ಪಾತಿ ಅತ್ತೆ ತೆಳ್ಳವು ಮಾಡಿದವಡಾ

December 16, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನೋರಿಂಗೆ ಶೇಡಿಗುಮ್ಮೆ ಪುಳ್ಳಿಯ ಗೊಂತಿದ್ದೋ?
ಕೊಡೆಯಾಲಲ್ಲಿ ಇಪ್ಪದು. ಎಲ್ಲಿ? ಹಗಲೊತ್ತು ಅಂಗುಡಿಲಿ, ಇರುಳೊತ್ತು ಮನೆಲಿ!
ಆದರೆ ಬೈಲಿಲಿ ಹಗಲೂ-ಇರುಳೂ ಎರಡೂ ಹೊತ್ತು ಇರ್ತವು.

ಶೇಡಿಗುಮ್ಮೆ ಪುಳ್ಳಿಯ ಪುಟಂಗೊ:
ನೆರೆಕರೆ:
http://oppanna.com/nerekare/kprasada
ಮೋರೆಪುಟ: https://www.facebook.com/profile.php?id=100002769217912&sk=info

ಶುದ್ದಿಗೊಕ್ಕೆ ಒಪ್ಪ ಕೊಟ್ಟುಗೊಂಡು, ನೆರೆಕರೆಯೋರ ಪ್ರೋತ್ಸಾಹಿಸುತ್ತ
ಶೇಡಿಗುಮ್ಮೆ ಪುಳ್ಳಿ ಸ್ವತಃ ಶುದ್ದಿ ಹೇಳಲೆ ನೆರೆಕರೆಗೆ ಬಂದವು.
ಬೈಲಿನ ಪರವಾಗಿ ಅವಕ್ಕೆ ಸ್ವಾಗತ ಹೇಳುವನೋ!
ಬನ್ನಿ, ಅವರ ಶುದ್ದಿ ಓದಿ, ಒಪ್ಪ ಕೊಡಿ.
~
ಗುರಿಕ್ಕಾರ°


ಹೊತ್ತೋಪಗಳೇ ಪಾತಿ ಅತ್ತೆ ಅಕ್ಕಿ ನೀರಿಲಿ ಹಾಕಿತ್ತಡಾ,
ಉದಿಯಪ್ಪಳೇ ತೆಳ್ಳವು ಮಾಡುಲೇ, ಉದಿಯಪ್ಪಳೇ ತೆಳ್ಳವು ಮಾಡುಲೆ ||

ಉದೆಗಾಲಕ್ಕೆದ್ದು ಕಡವಕಲ್ಲ ಹತ್ತು ಸುತ್ತು ತಿರಿಗಿಸಿತ್ತಡಾ,
ಅಕ್ಕಿಯ ನೊಂಪು ಕಡವಲೇ, ಅಕ್ಕಿಯ ನೊಂಪು ಕಡವಲೆ ||

ಕಲ್ಲು ತೊಳದು ಪಾತಿಅತ್ತೆ ಕಾಯಿ ಸೊಲುದು ತಂತಡಾ,
ಕೂಡ್ಳೆ ಬೆಲ್ಲಕಾಯಿ ಮಾಡೂಲೇ, ಕೂಡ್ಳೆ ಬೆಲ್ಲಕಾಯೀ ಮಾಡೂಲೆ ||

ಸೊಲುದ ಕಾಯಿ ಒಡದು ಅತ್ತೆ ಕೆರದು ಬೆಲ್ಲ ಹಾಕಿತ್ತಡಾ,
ಪುಚ್ಚಗೊಕ್ಕು ಒಟ್ಟಿಂಗೆ ತಿನ್ಸಿಯೊಂಡೂ, ಪುಚ್ಚಗೊಕ್ಕು ಒಟ್ಟಿಂಗೆ ತಿನ್ಸಿಯೊಂಡು ||

ಬೆಲ್ಲ ಕಾಯಿ ಆದಮತ್ತೆ ಕಾವಲಿ ಒಲೆಲಿ ಮಡುಗಿತ್ತಡಾ,
ಪಾತಿಅತ್ತೆಯ ಕಾವಲಿ ಬೆಷಿ ಅಪ್ಪಲೇ, ಪಾತಿಅತ್ತೆಯ ಕಾವಲಿ ಬೆಷಿ ಅಪ್ಪಲೆ ||

ಎಷ್ಟು ಸರ್ತಿ ಊಪಿರೂ ಚಂಡಿಸೌದಿ ಹೊತ್ತಡಾ
ಹೊಗೆ ತುಂಬಿತ್ತು ಅಟ್ಟುಂಬಳಾ, ಹೊಗೆ ತುಂಬಿತ್ತು ಅಟ್ಟುಂಬಳ ||

ಗೆಂಟುಮಾಣಿ ಉದಿಯಪ್ಪಳೇ ಹಟ ಹಿಡುದು ಕೂಯ್ದನಡಾ,
ತೆಳ್ಳವು ಬೇಕು ಎನಗೀಗಳೇ ,  ತೆಳ್ಳವು ಬೇಕು ಎನಗೀಗಳೆ ||

ಅಂತೂ  ಇಂತೂ  ಎಣ್ಣೆ ಎರದು ಸೌದಿ ಒಲೆ ಹೊತ್ತಿಸಿತ್ತಡಾ,
ಬೇಗ ದೋಸೆ ಎರವಲೇ, ಬೇಗ ದೋಸೆ ಎರವಲೆ ||

ಮಸಿಮೋರೆ ತೊಳದ ಪಾತಿಅತ್ತೆ ತೆಳ್ಳವೆರದು ನೋಡಿತ್ತಡಾ,
ಏನೇನ ಮಾಡಿರೂ ಎಳಕ್ಕಾಡಾ, ಏನೇನ ಮಾಡಿರೂ ಎಳಕ್ಕಾಡ ||

ಅಲ್ಲಿಂದೆದ್ದ ಪಾತಿಅತ್ತೆ ತುಂಡು ನೀರುಳ್ಳಿ ತಂತಾಡಾ,
ಕಾವಲಿಗೆಯ ಮೋರಗೆ ಉದ್ದಿತ್ತಡಾ, ಕಾವಲಿಗೆಯ ಮೋರಗೆ ಉದ್ದಿತ್ತಡ ||

ಮೋರೆ ಉರುದ ಕಾವಲಿಗೆ ದೋಸೆ ಎಳಕ್ಕುಲೆ ಬಿಟ್ಟತ್ತಡಾ,
ಪಾತಿಅತ್ತೆಯ ದೋಸೆ ಪಷ್ಟು ಆತಡಾ,  ಪಾತಿಅತ್ತೆಯ ದೋಸೆ ಪಷ್ಟು ಆತಡ ||

ತೆಳ್ಳವು ತಿಂದು ಗೆಂಟುಮಾಣಿ ಶಾಲಗೇಳಿ ಹೋಯಿದನಡಾ,
ದಿನ ಮೂರಾದರೂ ನಾಪತ್ತೆಡಾ, ದಿನ ಮೂರಾದರೂ ನಾಪತ್ತೆಡ ||

ಗೆಂಟುಮಾಣಿಗೆ ಇನ್ನೆಂತ ಆಯೇಕ್ಕಾಗಿತ್ತು ಹೇಳಿ ಗೊಂತೂ ಇಲ್ಲೆಡಾ,!
ನಿಂಗೊಗೆ ಅವನ ಕಾಂಬಲೆ ಸಿಕ್ಕಿರೆ ಹೇಳೆಕ್ಕಡಾ- ಪಾತಿಅತ್ತೆ ಕೈಲಿ ಸಟ್ಟುಗ ಹಿಡ್ಕೊಂಡು ಕಾಯ್ತವಡ!!

ಪಾತಿ ಅತ್ತೆ ತೆಳ್ಳವು ಮಾಡಿದವಡಾ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಶೇಡಿಗುಮ್ಮೆ ಪುಳ್ಳಿಗೆ ಸ್ವಾಗತ.

  ಕಡವಕಲ್ಲು ತಿರುಗಿಸೀ ತಿರುಗಿಸೀ|
  ಸೋಬಾನೇ..ಸೊ೦ಟ ಸೋಬಾನೇ..||

  ಆಗಿಕ್ಕೋ ಅತ್ತೆಗೆ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಸುಭಗಬಂಡಾಡಿ ಅಜ್ಜಿvreddhiಡಾಗುಟ್ರಕ್ಕ°ವಿನಯ ಶಂಕರ, ಚೆಕ್ಕೆಮನೆಶರ್ಮಪ್ಪಚ್ಚಿಬೋಸ ಬಾವತೆಕ್ಕುಂಜ ಕುಮಾರ ಮಾವ°ಶಾಂತತ್ತೆವಾಣಿ ಚಿಕ್ಕಮ್ಮಕೊಳಚ್ಚಿಪ್ಪು ಬಾವಪವನಜಮಾವದೊಡ್ಮನೆ ಭಾವಶ್ರೀಅಕ್ಕ°ಅನು ಉಡುಪುಮೂಲೆಯೇನಂಕೂಡ್ಳು ಅಣ್ಣಶೀಲಾಲಕ್ಷ್ಮೀ ಕಾಸರಗೋಡುಜಯಗೌರಿ ಅಕ್ಕ°ಚೆನ್ನಬೆಟ್ಟಣ್ಣವಿಜಯತ್ತೆದೇವಸ್ಯ ಮಾಣಿಉಡುಪುಮೂಲೆ ಅಪ್ಪಚ್ಚಿಅಡ್ಕತ್ತಿಮಾರುಮಾವ°ಡಾಮಹೇಶಣ್ಣಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ