ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಒಪ್ಪ ಒಸಗೆ

August 27, 2016 ರ 9:14 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

ಮುಜುಂಗಾವು-   24-8-2016

ಮುಜುಂಗಾವು ವಿದ್ಯಾಪೀಠಕ್ಕೂ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಕ್ಕೂ ಅವಿನಾಭಾವ ಸಂಬಂಧ. ಇವೆರಡು ಸಂಸ್ಥೆಗಳೂ ಒಂದೇ ಅಬ್ಬೆಯ ಮಕ್ಕೊ ಹೇಳಿರೆ ಅಡ್ಡಿಯಿಲ್ಲೆ. ಮುಜುಂಗಾವು ವಿದ್ಯಾಪೀಠ 1999 ರಲ್ಲಿ ಹುಟ್ಟಿದ ಕೂಸು ’ಸರಸ್ವತಿ’. ಒಪ್ಪಣ್ಣ ಬಯಲು ಏಳು ವರ್ಷದ ಮಾಣಿ. ಈ ಒಪ್ಪಣ್ಣ ಹೇಳ್ತ ತಮ್ಮ, ಮುಜುಂಗಾವು ಸರಸ್ವತಿ ಅಕ್ಕಂಗೆ ಎರಡು ವರ್ಷಂದ ವಿದ್ಯಾನಿಧಿ ಹೇಳಿ, ಆರ್ಥಿಕ ಸಕಾಯ ಮಾಡ್ತಾ ಇದ್ದᵒ ಹೇಳುದು ಸಂತೋಷದ ವಿಚಾರವೆ!. ಅಂಬಗ… ಈ ಮಾಣಿ ಮುಜುಂಗಾವು ಅಕ್ಕಂಗೆ ಮಾಂತ್ರ ಸಕಾಯ ಮಾಡ್ತಾ ಇಪ್ಪದೂಳಿ ಗ್ರೇಶೀರೆ ಅದೂ ಅಲ್ಲ. ಮತ್ತೊಂದು ಶಾರದೆಕ್ಕᵒ, (ಕೊಡಗಿನ ಗೌರಮ್ಮನ ನೆಂಪಿಂಗೆ), ಇಪ್ಪತ್ತು ವರ್ಷದ ಹಿಂದೆ ಹುಟ್ಟಿದ್ದಿದ್ದು. ಅದರನ್ನೂ ಎರಡು ವಾರಿ, ಕೈ ಕೊಟ್ಟು ನೆಗ್ಗಿದ್ದರ ಮರವಲಾಗ!!. ಅಷ್ಟೇ ಅಲ್ಲ;  ಕಲಿವಲೆ ಹುಶಾರಿದ್ದುಗೊಂಡು, ತೀರಾ ಬಡವರಾದ ಕೆಲವು ಮಕ್ಕೊಗೆ, ಸಂಸ್ಥೆಗೊಕ್ಕೆ ಸಕಾಯ ಮಾಡಿದ್ದೂ ನವಗೆ ಗೊಂತಿಪ್ಪ ವಿಚಾರವೆ!. ಹೀಂಗಿದ್ದ ಸಕಾಯಲ್ಲಿಯೂ ಸ್ವಂತ ಸ್ಪರ್ಧಾವೇದಿಕೆ ಪ್ರತಿ ವಾರಿಯೂ ನೆಡೆಶೆಂಡು ಬಪ್ಪ ನಮ್ಮ ಒಪ್ಪಣ್ಣ ಗಟ್ಟಿಗᵒ  ಮಾಣಿ ಹೇಳಿ ಹೆಮ್ಮೆ ಅಪ್ಪದೂ ಸತ್ಯವೆ!!

ಈಗ ಆನು ಹೇಳ್ಲೆ ಹೆರಟದು…, ಮನ್ನೆ ಕಿಟ್ಟಚಾಮಿ ಹುಟ್ಟುಹಬ್ಬದ ದಿನ ಒಪ್ಪಣ್ಣ ಬಯಲಿನ ಅಧ್ಯಕ್ಷᵒ ನಮ್ಮ ಶರ್ಮಪ್ಪಚ್ಚಿ ಮುಜುಂಗಾವಿಲ್ಲಿ ವಿದ್ಯಾಪೀಠದ ಆಡಳಿತ ನೆಡೆಶುವ ಕಮಿಟಿಗೆ; ವಿದ್ಯಾನಿಧಿ  ’ಚೆಕ್ ’ ಕೈ ಪಗರಿದ್ದರ ಬಯಲಿಲ್ಲಿ ವಿಷಯ ತಿಳಿಶುಲೆ!. ಈ ವಿಜಯತ್ತೆ ಎರಡು ಕಡೆಂಗು (ಅಕ್ಕನ ಹೊಡೆಂಗು, ತಮ್ಮನ ಹೊಡೆಂಗು)ಇಪ್ಪ ಜೆನಯಿದ!!. ಬಯಲಿನವಕ್ಕೆ ವಿಷಯ ಹೇಳೆಕ್ಕಾದ್ದೂ ಅಪ್ಪಾದ್ದೆ.

ವಿದ್ಯಾಪೀಠಲ್ಲಿ ಪ್ರತಿವರ್ಷದಾಂಗೆ ಸಭಾವೇದಿಕೆ, ಪುಟ್ಟು-ಪುಟ್ಟು ಮಕ್ಕಳ ಮುದ್ದುಕೃಷ್ಣ ವೇಷ,ಹಾಂಗೇ ದೊಡ್ಡಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಇದ್ದತ್ತಿದ. ಮುಖ್ಯ ಅಭ್ಯಾಗತರಾಗಿ ಭದ್ರಾವತಿ ಪೇಪರ್ ಮಿಲ್ಲಿಲ್ಲಿ ಆಫೀಸರಾಗಿ, ಈಗ ವಿಶ್ರಾಂತ ಜೀವನಲ್ಲಿಪ್ಪ ಶ್ರೀಯುತ ನಾಗರಾಜಭಟ್, ಅಲ್ಲದ್ದೆ ನಮ್ಮ ಶರ್ಮಪ್ಪಚ್ಚಿ ಬಂದಿದ್ದವು. ವೇದಿಕೆಲಿ ಶಾಲಗೆ ಸಂಬಂಧ ಪಟ್ಟವು, ಪಿ.ಟಿ.ಎ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ, ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ ಇತ್ತಿದ್ದೊವು. ಬೈಲಿನ ಕೋಂಗೋಟು ಗಣೇಶ ಭಾವಯ್ಯ ದಂಪತಿ ಸಮೇತ ಹಾಜರಿತ್ತಿದ್ದವು.

ಶ್ರೀ ನಾಗರಾಜಭಟ್ ಮಾತನಾಡುತ್ತಾ ಶ್ರೀಕೃಷ್ಣ ಹೇಳಿರೆ ಮನುಕುಲ ಸಂರಕ್ಷಿಸಲೆ ಮಾನವನಾಗಿ ಅವತರಿಸಿದ ಗೀತಾಚಾರ್ಯ; ನೂರಾರು ವಿಧಲ್ಲಿ ಕೃಷ್ಣನ ಶಕ್ತಿ, ಧರ್ಮ ವ್ಯಕ್ತ ಆವುತ್ತು ಹೇಳಿದವು.

ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಕೃಷ್ಣಶರ್ಮ ಹಳೆಮನೆ ಇವು ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ  ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದವಲ್ಲದೆ; ಪ್ರತಿಷ್ಠಾನ ಮುಜುಂಗಾವು ವಿದ್ಯಾಪೀಠಕ್ಕೆ ಕೊಡಮಾಡುವ ವಿದ್ಯಾನಿಧಿ ದೇಣಿಗೆಯ ಆಡಳಿತ ಮಂಡಳಿಗೆ ಹಸ್ತಾಂತರಿಸಿದವು.

ಪಿ.ಟಿ.ಎ ಅಧ್ಯಕ್ಷರಾದ ಪುರುಷೋತ್ತಮ ಆಚಾರ್ಯ, ಆಡಳಿತಮಂಡಳಿ ಅಧ್ಯಕ್ಷರಾದ ಎಸ್.ಎನ್.ರಾವ್ ಮುನ್ನಿಪ್ಪಾಡಿ, ಕಾರ್ಯದರ್ಶಿ ಶ್ಯಾಂಭಟ್ ದರ್ಬೆಮಾರ್ಗ, ಮುಖ್ಯಶಿಕ್ಷಕಿ ಚಿತ್ರಾಸರಸ್ವತಿ ಕೃಷ್ಣನ ಬಗ್ಗೆ ಸಂದರ್ಭೋಚಿತವಾಗಿ  ಮಾತನಾಡಿದವು.

ಕಾರ್ಯಕ್ರಮದ, ನಿರ್ವಹಣೆಯ, ಕಾವ್ಯಮಾತಾಶ್ರೀ ಮಾಡಿದವು. ಹೈಸ್ಕೂಲು ವಿದ್ಯಾರ್ಥಿನಿಗೊ ಪ್ರಾರ್ಥನೆ ಹಾಡಿದವು. ವಿದ್ಯಾರ್ಥಿಗಳಾದ ಶಿಶಿರ ಸ್ವಾಗತಿಸಿ, ಸುಹಾಸ ವಂದಿಸಿದವು.

ಪುಟ್ಟು ಮಕ್ಕಳ ಮುದ್ದುಕೃಷ್ಣ ವೇಷ ಎಲ್ಲೋರನ್ನು ಆಕರ್ಷಣೆ ಮಾಡಿದ್ದಪ್ಪು. ಕಿಟ್ಟಚಾಮಿಯ ಅವತಾರವ ಆದರ್ಶವ ಹೊಗಳೆಂಡು,  ಸಿಹಿಲಡ್ಡು, ಚಕ್ಕುಲಿ, ಎಳ್ಳುಂಡೆ ಇದೆಲ್ಲರಿಂಗೂ ಹಂಚಿಕೊಟ್ಟು ಕಾರ್ಯಕ್ರಮ ಮುಕ್ತಾಯಾತು.

~~~***~~~

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಶ್ರೀಅಕ್ಕ°

  ವಿಜಯತ್ತೇ,
  ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣಂದ ಬಪ್ಪಲೆ ಎಡಿಗಾತಿಲ್ಲೆ. ಕಣ್ಣಿಂಗೆ ಕಟ್ಟುತ್ತ ಹಾಂಗೆ ಆಪ್ತತೆಲಿ ನಿಂಗೊ ಶುದ್ದಿ ಹೇಳಿದ್ದು ಒಪ್ಪ ಆಯಿದು.
  ಈ ಭಾವದ ಬಂಧ ಅಲ್ಲದಾ ನಮ್ಮೆಲ್ಲರ ಒಂದು ಮಾಡಿದ್ದು, ಮುಂದೆ ತೆಕ್ಕೊಂಡು ಹೋವುತ್ತಾ ಇಪ್ಪದು. ನಿಂಗೊ ಬೈಲಿಂಗೆ ಸದಾ ಹೆಗಲು ಕೊಡ್ತಾ ಇಪ್ಪದು ಎಲ್ಲೋರಿಂಗೂ ಗೊಂತಿಪ್ಪದೇ..
  ಒಳ್ಳೆ ವರದಿಗೆ ಧನ್ಯವಾದಂಗೊ ವಿಜಯತ್ತೆ..

  [Reply]

  VN:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಶ್ರೀ ದೇವಿ,ನಮ್ಮೆಲ್ಲರ ಭಾವದ ಬಂಧ ಹೀಂಗೇ ಮುರಿಯದ್ದೆ ಮುಂದುವರಿತ್ತಾ ಇಪ್ಪಲೆ ಶ್ರೀಗುರು,ದೇವ ಕಾರುಣ್ಯ ಕಾಪಾಡಲಿ..

  [Reply]

  VN:F [1.9.22_1171]
  Rating: 0 (from 0 votes)
 3. ಒಪ್ಪಣ್ಣ

  ನಮ್ಮದೇ ಬೈಲು.
  ನಮ್ಮದೇ ಬೈಲಿನ ಶಾಲೆ.
  ಅದೂ ನಮ್ಮದೇ ಶಾಲೆ.

  ನಮ್ಮ ಕಾರ್ಯಕ್ರಮವ ಚೆಂದಲ್ಲಿ ಅಕ್ಷರರೂಪಕ್ಕೆ ಇಳುಸಿದ ವಿಜಯತ್ತೆಗೆ, ನಮೋನಮಃ.
  ಇನ್ನೂ ನೂರ್ಕಾಲ ಆ ಶಾಲೆಗೆ ನಮ್ಮ ಬೈಲ ಸಹಕಾರ ಸಿಕ್ಕುವ ಹಾಂಗಾಗಲಿ. ಆ ಮೂಲಕ ಬೈಲ ಸಮಾಜ ಸೇವಾ ಕೈಂಕರ್ಯ ನೆಡೆಯಲಿ.
  ಅದಕ್ಕೆ ಬೈಲಿನ ಎಲ್ಲೋರ ಸಹಕಾರ ಸಿಕ್ಕಲಿ.

  ಹರೇರಾಮ

  [Reply]

  VA:F [1.9.22_1171]
  Rating: 0 (from 0 votes)
 4. ವಿಜಯತ್ತೆ

  ಎಷ್ಟೊಳ್ಳೆ ಮಾತು ಒಪ್ಪಣ್ಣ ..ಶ್ರೀ ಸಂಸ್ಥಾನ ಒಂದಾರಿ ಹೇಳುದು ಕೇಳಿದ್ದೆ. ಕೊಡುವ ಉದಾರತೆ ಇದ್ದರೆ ಕೊಡುವವೂ ಉದ್ಧಾರ ಆವುತ್ತವು. ಪಡಕ್ಕೊಂಬವೂ ಒಳಿತ್ತವು. ಈ ಮಾತಿಂದ ಮನತುಂಬಿ ಬಂತು.

  [Reply]

  VN:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ

  ಒಪ್ಪ

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ವರದಿ ಲಾಯಕಾಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕಮಂಗ್ಳೂರ ಮಾಣಿಶಾ...ರೀಚುಬ್ಬಣ್ಣಡೈಮಂಡು ಭಾವಪಟಿಕಲ್ಲಪ್ಪಚ್ಚಿಕಾವಿನಮೂಲೆ ಮಾಣಿಮಾಷ್ಟ್ರುಮಾವ°ಅನುಶ್ರೀ ಬಂಡಾಡಿಬಟ್ಟಮಾವ°ಸಂಪಾದಕ°ವಿನಯ ಶಂಕರ, ಚೆಕ್ಕೆಮನೆಚೆನ್ನೈ ಬಾವ°ದೊಡ್ಡಮಾವ°ನೀರ್ಕಜೆ ಮಹೇಶಶ್ರೀಅಕ್ಕ°ಶೇಡಿಗುಮ್ಮೆ ಪುಳ್ಳಿಶರ್ಮಪ್ಪಚ್ಚಿಚೆನ್ನಬೆಟ್ಟಣ್ಣಪುತ್ತೂರುಬಾವಪವನಜಮಾವಪುಟ್ಟಬಾವ°ಜಯಶ್ರೀ ನೀರಮೂಲೆಹಳೆಮನೆ ಅಣ್ಣಅನಿತಾ ನರೇಶ್, ಮಂಚಿಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ