ಮುಜುಂಗಾವು : ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣಗಳ ಕೊಡುಗೆ

ಕುಂಬಳೆ:

“ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಲಿಕೆಲಿ ಅನ್ಯರ ಸಹಕಾರ ಹೆಚ್ಚು ಅಪೇಕ್ಷಣೀಯ. ಬಡ ವಿದ್ಯಾರ್ಥಿಗೊಕ್ಕೆ ಕಲಿಕೆಯ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಸ್ವಯಂಸೇವಾ ಸಂಸ್ಥೆಗೊ ಸಹಕಾರಿ ಆಯೇಕು. ದೇವರ ಭಯವೇ ಜ್ಞಾನದ ಆರಂಭವಾದ್ಸರಿಂದ ಜನತಾ ಜನಾರ್ದನರ ಸೇವೆ ಈ ನಿಟ್ಟಿಲಿ ಅಗತ್ಯ. ಪರಿಣಾಮವಾಗಿ ಸಮಾಜದ ಬೆಣಚ್ಚಿಲಿ ಬೆಳವ ವಿದ್ಯಾರ್ಥಿಗೊ ಹೆಚ್ಚು ಪ್ರಗತಿ ಹೊಂದೇಕು,  ತನ್ಮೂಲಕ ಸಹಕರಿಸಿದ ಸಂಸ್ಥೆಗೊಕ್ಕೆ ಕೀರ್ತಿ ತರೇಕು” – ಹೇದು ನಿವೃತ್ತ ಕನ್ನಡ ಪ್ರಾಧ್ಯಾಪಕರೂ, ಬೈಲಿನ “ಉಡುಪಮೂಲೆ ಅಪ್ಪಚ್ಚಿ“ಯೂ ಆದ ಉಡುಪುಮೂಲೆ ರಘುರಾಮ ಭಟ್ ಹೇಳಿದವು.
ಹವ್ಯಕ ಭಾಷೆಯ ಬೆಳವಣಿಗೆಗಾಗಿ ಅಂತರ್ಜಾಲಲ್ಲಿ ರೂಪುಗೊಂಡ ಒಪ್ಪಣ್ಣ ಡಾಟ್ ಕಾಮ್, ನ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ವಿದ್ಯಾರ್ಥಿಗೊಕ್ಕೆ ಕೊಡಮಾಡಿದ ಕಲಿಕೋಪಕರಣಂಗಳ ವಿತರಣೆ ಮತ್ತೆ ತಿಂಗಳ ’ಪ್ರತಿಭಾ ಭಾರತೀ’ ಕಾರ್ಯಕ್ರಮಲ್ಲಿ ಮುಖ್ಯ ಅತಿಥಿಗೊ ಆಗಿ ಭಾಗವಹಿಸಿ ಮಾತಾಡಿದವು.

ವಿದ್ಯಾರ್ಥಿ ಆದಿತ್ಯ ಶರವಣ ಹಿಳ್ಳೆಮನೆ ಸಮಾರಂಭದ ಅಧ್ಯಕ್ಷತೆ ವಹಿಸಿತ್ತಿದ್ದವು. ಪಿ.ಕೃಷ್ಣ ಭಟ್ ಕುಂಚಿನಡ್ಕ, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಸದಸ್ಯೆ, ಭರತನಾಟ್ಯ ಕಲಾವಿದೆ ಅನುಪಮಕ್ಕ ಉಡುಪುಮೂಲೆ, ಪ್ರಖ್ಯಾತ ಛಾಯಾಗ್ರಾಹಕ ಬೈಲಿನ ಹಳೆಮನೆಅಣ್ಣ – ಹರೀಶ್ ಹಳೆಮನೆ, ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಮಣ್ಣ – ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿತ್ತಿದ್ದವು.
ವಿದ್ಯಾರ್ಥಿಗಳಾದ – ಶ್ರೀಜಾ ಗಿರೀಶ್ ವರದಿ ಓದಿದವು; ಸಂಯುಕ್ತ.ಎಂ ಸ್ವಾಗತಿಸಿದವು,  ವಿಕ್ರಮ್ ವಂದನಾರ್ಪಣೆ ಮಾಡಿದವು.
ರೇಶ್ಮಾ ರಾಮಚಂದ್ರ & ತೀಕ್ಷಾ – ಕಾರ್ಯಕ್ರಮ ನಿರೂಪಣೆ ಮಾಡಿದವು.

ಕಾರ್ಯಕ್ರಮದ ಫೋಟೋ
ಕೃಪೆ: ಹಳೆಮನೆ ಅಣ್ಣ (ಹರೀಶ್ ಹಳೆಮನೆ)

 

ಕಾರ್ಯಕ್ರಮದ ಮಾಧ್ಯಮ ವರದಿಗೊ:

 

ದೊಡ್ಡಭಾವ

   

You may also like...

1 Response

  1. ವಾಹ್ ಒಳ್ಳೆ ಶುದ್ದಿ ಧನ್ಯವಾದ ದೊಡ್ಡ ಭಾವಂಗೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *