ಶ್ರೀ ಭಾರತೀ ಕಾಲೇಜು

ಆತ್ಮೀಯರೇ,
ಶ್ರೀ ಭಾರತೀ ಕಾಲೇಜಿಂಗೆ ಪ್ರವೇಶ ಬಯಸಿ ಬಪ್ಪ ವಿದ್ಯಾರ್ಥಿಗಳ ಹಿನ್ನಲೆಯ ಕೇಳುವಗ ಸುಮಾರು  ಕಾಲೇಜು ಈಗ ನಿಗದಿ ಮಾಡಿದ ಶುಲ್ಕವ ಕೊಡುಲೆ ಕಷ್ಟ ಹೇಳುವ ಅಭಿಪ್ರಾಯ ಬತ್ತಾ ಇದ್ದು.  ಪ್ರಾಯಶಃ ಆರ್ಥಿಕವಾಗಿ ಸುಸ್ಥಿಲಿ ಇಪ್ಪ ಮನೆಯವು ಅವರ ಮಕ್ಕಳ  ಬೇರೆ ಕಾಲೇಜುಗೊಕ್ಕೆ ಕಳುಸುತ್ತಿದ್ದು, ರೆಜಾ ಬಂಙಲ್ಲಿ ಇಪ್ಪವು ಗುರುಗಳ ಕಾಲೇಜಿಂಗೆ ಬಪ್ಪದು ಸಹಜ.

ಪ್ಯೆಸೆಗೆ ತೊಂದರೆ ಹೇಳುವ ಕಾರಣ ಕಲಿಯುವಿಕೆ ನಿಂಬಲಾಗ ಹೇಳುವುದು ನಮ್ಮ ಗುರುಗಳ ಅಭಿಪ್ರಾಯ. ಹಾಂಗಾಗಿ ಈ ವರ್ಷ ಕೋಲೇಜಿಂಗೆ ಬಪ್ಪ ಮಕ್ಕೊಗೆ ವಿಶೇಷ ರಿಯಾಯತಿಯ ಕೊಡುತ್ತಾ ಇದ್ದು. ಅನಿವಾರ್ಯ ಸಂದರ್ಭಗಳಲ್ಲಿ ಮಕ್ಕೊ ಸರಕಾರೀ ಕಾಲೇಜುಗಳಲ್ಲಿ ಕೊಡುವಷ್ಟೇ ಫೀಸು ಕೊಟ್ಟರೂ ಅವರ ಸೇರಿಸಿಗೊಳ್ಳುತ್ತು.  . ಇದಲ್ಲದೆ ಅಗತ್ಯ ಇಪ್ಪ ಮಕ್ಕೊಗೆ (ಮಾಣಿಯಂಗೊಗೆ ಮಾತ್ರ) ಉಚಿತವಾಗಿ ವಸತಿಯ ವ್ಯವಸ್ಥೆ ಮಾಡುತ್ತು.ಮಕ್ಕೊಗೆ ಪಾಠದ ಒಟ್ಟಿಂಗೆ ನಮ್ಮ ಸಂಸ್ಕಾರದ ಬಗೆಗೆ ಮಾಹಿತಿ ನೀಡುತ್ತು  ನಮ್ಮ ಸಮಾಜದ ಮಕ್ಕೊ  ಇದರ ಸಂಪೂರ್ಣ ಪ್ರಯೋಜನ ಪಡೇಯೆಕ್ಕು ಹೇಳಿ ಕೇಳಿಕೊಳ್ಳುತ್ತೆ. ಇತರ ಎಲ್ಲ ಸಮಾಜದವರುದ್ದುದೆ ಅವರದ್ದೇ ಆದ ಸಂಸ್ಥೆಗೊ ಇದ್ದು. ಇದು ನಮ್ಮ ಸಮಾಜದ ಸಂಸ್ಥೆ. ಇದರ ಇನ್ನುದೆ ಹೇಂಗೆ ಅಭಿವೃದ್ದಿ ಮಾಡುಲೆ ಅಕ್ಕು ಹೇಳುವುದರ ಬಗೆಗೆ ಬೈಲಿನವರ ಅಭಿಪ್ರಾಯವನ್ನೂ ಸ್ವಾಗತಿಸುತ್ತೆಯ°.

ಡಾ. ಮರುವಳ ನಾರಾಯಣ ಭಟ್ಟ
ಕಾರ್ಯದರ್ಶಿ
ಶ್ರೀ ಭಾರತೀ ಕಾಲೇಜು ಸೇವಾ ಸಮಿತಿ

ಮರುವಳ ನಾರಾಯಣ ಭಟ್ಟ

   

You may also like...

8 Responses

 1. ಆನು ತುಂಬ ಹಿಂದೆಯೇ ಒಂದರಿ ಕೆಪಿಯತ್ರ ಈ ಕಾಲೇಜಿಗೆ ಯಾವ ರೀತಿ ನಾವು, ಮುಖ್ಯವಾಗಿ ಬೆಂಗಳೂರಿಲಿ ಐಟಿಲಿ ಇಪ್ಪ ಜನಂಗೊ ಸಹಾಯ ಮಾಡ್ಲಕ್ಕೂಳಿ ಹೇಳಿತ್ತಿದ್ದೆ. ಕೆಪಿಯ ತೆಲೆಯ ಮೇಲೆ ಇಪ್ಪ ಸಾವಿರಾರು ತೂಕಂಗಳಲ್ಲಿ ಎದು ಎಲ್ಲೋ ಬಿದ್ದು ಹೋಗಿಕ್ಕು. ಇರ‍್ಲಿ. ಈಗ ಎನ್ನ ಅಭಿಪ್ರಾಯ, ಇದು ಸ್ವಲ್ಪ, ಎನ್ನನ್ನೇ ನೆಂಪು ಮಾಡ್ಕೊಂಡು ಬರೆತ್ತಾ ಇಪ್ಪೊದು –
  ಆನು ಅಲ್ಲಿ ಸ್ವತಃ ಹೋಗಿ ಐಟಿಯ ಕೆಲವು ವಿಷಯಂಗಳ ಬಗ್ಗೆ ವಿಶೇಷ ಲೆಕ್ಚರ‍್ ಕೊಡ್ಲೆ ಅಕ್ಕೂಳಿ ಹೇಳಿತ್ತಿದ್ದೆ (Current IT skills in demand, software localization/internationalization, unicode, …). ಎನ್ನತ್ರ ಕೊಡ್ಲೆ ದುಡ್ಡಿಲ್ಲೆ. ತನು, ಮನ, ಧನಲ್ಲಿ ತನು ಮತ್ತು ಮನ ಮಾತ್ರ ಇಪ್ಪೊದು. ಹಾಂಗಾಗಿ ಇಷ್ಟೇ ಸಾಧ್ಯ. ಧನ ಇಪ್ಪ ನಮ್ಮ ಶ್ರೀಮಂತ ಹವ್ಯಕರು ದುಡ್ಡು ಕೊಡ್ಲಕ್ಕು. ಐಟಿ, ವಿಜ್ಞಾನ, ಮಾಧ್ಯಮ, ಇತ್ಯಾದಿ ಬೇರೆ ಬೇರೆ ಉದ್ಯೋಗಲ್ಲಿ ಬೆಂಗಳೂರು, ಮುಂಬಯಿ, ಅಮೆರಿಕ -ಹೀಂಗೆ ಎಲ್ಲ ಕಡೆ ಇಪ್ಪ ನಮ್ಮೋರು ಊರಿಗೆ ಬಂದಾಗ ಈ ಕಾಲೇಜಿಲಿ ಒಂದು ವಿಶೇಷ ಭಾಷಣ ಕೊಡ್ಲಕ್ಕು. ಅದಿಕ್ಕೆ ಯಾರ ಸಂಪರ್ಕ ಮಾಡೆಕ್ಕೂಳಿ ಹೇಳಿದ್ರೆ ಏರ್ಪಾಡು ಮಾಡ್ಲಕ್ಕು. ಎಂತ ಹೇಳ್ತೀರಿ?

 2. ಎನಿಗೊಬ್ಬಂಗೆ ಸಮಾಜ ಸೇವೆ ಮಾಡುವ ಚಟ ಇಪ್ಪ ಹಾಂಗೆ ಕಾಣ್ತು. ಬೇರೆ ಯಾರೊಬ್ಬನೂ ಆನೂ ಬತ್ತೆ ಹೇಳಿ ಬರ‍್ದವಿಲ್ಲೆ.

 3. ರಘು ಮುಳಿಯ says:

  ಪವನಜಣ್ಣ,
  ಆನೂ ಬಪ್ಪಲೆ ತಯಾರು. ಆದರೆ ಎನ್ನ ಕ್ಷೇತ್ರ, ಕೆಮಿಕಲ್ ಇ೦ಜಿನಿಯರಿ೦ಗ್ ಆದ ಕಾರಣ,ಅಲ್ಲಿ ಉಪಯೋಗ ಅಕ್ಕೋ?

 4. ಮರುವಳ ನಾರಾಯಣ ಭಟ್ಟ says:

  ಹರೇ ರಾಮ

  ಆಸಕ್ತಿ ತೋರಿಸಿದ್ದಕ್ಕಾಗಿ ಧನ್ಯವಾದಂಗೊ. ಕಾಲೇಜಿನ ದೂರವಾಣಿ ಸಂಖ್ಯೆ 08242216464. ಪ್ರಾಂಶುಪಾಲರ ಸಂಪರ್ಕ ಮಾಡಿದರೆ ಸೂಕ್ತ. ಎನ್ನ ಮೊಬೈಲ್ ಸಂಖ್ಯೆ 9480346553

 5. ನಮ್ಮ ಸಮಾಜದ ಪ್ರತಿಯೊಬ್ಬ ಆದಾಯದಾರನೂ ಒರ್ಶಕೊಂದು ಯಥಾ ಸಾಧ್ಯ ಕಿರು ಕಾಣಿಗೆ ಕೊಟ್ಟು ಸಹಕರಿಸಿರೆ ಅದುವೇ ಬಹುದೊಡ್ಡ ಉಪಕಾರ ಅಕ್ಕು. ಇದಕ್ಕೆ ಸಮಾಜಲ್ಲಿ ಒಂದು ಮನವಿ ಮಾಡ್ಲಕ್ಕು.
  ಹತ್ತರೊಟ್ಟಿಂಗೆ ಹನ್ನೊಂದು ಆನೂ ಇದ್ದೆ. ಶ್ರೀ ಭಾರತೀ ಕಾಲೇಜು ನಿರಾತಂಕ ಮುಂದುವರಿಯೆಕ್ಕು ಸಮಾಜ ಇದರ ಸದುಪಯೋಗಪಡಿಸಿಕೊಳ್ಲೆಕು ಹೇಳಿ ನಮ್ಮ ಆಗ್ರಹ.

 6. ಮರುವಳ ನಾರಾಯಣ says:

  ಹರೇ ರಾಮ

  ಕಾಲೇಜಿನ ಬಗೆಗೆ ಇಪ್ಫ್ಪ ಕಾಳಜಿಗೆ ಧನ್ಫ್ಯವಾದಂಗೊ.ನಿಂಗೊಗೆ ಪರಿಅಯ ಇಪ್ಫ್ಪ ನಮ್ಫ್ಮ ಸಮಾಜದವಕ್ಫ್ಕೆ ಕಾಲೇಜಿನ ಬಗೆಗೆ ತಿಳಿಸಿದರುದೆ ಉಪಕಾರ ಅಕ್ಫ್ಕು. ಆರ್ಥಿಕವಾಗಿ ತೊಂದರೆ ಇಪ್ಫ್ಪವಕ್ಫ್ಕೆ ಕಲಿವಲೆ ಬಂಗ ಆಗದ್ಫ್ದ ಹಾಂಗೆ ಪ್ಫ್ರಯತ್ಫ್ನ ಮಾಡುವ

 7. ಕೆ.ಜಿ. ಯಿಂದ ಪಿ.ಜಿ. ಯ ವರೇಗೆ ಇಪ್ಪ ಆಧುನಿಕ ಶಿಕ್ಷಣ ಗುರುಕುಲ ವಾತಾವರಣದ ಅಶ್ರಯಲ್ಲಿ ಮಂಗಳೂರಿನ ಶ್ರೀ ಭಾರತೀ ವಿದ್ಯಾಲಯಲ್ಲಿ ಆಪ್ಪಲೆ ಶ್ರೀ ಸಂಸ್ಥಾನ ಹರಸಿದ್ದವು . ಈ ವರ್ಷ ಹೈಸ್ಕೂಲ್ ಆರಂಭ ಅಪ್ಪದರೊಂದಿಗೆ , ಒಂದು ಮುಖ್ಯ ಕೊಂಡಿ ಸೇರಿ ಇನ್ನು ಕೆ.ಜಿ. ಯಿಂದ ಪಿ.ಜಿ ಅಪ್ಪಲೆ ಕೇವಲ ಪಿ.ಜಿ.ಮಾತ್ರ ಬಾಕಿ.

  ಈ ಪುಣ್ಯ ಭೂಮಿಯ ಇತಿಹಾಸ ಬಹಳ ವಿಶೇಷ….ಇದು….

  ಶ್ರೀ ಶ್ರೀಧರ ಸ್ವಾಮಿ ಗಳ ತಪೋಭೂಮಿ, ಕಾಡುವ ಕ್ಷುದ್ರ ರ ತಡೆದು ಸುಂದರ ವನಮಾಡಿದವು
  ಶ್ರೀ ಶ್ರದ್ದಾನಂದ ಸರಸ್ವತಿ ತಪಸ್ಸಿನ ಫಲ ನೂರಾರು ಬಡ ಮಕ್ಕೊ ಸರಸ್ವತಿಯ ಅನುಗ್ರಹ ಪದೆದ ವಿದ್ಯಾ ಮಂದಿರ
  ಶ್ರೀ ಸಂಸ್ಥಾನದ ಧೀ ಶಕ್ತಿಂದ ಪುನರ್ಜನ್ಮ ಪಡೆದು, ಹಳೆ ಬೇರಿಲಿ ಹೋಸ ಚಿಗುರ ಪಡೆದು, ಶ್ರೀ ಶ್ರೀಗಳಿಂದ ಅನೂಗ್ರಹಿತವಾದ ಈ ಸಂಸ್ಥೆ ಅತ್ಯಂತ ವಿಶೇಷತೆ ಹೊಂದಿದ್ದು. ಇಲ್ಲಿಗೆ ಪ್ರವೇವ ಆಯಕ್ಕಾರೂ ಪೂರ್ವ ಪುಣ್ಯ ಬೇಕು.

  ಪ್ರಶಾಂತ ಗುರುಕುಲ ವಾತಾವರಣ…,ಸುಂದರವೂ ವಿಸ್ತಾರವೂ ಆದ ಕಟ್ಟಡ ಸಮುಚ್ಹಯ …, ಸುಸಜ್ಜಿತ ಶಂಕರ ಶ್ರೀ ಸಭಾಸದನ ….., ಮನಕೆ ಮುದನೀಡುವ ಶ್ರೀಧರ ಸನ್ನಿಧಿ…., ಪೂರ್ಣ ಶ್ರದ್ದಾ ಭಕ್ತಿಯಿಂದ ಸೇವೆ ಸಲ್ಲಿಸುವ ಆಢಳಿತ ಮಂಡಳಿ ಮತ್ತು ಶಿಕ್ಷಕರು ….,ಹಲ ಫಲ…. ಕಲ್ಪವೃಕ್ಷ ಗಳಿಂದ ಕಂಗೊಳಿಸುವ ಚೇತೋಹಾರಿ ಉದ್ಯಾನ ವನ……
  ಜನ ನಿಬಿಡ ಮಂಗಳೂರು ನಗರ ದೊಳಗೇ ಶುದ್ದ ಹಳ್ಲೀ …..ಇದೆಲ್ಲಾ ಕನಸಲ್ಲ .. ಬಂದು ನೋಡಿ ಅನುಭವಿಸಿ.

  ಅದಕ್ಕೇ ಹೇಳಿದ್ದು… ಇಲ್ಲಿಗೆ ಪ್ರವೇವ ಆಯಕ್ಕಾರೂ ಪೂರ್ವ ಪುಣ್ಯ ಬೇಕು.

 8. ಮರುವಳ ನಾರಾಯಣ್ says:

  ಹರೇ ರಾಮ

  ಬಾರೀ ಚೆಂದಕ್ಫ್ಕೆ ಬರದ್ಫ್ದೀರಿ. ಗೋಪಾಲಣ್ಫ್ಣಾ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *