Oppanna.com

ಪುಳ್ಕೂರು ಜಾತ್ರೆಯ ತಿಡಂಬುನೃತ್ಯ

ಬರದೋರು :   ದೊಡ್ಡಭಾವ°    on   23/02/2011    11 ಒಪ್ಪಂಗೊ

ಯಬ್ಬ,ಬಚಾವ್…
ತಿಂಗಳು ಒಂದು ಕಳುದು ನಾಕು ದಿನ ಆತು. ಒಂದು ವೀಡ್ಯ ಸಿಕ್ಕೆಕ್ಕಾರೆ.

ನಮ್ಮ ವೀಡ್ಯದವರ ಕಥೆಯೇ ಹಾಂಗಲ್ಲದೋ, ಭಾವಾ…
ಮದುವೆ ಕಳುದು ಕೂಸು ಹೆರ್ಲೆ ಅಪ್ಪನ ಮನಗೆ ಹೋಪಗ ಮದುವೆಯ ವೀಡ್ಯ ಸಿಕ್ಕುಗು’ ಹೇಳುಗು ಆರೋಳಿ ಭಾವ°.
ಈ ಕಥೆಯೂ ಹಾಂಗೆಯೇ ಆತು. ಜಾತ್ರೆ ಕಳುದು ಇಷ್ಟು ದಿನ ಕಾಯೇಕಾಗಿ ಬಂತು, ಹೆಸರೆಲ್ಲ ಬರದ ಎರಡು ವೀಡ್ಯ ನವಗೆ ಸಿಕ್ಕುಲೆ…!
ಮದಾಲಿಂಗೆ ನಾವುದೇ ಅರ್ಜೆಂಟಿಲ್ಲೆ ಭಾವಾ, ನಿಂಗಳ ಪುರುಸೋತ್ತಿಂಗೆ ಕೊಟ್ಟರೆ ಸಾಕು ಹೇಳಿ ನೋಡಿ ಆತು. ಹಾಂಗಾಗಿಯೋ ಏನೋ ಇಷ್ಟು ತಡವಾದ್ಸು.
ಆದರೆ ಬೈಲಿಲ್ಲಿ ಎಡನೀರು ವಿಷ್ಣುಮಂಗಲ ದೇವರ ಬಲಿ ನೋಡಿ ಸುಮಾರು ಜೆನಕ್ಕೆ ತಿಡಂಬು ಹೇದರೆ ಎಂತರ ಹೇಳಿ ಗೊಂತಾಯಿದು.

~

ತಿಡಂಬು ಹೇಳಿರೆ ದೇವರ ಪೀಠ, ಅಷ್ಟೆ.
ಅದರ ಹೊತ್ತೊಂಡು ಕೊಣಿವಗ ಐದು ಸ್ಟೆಪ್ಪು ಇದ್ದು ಹೇಳುಗು ಪಯದ ವಿಶ್ವನಾಥಣ್ಣ.
ಕೊಟ್ಟಿ ಉರಯ್ಕಲ್, ತಗಿಲಡಿ, ಅಡಂದ, ಚೆಂಬಡ, ಪಂಜಾರಿ ಹೇಳಿ ಐದು.

ಹಾಂಗಾಗಿ ಮಾರಾರುಗೊಕ್ಕೆ ಉದಾಸಿನ ಮಾಡಿಕ್ಕಲೆ ಗೊಂತಿಲ್ಲೆ.
ಚೆಂಡೆಗೆ ಸರೀ ಪೆಟ್ಟು ಬೀಳದ್ದೆ ಇಪ್ಪಲೆಡಿಯ.
ದೊಡ್ಡಜ್ಜನ ಮನಗೆ ಬಪ್ಪ ‘ಮಾಡಮನ’ ಈ ತಿಡಂಬು ಹೊತ್ತೊಂಡು ಬಲಿ ಬಸ್ಸರಲ್ಲಿ ಒಳ್ಳೆ ಹೆಸರು ಪಡಕ್ಕೊಂಡಿದವು. ಉತ್ತರ ಕೇರಳಲ್ಲಿ ಇಪ್ಪ ವಿಶೇಷವಾದ ದೇವರ ಬಲಿ ಕ್ರಮ ಇದು.

~

ದೊಡ್ಡಭಾವನೂ ಒಪ್ಪಣ್ಣನೂ ಕುಂಬ್ಳೆ ಜಾತ್ರೆಗೆ ಹೋದ ಶುದ್ದಿ ನಾವು ಓದಿದ್ದು ಬೈಲಿಲ್ಲಿ, ನಿಂಗೊಗೆ ನೆಂಪಿಕ್ಕು, ಅಲ್ದೋ..? (ಸಂಕೊಲೆ)
ಐದು ದಿನಾಣ ಜಾತ್ರೆಲಿ ಮೂರು ದಿನ ನಾವು ಹೋಗಿ ದೇವರ ಹಿಂದಂದ ನಿಂದೊಂಡಿದು. ಆ ಜಾತ್ರೆಗಳ ಕಳುದು ಮನಗೆ ಎತ್ತುವಗ ಯೇವಾಗಲೂ ಗಂಟೆ 3 ಆಗಿಯೋಂಡಿದ್ದತ್ತು…!

~

ಬೆಡಿಯ ದಿನ ಸಂತೆಗೆದ್ದೆಲಿ ಪೂರಾ ಬ್ಯಾರಿಗಳೇ ತುಂಬಿಗೊಂಡಿರ್ತ ಕ್ರಮ.
ಹಾಂಗಾಗಿ ನಾವು ಪದ್ಯ ಹೇಳಿಯೋಂಡು ಕೊಣಿಸ್ಸರ ನೋಡ್ಲೆ ಹೋಪಲಿಲ್ಲೆ. ಸಾಲದ್ಸಕ್ಕೆ ಈ ಸರ್ತಿ ಯೆಜಮಾಂತಿಯೂ, ಮಗನೂ ಒಟ್ಟಿಂಗೆ ಇತ್ತಿದ್ದ ಕಾರಣ ನಾವು ಆ ಹೊಡೇಂಗೆ ಹೋಯಿದಿಲ್ಲೆ…!
ಹಾಂಗಾಗಿ ಅಖೇರಿಯಾಣ ಆರಾಟಿನ ದಿನ, ನಮ್ಮ ಕುಂಬ್ಳೆಅಜ್ಜನ ಮನೆಯ ಹತ್ತರೆಯೇ, ದೇವರು ಹೋಪ ದಾರಿಲಿ ಹೇಳ್ತ ಸಿನೆಮಾ ಪದ್ಯಂಗಳ ಕೇಳುಲೆ ಹೋಪದು ನಮ್ಮ ಕ್ರಮ.
ಒಟ್ಟಿಂಗೆ ಆರಾರು ಸಿಕ್ಕುತ್ತವು, ಸೀತಾಂಗೋಳಿ ಮಹೇಶಣ್ಣನೋ, ಎಯ್ಯೂರಣ್ಣನೋ ಮಣ್ಣ…

~

ಅಂದು ಆರಾಟಿನ ದಿನವೂ ಹೀಂಗೇಯೇ ಆತು,
ಎಯ್ಯೂರಣ್ಣ ಇರುಳು ಹತ್ತು ಗಂಟೆ ಆಯೆಕ್ಕಾರೆ ಮನಗೆ ಬಂದ°.
ನಮ್ಮ ಗಾಡಿ ಹೆರಟತ್ತು, ಕುಂಬ್ಳೆಗೆ…
ದೇವರು ಕಣ್ಯಾರಂದ ಹೆರಟು ಡಾಕ್ಟ್ರು ಶಂಭಟ್ರ ಹಿತ್ತಿಲಿಂಗೆ ಎತ್ತಿಯಪ್ಪಗ, ಇನ್ನು ನಾವು ಪುಳ್ಕೂರಿಂಗೆ ಹೋಪೊ° ಹೇದ ಎಯ್ಯೂರಣ್ಣ.
ಅವ ಹೀಂಗಿರ್ಸರ ಎಲ್ಲ ಹೇದರೆ ನಾವು ಆಗ ಹೇಳುವ ಕ್ರಮ ಇಲ್ಲೆ. ಹಾಂಗೆ ನಾವು ಅಲ್ಲಿಂದ ಹೆರಟತ್ತು, ಪುಳ್ಕೂರಿಂಗೆ…

~

ಪುಳ್ಕೂರು ಹೇದರೆ ನವಗೆಲ್ಲ ಮೊದಾಲು ನೆಂಪಪ್ಪದು ಪುಳ್ಕೂರು ಬಾಚ°.
ಶಾಲೆ ಮಕ್ಕಳ ಪುಸ್ತಕಲ್ಲಿ ಈಗಳೂ ಬಾಚನ ಕಥೆ ಇರ್ತು.
ಪುಳ್ಕೂರು ದೇವಸ್ಥಾನದ ಕರೇಲಿ ಬಾಚ° ಹೊತ್ತು ತಂದು ಹಾಕಿದ ಕಲ್ಲುದೇ ಕಾಣ್ತು. ನಮ್ಮ ಹಾಂಗಿರ್ತವರಿಂದ ಅದರ ಹಂದುಸಿಕ್ಕುಲೆಡಿಯ.

~

ಮರತ್ತು ಹೋದ ಕಥೆಯ ಹಳೆಮನೆ ಅಣ್ಣ ನೆಂಪು ಮಾಡಿ ಕೊಟ್ಟ°.

ಒಂದಾರಿ ಒಂದು ಜಗಜಟ್ಟಿ ಮಾಯಿಪ್ಪಾಡಿ ಅರಮನೆಗೆ ಬಂತಡ.
ಹಂತಿಲಿ ಉಂಬಲೆ ಕೂದ ಮನುಷ್ಯ ಬಾಳಗೆ ಎಣ್ಣೆ ಬರಲಿ ಹೇಳಿತ್ತಡ.ಎಲ್ಲೋರು ಮೋರೆ ಮೋರೆ ನೋಡಿಯೊಂಡವು, ಸಂಗತಿ ಎಂತರ ಹೇಳಿರೆ ಒಳ ಎಣ್ಣೆ ಮುಗುದ್ದು.
ಜಟ್ಟಿಗೆ ಅದು ಅಂದಾಜಿ ಆತು. ದೊಡ್ಡ ಜೆನ ಅಪ್ಪಲೆ ಬೇಕಾಗಿ, ಹಾಂಗಾರೆ ಕೊಪ್ಪರವೇ ಬರಲಿ ಹೇಳಿ ನೋಡಿತ್ತಡ.

ಕೊಪ್ಪರವ ತಂದ್ಸು ಅರಮನೆಲಿ ಇದ್ದಿದ್ದ ಬಾಚ°. ಕೈಲಿದ್ದ ಕೊಪ್ಪರವ ಹಿಂಡಿ ಎಣ್ಣೆಯ ಜಟ್ಟಿಯ ಬಾಳಗೆ ಬೀಳುಸಿಕ್ಕಿ ವಾಪಾಸ್ ಹೋತಡ. ಇದರ ಕಣ್ಣಾರೆ ಕಂಡ ಜಟ್ಟಿಗೆ ಇರುಳು ಒರಕ್ಕೇ ಬಾರದ್ದ ಕಾರಣ, ನೆಡು ಇರುಳೇ ಆ ಊರಿಂದ ಪದ್ರಾಡು ಹೆಟ್ಟಿತ್ತು
– ಹೇಳಿ ಕಥೆ.

ಮಾಯಿಪ್ಪಾಡಿ ಹೊಳೆದಾಂಟಿರೆ ಶಿರಿಬಾಗಿಲು,ಅಲ್ಲಿಂದ ಬಲತ್ತಿಂಗೆ ತಿರುಗಿರೆ ಪುಳ್ಕೂರು,ಅದೇ ಹೊಳೆಯ ಕರೇಲಿ ಇಪ್ಪ ದೇವಸ್ಥಾನ.
ಮಹಾದೇವ° ಅಲ್ಲಿಯಾಣ ದೇವರು. ದೇವಸ್ಥಾನದ ಸುತ್ತಲೂ ಕಿರಿಕಿರಿ ಮಾಡುವ ಬ್ಯಾರಿಗಳೇ ತುಂಬಿದ್ದರೂ, ಒಳುದ ಶೂದ್ರುಗೊ ಭಕ್ತಿಲಿ ದೇವಸ್ಥಾನಕ್ಕೆ ‘ನೆಡಕ್ಕೊಂಡು’ ಬತ್ತಾ ಇದ್ದವು.
ಒಳಾಣ ಕೆಲಸದ ಮಟ್ಟಿಂಗೆ ನೆರೆಕರೆಯ ನಾಕು ಜೆನ ಹೊಳ್ಳಂಗೊ ಸಿಕ್ಕುತ್ತವು ಹೇಳ್ತ ನೀರಾಳ ನರಸಿಂಹಣ್ಣ. ಅವ°, ಎಯ್ಯೂರಣ್ಣನ ಒಟ್ಟಿಂಗೆ ಅಡಿಗ್ಗೆ ಹೋಪ ಕಾರಣ ಅವಕ್ಕೆ ಭಾರೀ ಫ್ರೆಂಡುಶಿಪ್ಪು.

ಹೇಳಿದಾಂಗೆ, ಈ ವೀಡ್ಯವ ತೆಗೆಶಿ ನವಗೆ ಕೊಟ್ಟದೂ ಅವನೇ.

ಪುಳ್ಕೂರು ಜಾತ್ರೆಯ ತಿಡಂಬು ನೃತ್ಯದ ವಿಡಿಯೊ ಇಲ್ಲಿದ್ದು:

ಭಾಗ – 1

ಭಾಗ – 2

11 thoughts on “ಪುಳ್ಕೂರು ಜಾತ್ರೆಯ ತಿಡಂಬುನೃತ್ಯ

  1. ತಿಡಂಬು ನೃತ್ಯವ ನೋಡಿ ಒಪ್ಪ ಕೊಡದ್ರೆ ಹೇಂಗೆ ? ಮನ್ನೆ ವಿಡಿಯೋ ನೋಡಿ ಅಪ್ಪಗಳೇ ಗ್ರೇಶಿದ್ದಿದ್ದೆ , ಒಪ್ಪ ಕೊಡೆಕು ಹೇಳಿ. ದೇವರ ಹೊತ್ತೊಂಡು ಹೀಂಗ್ರುತ್ತ ನೃತ್ಯವ ಮಾಡಿದ್ದರ ನೋಡಿದ್ದು ಈಗಳೇ. ಲಯಕ್ಕೆ ಕೊಣಿತ್ತದು ಲಾಯಕಾಯಿದು. (ಕೂಸು ಹೆರ್ಲೆ ಅಪ್ಪಗ ಆದರು) ವಿಡಿಯೋ ಒದಗುಸಿ ಕೊಟ್ಟ ದೊಡ್ಡ ಭಾವಂಗೆ ಧನ್ಯವಾದಂಗೊ.

  2. {`ಮದುವೆ ಕಳುದು ಕೂಸು ಹೆರ್ಲೆ ಅಪ್ಪನ ಮನಗೆ ಹೋಪಗ ಮದುವೆಯ ವೀಡ್ಯ ಸಿಕ್ಕುಗು’}
    ಮತ್ತೂ ಮತ್ತೂ ಹಾಂಗಿಪ್ಪವಕ್ಕೇ ವೀಡ್ಯ ಮಾಡ್ಲೆ ಕೊಡುದು ಎಂತಕ್ಕೆ? 😉

  3. ಹ್ಞಾ.. ಜಗಜಟ್ಟಿ ಬಾಚನ ಕತೆ ಎಂಗೊಗೆ ಆರ್ನೆಲಿಯೋ ಏಳ್ನೆಲಿಯೋ ಪಾಠಕ್ಕೆ ಇತ್ತು.
    ಭಾವಯ್ಯ, ಇದಾ ಮಾಡಮನೆ ಶಂಕರನ್ ಎಂಬ್ರಾಂದಿರಿ ದೇವರ ಹೊರ್ಸ್ಸು ನೋಡೆಕ್ಕಾರೆ ನಾಳಂಗೆ ಶಾಲೆ ಬಿಟ್ಟ ಕೂಡ್ಲೆ ದೊಡ್ಡಜ್ಜನ ಮನೆ ಹೊಡೆಂಗೆ ಬೈಕು ತಿರುಗುಸಿ. ಪಲ್ಲಿಪ್ಪಳ್ಳಿ ಆಯನ ನಾಳೆಯೇ!

  4. ಸಂಶಯವೇ ಇಲ್ಲೆ,ಅದು ಚೆಂಡೆಯ ತಾಳಂಗಳೇ. ದೇವರ ಹೊರ್ತವಕ್ಕೆ ಕೊಣಿವಲೆ ಅದುವೇ ತಾಳಂಗೊ ಬೇಕಾದ ಕಾರಣ, ವಿಶ್ವನಾಥಣ್ಣ ಹಾಂಗೆ ಹೇಳಿದ್ಸಾಯಿಕ್ಕು. ಚೆಂಡೆಯ ತಾಳಂಗೊ ಬದಲಿದ ಹಾಂಗೆ ಇವರ ಹೆಜ್ಜೆಗಳೂ ಬದಲೇಕನ್ನೆ.

  5. {ಅದರ ಹೊತ್ತೊಂಡು ಕೊಣಿವಗ ಐದು ಸ್ಟೆಪ್ಪು ಇದ್ದು ಹೇಳುಗು ಪಯದ ವಿಶ್ವನಾಥಣ್ಣ.
    ಕೊಟ್ಟಿ ಉರಯ್ಕಲ್, ತಗಿಲಡಿ, ಅಡಂದ, ಚೆಂಬಡ, ಪಂಜಾರಿ ಹೇಳಿ ಐದು…}

    ದೊಡ್ಡ ಭಾವಾ.. ಈ ಐದು ನೃತ್ಯದ ಸ್ಟೆಪ್ಪುಗಳೋ ಅಥವಾ ಚೆ೦ಡೆ ಮೇಳದ ತಾಳ / ಶೈಲಿಗಳೋ.. ಇದು ಚೆ೦ಡೆ ಮೇಳದ ತಾಳದ ಶೈಲಿಗೊ ಹೇಳಿ ಎಲ್ಲಿಯೋ ಕೇಳಿದ ನೆ೦ಪು…

  6. ನೋಡ್ಲೆ ಚೆಂದ ಇದ್ದಪ್ಪೋ. ಇನ್ನಾಣದ್ದು ಎಲ್ಲಿ ?

    ಎಂಗಳಲ್ಲಿ ಇಲ್ಲೆ ಆತೋ.!

  7. {‘ಮದುವೆ ಕಳುದು ಕೂಸು ಹೆರ್ಲೆ ಅಪ್ಪನ ಮನಗೆ ಹೋಪಗ ಮದುವೆಯ ವೀಡ್ಯ ಸಿಕ್ಕುಗು’}
    ಅಷ್ಟು ಪಕ್ಕ ಹೆರ್ಲೆ ಕಳುಸಿದ್ದು ಹೇ೦ಗೆ ದೊಡ್ಡಭಾವ?

    1. ಡಾಕ್ಟ್ರು ಅಯ್ಯಾ ., ಈಗೆಲ್ಲಾ ಫಾಸ್ಟ್ ಅಂಡ್ ಶಾರ್ಟ್.

      ನಾಂದಿ ಮಾಡುವೆ ಚತುರ್ಥಿ ಸಟ್ಟುಮುಡಿ ದಿಂಡು ಕೋಡಿ ಎಲ್ಲಾ ಒಂದೇ ದಿನಲ್ಲ್ಲಿ ಮುಗಿಯೇಕ್ಕಡ

    2. ಡಾಕ್ಟೇ, ನಿಂಗೊ ಲೇಟು ಮಾಡುವ ಆಲೋಚನೆ ಇದ್ದು ಹೇಳಿ ಎಲ್ಲೋರೂ ಹಾಂಗೆ ಮಾಡೇಕು ಹೇಳಿ ಇಲ್ಲೆನ್ನೆ. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×