ನಮ್ಮ ಬೈಲದಾರಿಲಿ ಅವು ಮೂಲಕ್ಕೆತ್ತಿದವು!!!!

ಫೆಬ್ರವರಿ 25, 2011 ಕ್ಕೆ ನಮ್ಮ ಬೈಲಿಲಿ ಬಾಲಣ್ಣ ಕೆಲಸದ ಜಾಗೆಲಿ ಅವಕ್ಕೆ ಗುರ್ತ ಆದ ಈ. ಕೆ. ಪೋತಿ ಹೇಳುವವಕ್ಕೆ ಅವರ ಮೂಲವ ಹುಡ್ಕಿ ಕೊಡ್ಲೆ ಅಂದು ಒಂದು ಸರ್ತಿ ದಿನಿಗೆಳಿದವು. (ಹಳೆ ಶುದ್ದಿ ನೋಡಿ: ಇವರ ವ೦ಶಜರ ಮೂಲಕ್ಕೆ ಬಪ್ಪಲೆ .. ಸಹಾಯ .. !) ಬಾಲಣ್ಣನ ಸೊರಕ್ಕೆ ಸುಮಾರು ಜನ ಓಕೊಂಡವು!

ಹೊಸಮನೆ ಹೇಳಿ ಮನೆಯೂ, ಶಂಕರನಾರಾಯಣ ದೇವರೂ ಇಪ್ಪದು ಹೇಳುವಾಗ ಎಂಗಳ ಲಸ್ಕ್ರಿ ಮಠದ ಕೊಂಬೆಯವ್ವಾದಿಕ್ಕಾ ಹೇಳಿ ಅನಿಸಿ ಬಾಲಣ್ಣ ಕೊಟ್ಟ ನಂಬ್ರಕ್ಕೆ ಮಾತಾಡಿ ನಮ್ಮ ತರವಾಡಿಲಿ ನಿಂಗೊ ಹೇಳ್ತ ನಮುನೆಯ ಸಾಜ ಇದ್ದು. ಇಲ್ಲಿಗೆ ಬಂದು ಹೋಗಿ ಹೇಳಿ ನಾವೂ ಅವಕ್ಕೆ ಹೇಳಿಕೆ ಕೊಟ್ಟತ್ತು. ಕಾಣದ್ದ ಜಾಗಗೆ ಕಾಣದ್ದ ಜೆನಂಗೊ ಬಪ್ಪಲೆ ಹೇಳಿದರೆ ಒಂದರಿಯಂಗೇ ಆರುದೇ ಹೆರಡವು ಅಲ್ಲದಾ? ಅವಕ್ಕೂ ಹಲವು ತಾಪತ್ರಯಂಗೊ, ಕೆಲಸದ ತೆರಕ್ಕುಗೊ ಇತ್ಯಾದಿ ಆಗಿ ಅವು ಇತ್ಲಾಗಿ ಬಪ್ಪ ದಿನಂಗೊ ಮುಂದೆ, ಮುಂದೆ ಹೋತು. ಅಂದರೂ ಅಂಬಗಂಬಗ ಫೋನಿಲಿ ದಿನಿಗೆಳಿ ಮಾತಾಡ್ತದು ಇತ್ತು.

ಎಂಗಳ ಲಸ್ಕ್ರಿಕುಟುಂಬದ ಬಗ್ಗೆ, ಅದರ ಕವಲುಗಳ ಬಗ್ಗೆ ಸಿದ್ಧಮೂಲೆ ರವಿರಾಮ ‘ವಿಸ್ತಾರ’ ಹೇಳುವ ಒಂದು ತರವಾಡಿನ ಮನೆಗಳ, ಸಂಬಂಧಂಗಳ ಬಲೆ ನೇದುಗೊಂಡು ಇತ್ತಿದ್ದ°. ಅಂಬಗ ಅವಂಗೆ ತೆಂಕ್ಲಾಗಿ ನಮ್ಮವ್ವು ಇದ್ದವಡ್ಡ, ಅವರ ನಮ್ಮ ತರವಾಡಿಲಿ ಇಪ್ಪ ಕವಲಿಂಗೆ ಜೋಡ್ಸಿ ನೋಡ್ತ ಕೆಲಸ ಆಯೆಕ್ಕು ಹೇಳಿ ಅವನ ಹತ್ತರೆ ಹೇಳಿ ಅಪ್ಪಗ ಅವನೂ, ಹೊಸಮನೆ ಶಿವಪ್ರಸಾದನೂ ತೆಂಕ್ಲಾಗಿ ಗಾಡಿ ಹತ್ತಿಹೋಗಿ ಅಲ್ಲಿಯಾಣ ಜನಂಗಳ ಹತ್ತರೆ ಮಾತಾಡಿ ಒಂದು ಹಂತದ ವಿವರ ತೆಕ್ಕೊಂಡು ಬಂದವು. ಆರೋ ಬಂದು ನಿಂಗಳ ಕುಟುಂಬದವ್ವು ಹೇಳಿದರೆ ಕೂಡ್ಲೇ ಒಪ್ಪುಲೆ ಅವಕ್ಕೂ ಹೆದರಿಕೆಯೇ, ಪಾಪ! ಅಂತೂ ಸಿಕ್ಕಿದ ಮಾಹಿತಿಲಿ ‘ವಿಸ್ತಾರ’ಲ್ಲಿ ಅವರ ಬಗ್ಗೆಯೂ ಬಂತು.
ನಮ್ಮ ಮಠಲ್ಲಿ ಅಪ್ಪ ವಿಶೇಷಪರ್ವದಿನಂಗಳ ಹೇಳಿಕೆ ಅಂತೂ ಕೊಟ್ಟುಗೊಂಡು ಇತ್ತು. ಅವರ ಅನುಕೂಲಕ್ಕೆ ಅಪ್ಪಗ ಬರಲಿ ಹೇದು. ದಿನಂಗೊ ಒರಿಶಂಗೊ ಆದ್ದದೇ ಆತು. ತೆಂಕ್ಲಾಗಿಂದ ಇತ್ಲಾಗಿ ಬಪ್ಪ ಮುಹೂರ್ತವೇ ಬಯಿಂದಿಲ್ಲೆ!

ಒಂದು ಹದ್ನೈದು ದಿನ ಮೊದಲು ಪೋತಿಭಾವನ ಫೋನು ಬಂತು. “ಎಂಗೊ ನಾಳ್ದು 28ಕ್ಕೆ ನಿಂಗಳಲ್ಲಿಗೆ ಬತ್ತೆಯಾ°” ಹೇಳಿ. 29 ಕ್ಕೆ ಮಠಲ್ಲಿ ಪ್ರತಿಷ್ಠಾದಿನ ಇದ್ದಡ್ಡ ಅಲ್ಲದಾ, ಆ ದಿನ ಪೂಜೆಗೆ ಸೇರಿಗೊಂಡು ಪ್ರಸಾದ ತೆಕ್ಕೊಂಡು ವಾಪಾಸು ಬತ್ತೆಯಾ° ಹೇಳಿ. ಇಷ್ಟು ಒರಿಶಂದ ಮತ್ತೆ ‘ಎಂಗೊ ಬತ್ತೆಯಾ°’ ಹೇಳುವ ಶಬ್ಧ ಕೇಳಿ ಅಪ್ಪಗ ನಿಜವಾಗಿಯೂ ತುಂಬಾ ಕೊಶಿ ಆತು.
ನಿನ್ನೆ 28 ಕ್ಕೆ ಅವು ಹೇಳಿದ ಹಾಂಗೇ ಪೋತಿ ಭಾವನೂ, ಅಕ್ಕನೂ ಅವರ ದೊಡ್ಡಮಗನೂ ಕಾಸ್ರೋಡಿಂಗೆ ಬಂದವು. ಆದರೆ ಎನಗೆ ಬೇರೆ ತೆರಕ್ಕು ಬಂದ ಕಾರಣ ಅವರ ಒಟ್ಟಿಂಗೆ ಸೇರಿಗೊಂಬಲೆ ಎಡಿಗಾತಿಲ್ಲೆ. ಸಿದ್ಧಮೂಲೆ ರವಿರಾಮ ಅವರ ಬಗ್ಗೆ ಪೂರ್ಣಕಾಳಜಿ ತೆಕ್ಕೊಂಡು ಅವರಲ್ಲಿಗೆ ಹೋಗಿ, ಕಂಡು, ಮಠಕ್ಕೆ ಕರ್ಕೊಂಡು ಹೋದ°, ಪ್ರಸಾದ° ದೇವರ ಪ್ರಸಾದ ಕೊಟ್ಟ! 🙂

ಬೈಲಿನ ಲೆಕ್ಕಲ್ಲಿ ಅವರ ಹತ್ತರೆ ಆನು ಮಾತಾಡಿದ ಕಾರಣ ಅವಕ್ಕೆ ಎನ್ನ ಕಾಂಬ ಹಂಬಲ ಜೋರಿತ್ತು. ಆನು ಹೋಗದ್ದ ಕಾರಣ ಅವ್ವೇ ಪುತ್ತೂರಿಂಗೆ ಬತ್ತೆಯ ಹೇಳಿ ಹೆರಟವು. ಇಲ್ಲಿ ಬಂದು ಹೋಪದಾದರೆ ಪ್ರಯಾಣವೇ ಆಗಿ ಹೋಕು ಹೇಳಿ ರವಿರಾಮನ ಹತ್ತರೆ ಅಲ್ಲಿಯೇ ಅವಕ್ಕೆ ಜಾಗೆಗಳ ತೋರ್ಸಿ ಏರ್ಪಾಡು ಮಾಡ್ಲೆ ಹೇಳಿತ್ತು. ಆನು ಮರದಿನ ಬತ್ತೆ ಹೇಳಿ ಅವಕ್ಕೆ ಸಮಾಧಾನ ಮಾಡಿ ಆತು.
ಹಾಂಗೆ ಮತ್ತೆ ರವಿರಾಮನೂ, ಪ್ರಸಾದನೂ ಪೋತಿಭಾವನ ಅಪ್ಪ° ಗೋಡಾಕ್ಟ್ರ° ಆಗಿದ್ದ ಜಾಗೆ ತೋರ್ಸಿ ಅಂಬಗಾಣ ಕಾಲಲ್ಲಿ ಅವರ ನೋಡಿ ಪರಿಚಯ ಇದ್ದ ಒಬ್ಬ° ಮಾಷ್ಟ್ರಮನೆಗೆ ಕರ್ಕೊಂಡು ಹೋದವು. ರಾಮಐತಾಳ ಮಾಷ್ಟ್ರಜ್ಜಂಗೆ ಒರಿಶ ಎಂಬತ್ತು ದಾಂಟಿದರೂ ನೆನಪ್ಪು ನಲುವತ್ತರಲ್ಲಿತ್ತು! ಅಂಬಗಾಣ ಕಾಲದ ವಿವರ ಪೂರ ಕಣ್ಣಿಂಗೆ ಕಟ್ಟಿದ ಹಾಂಗೆ ಹೇಳಿ ಅಪ್ಪಗ ಪೋತಿ ಮನೆಯವಕ್ಕೆ ಕಣ್ಣಿಲಿ ನೀರು! ಕಣ್ಣುತುಂಬಿ ಮನಸ್ಸು ತುಂಬಿ ಅಜ್ಜನ ಆಶೀರ್ವಾದ ತೆಕ್ಕೊಂಡು ಕಣ್ಯಾರದ ಕಿಟ್ಟಪ್ಪನ ಕಂಡು ತುಂಬಾ ಕೊಶಿ ಪಟ್ಟವು.

ಬಿಚ್ಚುತ್ತಾ ಇಪ್ಪ ಐತಾಳಜ್ಜನ ನೆಂಪಿನ ಮಾಲೆ!

ಬಿಚ್ಚುತ್ತಾ ಇಪ್ಪ ಐತಾಳಜ್ಜನ ನೆಂಪಿನ ಮಾಲೆ!

ಇಂದು ಅನಂತಪುರಕ್ಕೆ ಹೋಗಿ ಮತ್ತೆ ಲಸ್ಕ್ರಿ ಮಠಕ್ಕೆ ಬಂದು ಎನ್ನ ಕಾದುಗೊಂಡು ಇತ್ತಿದ್ದವು! ಆನು ಪೋತಿಭಾವನ ಹತ್ತರೆ ಮಾತಾಡಿ ಅಪ್ಪಗ ತುಂಬಾ ಕೊಶಿ ಪಟ್ಟು ಮಾತಾಡಿದವು. ನಿಂಗಳಿಂದಾಗಿ ಎಂಗೊಗೆ ಮೂಲಕ್ಕೆ ಬಪ್ಪಲೆ ಎಡಿಗಾತು. ಒಪ್ಪಣ್ಣನ ಬೈಲು ತುಂಬಾ ಲಾಯ್ಕ ಕೆಲಸ ಮಾಡಿತ್ತು ಹೇಳಿ ಹೇಳಿದವು ಅಭಿಮಾನಲ್ಲಿ. ಬಾಲಣ್ಣನನ್ನೂ ತುಂಬಾ ನೆಂಪು ಮಾಡಿಗೊಂಡವು.
ಎಲ್ಲ ದೇವರಚಿತ್ತ! ನಾವೆಲ್ಲ ನಿಮಿತ್ತಮಾತ್ರ ಅಲ್ಲದಾ? ಸಮಯ ಬಂದಪ್ಪಗ ನಿಂಗೊ ಶಂಕರನಾರಾಯಣಸನ್ನಿಧಿಗೆ ಬಪ್ಪ ಹಾಂಗೆ ಆಯಿದು ಹೇಳಿದೆ.
ಸಮಯ ಕೂಡಿ ಬಪ್ಪದು ಹೇಳಿದರೆ ಹೀಂಗೇ ಅಲ್ಲದಾ?
2011 ರಿಂದ 2018 ರವರೆಗೆ ಇಪ್ಪ ಏಳೊರಿಶ ಆತು ಅವ್ವು ಮೂಲಕ್ಕೆ ಬಪ್ಪಲೆ. ಅವರ ಸಮಯ ಆಗಿದ್ದಿದ್ದರೆ ಅಂಬಗಳೇ ಬಂದು ಹೋಗಿ ಆವುತ್ತಿತ್ತು. ಅಂಬಗ ಅದೂ ದೈವಾನುಗ್ರಹ ಅಲ್ಲದೋ? ಎಲ್ಲವೂ ಅವನ ಮನಸ್ಸಿಂಗೆ ಬೇಕಾದ ಹಾಂಗೆ ನೆಡವದು. ನಾವು ನಿಮಿತ್ತಮಾತ್ರ!

ಇಂದು ಪೋತಿಕುಟುಂಬ ವಾಪಾಸು ಅವರ ಊರಿಂಗೆ ಹೋಪಹೊತ್ತಿಲಿ ಅವರ ಕಣ್ಣೂ, ಮನಸ್ಸೂ ಎರಡೂ ತುಂಬಿ ಬಂದಿದ್ದತ್ತು ಹಾಂಗೇ ನಮ್ಮದೂ. ಪ್ರತ್ಯೇಕ ಪ್ರತ್ಯೇಕ ಎಲ್ಲೋರಿಂಗೂ ಧನ್ಯವಾದ ಹೇಳಿದವು. ಬೈಲಿಂಗೂ ಕೂಡಾ. ಅಕ್ಷರಸೇವೆಗೆ ಹೇಳಿ ತೊಡಗಿಸಿದ ಒಂದು ಬೈಲಿಂದಾಗಿ ಒಂದು ಕುಟುಂಬ ತರವಾಡಿನ ಬಾಗಿಲಿಂಗೆ ಬಂದು ಒಳಹೊಕ್ಕುಲೆ ಎಡಿಗಾತು ಹೇಳಿದರೆ ಎಂಥಾ ಸಾರ್ಥಕ್ಯದ ಭಾವ!
ಬೈಲಿನ ಬಾಲಣ್ಣ ತೆಂಕ್ಲಾಗಿ ಒಂದು ಮೂಲೆಲಿ ಇದ್ದ ಪೋತಿಭಾವನ ಸೊರಕ್ಕೆ ಒತ್ತುಕೊಟ್ಟು ಬೈಲಿಲಿ ಅದರ ಕೇಳ್ಸದ್ದೆ ಇದ್ದಿದ್ದರೆ ಈ ಬಂಧ ಗಟ್ಟಿಅಪ್ಪಲೆ ಇತ್ತೋ? ಬಾಲಣ್ಣಂಗೆ ಮನಸ್ಸು ತುಂಬಿದ ಧನ್ಯವಾದಂಗೊ.
ಬಾಲಣ್ಣ, ಮಕ್ಕಳ ಅಬ್ಬೆಯ ಹತ್ರಂಗೆ ಸೇರ್ಸಿದ ಪುಣ್ಯ ನಿಂಗೊಗೆ ಬರಲಿ..
ಬಂಧ ಗಟ್ಟಿ ಅಪ್ಪಲೆ ಸಕಾಯಿ ಆದ ಬೈಲಿನ ಬಂಧಂಗೊ ಬೆಳದು ಗಟ್ಟಿ ಆಗಲಿ..
ಪೋತಿಕುಟುಂಬಕ್ಕೂ ಶಂಕರನಾರಾಯಣದೇವರ ಅನುಗ್ರಹರಕ್ಷೆ ಸಿಕ್ಕಿ ಅವು ಇನ್ನೂ ಗಟ್ಟಿಆಗಿ ನೆಲೆನಿಂಬ ಹಾಂಗೆ ಆಗಲಿ..

~
ಪಟಂಗೊ:
ರವಿರಾಮ ಸಿದ್ಧಮೂಲೆ
ಕಾರ್ತಿಕ ಸಿದ್ಧಮೂಲೆ

ಶ್ರೀಅಕ್ಕ°

   

You may also like...

2 Responses

  1. ಬೊಳುಂಬು ಗೋಪಾಲ says:

    ವಿಷಯ ಕೇಳಿ ಖುಷಿಯಾತು. ಮೂಲದ ಮೂಲೆಗೆ ಬಂದಪ್ಪಗ ಅವಕ್ಕೆಷ್ಟು ಕೊಶಿಯಾಗಿಕ್ಕು. ಪಟಂಗಳೂ ಲಾಯಕಿದ್ದು.

  2. ತೆಂಕ್ಲಾಗಿ ನಮ್ಮವು ಸುಮಾರು ಜನ ಇದ್ದವು. ಅಲ್ಲಿ ನಮ್ಮವರ ಎಂಬ್ರಾದ್ರಿ ಹೇದು ಹೇಳ್ತವು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *