ಜೀವನದ ರಂಗಭೂಮಿಗೆ ಸ್ಫೂರ್ತಿ – ರಂಗನಾಟಕ ತರಬೇತಿ ಶಿಬಿರ

April 1, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲಾ ಮಕ್ಕಳಲ್ಲಿ ಸುಪ್ತವಾಗಿ ಪ್ರತಿಭೆಗ ಇರ್ತು.  ಕೆಲವು ತಾನಾಗಿಯೇ ಹೆರ ಬತ್ತು.
ಕೆಲವಕ್ಕೆ ಹೆರ ತಪ್ಪಲೆ ಮಾಧ್ಯಮ ಬೇಕಾವುತ್ತು, ಮತ್ತೆ ಕೆಲವಕ್ಕೆ ಇನ್ನೊಬ್ಬನ ಮಾರ್ಗದರ್ಶನ ಬೇಕಾವುತ್ತು.
ಯಾವ ಮಕ್ಕಳೂ ಯಾವುದರಲ್ಲಿಯೂ ಕಡಮ್ಮೆ ಅಲ್ಲ. ಅವರಲ್ಲಿ ಎಂತ ಪ್ರತಿಭೆ ಅಡಗಿದ್ದು ಹೇಳಿ ಹುಡುಕ್ಕುದು ಅಬ್ಬೆ, ಅಪ್ಪನ, ಮಾಷ್ಟ್ರಕ್ಕಳ ಕೆಲಸ.
ಮಕ್ಕಳಲ್ಲಿ ಪ್ರತಿಭೆ ಕಂಡಪ್ಪಗ ಅದಕ್ಕೆ ಪೂರಕ ಆಗಿಪ್ಪದರ ಕೊಟ್ಟು, ಆ ಪ್ರತಿಭೆ ಬೆಳದು, ಮಕ್ಕೊದೇ ಅದರ ಒಟ್ಟಿಂಗೆ ಬೆಳವಲೆ ಪ್ರೇರೇಪಣೆ ಕೊಡೆಕ್ಕು…
ಯಾವ ಬೆಳವಣಿಗೆದೆ ಒಂದಕ್ಕೆ ಒಂದು ಪೂರಕ ಆಗಿರೆಕ್ಕೇ ಹೊರತು ಮಾರಕ ಅಪ್ಪಲಾಗ..ಒಂದು ವೇಳೆ ಮಾರಕ ಆದಲ್ಲಿ ಮಕ್ಕಳ ಬಾಲ್ಯವೇ ಮುರುಟಿ ಹೋಕು.

ಮಕ್ಕಳಲ್ಲಿ ಇಪ್ಪ ಪ್ರತಿಭೆಯ ಹೆರ ಹಾಕುಲೆ ಒಂದು ಮಾಧ್ಯಮ ರಂಗ ನಾಟಕ. ಇದರಲ್ಲಿ ಮಕ್ಕೊ, ಕಥೆಯ ಹುಟ್ಟು ಹಾಕುವಲ್ಲಿಂದ ಹಿಡುದು, ಅದರ ಬೆಳೆಶಿ, ಅದಕ್ಕೆ ಬೇಕಪ್ಪ ಎಲ್ಲಾ ಮಾತುಗಳ ರಚನೆ, ಪಾತ್ರಂಗಳ ನಿರ್ವಹಣೆ ಮಾಡಿ, ಕಥೆಯ ನಾಟಕವಾಗಿ ಪರಿವರ್ತನೆ ಮಾಡಿ ಅದರ ಸಮರ್ಪಕವಾಗಿ ರಂಗದ ಮೇಲೆ ಪ್ರದರ್ಶನ ಮಾಡುವಷ್ಟು ಕಲಿತ್ತವು.
ಇಷ್ಟು ಆದಪ್ಪಗ ಮಕ್ಕೊ ಆರೂ ಕಲಿಶದ್ದೆ ಸುಮಾರು ವಿಷಯಂಗಳ ಕಲಿತ್ತವು.
ಮಕ್ಕಳಲ್ಲಿ ಎಲ್ಲವನ್ನೂ ಗಮನಿಸುವ ಶಕ್ತಿ, ಸೃಜನಶೀಲತೆ, ಇನ್ನೊಬ್ಬನ ಒಟ್ಟಿಂಗೆ ಹೊಂದಾಣಿಕೆ, ಏಕಾಗ್ರತೆ, ನೆನಪ್ಪು ಶಕ್ತಿ ಎಲ್ಲವೂ ಹೆಚ್ಚುತ್ತು. ಒಂದು ಕತೆಯ, ಯಾವ ಒತ್ತಡವೂ ಇಲ್ಲದ್ದೆ ಎದುರು ಕೂದವಕ್ಕೆ ಸರಿಯಾಗಿ ಮನದಟ್ಟು ಅಪ್ಪ ಹಾಂಗೆ ನಾಟಕದ ರೂಪಲ್ಲಿ ತಪ್ಪಲೆ ತಮ್ಮಂದ ಆದ ಎಲ್ಲಾ ಪ್ರಯತ್ನ ಮಾಡ್ತವು.

ರಂಗದ ಮೇಲೆ ನಾಟಕದ ರೂಪಲ್ಲಿ ಮಕ್ಕಳ ಪ್ರತಿಭೆ ಹೆರ ಬಪ್ಪಗ ಅವರಲ್ಲಿ ಆತ್ಮವಿಶ್ವಾಸವೂ ಬೆಳೆತ್ತು.
ಮಕ್ಕೊ ನಾಟಕದ ಒಟ್ಟಿಂಗೆ ಬೆಳೆತ್ತವು. ನಾಟಕದ ತರಬೇತಿ ಮುಗುದ ಮೇಲೆದೇ ಮಕ್ಕೊ ತಮ್ಮ ಸುತ್ತಲೂ ಇಪ್ಪ ಪ್ರಕೃತಿಯ,ಪ್ರಾಣಿಗಳ, ಆಸುಪಾಸಿನ ಜನಂಗಳ, ಅವರ ಅಭಿವ್ಯಕ್ತಿಗಳ ಎಲ್ಲವನ್ನೂ ಇನ್ನೂ ಹೆಚ್ಚು ಗಮನಿಸುಲೇ ಸುರು ಮಾಡ್ತವು. ಇದೆಲ್ಲವೂ ಬೆಳವಣಿಗೆಯ ಒಂದು ಭಾಗವೇ!!

ಈ ಎಲ್ಲಾ ಬದಲಾವಣೆಗೆ ಎಲ್ಲಾ ನಾಟಕ ತರಬೇತಿಲಿ ಸಿಕ್ಕುಗು ಹೇಳುಲೆ ಎಡಿಯ. ಅದರ ನಿರ್ವಹಿಸುವವ್ವು ಮಕ್ಕಳಿಂದ ಎಲ್ಲವನ್ನೂ ಯಾವ ರೀತಿಲಿ ಹೆರ ಹಾಕುಸುತ್ತವು ಹೇಳುದರ ಮೇಲೆ ಹೊಂದಿಗೊಂಡಿರ್ತು ಇದು. ಪ್ರದರ್ಶನಕ್ಕೆ ಮಾಂತ್ರ ಸೀಮಿತ ಮಾಡಿ ನಾಟಕ ತಯಾರಿ ಮಾಡಿದರೆ ಅದು ಪ್ರದರ್ಶನಕ್ಕೆ ತಕ್ಕಷ್ಟೇ ಮಕ್ಕೊಗೆ ಬೆಳವಲೇ ಅವಕಾಶ ಮಾಡಿ ಕೊಡುಗು.
ಮಕ್ಕಳ ಪೂರ್ತಿ ವಿಕಸನ ಆಯೆಕ್ಕಾದರೆ ಎಲ್ಲವನ್ನೂ ಮಕ್ಕಳ ಹತ್ತರೆ ಮಾಡುಸಿ, ಬೆಳೆಶಿ ಅಗತ್ಯ ಇದ್ದಲ್ಲಿ ಸರಿಯಾದ ಮಾಹಿತಿ ಕೊಟ್ಟು, ಅದರ ಇನ್ನುದೇ ಚೆಂದ ಮಾಡುಲೆ ತಿದ್ದುವ ಸೂಚನೆಗಳ ಕೊಟ್ಟು, ಮಕ್ಕಳೇ ಅದರ ಮೂರ್ತ ರೂಪಕ್ಕೆ ತಪ್ಪ ಹಾಂಗೆ ಮಾಡಿ ಅಪ್ಪಗ ಮಕ್ಕಳಲ್ಲಿ ಸಂತೋಷ ಇರ್ತು, ಮಕ್ಕಳ ನಿರ್ದೇಶನ ಮಾಡಿದ ನಿರ್ದೇಶಕಂಗೂ, ಮಕ್ಕಳ ಹೆತ್ತವಕ್ಕೂ ಸಂತೃಪ್ತಿ ಇರ್ತು.
ಶಿಬಿರ ಮುಗುದಪ್ಪಗ ಮಕ್ಕೋ ಮತ್ತಾಣ ವರ್ಷದ ಶಿಬಿರವ ಎದುರು ನೋಡುವ ಹಾಂಗೆ ಆವುತ್ತು.

ಹೀಂಗೇ ಇಪ್ಪ ಒಂದು ಶಿಬಿರ ವಿವೇಕಾನಂದ ವಿದ್ಯಾ ಸಂಸ್ಥೆಗಳ ಮತ್ತೆ “ಸಮಸಾಂಪ್ರತಿ“, ವಿಟ್ಲದ ನಿರ್ದೇಶಕರಾದ ಮೂರ್ತಿ ದೇರಾಜೆಯವರ ನೇತೃತ್ವಲ್ಲಿ ಪುತ್ತೂರಿನ ವಿವೇಕಾನಂದ ಶಿಶು ಮಂದಿರಲ್ಲಿ ಎಪ್ರಿಲ್ 3 ರಿಂದ ನಡೆತ್ತು.
ನಮ್ಮ ಮಕ್ಕಳ ಪ್ರತಿಭೆಯ ಗುರುತುಸುಲೇ ಇಪ್ಪ ಒಂದು ಅವಕಾಶವ ಎಲ್ಲೋರೂ ಸದುಪಯೋಗ ಮಾಡಿಗೊಳ್ಳಿ ಹೇಳಿ ಹಾರೈಸುತ್ತೆ.

ಜೀವನದ ರಂಗಭೂಮಿಗೆ ಸ್ಫೂರ್ತಿ - ರಂಗನಾಟಕ ತರಬೇತಿ ಶಿಬಿರ , 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಸಾವಿತ್ರಿ ಮಳಿ

  ಇದು ಆನು ಬರದ್ದು ಯಕ್ಷ ಶಿಕ್ಷಣ ಕಾರ್ಯಾಗಾರದ ಬಗ್ಗೆ ಆತನ್ನೆ………ಇದು 15-04-110ರಿಂದ22-04-11ರ ವರೆಗೆ.
  ಎರಡೂ ಇಪ್ಪದು ಮಕ್ಕೊಗೆ .

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಸಾವಿತ್ರಿ ಚಿಕ್ಕಮ್ಮ, ನಿಂಗಳ ಒಪ್ಪ ನೋಡಿ ಕೊಶೀ ಆತು. ನಿಂಗೊಗೆ ಮಕ್ಕೊಗೆ ಎಲ್ಲ ಸಿಕ್ಕಲಿ ಹೇಳ್ತ ಕಾಳಜಿ ಎಷ್ಟಿದ್ದು ಹೇಳಿ ಗೊಂತಾವುತ್ತು. ಯಾವ ಮಕ್ಕೊಗುದೇ ಇಪ್ಪ, ಸಿಕ್ಕುವ ಅವಕಾಶಂಗ ತಪ್ಪದ್ದೆ ಇರಳಿ ಹೇಳ್ತ ಕಳಕಳಿ ನಿಂಗಳಲ್ಲಿ ಇದ್ದು. ಎನಗೆ ನಿಂಗಳ ಈ ಗುಣ ತುಂಬಾ ಇಷ್ಟ ಅಪ್ಪದು. ಯಕ್ಷಶಿಕ್ಷಣ ಕಾರ್ಯಾಗಾರ ನಾಳೆ ಸಮಾರೋಪ. ಮಕ್ಕಳ ರಂಗತರಬೇತಿ ಶಿಬಿರದ್ದು ಮೊನ್ನೆ ಆತು. ಮಕ್ಕೋ ತುಂಬಾ ಕೊಶಿ ಪಟ್ಟವು. ಬೈಲಿಂಗೆ ಬಪ್ಪಲೆದೇ ನಿನ್ನೆಂದಲೇ ಪುರುಸೋತ್ತು ಆದ್ದದು ಎನಗೆ!!!

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಸಂಪಾದಕ°ಚುಬ್ಬಣ್ಣಸರ್ಪಮಲೆ ಮಾವ°ಕೇಜಿಮಾವ°ಪಟಿಕಲ್ಲಪ್ಪಚ್ಚಿಚೂರಿಬೈಲು ದೀಪಕ್ಕದೀಪಿಕಾದೇವಸ್ಯ ಮಾಣಿಅನಿತಾ ನರೇಶ್, ಮಂಚಿಶರ್ಮಪ್ಪಚ್ಚಿವೆಂಕಟ್ ಕೋಟೂರುಡಾಮಹೇಶಣ್ಣದೊಡ್ಡಮಾವ°ಅನು ಉಡುಪುಮೂಲೆಹಳೆಮನೆ ಅಣ್ಣಅಡ್ಕತ್ತಿಮಾರುಮಾವ°ಬೊಳುಂಬು ಮಾವ°ಕಾವಿನಮೂಲೆ ಮಾಣಿಯೇನಂಕೂಡ್ಳು ಅಣ್ಣವಿನಯ ಶಂಕರ, ಚೆಕ್ಕೆಮನೆಬಟ್ಟಮಾವ°ಮಂಗ್ಳೂರ ಮಾಣಿಅಜ್ಜಕಾನ ಭಾವಕಜೆವಸಂತ°ನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ