ಮೇಲಂಗೊ ದೂರು ಹಾಕುವದು.
ಚಾ ಕುಡಿಯದ್ದರೆ ಮನಸ್ಸಿಂಗೆ ಉತ್ಸಾಹವೇ ಬತ್ತಿಲ್ಲೆ ಹೇಳುತ್ತವು. ಕಾಫಿ ಚಾ ಕುಡುದರೆ ಒರಕ್ಕು ಬತ್ತಿಲ್ಲೆ ಹೇಳುತ್ತವು. ಒರಕ್ಕಿಂಗೂ ಚಾ,ಕಾಫಿಗೂ ಎಂತ ಸಂಬಂಧವೊಗೊಂತಿಲ್ಲೆ.
ಅಂತೂ ನಾಲಗೆ ರುಚಿ ಹಿಡುದರೆ ಜೊಲ್ಲು ಸುರಿಸುತ್ತ ಇರುತ್ತು. ಒಂದರಿ ಕೊದಿ ಬಿರಿವನ್ನಾರ ತಿಂದರೆ ಮತ್ತೆ ಶುದ್ದಿ ಇಲ್ಲೆ.
ನಾಲಗೆ ಮನುಷ್ಯಂಗೆ ತಿಂಬಲೆ ಮಾಂತ್ರ ಅಲ್ಲ. ಯಾವುದೇ ಭಾಷೆಲ್ಲಿ ಮಾತಾಡೆಕ್ಕಾರೆ ನಾಲಗೆಯ ಸಹಾಯ ಬೇಕೇ ಬೇಕು. ಮನುಷ್ಯ ಜೀವಾಳ ಆಗಿಪ್ಪ ಭಾಷೆ ವ್ಯಕ್ತವಾಯೆಕ್ಕಾರೆ ನಾಲಗೆ ಬೇಕಾದ ಹಾಂಗೆ ಹಂದೆಕ್ಕು.
ಹೇಳುವ ಕ್ರಮ ಇದ್ದಲ್ಲದೋ? ಎಂತ ನಿನ್ನ ನಾಲಗೆ ಸುಮ್ಮನೆ ಕೂಯಿದು. ಈಗ ಉಸಿರೆಕ್ಕದ್ದೆ ಬಾಯಿ ಹೇಳುವ ಪೆಟ್ಟಿಗೆಯೊಳ ಭದ್ರವಾಗಿ ಸುಮ್ಮನೆ ಕೂಯಿದಲ್ಲದೋ?

ಸುತ್ತಲುದೆ ಹಲ್ಲುಗಳ ಬೇಲಿ ಹಾಕಿದಕಾರಣ ಆವುತ್ತು. ನಾಲಗೆ ಜೋರು ಹಂದುಲೆ ಶುರು ಮಾಡಿದರೆ ಹತೋಟಿ ತಪ್ಪಿ, ಮತ್ತೆ ಹಲ್ಲುಗೊಕ್ಕೆ ಶಿಕ್ಷೆ. ಹತೋಟಿ ತಪ್ಪುವದು ನಾಲಗ್ಗೆ ಅಲ್ಲ; ಮನಸ್ಸಿಂಗೆ.
ಮನಸ್ಸು ಆಶೆ ಪಡುವದು ಇದ್ದದೇ. ಆದರೆ ಅದರ ಪೂರ್ವಾಪರ ತಿಳುದು, ಹೇಂಗೆ ಅಪೇಕ್ಷೆ ಸರಿಯೋ?
ಮುಂದರಿಯೆಕ್ಕೋ ಬೇಡದೋ ಹೇಳುವದರ ರಜ ಯೋಚನೆ ಮಾಡಿದರೆ, ಹತೋಟಿ ಕಳಕ್ಕೊಳ್ಳೆಕ್ಕಾವುತ್ತಿಲ್ಲೆ.
ಮಕ್ಕಳ ಹಾಂಗೆ “ಕಂಡದ್ದೆಲ್ಲ ಬೇಕು ಕುಂಡಿಬಟ್ಟಂಗೆ” ಹೇಳಿ ವಿಚರ ವಿಮರ್ಶೆ ಮಾಡದ್ದೆ ದುಡುಕಿದರೆ ಮತ್ತೆ ಹಲ್ಲೂ ಹೋಕು; ತಲೆಯೂ ಕೆಟ್ಟು ಹೋಕು.
ಹಿಂದಾಣೋರು ಹೇಳಿದ ಮಲಯಾಳದ ಗಾದೆ “ಚಿಂತಿಚ್ಚಾಲ್ ದುಃಖಿಕ್ಕೇಂಡ”.
ಮದಲೇ ಯೋಚನೆ ಮಾಡದ್ದೆ ಬಾವಿಯ ಆಳ ಎಷ್ಟಿದ್ದು, ಮೀಸುಲೆ ಎಡಿಗೊ ಎಲ್ಲ ವಿಚಾರ ಮಾಡಿಯೇ ಬಾವಿಗೆ ಹಾರೆಕ್ಕಡೊ.
ಭಾಷೆ ಮಾತಾಡುವಗ ಅಕ್ಷರ ಉಚ್ಚಾರ ಸರಿ ಮಾಡ್ಯೊಳ್ಳೆಕ್ಕಲ್ಲದೋ? ಸ್ವರ ಉಚ್ಚಾರಣೆಗೆ ನಾಲಗೆಯ ಉಪಯೋಗೆ ಹೆಚ್ಚಿಲ್ಲೆ ಹೇಳಿ ಆದರೂ ವ್ಯಂಜನಾಕ್ಷರಂಗೊಕ್ಕೆ ನಾಲಗೆಯ ಅಗತ್ಯ ತುಂಬ ಇದ್ದು.
ಎಲ್ಲಕ್ಕೂ ದೊಂಡೆ ಗುಳಿಲ್ಲಿ ಇಪ್ಪ ಕುಂಞಿನಾಲಗೆ ಸ್ವರ ಪೆಟ್ಟಿಗೆಯಡೊ. ನಾಭಿಂದ ಹೆರಟ ಸ್ವರ ದೊಂಡೆಗುಳಿಂದ ಹೆರಡುವಗ ಹೆರಂಗೆ ಅಸ್ವರ ಕೇಳುವದಡೊ.

ಸ್ವರಾಕ್ಷರ ಉಚ್ಚರಿಸುವಗ ನಾಲಗೆ ಉದ್ದಕ್ಕೆ ಮನಿಕ್ಕೊಂಡಿರುತ್ತು.
ವ್ಯಂಜನಾಕ್ಷರ ಉಚ್ಚರಿಸೆಕ್ಕಾರೆ ನಾಲಗೆ ಸರಿಯಾಗಿ ಉಪಯೋಗ ಆವುತ್ತು.
ಕವರ್ಗ ಉಚ್ಚರಿಸುವಗ ನಾಲಗೆ ಮನಿಕ್ಕೊಂಡು ಹಲ್ಲಿನ ಒತ್ತಿ ಹಿಡುಕ್ಕೊಂಡರೆ,
ಚವರ್ಗ ಉಚ್ಚರಿಸುವಗ ನಾಲಗೆ ಮೂರ್ಧನ್ಯ, ಹೇಳಿರೆ ಬಾಯಿಯ ಮೇಲ್ಭಾಗ ಒತ್ತಿ ಹಿಡುಕ್ಕೊಳ್ಳೆಕ್ಕು.
ಟವರ್ಗ ಉಚ್ಚರಿಸುವಗ ನಾಲಗೆ ಕೊಡಿ ಮಾಂತ್ರ ಮೇಲಂಗೆ ಒತ್ತಿ ಹಿಡುಕೊಳ್ಳೆಕ್ಕು.
ತವರ್ಗ ದಂತ್ಯ ನಾಲಗೆ ಕೊಡಿ ಹಲ್ಲುಗಳ ಒತ್ತಿಗೊಳ್ಳೆಕ್ಕು.
ಆದರೆ ಪವರ್ಗಕ್ಕೆ ನಾಲಗೆಯ ಹೆಚ್ಚಿನ ಉಪಯೋಗಗ ಬತ್ತಿಲ್ಲೆ. ಅಪ್ಪ,ಅಮ್ಮ ಹೇಳುವ ಪದಂಗಳ ತೊದಲ್ನುಡಿವಲೂ ಎಡಿಗಾವುತ್ತು.
ಇನ್ನು ಅವರ್ಗೀಯ ವ್ಯಂಜನಂಗೊ. ಯ, ಚ ಇದ್ದ ಹಾಂಗೆ; ರ- ಟಕ್ಕೆ ಹತ್ತರೆ,ಲ, ಹಲ್ಲುಗಳ ಬುಡಕ್ಕೆ,ಳ ನಾಲಗೆ ಕೊಡಿ ಮೇಲಂಗೆ; ವ ತುಟಿ ಮಾಂತ್ರ ಸಾಕು.
ಸ ದಂತ್ಯ. ಶ-ನಾಲಗೆ ಮೇಲಂಗೆ ಒತ್ತಿ ಹಿಡುದು ಗಾಳಿ ಹೆರಡುಸುವದು;
ಇನ್ನು ಪಟ್ಟೆ ‘ಷ’ ನಾಲಗೆ ಮಡುಸಿ ಗಾಳಿ ಹೆರಡುಸುವದು.
ಹ ಉಚ್ಚರುಸುವಗಅಂತೆ ದೊಂಡೆಯೊಳದಿಕ್ಕಂದ ಶಕ್ತಿ ಹಾಕಿ ಗಾಳಿ ಹರಡುಸುವದು

ಹೀಂಗೆ ಅಕ್ಷರಂಗಳ ಉಚ್ಚರಿಸುವಲ್ಲಿ ನಾಲಗೆಯ ಉಪಯೋಗವೇ ಬೇಕು.
ನಾಲಗೆ ತೆರ್ಚುವದು ಹೇಳುತ್ತವು . ಸರಿಯಾದ ಸ್ಥಿತಿಲ್ಲಿ ನಾಲಗೆಯ ಮಡಿಕ್ಕೊಂಡು ಉಚ್ಚರುಸುವಗ ಸ್ಥಾನ ಸರಿಯಾಗದ್ದೆ ಉಚ್ಚಾರ ಸರಿಯಗದ್ದೆ ಹೋವುತ್ತು.
ಉಚ್ಚರ ಸರಿ ಮಾಡೆಕ್ಕಾರೆ ಬೇರೆಯೋರು ಉಚ್ಚರುಸುವಗ ಅವರ ಮುಖ ಭಾವ ನಲಗೆಯ ಸ್ಥಿತಿಯ ಬದಲುಸುವದರ ನೋಡ್ಯೊಂಡು ಉಚ್ಚರಿಸಿದರೆ ಕ್ರಮೇಣ ಸರಿಯಾವುತ್ತು.
ಎಲ್ಲದಕ್ಕು ಶ್ರದ್ಧೆ ಮುಖ್ಯ. ಕಲಿಯೆಕ್ಕು ಹೇಳಿ ಇದ್ದೋನಿಂಗೆ ಮನಸ್ಸು ಶ್ರದ್ಧೆ ತಾನಾಗಿಯೇ ಬತ್ತು.

ಸಂಗೀತ ಕಲಿವೊರಿಂಗೆ ನಾಲಗೆಯ ಉಪಯೋಗೆ ಸರಿಯಾಗಿ ಗೊಂತಾವುತ್ತು. ಸಪ್ತ ಸ್ವರಂಗಳ ಉಚ್ಚರುಸುವಗ ನಾಲಗೆ ಬೇಕಾದ ಹಾಂಗೆ ಸ್ಥಿತಿ ಬದಲಾವಣೆ ಮಾಡ್ಯೊಂಡರೆ ಸ್ವರ ಸರಿಯಾಗಿ ಬತ್ತು.
ಆಲಾಪನೆಲ್ಲಿ,ಏರು ಇಳಿತಂಗಳಲ್ಲಿಯೂ ನಾಲಗೆ ಬೇಕಾದ ಹಾಂಗೆ ಉಪಯೋಗಿಸಿದರೆ ಕೇಳುವೋರಿಂಗೆ ಕರ್ಣ ರಸಾಯನ ಅವುತ್ತು.
ಪ್ರಸಿದ್ಧ ಸಂಗೀತ ವಿದ್ವಾಂಸರುಗೊ,ಅವರ ಹಾಡುಗಾರಿಕೆಯೊಟ್ಟಿಂಗೆ ಸ್ವರ ವಿನ್ಯಾಸಂಗಳಿಂದ ಹಾಡಿನ ಮೋಡಿಂದ ಲೋಕ ವಿಖ್ಯಾತರಾವುತ್ತವು.
ಎಲ್ಲ ನಲಗೆಯ ಮಹಿಮೆ! ನಾಟಕ ಸಿನೇಮ ನಟರೂ ಅವರ ಅಭಿನಯದೊಟ್ಟಿಂಗೆ ನಾಲಗೆಯ ಚಮತ್ಕಾರಂದ,ಜನ ಮೆಚ್ಚುಗೆ ಪಡಕ್ಕೊಳ್ಳುತ್ತವು.

ರಸಿಕರಿಂಗೆ ರಸದೂಟ ಉಣುಸೆಕ್ಕಾರೆ, ಮಾತಿನ ಮೋಡಿ ವರಸೆ, ಸ್ಪಷ್ಟವಾಗಿ ರೂಪುಸೆಕ್ಕಾರೆ ನಾಲಗೆಯ ಪಾತ್ರ ದೊಡ್ಡದು. ಸ್ತಿಮಿತ ಕಳಕ್ಕೊಂಬೋರಿಂಗೆ ಅಭಿನಯ ಕಷ್ಟ ಆಗದೋ?
ನಾಲಗೆಯ ಚಮತ್ಕಾರಿಗೊ ತಾಳಂಗಳನ್ನೂ ಬಾಯಿಲ್ಲೇ ನುಡಿಸುತ್ತವಡೊ.ಮಾತಾಡುವಗಲೂತೂಕದ ಮಾತಾಡುವೋರು ನಾಲಗೆಯ ಹಿಡಿತಲ್ಲಿ ಮಡಿಕ್ಕೊಳ್ಳುತ್ತವು.
ಮಾತಿನ ವರಸೆ, ವ್ಯತ್ಯಾಸ ಅಪ್ಪದು, ನಾಲಗೆಲ್ಲಿ ಮಾತಾಡುವ ರೀತಿಲ್ಲೇ ಇದ್ದು. ಹೇಳುವ ವಿಷಯ ಸಮಾಧಾನಲ್ಲಿ ಹೇಳಿದರೆ ಆರುದೇ ಕೇಳುತ್ತವು. ಗಡಿಬಿಡಿಲ್ಲಿ ಹೇಳುವಗ ಒಂದು ಹೋಗಿ ಹೇಳಿದ್ದು ಮತ್ತೊಂದಕ್ಕು.
ಬೇರೆಯೋರೊಟ್ಟಿಂಗೆ ಮಾತಾಡುವಗಳೂ ಅವರ ಇಷ್ಟಾನಿಷ್ಟಂಗಳ ತಿಳಿದು ಮಾತಾಡದ್ದರೆ ನಮ್ಮ ಗ್ರಹಿಕೆ ತಪ್ಪಾಗಿ ಹೋಕು.ಮುತ್ತು ಉದುರಿದ್ದರ ಹೆರ್ಕಿಗೊಂಬಲಕ್ಕಡೊ; ಆದರೆ ಆಡಿದ ಮಾತಿನ ಮತ್ತೆ ಹಿಂದೆ ತೆಕ್ಕೊಂಬದು ಮರ್ಯಾದೆ ಅಲ್ಲ.
ಅದಲ್ಲ ಇಲ್ಲಿ ಹೇಳಿದ್ದು ನಾಲಗೆ ಅದರ ಕೆಲಸ ಮಾಡಿದರೆ ಕಷ್ಟ ಅಪ್ಪದು ಒಳುದೋವಕ್ಕೆ. ಪೆಟ್ಟು ತಿಂಬದು; ಮಾತಿನ ಪೆಟ್ಟಾದರೂ ನಾವೇ ಅಲ್ಲದೋ? ಕೆಲವೊಂದರಿ ಮೌನಂ ಪಂಡಿತ ಲಕ್ಷಣ ಹೇಳಿ ಸುಮ್ಮನೆ ಇರೆಕ್ಕಾವುತ್ತು.

ನಮಗೆ ಗೊಂತಿಲ್ಲೆ ಹೇಳಿ ಆದರೆ ಬೇಜಾರು ಇಲ್ಲೆ. ಎನಗೊಬ್ಬ ಮೇಧಾವಿ ಹೇಳಿತ್ತಿದ್ದ.
ನಾವು ತರಗತಿಲ್ಲಿ ಒಂದು ವಿಷಯ ಮಕ್ಕೊಗೆ ಹೇಳೆಕ್ಕಾರೆ ಅದರ ಕುರಿತಾದ ಆಮೂಲಾಗ್ರವಾಗಿ ಹೇಳುಲೆ ಗೊಂತಿದ್ದರೆ ಮಾಂತ್ರ ಹೇಳೆಕ್ಕು; ಗೊಂತಿಲ್ಲದ್ದೆ ಹೇಳಿ ಸಿಕ್ಕಿ ಬೀಳುವದರ ಬದಲು ಅದು ಎನಗೆ ಸರಿಯಾಗಿ ಗೊಂತಿಲ್ಲೆ; ನಾಳಂಗೆ ಬೇರೆ ಪುಸ್ತಕ ನೋಡಿ ಹೇಳುತ್ತೆ ಹೇಳಿದರೆ ನಾಚಿಕೆಯಿಲ್ಲೆ.
ತಪ್ಪು ಹೇಳಿಕೊಡೊವದಕ್ಕಿಂತ ಗೊಂತಿಲ್ಲೆ ಹೇಳುವದೇ ಒಳ್ಳೆದು ಹೇಳಿತ್ತಿದ್ದ.
ನಾವು ಅವಕ್ಕೆ ಹೇಳುವದು ಅವು ಬೇರೆಯವಕ್ಕೆ ಹೇಳುವದು ಹೀಂಗೆ ಶುದ್ದಿ ಹರಡಿ ನಮಗೆ ಊರೆಲ್ಲ ಬೆಲೆಕಟ್ಟುವದು ಸರಿ ಆವುತ್ತೋ ಹೇಳಿತ್ತಿದ್ದ.
ನಮ್ಮ ನಾಲಗೆ ಒಳ್ಳೆದಿದ್ದರೆ ನಾವು ಎಲ್ಲಿಯೂ ಬದುಕ್ಕುಲೆಡಿಗಲ್ಲದೋ?
ಎಲುಬಿಲ್ಲದ್ದ ನಾಲಗೆ ಹೇಳಿದ್ದೆಲ್ಲ ಸತ್ಯವೇ ಆಗಿರೆಕ್ಕು. ಗಾಂಧೀಜಿ ಆಶ್ರಮಲ್ಲಿದ್ದ ಮೂರು ಮಂಗಂಗಳ ಶುದ್ದಿ ಹೇಳಿದರೆ ಹೆಚ್ಚಾಗ ಹೇಳಿ ಕಾಣುತ್ತು.
ಒಂದು ಮಂಗ “ಆನು ಕೆಟ್ಟದರ ಹೇಳುತ್ತಿಲ್ಲೆ ಹೇಳಿ ಬಾಯಿ ಮುಚ್ಚಿಗೊಂಡಿದಡ; ಇನ್ನೊಂದು ಕೆಟ್ಟದರ ಕೇಳುತ್ತಿಲ್ಲೆ ಹೇಳಿ ಕೆಮಿ ಮುಚ್ಚಿಗೊಂಡಿದಡ; ಮೂರನೇದು ಕೆಟ್ಟದರ ಎನ್ನ ಕಣ್ಣಿಂದ ನೋಡುತ್ತಿಲ್ಲೆ ಹೇಳಿ ಕಣ್ಣುಗಳಮುಚ್ಚಿಗೊಂಡಿದಡ.
ನಾವು ಮನುಷ್ಯರಾದ ಕಾರಣ ಮುಚ್ಚಿಗೊಂಡೇ ಇರೆಕ್ಕು ಹೇಳಿ ಇಲ್ಲೆ ನೋಡದ್ದೆ, ಕೇಳದ್ದೆ, ಮಾತಾಡದ್ದೆ ಇದ್ದರೆ ,ನಮ್ಮ ಹಾಂಗೆ ಬೇರೆಯೋರುದೆ ಇದ್ದರೆ ಲೋಕ ಒಳ್ಳೆದಕ್ಕು.

ಇನ್ನು “ಈಗ ನಿನ್ನ ನಾಲಗೆ ಬಿದ್ದತ್ತೋ? ಏಕೆ ಮಾತಾಡುತ್ತಿಲ್ಲೆ”ಹೇಳಿ ಕೇಳುವದಿದ್ದು. ಅರ್ಥವೇ ಮಾತು ಬಿದ್ದು ಹೋಪದು ಹೇಳಿರೆ, ಮಾತು ಬಿದ್ದು ಹೋಪದು ಒಂದೋ ಸೌಖ್ಯ ಇಲ್ಲದ್ದರೆ.
ಅಲ್ಲದ್ದರೆ ಜೀವ ಹೋಪಗ. ಹೇಳುತ್ತವಿಲ್ಲೆಯೋ ಒಂದರಿ ಮಾತು ಕೊಟ್ಟ ಮೇಲೆ ತಪ್ಪುವ ಮಗ ಆನಲ್ಲ” ಹೇಳುತ್ತವು.
ಒಂದರಿ ಒಪ್ಪಿಕ್ಕಿಮಾತಿಂಗೆ ತಪ್ಪಿರೆ ಎಂತ, ನಿನ್ನೆ ಮತ್ತೆಂತೆಗೆ ನಾಲಗೆ ಮಾರಿದ್ದು? ಕೇಳುತ್ತವು.ಸತ್ತ ಮೇಲೆಯೂ ನಾಲಗೆ ಅಡಿಂಗೆ ಚೂರು ಸ್ವರ್ಣ ಹಾಕೆಕ್ಕ ಡೊ.
ಸಸ್ರ್ಪ ಜಾತಿಗೆ ಎರಡು ನಾಲಗೆಯಡೊ.ಒಂದರಿ ಒಂದು ಹೇಳಿ ಮತ್ತೆ ತಪ್ಪಿದರೆ ಹೇಳುವದ್ದು ಎಂತ ನಿನಗೆ ಎರಡು ನಾಲಗೆಯೋ ಹೇಳಿ ಕೇಳುತ್ತವು.
ಎಲ್ಲವೂ ಕೊಟ್ಟ ಮಾತಿಂಗೆ, ಸಂಬಂಧಿಸಿದ ಅಭಿಪ್ರಾಯ. ಕೆಲವು ಜನ ಮಾತಾಡ್ಯೊಂಡೇ ಇದ್ದರೆ ಎಂತ ನಿನ್ನ ನಾಲಗೆ ಸುಮ್ಮನೆ ಕೂರುತ್ತಿಲ್ಲೆಯೋ? ಹೇಳಿ ಕೇಳುತ್ತವು.
ನಾಲಗೆ ಮನಸ್ಸಿಂಗೆ ತೋರಿದ್ದರ ಹೇಳಿರೆ ಸೋಲುವದು ನಾವು. ಅದು ಬಾಯಿಯೊಳದಿಕ್ಕೆ ಹಲ್ಲುಗಳ ಬೇಲಿ ಇಪ್ಪ ಕಾರಣ ಅದಕ್ಕೆ ತೊಂದರೆ ಇಲ್ಲೆ.
ಸೋಲುವದು ಹಲ್ಲುಗಳೇ. ದೌಡೆಗೆ ಬಿದ್ದರೆ ಹಲ್ಲು ಉದುರಿ ಹೋಕು ಹೇಳುತ್ತವಿಲ್ಲೆಯೋ?. ನಮ್ಮ ನಾಲಗೆಯ ಬೇಕಾದಷ್ಟೆ ಉಪಯೋಗುಸಿ,ಬಾಯಿಯ ಮೂಲೆಲ್ಲಿ ಸುಮ್ಮನೆ ಇಪ್ಪ ಹಾಂಗೆ ಮಾಡುವದೇ ಕ್ಷೇಮ.
ಆದರೆ ದೇವರ ಧ್ಯಾನಿಸುವಗ,ಜಪ ಮಾಡುಲೆ ಮಾಂತ್ರ ನಾಲಗೆ ಉಪಯೋಗೆ ಇದ್ದು. ಮಂತ್ರ ಹೇಳುವಗ ಭಜನೆ ಮಾಡುವಗ, ರಾಮ ಜಪವೋ ಅಥವ ಬೇರೆ ದೇವರ ಜಪ ಮಾಡುವಗ ಭಕ್ತಿಂದ ಜಪ ಮಾಡಿರೆ ನಾಲಗೆಯ ಉಪಯೋಗ ಸರಿಯಾಗಿ ಆದ ಹಾಂಗೆ!
ಯಮ ದೂತರು ಬಂದು ಎಳಕ್ಕೊಂಡು ಹೋವುತ್ತವು ಹೇಳಿ ಅಪ್ಪಗ ಒಂದರಿ ಮಗನ ದಿನಿಗೇಳಿದ್ದಡೊ.
ನಾರಾಯಣಾ ಶಬ್ದ ಕೇಳಿದ ಕೂಡಲೇ ವಿಷ್ಣು ದೂತರು ಬಂದು ವೈಕುಂಠಕ್ಕೆ ಕೊಂಡು ಹೋದವಡೊ.

ನಾವು ಅದಕ್ಕೆ ಮದಲೇ ರಾಮ ಜಪ ಮಾಡ್ಯೊಂಡು ಇಪ್ಪೊ..!

~*~*~

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ನಾಲಗೆಯ ಬಗ್ಗೆ ಪೂರ್ಣ ವೃತ್ತಾಂತವ ಬಾಳಿಕೆ ಮಾವ ಕೊಟ್ಟಿದವು. ಲಾಯಕಾಯಿದು. ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಹೇಳ್ತ ಪದ ಓದ್ತ ಎಡೆಲಿ ನೆಂಪಾತು. ತಿಂತ ವಿಚಾರಲ್ಲಿ ಇರಳಿ, ಮಾತಾಡುವಗ ಇರಳಿ, ನಾಲಗೆಯ ತುಂಬಾ ಹತೋಟಿಲಿ ಮಡಗಿದವನೇ ಜಾಣ, ಅಲ್ದೊ ಮಾವ ?

  [Reply]

  VA:F [1.9.22_1171]
  Rating: +1 (from 1 vote)
 2. ಸುಬ್ಬಣ್ಣ ಭಟ್ಟ, ಬಾಳಿಕೆ

  ನ ಲಗೆ ಇಲ್ಲಿ ಹಿಂದಿ ಪದವ ನೆಂಪಾವುತ್ತು.ಲಗ್ ನಾ ಅದರಲ್ಲಿ ತೊಡಗೆಡ ಹೇಳಿ ಆವುತ್ತಲ್ಲದೋ? ನಾಲಗೆ ಎಲ್ಲದರಲ್ಲಿಯೂ ಮೂಗು ತೂರುಸುವದು ಅದರ ಗುಣವಾಗಿಪ್ಪಗ ನ ಲಗೊ ಹೇಳಿದರೆ ಕೇಳ. ನಮ್ಮ ವ್ಯಕ್ತಿತ್ವವನ್ನೇ ನಿರೂಪಿಸುವದು ನಾಲಗೆ ಹೇಳಿದರೆ ಹೆಚ್ಚಾಗ. ಜನರ ಕೈಲಿ ಒಳ್ಲೆಯವ ಹೇಳುಸಿಗೊಂಬಲೆ ನಾಲಗೆ- ಬಾಯಿ ಇದ್ದ ಮಗ ಬದುಕಿಯಾನು ಹೇಳುತ್ತವಲ್ಲದೋ?ನಾಲಗೆ ಸಪಯಿ ಇದ್ದರೆ ಎಲ್ಲಿಯೂ ಬದುಕ್ಕುಲೆಡಿಗು. ವಿರೋಧ ಕಟ್ಟಿಗೊಂಬದು, ರಾಜಿ ಮಾಡಿಗೊಂಬದು ನಾಲಗೆಯ ಮೂಲಕವೇ ಅಲ್ಲದೋ? ಅವನ ನಾಲಗೆ ಒಳ್ಳೆ ಸಾಣಗೆ ಕೊಟ್ಟ ಹಾಂಗಿಪ್ಪದು ಹೇಳುತ್ತವಲ್ಲದೋ?ನಾ ಮತ್ತು ಲ ಎರಡಕ್ಷರವೂ ದಂತ್ಯ.

  [Reply]

  VA:F [1.9.22_1171]
  Rating: 0 (from 2 votes)
 3. ಮಾನೀರ್ ಮಾಣಿ
  ಮಾನೀರ್ ಮಾಣಿ

  ಬಾಳಿಕೆ ಮಾವಾ ನಾಲಗೆಯ ಬಗ್ಗೆ ಗೌರವ ಬ೦ದದ್ದು ಹೌದು.. ರಜ್ಜ ಹೆದರಿಕೆಯೂ ಇದ್ದು ನಾಲಗೆಯ ವಿಷ್ಯದಲ್ಲಿ ಹಾ…
  ಮತ್ತೆ ನಾ ಇದರ ಬರ್ಯಲೆ ನಾಲಗೆಯ ಉಪಯೋಗ ಮಾಡಿದ್ದೇ ಇಲ್ಲೆ.. 😉 …

  [Reply]

  VN:F [1.9.22_1171]
  Rating: +1 (from 1 vote)
 4. ಚೆನ್ನೈ ಬಾವ°
  ಚೆನ್ನೈ ಭಾವ°

  ಒಳ್ಳೆ ಪ್ರಬುದ್ಧ ಶುದ್ದಿ. ಉಪ್ಪಿಂದ ಹಿಡುದು, ಬಿಸಿತುಪ್ಪ ನಕ್ಕುವಾಗಲೂ ನಾಲಗೆಯ ಜಾಗ್ರತೆಲಿ ತೊಳಚ್ಚೆಕ್ಕು ಹೇಳ್ತ ವಿವರ ಶುದ್ದಿಗೆ ‘ಹರೇ ರಾಮ’ ಹೇಳಿ – ‘ಚೆನ್ನೈವಾಣಿ’

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಅಕ್ಷರದಣ್ಣಅನು ಉಡುಪುಮೂಲೆಉಡುಪುಮೂಲೆ ಅಪ್ಪಚ್ಚಿಅನಿತಾ ನರೇಶ್, ಮಂಚಿದೊಡ್ಡಮಾವ°ಶಾಂತತ್ತೆಜಯಶ್ರೀ ನೀರಮೂಲೆಬಟ್ಟಮಾವ°ಶ್ಯಾಮಣ್ಣಸರ್ಪಮಲೆ ಮಾವ°ಪುತ್ತೂರುಬಾವಶೇಡಿಗುಮ್ಮೆ ಪುಳ್ಳಿಜಯಗೌರಿ ಅಕ್ಕ°ವಸಂತರಾಜ್ ಹಳೆಮನೆವಿದ್ವಾನಣ್ಣಕಾವಿನಮೂಲೆ ಮಾಣಿಶೀಲಾಲಕ್ಷ್ಮೀ ಕಾಸರಗೋಡುಪವನಜಮಾವಪುತ್ತೂರಿನ ಪುಟ್ಟಕ್ಕಅಡ್ಕತ್ತಿಮಾರುಮಾವ°ಸುವರ್ಣಿನೀ ಕೊಣಲೆಸುಭಗಹಳೆಮನೆ ಅಣ್ಣಮಂಗ್ಳೂರ ಮಾಣಿಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ