ಪಂಚಗವ್ಯದ ಶುದ್ದಿ

ಪಂಚಗವ್ಯದ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲಂದ ನಮ್ಮ ಪೆರ್ಲದ ಆಯುರ್ವೇದದ ಡಾಕ್ಟ್ರು ಸುಮಾರು ಮಾಹಿತಿ ಕೊಟ್ಟವು.
ಗೋಮಯ, ಗೋಮೂತ್ರ ಹಾಂಗೂ ಪಂಚಗವ್ಯಂಗಳ ಸತ್ಪ್ರಯೋಜನದ ವಿಚಾರ ಚರಕಸಂಹಿತೆಲಿ ಸುಮಾರು ವಿವರಣೆ ಇದ್ದು ಹೇಳಿ ಹೇಳಿದವು..
‘ಆದರೆ ಇಪ್ಪತ್ತೊಂದನೇ ಶತಮಾನಲ್ಲಿಪ್ಪ ನಾವು, ಆದಿ ಕಾಲಂದ ಅಂತಹಾ ಬರಹಂಗಳ ಆಧಾರಲ್ಲಿ ಪಂಚಗವ್ಯ ಸೇವಿಸಕ್ಕ?’ ಹೇಳಿ ಕೇಳಿದೆ.

ಅದಕ್ಕೆ ಡಾಕ್ಟ್ರು ಮಾವ “ಚರಕನ ಕಾಲಲ್ಲೇ ಈ ಬಗ್ಗೆ ಸಾಕಷ್ಟು ಅಧ್ಯಯನ ಆಯಿದು” ಹೇಳಿ ಹೇಳಿದವದ!!!!
ನಾವು ಅದರ ಕೇಳಿ ಸುಮ್ಮನೆ ಕೂದತ್ತು. ಮತ್ತೆ ಪ್ರಶ್ನೆ ಹಾಕಲೇ ಹೋಯಿದಿಲ್ಲೇ .
ಆದರೆ ಜೈವಿಕ ಸಂಯುಕ್ತಂಗಳ ಬಗೆಲಿ ಸೂಕ್ಷ್ಮಾಣು ಜೀವಿಗಳ ಬಗ್ಗೆ ಏನಾದರೂ ಡಾಕ್ಟ್ರುಮಾವ ಹೇಳ್ತವಾ ಹೇಳಿ ಕಾದು ಕೂದೆ.
ಅಷ್ಟೊತ್ತಿಂಗೆ ಡಾಕ್ಟ್ರು “ಯಾವ್ಯಾವುದೋ ದನಂಗಳ ಮಲ ಮೂತ್ರ ಉಪಯೋಗಿಸಿದರೆ ಪ್ರಯೋಜನ ಆವುತ್ತಿಲ್ಲೆ !
ಭಾರತೀಯ ಶುದ್ಧ ಗೋತಳಿಗಳ ಉತ್ಪನ್ನಹೇಳಿ ಇದ್ದಲ್ದ?
ಅದರ್ಲಿ ‘ರೋಗ ಪ್ರತಿರೋಧ ಶಕ್ತಿ’ ಶೇ. 90ರಿಂದ 98ರಷ್ಟಿದ್ದರೆ, ಮಿಶ್ರ ತಳಿಗಳ ಶಕ್ತಿ ಬರೇ ಶೇ. 40ಕ್ಕೂ ಕಡಮ್ಮೆ ಇಪ್ಪದು ಹೇಳಿ ‘ಚರಕ ಸಂಹಿತೆಲಿ ಸಂಶೋಧನೆ ಆಯಿದಡ!!!!”
`ನಾವು ಒಪ್ಪಣ್ಣ ನ ಬೈಲಿಲಿ ಬರವಗ ಸುಮ್ಮನೆ ಆ ಶಾಸ್ತ್ರ ಈ ಶಾಸ್ತ್ರ ಹೇಳಿ ಹೇಳುಲೆ ಆವ್ತ?’ ಹೇಳಿ ಆನು ಒಂದು ಪ್ರಶ್ನೆ ಹಾಕಿದೆ.
`ಅದರ್ಲಿ ಹೆಚ್ಚಿನವೂ ಸೋಫ್ಟುವೇರು ಇಂಜಿನಿಯರು ಅದ!!! ಅವಕ್ಕೆಲ್ಲಾ ವೈಜ್ಞಾನಿಕ ಕಾರಣ ಕೊಡೆಕ್ಕು ಇದಾ?’ ಹಾಂಗೆ ಡಾಕ್ಟ್ರು ಮಾವನ ಹತ್ರೆ ಕೇಳಿದೆ.
ಅದಕ್ಕೆ ಅವು “ಈಗ ಇಷ್ಟು ಸಾಕು. ಹಾಂಗೆ ಎಲ್ಲ ಹೇಳಿ ಪೂರೈಸ,  ಪ್ರಜ್ಞಾವಂತರಾದ ನಾವು ಈ ಎಲ್ಲಾ ವಿಚಾರಂಗಳ ಬಗ್ಗೆ ವಸ್ತುನಿಷ್ಠವಾದ, ವೈಜ್ಞಾನಿಕವಾದ ಅಭಿಪ್ರಾಯವ ಶಾಸ್ತ್ರಂಗಳ ಮೂಲಕ ನಂಬೇಕ್ಕಾವ್ತು” ಹೇಳಿ ಹೇಳಿದವು.

ಗಣೇಶ ಮಾವ°

   

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *