ವರದಿ: ಶ್ರೀ ಗುರುಗಳ ವಲಯ ಭೇಟಿ

||ಶ್ರೀ ಗುರುಭ್ಯೋ ನಮಃ||

ಶ್ರೀ ಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗೊ, ಮೊನ್ನೆ ಹೇಳಿರೆ, ಜನವರಿ 11 ಕ್ಕೆ ಸುರತ್ಕಲ್ಲಿಂಗೆ, ಭೇಟಿ ಕೊಟ್ಟವು.
ಕ್ಲಪ್ತ ಸಮಯ ಹೊತ್ತೋಪಗ 4:45 ಕ್ಕೆ ಶ್ರೀ ಶ್ರೀಗೊ ಬಾಯಾಡಿ ಬಾಲಕೃಷ್ಣ ಭಟ್ಟರಲ್ಲಿಗೆ ಭೇಟಿ ಕೊಟ್ಟು, ಅಲ್ಲಿ ಶ್ರೀ ಗುರುಪಾದುಕಾ ಪೂಜೆ ಆದ ಮತ್ತೆ,
ವಲಯ ಕಾರ್ಯಕ್ರಮದ ಅಂಗವಾಗಿ, ಶ್ರೀ ಮೋಂತಿಮಾರು ಕೃಷ್ಣ ಭಟ್ಟರಲ್ಲಿಗೆ ಬಪ್ಪಗ ಅವಕ್ಕೆ 25 ಜೆನ ಹೆಮ್ಮಕ್ಕಳಿಂದ ಪೂರ್ಣ ಕುಂಭ ಸ್ವಾಗತ.

ಧೂಳೀ ಪೂಜೆ ನಂತ್ರ ಅಲ್ಲಿ ಇಪ್ಪ ಮಕ್ಕಳ ವಿಶೇಷವಾಗಿ ದೆನುಗೊಳಿ ಅವಕ್ಕೆ ಹಣ್ಣು ಕೊಟ್ಟು ಆತ್ಮೀಯವಾಗಿ ಮಾತಾಡಿಸಿ, ಅಶೀರ್ವಾದ ಮಾಡಿದವು.
ಎಲ್ಲರೂ ಈಗ 7 ಘಂಟೆಯ ಪೂಜೆ ನೋಡ್ಲೆ ಬನ್ನಿ. ಅದು ಮುಖ್ಯ ಹೇಳಿಕ್ಕಿ, ನಾಳೆ ಉದಿಯಪ್ಪಗಾಣ ಪೂಜೆ 9 ಘಂಟೆಗೆ, ಹೇಳಿರೆ 8:59 ರ ನಂತ್ರದ 9 ಘಂಟೆ ಹೇಳಿದವು.
– ಅವರ ಸಮಯ ಕ್ಲಪ್ತತೆ ಬಗ್ಗೆ ಅಭಿಮಾನವೂ, ನಾವು ಸಮಯಕ್ಕೆ ಸರಿಯಾಗಿ ಹೇಂಗೆ ಕಾರ್ಯಂಗಳ ನಿರ್ವಹಿಸೆಕ್ಕು ಹೇಳ್ತ ಪಾಠವೂ ಆದ ಹಾಂಗೆ ಆತು.

ಮರುದಿನದ ಮುಖ್ಯ ಕಾರ್ಯಕ್ರಮಲ್ಲಿ ಒಂದಾದ, ಉದಿಯಪ್ಪಗಾಣ ಶ್ರೀ ಕರಾರ್ಚಿತ ದೇವತಾ ಪೂಜೆಗೊಕ್ಕೆ ಏಕ ಕಾಲಲ್ಲಿ 60 ಕ್ಕಿಂತಲೂ ಹೆಚ್ಚು ಸಂಖ್ಯೆಲಿ ರುದ್ರ ಪಠನ ವಿಶೇಷವೇ ಸರಿ.
ಮಂಗಳೂರಿನ ಎರಡೂ ವಲಯಂಗಳಿಂದ ನಮ್ಮ ಬಂಧುಗೊ ಬಂದು ಈ ಕಾರ್ಯಕ್ರಮಲ್ಲಿ ಭಾಗವಹಿಸಿದ್ದು, ಎಂಗಳ ನಿರೀಕ್ಷೆಂದಲೂ ಒಳ್ಳೆ ರೀತಿಲಿ ನೆಡದತ್ತು.
ಎಂಗೊಗೆ ರುದ್ರ ಕಲುಶಿದ ಗುರುಗೊ ಶ್ರೀ ಮುಕುಂದ ಶರ್ಮ ಮತ್ತೆ ನಮ್ಮ ಬಯಲಿನ ಮಂಗಳೂರು ಮಾಣಿಯೂ ಎಂಗಳ ಒಟ್ಟಿಂಗೆ ಇತ್ತಿದ್ದವು.
ಎಲ್ಲರಿಂಗೂ ಒಂದೇ ನಮೂನೆಯ ಶಾಲು ಕೊಟ್ಟು ಕೂರಿಸಿ, ಅಲ್ಲಿಯೂ ಒಂದು ಏಕತೆಯ ಸಂಕೇತ ಕೊಟ್ಟದು ವಲಯದ ಹೊಸ ಪದ್ಧತಿಗೆ ನಾಂದಿ ಹಾಡಿತ್ತು.
ನಂತರ ಹೆಮ್ಮಕ್ಕೊ ಲಲಿತ ಸಹಸ್ರ ನಾಮ ಪಾರಾಯಣ ಮಾಡಿದವು .

ಸಭಾ ಕಾರ್ಯಕ್ರಮ:

ಅಶೋಕೆಯ ಶ್ರೀಮೂಲ ಮಠಕ್ಕೆ ಬಂದ ದೇಣಿಗೆಯ ಸಮರ್ಪಣೆ ಮಾಡಿದೆಯೊ°.
ದಾನಿಗೊಕ್ಕೆ ಶ್ರೀ ಗುರುಗಳು ಶಾಲು ಹೊದೆಸಿ ಫಲ ಮಂತ್ರಾಕ್ಷತೆ ಕೊಟ್ಟು ಆಶೀರ್ವಾದ ಮಾಡಿದವು.

ಎಂಗೊಗೆ ರುದ್ರ ಕಲುಶಿದ ಗುರುಗೊ ಶ್ರೀ ಮುಕುಂದ ಶರ್ಮರು, ಭೌತ ಶಾಸ್ತ್ರಲ್ಲಿ ಡಾಕ್ಟರೇಟ್ ಮಾಡಿದ ಶ್ರೀ ರವಿಪ್ರಕಾಶ ಈಂದುಗುಳಿ ಮತ್ತೆ ಶಿಕ್ಷಣ ಕ್ಷೇತ್ರಲ್ಲಿ ಮಾಡಿದ ವಿಶೇಷ ಸಾಧನೆಗೆ ಭಾರತ ಸರಕಾರಂದ ಗೌರವಿಸಿಗೊಂಡ ಕೆರೆಮೂಲೆ ಶಂಕರನಾರಾಯ ಭಟ್ಟ ಇವಕ್ಕೆ, ಶ್ರೀ ಶ್ರೀಗೊ ಶಾಲು ಹೊದೆಸಿ, ಫಲ ಮಂತ್ರಾಕ್ಷತೆ ಕೊಟ್ಟು ಅಶೀರ್ವಾದ ಮಾಡಿದವು.

ಹವ್ಯಕ ವಲಯದ ಸದಸ್ಯರ ವಿಳಾಸ ಇಪ್ಪ ಕೈಪಿಡಿಯ ಬಿಡುಗಡೆ ಮಾಡಿದ ಶ್ರೀ ಗುರುಗಳು, ಕಿಸೆಲಿ ಮಡುಗಲೆ ಎಡಿಗಾದ ಹಾಂಗೆ ಸಣ್ಣ ಗಾತ್ರಲ್ಲಿ ಮಾಡಿದ್ದು ಲಾಯಿಕ ಆಯಿದು ಮೆಚ್ಚುಗೆ ಸೂಚಿಸಿದವು.

ಅರಸಿನ ಬಣ್ಣದ ಲೆಟರ್ ಹೆಡ್ ಲ್ಲಿ ವಲಯದ ವರದಿ ನೋಡಿದ ಗುರುಗೊ, ನವಗೂ ಇದೇ ನಮೂನೆಯ ಲೆಟರ್ ಹೆಡ್ ಮಾಡ್ಸೆಕ್ಕು ಹೇಳಿ ಪರಿವಾರಕ್ಕೆ ಸೂಚನೆ ಕೊಟ್ಟು, ಇದು ಚೆಂದಕೆ ಬಯಿಂದು ಹೇಳಿ ಮೆಚ್ಚುಗೆ ಸೂಚಿಸಿದವು.

***

ಶ್ರೀ ಗುರುಗಳ ಆಶೀರ್ವಚನದ ಸಾರಾಂಶ:

 • “ಸರ್ವೇ ಭವಂತು ಸುಖಿನಃ,
  ಸರ್ವೇ ಸಂತು ನಿರಾಮಯಾಃ
  ಸರ್ವೇ ಭದ್ರಾಣಿ ಪಶ್ಯಂತು,
  ಮಾ ಕಶ್ಚಿತ್ ದುಃಖ ಭಾಗ್ಭವೇತ್.”
  ಹೇಳ್ತ ಹಾಂಗೆ ಎಲ್ಲರೂ ನಿರೋಗಿಗಳಾಗಿ, ನಿರ್ಭಯರಾಗಿ, ಆರಿಂಗೂ ದುಖಃ ಇಲ್ಲದ್ದ ಹಾಂಗೆ ಸುಖಿಗಳಾಗಿ ಇರೆಕು ಹೇಳುವದೇ ಮಠದ ಆಶಯ.

  http://hareraama.in

  ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ

 • ನಮ್ಮ ಸಂಸ್ಕ್ರತಿಯ ಒಳುಶಿ, ಬೆಳೆಶಿ ಅದರೊಟ್ಟಿಂಗೆ ನಾವು ಅಭಿವೃದ್ಧಿ ಹೊಂದೆಕ್ಕು.
 • ಎಲ್ಲರ ಮನೆಲಿಯೂ ಲಕ್ಷ್ಮಿ ಸರಸ್ವತಿ ಇಬ್ರೂ ಇರೆಕು. ಸರಸ್ವತಿ ಹೇಳಿರೆ ಬರೇ ಪುಸ್ತಕದ ವಿದ್ಯೆ ಅಲ್ಲ – ಸಂಸ್ಕಾರ ಕೊಡುವ ವಿದ್ಯೆ ಕೂಡಾ ಆಗಿರೆಕು.
 • ಕನಸಿಲ್ಲಿಯೂ ಜಾನ್ಸಲೆ ಎಡಿಯದ್ದ ಕಾರ್ಯಂಗೊ ಆವ್ತಾ ಇದ್ದು.
  ಕೋಟಿ ರುದ್ರ ಜಪ ಇಷ್ಟರವರೆಗೆ ಎಲ್ಲಿಯೂ ನಡೆಯದ್ದ ಕಾರ್ಯಕ್ರಮ. ಈಗಾಗಲೇ ನಮ್ಮ ಸಮಾಜಲ್ಲಿ 9000 ದಷ್ಟು ಜೆನಂಗೊ ರುದ್ರ ಕಲ್ತವು ಇದ್ದವು. ನಾವು ಸಂಸ್ಕಾರಲ್ಲಿ ಶಂಕರಾಚಾರ್ಯರ ಕಾಲಕ್ಕೆ ಹೋವ್ತಾ ಇದ್ದು.
 • ಮಾರ್ಚ್ 26, 27 ರ ವಿರಾಟ್ ಪೂಜೆಯಂದು ಅತಿರುದ್ರ (14641) ಮತ್ತೆ 5 ಸಾವಿರ ಹೆಮ್ಮಕ್ಕಳಿಂದ ಕುಂಕುಮಾರ್ಚನೆ ಆಯೆಕ್ಕು.
  ಹತ್ತು ಸಾವಿರ ದೀಪಂಗಳ ಏಕ ಕಾಲಲ್ಲಿ ಬೆಳಗುಸೆಕ್ಕು.
  ಅರ್ಧ-ಮುಕ್ಕಾಲು ಗಂಟೆ ಸಮಯಲ್ಲಿ ಅತಿರುದ್ರ ಮತ್ತೆ ಕುಂಕುಮಾರ್ಚನೆ-ಎಲ್ಲೂ ಕಂಡು ಕೇಳಿರದ್ದ ಕಾರ್ಯಕ್ರಮ. ಎಲ್ಲರೂ ಇದರಲ್ಲಿ ಭಾಗವಹಿಸೆಕ್ಕು.
 • ಅಶೋಕೆಲಿ ಮೂಲ ಮಠ ಆಯೆಕ್ಕು ಹೇಳಿ ಸಂಕಲ್ಪ ಮಾಡಿ ಆಯಿದು, ಅಲ್ಲಿ ಆವುತ್ತು ಕೂಡಾ.
  ಇದೊಂದು ಅಪೂರ್ವ ಅವಕಾಶ. ಹಿಂದಾಣವಕ್ಕೆ ಸಿಕ್ಕಿದ್ದಿಲ್ಲೆ, ಮುಂದಾಣವಕ್ಕೆ ಸಿಕ್ಕ. ಇದರಲ್ಲಿ ಭಾಗಿ ಆದವು ಭಾಗ್ಯಶಾಲಿಗೊ.
  ಆಗದ್ದರೆ ಅದು ಅವರ ದೌರ್ಭಾಗ್ಯ.
 • ನಿಂಗಳ ವಲಯಲ್ಲಿ ಎಲ್ಲಾ ಪ್ರಧಾನರು, ಗುರಿಕ್ಕಾರರೂ ಒಂದೇ ಮನಸ್ಸಿಲ್ಲಿ ಕೆಲಸ ಮಾಡಿ, ಇನ್ನೂ ಒಳ್ಳೆಯ ಕಾರ್ಯಂಗಳ ಮಾಡಿ ಮಾದರಿ ಆಗಿರಿ.
  ಎಂಗಳ ಸಂಪೂರ್ಣ ಆಶೀರ್ವಾದ ನಿಂಗೊಗೆ ಇದ್ದು.

***

ಹೊತ್ತೋಪಗ ಶ್ರೀಶ್ರೀಗಳ ಬೀಳ್ಕೊಡುವ ಕಾಲಲ್ಲಿ, ಅವು ಇಪ್ಪಷ್ಟು ಹೊತ್ತು ಇತ್ತಿದ್ದ ರಕ್ಷಾ ಕವಚ ಬಿಟ್ಟು ಹೋಗಿ ಶೂನ್ಯ ಆವರಿಸಿದ ಅನುಭವ.
ಹೃದಯ ತುಂಬಿ ಬಂದ ಘಳಿಗೆ. ಆಶೀರ್ವಾದ ಪಡೆದ ಧನ್ಯತಾ ಭಾವನೆ. ಎಲ್ಲವೂ ಅನುಭವಕ್ಕೆ ಮಾತ್ರ. ಹೇಳ್ಲೆ ಅರಡಿತ್ತಿಲ್ಲೆ.

|| ಹರೇ ರಾಮ||

ಕಾರ್ಯಕ್ರಮದ ಕೆಲವು ಪಟಂಗೊ ಇಲ್ಲಿದ್ದು:

ಶರ್ಮಪ್ಪಚ್ಚಿ

   

You may also like...

10 Responses

 1. prashanth kuwait says:

  sri gurubhyo namaha

 2. ಶ್ರೀದೇವಿ ವಿಶ್ವನಾಥ್ says:

  ಶರ್ಮಪ್ಪಚ್ಚಿ, ಗುರುಭೇಟಿಯ ಅನುಭವವ ವಿವರ್ಸುದು ಕಷ್ಟ. ಅವ್ವು ಇದ್ದಷ್ಟು ಹೊತ್ತು ಅಮೂಲ್ಯದ್ದಾಗಿರ್ತು. ನಿಂಗಳ ವಲಯ ಭೇಟಿಯ ವಿವರವ ನಿಂಗೋ ಚೆಂದಲ್ಲಿ ಎಂಗೊಗೆದೆ ಭಾಗವಹಿಸಿದ ಹಾಂಗೆ ಅಪ್ಪ ಹಾಂಗೆ ವಿವರ್ಸಿದ್ದಿ. ಲಾಯ್ಕಾಯಿದು. ರುದ್ರಪಠಣಕ್ಕೆ ಕೂಪಗ ಸಮವಸ್ತ್ರಲ್ಲಿ ಸಮಚಿತ್ತರಾಗಿ ಏಕಧ್ಯಾನಲ್ಲಿ ರುದ್ರ ಹೇಳಿದ್ದು ಲಾಯಕಾದಿಕ್ಕು.. ನೋಡುಲೂ, ಕೇಳುಲೂ ಅಲ್ಲದಾ?

  ಸಂಸ್ಥಾನ ಹೆರಟಪ್ಪಗ ನಿಂಗೋ ಅನುಭವಿಸಿದ ಶೂನ್ಯತೆ ಬಹುಶ ಎಲ್ಲೋರಿಂಗೂ ಅನುಭವ ಅಕ್ಕು. ಮಹಾತ್ಮರ ಉಪಸ್ಥಿತಿಲಿ ಮಾತ್ರ ಆ ಅನುಭವ ಅಪ್ಪದಡ್ಡ. ಈ ಅನುಭವ ನವಗೂ ಸಿಕ್ಕುತ್ತಾ ಇಪ್ಪದು ನಮ್ಮ ಪುಣ್ಯ ಅಲ್ಲದೋ?
  ಶರ್ಮಪ್ಪಚ್ಚಿ.., ನಿಂಗಳ ಅನುಭವವ ಎಂಗೊಗೂ ಹಂಚಿದ್ದದಕ್ಕೆ ಧನ್ಯವಾದಂಗಾ…

 3. mohananna says:

  ಶರ್ಮಪ್ಪಚ್ಹಿ ಗುರುಗೊ ಬ೦ದ ಕಾರ್ಯಕ್ರಮದ ಬಗ್ಯೆ ಒಳ್ಳೆ ಲೇಖನ.”ಹೊತ್ತೋಪಾಗ …………ಅನುಭವಕ್ಕೆ ಮಾ೦ತ್ರ ಹೇಳ್ಲೆ ಅರಡಿತ್ತಿಲ್ಲೆ “ಎಲ್ಲೋರಿ೦ಗೂ ಎಲ್ಲ ಕಡೆಯೂ ಇದೇ ಅನುಭವ ನಿ೦ಗೊ ಅದರ ಬಾರಿ ಲಾಯಕಿಲ್ಲಿ ವಿವರ್ಸಿದಿ.ಸುರತ್ಕಲ್ಲಿ೦ದ ಎ೦ಗಳ ವಲಯದ ಮುಜು೦ಗಾವಿ೦ಗೆ ಬ೦ದು ಹೋಪಾಗ ಎ೦ಗೋಗೂ ಇದೇ ಅನುಭವ.ಬ೦ದು ಹಳೇ ಕು೦ಬ್ಳೆ ಸೀಮೆಯ ನೋಡಿದ ಹಾ೦ಗಾತು ಹೇಳಿಯಪ್ಪಗ ಅ೦ತೂ ಸ೦ಪೂರ್ಣ ಶರಣಪ್ಪ ಭಾವ ಬ೦ದದು ಖ೦ಡಿತಾ ಸತ್ಯ.ಗುರುಗಳ ಆಶೀರ್ವಾದ ಬಯಲಿನೋರ ಮೇಲೂ ಎಲ್ಲ ಭಕ್ತ ಜನ೦ಗಳ ಮೇಲೂ ಇರಳಿ.ನಾವೂ ನಮ್ಮ ಕರ್ತವ್ಯವ ಮರೆಯದ್ದೆ ಗುರು ಸೇವೆ ಎಷ್ಟು ಪರಿ ಪೂರ್ಣವಾಗಿ ಮಾಡ್ಲೆ ಎಡಿಗೋ ಅಷ್ಟೂ ಪರಿ ಪೂರ್ಣ ವಾಗಿ ಮಾಡ್ತಿಯೊ೦ ಹೇಳಿ ಸ೦ಕಲ್ಪ ಮಾಡುವೊ೦.ಹಾ೦ಗೇ ಗುರು ಆದೇಶವ ಅಕ್ಷರಶ: ಪಾಲುಸುವೊ೦.ಒಪ್ಪ೦ಗಳೊಟ್ಟಿ೦ಗೆ.

 4. ರಘುಮುಳಿಯ says:

  ಶರ್ಮಪ್ಪಚ್ಚಿ,
  ನಿಂಗಳ ವರದಿ ,ಗುರುಗಳ ಆಶೀರ್ವಚನದ ಸಾರಾಂಶ ಎಲ್ಲ ಓದಿ ಅಪ್ಪಗ ಧನ್ಯತಾಭಾವ ತುಂಬಿತ್ತು. ಧನ್ಯವಾದ.

 5. munchikana pramoda says:

  hara raama………….

 6. ವರದಿ ಓದಿ ಖುಷಿ ಆತು ಅಪ್ಪಚ್ಚಿ. ಎನ್ನ ಹೆಸರು – ಫಟ ನೋಡಿ ಮತ್ತುದೆ ಖುಷಿ ಆತು.
  ರುದ್ರ ಹೇಳಿ ತುಂಬಾ ಆನಂದ ಆತು. ಪ್ರೀತಿಯ ಕರೆ ಕೊಟ್ಟದಕ್ಕೆ ತುಂಬಾ ಧನ್ಯವಾದನ್ಗೋ.
  ತೀರ್ಥ – ಮಂತ್ರಾಕ್ಷತೆ ಕೊಡುವಾಗ ಗುರುಗೋ ಎನ್ನ ಗುರುತಿಸಿ ಆಶೀರ್ವಾದ ಮಾಡಿದ್ದು, ಆ ಗುರು ದೃಷ್ಟಿ ಎನ್ನ ಮೇಲೆ ಬಿದ್ದದು ಮರವಲೇ ಎಡಿಯದ್ದದು.
  ಚಂಚಲ ಆಗಿಪ್ಪ ಮನಸ್ಸಿನ ಹಿಡುದು ನಿಲ್ಲುಸಿ, ಗುರಿಯ ಕಡೆಂಗೆ ಹೊಪಲೆ ನಮ್ಮ ತಯಾರು ಮಾಡ್ತು ಆ ಕರುಣಾ ಪೂರ್ಣ ದೃಷ್ಟಿ.
  ತುಂಬಾ ಚೆಂದಕೆ ಕಟ್ಟಿ ಕೊಟ್ಟಿಡಿ. ತುಂಬಾ ಸಂತೋಷ ಆತು. :):)

 7. haರೇ ರಾಮ !

  ಕಾರ್ಯಕ್ರಮಲ್ಲಿ ಭಾಗವಹಿಸುಲೆ ಆನೂ ಹೋಗಿತ್ತಿದ್ದೆ, ಅಲ್ಲಿ ತಲಪುವಗ ತಡವಾಗದಿದ್ದರೂ “ಲೇಟ್” ಆಗಿತ್ತು. ಹಾಂಗಾಗಿ ರುದ್ರಾಭಿಷೇಕ ,ಪೂಜೆ ಆಗಿತ್ತು. ಒಂದು ಒಳ್ಳಯ ವರದಿ ಓದಿದೆ.ಶರ್ಮಪ್ಪಚ್ಚಿಗೆ ಧನ್ಯವಾದ.

 8. ಶರ್ಮಪ್ಪಚ್ಚೀ..
  ಚಿಕ್ಕ-ಚೊಕ್ಕ ಶುದ್ದಿ ಕಂಡು ತುಂಬಾ ಕೊಶಿ ಆತು.

  ಗುರುಗೊ ಇದ್ದ ಸನ್ನಿವೇಶ, ಅವು ಹೆರಟ ಸನ್ನಿವೇಶ – ಚೆಂದಲ್ಲಿ ಹೇಳಿದಿ.
  ಆಶೀರ್ವಚನದ ಸಾರಂಶ ವಿವರಣೆ ಕೊಶಿ ಆತು.

  ರುದ್ರ ಆಯೋಜನೆ ತುಂಬಾ ಒಳ್ಳೆ ಕಾರ್ಯ. ಎಲ್ಲಾ ಊರಿಲಿಯೂ ಹೀಂಗೇ ಆದರೆ, ಮತ್ತೊಂದರಿ ವೇದಕಾಲ ಬಪ್ಪದರ್ಲಿ ಸಂಶಯ ಇಲ್ಲೆ.
  ಹರೇರಾಮ

 9. ಶರ್ಮಪ್ಪಚ್ಚಿ says:

  ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಎಲ್ಲರಿಂಗೂ ಧನ್ಯವಾದಂಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *