ಪುತ್ತೂರು ಅಷ್ಟಾವಧಾನ: ಪಕ್ಷಿನೋಟ

ಪುತ್ತೂರು ಅಷ್ಟಾವಧಾನದ ಸಂಕ್ಷಿಪ್ತ ಪಕ್ಷಿನೋಟ:

ನಿಷೇಧಾಕ್ಷರಿ:

ಪೃಚ್ಛಕರು: ಡಾ | ಪಾದೇಕಲ್ಲು ವಿಷ್ಣು ಭಟ್ಟ
ಪ್ರಶ್ನೆ     : ಸಂಧ್ಯೆಯ ವರ್ಣನೆ, ಸಂಧ್ಯಾ ನಮಸ್ಕಾರ
ಛಂದಸ್ಸು: ಮಹಾಸ್ರಗ್ಧರಾ ವೃತ್ತ

ಪರಿಹಾರ : (ಕರ್ಣದೊಳ ನಿಷೇಧದ ಅಕ್ಷರ)
ಸುತ್ತು 1:
ರಜ(ತ)ನೀ(ಕ)ಭಾ(ಸ)ವ್ಯಾ(ಪ)ಸ್ಯ(ನ)ಮೆ(ಲ)ನ್ದುಂ(ಸ)(ಗ)ತಿ(ತ)ಗ(ಣ)ತಿ(ಗ)ಯೆ(ನ)ಡೆ(ಯ)ಗಂ (ಭ)(ಭ)ಲ್ವ(ಸ)ತಾ(ರ)ಣಂ(ನ)ಸ್ವ(ರ)ಭಾ(ವ)ನಂ

ಸುತ್ತು 2:
ಸ್ರಜೆ(ಯ)ಗಂ(ತ)(ತ)ಧ್ವ(ರ)ಧ್ವ(ಯ)ಪಾ(ಶ)ನ್ತಂ(ಪ)(ಕ)ರಿ(ದ)(ಪ)(ದ)(ನ)ದೆ(ನ)ತಾಂ (ಭ)(ತ)ರ್ವ(ಕ)ಥಾ(ಭ)ಸಾ(ಧ)ರೆ(ನ)(ತ)ಲ್ಗುಂ

ಸುತ್ತು 3:
ನಿಜ(ನ)ಮಾ(ಗ)ನ್ದ್ಯಾ(ದ)ನ್ಧ್ಯಾ(ನ)ರ್ಕ(ಪ)ಹೇ(ಗ)ಲಾ(ಪ)ಹಿ(ಮ)(ಮ)ಕೆ(ತ)(ಕ)(ಕ)ಮಿ(ದ)ಹಾ (ಗ)ನ್ಯ(ತ)ರ್ಧಿ(ಭ)ಗೀ(ನ)ವಿ(ದ)ತ್ವ(ವ)ಮೀ(ಗ)ಡ್ಯಂ

ಸುತ್ತು 4:
ಪ್ರಜೆಗಳ್ ತಾಮಗ್ನಿಶೋಮೀಯದ ಪರಿಣತಿಗಂ ಸಂದಿರಲ್ ಸತ್ವಮಾಳ್ಗುಂ ||

ಪೂರ್ಣಪಾಠ:
ರಜನೀ ಭಾವ್ಯಾಸ್ಯಮೆಂದುಂ ನತಿಗತಿಯೆಡೆಗಂ ಸಲ್ವತಾಣಂ ಸ್ವಭಾನಂ
ಸ್ರಜೆಗಂ ಮಧ್ವಧ್ವಪಾಂತಂ ಸರಿವನಯದೆ ತಾಂ ಸರ್ವಥಾ ಸಾರೆ ಸಲ್ಗುಂ |
ನಿಜಮಾಂದ್ಯಾಂಧ್ಯಾರ್ಕ ಹೇಲಾಹಿತಕೆ ಪಥಮಿಹಾನ್ಯರ್ಧಿಗೀವಿತ್ವಮೀಡ್ಯಂ
ಪ್ರಜೆಗಳ್ ತಾಮಗ್ನಿಶೋಮೀಯದ ಪರಿಣತಿಗಂ ಸಂದಿರಲ್ ಸತ್ವಮಾಳ್ಗುಂ ||
ಸಂಧ್ಯೆಯಿಂದಾಗಿ ನಮ್ಮೊಳ ಸತ್ವ ವೃದ್ಧಿಯಾಗಲಿ.

ಅಷ್ಟಾವಧಾನದ ಒಂದು ಕ್ಷಣ

ಅಷ್ಟಾವಧಾನದ ಒಂದು ಕ್ಷಣ

~*~

ಸಮಸ್ಯಾಪೂರಣ:

ಪೃಚ್ಛಕರು:  ಕೆಕ್ಕಾರು ರಾಮಚಂದ್ರ, ಬೆಂಗಳೂರು
ಪ್ರಶ್ನೆ     : ತಲೆದಿಂಬೊದ್ದೆಯದಾದುದಂ ತಿಳಿಯುತಂ ಕಣ್ಣೀರ ತಾ ಸೂಸುವಳ್
ಛಂದಸ್ಸು: ಮತ್ತೇಭವಿಕ್ರೀಡಿತ ವೃತ್ತ

ಪರಿಹಾರ:
ಲಲನಾಮಾನಿತೆ ಸೀತೆ ತಾಂ ನೆನೆಯುವಳ್ ವಾಲ್ಮೀಕಿ ಕುಟ್ಯಗ್ರದೊಳ್
ದಲಿತಾನಂದನ ನಂದುರಾಮನಳುಕುತ್ತುಂ ಕೊಂಡ ದುರ್ನಿರ್ಣಯ -|
ಚ್ಛಲಮಂ ಕಾಣದೆ ಕಾಡಿಗೇಗುವ ಚಣಂಗಳ್ ವೊಂದದಂ ಭಾವಿಸಲ್
ತಲೆದಿಂಬೊದ್ದೆಯದಾದುದಂ ತಿಳಿಯುತಂ ಕಣ್ಣೀರ ತಾ ಸೂಸುವಳ್ ||
ಸೀತಾ ಪರಿತ್ಯಾಗದ ಮತ್ತೆ ವಾಲ್ಮೀಕಿ ಆಶ್ರಮಲ್ಲಿ ಸೀತೆ ಆಲೋಚನೆ ಮಾಡುವಾಗ, ಆ ದಿನ ರಾಮನ ತಲೆದಿಂಬು ಚೆಂಡಿ ಆದ್ಸು ನೆಂಪಾವುತ್ತು.
ತನ್ನ ಕಳುಸುವಾಗ ರಾಮಂಗೆ ಬೇಜಾರಾಗಿತ್ತು – ಗ್ರೇಶಿ ಸೀತೆ ಕಣ್ಣೀರು ಸುರಿಸುತ್ತು.

~*~

ದತ್ತಪದಿ:

ಪೃಚ್ಛಕರು: ಅಂಬಾತನಯ ಮುದ್ರಾಡಿ
ಪಶ್ನೆ     : ನಲ್ಗಾಡಿ, ಬೀಸು, ವಾಯ್ವಾಯ್, ಅವಧಾನಿ – ಶೃಂಗಾರ ಸಂದರ್ಭ
ಛಂದಸ್ಸು: ಸಾಂಗತ್ಯ

ಪರಿಹಾರ:
ಒಲುಮೆಯ ಜೋಡಿಯು ನಲ್ಗಾಡಿಯಿಂ ಸಾಗಲ್
ಎಲರತ್ತ ಬೀಸಿರಲ್ ಇರದಾ |
ಮಲರೀನ ಹುಡಿಯನ್ನು ಬಾಯ್ವಾಯ್ಗಳ್ ಒನಪಿಂದೆ
ತೊಳೆವವಧಾನಿಗಳ್ ಗೆಲ್ವರ್ ||
ನಲವಿಂದ ಜೋಡಿಯೊಂದು ಸೌಂದರ್ಯ ಆಸ್ವಾದನೆ ಮಾಡುವಾಗ ಗಾಳಿ ಬೀಸಿತ್ತು. ಪುಷ್ಪ ಪರಾಗ ಕಣ್ಣಿಂಗೆ ಬಿದ್ದತ್ತೋ ಹೇಳಿ ಗ್ರೇಶಿ ಇಲ್ಲದ್ದ ಧೂಳಿನ ನಿವಾರುಸುವ ಪ್ರಯತ್ನ ಮಾಡ್ತವು.

~*~

ಚಿತ್ರಕವಿತೆ:

ಪೃಚ್ಛಕರು: ಡಾ. ಆರ್. ಶಂಕರ್
ವಿಷಯ: ಶಿವಸ್ತುತಿ
ಛಂದಸ್ಸು/ ಬಂಧ: ಅನುಷ್ಟುಪ್ / ಯುಗಳ ಸರ್ಪಬಂಧ

ಕಲಾಧರ ಜಯಾರ್ಯೇಶ
ಕಲಾಪಧರ ಸೇವಿತ |
ವಿಲಾಸ ರಸ್ಯ ಯಾಗೇಶ
ಖಲಾಂತ್ಯ ಧರೆ ಸೇರಲೈ |

~*~

ಆಶುಕವಿತೆ:

ಪೃಚ್ಛಕರು: ಸೋಮಶೇಖರ ಶರ್ಮ
ಪ್ರಶ್ನೆ 1: ರಾಮಾಯಣದ ಮಂಥರೆ-ಶಬರಿಯ ತುಲನಾ ಪದ್ಯ
ಉತ್ತರ 1:
ರಾಮಾಯಣ ಮಧುವನದೊಳ್
ಪ್ರೇಮಾಯತನಂ ಪಯೋಜಮಾ ಶಬರಿಯದಲ್ |
ಕ್ಷೇಮ ಪ್ರಬೋಧ ಮಾರಣ
ಮೈಮೆವಲಂ ಮಂಥರಾಕ್ಕೆ ದತ್ತೂರವೆ ತಾಂ ||
ರಾಮಾಯಣವೆಂಬ ಉದ್ಯಾನವನದಲ್ಲಿ ಶಬರಿಯು ಕೋಮಲವಾದ ಕಮಲವಿದ್ದಂತೆ, ಮಂಥರೆ ಮಾದಕ,ವಿಷವಾದ ದತ್ತೂರವಿದ್ದಂತೆ.

~*~

ಕಾವ್ಯವಾಚನ:

ಪೃಚ್ಛಕರು: ಚಂದಶೇಖರ ಕೆದಿಲಾಯರು

 1. ಸೇಡಿಯಾಪು ಕೃಷ್ಣಭಟ್ಟರ – ಶಬರಿಯ ಕುರಿತ ಕಾವ್ಯ
 2. ಮುದ್ದಣನ ರಾಮಾಶ್ವಮೇಧ
 3. ರಾಮಾಯಣ ದರ್ಶನಂ – ಕುವೆಂಪು
 4. ಗೋಪಾಲಕೃಷ್ಣ ಅಡಿಗರ ಕಾವ್ಯ

~

ಸಂಖ್ಯಾಬಂಧ:

ಪೃಚ್ಛಕರು: ಡಾ.ಚಂದ್ರಶೇಖರ ದಾಮ್ಲೆ
ಸಂಖ್ಯೆ: 840 (Double 420)
~

ಅಪ್ರಸ್ತುತ ಪ್ರಸಂಗ:

ಪೃಚ್ಛಕರು: ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು
ಕೆಲವು ರಸನಿಮಿಷಂಗೊ:

ಅ.ಪ್ರ ಪ್ರಶ್ನೆ: ಇಡ್ಳಿ-ವಡೆಯ ದಾಂಪತ್ಯ ರಹಸ್ಯ?
ಅವಧಾನಿಗಳ ಉತ್ತರ: ಸಾಂ-ಭಾರ. ಪರಸ್ಪರ ಉತ್ತಮ ಭಾರ(ಕೃತಜ್ಞತೆ) ಇದ್ದಲ್ಲಿ ದಾಂಪತ್ಯ ಯಶಸ್ವಿಯಾಗುತ್ತದೆ.

ಪ್ರ: ಹೆಂಡತಿ ಶಬ್ದದಲ್ಲೇ ಹೆಂಡ ಇದೆ. ಹಾಗಿದ್ದಲ್ಲಿ “ಹೆಂಡ” ಬಿಡಿ ಎನ್ನುವುದು ತಪ್ಪಲ್ವೇ?
ಉ: ಹೆಂಡತಿಯಲ್ಲಿ ಹೆಂಡ ಕಾಣ್ತಿದ್ದರೆ ಗಂಡನಲ್ಲಿ ಯಮಗಂಡ ಇದೆಯೇ?

ಪ್ರ: ಹಗ್ಗ ಹಾಕಿಕೊಳ್ಳಲು ಹದಿನಾರು ಸೂತ್ರಗಳು?
ಉ: ಹದಿನಾರು ಬೇಕಾಗಿಲ್ಲ, ಒಂದೇ ಸಾಕು – ಮಾಂಗಲ್ಯ ಸೂತ್ರ.

ಪ್ರ: ಅವಧಾನಿಗಳೇ..
ಉ: ಹೇಳಿ..
ಪ್ರ: ಏನೂ ಇಲ್ಲ..
ಉ: ನಿಮ್ಮಲ್ಲಿ ಏನಿರುತ್ತೆ ಹೇಳಿ…

~*~*~

ನೇರಪ್ರಸಾರ ಮಾಡಿದ ವೀಡಿಯೋ:
(ಕೃಪೆ: ಹಳೆಮನೆ ತಮ್ಮ / ಚುಬ್ಬಣ್ಣ)
http://new.livestream.com/accounts/3676823/events/2039669/videos/16993103

~

ಸೂ:
ಪೂರ್ಣ ಅವಧಾನದ ನಾಲ್ಕೂ ಸುತ್ತುಗಳ ಮಾಹಿತಿ ಸದ್ಯಲ್ಲೇ ಬತ್ತು. ಈಗ ಅಂಬೆರ್ಪಿಂಗೆ ಇಷ್ಟಿದ್ದು. ವೀಡಿಯೋ ನೋಡಿರೆ ಸಂಪೂರ್ಣವಾಗಿದ್ದು.
ಹರೇರಾಮ

ಸಂಪಾದಕ°

   

You may also like...

12 Responses

 1. jayalaxmi damle says:

  It was a nice time to listen Asthavadhana in Puttur. Hats off to the work shared by the youngsters of oppannana bailu. The smile, the regards, the respect, the concern u showed for the guests everything fine. U, the youngsters showed that u can do gigantic works. The care for hayvaka writings, the competitions u organised, the ambiance of the program . everything fine. Best program, well done. Good wishes for the future works.
  Regards and respects to each of u . jayalaxmi. sneha. sullia.23.04.2013

 2. ಕೆದೂರುಡಾಕ್ಟ್ರು says:

  ಅವಧಾನ ಕಾರ್ಯಕ್ರಮ ಲಾಯಕ ಅಯಿದು.

 3. ಬೊಳುಂಬು ಗೋಪಾಲ says:

  ಪುನಃ ಮತ್ತೊಂದರಿ ಪದ್ಯಂಗಳ ಮೆಲುಕು ಹಾಕುವ ಹಾಂಗಾತು. ಧನ್ಯವಾದಂಗೊ.

 4. ಇದಿದಾ ಬಿಸಿ ಬಿಸಿ ರೈಸಿದ್ದದಿಲ್ಲಿ..

  ಹೋ…ಹು!

  ಹರೇ ರಾಮ

 5. ಊರಿಂದ ಹೆರ ಇದ್ದರೂ ಕಾರ್ಯಕ್ರಮ ತಪ್ಪಿದ್ದಿಲ್ಲೆ. ಒಪ್ಪಣ್ಣಂಗೆ ಧನ್ಯವಾದ

 6. ಭಾಗ್ಯಲಕ್ಶ್ಮಿ says:

  ಅಷ್ಟಾವಧಾನ ಪ್ರಸಾರದ ವೀಡಿಯೋ ವ ಮರದಿನ ನೋಡಿ ಆನ೦ದಿಸಿದವರಲ್ಲಿ ಆನೂ ಒಬ್ಬಳು. ಚಿತ್ರೀಕರಣ ಲಾಯ್ಕಾಯಿದು.ಧನ್ಯವಾದ.

 7. ಹರೇ ರಾಮ , ಕಾರ್ಯಕ್ರಮ ಅಮೋಘ! ಪುತ್ತೂರಿಂಗೆ ಪುತ್ತೂರೇ ಸೇರಿದ್ದಲ್ಲಿ ಮಿನಿಯ! ಅಪ್ರಸ್ತುತ ಪ್ರಸಂಗದ ಪ್ರಶ್ನೆ ಅದಕ್ಕೆ ಅವಧಾನಿಗಳಿಂದ ಥಟ್ಟನೆ ಬಪ್ಪ ಉತ್ತರವಂತೂ ಕೇಳುಗರಿಂಗೆ ಒಂದು ಟಾನಿಕ್ಕು ಕುಡುದಹಾಂಗಾಗಿ ಹಾಸ್ಯಕ್ಕೊಂದು ಇಡೀಸಭೆಂದನೆಗೆಬುಗ್ಗೆಪಸರುಸುವಗ ಅದೊಂದು ಚೆಂದ ಅಲ್ಲದೋ!

  • ಉಡುಪುಮೂಲೆ ಅಪ್ಪಚ್ಚಿ says:

   ಹರೇ ರಾಮ;ಬಾರೀ ಲಾಯ್ಕಆಯಿದು ಕಾರ್ಯಕ್ರಮ ನದೆಶಿಕೊಟ್ಟ ನಮ್ಮ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ(ರಿ.)ದ ಸರ್ವರಿ೦ಗು ಧನ್ಯವಾದ೦ಗೊ.ನಮಸ್ತೇ.

 8. ಒಪ್ಪವಾಗಿ ಕಾರ್ಯಕ್ರಮ ಆಯೋಜಿಸಿದ ಬಳಗಕ್ಕೆ ವಂದನೆಗಳು. ಪುತ್ತೂರಿನ ಆಸುಪಾಸಲ್ಲಿ ಅಷ್ಟೆಲ್ಲಾ ಕಾವ್ಯ ರಸಿಕರಿದ್ರಿ ಹೇಳೂದೇ ಹೆಮ್ಮೆಯ ವಿಷಯ. 🙂

 9. ಸೋಮ says:

  ಒಪ್ಪಣ್ಣ ನೆರೆಕೆರೆಯವರ ಆಯೋಜನೆ ಅದ್ಭುತವಾಗಿತ್ತು, ಪದ್ಯಪಾನತಾಣದಲ್ಲಿ ಛಂದೋಬದ್ಧ ಪದ್ಯರಚನೆಯಲ್ಲಿ ಭಾಗವಹಿಸಿ ಎಂದು ಕೇಳಿಕೊಳುತ್ತೇನೆ.

  • ರಘುಮುಳಿಯ says:

   ಪೃಚ್ಛಕರಾಗಿ ಆಗಮಿಸಿ ಕಾರ್ಯಕ್ರಮವ ಚೆ೦ದಗಾಣಿಸಿ ಕೊಟ್ಟ ನಿಮ್ಮೀರ್ವರಿ೦ಗೆ ನಮನ.

   ಸೋಮನಾಶುಕವಿತ್ವ
   ರಾಮನ ಸಮಸ್ಯೆಗಾ
   ಸ್ತೋಮ ನಿಬ್ಬೆರಗಾಗಿ ಮೈಯೆ ಕಿವಿಯಾಗೀ|
   ಸಾಮರಸ್ಯದಲೆ೦ಟು
   ಧಾಮದಲಿ ನವರಸದ
   ಹೋಮ ಮಾಳ್ದವಧಾನಿಗಳಿಗೆ ನಮಿಸಿದರೂ||

 1. April 11, 2014

  […] ಬೆಳೆತ್ತಾ ಇಪ್ಪ  ನಮ್ಮ ಈ-ಬೈಲು ಸಮಾಜಮುಖಿ ಕೆಲಸ೦ಗಳಲ್ಲಿ ತೊಡಗುಸಿಗೊ೦ಬ ಉದ್ದೇಶ೦ದ “ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ” ಸೇವಾಸ೦ಸ್ಥೆಯಾಗಿ ರೂಪುಗೊಂಡಿದು. ಆರೋಗ್ಯನಿಧಿ, ವಿದ್ಯಾನಿಧಿ, ಸಾಹಿತ್ಯ ನಿಧಿ, ಸಾಹಿತ್ಯ ಸ್ಪರ್ಧೆ – ಹೀಂಗೆ ಹತ್ತು ಹಲವು ವಿಭಾಗಂಗಳಲ್ಲಿ ಕೆಲಸ ಮಾಡ್ತಾ ಇದ್ದು. ಲಲಿತ ಕಲೆ ವಿಭಾಗಲ್ಲಿ ಕಳುದ ವರ್ಷದ ಎಪ್ರಿಲ್ ೨೧ ನೇ ತಾರೀಕು ಶತಾವಧಾನಿ ಡಾ.ಆರ್.ಗಣೇಶರ ನೇತೃತ್ವಲ್ಲಿ ಪುತ್ತೂರಿನ ಜೈನಭವನಲ್ಲಿ ”ಅಷ್ಟಾವಧಾನ” ಅಯೋಜನೆ ಮಾಡಿದ್ದತ್ತು. ನೆಂಪಿದ್ದನ್ನೇ? (ಸಂಕೊಲೆ) […]

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *