ಪೈಪೂ ಒಟ್ಟೆ – ಹಂಡೆಯೂ ಒಟ್ಟೆ

December 27, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಭಾವನ ತೋಟಲ್ಲಿ ಸ್ಪ್ರಿಂಕ್ಳೇರು ಹಾರುದ್ದು
ಪೈಪು – ಒಟ್ಟೆಡಾ

ಅತ್ತೆಯ ಪಂಪು ನೀರೂ ಎಳೆಯದ್ದು
ಪೈಪು – ಒಟ್ಟೆಡಾ

ಮಾವನ ಟೇಂಕಿಲಿ ನೀರೂ ನಿಲ್ಲದ್ದು
ಪೈಪು – ಒಟ್ಟೆಡಾ

ಕಾರಿನಟೇಂಕಿಲಿ ಪೆಟ್ರೋಲು ಕಾಲಿಯಾದ್ದು
ಪೈಪು – ಒಟ್ಟೆಡಾ

ಪೇಟೆಂದ ಮನಗೆ ಸಾಮಾನುತಪ್ಪಗ
ತೊಟ್ಟೆಯೇ- ಒಟ್ಟೆಡಾ

ಉಬರಡ್ಕ ಮಾವನ ಅಡಕ್ಕೆ ಒಣಗುಸುವ
ಪ್ಲೇಸ್ಟಿಕೂ – ಒಟ್ಟೆಡಾ

ಸೋರುತ್ತ ಮಾಡಿಂಗೆ ಸುಭಗಣ್ಣ ಮುಚ್ಚಿದ
ಪ್ಲೇಸ್ಟಿಕೂ – ಒಟ್ಟೆಡಾ

ಚೆನ್ನೈ ಭಾವನ ರೈನು ಕೋಟಿಲಿ
ಎಲಿಕೆರದ  – ಒಟ್ಟೆಡಾ

ಹೂಗಿಂದ ಹೂಗಿಂಗೆ ಹಾರ್ತಾ ಇಪ್ಪದು
ಬಣ್ಣದ -ಚಿಟ್ಟೆಡಾ

ಮಕ್ಕೊಗೆ ಹಾರುಲೆ ಅಜ್ಜನಮನೆಲಿ
ಮಣ್ಣಾಂ- ಚಿಟ್ಟೆಡಾ

ಲೈಟಿನ ಬೆಣ್ಚಿಲಿ ಹಾರಿ ಸತ್ತದು
ಸಣ್ಣ – ಚಿಟ್ಟೆಡಾ

ಮಾವಂಗೆ ಎದ್ದು ಸುತ್ತೂ ಬಪ್ಪಲೆ
ತೊಳಶೀ – ಕಟ್ಟೆಡಾ

ಶಾಲಗೆ ಹೋವುತ್ತ ದಾರಿಲಿ ಇಪ್ಪದು
ಅಶ್ವತ್ಥ – ಕಟ್ಟೆಡಾ

ಮಾವಿನ ಬುಡಕ್ಕೆ ಕಟ್ಟಿ ಇಪ್ಪದು
ಮಾವಿನ – ಕಟ್ಟೆಡಾ

ಮಾವಿನಕಟ್ಟೆಂದ ಮದಲೇ ಇಪ್ಪದು
ಬೋಳು – ಕಟ್ಟೆಡಾ

ಮಕ್ಕಳೇ ಇಲ್ಲದ್ದ ಊರಿಲಿ ಇಪ್ಪದು
ಜೋಕುಳ – ಕಟ್ಟೆಡಾ

ಬೈಕಿನ ಚಕ್ರ ನೆಲವ ಅಪ್ಪಿದ್ದು
ಟ್ಯೂಬು –  ಒಟ್ಟೆಡಾ

ಒಲೆಯ ಒಳಂಗೇ ನೀರು ಬಿದ್ದದು
ಅಳಗೆ – ಒಟ್ಟೆಡಾ

ನೀರು ಎತ್ತುಲೆ ಸುಲಭ ಅಪ್ಪದು
ಕೊಡಪಾನ – ಒಟ್ಟೆಡಾ

ಬಂಙಲ್ಲೆತ್ತಿ ನೀರು ಎರದ್ದು
ಹಂಡೆಯೇ ಒಟ್ಟೆಡಾ ……….

ಎಲ್ಲೋರು ಬೇರೆಬೇರೆ ಆಗಿ ಇಪ್ಪ ನಮ್ಮೋರ ಮನೆಗಳ ಕಥೆಯೇ ಇಷ್ಟೇಡಾ….

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಕಟ್ಟೆಯ ಚಿಟ್ಟೆಲಿ ಕೂದರೆ ಶೇಡಿಗುಮ್ಮೆ ಪುಳ್ಳಿಯ
  ಕಣ್ಣಿಂಗೆ ಬಿದ್ದದ್ದೆಲ್ಲಾ ಒಟ್ಟೆಡಾ!
  ಹೇಳುವದೆಲ್ಲ ಲೊಟ್ಟೆಡಾ!!

  ಓಯಿ., ಎಲ್ಲಾ ಒಟ್ಟೆ ಮಾಡಿ ಆತಿಲ್ಲ್ಯೋ. ಇನ್ನು …?

  ಲಾಯಕ ಆಯ್ದು ಹೇಳಿ ಒಪ್ಪ.

  [Reply]

  VA:F [1.9.22_1171]
  Rating: +2 (from 2 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಸರ್ವಂ ರಂಧ್ರಮಯಂ ಹೇಳಿದ ಹಾಂಗಾತಾನೆ. ತುಳು ಪದ್ಯದ ರಾಗಲ್ಲಿ ಚೆಂದಕೆ ಹಾಡ್ಳಕ್ಕು. ಹೊಸತನ ಇದ್ದು. ಎಲ್ಲೋರ ಮನೆಯ ದೋಸೆಲಿಯುದೆ ಒಟ್ಟೆ ಇರ್ತಾಡ ಅಲ್ಲದೋ ಪುಳ್ಳಿ ?

  [Reply]

  VA:F [1.9.22_1171]
  Rating: 0 (from 0 votes)
 3. ಜಯಶ್ರೀ ನೀರಮೂಲೆ
  jayashree.neeramoole

  ಒಟ್ಟೆಯೋ…ಲೋಟ್ಟೆಯೋ… ಪದ್ಯ ಮಾಂತ್ರ ಲಾಯಕ ಇದ್ದು… ಎಲ್ಲೋರು ಬೇರೆಬೇರೆ ಆಗಿ ಇಪ್ಪ ನಮ್ಮೋರ ಮನೆಗಳ ಕಥೆಯೇ ಇಷ್ಟೇಡಾ… ಇಂದ್ರಾಣ ಸಮಸ್ಯೆಯ ಪದ್ಯ ರೂಪಲ್ಲಿ ಹೇಳಿದ್ದು ಲಾಯಕ ಆಯಿದು…

  [Reply]

  VA:F [1.9.22_1171]
  Rating: 0 (from 0 votes)
 4. ಗಣೇಶ ಪೆರ್ವ
  ಗಣೇಶ ಪೆರ್ವ

  ಒಳ್ಳೇದಾಯಿದು, ಒಪ್ಪ೦ಗೊ.

  [Reply]

  VA:F [1.9.22_1171]
  Rating: 0 (from 0 votes)
 5. ಒಪ್ಪಣ್ಣ

  ಯೇ ಪುಳ್ಳಿಯೇ..
  ಒಂದೊಂದು ಘಟನೆಗೂ ಒಂದೊಂದು ಶುದ್ದಿ ಬರವಲಕ್ಕೇನ್ನೇಪ್ಪಾ..

  { ಬೈಕಿನ ಚಕ್ರ ನೆಲವ ಅಪ್ಪಿದ್ದು – ಟ್ಯೂಬು – ಒಟ್ಟೆಡಾ}
  ಮೊನ್ನೆ ಒಂದಿನ ಸುಬಗಣ್ಣಂಗೆ ಹೀಂಗೇ ಆಗಿ, ಮನೆದೇವರ ಸಹಸ್ರನಾಮ ಆಗಿ – ಯೋ ಪಾಪ!!

  [Reply]

  VA:F [1.9.22_1171]
  Rating: 0 (from 0 votes)
 6. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಒಟ್ಟೆ ಲೊಟ್ಟೆಗಳ ಹಾಡು ಭಾರೀ ಚೆಂದ ಆಯಿದನ್ನೇ.

  [Reply]

  VN:F [1.9.22_1171]
  Rating: 0 (from 0 votes)
 7. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಈ ಅರ್ಧಸತ್ಯವ ಓದಿ ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 8. ಮುಳಿಯ ಭಾವ
  ರಘು ಮುಳಿಯ

  ಹುಳಿ ಬ೦ದ ಉದ್ದಿನಹಿಟ್ತಿಲಿ ಎರದ ದೋಸೆಲಿ ಸಾವಿರ ಒಟ್ಟೆಡಾ..
  ” ಹೀ೦ಗಿರ್ತ ಪದ್ಯ ಕಟ್ಟೆಡಾ ಪುಳ್ಳಿ ” ಹೇಳಿದ್ದು ಲೊಟ್ಟೆಡಾ !

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಭಾವಾ , ದೋಸೆ ಒಟ್ಟೆ ಬಿದ್ದಷ್ಟೂ ರುಚಿ ಹೆಚ್ಚಡ ಆದರೆ ಕಾವಲಿಗೆಯೇ ಒಟ್ಟೆ ಆದರೆ……..?

  [Reply]

  ನೆಗೆಗಾರ°

  ನೆಗೆಗಾರ° Reply:

  { ಕಾವಲಿಗೆಯೇ ಒಟ್ಟೆ ಆದರೆ } ಸೌದಿ ಮುಗಿವದು ಹೆಚ್ಚಡ;

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಎಂತಾ ನೆಗೆಮಾಡಿದ್ದಕ್ಕೆ ಆರಾರು ಸೌದಿಕೊಳ್ಳಿ ಹಿಡುಕ್ಕೊಂಡು ಓಡುಸಿಂಡು ಬೈಂದವೋ ಹೇಂಗೆ?

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಚೆನ್ನಬೆಟ್ಟಣ್ಣಚುಬ್ಬಣ್ಣಅಜ್ಜಕಾನ ಭಾವಒಪ್ಪಕ್ಕದೊಡ್ಡಭಾವರಾಜಣ್ಣಡೈಮಂಡು ಭಾವಡಾಮಹೇಶಣ್ಣಅಕ್ಷರ°ಬೊಳುಂಬು ಮಾವ°ದೊಡ್ಮನೆ ಭಾವಕಳಾಯಿ ಗೀತತ್ತೆದೊಡ್ಡಮಾವ°ಕಾವಿನಮೂಲೆ ಮಾಣಿಮಾಷ್ಟ್ರುಮಾವ°ಪೆರ್ಲದಣ್ಣವೇಣಿಯಕ್ಕ°ಶರ್ಮಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಶ್ರೀಅಕ್ಕ°ಸುಭಗಪುಟ್ಟಬಾವ°ಎರುಂಬು ಅಪ್ಪಚ್ಚಿಬಟ್ಟಮಾವ°ಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ