ರುದ್ರ, ಚಮಕಾಧ್ಯಾಯ ಭಾಷ್ಯ.

March 13, 2011 ರ 6:30 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮುಖ ಪುಟ

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಂಕಲ್ಪ ಮತ್ತೆ ಪ್ರೇರಣೆಂದಾಗಿ ನಮ್ಮ ಸಮಾಜಲ್ಲಿ ರುದ್ರ ‘ಕ್ರಮ ಪಾಠ’ ಕಲಿತ್ತವರ ಸಂಖ್ಯೆ ಜಾಸ್ತಿ ಆವ್ತಾ ಇದ್ದು. ಉದ್ಯೋಗಲ್ಲಿ ಇಪ್ಪವು, ಡಾಕ್ಟ್ರಕ್ಕೊ, ಎಂಜಿನಿಯರ್ ಗೊ, ವಿದ್ಯಾರ್ಥಿಗೊ, ಸಮಾಜದ ವಿವಿಧ ಸ್ತರಲ್ಲಿ ಇಪ್ಪ ಬೇರೆ ಬೇರೆ ಪ್ರಾಯದ ಶ್ರೀ ಮಠದ ಶಿಷ್ಯವೃಂದದವು, ಅವರವರ ಸಮಯಂಗಳ ಹೊಂದಿಸಿಗೊಂಡು  ಇದರಲ್ಲಿ ಆಸಕ್ತಿ ತೋರುಸುತ್ತಾ ಇಪ್ಪದು ಸಂತೋಷದ ವಿಶಯವೇ ಸರಿ.

ಕಲುಶುತ್ತ ಗುರುಗೊ ಹೇಳಿ ಕೊಟ್ಟದರ ಹಾಂಗೇ ಒಪ್ಪುಸುವದರೊಟ್ಟಿಂಗೆ, ನಾವು ಈ ಮಂತ್ರಂಗಳ ಮೂಲಕ ದೇವರಲ್ಲಿ ಎಂತರ  ಕೇಳಿಗೊಳ್ತಾ ಇದ್ದು, ನವಗೆ ಇದರಿಂದಾಗಿ ಆಧ್ಯಾತ್ಮಿಕವಾಗಿ ಎಂತ ಪ್ರಯೋಜನ ಇದ್ದು ಹೇಳಿ ತಿಳ್ಕೊಂಡು ಪಠನ ಮಾಡಿರೆ ಅಂಬಗ ಸಿಕ್ಕುವ ಅನುಭವವೇ ಬೇರೆ.

ಇದರ ಅಗತ್ಯವ ತಿಳ್ಕೊಂಡ ಡಾ|| ಮಡ್ವ ಶಾಂ ಭಟ್ ಇವು ಇದೇ ಮಂತ್ರಂಗಳ ಸರಳ ಕನ್ನಡ ಅನುವಾದ ಮಾಡಿ ಪದ್ಯ ರೂಪಲ್ಲಿ ಕೊಟ್ಟವು. ಬೈಲಿಲ್ಲಿ “ರುದ್ರ ಗೀತೆ” ಇದಾಗಲೇ ವಾರವಾರ ಪ್ರಕಟ ಆವ್ತಾ ಇದ್ದು. ಸಂಸ್ಕೃತ ಅಧ್ಯಯನ,ಮಾಡದ್ದವಕ್ಕೆ ಅರ್ಥ ಗ್ರಹಿಸಿಗೊಂಬಲೆ ಇದು ಸಹಕಾರಿ ಆಯಿದು ಹೇಳುವದು ಬಂದ ಒಪ್ಪಂಗಳಿಂದ ತಿಳುದು ಬಯಿಂದು. ಡಾಕ್ಟ್ರು ಈ ಪುಸ್ತಕದ ಮುನ್ನುಡಿಲಿ ಈ ರೀತಿ ಕೊಟ್ಟಿದವು:

“ಪದ್ಯ ರೂಪದ ಅನುವಾದದಲ್ಲಿ ಭಾವಾರ್ಥಕ್ಕೆ ಪ್ರಾಧಾನ್ಯತೆ ಕೊಡಲಾಗಿದೆ. ಋಷಿ ಮುಖದಿಂದ ಬಂದ ಮಂತ್ರಗಳಿಗೆ ಸ್ವರ ಗಾಂಭೀರ್ಯವೂ, ಅರ್ಥ ಸೌಂದರ್ಯವೂ, ರಸ ತನ್ಮಯತೆಯೂ ಇರುವುದರಿಂದ ಕೆಲವು ವೇದ ಮಂತ್ರಗಳನ್ನು ಆಯ್ದು ಜನ ಸಾಮಾನ್ಯನಿಗೆ ಆಸ್ವಾದಿಸುವುದಕ್ಕಾಗಿ ಜನ ಸಾಮಾನ್ಯನೊಬ್ಬನು ಇಲ್ಲಿ ಯತ್ನಿಸಿದ್ದಾನೆ”

ಗೀತೆ ಬರೆವಾಗ ಅದರದ್ದೇ ಚೌಕಟ್ಟು ಇದ್ದ ಕಾರಣ ಎಲ್ಲಾ ವಿವರವೂ ಅಲ್ಲಿ ಸಿಕ್ಕ. ಅವರವರ ಭಾವಕ್ಕೆ ಸರಿಯಾಗಿ ಅರ್ಥ ಮಾಡೆಕ್ಕಾವ್ತು.

ಇದರ ಹೆಚ್ಚಿನ ಅರ್ಥ ತಿಳಿವಲೆ ಹೇಳಿ ಪ್ರಯತ್ನ ಮಾಡುವಾಗ ಎನಗೆ ಸಿಕಿದ ಎರಡು ಅಧ್ಯಯನ ಯೋಗ್ಯ ಕೃತಿಗಳ ಬಗ್ಗೆ ರೆಜ ವಿವರ ಕೊಟ್ಟರೆ, ಆಸಕ್ತರಿಂಗೆ ಹೆಚ್ಚು ತಿಳಿವಲೆ ಸಹಾಯ ಆವ್ತು ಹೇಳ್ತ ದೃಷ್ಟಿಂದ ಅದರ ಬಗ್ಗೆ ಎರಡು ಮಾತುಗೊ ಇಲ್ಲಿ ಪ್ರಸ್ತುತ ಹೇಳಿ ಜಾನ್ಸುತ್ತೆ.

ರುದ್ರಕ್ಕೆ ಭಾಷ್ಯ ಬರದ ಪುಸ್ತಕ “ ರುದ್ರ ಭಾಷ್ಯ ಪ್ರಕಾಶ “ ಮತ್ತೆ ಚಮಕಕ್ಕೆ “ಚಮಕಾಧ್ಯಾಯ ಭಾಷ್ಯ” ಹೇಳ್ತ ಎರಡು ಕೃತಿಗಳ ಬಗ್ಗೆ ತಿಳ್ಕೊಂಬೊ°

ಇದರ ಲೇಖಕರ ಬಗ್ಗೆ:

ದಿ. ವೇ|| ಬ್ರ||ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹ ಮೂರ್ತಿಗಳು:

ಇವರ ಅಪ್ಪ° ಶೃಂಗೇರಿಯ ಕೃಷ್ಣ ಯಜುರ್ವೇದ ಸಲಕ್ಷಣ ಘನಾಂತ ಸ್ಮಾರ್ತ ಪ್ರಯೋಗ ವಿದ್ವಾಂಸರಾಗಿತ್ತಿದ್ದ ವೇ|| ಶ್ರೀಕಂಠ ಘನಪಾಠಿಗಳು. ಶ್ರೀ ಲಕ್ಷ್ಮೀನರಸಿಂಹ ಮೂರ್ತಿಗಳ ವೇದಾಭ್ಯಾಸಕ್ಕೆ ಅರಂಬಿಕ ಗುರು ಇವೇ. ಮುಂದೆ ಹೊಳೆನರಸೀಪುರಲ್ಲಿ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮೀಜಿಗಳಿಂದ ಸ್ಥಾಪಿಸಲ್ಪಟ್ಟ “ಆಧ್ಯಾತ್ಮ ನಿಲಯ” ಇಲ್ಲಿ ಶ್ರೀ ಶ್ರೀಗಳಿಂದಲೇ ೫ ವರ್ಷ ಕಾಲ ಶಾಂಕರ ಭಾಷ್ಯ ಪ್ರಸ್ಥಾನಂಗಳ ಅಧ್ಯಯನ ಮಾಡಿ “ಆಧ್ಯಾತ್ಮ ಪ್ರವೀಣ” ಪ್ರಶಸ್ತಿಯ ಪಡಕ್ಕೊಂಡವು. ಪಾಠ, ಪ್ರವಚನ, ವೇದಾಂತ ಪ್ರಚಾರ, ಗ್ರಂಥ ರಚನೆ, ಪ್ರಕಾಶನ ಕಾರ್ಯಂಗಳಲ್ಲಿ ತನ್ನ ತೊಡಗಿಸಿಗೊಂಡು ಧಾರ್ಮಿಕ ಕ್ಷೇತ್ರಕ್ಕೆ  ದೊಡ್ಡ ಕೊಡುಗೆಯನ್ನೇ ಕೊಟ್ಟವು.

ಕೃತಿಲಿ ಇಪ್ಪ ಕೆಲವು ವಿಶಯಂಗಳ, ಇವರ ಮಾತಿಲ್ಲಿಯೇ ಕೇಳುವೊ°

ಈಗ ರುದ್ರ ಶಿವ- ಎಂಬೀ ಎರಡು ನಾಮಗಳ ಮಹಿಮೆಯನ್ನು ಸ್ವಲ್ಪ ವಿಚಾರ ಮಾಡ ಬಹುದಾಗಿದೆ. ಭಗವಂತನಾದ ರುದ್ರನಿಗೆ ನಾಮರೂಪವಿಶಿಷ್ಟವಾದ ರೂಪವೊಂದು, ನಾಮ ರೂಪಗಳಿಲ್ಲದ ಸ್ವರೂಪವೊಂದು-ಹೀಗೆ ಎರಡು ವಿಧವಾದ ರೂಪಗಳಿವೆ. ಸ್ವತಃ ನಿರ್ಗುಣನೂ ನಾಮರೂಪಾತೀತನೂ ಆಗಿದ್ದರೂ, ಪರಮೇಶ್ವರನು ತನ್ನ ಇಚ್ಛಾವಶದಿಂದ ಮಾಯವಾದ ರೂಪವನ್ನು ಸಾಧಕರ ಅನುಗ್ರಹಕ್ಕಾಗಿ ಸ್ವೀಕರಿಸಬಹುದು ಎಂದು ಶ್ರೀ ಶಂಕರಾಚಾರ್ಯರು ತಮ್ಮ ಭಾಷ್ಯಗ್ರಂಥಗಳಲ್ಲಿ ತಿಳಿಸಿರುತ್ತಾರೆ.

ರುದಂ ಸಂಸಾರ ದುಃಖಂ ದ್ರಾವಯತಿ ನಾಶಯತೀತಿ ಇತಿ ರುದ್ರಃ-ಎಂದರೆ ಸಂಸಾರವೆಂಬ ಸುಖ ದುಖಃ ಭೋಗರೂಪವಾದ ಕರ್ಮಫಲಗಳ ಸಂತಾನವನ್ನು ನಾಶಗೊಳಿಸುವನಾದ್ದರಿಂದ ರುದ್ರನು ಸಂಸಾರ ದುಖಃನಾಶಕನೆಂದು ಅಭಿಪ್ರಾಯ.

ರುತಿಂ ಶಬ್ದಂ ವೇದರೂಪಂ ರಾತಿ ದದಾತೀತಿ ರುದ್ರಃ-ಎಂದರೆ ಶಬ್ದ ರೂಪವಾದ ವೇದ ರಾಶಿಯನ್ನು ಜಗತ್ತಿಗೆ ಅನುಗ್ರಹಿಸಿದವನು ರುದ್ರನು ಎಂದೂ ಹೇಳ ಬಹುದು

ಶಿವ ಎಂದರೆ ಹದಿನಾರು ಶಿವಗುಣಗಳು ಉಳ್ಳವನು ಎಂದರ್ಥ. ಹೇಗೆಂದರೆ: ಸರ್ವಜ್ಞತ್ವ, ತೃಪ್ತಿ, ಅನಾದಿ ಜ್ಞಾನ, ಸ್ವಾತಂತ್ರ್ಯ, ಅಲುಪ್ತ ಶಕ್ತಿ, ಅನಂತ ಶಕ್ತಿ- ಈ ಅರಕ್ಕೂ ಷಡಂಗಗಳೆಂದು ಹೆಸರು, ಜ್ಞಾನ ವೈರಾಗ್ಯ ಐಶ್ವರ್ಯ, ತಪಸ್ಸು, ಸತ್ಯ, ಕ್ಷಮೆ, ಧೃತಿ, ಸ್ರಷ್ಟೃತ್ವ, ಆತ್ಮ ಜ್ಞಾನ, ಅಧಿಷ್ಠಾತೃತ್ವ-ಈ ಹತ್ತಕ್ಕೆ  ಅವ್ಯಯಗಳೆಂದು ಹೆಸರು. ಈ ಹದಿನಾರು ಶಿವಗುಣಗಳಿರುವದರಿಂದ ಭಗವಂತನಿಗೆ “ಶಿವ” ನೆಂಬ ಹೆಸರು ಬಂದಿದೆ.

***

ಈ ರುದ್ರಾಧ್ಯಾಯಕ್ಕೆ ಸಾಯಣಾಚಾರ್ಯರ ಭಾಷ್ಯವಲ್ಲದೆ. ಭಟ್ಟ ಭಾಸ್ಕರ ಭಾಷ್ಯ, ಶ್ರೀಮದಭಿನವಶಂಕರಾಚಾರ್ಯ ಭಾಷ್ಯ, ಶ್ರೀ ವಿಷ್ಣು ಸೂರಿಗಳ ಭಾಷ್ಯ-ಎಂಬೀ ಮೂರು ಭಾಷ್ಯಗಳಿವೆ.

ಪ್ರಕೃತ ರುದ್ರ ಭಾಷ್ಯಕಾರರುಗಳಲ್ಲಿ ಅಭಿನವ ಶಂಕರರ ಭಾಷ್ಯವನ್ನೇ ನಾನು ಇಲ್ಲಿ ಹೆಚ್ಚಾಗಿ ಅನುಸರಿಸಿದ್ದೇನೆ.

ಚಮಕಾಧ್ಯಾಯಕ್ಕೆ “ಅಭಿನವ ಶಂಕರರ ಭಾಷ್ಯ”ವಿಲ್ಲ. ಇಲ್ಲಿ ಸಾಯಣ ಭಾಷ್ಯಾನುಸಾರವಾಗಿಯೂ ವಿಷ್ಣು ಸೂರಿಗಳ ಭಾಷ್ಯಾನುಗುಣವಾಗಿಯೂ ಹಾಗೂ ಸ್ವತಂತ್ರವಾಗಿಯೂ ಕೆಲವು ವಿಷಯಗಳನ್ನು ವಾಚಕರ ಮುಂದಿಡೆವೆನು.

ರುದ್ರ, ಚಮಕಗಳ ಮಂತ್ರಾರ್ಥವನ್ನು ಸರಳವಾಗಿ ತಿಳಿಯಲು  ಇದು ಎಲ್ಲರಿಗೂ ಉಪಯೋಗಕರವಾದೀತೆಂದು ಭಾವಿಸಿದ್ದೇನೆ

***

ರುದ್ರಾಧ್ಯಾಯವು ಸರ್ವವ್ಯಾಪಿಯಾದ ರುದ್ರನ ಮಹಿಮೆಯನ್ನು ತಿಳಿಸುವ ಮೂಲಕ ಬ್ರಹ್ಮ ವಸ್ತುವಿನ ಸಮನ್ವಯವನ್ನು ಹೊಂದಿರುವಂತೆಯೇ ಚಮಕಾಧ್ಯಾಯವು “ಯಜ್ಞೇನ ಕಲ್ಪತಾಂ” ಎಂಬ ಪಲ್ಲವಿಯಿಂದ ಜಗತ್ತಿನಲ್ಲಿರುವ ಎಲ್ಲಾ ವಸ್ತುಗಳೂ ಭಗವರಾಧನೆಗೆ ಒದಗಲಿ ಎಂಬ ಸಮನ್ವಯವನ್ನು ಹೊಂದಿರುವುದು ತಿಳಿದು ಬರುತ್ತದೆ.

ಹೀಗೆ ರುದ್ರ ಚಮಕಗಳಲ್ಲಿ ವೇದಂತ ಸಿದ್ಧಾಂತಸಾಧನಗಳ ರಹಸ್ಯಗಳು ಅಡಗಿರುವುದು ಗೋಚರವಾಗುವುದು.

***

ಇವೇ “ಆಧ್ಯಾತ್ಮ ಪ್ರವೀಣ”ರಿಂದ ಹಲವಾರು ಗ್ರಂಥಂಗೊ ಪ್ರಕಟ ಆಯಿದು. ವಿಳಾಸ ಇಲ್ಲಿದ್ದು:

“ಆಧ್ಯಾತ್ಮ ಪ್ರಕಾಶ ಕಾರ್ಯಾಲಯ”

(ಪಬ್ಲಿಕ್ ಚಾರಿಟಬಲ್ ಟ್ರಸ್ಟ್)

ಹೊಳೆನರಸೀಪುರ 573211

ದೂರವಾಣಿ: 08175 273820

www.adhyatmaprakasha.org

***

ಸ್ಥೂಲ ರೂಪಲ್ಲಿ ಎರಡು ಕೃತಿಗಳ ಬಗ್ಗೆ ವಿವರ ಕೊಟ್ಟಿದೆ. (ಮಂಗಳೂರಿನ “ಸಾಹಿತ್ಯ ಕೇಂದ್ರ” ಇಲ್ಲಿ ಇದರ ಪ್ರತಿಗೊ ಸಿಕ್ಕುತ್ತು)

ಆಸಕ್ತರು ಇದರ ಸದುಪಯೋಗ ಮಾಡಿ, ರುದ್ರ ಮತ್ತೆ ಚಮಕದ ಬಗ್ಗೆ ಹೆಚ್ಚಿನ ಅರ್ಥ ತಿಳ್ಕೊಂಡು, ಪಠನ ಮಾಡಿ, ಶಿವನ ಕೃಪೆಗೆ ಪಾತ್ರರಪ್ಪ ಸದವಕಾಶ ಸಿಕ್ಕಲಿ ಹೇಳ್ತ ಹಾರೈಕೆ.

||ಸತ್ಯಂ ಶಿವಂ ಸುಂದರಂ||

ರುದ್ರ, ಚಮಕಾಧ್ಯಾಯ ಭಾಷ್ಯ., 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಉತ್ತಮ ಮಾಹಿತಿ ಇಲ್ಲಿ ಹಂಚಿಕೊಂಡ ಶರ್ಮಪ್ಪಚಿಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 2. ಮಂಗ್ಳೂರ ಮಾಣಿ

  ಲಾಯಕಕ್ಕೆ ಕೊಟ್ಟಿದಿ ಅಪ್ಪಚ್ಚಿ:):):):)
  ರುದ್ರ ಕಲಿತ್ತವೆಲ್ಲ ಓದಲೇ ಬೇಕಾದ ಪುಸ್ತಕಂಗೊ….

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಕಲಿಯದ್ದವೂ ಓದಲಾಗ ಹೇಳಿ ಇಲ್ಲೆ. ಇದರ ಓದಿಕ್ಕಿಯೂ , ಓದಿಗೊಂಡೆಯೂ ಕಲಿವಲಕ್ಕು. ಕಲಿಯೆಕು.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಕಲಿಯದ್ದೆ ಇಪ್ಪವು ಆರೂ ಇಪ್ಪಲಾಗ ಹೇಳಿಪ್ಪ ದ್ರುಷ್ಟಿಲಿ ಹೇಳಿದೆ….

  [Reply]

  VA:F [1.9.22_1171]
  Rating: +2 (from 2 votes)
 3. ಪ್ರಶಾಂತ್ ಕುವೈತ್

  Sharmare, Rudra da online link iddare kalisi kodi dayavittu..

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಇಲ್ಲಿ ಸಿಕ್ಕುಲೂ ಸಾಕು ಒಂದರಿ ನೋಡಿಕ್ಕಿ,
  http://mantraaonline.com/sri-rudram/
  ಇದರ download ಮಾಡೆಕಾರೆ, ಮದಲು real player software ಹೇಳಿಪ್ಪದರ ನಿಂಗಳ computer ಗೆ ಹಾಕಿಯೊಂಡು. ಆ ವೀಡಿಯೋದ ಮೇಲೆ ಒತ್ತಿ. ಅದು ಅಷ್ಟಪ್ಪಗ ಅದರ ಮೂಲಸ್ಥಾನಕ್ಕೆ ( you tube) ಹೋವುತ್ತು. ಅಲ್ಲಿ mouseಲಿ ಎಡತ್ತಿಂಗೆ ಒತ್ತಿ ಇದರ download with real player ಹೇಳಿ ಕೊಟ್ಟರೆ ಆತು….

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಮಂತ್ರದ ಲಿಂಕ್ ಕೊಟ್ಟದಕ್ಕೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: +1 (from 1 vote)
 4. ಮುಳಿಯ ಭಾವ
  ರಘುಮುಳಿಯ

  ರುದ್ರದ ಭಾಷ್ಯದ ಪುಸ್ತಕದ ವಿವರ ಹ೦ಚಿದ್ದಕ್ಕೆ ಧನ್ಯವಾದ ಅಪ್ಪಚ್ಚಿ.

  [Reply]

  VA:F [1.9.22_1171]
  Rating: 0 (from 0 votes)
 5. ಒಳ್ಳೆಯ ಉಪಯುಕ್ತ ಪುಸ್ತಕಂಗೊ,ಬೆಲೆ (೩೦/+೨೫/) ಅಷ್ಟೆ.ಶ್ರೀ ರುದ್ರ ಪಠಿಸಿಕ್ಕಿ ಈ ಪುಸ್ತಕಂಗಳ ಓದಿದರೆ ಮನಸ್ಸಿನ ಚಿಂತನಾ ಮಟ್ಟವ ರಜ ಮೇಲಕ್ಕೆ ತೆಕ್ಕೊಂಡು ಹೋಪಲೆ ಸಹಕಾರಿಯಾವುತ್ತು.ವೇದ ಮಂತ್ರಂಗಳ ಜನಸಾಮಾನ್ಯ ಆಸ್ವಾದಿಸುವದರ ಒಟ್ಟಿಂಗೆ ಇಂತಹ ರಜ ತಾತ್ವಿಕ ವಿಚಾರಂಗಳ ಅವ*ನ ಮನಸ್ಸಿಂಗೆ ಹೊಗುಸಲೆ ಪ್ರಯತ್ನ ಪಟ್ಟರೆ ಶ್ರೀ ಗುರುಗಳ ರುದ್ರ ಅಭಿಯಾನಕ್ಕೆ ತುಂಬ ಸಹಕಾರಿಯಕ್ಕು.
  ಪುಸ್ತಕದ ವಿವರ ತಿಳಿಸಿದ ಶರ್ಮಣ್ಣಂಗೆ ಧನ್ಯವಾದಂಗೊ.ಸಾಹಿತ್ಯ ಕೇಂದ್ರದ ರತ್ನಾಕರನ ಹತ್ತರೆ ಬಯಲಿನ ವಿವರ ತಿಳಿಸಿ ಜಾಸ್ತಿ ಪ್ರತಿಗಳ ತರಿಸಿ ಮಡುಗಲೆ ಹೇಳಿಕ್ಕಿ ಬಯಿಂದೆ!

  [Reply]

  VN:F [1.9.22_1171]
  Rating: +1 (from 1 vote)
 6. ಒಪ್ಪಣ್ಣ

  ಶರ್ಮಪ್ಪಚ್ಚೀ..
  ವೇದಬ್ರಹ್ಮ ಲಕ್ಷ್ಮೀನರಸಿಂಹ ಮೂರ್ತಿಗೊ ಬರದ ಈ ಪುಸ್ತಕದ ಸಣ್ಣ ವಿಮರ್ಶೆ ಬೈಲಿಂಗೆ ತಿಳಿಶಿದ್ದೇ ಅಲ್ಲದ್ದೆ, ಅದರ ಸಂಪರ್ಕ ಮಾಹಿತಿಯನ್ನೂ ಕೊಟ್ಟಿದಿ. ಇದು ಬೈಲಿನೋರಿಂಗೆ ತುಂಬಾ ಉಪಕಾರಿ ಆಗಿರ್ತು.

  ಮೊನ್ನೆ ಸಿಕ್ಕಿಪ್ಪಗ ಒಪ್ಪಣ್ಣಂಗೂ ಈ ಪುಸ್ತಕದ ಪ್ರತಿಗೊ ಕೊಟ್ಟದು ಹೃದಯ ತುಂಬಿ ಬಂತು.

  ಬಟ್ಟಮಾವನ ಎದುರು ಕೂದಂಡು ಒಂದೊಂದೇ ಪುಟ ಓದುತ್ತಾ ಇದ್ದೆ, ಪ್ರತಿ ಪುಟ ಓದುವಗಳೂ ಶರ್ಮಪ್ಪಚ್ಚಿ ಒಳ್ಳ ಪುಸ್ತಕವನ್ನೇ ಕಳುಸಿಕೊಟ್ಟವು – ಹೇಳ್ತ ಅಭಿಮಾನ ಬತ್ತು.
  ಧನ್ಯವಾದಂಗೊ.. :-)

  [Reply]

  VA:F [1.9.22_1171]
  Rating: 0 (from 0 votes)
 7. ಶ್ರೀಅಕ್ಕ°

  ಶರ್ಮಪ್ಪಚ್ಚಿ, ಮನುಷ್ಯ ತನ್ನ ಕೆಲಸಂದ ಲೋಕಲ್ಲಿ ಶಾಶ್ವತ ಅಪ್ಪದು ಹೇಳಿದರೆ ಹೀಂಗಿಪ್ಪ ವ್ಯಕ್ತಿತ್ವಂದಲೇ ಅಲ್ಲದಾ? ದಿ. ವೇ|| ಬ್ರ||ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹ ಮೂರ್ತಿಗಳು, ಅವರ ವಿದ್ವತ್ತಿಂದ ಭಾಷ್ಯ ಬರದು ಎಲ್ಲೋರಿಂಗೂ ರುದ್ರ, ಚಮಕದ ಬಗ್ಗೆ ಹೆಚ್ಚಿನ ಅರಿವು ಬಪ್ಪ ಹಾಂಗೆ ಮಾಡಿದ್ದವು. ಹೀಂಗಿಪ್ಪ ಮಹಾನ್ ವಿದ್ವನ್ಮಣಿಗಳಿಂದ ಬಂದ ಜ್ಞಾನ ಎಲ್ಲೋರಿಂಗುದೇ ಸಿಕ್ಕಲಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಗೋಪಾಲಣ್ಣಒಪ್ಪಕ್ಕಕೊಳಚ್ಚಿಪ್ಪು ಬಾವಶ್ಯಾಮಣ್ಣಅನಿತಾ ನರೇಶ್, ಮಂಚಿಶೀಲಾಲಕ್ಷ್ಮೀ ಕಾಸರಗೋಡುಉಡುಪುಮೂಲೆ ಅಪ್ಪಚ್ಚಿಬೋಸ ಬಾವಪುತ್ತೂರುಬಾವನೀರ್ಕಜೆ ಮಹೇಶಶರ್ಮಪ್ಪಚ್ಚಿಸುಭಗಪುಟ್ಟಬಾವ°ಚೆನ್ನಬೆಟ್ಟಣ್ಣಡಾಮಹೇಶಣ್ಣಚುಬ್ಬಣ್ಣಜಯಗೌರಿ ಅಕ್ಕ°ವಿಜಯತ್ತೆಶ್ರೀಅಕ್ಕ°ಅಕ್ಷರದಣ್ಣಪಟಿಕಲ್ಲಪ್ಪಚ್ಚಿವೇಣೂರಣ್ಣಶಾಂತತ್ತೆಅನು ಉಡುಪುಮೂಲೆಜಯಶ್ರೀ ನೀರಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ