Oppanna.com

ಸುರತ್ಕಲ್ಲಿ ಶ್ರೀಸೂಕ್ತ ಹವನ

ಬರದೋರು :   ಗೋಪಾಲಣ್ಣ    on   16/01/2014    2 ಒಪ್ಪಂಗೊ

ಗೋಪಾಲಣ್ಣ

ಸುರತ್ಕಲ್ಲಿ ಶ್ರೀಸೂಕ್ತ ಹವನ

ಮಂಗಳೂರು ಹವ್ಯಕ ಮಂಡಲದೊಳಾಣ ಮಂಗಳೂರು  ಉತ್ತರ ಹವ್ಯಕ ವಲಯದ ರುದ್ರ ಅಭ್ಯಾಸಿಗಳಿಂದ ಶ್ರೀಸೂಕ್ತ ಹವನ ಕಾರ್ಯಕ್ರಮ ತಾರೀಕು ೧೨-೧-೧೪ ಆದಿತ್ಯವಾರ ಸುರತ್ಕಲ್ಲಿನ ಸಮುದ್ರ ತೀರಲ್ಲಿಪ್ಪ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಲ್ಲಿ ಸಂಪನ್ನಗೊಂಡತ್ತು. ರುದ್ರ ಮತ್ತಿತರ  ಮಂತ್ರ, ಸೂಕ್ತಂಗಳ ಅಭ್ಯಾಸಿಗೊಕ್ಕೆ ಕಲಿಶುತ್ತಾ ಇಪ್ಪ ಗುರುಗಳಾದ ಪುತ್ತೂರಿನ ವೇ|ಮೂ|ಶ್ರೀ ಮುಕುಂದ ಶರ್ಮರು ಪ್ರಧಾನ ಅಧ್ವರ್ಯುಗಳಾಗಿ ಈ ಹವನವ ನೆಡೆಶಿಕೊಟ್ಟವು.  ಘನಪಾಠಿ ವೇ|ಬ್ರ| ಶ್ರೀ ಪಳ್ಳತ್ತಡ್ಕ ಶಂಕರನಾರಾಯಣ ಭಟ್ರು ಈ ಹವನದ ಬ್ರಹ್ಮತ್ವವ ವಹಿಸಿ ಚಂದಗಾಣಿಸಿಕೊಟ್ಟವು. ದೇವಸ್ಥಾನದ ಆನುವಂಶಿಕ ಅರ್ಚಕರಾದ ಶ್ರೀ ದಾಸ ಮಯ್ಯ ಮತ್ತೆ ಇತರ ಪುರೋಹಿತ ವರ್ಗದವು, ವೈದಿಕರು  ಸಹಕರಿಸಿದವು.

ಉದಿಯಪ್ಪಗ ಎಂಟುವರೆ ಗಂಟೆಗೆ ಕಲಶಸ್ಥಾಪನೆಯಾಗಿ  ಹೋಮಕುಂಡಲ್ಲಿ ಅಗ್ನಿಪ್ರತಿಷ್ಟೆ ಆತು. ಆ ನಂತ್ರ ಶ್ರೀ ಗಣಯಾಗದೊಟ್ಟಿಂಗೆ “ಶ್ರೀಸೂಕ್ತ ಹವನ”ವು ನಡದತ್ತು.  ಅಭ್ಯಾಸಿಗಳೆಲ್ಲರ ಪರವಾಗಿ ಶ್ರೀ ಮೋಂತಿಮಾರು ಕೃಷ್ಣಭಟ್ಟ ದಂಪತಿಗೊ ಯಜಮಾನರಾಗಿ ಯಾಗವ ನಡೆಸಿಕೊಟ್ಟವು.  ಅಭ್ಯಾಸಿಗಳಿಂದ ಶ್ರೀ ರುದ್ರ, ಚಮಕ, ಗಣಪತ್ಯಥರ್ವಶೀರ್ಷ, ಶ್ರೀಸೂಕ್ತಂಗಳ ಪಾರಾಯಣವೂ ನಡಡತ್ತು. ಕಮಲದ ಹೂ, ತ್ರಿಮಧುರ, ಎಳ್ಳು, ಪಾಯಸ, ಆಜ್ಯ ಮತ್ತು ಸಮಿಧೆಗಳ ಶ್ರೀಸೂಕ್ತಪಠಣಪುರಸ್ಸರವಾಗಿ ಹೋಮಿಸಲಾತು. ಅದಾದ ನಂತ್ರ ವೇ|ಮೂ|ಪರಕ್ಕಜೆ ಅನಂತನಾರಾಯಣ ಭಟ್ರು ಕರ್ಮಚಿಂತನೆ ನಡೆಸಿ, ಶ್ರೀಸೂಕ್ತಹವನದ ಔಚಿತ್ಯ, ಅರ್ಥಗಂಳ ಕುರಿತು ಭಜಕರಿಂಗೆ ತಿಳಿಸಿಕೊಟ್ಟವು .“ಶ್ರೀ” ಹೇಳಿರೆ ಕೇವಲ ಧನ, ಧಾನ್ಯ ಸಂಪತ್ತಲ್ಲ. ಸತ್ತ್ವಗುಣ, ಸದ್ಬುದ್ಧಿ, ತಿಳಿವಳಿಕೆ ,ನಿರ್ಲೋಭ, ನಿರ್ಮತ್ಸರಭಾವಂಗಳೇ ನಿಜವಾದ ಶ್ರೀ ಹೇಳಿ ತಿಳಿಯೆಕ್ಕು. ಭಗವತ್ಸಾನ್ನಿಧ್ಯ ಯಾವುದೇ ವಸ್ತುವಿಲ್ಲಿ ಯಾ ವ್ಯಕ್ತಿಲಿ ಪ್ರಕಟಗೊಂಬಗ  ಅದು ಯಾವ ವಿಶಿಷ್ಟ ಲಕ್ಷಣಂಗಳ ಹೊಂದಿರುತ್ತೋ ಅದಕ್ಕೆ ಕಾರಣವಾದ ಸತ್ಯ, ಲಜ್ಜೆ, ಸಮೃದ್ಧಿ, ಜೀವಕಳೆ ಮುಂತಾದ ಗುಣವಿಶೇಷಂಗೊ “ಶ್ರೀ” ಹೇಳಿಯೇ ತಿಳ್ಕೊಳೆಕ್ಕು. “ಶ್ರೀ” ಹೇಳಿರೆ ದೈವೀಸಂಪತ್ತಿನ ಸಂಕೇತ. ನಮ್ಮಲ್ಲಿ ದೈವೀಸಂಪತ್ತಿನ ಅಭಿವೃದ್ಧಿಯಾಗಿ, ಆಸುರೀಭಾವ, ಅಸಮೃದ್ಧಿ ,ಲೋಭ, ಅತ್ಯಾಶೆಗೊ ಹೇಳ್ತ ಅಲಕ್ಷ್ಮೀಶಕ್ತಿಗೊ ನಾಶಗೊಳ್ಳೆಕ್ಕು. ಶ್ರೀದೇವಿಗೆ ಅತಿಪ್ರಿಯವಾದ ತಾವರೆಹೂಗಳ, ಮಾಧುರ್ಯಯುಕ್ತವಾದ ತ್ರಿಮಧುರವ [ತುಪ್ಪ,ಸಕ್ಕರೆ ಮತ್ತು ಜೇನು]ಹೋಮಲ್ಲಿ ಆಹುತಿಯಾಗಿ ಅರ್ಪಿಸಿ, ನಮ್ಮ ಹೃದಯಲ್ಲಿ ಸದ್ಗುಣಂಗೊ ವೃದ್ಧಿಯಾಗಲಿ ಹೇಳಿ ಹಾರೈಸುವುದೇ ಶ್ರೀಸೂಕ್ತ ಹವನದ ಉದ್ದೇಶ. ಕಡಲತಡಿಯ ದೇವಸ್ಥಾನಲ್ಲಿ ಕಡಲಕುವರಿಯಾದ ಲಕ್ಷ್ಮೀದೇವಿಯ ಪ್ರೀತ್ಯರ್ಥವಾಗಿ ನಡೆದ ಈ ಕಾರ್ಯಂದ ಎಲ್ಲರಿಂಗೂ ಕ್ಷೇಮವಾಗಲಿ”-ಹೇಳಿ ಅವು ಶ್ರೀಸೂಕ್ತದ ಹಲವು ಮಂತ್ರಂಗಳ ಉದಾಹರಿಸಿ, ವ್ಯಾಖ್ಯಾನಿಸಿ ಹಾರೈಸಿದವು. ಪೂರ್ಣಾಹುತಿಯಾದ ನಂತ್ರ, ಗೋಪೂಜೆಯೊಟ್ಟಿಂಗೆ ಕಾರ್ಯಕ್ರಮ ಮುಕ್ತಾಯಗೊಂಡತ್ತು.

ಸುಮಾರು ನಾಲ್ಕುನೂರು ಜನಂಗೊ ಈ ಕಾರ್ಯಕ್ರಮಲ್ಲಿ ಭಾಗವಹಿಸಿ, ಅನ್ನಪ್ರಸಾದವ  ಸ್ವೀಕರಿಸಿ ಕೃತಾರ್ಥರಾದವು.

~~~***~~~

ಪಟಂಗಳ ಒದಗಿಸಿ ಕೊಟ್ಟವುಃ-    ಶರ್ಮಪ್ಪಚ್ಚಿ

ಹೋಮ ಕುಂಡ ಶ್ರೀ ಮಂಡಲ ವೇದಾಭ್ಯಾಸಿ ಬಳಗ ಪ್ರಾರ್ಥನೆ ಕಲಶ ಸ್ಥಾಪನೆ ಕಲಶ ಅಲಂಕಾರ ಕಲಶ ಅಲಂಕಾರ ಅಲಂಕಾರ ನಂದಾ ದೀಪ ಅಭಿಷೇಕ ಪೂಜಾ ಸಮಯ ಸ್ವಾಹಾ- ಇದಂ ನ ಮಮ ನಮಸ್ಕರೋಮಿ ಹಿರಣ್ಯವರ್ಣಾಂ ಹರಿಣೀಂ ಒಪ್ಪಣ್ಣ ಪ್ರಕಟಣೆ  ಯಜ್ಞ ಆಹುತಿ ಸಮರ್ಪಣೆ ಮಂಗಳಾರತಿ ಸಾಲಂಕೃತ "ಶ್ರೀ" ಗಾವೋ ವಿಶ್ವಸ್ಯ ಮಾತರಂ ಗೋ ಪೂಜಾ ಸಮಯ ಗೋ ಗ್ರಾಸ ಭೋಜನ ಕಾಲೇ ವಂದೇ ಗೋ ಮಾತರಂ

2 thoughts on “ಸುರತ್ಕಲ್ಲಿ ಶ್ರೀಸೂಕ್ತ ಹವನ

  1. ಉತ್ತಮ ವರದಿ, ಫೊಟೊಂಗಳುದೆ ಲಾಯಕಿದ್ದು. ವರದಿಯ ನಮ್ಮ ಶ್ರೀ ಅಕ್ಕ ಓದಿರೆ, ಅವಕ್ಕೆ ಭಾರೀ ಕೊಶಿ ಅಕ್ಕು ಖಂಡಿತ,

  2. Saw the pictures & read the article. Very good photos. Function nodida hange aathu. Thanks., Sharma Bhava.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×