ಒಬ್ಬ ಮಾಡಿದಾಂಗೇ ಇನ್ನೊಬ್ಬ ಮಾಡೆಕ್ಕಪ್ಪೋ…!

ಓ ಅಲ್ಲಿ ರಾಘವೇಂದ್ರ ಮಠಲ್ಲಿ ತಿಥಿ.
ಮನೇಲಿ ಸೌಕರ್ಯ ಇಲ್ಲದ್ದಿಪ್ಪ ಈ ಪೇಟೆಲಿಪ್ಪೋರು ತಿಥಿ ಮಾಡ್ಳೆ ಹತ್ರೆ ಇಪ್ಪ ತಿಥಿ ಮಾಡುವ ಜಾಗ್ಗೆ ಹೋಪದು ಸಾಮಾನ್ಯ.
ಹಾಂಗೇ ಎಂಗಳ ಈ ಪೇಟೇಲಿ ರಾಘವೇಂದ್ರ ಮಠಲ್ಲಿ ಇದಕ್ಕಿಪ್ಪ ಭಟ್ಟಕ್ಕೋ ಮತ್ತು ಇತರ ಎಲ್ಲಾ ಸೌಕರ್ಯ ಇದ್ದು, ಖರ್ಚಿಯೂ ಕಮ್ಮಿ.
ಸಾಮೂಹಿಕ ಸಾಲಾಗಿ ಕೂರಿಸಿ, ಒಂದು ದಿನಲ್ಲಿ ಐವತ್ತಕ್ಕೂ ಹೆಚ್ಚು ತಿಥಿ ನಡೆತ್ತು ಅಲ್ಲಿ. ಎಂತ ಒಂದು – ಬ್ರಾಹ್ಮಣಾರ್ಥಕ್ಕೆ ಕೂಬಲೆ ಜನ ಇಲ್ಲೆ. ಕೂರ್ಚ ಭೋಜನಂ – ಪಿಂಡ ಪ್ರದಾನಂ. ತಪ್ಪಲ್ಲನ್ನೇ.
ನಮ್ಮ ಊರಿಲ್ಲಿಯೂ ಇದೇ ಅಲ್ಲದೋ ನಡವದು ಇತ್ತೀಚಗೆ ಹಲವು ದಿಕ್ಕೆ. ಶಿವಳ್ಳಿಯೋರು ಮಾಡುಸಲೆ.
ಅವರ ತಿಥಿ ಕ್ರಮಕ್ಕೂ ನಮ್ಮ ಕ್ರಮಕ್ಕೂ ದಣಿಯ ವ್ಯತ್ಯಾಸ ಎಂತೂ ಇಲ್ಲೆ. ನಾವು ಋಗ್ವೇದಾಯ ಸ್ವಾಹಾ, ಅವ್ವು ಕೇಶವಾಯ ಸ್ವಾಹಾ. ಕ್ಷೇತ್ರಕ್ಕೆ ಹೋದರೆ ಕ್ಷೇತ್ರ ಕ್ರಮ ನವಗೂ.
ಇರ್ಲಿ ಬಿಡಿ. ಇದೆಲ್ಲಾ ದೊಡ್ಡ ವಿಷಯ ಅಲ್ಲ. ಶ್ರದ್ಧಾ ಭಕ್ತಿ ಮುಖ್ಯ ಅಷ್ಟೇ ಅಲ್ಲದೋ.

ನಮ್ಮ ಹಾಂಗೆ ತಿಥಿಗೆ ಮಿಂದಿಕ್ಕಿ ಬಂದು ಒಣಕ್ಕು ವಸ್ತ್ರ ಸುತ್ತಲೆ ಇಲ್ಲೆ ಅಲ್ಲಿ. ಚಂಡಿ ವೇಷ್ಟಿ ಕಚ್ಚೆ ಹಾಕಿ ಕೂರೆಕ್ಕು.
ಹವ್ಯಕರಿಂಗೂ, ಶಿವಳ್ಳಿಯೋರಿಂಗೂ ಇದು ಕಷ್ಟ ಆವ್ತಿಲ್ಲೆ. ಕೆಲವು ತಮಿಳಂಗೊಕ್ಕೆ (ಅಯ್ಯರ್) ಈ ಚಂಡಿಲಿ ಕೂದು ಅಭ್ಯಾಸ ಇಲ್ಲೆ.
ಅಂದರೂ ಎಲ್ಲೋರ ಹಾಂಗೆ ನಾವು ಹೇಳಿ ಸಹಕರಿಸಿಯೊಂಡು ಬತ್ತವಪ್ಪ.

ಇಂದು ಇದಾ., ಹಾಂಗೆ ತಿಥಿ ಮಾಡುತ್ತವು ಮಿಂದಿಕ್ಕಿ ಬಂದವು ಎಲ್ಲಾ.
ಮಾಡುಸುತ್ತ ಬಟ್ಟ ಬಂದವ ಎಲ್ಲಾ ತಯಾರು ಮಾಡಿ ಕೂಬಲೆ ಹೇಳಿಕ್ಕಿ, ಆಚಿಗೆ ಎಲ್ಲ್ಯೋ ಹೋದ.
ಬೇಗಕ್ಕೆ ಬಪ್ಪ ಅಂದಾಜು ಕಂಡತ್ತಿಲ್ಲೆ. ಎಷ್ಟು ಹೊತ್ತು ಕೂಬದು. ಮೆಲ್ಲಂಗೆ ಒಬ್ಬ ಐಯರ್ ಎದ್ದ . ಆಚಿಗೆ ಫಾನ್ ಅಡಿಗೆ ಹೋದ., ಕಚ್ಚೆ ರಜ ರಜ ಕರೆ ಬಿಡಿಸಿ ಒಣಗುಸುಸಲೆ ಸುರುಮಾಡಿದ.
ಅದರ ಕಂಡ ಮತ್ತೊಬ್ಬ ಎದ್ದು ಹೋಗಿ ಅವನ ಹಾಂಗೇ ಮಾಡ್ಳೆ ಸುರು ಮಾಡಿದ. ಅಷ್ಟಪ್ಪಗ ಮತ್ತೊಬ್ಬ ಎದ್ದ ಅವರ ಜೊತೆಲಿ ಸೇರಿಗೊಂಡ.
ಐದು ನಿಮಿಷ ಅಪ್ಪಗ ಏಳು ಜೆನ ಆತು ಕಚ್ಚೆ ಬಿಡಿಸಿ ಫ್ಯಾನ್ ಅಡಿಲಿ ಒಣಗುಸಲೆ. ಬಹುಶಃ ಅವು ಗ್ರೇಶಿದವಾಯ್ಕು ಕಚ್ಚೆ ಒಣಗಿಸಿ ಆಗಲಿ ಹೇಳಿ ಭಟ್ಟ ಬಪ್ಪಲೆ ತಡ ಮಾಡುವದಾಯ್ಕು.

ಹಾಂಗೇ, ಮಿಂದಿಕ್ಕಿ ಬಂದಿಕ್ಕಿ ಕಚ್ಚೆ ಸುತ್ತಿಕ್ಕಿ ಗೋಪೀ ಚಂದನ ನಾಮ ಹಾಕೆಕು (ಅವರವರ ಮೋರೆಗಾದ್ರೂ). ಒಬ್ಬ ಮಿಂದೊಂಡು ಬಂದ, ಕವಳಿಗೆ ಸಕ್ಕಣ ಪಂಚಪಾತ್ರೆ ತೆಕ್ಕೊಂಡು ಬಂದು ಕೂದು ನಾಮ ಬಳುದ, ಆಚಮನ ಮಾಡಿದ, ಕಟ್ಟುಕಟ್ಳೆ ಅವನ ಸಂಧ್ಯಾವಂದನೆ ಮಾಡ್ಳೆ ಸುರುಮಾಡಿದ.
ಅವನಿಂದ ಕಾಲುಗಂಟೆ ಮದಲೇ ಒಬ್ಬ ಮಿಂದು ಬಂದು ನಿಂದುಗೊಂಡಿತ್ತಿದ್ದ ಇನ್ನು ಎಂತ ಮಾಡೆಕ್ಕು ಹೇಳಿ ಆರಡಿಯದ್ದೆ.
ಇದರ ನೋಡಿ ಅವನೂ ಹೆರಟ ಅವನ ಹತ್ರೆ ಹೋಗಿ ಕೂದೊಂಡು ಗೋಪಿ ಕೊಂಡ, ಕವಳಿಗೆ ಕೊಂಡ ಹೇಳಿ.
ಯಾವ ಹೊಡೆ ಮೋರೆ ಹಾಕಿ ಕೂದ ಮಾತ್ರ ಕೇಳೆಡಿ ಆತೋ. ಅರಡಿಯದ್ದವ ಆರಡಿತ್ತಾಂಗೆ ಮಾಡೋದೇ ಸರೀ. ಆರ್ತವ ಆರಡಿಯದ್ದವನಾಂಗೆ ಮಾಡಿರೆ ಮೆಚ್ಚನಾ ಪರಮಾತ್ಮನು ಎಂಬುದು ಹಲವು ಅಷ್ಟಮಂಗಲ ಪ್ರಶ್ನೆಲಿಯೂ ಕಂಡು ಬಯಿಂದು.

ಅಂತೂ ಒಟ್ಟಿಲ್ಲಿ ಎನ ಕಂಡದು – ‘ಒಬ್ಬ ಮಾಡುವದರ ನೋಡಿ ಮತ್ತೊಬ್ಬನೂ ಮಾಡೆಕ್ಕು’.
ಭಗವದ್ಗೀತೆಲಿ ಶ್ರೀಕೃಷ್ಣ ಹೇಳಿದ್ದು ಇದಕ್ಕೂ ಅನ್ವಯ ಆವ್ತೋ ಅಂಬಗ! –
ಯದ್ಯದಾಚರತಿ ಶ್ರೇಷ್ಠಾಃ ತತ್ತದೇವೇತರೋ ಜನಾಃ |
ಸಾ ಯತ್ ಪ್ರಮಾಣಂ ಕುರುತೇ ಲೋಕಸ್ತದುನುವರ್ತಯೇತ್ ||

ಚೆನ್ನೈವಾಣಿ: “ವಿವೇಕವಿಲ್ಲದೆ ಅನುಕರಣೆ ಮಾಡುವುದು ಅಂಧಾಚರಣೆಯೇ ಸರಿ”.

ಚೆನ್ನೈ ಬಾವ°

   

You may also like...

5 Responses

 1. ತೆಕ್ಕುಂಜ ಕುಮಾರ ಮಾವ° says:

  “ಚೆನ್ನೈ ವಾಣಿ” ಯ ಎಲ್ಲೋರು ಒಪ್ಪತಕ್ಕ ಮಾತು.

 2. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಗತಾನುಗತಿಕೋ ಲೋಕಃ ಹೇಳುದು ಸುಮ್ಮನೆಯೊ?

 3. ರಘು ಮುಳಿಯ says:

  ಒಪ್ಪೆಕ್ಕಾದ ಮಾತು ಚೆನ್ನೈಭಾವ.

 4. ಧನ್ಯವಾದ ತೆ.ಕು. ಮಾವ, ಗೋಪಾಲಣ್ಣ, ಮುಳಿಯ ಭಾವ.

 5. ಗಣೇಶ says:

  ಗತಾನುಗತಿಕೋ ಲೋಕೋ ನ ಲೋಕಃ ಪಾರಮಾರ್ಥಿಕಃ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *