Oppanna.com

20-ಜುಲೈ-2014: ಉಡುಪಿಲಿ ಎರಡು ಪುಸ್ತಕಂಗಳ ಬಿಡುಗಡೆ

ಬರದೋರು :   ಶುದ್ದಿಕ್ಕಾರ°    on   24/07/2014    3 ಒಪ್ಪಂಗೊ

ಮೊನ್ನೆ ಆದಿತ್ಯವಾರ ತಾರೀಖು ೨೦-೦೭-೨೦೧೪ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪಲ್ಲಿ ಎರಡು ಪುಸ್ತಕಂಗಳ ಬಿಡುಗಡೆ ಕಾರ್ಯಕ್ರಮ ಒಳ್ಳೆ ರೀತಿಲಿ ನಡದತ್ತು.

ಒಂದು ಪುಸ್ತಕ ದಿವಂಗತ ಕುಕ್ಕಿಲ ಕೃಷ್ಣ ಭಟ್ಟರ ಭಾರತೀಯ ಸಂಗೀತ ಶಾಸ್ತ್ರ.
ಈ ಪುಸ್ತಕವ ಕಾರ್ಕಳದ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಎಂ. ರಾಮಚಂದ್ರ ಇವು ಲೋಕಾರ್ಪಣೆ ಮಾಡಿದವು.
ಪುಸ್ತಕದ ವಿಷಯಲ್ಲಿ ಸಂಗೀತ ಶಾಸ್ತ್ರ ತಜ್ಞರಾದ ಶ್ರೀ ಎ. ಈಶ್ವರಯ್ಯ ಇವು ಮಾತಾಡಿದವು.

ತುಳು-ಕನ್ನಡ-ಸಂಸ್ಕೃತ ವಿದ್ವಾಂಸರಾಗಿದ್ದ ದಿವಂಗತ ಡಾ.ವೆಂಕಟರಾಜ ಪುಣಿಂಚತ್ತಾಯ ಇವರ  ಸಮಗ್ರ ಕನ್ನಡ ಲೇಖನಂಗಳ ಸಂಕಲನ ಮಹಾಜನಪದ ಇದರ ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ.ತಾಳ್ತಜೆ ವಸಂತ ಕುಮಾರ ಇವು ಬಿಡುಗಡೆ ಮಾಡಿದವು.
ಈ ಬೃಹದ್ಗ್ರಂಥದ ೧೦೦೦ ಪುಟಕ್ಕೂ ಮಿಕ್ಕಿ ಇದ್ದು.
ಇದರ ಸಂಪಾದಿಸಿ ಟಿಪ್ಪಣಿ ಬರದು ಮುದ್ರಣಕ್ಕೆ ಸಿದ್ಧಪಡಿಸಿದೋರು ಡಾ.ಪಾದೇಕಲ್ಲು ವಿಶ್ಣು ಭಟ್ಟರು.
ಈ ಎರಡೂ ಪುಸ್ತಕಂಗಳ ಪ್ರಕಾಶಕರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದೋರು.

“ಮಹಾಜನಪದ” ಪುಸ್ತಕಲ್ಲಿ ಸಾಹಿತ್ಯ ವಿಶ್ಲೇಷಣೆ, ಐತಿಹ್ಯ ಇತಿಹಾಸ, ಜನಪದ ಭೂತರಾಧನೆ,  ತುಳು ಸಾಹಿತ್ಯ ಸಂಪಾದನೆ, ಯಕ್ಷಗಾನ, ವ್ಯಕ್ತಿ ವಿಚಾರ, ಇತರ – ಈ ಏಳು ವಿಭಾಗಂಗಳಲ್ಲ್ಲಿ ಒಟ್ಟು ೧೯೧ ಲೇಖನಂಗೊ ಸೇರಿಗೊಂಡಿದ್ದು.
ಈ ಪುಸ್ತಕದ ಕ್ರಯ ರೂ.800/- (ಪ್ರಕಟಣಾ ಪೂರ್ವ ರೂ.500.00 ಕ್ಕೆ ಕೊಟ್ಟಿದವು.)

ಆಸಕ್ತರು
ನಿರ್ದೇಶಕರು,
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ,
ಉಡುಪಿ 576102
– ಇವಕ್ಕೆಬರದರೆ, ರಿಯಾಯಿತಿ ದರಲ್ಲಿ ಕಳ್ಸಿ ಕೊಡುಗು.

ಬೈಲಿನ ಬಂಧುಗೊಕ್ಕೆ ಮಾಹಿತಿಗಾಗಿ ಈ ವಿಷಯದ ವಿವರಂಗಳ ಕಳ್ಸಿದ್ದೆ.

ಬೈಲಿಂಗೆ ವರದಿ ಕಳುಸಿಕೊಟ್ಟೋರು:
ಮಧು ಅಕ್ಕ, ಉಡುಪಿ
(ಮಿಂಚಂಚೆ: madhubhat94@gmail.com)

3 thoughts on “20-ಜುಲೈ-2014: ಉಡುಪಿಲಿ ಎರಡು ಪುಸ್ತಕಂಗಳ ಬಿಡುಗಡೆ

  1. ಈ ಕಾರ್ಯಕ್ರಮಕ್ಕೆ ಆನು ಹೋಗಿತ್ತೆ.ಡಾ.ವೆ೦ಕಟರಾಜ ಪುಣಿ೦ಚಿತ್ತಾಯರು ಎನ್ನ ಗುರುಗೊ ಹೇದು ಎನಗೆ ಹೇಳ್ಲೆ ಹೃದಯ ತು೦ಬಿ ಬತ್ತು.ಅವರ ಶಿಷ್ಯ ವಾತ್ಸಲ್ಯವ ಮಾತಿಲ್ಲಿ ವೆಕ್ತಪ೦ಡ್ಸಲೆ ಎಡಿಯ.ಅವರ “ಮಹಾಜನಪದ ” ಕೃತಿಯ ಪ್ರಕಟಣೆಗೆ ಮದಲೇ ಎ೦ಗ ಕಾದಿರಿಸಿತ್ತಿದ್ದಿಯೋ°.ಮನ್ನೆಅದರ ಅಲ್ಲೇ ಪಡಕೊ೦ಬ ಭಾಗ್ಯವದುದೇ ಸಿಕ್ಕಿತ್ತು. ಓದಿ ಸಾಧ್ಯವಾದರೆ ನಿಧಾನಕ್ಕೆ ಆ ಬಗ್ಗೆ ನಿದಾನಕೆ ಬರವ ಆಲೋಚನೆ ಮಾಡೆಕು ಹೇಳುವ ಆಲೋಚನೆ ಇದ್ದು.ಈ ಸುದ್ದಿಯ ನಮ್ಮಬಯಲಿಲ್ಲಿ ಪ್ರಕಟಿಸಿದ್ದಕ್ಕೆ ಹಾರ್ದಿಕ ಧನ್ಯವಾದ೦ಗೊ+ ಅಬಿನ೦ದನಗೊ.

  2. ಈ ಕಾರ್ಯಕ್ರಮಕ್ಕೆ ಆನು ಹೋಗಿತ್ತೆ.ಡಾ.ವೆ೦ಕಟರಾಜ ಪುಣಿ೦ಚಿತ್ತಾಯರು ಎನ್ನ ಗುರುಗೊ ಹೇದು ಎನಗೆ ಹೇಳ್ಲೆ ಹೃದಯ ತು೦ಬಿ ಬತ್ತು.ಅವರ ಶಿಷ್ಯ ವಾತ್ಸಲ್ಯವ ಮಾತಿಲ್ಲಿ ವೆಕ್ತಪ೦ಡ್ಸಲೆ ಎಡಿಯ.ಅವರ “ಮಹಾಜನಪದ ” ಕೃತಿಯ ಪ್ರಕಟಣೆಗೆ ಮದಲೇ ಎ೦ಗ ೦೦೦ಕಾದಿರಿಸಿತ್ತಿದ್ದಿಯೋ°.ಮನ್ನೆಅದರ ಅಲ್ಲೇ ಪಡಕೊ೦ಬ ಭಾಗ್ಯವದುದೇ ಸಿಕ್ಕಿತ್ತು. ಓದಿ ಸಾಧ್ಯವಾದರೆ ನಿಧಾನಕ್ಕೆ ಆ ಬಗ್ಗೆ ಬರವ ಆಲೋಚನೆ ಮಾಡೆಕು ಹೇಳುವ ಆಲೋಚನೆ ಇದ್ದೇ.ಈ ಸುದ್ದಿಯ ನಮ್ಮಬಯಲಿಲ್ಲಿ ಪ್ರಕಟಿಸಿದ್ದಕ್ಕೆ ಹಾರ್ದಿಕ ಅಬಿನ೦ದನಗೊ.

  3. ಪ್ರೊ.ಎಂ.ರಾಮಚಂದ್ರ ಕಾರ್ಕಳ ನಿವೃತ್ತ ಕನ್ನಡ ಪ್ರಾಧ್ಯಾಪಕರು.ಕಾರ್ಕಳಲ್ಲಿ ಸಾಹಿತ್ಯ ಸಂಘವ ಕಟ್ಟಿ,ಬೆಳಶಿ ಮುನ್ನಡೆಸುತ್ತಾ ಇಪ್ಪವು.ಆನು ಅವರ ಶಿಷ್ಯ ಹೇಳುಲೆ ಅಭಿಮಾನ ಪಡುತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×