’ಸಿರಿಗಂಧ’ಲ್ಲಿ ಬೊಳುಂಬುಮಾವನ ಕಿರುನಾಟಕದ ’ಪರಿಮ್ಮಳ’

ಇಂದು ಮಂಗಳೂರಿನ ಕೋರ್ಪೋರೇಶನ್ ಬೇಂಕಿಲ್ಲಿ, ಮಂಗಳೂರಿನ ಕೆಲವು ಬೇಂಕ್ ಗಳ ನೌಕರರ ಸಾಂಸ್ಕೃತಿಕ ಕಾರ್ಯಕ್ರಮ ಇಪ್ಪ ಬಗ್ಗೆ ಗೋಪಾಲ ಮಾವ ಅದಾಗಲೇ ನವಗೆಲ್ಲಾ ಹೇಳಿಕೆ ಕಳಿಸಿದ್ದವಲ್ಲದಾ?
ದಂಪತಿ ಸಮೇತ ಇಂದು ಕಾರ್ಯಕ್ರಮಲ್ಲಿ ಹಾಜರು ಅಪ್ಪಲೆ ಎಡಿಗಾಯಿದು.

ನಮ್ಮ ಬೈಲಿನ ಬೊಳುಂಬು ಮಾವ ತಾನೇ ಬರದು, ನಿರ್ದೇಶಿಸಿ, ಅಭಿನಯಿಸಿದ, ನಾಟಕ ಒಳ್ಳೆ ಸಂದೇಶ ಕೊಟ್ಟು ಎಲ್ಲರನ್ನೂ ರಂಜಿಸಿದ್ದು ಮಾತ್ರ ಅಲ್ಲದ್ದೆ ಚಿಂತನೆಗೆ ತೊಡಗುವ ಹಾಂಗೆ ಮಾಡಿದ್ದು.
ಎಸ್.ಇ.ಜೆಡ್ ಹೆಸರಿಲ್ಲಿ ಭೂಮಿ ಕಬಳಿಸುವ ದೊಡ್ಡ ದೊಡ್ಡ ಕಂಪೆನಿ, ಅವು ಮಾಡುವ ಅವಾಂತರ, ಅದರೆ ಎದುರಿಸಿದ ಊರವು – ಎಲ್ಲವೂ ತುಂಬಾ ಚೆಂದಕೆ ನಿರೂಪಣೆ ಆಯಿದು.

ಚೆಂದದ ಕಾರ್ಯಕ್ರಮ ಕೊಟ್ಟ ಕಲಾನುರಕ್ತ ಬೊಳುಂಬುಮಾವಂಗೆ ಅಭಿನಂದನೆಗೊ. ಇನ್ನೂ ಹೀಂಗಿರ್ತ ಅನೇಕ ಕಾರ್ಯಕ್ರಮ ಅವರ ಕೈಚಳಕ, ಪ್ರತಿಭೆಲಿ ಮೂಡಿಬರ್ಲಿ ಹೇಳಿ ಹಾರೈಕೆ.

~

ಶರ್ಮಪ್ಪಚ್ಚಿ
ತುಂಬಾ ಹತ್ರಂದ ಪಟ ತೆಗವಲೆ ಆಯಿದಿಲ್ಲೆ; ಅರ್ಜೆಂಟಿಲ್ಲಿ ನಿಂಗೊಗೆ ನೋಡ್ಲೆ ಕೆಲವು ಪಟ ನೇಲಿಸಿದ್ದೆ.
ಲಾಯಿಕದ ಪಟ ಗೋಪಾಲ ಮಾವನೇ ಹಾಕುಗು ಹೇಳಿ ನಿರೀಕ್ಷುಸುತ್ತೆ.

ಶರ್ಮಪ್ಪಚ್ಚಿ

   

You may also like...

12 Responses

 1. ಚೆನ್ನೈ ಭಾವ says:

  ಮಚ್ಚುಗೆ. ಲಾಯಕ ಆಗಿಕ್ಕು ಹೇಳಿ ಫಟ ನೋಡಿರೇ ಅಂದಾಜಾವ್ತಿದಾ. ಅಭಿನಂದನೆಗೋ ಗೋಪಾಲ ಮಾವಂಗೆ.
  ಬೆಷಿ ಬೆಷಿ ಸುದ್ದಿಗೆ ಶರ್ಮಚ್ಚಿಗೆ ಧನ್ಯವಾದವೂ.

 2. ಮಹೇಶ says:

  ಬೊಳುಂಬು ಮಾವ ತುಂಬಾ ದಿನಂದ ಅದೃಶ್ಯ ಆದ್ದದು ಈ `ಗ್ರ್ಯಾಂಡ್ ಎಪೀಯರೆನ್ಸ್’ ಗೆ ಬೇಕಾಗಿಯೇ !!

 3. ರಘು ಮುಳಿಯ says:

  ಅದಾ,
  ಸದಾ ಸಾ೦ಸ್ಕೃತಿಕ ಚಟುವಟಿಕೆಲಿಪ್ಪ ಬೊಳು೦ಬು ಮಾವನ ಹೊಸ ಪ್ರಯತ್ನ ಕ೦ಡತ್ತು. ಅ೦ದ್ರಾಣ ಅಜ್ಜಿಯ ವಜಾಯ ಸರೀ ಕಾಣುತ್ತು. ಮಾವ೦ಗೆ ಅಭಿನ೦ದನೆ. ನೋಡುಲೆ ಎಡಿಗಾತಿಲ್ಲೆನ್ನೇ ಹೇಳಿ ಬೇಜಾರಾತು.
  ಬೆಶಿ ಬೆಶಿ ಪಟ ಬೈಲಿ೦ಗೆ ಎತ್ತುಸಿದ ಶರ್ಮಪ್ಪಚ್ಚಿಗೆ ಧನ್ಯವಾದ.

 4. ಅದಾ.. ಬೊಳುಂಬು ಮಾವ ನಾಟಕವೂ ಮಾಡ್ತವಾ?

 5. ಶರ್ಮಪ್ಪಚ್ಚಿ ಒರದಿ ಒಪ್ಪುಸಿದ್ದು ಲಾಯಿಕಾತು. ಬೊಳುಂಬುಮಾವ° ಎಲ್ಲೋರಿಂಗೂ ಗೊಂತಪ್ಪ ಹಾಂಗೆ ನಾಟಕ ಮಾಡಿದವೋ?
  ಮೆಚ್ಚೇಕು ಅವರ.

  ಅದಿರಳಿ, ವೇಶ ಹಾಕಿದ ಆ ಜೆನರ ಕಂಡ್ರೆ “ಬೊಳುಂಬು ಅಜ್ಜನ” ಕಂಡಾಂಗೇ ಆವುತ್ತು.
  ಅಂದೊಂದರಿ ಸೈಕ್ಕಾಲು ಕಲಿಯಲೆ ಹೋಗಿ ತಾಗುಸಿಂಡ ಕತೆ ಗ್ರೇಶಿ ಬೇಜಾರ ಬೇಜಾರ ಅನುಸಿತ್ತು.
  ಅವುದೇ ಬೇಂಕಿಲಿದ್ದಿದ್ದವೋ? ಅವರದ್ದೂ ತಲೆಕಸವು ಉದುರಿದ್ದು – ಪೈಶೆ ತುಂಬಿ! 😉

 6. ಅನುಶ್ರೀ ಬಂಡಾಡಿ says:

  ಅಭಿನಂದನೆಗೊ ಬೊಳುಂಬುಮಾವ. ನಿಂಗಳ ಬಹುಮುಖ ಪ್ರತಿಭೆಯ ಪರಿಮ್ಮಳ ಸರ್ವತ್ರ ಪಸರಿಸಲಿ.

 7. ತೆಕ್ಕುಂಜ ಕುಮಾರ ಮಾವ° says:

  ಬೊಳುಂಬು ಮಾವನ ಕಲಾಪ್ರತಿಭೆ ಇನ್ನೂ ಎತ್ತರಕ್ಕೆ ಏರಲಿ ಹೇಳಿ ಹಾರಸುತ್ತೆ. ಅಭಿನಂದನೆಗೊ.

 8. ಬೊಳುಂಬು ಮಾವ says:

  ತಲೆ ಬೋಳಾದ್ದರ ಕಂಡು ಕೊಶಿ ಪಟ್ಟು, ಅಭಿನಂದಿಸಿದ ಎಲ್ಲೋರಿಂಗು ಧನ್ಯವಾದಂಗೊ.

 9. ಚೆನ್ನೈ ಭಾವ says:

  ‘ಇನ್ನೊಂದು ಹತ್ತು ವರ್ಷ ಕಳುದರೆ ಕಾಂಬಲೆ ಆನು ಹೀಂಗಿಪ್ಪೆ’ ಹೇಳಿ ಸೂಚನೆಯೋ ಮಾವ!. ಅದರ ಕಲ್ಪಿಸಿ ವೇಷ ಹಾಕಿದ್ದೋ ಹೇಳಿ ಕೇಳ್ತವದಾ ನೆರೆಕರೆಲಿ ಕೆಲವು ಗಟ್ಟಿಗಂಗೊ!!.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *