Oppanna.com

ಪಾತಿ ಅತ್ತೆ ತೆಳ್ಳವು ಮಾಡಿದವಡಾ

ಬರದೋರು :   ಶೇಡಿಗುಮ್ಮೆ ಪುಳ್ಳಿ    on   16/12/2011    19 ಒಪ್ಪಂಗೊ

ಬೈಲಿನೋರಿಂಗೆ ಶೇಡಿಗುಮ್ಮೆ ಪುಳ್ಳಿಯ ಗೊಂತಿದ್ದೋ?
ಕೊಡೆಯಾಲಲ್ಲಿ ಇಪ್ಪದು. ಎಲ್ಲಿ? ಹಗಲೊತ್ತು ಅಂಗುಡಿಲಿ, ಇರುಳೊತ್ತು ಮನೆಲಿ!
ಆದರೆ ಬೈಲಿಲಿ ಹಗಲೂ-ಇರುಳೂ ಎರಡೂ ಹೊತ್ತು ಇರ್ತವು.

ಶೇಡಿಗುಮ್ಮೆ ಪುಳ್ಳಿಯ ಪುಟಂಗೊ:
ನೆರೆಕರೆ:
https://oppanna.com/nerekare/kprasada
ಮೋರೆಪುಟ: https://www.facebook.com/profile.php?id=100002769217912&sk=info

ಶುದ್ದಿಗೊಕ್ಕೆ ಒಪ್ಪ ಕೊಟ್ಟುಗೊಂಡು, ನೆರೆಕರೆಯೋರ ಪ್ರೋತ್ಸಾಹಿಸುತ್ತ
ಶೇಡಿಗುಮ್ಮೆ ಪುಳ್ಳಿ ಸ್ವತಃ ಶುದ್ದಿ ಹೇಳಲೆ ನೆರೆಕರೆಗೆ ಬಂದವು.
ಬೈಲಿನ ಪರವಾಗಿ ಅವಕ್ಕೆ ಸ್ವಾಗತ ಹೇಳುವನೋ!
ಬನ್ನಿ, ಅವರ ಶುದ್ದಿ ಓದಿ, ಒಪ್ಪ ಕೊಡಿ.
~
ಗುರಿಕ್ಕಾರ°


ಹೊತ್ತೋಪಗಳೇ ಪಾತಿ ಅತ್ತೆ ಅಕ್ಕಿ ನೀರಿಲಿ ಹಾಕಿತ್ತಡಾ,
ಉದಿಯಪ್ಪಳೇ ತೆಳ್ಳವು ಮಾಡುಲೇ, ಉದಿಯಪ್ಪಳೇ ತೆಳ್ಳವು ಮಾಡುಲೆ ||

ಉದೆಗಾಲಕ್ಕೆದ್ದು ಕಡವಕಲ್ಲ ಹತ್ತು ಸುತ್ತು ತಿರಿಗಿಸಿತ್ತಡಾ,
ಅಕ್ಕಿಯ ನೊಂಪು ಕಡವಲೇ, ಅಕ್ಕಿಯ ನೊಂಪು ಕಡವಲೆ ||

ಕಲ್ಲು ತೊಳದು ಪಾತಿಅತ್ತೆ ಕಾಯಿ ಸೊಲುದು ತಂತಡಾ,
ಕೂಡ್ಳೆ ಬೆಲ್ಲಕಾಯಿ ಮಾಡೂಲೇ, ಕೂಡ್ಳೆ ಬೆಲ್ಲಕಾಯೀ ಮಾಡೂಲೆ ||

ಸೊಲುದ ಕಾಯಿ ಒಡದು ಅತ್ತೆ ಕೆರದು ಬೆಲ್ಲ ಹಾಕಿತ್ತಡಾ,
ಪುಚ್ಚಗೊಕ್ಕು ಒಟ್ಟಿಂಗೆ ತಿನ್ಸಿಯೊಂಡೂ, ಪುಚ್ಚಗೊಕ್ಕು ಒಟ್ಟಿಂಗೆ ತಿನ್ಸಿಯೊಂಡು ||

ಬೆಲ್ಲ ಕಾಯಿ ಆದಮತ್ತೆ ಕಾವಲಿ ಒಲೆಲಿ ಮಡುಗಿತ್ತಡಾ,
ಪಾತಿಅತ್ತೆಯ ಕಾವಲಿ ಬೆಷಿ ಅಪ್ಪಲೇ, ಪಾತಿಅತ್ತೆಯ ಕಾವಲಿ ಬೆಷಿ ಅಪ್ಪಲೆ ||

ಎಷ್ಟು ಸರ್ತಿ ಊಪಿರೂ ಚಂಡಿಸೌದಿ ಹೊತ್ತಡಾ
ಹೊಗೆ ತುಂಬಿತ್ತು ಅಟ್ಟುಂಬಳಾ, ಹೊಗೆ ತುಂಬಿತ್ತು ಅಟ್ಟುಂಬಳ ||

ಗೆಂಟುಮಾಣಿ ಉದಿಯಪ್ಪಳೇ ಹಟ ಹಿಡುದು ಕೂಯ್ದನಡಾ,
ತೆಳ್ಳವು ಬೇಕು ಎನಗೀಗಳೇ ,  ತೆಳ್ಳವು ಬೇಕು ಎನಗೀಗಳೆ ||

ಅಂತೂ  ಇಂತೂ  ಎಣ್ಣೆ ಎರದು ಸೌದಿ ಒಲೆ ಹೊತ್ತಿಸಿತ್ತಡಾ,
ಬೇಗ ದೋಸೆ ಎರವಲೇ, ಬೇಗ ದೋಸೆ ಎರವಲೆ ||

ಮಸಿಮೋರೆ ತೊಳದ ಪಾತಿಅತ್ತೆ ತೆಳ್ಳವೆರದು ನೋಡಿತ್ತಡಾ,
ಏನೇನ ಮಾಡಿರೂ ಎಳಕ್ಕಾಡಾ, ಏನೇನ ಮಾಡಿರೂ ಎಳಕ್ಕಾಡ ||

ಅಲ್ಲಿಂದೆದ್ದ ಪಾತಿಅತ್ತೆ ತುಂಡು ನೀರುಳ್ಳಿ ತಂತಾಡಾ,
ಕಾವಲಿಗೆಯ ಮೋರಗೆ ಉದ್ದಿತ್ತಡಾ, ಕಾವಲಿಗೆಯ ಮೋರಗೆ ಉದ್ದಿತ್ತಡ ||

ಮೋರೆ ಉರುದ ಕಾವಲಿಗೆ ದೋಸೆ ಎಳಕ್ಕುಲೆ ಬಿಟ್ಟತ್ತಡಾ,
ಪಾತಿಅತ್ತೆಯ ದೋಸೆ ಪಷ್ಟು ಆತಡಾ,  ಪಾತಿಅತ್ತೆಯ ದೋಸೆ ಪಷ್ಟು ಆತಡ ||

ತೆಳ್ಳವು ತಿಂದು ಗೆಂಟುಮಾಣಿ ಶಾಲಗೇಳಿ ಹೋಯಿದನಡಾ,
ದಿನ ಮೂರಾದರೂ ನಾಪತ್ತೆಡಾ, ದಿನ ಮೂರಾದರೂ ನಾಪತ್ತೆಡ ||

ಗೆಂಟುಮಾಣಿಗೆ ಇನ್ನೆಂತ ಆಯೇಕ್ಕಾಗಿತ್ತು ಹೇಳಿ ಗೊಂತೂ ಇಲ್ಲೆಡಾ,!
ನಿಂಗೊಗೆ ಅವನ ಕಾಂಬಲೆ ಸಿಕ್ಕಿರೆ ಹೇಳೆಕ್ಕಡಾ- ಪಾತಿಅತ್ತೆ ಕೈಲಿ ಸಟ್ಟುಗ ಹಿಡ್ಕೊಂಡು ಕಾಯ್ತವಡ!!

19 thoughts on “ಪಾತಿ ಅತ್ತೆ ತೆಳ್ಳವು ಮಾಡಿದವಡಾ

  1. ಶೇಡಿಗುಮ್ಮೆ ಪುಳ್ಳಿಗೆ ಸ್ವಾಗತ.

    ಕಡವಕಲ್ಲು ತಿರುಗಿಸೀ ತಿರುಗಿಸೀ|
    ಸೋಬಾನೇ..ಸೊ೦ಟ ಸೋಬಾನೇ..||

    ಆಗಿಕ್ಕೋ ಅತ್ತೆಗೆ?

  2. ಓಯ್‌ ಶೇಡಿಗುಮ್ಮೆ ಪುಳ್ಳಿ ತೆಳ್ಳವು ಪುರಾಣ ಪಷ್ಠಯಿದಾತೊ…
    ಕರ್ಕು ತೆಳ್ಳವು ಇದ್ದರೆ ನವಗೂ ಬೇಕು ಹೇಳಿ ಪಾತಿ ಅತ್ತೆ ಯತ್ತರೆ. ಏ°

    1. ಇದಾ, ಎರದು ಮಡುಗಲೆ ಎಲ್ಲಾ ಇಲ್ಲೆಡಾ , ಕರ್ಕು,ಆರುಸೆಕ್ಕು ಹೇಳಿಆದರೆ ಅಕೇರಿಗೆ ಬರೆಕ್ಕಡ , ಬಾಕಿಪ್ಪವಕ್ಕೆ ಕೆಲಸಕ್ಕೆ ಹೋಪಲೆ ಎಲ್ಲ ತಡವಾವುತ್ತಿದಾ ಹಾಂಗೆ. ಕಾದು ಕೂಪಲೆ ಪುರುಸೋತ್ತಿದ್ದರೆ ಹೇಂಗೆ ಬೇಕಾರೂ ಎರದು ಕೊಡುವ ಅಳಿಯಂಗಲ್ಲದೋ ಹೇಳಿತ್ತು ಪಾತಿ ಅತ್ತೆ ಆತೋ…..,

  3. ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೋ…
    ಏ ಅಣ್ಣೋ ಇದಾ ಅವನ ಹುಡುಕ್ಕಿಯೊಂಡು ಹೋಗಿ ಎಲ್ಲ ಪೂರೈಸ , ಹಶು ಅಪ್ಪಗ ಅವನೇ ಮನೆ ದಾರಿ ಹುಡುಕ್ಕಿಯೊಂಡು ಬಕ್ಕೂಹೇಳಿ ಕಾದು ಕೂಯಿದವಡ ಪಾತಿ-ಅತ್ತೆ……..

    1. ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೋ…

  4. ಪಾತಿ ಅತ್ತೆ ತೆಳ್ಳವು ಶೆಡಿಗುಮ್ಮೆ ಪುಳ್ಳಿ ತೆಕ್ಕೊಂಡು ಬಂದದಾ,
    ಬೈಲಿಂಗೆ ಸ್ವಾಗತ, ಬೈಲಿಂಗೆ ಸ್ವಾಗತ ||

    ಘಮ ಘಮ ಪರಿಮಳಂದ ಬಾಯಿಲ್ಲಿ ನೀರು ಬಂತಿದಾ,
    ತೆಳ್ಳವು ಲಾಯಕಿದ್ದು ಹೇಳಿ ಒಂದೊಪ್ಪ,ತೆಳ್ಳವು ಲಾಯಕಿದ್ದು ಹೇಳಿ ಒಂದೊಪ್ಪ||

    1. ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೋ…

  5. ಪಾತಿ ಅತ್ತೆಯ ತೆಳ್ಳವು ಪುರಾಣ ಲಾಯ್ಕಿದ್ದು ….

    1. ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೋ…..,

  6. ಬೆಲ್ಲ ಕಾಯಿಸುಳಿ, ತೆಳ್ಳವು ಒಳ್ಳೆ ಕಾಂಬಿನೇಶನ್ನು. ಶೇಡಿಗುಮ್ಮೆ ಪ್ರಸಾದನ ಪದ್ಯ ರೂಪದ ನೀರುದೋಸೆ ಪುರಾಣ ರುಚಿಯಾಗಿ ಇದ್ದತ್ತದ. ಬೈಲಿಂಗೆ ಸ್ವಾಗತ. ಕೊಡೆಯಾಲಲ್ಲಿಪ್ಪ ಶೇಡಿಗುಮ್ಮೆ ಪುಳ್ಳಿಯ ಒಂದಾರಿ ಮುಖತಾ ಭೇಟಿ ಆಯೇಕಾತಾನೆ, ಎಲ್ಲಿ ಕಾಂಬೊ ? ಈ ಸರ್ತಿ ಬೇಕಾರೆ ಮಸಾಲೆ ದೋಸೆ ಎನ್ನ ಲೆಕ್ಕಲ್ಲಿ. ಎಂತ ಹೇಳ್ತೆ ?

    1. ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೋ…..,
      ಏ ಮಾವಾ ನಮ್ಮ ಹುಡುಕ್ಕಲೆ ನಿಂಗೊಗೆ ಎಂತ ಕಷ್ಟ ಆಗ ಅಭಾವನೊಟ್ಟಿಂಗೇ ಇಕ್ಕು ಪ್ರಭಾವನುದೇ…
      ಇದಾ ಮಸಾಲೆ ದೋಸೆ ನವಗೆ ಒಂದುಸಾಲ ಹೊಟ್ಟೆ ತುಂಬ ತಿನುಸೆಕಕ್ಕು .ಹ್ಮ್ಮ್ಮ್

    1. ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೋ…..,
      ಏ ಉದಯಣ್ನೋ ಇದಾ ನಿಂಗೊ ಹೀಂಗೆ ಹೇಳೀರೆ ಹೇಂಗೆ? ನಮ್ಮ ಪಾತಿ ಅತ್ತೆ ಪಾಪ ಸೊಂಟ ಬೇನೆ ಹೇಳ್ತದು ತಿಂಗಳು ಎರಡಾತು, ಶೋಭಕ್ಕ ಬೇರೆ ಕರೆಂಟೂ ಸರಿಗಟ್ಟು ಕೊಡ್ತಿಲ್ಲೆ ,ಪಾಪ ಪಾತಿಅತ್ತೆ ತೆಳ್ಳವಿಂಗೆ ಕಡದ್ದದೇ ಕಷ್ಟಲ್ಲಿ ಅಡಾ, ಇಂದೊಂದು ದಿನ ಬೆಲ್ಲ ಕಾಯಿಸುಳಿಲೇ ಸುದಾರುಸಿಕ್ಕಿ ಆಗದೋ………?

    1. ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೋ…..,
      (ತೆಳ್ಳಾವು ಹೇಳುಗ ಬಾಯಿಲಿ ನೀರು ಬಂತಿದ) – ಅದಕ್ಕೇ ಆಯಿಕ್ಕು ಹಾಂಗಾರೆ ತೆಳ್ಳವಿನ ನೀರುದೋಸೆ ಹೇಳ್ತದು…..?

  7. ಬರ್ಲಿ ಬರ್ಲಿ. ಬೈಲಿಂಗೆ ಶುದ್ದಿಬರವಲೆ ನಮ್ಮೊಟ್ಟಿಂಗೆ ಸೇರಿದ ಪ್ರಸಾದಣ್ಣಂಗೆ ಹಾರ್ದಿಕ ಸ್ವಾಗತ. ಹೊಚ್ಚಹೊಸಬ ಹೇಳಿ ಅಲ್ಲದ್ರೂ ಇಷ್ಟನ್ನಾರ ಬೈಲಿಲಿ ಒಪ್ಪ ಮೂಲಕ ಬಾಕಿದ್ದವರ ಎಳ್ಪಲ್ಲಿ ಕಾಲುಬಲುಗಿ ಚೂಂಟಿ ಚೇಡಿಸಿಗೊಂಡಿತ್ತಿದ್ದಿ ಅಪ್ಪೊ!., ಬನ್ನಿ, ‘ಬಂದೆಯಾ, ಸಿಕ್ಕಿದೆಯಾ ಬಡಜೀವವೇ”.

    ಚುಟ್ಟಿಗಿಟ್ಳೆ ತೆಗದುಮಡುಗಿದ ಎಣ್ಣೆ ಸೌದಿಗೆ ಎರದ್ದೋ! ಹಾಂಗೆ ಹೇಳಿರೆ ಪಾತಿಆತ್ತಗೆ ಕೋಪಬಕ್ಕು ಹ್ಹಾ. ಹೊಗೆಹಿಡುದ ತೆಳ್ಳವೆಂತಕೆ ಮಸಾಲೆದೋಸೆಯೇ ಕೊಡುಸುತ್ತೆ ಹೇದು ಗೆಂಟುಮಾಣಿಯ ತಾಜುಮಹಲಿಂಗೆ ಕರಕೊಂಡು ಹೋಗಿ ಅವನತ್ರೇ ಬಿಲ್ಲು ಪಾವತಿ ಮಾಡಿಸಿದ್ದೀರಡ ನಿಂಗೊ ಮೊನ್ನೆ ಅಪ್ಪೊ. ಉಮ್ಮಾ ಪಾತಿಅತ್ತಗೆ ಶುದ್ದಿ ಮುಟ್ಟಿದ್ದು ಇದು! ಓಯಿ, ಪಾತಿಅತ್ತೆ ಸಟ್ಟುಗ ಕೈಲಿ ಹಿಡ್ಕೊಂಡು ನಿಂದರೆ ಗೆಂಟುಮಾಣಿ ಎದುರು ಬಕ್ಕೊ ಹು!

    ಹೋಗ್ಲಿ ಬಿಡಿ., ಪದ್ಯ ಪಷ್ಟಾಯ್ದು ಆತೊ. – ಒಪ್ಪ.

    1. ನಮ್ಮದೇ ದಾಟಿಲಿ ಸ್ವಾಗತ ಮಾಡಿದ ಭಾವಯ್ಯಂಗೆ ಧನ್ಯ ವಾದಂಗೊ,
      ( ಚುಟ್ಟಿಗಿಟ್ಳೆ ತೆಗದುಮಡುಗಿದ ಎಣ್ಣೆ ಸೌದಿಗೆ ಎರದ್ದೋ)- ಅದರ ಗೆಂಟುಮಾಣಿ ಹಟಲ್ಲಿ ತಟ್ಟಿ ಚೆಲ್ಲಿದ್ದಾಡ,
      (ಹೊಗೆಹಿಡುದ ತೆಳ್ಳವೆಂತಕೆ ) – ಒಂದುಸಣ್ಣ ತಿದ್ದುಪಡಿ- ಹೊಗೆ ಹಿಡುದ್ದದು ತೆಳ್ಳವಿಂಗಲ್ಲ ಭಾವ ಯಾರೋ ಮಾಣಿ ಎಂತೆಲ್ಲ ಮಾಡ್ತಾ ಹೇಳಿ ಬಾಗಿಲೆಡಕ್ಕಿಲಿ ನಿಂದು ನೋಡಿಗೊಂಡು ಇತ್ತಿದ್ದವಡಾ ಅವರ ಮೋರಗೆಹೇಳಿ ಯಾರೋ ಹೇಳಿದಾಂಗಾತು……..
      (ಹೋಗ್ಲಿ ಬಿಡಿ.,)-ಯಾರು ಗೆಂಟು ಮಾಣಿಯೋ…? ಚೆ ಹೀಂಗೆ ಹೇಳುಲೆ ಆಗ ಆತೋ…….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×