Oppanna.com

ಪುರಾಣ ವಾಚನ ಪ್ರವಚನ- ಮುಜಂಗಾವು ವಿದ್ಯಾಪೀಠಲ್ಲಿ

ಬರದೋರು :   ವಿಜಯತ್ತೆ    on   16/09/2013    6 ಒಪ್ಪಂಗೊ

ಪುರಾಣ ಪ್ರವಚನ
ಪುರಾಣ ಪ್ರವಚನ

ಪುರಾಣ ವಾಚನ ಪ್ರವಚನ

ರಾಮಾಯಣ ಮಹಾಭಾರತ ಮೊದಲಾದ ಪುರಾಣಂಗೊ ನಮ್ಮ ಧರ್ಮ ಸಂಸ್ಕೃತಿಯ ತಾಯಿಬೇರು. ಅದರಲ್ಲೂ ಮಕ್ಕಳ ವಿದ್ಯಾಭ್ಯಾಸಕ್ಕೆ, ಜ್ಞಾನವೃದ್ಧಿಯಪ್ಪಲೊಂದು ತಳಹದಿ. ಈ ಪುರಾಣಂಗಳ ಕಥೆ, ಕಾವ್ಯ, ನಾಟಕ, ರೂಪಕ, ಪುರಾಣ ವಾಚನ ಹೀಂಗೆ ಏವದೇ ರೂಪಲ್ಲಿ ಮಕ್ಕಳ ಮುಂದೆ ಪ್ರದರ್ಶನ ಮಾಡಿಗೊಂಡು ಇರೆಕು. ಹಾಂಗಾದರೆ ಅವರಲ್ಲೂ ಪುರಾಣ ಪ್ರೀತಿ ಹುಟ್ಲೆ, ಅದು ಒಳುದು ಬೆಳೆವಲೆ ಮಾರ್ಗದರ್ಶನ ಕೊಟ್ಟ ಹಾಂಗಾವುತಲ್ಲದೋ?
ಈ ಪೈಕಿ ಕುಮಾರವ್ಯಾಸನ ಕರ್ಣಾಟಕ ಕಥಾ ಮಂಜರಿಯಿಂದ ತೆಕೊಂಡ ’ಬಕಾಸುರ ವಧೆ’ ಹೇಳ್ತ ಕಥಾಭಾಗವ ವಾಚನ-ಪ್ರವಚನ ಮುಜಂಗಾವು ವಿದ್ಯಾಪೀಠಲ್ಲಿ ಕಳಾತು. ನಡೆಶಿಕೊಟ್ಟು ಹೇಜೀಪು (ನೇತೃತ್ವ) ವಹಿಸಿದವು ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡು ಕಾಸರಗೋಡು ವತಿಂದ ಶ್ರೀಯುತ ತೆಕ್ಕೆಕೆರೆ ಶಂಕರನಾರಾಯಣ ಭಟ್ಟರು. ವಾಚನ-ಪ್ರವಚನ ಮಾಡಿದ ಕಲಾವಿದರು ಕುಂಬಳೆ, ಇಚ್ಲಂಪಾಡಿ, ಕಳತ್ತೂರು ಶಾಲೆಯ ಮಾಷ್ಟ್ರಕ್ಕೊ ಶ್ರೀಯುತ ನರಹರಿ ಹಾಂಗೂ ಅವರ ಹೆಂಡತಿ ಶ್ರೀಮತಿ ಭಾರತಿ ನರಹರಿ.
೩೦-೦೮-೧೩ನೇ ಶುಕ್ರವಾರ ಮಧ್ಯಾಹ್ನ ಮೇಗೆ ೨ಗಂಟೆಂದ ೩-೩೦ರ ವರೆಗೆ ಸಂಪನ್ನಗೊಂಡ ಈ ಕಾರ್ಯಕ್ರಮಕ್ಕೆ ಕಲಾವಿದರ ಮುಂದೆ ನಿಂದು ವೇದಿಕೆಗೆ ಕರಕ್ಕೊಂಡು ಬಂದದು ಹೆಡ್ ಮಾಷ್ಟ್ರು ನಮ್ಮ ಶ್ಯಾಮಣ್ಣ. ಸಾಂಕೇತಿಕವಾಗಿ ಸ್ವಾಗತ ಹೇಳಿದ್ದದು ೧೦ನೇ ತರಗತಿಯ ಕೂಸು ದೀಕ್ಷಿತಾ. ಕಾರ್ಯಕ್ರಮ ಒಂದಾದ ಮೇಲೆ ಒಂದರ ಹಾಂಗೆ ನಡೆವಲೆ ಎಡೆಮಾಡಿ ಕೊಟ್ಟದು ನಮ್ಮ ಮಹಾವಿದ್ಯಾಲಯದ ಕೂಸು ಶುಭಲಕ್ಷ್ಮೀ ಜಿ ಯಾಜಿ. ಕಾರ್ಯಕ್ರಮಕ್ಕೆ ದೀಪ ಹೊತ್ತಿಸಿ ಶುಭಕೋರಿದವು ಶಾಲೆಯ ಗುರಿಕ್ಕಾರರಾದ ಡಾ. ಡಿ. ಪಿ. ಭಟ್ರು. ಕಾರ್ಯಕ್ರಮಕ್ಕೆ ವಿಶೇಷವಾಗಿ ಚಾಕಟೆ ಸುಬ್ರಹ್ಮಣ್ಯ ಭಾವ, ಕಾರಿಂಜ ಹಳೆಮನೆ ಶಿವರಾಮ ಮಾವ-ಉಷಾ ಅತ್ತೆ, ವಿ. ಬಿ. ಕುಳಮರ್ವ ಇವೆಲ್ಲ ಬಂದದು ಕುಷಿ ಆತು.

ಕಾರ್ಯಕ್ರಮ ಮುಗುದಪ್ಪಗ ವಾಚನ ಪ್ರವಚನದವಕ್ಕೆ, ಶಾಲು ಹೊದಿಸಿ ಮರ್ಯಾದೆ ಮಾಡಿ ಕೊಟ್ಟು ಅವರ ಬಗ್ಗೆ ಮಾತಾಡಿದವು ಶ್ರೀಯುತ ವಿ. ಬಿ. ಕುಳಮರ್ವ. ವಿದ್ಯಾಪೀಠದ ೯ನೇ ತರಗತಿಯ ಮಾಣಿ ಕಾರ್ತಿಕ್ ಧನ್ಯವಾದ ಹೇಳುವುದರೊಟ್ಟಿಂಗೆ ಕಾರ್ಯಕ್ರಮ ಮುಗದತ್ತು.

***~~~****

6 thoughts on “ಪುರಾಣ ವಾಚನ ಪ್ರವಚನ- ಮುಜಂಗಾವು ವಿದ್ಯಾಪೀಠಲ್ಲಿ

  1. ಹರೆರಾಮ, ಮಲೆಯಾಳಂದ ಬಂತೊಗೊಂತಿಲ್ಲೆ ಗೋಪಾಲ. ಎನ್ನ ಅಪ್ಪ ಹೆಚ್ಹಾಗಿ ಈಶಬ್ಧ ಬಳಸಿಗೊಂಡಿತ್ತಿದ್ದವು. ಕೂಸು ಮಾಣಿಗೆ ಸಂದಾನ ಹಾಕುವಗಳೂ ಅದಾರ ಹೇಜೀಪು ಕೇಳ್ತವು ಒಟ್ಟಿಲ್ಲಿ ಮೇಲ್ತನಿಕೆ

  2. ಹರೇರಾಮ ಭಾವಯ್ಯ, ಹೀಂಗಿದ್ದ ಹೊಸತ್ತಾಗಿಪ್ಪ ಹಳೆ ಶಬ್ಧ ಇನ್ನೂ ಕೆಲಾವು ಇದ್ದು ನಿಂಗೊಗೆ ಗೊಂತಿಪ್ಪದಾಗೆಂಡಿಪ್ಪಲೂ ಸಾಕು ಸಂದರ್ಭಕ್ಕೆ ಹೊಂದೆಡು ಬರವೊ

    1. ಹೇಜೀಪು ಹೇಳಿರೆ ಯೋಜಿಪ್ಪು[ಆಯೋಜನೆ] ಹೇಳುವ ಮಲೆಯಾಳ ಶಬ್ದಂದ ಬಂತೊ ಚಿಕ್ಕಮ್ಮ?

  3. ಗಡಿನಾಡಿಲ್ಲಿ ಕನ್ನಡದ ಕಂಪು ಹರಿಸುವ ಗಮಕ ಕಲಾ ಪರಿಷತ್ತಿಂಗೂ, ಪ್ರೋತ್ಸಾಹ ಕೊಡುವ ಮುಜುಂಗಾವು ವಿದ್ಯಾ ಪೀಠದ ಆಢಳಿತ ವರ್ಗಕ್ಕೂ ಧನ್ಯವಾದಂಗೊ.
    “ಹೇಜೀಪು” ಹೇಳ್ತ ಒಂದು ಹೊಸ (ಹಳೆ) ಶಬ್ದವ ಪರಿಚಯ ಮಾಡಿ ವರದಿ ಪ್ರಸ್ತುತ ಮಾಡಿದ್ದಕ್ಕೆ ಧನ್ಯವಾದಂಗೊ

  4. ಗಮಕ ಕಲೆ ಒಳಿಶೆಕ್ಕಾದ್ದು ಮುಖ್ಯ. ಕನ್ನಡ ಭಾಷೆಯ ಸೌಂದರ್ಯ ಗೊಂತಾಯೆಕ್ಕಾರೆ ಕಾವ್ಯವ ರಾಗಲ್ಲಿ ಓದೆಕ್ಕು.

  5. ಹರೇ ರಾಮ;ಕಾವ್ಯ ವಾಚನ ನಮ್ಮ ಒ೦ದು ಹಿರಿಯ ಸ೦ಪತ್ತು.ಅದರ ಒಳುಶಿಯೊ೦ಡು ಬಪ್ಪವಕ್ಕೆ ಅದೆಷ್ಟು ಧನ್ಯವಾದ ಹೇಳಿರೂ ಕಡಮ್ಮೆ.ಇ೦ಥ ಒ೦ದು ಕೆಲಸ ಮಾಡಿಯೊ೦ಡಿಪ್ಪ ನಮ್ಮ ತೆಕ್ಕೆಕೆರೆ ಅಣ್ಣ೦ಗೆ ಹಾ೦ಗೂ ಕಾಸರಗೋಡೂ ಗಮಕ ಕಲಾ ಪರಿಷತ್ತಿನವುಕ್ಕೂ ಅಭಿನ೦ದನಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×