ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ…

ಬೋಲೋ ಭಾರತ್ ಮಾತಾಕೀ – ಜೈ..!!!
ವಂದೇ – ಮಾತರಮ್ ||

ಭಾರತದ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ…

ಭಾರತ ದೇಶವ ಬ್ರಿಟಿಶರು ನಮ್ಮ ಕೈಗೆ ಬಿಟ್ಟುಕೊಟ್ಟು ಅರುವತ್ತನಾಕು ಒರಿಶ ಆತು.
ಸಾವಿರದ ಒಂಭೈನೂರ ನಲುವತ್ತೇಳನೇ ಇಸವಿ, ಅಗೋಸ್ತು ಹದಿನೈದಕ್ಕೆ ದೆಹಲಿ ಇಡೀ ನಮ್ಮದಾತಡ.
ಸುಭಾಶ್ಚಂದ್ರ ಬೋಸು, ಭಗತ್ ಸಿಂಗ್, ರಾಜಗುರು, ಸುಖದೇವ, ಲಾಲ್-ಬಾಲ್-ಪಾಲ್..
– ಇತ್ಯಾದಿ ಹಿರಿಯ ಸೇನಾನಿಗೊ ಸೇರಿ ನಮ್ಮ ಭಾರತವ ಸ್ವತಂತ್ರ ಮಾಡಿದವಡ.
– ಶಂಬಜ್ಜನ ಕಾಲದ ಶುದ್ದಿ.

ಅದರಿಂದ ಮತ್ತೆ ನಾವೆಷ್ಟು ಸೊತಂತ್ರ ಆಯಿದು, ಎಷ್ಟು ಬೆಳದ್ದು, ಎಂತೆಲ್ಲ ಕಷ್ಟನಷ್ಟ ಎದುರುಸಿದ್ದು –
ಎಲ್ಲವನ್ನುದೇ ನೋಡಿರೆ ಇನ್ನೂ ನಾವು ನೆಡೇಕಾದ ದೂರ ಕಂಡಾಬಟ್ಟೆ ಇದ್ದು.
ಏನೇ ಆಗಲಿ, ನಮ್ಮದು ನಮ್ಮದೇ.
ನಾವೇ ಆಚರುಸೇಕು.
ಭಾರತಉದ್ದಾರ ಆಗಲಿ,ಇನ್ನೂ ಮೇಲೆ ಬರಳಿ ಹೇಳಿ ಆಶಿಸುವ ಶುಭದಿನ.
ಇಂದು ಮತ್ತೊಂದು ಅಗೋಷ್ಟು ಹದಿನೈದು.
ಶಾಲೆಗಳಲ್ಲಿ ಬೆಳಿಅಂಗಿಯೋರು ಬಂದು ಬಾಶಣ ಮಾಡ್ತ ದಿನ. ಮಕ್ಕೊಗೆ ಚೋಕುಲೇಟು
ಸಿಕ್ಕುವನ್ನಾರ ಕಾದುಕೂರೇಕಾದ ಅನಿವಾರ್ಯ ಪರಿಸ್ತಿತಿ ಬತ್ತ ದಿನ!
ಪಾಪ!!


ಹಿರಿಯರ ತತ್ವ ಆದರ್ಶಂಗೊ ನವಗೆ ದಾರಿದೀಪ ಆಗಿರಳಿ.
ಸ್ವತಂತ್ರ ಭಾರತಲ್ಲಿಪ್ಪ ನವಗೆಲ್ಲರಿಂಗೂ ಒಳ್ಳೆದಾಗಲಿ.

ಹರೇರಾಮ.

ಗುರಿಕ್ಕಾರ°

ಸೂ:

 • ಭಾರತದ ಧ್ವಜದ ತುಂಬ ಪಟಂಗೊ ಇಲ್ಲಿದ್ದು:
  (ಸಂಕೊಲೆ)
 • ಬೊಳುಂಬುಮಾವ° ಸ್ವಾತಂತ್ರದ ಬಗ್ಗೆ ಬರದ ಹುಂಡುಪದ್ಯಂಗೊ ಇಲ್ಲಿದ್ದು:
  (ಸಂಕೊಲೆ)
 • ಬೆಂಗುಳೂರಿಲಿ ಪೆರ್ಲದಣ್ಣ ಮಾಡಿದ ದೋಸೆಗಳ ಪಟ ಇಲ್ಲಿದ್ದು:

  ಪೆರ್ಲದಣ್ಣನ ಅಡಿಗೆಕೋಣೆಲಿ ಸ್ವಾತಂತ್ರೋತ್ಸವ!

  ಪೆರ್ಲದಣ್ಣ ದೋಸೆಮೇಗೆ ಅಲಂಕಾರ ಮಾಡಿದ್ದು! (ಮೆರವಣಿಗೆ ನೋಡ್ಳೆ ಹೋಪ ಮೊದಲು ತಿಂದು ಕಳುದ್ದು!)

ಶುದ್ದಿಕ್ಕಾರ°

   

You may also like...

11 Responses

 1. ನಿಂಗೊಗೂ ಬೈಲಿನವಕ್ಕೆಲ್ಲೊರಿಂಗೂ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ…
  ನಮ್ಮ ಧ್ವಜದ ನಮುನೆಲಿ ಶುದ್ದಿಕ್ಕಾರನ ಶುದ್ದಿ ಭಾರೀ ಚೆಂದ ಆಯಿದು..
  ಪೆರ್ಲದಣ್ಣನ ದೋಸೆಗಳೂ ಅದ್ಭುತ! ತಿಂಬಲೆ ಮನಸ್ಸು ಬಂದಿಕ್ಕೋ…? 🙂

 2. ಶರ್ಮಪ್ಪಚ್ಚಿ says:

  ಬೈಲಿನವಕ್ಕೆ ಎಲರಿಂಗೂ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ.
  ಶುದ್ದಿಕ್ಕಾರ ಬರದ್ದು ಮತ್ತೆ ಅದರ design ಮಾಡಿದ್ದು ಲಾಯಿಕ್ ಆಯಿದು. ಹಾಂಗೇ ಮುಖ ಪುಟದ deisgn ಕೂಡಾ ತುಂಬಾ ಚೆಂದಕೆ ಬಯಿಂದು. ಸಮಯೋಚಿತ.
  ಪೆರ್ಲದಣ್ಣನ innovative idea ತುಂಬಾ ಕೊಶಿ ಆತು.

 3. ರಘು ಮುಳಿಯ says:

  ಬೈಲಿನ ಎಲ್ಲ ಬಂಧುಗೊಕ್ಕೂ ಸ್ವಾತಂತ್ರ್ಯದ ಶುಭಾಹಾರೈಕೆಗೋ ..
  ಭಾರತದ ಇತಿಹಾಸದ ಪುಟಂಗಳಲ್ಲಿ ಸುವರ್ಣಾಕ್ಷರಲ್ಲಿ ಬರೆಯೆಕ್ಕಾದ ದಿನ ಇಂದು.ಪರದೇಶಂದ ಗೂಡಂಗಡಿ ಮಡುಗುಲೆ ಭಾರತಕ್ಕೆ ಬಂದ ಬ್ರಿಟಿಷರು ನಮ್ಮ ಒಳಜಗಳಂಗಳ,ಸಮಾಜಲ್ಲಿಪ್ಪ ಭೇದಂಗಳ ಸರಿಯಾಗಿ ತಿಳುಕ್ಕೊಂದು ನವಗೇ ನಾಮ ಹಾಕಿ ಆಳ್ವಿಕೆ ಮಾಡಿದವು.ಗಾಂಧೀಜಿ,ಸುಭಾಶ್ಚಂದ್ರ ಬೋಸ್,ಪಟೇಲ್,ನವರೋಜಿ ,ಕಾರ್ನಾಡು….ಹೀಂಗೆ ಲಕ್ಷಾಂತರ ಸ್ವಾತಂತ್ರ್ಯಯೋಧರ ಪ್ರಾಮಾಣಿಕ ಪ್ರಯತ್ನಲ್ಲಿ ಇಂದು ಬ್ರಿಟಿಷರ ದಾಸ್ಯಂದ ಹೇರ ಬಯಿಂದು.ಆದರೆ ಇಂದು ನವಗೆ ನಿಜ ಅರ್ಥದ ಸ್ವಾತಂತ್ರ್ಯ ಇದ್ದೋ?ಅಂದು ಹೋರಾಟ ಮಾಡಿದ್ದ ಹೆರಿತಲೆಗೋ ಇಂದಿನ ಸ್ಥಿತಿ ನೋಡಿ ಸಂತೋಷಪಡುಗೋ? ಒಂದು ಹೊಡೆಲಿ ಅಧಿಕಾರ ಸಿಕ್ಕಿದ ಕೂಡಲೇ ಸ್ವಾರ್ಥವನ್ನೇ ಯೋಚಿಸಿ ಬೇಕಾದ ಯೋಜನೆ ಹಾಕುವ ನಮ್ಮ ರಾಜ ಕಾ ರಣಿಗೋ.ಇನ್ನೊಂದು ಹೊಡೆಲಿ ಎಂ.ಏನ್.ಸಿ. ಹೇಳ್ತ ದೊಡ್ಡ ಹೆಸರು ಹೇಳಿ ನಮ್ಮ ದಿನದಿನವೂ ಲೂಟಿ ಮಾಡುತ್ತಾ ಇಪ್ಪ ಹೆರದೇಶದ ಕಂಪೆನಿಗೋ. ಭಾರತ ಸ್ವದೇಶೀ ಸ್ವಾಭಿಮಾನಿ ದೇಶ ಆಗಿ ತನ್ನದೇ ದಾರಿಲಿ ಮುಂದೆ ನಡವ ರಾಷ್ಟ್ರ ಆಗಲಿ ಹೇಳಿ ಪ್ರಾರ್ಥನೆ ಮಾಡಿ ಆ ದಿಕ್ಕಿಲಿ ನಮ್ಮ ಪ್ರಾಮಾಣಿಕ ಪ್ರಯತ್ನಂಗಳ ಮಾಡುವ,ಆತ್ಮವಿಶ್ವಾಸ ಬೆಳೆಸಿಗೊಂಬ.
  ಜೈ ಹಿಂದ್.

 4. ರಘು ಮುಳಿಯ says:

  ಶುದ್ದಿಕ್ಕಾರ ಭಾವಾ..
  ಅಲಂಕಾರಕ್ಕೆ ಮಡುಗಿದ ಹಸಿಮೆಣಸು,ಕುಮಟೆಮೆಣಸುದೇ ಸ್ವಾಹಾ ಆತೋ?? ಇನ್ನು ಸ್ವಾತಂತ್ರ್ಯವೇ !!!

 5. ಮಹೇಶ says:

  ತ್ರಿವರ್ಣರಂಜಿತ ಶುಭಾಶಯಂಗ ಮನೋರಂಜಕವಾಗಿ ಇದ್ದು!!
  {ಅರುವತ್ತನಾಕು ಒರಿಶ ಆತು.}
  ವರ್ಷ ಕಳುದ್ದದು ಅರುವತ್ಮೂರೇ ಅಲ್ಲದಾ? ಇದು ಅರುವತ್ತನಾಲ್ಕನೆಯ ಸ್ವಾತಂತ್ರ್ಯೋತ್ಸವ ಅಪ್ಪು. ಹಾಂಗಾಗಿ ಅರುವತ್ತನಾಕನೆ ವರ್ಷ ಶುರು ಆತು ಹೇಳ್ಳಕ್ಕು.
  ಸ್ವಾತಂತ್ರ್ಯ ಸಿಕ್ಕುವ ಸಂದರ್ಭಲ್ಲಿ ನಮ್ಮ ದೇಶವ ತುಂಡು ಮಾಡಿದವು.
  ಆ ಕಾಲಕ್ಕೆ ಸಾವಿರಾರು ಜನರ ಮಾರಣ ಕೃತ್ಯ ನಡತ್ತು. ಇದನ್ನುದೆ ನಾವು ನೆಂಪು ಮಾಡೆಕು. ಅವರ ಬಗ್ಗೆ ಅನುಕಂಪದ ಒಂದು ಮಾತನ್ನುದೆ ಅಂದ್ರಾಣ ಸ್ವಾತಂತ್ರ್ಯ ದಿನಾಚರಣೆಲ್ಲಿ ಹೇಳಿದ್ದವಿಲ್ಲೆ ಅಡ.
  ಈಗ ಕಾಶ್ಮೀರಕ್ಕೆ ಸ್ವಾಯತ್ತತೆ (autonomy) ಕೊಟ್ಟು ಬೇರೆ ಮಾಡುವ ಬಗ್ಗೆ ಮಾತಾಡ್ತಾ ಇದ್ದು ನಮ್ಮದೇ(?) ಸರ್ಕಾರ 🙁
  ಕಾಶ್ಮೀರವ ಬೇರೆ ಮಾಡ್ಲೆ ಪ್ರಯತ್ನ ಪಡುವವರ ಸ್ವಾತಂತ್ರ್ಯ ಹೋರಾಟಗಾರರ ಹಾಂಗೆ ನೋಡುವ, ಭಾರತವ ದಬ್ಬಾಳಿಕೆ ಮಾಡುವ ಹಾಂಗೆ ತೋರುಸುವ ಒಂದು ವರ್ಗ ಇದ್ದು ಹೇಳುವದು ಇಂದಿನ ದು:ಸ್ಥಿತಿ.

 6. ಬೀಡುಬೈಲು ಮಾಣಿ says:

  ಅಪ್ಪು….ಎಲ್ಲೋರಿಂಗೂ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ……!
  ದೇವರು ಒಳ್ಳೇದು ಮಾಡಲಿ.
  ಪೆರ್ಲದಣ್ಣನ ತ್ರಿವರ್ಣ ತೆಳ್ಳವು ಲಾಯಿಕ ಕಾಣುತ್ತು……! 🙂

 7. ಗೋಪಾಲ ಮಾವ says:

  ಇಡೀ ಬೈಲಿನ ತ್ರಿವರ್ಣಲ್ಲಿ ನೋಡಿ ಕೊಶಿ ಆತು. ಪೆರ್ಲದಣ್ಣನ ದೋಸೆ ಐಡಿಯ ಅದ್ಭುತ. ಅಪ್ಪಪ್ಪಾ. ಮಕ್ಕೊಗೆ ಸ್ವಾತಂತ್ರದ ಬಗ್ಗೆ ನೆಂಪು ಮಾಡ್ಳೆ ಎಂತೆಲ್ಲ ಮಾಡ್ತವು. ಕೈಗೆ ಹಾಕಲೆ ತ್ರಿವರ್ಣದ ಬಳೆಗೊ, ಜಿಡೆಗೆ ಹಾಕಲೆ ರಬ್ಬರ್ ಬೇಂಡು, ಲಾಡಿ, ಪದಕಂಗೊ, ಬಣ್ಣದ ಕೊಡಗೊ, ಅಂಗಿಗೊ, ಟೊಪ್ಪಿಗೊ… ಇನ್ನೂ ಎಂತೆಲ್ಲ. ಅಲ್ದೊ. ನಿನ್ನೆ ಮಂಗಳೂರಿಲ್ಲಿ ಅಲೊಶಿಯಸ್ ಶಾಲೆಲಿ, ಕಲ್ಲಚ್ಚು ಪ್ರಕಾಶನದವು ಮಾಡಿದ ತ್ರಿವರ್ಣ ಧ್ವಜದ ದೋ….ಡ್ಡ ರಂಗೋಲಿ (ಇಡೀ hallಲ್ಲಿ) ಲಾಯಕಿತ್ತು. ನೋಡುತ್ತ ಆಸಕ್ತಿ ಇದ್ದವಕ್ಕೆ ಇಂದು ಸಂಜೆ ವರೆಗೆ ಅದರ ನೋಡ್ಳೆ ಅವಕಾಶ ಇದ್ದು.

 8. ಶ್ರೀದೇವಿ ವಿಶ್ವನಾಥ್ says:

  ಸ್ವಾತಂತ್ರ್ಯದ ಶುಭಾಶಯಂಗಳ ಇಂದುದೆ ಹೇಳುಲಕ್ಕನ್ನೇ!!! ನಿನ್ನೆ ಶಾಲೆಗೊಕ್ಕೆ ಹೋಪಲಿತ್ತು, ಷಷ್ಠಿ ಪೂಜೆಗೆ ದೇವಸ್ಥಾನಕ್ಕೆ ಹೋಪಲಿತ್ತು ಹಾಂಗೆ ಬೈಲಿಂಗೆ ಬಪ್ಪಲಾಯಿದಿಲ್ಲೇ!!!
  ಬೈಲಿಲಿ ಎಲ್ಲೋರಿಂಗೂ ಸ್ವಾತಂತ್ರ್ಯೋತ್ಸವದ ಶುಭಾಶಯಂಗ!!!
  ಸ್ವಾತಂತ್ರ್ಯದ ಬಗ್ಗೆ ಆಗಿನ ಕಾಲದ ಜನಂಗಳ ಮನಸ್ಸಿನ ಭಾವನೆ ಈಗಾಣೋರ ಮನಸ್ಸಿಲಿ ಇರ, ನಮ್ಮ ಮಕ್ಕಳಲ್ಲಿ ಅದು ಇನ್ನೂ ಕಮ್ಮಿ ಇಕ್ಕು.., ಆದರೆ ದೇಶಾಭಿಮಾನ ಕಮ್ಮಿ ಆಗದ್ದ ಹಾಂಗೆ ಅವರ ಬೆಳೆಶಿ, ಒಬ್ಬ° ಒಳ್ಳೆಯ ಭಾರತೀಯ ಪ್ರಜೆ ಹೇಳಿ ರೂಪಿಸುವಲ್ಲಿ ಹಿರಿಯರಾದ ನಮ್ಮ ಜವಾಬ್ದಾರಿ ಬಹಳ ಇದ್ದು. ನಮ್ಮ ಮಕ್ಕ ಎಲ್ಲೋರು ದೇಶ ಮೆಚ್ಚುವಂಥ ಮಾದರಿ ಮಕ್ಕೊ ಆಗಲಿ ಹೇಳ್ತ ಹಾರೈಕೆ.
  ಶುದ್ದಿಕ್ಕಾರ° ಬರದ್ದದರಲ್ಲಿಯೂ, ಬರದ ರೀತಿಲೂ ದೇಶಪ್ರೇಮ ಇದ್ದು, ಇದು ಎಲ್ಲೋರ ದೇಶಪ್ರೇಮವ ಜಾಗೃತಗೊಳಿಸಲಿ..
  ಅಂಬಗಾ…!!! ಪೆರ್ಲದಣ್ಣ ದೋಸೆ ಮಾಡ್ತ ಪಟ ಏಕೆ ಹಾಕದ್ದದು? ಅದುದೆ ಬೇಕಾತನ್ನೇ!!!!

  • ಅಜ್ಜಕಾನ ಭಾವ says:

   ಛೆ ಅಷ್ಟುದೆ ಅರಡಿಯದಾ.. ಅವ ದೋಸೆ ಮಾಡುವಾಗ ಪಟ ತೆಗೆವದು ಹೇಂಗೆ.. ಪಟ ತೆಗೆವಲೆ ಬತ್ತೆ ಹೇಳಿದ ಗುಣಾಜೆ ಮಾಣಿ ಯಡ್ಯೂರಪ್ಪನ ಒಟ್ಟಿಂಗೆ ಹೋದ ಕಾರಣ, ದೋಸೆ ಎರದು ಆದ ಮೇಲೆ ಪಟ ತೆಗೆದು ಬೈಲಿಂಗೆ ಕಳ್ಸಿದ್ದಡಾ ಶ್ರೀ ಅಕ್ಕಾ..

 9. ಶ್ರೀಶ ಹೊಸಬೆಟ್ಟು says:

  ಅವ ಪಟ ತೆಗದರೆ TV-9 ರಲ್ಲಿ ಹಾಕುಗು ಹೇಳಿ ಬಪ್ಪದು ಬೇಡ ಹೇಳಿದ್ದಾಯಿಕ್ಕು

  • TV-9 ಲಿ ಬಂದರೆ ಮತ್ೆ “ಇದಾರು!?” ಹೇಳಿ ಬಯಲಿಲಿಯುದೆ ಬಕ್ಕಿದಾ… ಹಾಂಗಾಗಿ ಅವ ಪರಾರಿ ಆದ್ದದು.. 😉

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *