Oppanna.com

ಪುಳ್ಳಿಯ ನೋಡಿಕ್ಕಿ ಕುಂಬ್ಳೆಜ್ಜ° ಹೋದವು.. :-(

ಬರದೋರು :   ಶ್ರೀಅಕ್ಕ°    on   03/01/2014    18 ಒಪ್ಪಂಗೊ

ನಾವು ಈ ಭೂಮಿಲಿ ಹುಟ್ಟಿ ಬಪ್ಪಗಳೇ ಹೋಪ ದಿನವೂ ನಿಗಂಟು ಆಗಿರ್ತು ಹೇಳ್ತವು. ಇಡೀ ಜೀವಮಾನ ನಾವು ಎಂತ ಮಾಡ್ತೋ ಅದರ ಪುಣ್ಯವ ನಾವು ಹೋಪಗ ತೆಕ್ಕೊಂಡು ಹೋವುತ್ತು, ನಮ್ಮ ಬದುಕಿಲಿ ಮಾಡಿದ ಕೆಲಸಂಗ ಮಾಂತ್ರ ಇಲ್ಲಿ ಒಳಿತ್ತು. ಬೈಲಿನ ಹುಟ್ಟಿದ ದಿನದ ಆಚರಣೆ, ಬೈಲಿನ ಬದಲಾವಣೆಯ ಹೊಂದಾಣಿಕೆಯ ಎಡೆಲಿ ನಾವು ಕೊಶೀಲಿ ಕೂಡಿ ಮಾತಾಡಿಗೊಂಡಿಪ್ಪಗ ಸುಭಗಣ್ಣನ ಸಮೋಸ ಸೆಡ್ಲು ಬಡುದ ಹಾಂಗೆ ಬಂತದಾ ನಿನ್ನೆ ಇರುಳಿಂಗೆ! – “ಬೈಲಿಂಗೆ ಒಂದು ದುಃಖಕರ ಶುದ್ದಿ – ಕುಂಬ್ಳೆಜ್ಜ° ಹೋದವು” ಹೇಳಿ!!
ಸಮೋಸಲ್ಲಿ ಬಂದ ವಿಷಯವ ಒಪ್ಪಿಗೊಂಬಲೆ ಮನಸ್ಸು ಕೇಳಿದ್ದಿಲ್ಲೆ, ಎಂತಕೆ ಹೇಳಿದರೆ ಕುಂಬ್ಳೆಜ್ಜಂಗೆ ಸಾವ ಪ್ರಾಯ ಅಲ್ಲ, ಎಂತ ಅಸೌಖ್ಯ ಇತ್ತಿಲ್ಲೆ. ಅರುವತ್ತು ಸಂವತ್ಸರದ ಚಕ್ರ ಮುಗಿಶಿ ಎರಡೋ ಮೂರೋ ಸಂವತ್ಸರ ಆಗಿಯೂ ಗಟ್ಟಿ ಜವ್ವನಿಗನ ಹಾಂಗೆ ಇದ್ದ ನೆಗೆಮೋರೆಯ ಕುಂಬ್ಳೆಜ್ಜ° ಇನ್ನು ಇಲ್ಲೆ ಹೇಳಿದರೆ ಆರು ನಂಬುಗು? ವಿವರ ಗೊಂತಪ್ಪಲೆ ಸುಮಾರು ಫೋನಾಯಿಸಿತ್ತು. ಕುಂಬ್ಳೆಜ್ಜನ ದೊಡ್ಡ ಅಳಿಯ°, ನಮ್ಮ ಮಾಮಾಸಮ ಶುದ್ದಿ ಕೇಳಿ ಊರಿಂಗೆ ಹೆರಡ್ತ ಗಡಿಬಿಡಿಲಿ ಇತ್ತಿದ್ದ°. ಅವಂಗೆ ಕೇಳಿ ಅಪ್ಪಗ ವಿಷಯ ನಿಜ ಹೇಳಿ ಆತು. ದೊಡ್ಡಭಾವನ ಅಂಬೇರ್ಪಿನ ಎಡೆಲಿ ಅವರ ಹತ್ರೆ ಕೇಳಿ ಅಪ್ಪಗ ವಿಷಯ ರಜ್ಜ ಅರಡಿಗಾತು. ಓ.. ಮೊನ್ನೆ ಮೊನ್ನೆ ಕುಂಬ್ಳೆಜ್ಜಂಗೆ ಪುಳ್ಳಿ ಹುಟ್ಟಿದ್ದ°. ಕುಂಬ್ಳೆಜ್ಜ° ಮಗಳ ಬಾಳಂತನ ಮಾಡಿ ಕಳ್ಸಿಕೊಡ್ತ ಏರ್ಪಾಡಿಲಿ ಕೊಡೆಯಾಲಕ್ಕೆ ಹೋಗಿ ಬಪ್ಪಗ ಹಾರ್ಟ್ ಸಂಬಂಧಿ ತೊಂದರೆ ಆಗಿ ಅಂಬಗಳೇ ಆಸ್ಪತ್ರೆಗೆ ಕರ್ಕೊಂಡು ಹೋದೋರ ಆರಿಂಗೂ ಒಳಿಶಿಗೊಂಬಲೆ ಎಡಿಗಾಯಿದಿಲ್ಲೆ ಹೇಳ್ತ ಬೇಜಾರದ ಶುದ್ದಿ. 🙁  ಒಪ್ಪಣ್ಣನ ಬೈಲಿಂಗೆ ಆತ್ಮೀಯರಾಗಿದ್ದ ಶ್ರೀ ಕೊಂಗೋಟ್ಟು ಗಣಪತಿ ಭಟ್(ಕುಂಬ್ಳೆಜ್ಜ°) ನಿನ್ನೆ ಹೊತ್ತಪ್ಪಗ ಸಣ್ಣ ಪ್ರಯಾಣಲ್ಲಿಪ್ಪ ಹೊತ್ತಿಂಗೆ ಈ ಜೀವನದ ಪ್ರಯಾಣವ ನಿಲ್ಲುಸಿ, ಶಾಶ್ವತ ಒರಕ್ಕು ಒರಗಿದವು.
ಬೈಲಿಂಗೆ ದೊಡ್ಡಜ್ಜ° ಹತ್ತರೆ. ದೊಡ್ಡಜ್ಜನಷ್ಟೇ ಹತ್ತರೆ ಕುಂಬ್ಳೆಜ್ಜ°. ಅವು ಅಣ್ಣ-ತಮ್ಮಂದ್ರು ಮಾಂತ್ರ ಅಲ್ಲ, ಇಬ್ರುದೇ ನಮ್ಮ ಬೈಲಿಂಗೆ ಕೂಸು ಕೊಟ್ಟೋರು! ಅದರಲ್ಲಿಯೂ ಕುಂಬ್ಳೆಜ್ಜನ ಮೂರು ಕೂಸುಗಳಲ್ಲಿ ಎರಡು ಕೂಸುಗಳನ್ನೂ ಬೈಲಿಂಗೇ ಕೊಟ್ಟಿದವು!! ಆ ಲೆಕ್ಕಲ್ಲಿ ಬೈಲಿಂಗೆ ಸೂತಕ ಹೇಳಿದರೂ ತಪ್ಪಲ್ಲ. ಇನ್ನು ಕಣ್ಣೆದುರು ಕಾಣದ್ದರೂ ಮನಸ್ಸಿಲಿ ಅಚ್ಚೊತ್ತಿದ ಕುಂಬ್ಳೆಜ್ಜನ ರೂಪ!
ಬೈಲು ಹೇಳಿದರೇ ಒಂದು ಕೂಡು ಕುಟುಂಬ. ಇಲ್ಲಿ ಎಲ್ಲೋರೂ ಸೇರಿಯೇ ಇಪ್ಪದು. ಆದರೂ ದೊಡ್ಡಜ್ಜ° ಹೋದ ಲಾಗಾಯ್ತು ಈಗ ಕಳಕ್ಕೊಂಬದೂ ಬೈಲಿನ ಒಂದು ಭಾಗ ಆಯಿದು ಹೇಳಿಯೇ ಒಂದು ಭಾರೀ ಬೇಜಾರದ ಸಂಗತಿ. ದೊಡ್ಡಜ್ಜನ ಕುಟುಂಬವೇ ಬೈಲಿಲಿ ಇದ್ದು. ಬೈಲಿನ ಸಂಬಂಧದ ಈ ಭಾವನಾತ್ಮಕ ಸಂಬಂಧಲ್ಲಿ ನಮ್ಮ ಹತ್ತರೆ ಇಪ್ಪ ಒಬ್ಬ ಹೋದರೆ ಆ ವೇದನೆಯ ಸಹಿಸುಲೆ ಕಷ್ಟ. ಅದರಲ್ಲಿಯೂ ಕುಂಬ್ಳೆಜ್ಜನ ಹಾಂಗೆ ಇಪ್ಪ ಆತ್ಮೀಯಜೀವ, ಎದುರೇ ಚೆಂದಕ್ಕೆ ಇದ್ದುಗೊಂಡು, ಎಲ್ಲಾ ಚಟುವಟಿಕೆಲಿ ಇದ್ದೋರು ಒಂದು ಘಳಿಗೆಲಿ ಇನ್ನು ಕಾಂಬಲಿಲ್ಲೆ ಹೇಳಿ ಎದ್ದಿಕ್ಕಿ ನೆಡದರೆ ಅದರ ಹೇಂಗೆ ತಡಕ್ಕೊಂಬದು? ಕುಂಞಿ ಪುಳ್ಳಿಯ ಅಷ್ಟು ಚೆಂದಕ್ಕೆ ನೋಡಿಗೊಂಡು ಕೊಶೀಲಿ ಇದ್ದ ಕುಂಬ್ಳೆಜ್ಜಂಗೆ ಎಂತ ಅಂಬೇರ್ಪು ಆತೋ ಹೋಪಲೆ?
ಕುಂಬ್ಳೆಜ್ಜ° ತುಂಬಾ ಸಾಧು ಜನ. ಎದುರು ಕಂಡರೆ ಎಷ್ಟು ಪ್ರೀತಿಲಿ ಮಾತಾಡುಗು ಹೇಳಿದರೆ ಒಂದು ಸರ್ತಿ ಮಾತಾಡಿ ಅಪ್ಪಗಳೇ ಅವು ತುಂಬಾ ಹತ್ತರೆ ಹೇಳಿ ಅಪ್ಪ ಹಾಂಗೆ ಕಾಂಗು. ಕುಂಬ್ಳೆಜ್ಜ° ಎಲ್ಲ ಕೆಲಸಲ್ಲಿಯೂ ಉಶಾರಿಯೇ! ಅವರ ಅಳಿಯಂದ್ರೂ ಎಲ್ಲದರಲ್ಲಿಯೂ ಮಾವಂಗೆ ಸರಿಸಮರೇ! ಮಾಷ್ಟ್ರುಮಾವಂಗೆ, ಮಡಿಕೇರಿ ಅಪ್ಪಚ್ಚಿಗೆ ಕುಂಬ್ಳೆಜ್ಜ° ಬೀಗರು ಮಾಂತ್ರ ಅಲ್ಲ ಅವರ ಮನೆಯವ್ವೇ ಹೇಳುವಷ್ಟು ಹತ್ತರೆ ಆಗಿಯೊಂಡಿದವು. ಎಲ್ಲೋರ ಒಟ್ಟಿಂಗೆ ಹೊಂದಿಗೊಂಡು ಹೋಪದು ಕುಂಬ್ಳೆಜ್ಜನ  ನೈಜಗುಣ. ಅದರಲ್ಲಿ ಪ್ರಾಯಬೇಧ ಮಾಡವು. ಎಷ್ಟು ಸಣ್ಣವ್ವು ಆದರೂ ಕೂಡಾ ಪ್ರತಿಭೆಗೆ ಗೌರವ ಕೊಡುವವ್ವು. ಶ್ರೀಗುರುಗಳ ಹತ್ತರಾಣ ಶಿಷ್ಯರೇ! ಕುಂಬ್ಳೆಜ್ಜಂಗೆ ಒಪ್ಪಣ್ಣನ ಹತ್ತರೆ ಭಾರೀ ಅಭಿಮಾನ. ಒಪ್ಪಣ್ಣಂಗೆ ಅವು ಅವರ ಜೀವರೂಪವ ಕೊಟ್ಟಿದವಿದಾ! ಇನ್ನು ಅದರಂದ ಹತ್ತರೆ ಬೇರೆ ಎಂತ ಇದ್ದು? ಬೈಲಿನ ಎಲ್ಲಾ ಶುದ್ದಿಗಳ ತಿಳ್ಕೊಂಗು. ದೊಡ್ಡಭಾವ° ಬೈಲಿನ ವಿಷಯ ಹೇಳಿದರೆ ಕೊಶೀಲಿ ಕೇಳಿ ಸಂಭ್ರಮ ಪಡುಗು. ಬೈಲಿನ ಪುಸ್ತಕಂಗಳ ಮಾರಾಟ ಮಾಡುಗು. ಶತಾವಧಾನ ಸಮೆಯಲ್ಲಿ ಅವರ ಅಳಿಯಂಗೆ ಸಮಸ್ಯಾಪೂರಣಲ್ಲಿ ಬಹುಮಾನ ಬಯಿಂದು ಹೇಳಿ ಗೊಂತಪ್ಪಗ ಭಾರೀ ಕೊಶಿ ಪಟ್ಟಿದವು. ಅಳಿಯಂದ್ರ ಸಾಧನೆಯ ಇಷ್ಟು ಸಂತೋಷಲ್ಲಿ ಸ್ವೀಕಾರ ಮಾಡಿ, ಅವರ ಪ್ರೋತ್ಸಾಹಿಸುವ ಕುಂಬ್ಳೆಜ್ಜ° ಇನ್ನು ಇಲ್ಲೆ. ಅವರ ಆಶೀರ್ವಾದ ಈ ಮಕ್ಕಳ ಮೇಲೆ ಯಾವಾಗಲೂ ಇರಲಿ..
ಮಾಷ್ಟ್ರುಮಾವನ ಸಣ್ಣ ಮಗ°(ಮಾಮಾಸಮ) ಎನ್ನ ತಮ್ಮ. ಹೃದಯ ಸಂಬಂಧದ ಈ ಬಂಧಲ್ಲಿ ಕುಂಬ್ಳೆಜ್ಜ° ಎನಗೆ ಮಾವ°. ಸಂಬಂಧಾತೀತವಾದ ಈ ಬೈಲಿನ ಭಾವನಾತ್ಮಕ ಸಂಬಂಧಲ್ಲಿ ಅವು ತೋರ್ಸಿಗೊಂಡಿದ್ದ ಪ್ರೀತಿ, ಅಭಿಮಾನಕ್ಕೆ ಬೆಲೆ ಕಟ್ಟುಲೆ ಎಡಿಯ. ಅವರ ಅಳಿಯಂಗೆ ಹೇಳಿದರೆ ಎನ್ನ ತಮ್ಮಂಗೆ ಸಂಬಂಧ ಪಟ್ಟ ಎಂತದೇ ವಿಷಯ ಇದ್ದರೂ, ಅಕ್ಕನ ಜಾಗೆಯ ಜವಾಬ್ದಾರಿಗೆ ಎಂತ ಆಯೆಕ್ಕಾದರೂ ಅದಕ್ಕಪ್ಪಗ ಅವು ಎನ್ನ ದಿನಿಗೇಳಿಯೇ ದಿನಿಗೇಳುಗು. ಆ ಮರೆಲಿಯೇ ಎಂಗಳಲ್ಲಿ ಕಾನಾವಣ್ಣನ ಉಪ್ನಾನಕ್ಕೆ ಮುನ್ನಾಣ ದಿನವೇ ಬಂದು ಸೇರಿಗೊಂಡು ಮರದಿನ ಇಡೀ ಸುದರಿಕೆ ಮಾಡಿ ಉಪ್ನಾನಕ್ಕೆ ಒಂದು ಕಳೆ ಹೆಚ್ಚು ಮಾಡಿದ ಕುಂಬ್ಳೆಜ್ಜನ ಆನು ಹೇಂಗೆ ಮರೆಯಲಿ? ಅವರ ಈ ಸರಳತೆ ನವಗೆ ಒಂದು ಪಾಠವೇ ಅಲ್ಲದಾ?
ಪುಳ್ಳಿ ಹುಟ್ಟುವ ಆ ಸಮಯಕ್ಕೆ ಸರಿಯಾಗಿ ಅವನ ಎದುರುಗೊಂಬಲೆ ಅಲ್ಲಿಯೇ ಇದ್ದುಗೊಂಡು ಅವಂಗೆ ಬೇಕಾದ್ದದರ ಪೂರಾ ಮಾಡಿದ್ದವು. ದೊಡ್ಡಜ್ಜನ ಒರಿಶಾಂತಕ್ಕಪ್ಪಗ ಅವರ ಪುಳ್ಳಿ ಹುಟ್ಟಿದ ಸಂಭ್ರಮ. ಆ ದಿನ ಅವಕ್ಕೆ ಅಜ್ಜ° ಆದ ಕೊಶಿಗೆ ಅಭಿನಂದನೆ ಹೇಳಿ ಅಪ್ಪಗ ಅವರ ಕೊಶಿಯ ಮೋರೆ ಎನ್ನ ಕಣ್ಣೆದುರು ಇದ್ದು. ಅವರ ಮೊಬಿಳಿಲಿ ಇದ್ದ ಪುಳ್ಳಿಯ ಪಟಂಗಳ ತೋರ್ಸಿ ಕೊಶಿಯ ಹಂಚಿಗೊಂಡವು. ಪುಳ್ಳಿ ಹುಟ್ಟಿದ ಮತ್ತೆ ಶುದ್ಧಕ್ಕೆ ಅವರ ಒಟ್ಟಿಂಗೆ ಹೋಯೆಕ್ಕು ಬೆಂಗ್ಳೂರಿಂಗೆ ಹೇಳಿ ಎನಗೊಂದು ಸೀಟು ಬುಕ್ಕಾಗಿತ್ತು, ಆದರೆ ಎನಗೆ ಉಶಾರಿಲ್ಲದ್ದೆ ಹೋಪದು ಬಾಕಿ ಆತು 🙁
ನಂದನ ಚಾತುರ್ಮಾಸ್ಯಕ್ಕೆ ಗುರುಭೇಟಿಗೆ ಹೋಪಗ ಕುಂಬ್ಳೆಜ್ಜನೂ ಇತ್ತಿದ್ದವು. ಅವರ ಅಳಿಯನ ಪುಸ್ತಕ ಶ್ರೀಗುರುಗೊ ಬಿಡುಗಡೆ ಮಾಡುವ ಆ ಪುಣ್ಯಸಮೆಯಲ್ಲಿ ಒಟ್ಟಿಂಗೆ ಇದ್ದುಗೊಂಡು ಅಳಿಯನ ಹವ್ಯಕ ಸರಸ್ವತೀ ಸೇವೆಯ ಕಂಡು ಕೊಶಿ ಪಟ್ಟು ಮನಸಾ ಆಶೀರ್ವಾದ ಮಾಡಿದ್ದವು. ಕುಂಬ್ಳೆಜ್ಜನ  ಒಟ್ಟಿಂಗೆ ಇಪ್ಪದುದೇ ಕೊಶಿಯೇ, ಪ್ರಯಾಣ ಹೋಪದೂ ಕೊಶಿಯೇ! ಯೇವ ಜಾಗೆಗೆ ಹೋದರೂ ಆಯಾ ಜಾಗೆಗೆ ಹೊಂದಿಗೊಂಡು ತನ್ನ ಕೈಲಿ ಆದ ಎಲ್ಲಾ ಕೆಲಸಂಗಳ ಮಾಡಿ ಅಚ್ಚುಕಟ್ಟಿಲಿ ಇಪ್ಪ ಕುಂಬ್ಳೆಜ್ಜನ ಇನ್ನು ಭೌತಿಕವಾಗಿ ಕಾಂಬಲಿಲ್ಲೆ. ಅವರ ಬಗ್ಗೆ ಇಪ್ಪ ಎಲ್ಲಾ ವಿಷಯಂಗ, ಅವರ ವ್ಯಗ್ತಿತ್ವ ಎಲ್ಲವೂ ನೆನಪ್ಪಿನ ಪತ್ತಾಯಕ್ಕೆ ಹೋಗಿಯೂ ಆತು. 🙁
ದೊಡ್ಡಜ್ಜ° ಹೋಗಿ ರಜ್ಜ ಸಮೆಯ ಅಪ್ಪಗ ದೊಡ್ಡಮಾವ° ಹೋದವು. ದೊಡ್ಡಜ್ಜನ ಒರಿಶಾಂತ ಕಳುದು ಮೂರು ತಿಂಗಳು ಆವುತ್ತಾ ಇದ್ದ ಹಾಂಗೆ ಕುಂಬ್ಳೆಜ್ಜ° ನಮ್ಮ ಬಿಟ್ಟಿಕ್ಕಿ ಕಾಣದ್ದ ಲೋಕಕ್ಕೆ ಮೋರೆ ಮಾಡಿದವು. ಒಡಹುಟ್ಟಿದ ಅಣ್ಣನ ಹುಟ್ಟುವಾಗ ಅನುಸರಿಸಿ ಬಂದ ಕುಂಬ್ಳೆಜ್ಜ° ಹೋಪಗಳೂ ಅಣ್ಣನ ಅನುಸರಿಸಿಯೇ ಹೋದವು. 🙁 ಸಹೋದರ ಪ್ರೇಮಕ್ಕೆ ಇದುವೇ ಸಾಕ್ಷಿಯೋ?
ಕುಂಬ್ಳೆಜ್ಜ° ಮಾಡುವ ಕೆಲಸಂಗ ಇನ್ನುದೇ ಬಾಕಿ ಇದ್ದು. ಬೈಲಿನ ಎಲ್ಲಾ ಬಂಧುಗೊಕ್ಕೂ ಅವರ ಋಣ ತೀರ್ಸುಲೆ ಅವಕಾಶ ಮಾಡಿಮಡುಗಿಕ್ಕಿ ಕುಂಬ್ಳೆಜ್ಜ° ಹೋಯಿದವು – ಆರ ಹತ್ತರೆಯೂ ಹೋಯ್ಕೊಂಡು ಬತ್ತೆ ಹೇಳಿ ಹೇಳದ್ದೆ, ತಿರುಗಿ ಬಾರದ್ದ ಊರಿಂಗೆ ಪ್ರಯಾಣ ಮಾಡಿದ್ದವು. ಅವರ ಈ ಲೋಕಮುಕ್ತ ಪ್ರಯಾಣ ಸುಖಕರವಾಗಿ ಭಗವಂತನ ಮನೆಲಿ ಕೊಶೀಲಿ ಇರಲಿ..
ಅವರ ಮಕ್ಕೊಗೆ, ಈಗ ನಮ್ಮ ಬೈಲಿನ ಕೂಸುಗೊಕ್ಕೆ ಈ ಕಷ್ಟವ ಸಹಿಸುವ ಶೆಗುತಿ ಸಿಕ್ಕಲಿ..
ಕುಂಬ್ಳೆಜ್ಜನ ಸಹಧರ್ಮಿಣಿಯಾಗಿ ಅವರ ಒಟ್ಟಿಂಗೇ ಕಷ್ಟ-ಸುಖ ಹಂಚಿದ ಕುಂಬ್ಳೆಜ್ಜಿಗೆ ಈ ದುಃಖವ ಸಹಿಸುವ ಶೆಗ್ತಿಯ ಶ್ರೀಗುರುದೇವರುಗ ಅನುಗ್ರಹಿಸಲಿ..
ದೊಡ್ಡ ಅಶ್ವತ್ಥಮರದ ಹಾಂಗೆ ಕುಂಬ್ಳೆಜ್ಜನ ಅಳಿಯಂದ್ರಿಂಗೆ ಆಸರೆಯಾಗಿದ್ದ ಕುಂಬ್ಳೆಜ್ಜನ ಅನುಪಸ್ಥಿತಿಯ ಅರಗಿಸಿಗೊಂಬ ಶೆಗ್ತಿ ಸಿಕ್ಕಲಿ..
ಮನುಷ್ಯನ ಜೀವನ ಕ್ಷಣಿಕ. ಯಾವ ಕ್ಷಣಲ್ಲಿ ಎಂತದೂ ನೆಡಗು. ನಾವು ಎಲ್ಲದಕ್ಕೂ ತೆಯಾರು ಬೇಕು ಹೇಳುವ ಜೀವನ ಪಾಠವ ನವಗೆ ಕೊಟ್ಟ ಕುಂಬ್ಳೆಜ್ಜನ ಆತ್ಮಕ್ಕೆ ಶಾಂತಿ ಸಿಕ್ಕಲಿ..
ಈ ಜೀವನಚಕ್ರದ ಹುಟ್ಟು-ಸಾವಿನ ಚಕ್ರಂದ ಅವು ಮುಕ್ತರಾಗಿ ಭಗವಂತನಲ್ಲಿ ಐಕ್ಯರಾಗಲಿ..
ಇದು ಸಾತ್ವಿಕರೂಪದ ಪುಣ್ಯಚೇತನಕ್ಕೆ, ಅವು ತೋರಿದ ಬೆಲೆಕಟ್ಟುಲೆ ಎಡಿಯದ್ದ ಪ್ರೀತಿಗೆ, ಅಭಿಮಾನಕ್ಕೆ ಶ್ರೀಅಕ್ಕನ ನುಡಿನಮನ..
ಹರೇರಾಮ.
~
ಸೂಃ ಸಕಾಲಕ್ಕೆ ಕುಂಬ್ಳೆಜ್ಜನ ಪಟ ಹುಡ್ಕಿ ಕೊಟ್ಟದು ಹಳೆಮನೆ ತಮ್ಮ. ಅವಂಗೆ ತುಂಬಾ ಧನ್ಯವಾದಂಗೊ.

18 thoughts on “ಪುಳ್ಳಿಯ ನೋಡಿಕ್ಕಿ ಕುಂಬ್ಳೆಜ್ಜ° ಹೋದವು.. :-(

  1. ದುಖಃತಪ್ತ ಕುಟುಂಬಕ್ಕೆ ಮಾನಸಿಕ ಧೈರ್ಯ ಕೊಡಲಿ ಹೇಳಿ ದೇವರಲ್ಲಿ ಬೇಡಿಗೊಂಬ.

  2. ತುಂಬಾ ಬೇಜಾರದ ವಿಷಯ. ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ ಹೇಳಿ ದೇವರತ್ರೆ ಬೇಡಿಗೊಂಬ.

  3. ಎನಗೆ ಗಣಪತಿ ಮಾಸ್ಟ್ರ ಜೊತೆ ಹೆಚ್ಚು ಸಂಪರ್ಕ ಇತ್ತಿಲ್ಲೆ, ಆದರೂ ಕೆಲವು ಸರ್ತಿ ಎಂಗೊ ದೊಡ್ಡಮಾಣಿ, ಕಾರಿಂಜ, ಶಡ್ರಂಪಾಡಿ ದೇವಸ್ಥಾನಂಗಳಲ್ಲಿ ಕಂಡು ಮಾತಾಡಿದ್ದದಿದ್ದು. ಎಲ್ಲೋರೊಟ್ಟಿಂಗೂ ಬೆರವಂತಹ, ನಿಸ್ವಾರ್ಥ ವ್ಯಕ್ತಿತ್ವ, ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ ಹೇಳಿ ಪ್ರಾರ್ಥನೆ.

  4. ಗಣಪತಿಯಣ್ಣ ಕಾಲವಾದ ಸುದ್ದಿ ಕೇಳಿಯಪ್ಪಗ ಒಳೆತ ಬೇಜಾರಾತು. ಒಂದೆರಡು ದಿನ ಕಳಿವಗ ಅನಾಯಾಸೇನ ಮರಣಂ।ವಿನಾ ದೈನ್ಯೇನ ಜೀವನಂ। ಹೇಳಿ ಇಪ್ಪ ಸೂಕ್ತಿಯ ನೆಂಪಾತು. ಇದರ ಎನ್ನ ಅಪ್ಪ ಹೇಳಿಕ್ಕಿ ಹಾಂಗಿದ್ದವು ಪುಣ್ಯವಂತರು. ಹೇಳುಗು ಈ ಗೆಣವತಿಯಣ್ಣನ ಪಾಲಿಂಗೆ ನಿಜ ಆತು.

  5. ಆತ್ಮೀಯ ಗೆಣಪ್ಪಣ್ಣನ ನಿಧನ ವಾರ್ತೆ ಗೊಂತಾತು.ಎಲ್ಲಿ ಕಂಡರುದೆ ತುಂಬಾ ಪ್ರೀತಿಲಿ ಮಾತನಾಡುಸುಗು.ಆತ್ಮೀಯತೆಗೆ ಇನ್ನೊದು ಹೆಸರು ಗೆಣಪ್ಪಣ್ನ .ಅವರ ಆತ್ಮಕ್ಕೆ ಶಾಂತಿ ದೊರಕಲಿ.

  6. ಅವರ ನಿಧನ ವಾರ್ತೆ ಕೇಳಿ ಬೇಜಾರಾತು. ಅವರ ಆತ್ಮಕ್ಕೆ ಶಾಂತಿ ಇರಲಿ.ಅವು ಎಂಗೊಗೆ ತುಂಬಾ ವರ್ಷಂದ ಪರಿಚಿತರು. ನಾಲ್ಕು ತಿಂಗಳ ಮೊದಲೆ ಅವರ ಹತ್ತರೆ ಮಾತಾಡಿದ್ದೆ.

  7. ಶೃದ್ಧಾ೦ಜಲಿ………

  8. ಕುಂಬ್ಳೆ ಅಜ್ಜ ಇನ್ನಿಲ್ಲೆ ಹೇಳುವ ಸಂಗತಿ ದೊಡ್ಡಭಾವನಿಂದ ನಿನ್ನೆಯೇ ಗೊಂತಾತು, ತಿಳುದು ತುಂಬಾ ಬೇಜಾರಾತು. ಸಿರಿಯಕ್ಕನ ನುಡಿನಮನವ ಓದುತ್ತಾ ಇದ್ದ ಹಾಂಗೆ ಅಜ್ಜನ ಸ್ನೇಹಮಯ ನಡವಳಿಕೆ, ಅವರ ಹತ್ರೆ ಮಾತಾಡಿದ್ದೆಲ್ಲ ನೆಂಪಾತು.
    ಮನೆಯವಕ್ಕೆ, ಅಳಿಯಂದ್ರಿಂಗೆ ಅವರ ನಿಧನದ ದುಃಖವ ಸಹಿಸುವ ಶಕ್ತಿ ಒದಗಿ ಬರಳಿ. ಅಜ್ಜನ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇಳುವ ಪ್ರಾರ್ಥನೆ.

  9. ನಿನ್ನೆ ಇರುಳೇ ಸಂಗತಿ ಗೊಂತಾಗಿ ಬೇಜಾರಾತು. ಕಾಲಂಗೆ ದಯೆ ಹೇಳುವದು ಇಲ್ಲೆ ಹೇಳಿ ಖಂಡಿತ ಆತು. ಮೊನ್ನೆ ಮೊನ್ನೆ ಮಾತಾಡಿದ ಹಾಂಗೆ ಆವುತ್ತು ಅವರತ್ರೆ.
    ಅಗಲಿದ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಹೇಳಿ ಭಗವಂತನತ್ರೆ ಪ್ರಾರ್ಥನೆ…

  10. Kongotu Genappanna hoda shuddi keLi bejaaraathu. praya bheda illadde ellorattaroo vishwasanda mataadudu avara naija guNa.

  11. ಅಕ್ಕನ ಭಾವನಾತ್ಮಕ ಮಾತುಗೊ ಕುಂಬ್ಳೆಜ್ಜ, ದೊಡ್ಡಜ್ಜನ ಕುಟುಂಬದ ಅತ್ಮೀಯತೆ, ಸೌಜನ್ಯತೆಯ ಪ್ರತಿಬಿಂಬಿಸಿತ್ತು. ಅವರ ಒಂದರಿಯಾರು ಕಂಡುಗೊಂತಿಪ್ಪವಕ್ಕೆ ಅವರ ಅಗಾಧ ವ್ಯಕ್ತಿತ್ವವ ಮರವಲೆಡಿಯ.
    ದಿಢೀರ್ನೆ ಅಸ್ತಂಗತರಾದ ಅವರ ಆತ್ಮ ಚಿರಶಾಂತಿಯ ಪಡೆಯಲಿ, ಅವರ ವ್ಯಕ್ತಿತ್ವದ ಪ್ರಭಾವ ದೀರ್ಘಕಾಲ ಬೈಲಿಲ್ಲಿ ಉಳಿಯಲಿ ಹೇದು ಶ್ರದ್ಧಾಂಜಲಿ.

  12. ಅವರ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇದು ಪ್ರಾರ್ಥನೆ.

  13. ಹಿತ ಮಿತ ಭಾಷಿ,ಮೋರೆಲಿ ಸದಾ ಮುಗುಳುನೆಗೆಯ ಕು೦ಬ್ಳೆಜ್ಜ ಇಹಲ್ಲಿ ನೆಮ್ಮದಿಲಿ ಬದುಕ್ಕಿ ಪರಕ್ಕೆ ಸುಖವಾಗಿ ಹೋದವು ಹೇಳೊದು ಗೊ೦ತಾಗಿ ಮಾತು ಕಟ್ಟಿತ್ತು. ಅವರ ಆತ್ಮಕ್ಕೆ ಚಿರಶಾ೦ತಿ ಸಿಕ್ಕಲಿ.ಕುಟು೦ಬಸ್ತರಿ೦ಗೆ ಮನೋಬಲ ಹೆಚ್ಚಲಿ ಹೇಳಿ ಪ್ರಾರ್ಥಿಸುತ್ತೆ .ಶೃದ್ಧಾ೦ಜಲಿ.

  14. ತುಂಬಾ ದುಖದ ಸಂಗತಿ, ನಂಬಲೇ ಎಡಿತ್ತಿಲ್ಲೆ. ಮೊನ್ನೆ ಅವರ ಮನಗೆ ಹೋಗಿ, ಅವರನ್ನೂ, ಅವರ ಪುಳ್ಳಿ ಯನ್ನೂ ನೋಡಿಕ್ಕಿ ಬಯಿಂದೆ. ಸಂತೋಷಲ್ಲಿ ಹಿಂದಿರುಗಿದ್ದೆ ಆದರೆ ಇಂದು ಈ ಬೇಜಾರ ಸಂಗತಿ ಕೇಳೆಕ್ಕಾತನ್ನೆ! ಅವರ ಆತ್ಮ್ಕ್ಕೆ ಸಾಯುಜ್ಯ ಸಿಕ್ಕಲಿ ಹೇಳಿ ನಾವು ಬೈಲಿನವ್ಅರೆಲ್ಲರೂ ಪ್ರಾರ್ಥಿಸುವೊ.

  15. ಎಲ್ಲಿ ಕಂಡರೂ ನೆಗೆ ಮಾಡಿ ಕ್ಷೇಮ ಸಮಾಚಾರ ವಿಚಾರುಸುವ ದೊಡ್ಡ ವ್ಯಕ್ತಿತ್ವ.
    ಮನೆಗೆ ಬಂದಿಪ್ಪಗ ಮನೆಯವರ ಹಾಂಗೆ ಇಪ್ಪ ಗುಣ, ಸುದರಿಕೆಗೂ ಎತ್ತಿದ ಕೈ.
    ಸುಭಗರ ಸಮೋಸ ಬಂದಪ್ಪಗ, ಮನಸ್ಸು ಒಪ್ಪದ್ದರೂ ನಂಬಲೇ ಬೇಕಾತು.
    ಬೈಲಿನ ಇನ್ನೊಂದು ಕೊಂಡಿ ಕಳಚಿದ ದುರ್ದಿನ.
    ಅವರ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ, ಮನೆಯವಕ್ಕೆ, ಕುಟುಂಬದವಕ್ಕೆ, ಬಂಧುಗೊಕ್ಕೆ ಅವರ ಅಗಲುವಿಕೆಯ ಸಹಿಸುವ ಶಕ್ತಿಯ ಆ ಪರಮಾತ್ಮ ಅನುಗ್ರಹಿಸಲಿ.
    ಶ್ರದ್ಧಾಂಜಲಿ

  16. ನಿನ್ನೆ ಇರುಳು ಸುಭಗ ಭಾವನ ಸಮೋಸ ಬಂದಪ್ಪಗ, ಆ ಶುದ್ದಿಯ ಓದಿಯಪ್ಪಗ ನಂಬುಲೇ ಎಡಿಗಾಯಿದಿಲ್ಲೆ.ಕುಂಬ್ಲೆಜ್ಜನ ಶಾಂತ ಮುದ್ರೆಯ ಮೋರೆಯೇ ಕಣ್ಣೆದುರು ನಿಂದ ಹಾಂಗೆ ಅನಿಸಿತ್ತು.ಚಿರಶಾಂತಿಗೆ ನಡದೇ ಬಿಟ್ಟವು.ಶ್ರದ್ಧಾಂಜಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×