ಸವಣೂರಿಲಿ ರಕ್ತದಾನ, ದಂತತಪಾಸಣಾ ಶಿಬಿರ

September 22, 2011 ರ 9:30 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

|| ಹರೇರಾಮ ||
|| ಶ್ರೀ ಗುರುಭ್ಯೋ ನಮಃ ||

ಗೋಕರ್ಣಮಂಡಲಾಧೀಶ್ವರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶಯದ ಹಾಂಗೆ ಉಪ್ಪಿನಂಗಡಿ ಮಂಡಲ – ದರ್ಬೆ ಹವ್ಯಕವಲಯದ ನೇತೃತ್ವಲ್ಲಿ ರಕ್ತದಾನ, ರಕ್ತವರ್ಗೀಕರಣ, ದಂತ ತಪಾಸಣೆ ಹಾಂಗೂ ಚಿಕಿತ್ಸೆಯ ಶಿಬಿರ ಮೊನ್ನೆ 18-09-2011ನೇ ಆದಿತ್ಯವಾರ, ಪುತ್ತೂರು ತಾಲೂಕಿನ ಸವಣೂರಿನ ಶ್ರೀ ವಿನಾಯಕ ಸಭಾಭವನಲ್ಲಿ ನಡದತ್ತು.

ಈ ಕಾರ್ಯಕ್ರಮ ಶಂಖನಾದ ಮತ್ತೆ ಗುರುವಂದನೆಯೊಂದಿಂಗೆ ಸುರುವಾತು.
ಸವಣೂರಿನ ಡಾ.ರಾಜೇಶ್ ರೈ ದೀಪ ಹೊತ್ತುಸಿ ಕಾರ್ಯಕ್ರಮವ ಉದ್ಘಾಟಿಸಿದವು. ದೇಶಲ್ಲಿ ಅಪ್ಪ ಅಪಘಾತಂಗಳ ಬಗ್ಗೆ ಹಾಂಗೂ ದೇಶಲ್ಲಿಪ್ಪ ರಕ್ತದ ಕೊರತೆಯ ಬಗ್ಗೆ ಮಾತಾಡಿ ಈ ಕಾರ್ಯಕ್ರಮದ ಯಶಸ್ಸಿಂಗೆ ಶುಭ ಹಾರೈಸಿದವು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ.ಕೆ.ರಾಮಚಂದ್ರ ಭಟ್ ಮಾತಾಡಿ ರಕ್ತದಾನ ಹಾಂಗೂ ಅದರ ಮಹತ್ವವ ವಿವರಿಸಿದವು.
ರಕ್ತವ ಆರೆಲ್ಲ ದಾನಮಾಡ್ಲಕ್ಕು, ಅದಕ್ಕೆ ಆರೆಲ್ಲ ಯೋಗ್ಯರು ಹೇಳುದರ ಹೇಳಿದವು.
ಯಾವುದೇ ಮಾರಕ ರೋಗಂಗೊ ಇಲ್ಲದ್ದ ೧೮ ರಿಂದ ೬೦ ವರ್ಷದ ಒಳ ಇಪ್ಪವು ಆರೇ ಆದರೂ ರಕ್ತದಾನ ಮಾಡ್ಲಕ್ಕು. ಉದಾಹರಣೆಗೆ ಏಯ್ಡ್ಸ್, ಮಲೇರಿಯ, ಕಾಮಾಲೆ, ವಿಷಮಶೀತಜ್ವರ ಮುಂತಾದ ಇನ್ಫೆಕ್ಷನ್ ಇಪ್ಪವು, ಸಕ್ಕರೆಕಾಯಿಲೆ, ಕ್ಯಾನ್ಸರ್,ಕ್ಷಯ ಮೊದಲಾದ ಗುಣಪಡುಸುಲೆಡಿಯದ್ದ ರೋಗಂದ ಬಳಲುವವು, ದೀರ್ಘಾವಧಿಂದ ಔಷಧಂಗಳ ಬಳಸುವವು ಮೊದಲಾದವು ರಕ್ತದಾನ ಮಾಡುಲಾಗ.
ಒಂದರಿ ರಕ್ತದಾನ ಮಾಡಿದರೆ ಗಂಡಸರಿಂಗೆ ೩ ತಿಂಗಳುದೇ ಹೆಂಗಸರಿಂಗೆ ೪ ತಿಂಗಳವರೆಗುದೇ ರಕ್ತದಾನ ಮಾಡ್ಲಾಗ ಹೇಳಿ ರಕ್ತದಾನದ ಬಗ್ಗೆ ಸಂಕ್ಷಿಪ್ತ ವಾಗಿ ವಿವರುಸಿದವು.

ಹಾಂಗೇ ಇನ್ನೊಬ್ಬ ಮುಖ್ಯ ಅತಿಥಿಯಾಗಿ ಡಾ.ಶಿವಾನಂದರು ಮಾತಾಡಿ ದಂತತಪಾಸಣೆ ಮತ್ತು ಚಿಕಿತ್ಸೆಯ ಬಗ್ಗೆ ಮಾತಾಡಿ ಹಲ್ಲಿನ ಆರೋಗ್ಯ ಹಾಂಗೂ ಹಲ್ಲುಬೇನೆ ಬಂದರೆಮಾತ್ರ ದಂತವೈದ್ಯರಲ್ಲಿಗೆ ಹೋಪದಲ್ಲ, ೬ ತಿಂಗಳಿಂಗೆ ಒಂದರಿಯಾದರೂ ಹಲ್ಲಿನ ಪರೀಕ್ಷೆ ಮಾಡುಸಿಗೊಳ್ಳೆಕ್ಕು ಹೇಳಿ ಹೇಳಿದವು. ಈ ಸಭಾದ್ಯಕ್ಷತೆ ವಹಿಸಿ ಮಾತಾಡಿದ ದರ್ಬೆ ಹವ್ಯಕ ವಲಯದ ಅಧ್ಯಕ್ಷರಾದ ಶ್ರೀ ಹಿರಣ್ಯ ಗಣಪತಿ ಭಟ್ ನಮ್ಮ ಮಠದ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದವು.
ನಮ್ಮ ಗುರುಗಳ ಪ್ರಮುಖ ಯೋಜನೆ ಗಳಲ್ಲೊಂದಾದ ಗೋ ಸಂರಕ್ಷಣೆಯ ಬಗ್ಗೆ ವಿವರಿಸಿ ಚೊಕ್ಕಕ್ಕೆ ಅಧ್ಯಕ್ಷರ ಭಾಷಣ ಮಾಡಿದವು.
ದರ್ಬೆ ವಲಯದ ಶಿವಶಂಕರ ಭಟ್ ವೇದಿಕೆಲಿ ಇತ್ತಿದ್ದವು. ಶಿವರಾಮ ಕಜೆ ಸ್ವಾಗತಿಸಿದವು. ವೆಂಕಟೇಶ್ ವಿ. ಕಾರ್ಯಕ್ರಮ ನಿರೂಪಿಸಿದವು.

ಹಲವಾರು ಜನಂಗೊ ರಕ್ತದಾನಮಾಡಿ ಈ ಮಹಾಪುಣ್ಯ ಕಾರ್ಯಲ್ಲಿ ಭಾಗವಹಿಸಿದವು. ರಕ್ತದಾನ ಮಾಡಿದವಕ್ಕೆ ಜ್ಯೂಸಿನೊಟ್ಟಿಂಗೆ ನಮ್ಮ ಗುರುಗಳ ಪಟವನ್ನೂ ಕೊಟ್ಟಿದವು.
ಈ ಕಾರ್ಯಕ್ರಮದ ಯಶಸ್ಸಿಂಗೆ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು, ಕೆ.ವಿ.ಜಿ.ದಂತಮಹಾವಿದ್ಯಾಲಯ ಸುಳ್ಯ, ಸವಣೂರಿನ ವಿದ್ಯಾರಶ್ಮಿ ಸ್ಕೂಲ್ ಆಫ್ ನರ್ಸಿಂಗ್, ಶ್ರೀ ಶಾರದಾಂಬಾ ಸೇವಾ ಸಂಘ, ಸವಣೂರು ಯುವಕ ಮಂಡಲ, ಅಶ್ವಿನಿ ಗ್ರಾಮವಿಕಾಸ ಪ್ರತಿಷ್ಠಾನ, ಬದ್ರಿಯಾ ಜುಮ್ಮಾ ಮಸೀದಿ ಮೊದಲಾದ ಹಲವಾರು ಸಂಘ ಸಂಸ್ಥೆಗೊ, ಹಾಂಗೂ ಸವಣೂರು ಹಾಗೂ ಕಾಣಿಯೂರಿನ ವೈದ್ಯರುಗಳಾದ ಡಾ.ಸುಬ್ರಹ್ಮಣ್ಯ ಭಟ್, ಡಾ.ಶ್ಯಾಮಸುಂದರ್, ಡಾ.ಅಶ್ವಿನ್, ಡಾ.ರವಿಶಂಕರ್ ಯೇಳ್ಕಾನ, ಡಾ.ಉದಯಕುಮಾರ್ ಮೊದಲಾದವು ಸಹಕರಿಸಿದ್ದವು. – ಹೀಂಗೆ ಊರಜನರ ಸಹಕಾರಂದ ಈ ಶಿಬಿರ ಚೆಂದಲ್ಲಿ ನಡದತ್ತು.

ವರದಿ: ವಿದ್ಯಾರವಿಶಂಕರ್ ಯೇಳ್ಕಾನ

ಸವಣೂರಿಲಿ ರಕ್ತದಾನ, ದಂತತಪಾಸಣಾ ಶಿಬಿರ, 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಒಳ್ಳೆ ಕಾರ್ಯಕ್ರಮ . ಒಳ್ಳೆ ಶುದ್ದಿ. ಬೈಲಿ ಹಂಚಿದ್ದಕ್ಕೆ ಧನ್ಯವಾದವೂ.

  ಹ್ಮ್ಮ್ಮ್..ಏ.., ಸುಭಾವ, ನಾವು ಕಣ್ಣು ಪರೀಕ್ಷೆ ಬಪ್ಪಗ ಹೋಪೋ° ಅಲ್ಲದೋ!!.

  ಇದೇ ರೀತಿ E N T ಶಿಬಿರವೂ ನಡೆಯಲಿ ಹೇಳಿ ಆಶಯ.

  [Reply]

  ವಿದ್ಯಾ ರವಿಶಂಕರ್

  ವಿದ್ಯಾ ರವಿಶಂಕರ್ Reply:

  ಇನ್ನು ಕಣ್ಣು ಪರೀಕ್ಷೆದೆ , ಇ ಎನ್ ಟಿ ಶಿಬಿರದೆ ಅಪ್ಪಗ ನಿಂಗೊಗೆ ತಿಳಿಸುತ್ತೆ.

  [Reply]

  VN:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಉಪ್ಪಿನಂಗಡಿ ಮಂಡಲ – ದರ್ಬೆ ಹವ್ಯಕವಲಯದ ನೇತೃತ್ವಲ್ಲಿ, ಹಲವಾರು ಸಂಘ ಸಂಸ್ಥೆಗಳ ಸೇರಿಸಿಂಡು,ಜೆನಂಗೊಕ್ಕೆ ರಕ್ತದಾನ ಮತ್ತೆ ಹಲ್ಲಿನ ಆರೋಗ್ಯ ಬಗ್ಗೆ ಮಾಹಿತಿ ಕೊಟ್ಟು ಮಾಡಿದ ಈ ಕಾರ್ಯಕ್ರಮ ಶ್ಲಾಘನೀಯ.

  [Reply]

  ವಿದ್ಯಾ ರವಿಶಂಕರ್

  ವಿದ್ಯಾ ರವಿಶಂಕರ್ Reply:

  ನಿಜ ಶರ್ಮಪ್ಪಚ್ಹಿ.

  [Reply]

  VN:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಒಳ್ಳೆ ಶುದ್ದಿ. ಹೀ೦ಗಿರ್ತ ಸಮಾಜಸೇವಾ ಕಾರ್ಯಕ್ರಮ೦ಗೊ ಹೆಚ್ಚು ಹೆಚ್ಚು ನೆಡೆಯಲಿ ಹೇಳಿ ಹಾರೈಸುವ°.

  [Reply]

  VA:F [1.9.22_1171]
  Rating: 0 (from 0 votes)
 4. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಹೀಂಗಿಪ್ಪ ಶಿಬಿರ ಎಲ್ಲಾ ವಲಯಂಗಳಲ್ಲೂ ನಡೆಯುವ ಹಾಂಗಾಗಲಿ. ಶ್ರೀ ಗುರುಗಳ ಆಶಯ ನೆರವೇರುವ ಹಾಂಗಾಗಲಿ.

  [Reply]

  VN:F [1.9.22_1171]
  Rating: 0 (from 0 votes)
 5. ಮಂಗ್ಳೂರ ಮಾಣಿ

  ಕೋಲೇಜಿಂಗೆ ಹೋಪಗ ರಕ್ತದಾನ ಶಿಬಿರದ ಆಯೋಜನೆ ಮಾಡಿಯೊಂಡಿದ್ದದು ನೆಂಪಾತು.. ಒೞೆ ಕಾರ್ಯಕ್ರಮ…
  ಅಭಿನಂದನೆಗೊ…

  [Reply]

  VN:F [1.9.22_1171]
  Rating: 0 (from 0 votes)
 6. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಧನ್ಯವಾದಂಗೊ ತಮ್ಮಂಗೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ಕಾವಿನಮೂಲೆ ಮಾಣಿಪೆರ್ಲದಣ್ಣಗೋಪಾಲಣ್ಣತೆಕ್ಕುಂಜ ಕುಮಾರ ಮಾವ°ಅನುಶ್ರೀ ಬಂಡಾಡಿಶ್ಯಾಮಣ್ಣಗಣೇಶ ಮಾವ°ದೊಡ್ಡಭಾವಡೈಮಂಡು ಭಾವಅಜ್ಜಕಾನ ಭಾವಚೂರಿಬೈಲು ದೀಪಕ್ಕಅನು ಉಡುಪುಮೂಲೆಶಾಂತತ್ತೆವಿಜಯತ್ತೆಚುಬ್ಬಣ್ಣಪುಣಚ ಡಾಕ್ಟ್ರುವಸಂತರಾಜ್ ಹಳೆಮನೆಪ್ರಕಾಶಪ್ಪಚ್ಚಿಒಪ್ಪಕ್ಕಕಳಾಯಿ ಗೀತತ್ತೆಕೊಳಚ್ಚಿಪ್ಪು ಬಾವನೀರ್ಕಜೆ ಮಹೇಶಕಜೆವಸಂತ°ಚೆನ್ನೈ ಬಾವ°ಬಟ್ಟಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ