’ವಾಣಿಚಿಕ್ಕಮ್ಮ’ನ ಶುದ್ದಿಗೊ ಬೈಲಿಲಿ ಗೌರಿಹೊಳೆಯ ಹಾಂಗೆ ’ಹರಿ’ಯಲಿ..

September 8, 2012 ರ 10:00 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಪ್ಪಣ್ಣನ ಶುದ್ದಿಗಳಲ್ಲಿ ಎಡೆಡೇಲಿ “ಹರಿಯೊಲ್ಮೆ” ಮನೆಯ ಬಗ್ಗೆ ಬಂದ್ಸು ನಿಂಗೊಗೆ ನೆಂಪಿಕ್ಕು ಅಲ್ಲದೋ?
ಬಾಲ್ಯಂದಲೇ ಧಾರಾಳ ಹೋಗಿಂಡಿದ್ದ ನೆರೆಕರೆಯ ಆ ಮನೆ ಒಪ್ಪಣ್ಣಂಗೆ “ಮನೆಯಂತೇ”!
ಮನೆಯಂತೇ ಹೇಳಿ ಆಯೇಕಾರೆ ಅಲ್ಲಿಪ್ಪೋರುದೇ ಮನೆಯವರಂತೇ ಆಗೆಡದೋ? ಅಪ್ಪು.
ಅಲ್ಯಾಣ ಅಪ್ಪಚ್ಚಿ-ಚಿಕ್ಕಂದ್ರೂ ಮನೆಯೋರಂತೇ. ಆ ಪ್ರೀತಿ, ಆರ್ದ್ರತೆ ಎಂದಿಂಗೂ ಇರ್ತು. ಇದರ ನಮ್ಮ ರಂಜನಿಅಕ್ಕನೂ ಒಪ್ಪುಗು, ಬೆಂಗುಳೂರಿಲಿಪ್ಪ ಭಾಗ್ಯಕ್ಕನೂ ಒಪ್ಪುಗು; ಅಮೇರಿಕಲ್ಲಿಪ್ಪ ಸುಮನಕ್ಕನೂ ಒಪ್ಪುಗು!

ಹರಿಯೊಲ್ಮೆ ಮನೆಲಿಪ್ಪ ವಾಣಿ ಚಿಕ್ಕಮ್ಮಂಗೆ ಬರೆತ್ತ ಅಭ್ಯಾಸ ಇಪ್ಪದು ಗುಟ್ಟಾಗಿ ಏನೂ ಒಳುದ್ದಿಲ್ಲೆ.
ಚೆಂದದ ಭಾವನೆಗಳ ಅಷ್ಟೇ ಚೆಂದದ ಅಕ್ಷರಲ್ಲಿ ಬರದ ಪದ್ಯಪುಸ್ತಕವ ಮೊನ್ನೆ ಮಾಷ್ಟ್ರುಮಾವಂಗೆ ತೋರ್ಸೆಂಡಿಪ್ಪಗ ಒಪ್ಪಣ್ಣಂಗೆ ಕಂಡಿತ್ತಿದ್ದು.
‘ಚೆಲಾ – ಹರಿಯೊಲ್ಮೆ ಚಿಕ್ಕಮ್ಮಂಗೆ ಪದ್ಯ ಬರವಲೂ ಬತ್ತೋ!’ ಒಂದರಿ ಆಶ್ಚರ್ಯ ಆದ್ದಪ್ಪು.
ಹೂಗಿನ ಗೆಡುಗೊಕ್ಕೆ ನೀರು ಕೊಡುವಗ, ದನಗೊಕ್ಕೆ ಹುಲ್ಲು ಹಾಕುವಗ, ದೇವರ ಪೂಜೆಗೆ ಅಟ್ಟಣೆ ಮಾಡುವಗ, ಅಡಿಗೆ-ಒಗ್ಗರಣೆ ಮಾಡುವಗ – ಚಿಕ್ಕಮ್ಮನ ಮನಸ್ಸಿನೊಳ ಇಪ್ಪ ಮಾತೃಹೃದಯಲ್ಲಿ ನಿರಂತರವಾಗಿ ಚಿಂತನೆ ನೆಡೆತ್ತಲ್ಲದೋ – ಅದುವೇ ಪದ್ಯ ಆಗಿ, ಶುದ್ದಿ ಆಗಿ ರಚನೆ ಆಯಿದು. ಮಾಷ್ಟ್ರುಮಾವ°, ಗಣೇಶಮಾವ° ಎಲ್ಲೋರುದೇ ಒತ್ತಾಯಲ್ಲಿ “ಬೈಲಿಂಗೊಂದರಿ ಬನ್ನಿ ಚಿಕ್ಕಮ್ಮಾ” – ಹೇಳಿದ್ದಕ್ಕೆ, ಅಖೇರಿಗೆ ಹರಿಯೊಲ್ಮೆ ಅಪ್ಪಚ್ಚಿಯೂ ಹೇಳಿದ ಮತ್ತೆ – ರಜ ಪುರುಸೊತ್ತು ಮಾಡಿಗೊಂಡೇ ಬೈಲಿಂಗೆ ಬಂದವು.

ಚಿಕ್ಕಮ್ಮ ಹೇಳ್ತ ಸಾಂಸಾರಿಕ, ಸಾಮಾಜಿಕ, ನೈತಿಕ ಶುದ್ದಿಗಳ ನಾವೆಲ್ಲೊರುದೇ ಕೇಳುವೊ°, ಚೆಂದದ ಶುದ್ದಿಗೊಕ್ಕೆ ಒಪ್ಪ ಕೊಡುವೊ°. ಚಿಕ್ಕಮ್ಮಂಗೆ ಶುದ್ದಿ ಹೇಳುಲೆ ಪ್ರೋತ್ಸಾಹ ಕೊಡುವೊ°.
ಅವರ ಶುದ್ದಿಗೊ ಬೈಲಿಲಿ ಅವರ ತೋಟದ ಕರೇಣ ಗೌರಿ ಹೊಳೆಯ ಹಾಂಗೆ ಹರಿಯಲಿ.

ಆ ಶುದ್ದಿಗಳ ಕೇಳ್ತ ಭಾಗ್ಯ ನವಗಿರಳಿ; ಶುದ್ದಿ ಹೇಳಿಂಡೇ ಬೈಲಿನೊಟ್ಟಿಂಗೆ ಅಖಿಲ ಸ್ನೇಹ ಬೆಳೆಯಲಿ.
ಒಳ್ಳೊಳ್ಳೆ ಶುದ್ದಿಗಳ ಅವರಕೈಂದ ಬರೆಶಲೆ ಗುರು-ದೇವರೂ, ಗುರು- ಗುಹನೂ ಅನುಕೂಲ ಮಾಡಿ ಕೊಡ್ಳಿ.
ಮನೆದೇವರಾದ ಷಣ್ಮುಖದೇವರು ಶುದ್ದಿ ಹೇಳುಲೆ ತಕ್ಕ ಸದವಕಾಶ ಕರುಣಿಸಿ ಕೊಡ್ಳಿ
– ಹೇದು ಬೈಲಿನ ಎಲ್ಲೋರ ಪರವಾಗಿ ಕೋರಿಕೆ.
~
ಒಪ್ಪಣ್ಣ

ಸ್ವ ಪರಿಚಯ:

ಎನ್ನ ಹೆಸರು ವಾಣಿ.ಮನೆ ಬೈಲಕರೆಯ ಹತ್ತರೆ ಹರಿಯೊಲ್ಮೆ.ಹುಟ್ಟಿದ್ದು ಕುಂಬಳೆಯ ಹತ್ತರೆಯ ನಾಯ್ಕಾಪು ಗೂಮೆ ಮೂಲೇಲಿ.
ಅಪ್ಪ ಶ್ಯಾಮ ಭಟ್ ಅಬ್ಬೆ ತಿರುಮಲೇಶ್ವರಿ.
ಎಂಗಳ ಬೆಳೆಶುಲೆ ಅಬ್ಬೆ ಅಪ್ಪ ತುಂಬಾ ಕಷ್ಟ ಪಟ್ಟಿದವು. ಅವರ ಕಠಿಣ ಪರಿಶ್ರಮ, ಕೆಲಸಲ್ಲಿ ಇಪ್ಪ ಶ್ರದ್ಧೆ, ಉತ್ಸಾಹ, ಛಲ ಇದರಿಂದಾಗಿ ಅವು ಒಳ್ಳೆಯ ನೆಲೆ ಕಂಡಿದವು.

ಎನಗೆ ಒಂದು ಅಕ್ಕ, ಒಬ್ಬ ಅಣ್ಣ, ಮೂರು ಜನ ತಮ್ಮಂದಿರು.
ಎನ್ನ ಬಾಲ್ಯವ ಜಾಲ್ಸೂರಿಂದ 3ಕಿ.ಮೀ ಮುಂದೆ ಅಡ್ಕಾರಿನ ಹತ್ತರೆ ಇಪ್ಪ ಗಬ್ಲಡ್ಕಲ್ಲಿ ಕಳುದ್ದೆ.
ಎನ್ನ ಪ್ರಾಥಮಿಕ ಶಿಕ್ಷಣ ಅಡ್ಕಾರಿಲಿ,ಹೈಸ್ಕೂಲು ನಮ್ಮ ಗುರುಗಳ ಶಾಲೆ ಸೀತಾ ರಾಘವ ವಿದ್ಯಾ ಸಂಸ್ಥೆ ಪೆರ್ನಾಜೆ ಲಿ ಆತು. ಆನು ಕಲ್ತ ಶಾಲೆಯ,ಗುರುಗಳ ಬಗ್ಗೆ ಎನಗೆ ಈಗ ಆ ಹೊಡೆ ಹೋದಪ್ಪಗ ಎಲ್ಲವೂ ನೆಂಪು ಆವ್ತು.

ಆನು ಸಣ್ಣದಿಪ್ಪಗ ಗಬ್ಲಡ್ಕಲ್ಲಿ ಗೆದ್ದೆ ಬೇಸಾಯ ಇತ್ತಿದ್ದು. ಎಂಗೊ ಮಕ್ಕೊ ಗೆದ್ದೆ ಹುಣಿಲಿ ಹಾರಿಯೊಂಡಿಪ್ಪ ಹಾತೆಗಳ ಹಿಡಿವದು, ಅದಕ್ಕೆ ಬಳ್ಳಿ ಕಟ್ಟಿ ಹಾರ್ಸುದು ಮತ್ತೆ ಮನೆ ಹತ್ತರೆ ಇಪ್ಪ ತೋಡಿಲಿ ಆಟ ಆಡಿಯೊಂಡು ಇತ್ತೆಯ.
ಗೆದ್ದೆಗೆ ಇರುಳು ಬಪ್ಪ ಹಂದಿಗಳ ಕಾವಲೆ ಹಂದಿಮಾಳ ಇತ್ತು. ಅದು ಹಗಲು ಎಂಗಳ ಆಟದ ಜಾಗೆ ಆಗಿತ್ತು.
ಬಾಲ್ಯ ಹೇಳುವಾಗ ಎನಗೆ ಅಜ್ಜನ ಮನೆ ಹೆಚ್ಚು ನೆಂಪಾವ್ತು.ಶಾಲಗೆ ರಜೆ ಸಿಕ್ಕಿದ ಕೂಡ್ಲೇ ಎನ್ನ ಪುಟ್ಟುಮಾವ (ತ್ರಿವಿಕ್ರಮ ಭಟ್~ ಯೇನಂಕೂಡ್ಳು) ಕರಕ್ಕೊಂಡು ಹೋಗಿ ರಜೆ ಇಡೀ ಅಲ್ಲಿ ಕೂರ್ಸಿಯೊಂಡು ಇತ್ತವು.
ಎಂಗೊ ಎನ್ನ ದೊಡ್ದಬ್ಬೆ, ಚಿಕ್ಕಮ್ಮಂದ್ರ ಮಕ್ಕೊ ಎಲ್ಲೋರು ಸೇರಿ ೧೦-೧೫ ಜನ ಅಲ್ಲಿ ಸೇರುಗು. ಎಂಗಳ ಪ್ರೀತಿಲಿ ಸುಲೋಚನ ಅತ್ತೆ ಉಪಚರಿಸುಗು.

೧೯೮೩ ನವೆಂಬರ್ ೨೧ಕ್ಕೆ ಅರ್ತ್ಯಡ್ಕ ವೆಂಕಟ್ರಮಣ ಭಟ್ ಮತ್ತು ಗೌರಮ್ಮ ಇವರ ೨ನೆ ಮಗ ಷಣ್ಮುಖ.
ಇವರ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲು ಮಡುಗುವ ಸೌಭಾಗ್ಯ ಬಂತು.
ಎಂಗೊ ಈಗ ಕೆಯ್ಯೂರು ಗ್ರಾಮದ ಹರಿಯೊಲ್ಮೆ ಹೇಳುವಲ್ಲಿ ವಾಸವಾಗಿದ್ದೆಯ. ಎಂಗೊಗೆ ಭಾಗ್ಯಶ್ರೀ,ಅಖಿಲಾ,ಶ್ರೀಗುಹ ಹೇಳಿ ಮೂರು ಜನ ಮಕ್ಕೊ.
ಮಗಳಕ್ಕೊಗೆ ಮದುವೆ ಆಯಿದು; ದೊಡ್ಡ ಮಗಳಿಂಗೆ ಆಶಯ ಹೇಳಿ ಪುಳ್ಳಿ ಕೂಸು ಇದ್ದು – ಹಾಂಗೆ ಅಜ್ಜ ಅಜ್ಜಿ ಕೂಡ ಆದ ಸಂತೃಪ್ತ ಜೀವನ ಎಂಗಳದ್ದು.
ಎನಗೆ ಹೂಗಿನ ಕೃಷಿ ಹೇಳಿರೆ ತುಂಬಾ ಇಷ್ಟ.ನೆಟ್ಟಿಕಾಯಿ ಬೆಳೆಶುದು,ಹೊಲಿಗೆ,ಅಲಂಕಾರ ವಸ್ತುಗಳ ತಯಾರು ಮಾಡುದು ಎನ್ನ ಹವ್ಯಾಸ.ಶಾಸ್ತ್ರೀಯ ಸಂಗೀತ ಕೇಳುದು,ಸಾಂಸ್ಕೃತಿಕ ನಾಟಕ ಎಂಗಳ ಮನೆ ಹತ್ತರೆ ಇದ್ದರೆ ಹೋಗಿ ನೋಡುವ ಹವ್ಯಾಸ.

ಆನು ಮೊದಲು ಕವನ ಬರದ್ದದು ೨೫-೦೯-೨೦೧೦ ಹೊತ್ತೋಪಗ.ಕವನ ಬರೆಯೆಕ್ಕಾರೆ ನಮ್ಮ ಜೀವನಲ್ಲಿ ಅತೀ ಹತ್ತರೆ ಮನಸಿಂಗೆ ನಾಟುವಂತಹ ಘಟನೆಗೋ ಸ್ಫೂರ್ತಿ ಕೊಡುತ್ತು ಹೇಳಿ ಎನ್ನ ಅಭಿಪ್ರಾಯ.
ಇದು ನಮ್ಮ ಮನಸ್ಸಿನ ಬೆಳವಣಿಗೆಗೆ ಪೂರಕ ಶಕ್ತಿಯಾವ್ತು ಅಲ್ಲದೋ?ಹೆರಿಯೋರ ಹಿತವಚನ,ಆಶೀರ್ವಾದ,ಮನೆಯ ವಾತಾವರಣ ಸ್ಫೂರ್ತಿ ಕೊಟ್ಟಪ್ಪಗ ಪ್ರತಿಯೊಬ್ಬ ವ್ಯಕ್ತಿಯ ಒಳ ಇಪ್ಪ ಪ್ರತಿಭೆ ಹೇರ ಬತ್ತು.
ಇದರಿಂದ ಮನಸ್ಸಿಂಗೆ ಸಂತೋಷದ ಭಾವನೆ ಬತ್ತು.ಹಳ್ಳಿಲಿಯೇ ಹುಟ್ಟಿ,ಬೆಳದ ಎನಗೆ ಇಲ್ಲಿಯ ಜೀವನ ಮನಸ್ಸಿಂಗೆ ಮುದ ಕೊಟ್ಟಿದು.
ಹಾಂಗೆ ಒಪ್ಪಣ್ಣನ ಬೈಲಿಲಿ ಬಂದು ಎನಗೆ ಶುದ್ದಿ ,ಕವನ ಹೇಳುಲೆ ಅವಕಾಶ ಮಾಡ್ಲೆ ಎಡಿಗೋ ಹೇಳಿ ಮಾಷ್ಟ್ರುಮಾವನ ಹತ್ತರೆ ಕೇಳಿದೆ.
ಇನ್ನು ಮುಂದೆ ಎನಗೆ ಗೊಂತಾದ ಹಾಂಗೆ ಶುದ್ಧಿಯ ಹೇಳ್ತೆ.ಅದಕ್ಕೆ ನಿಂಗಳ ಎಲ್ಲೋರ ಪ್ರೋತ್ಸಾಹ,ಸಹಕಾರ,ಹೆರಿಯೋರ ಆಶೀರ್ವಾದ ಕೇಳುತ್ತೆ.

ಹರೇರಾಮ

~

ಹರಿಯೊಲ್ಮೆ ವಾಣಿ ಚಿಕ್ಕಮ್ಮ
08251-205511

 

 

ಸೂ:

 • ಚಿಕ್ಕಮ್ಮ  ಕನ್ನಡಲ್ಲಿ ಈಗಾಗಲೇ ಹಲವು ಕವನಂಗಳ ಬರದ್ದವು.
  ಹರಿ
  (ಯೊಲ್ಮೆ ವಾ)ಣಿ ಕನ್ನಡಲ್ಲಿ ಕವನಂಗಳ ಬರವಗ ಹರಿಣಿ ಹೇಳುವ ಕಾವ್ಯನಾಮಲ್ಲಿ ಬರೆತ್ತವು.
 • ಶುದ್ದಿಗಳ ಸೀತ ಬೈಲಿಂಗೆ ಹೇಳುಲೆ ಈಗ ಅವಕಾಶ ಸಾಲದ್ದಕ್ಕೆ ಕಾಗತಲ್ಲಿ ಬರದು ಬೈಲಕರೆ ಗಣೇಶಮಾವನ ಮನಗೆ ಎತ್ತುಸುತ್ತವಾಡ.
  ಅಪೂರ್ವ ಶುದ್ದಿಗೊ ಬೈಲಿಂಗೆ ಇಳಿಶಲೆ ಕೈಸಕಾಯ ಮಾಡ್ತ ಬೈಲಕರೆ ಗಣೇಶಮಾವಂಗೂ ಧನ್ಯವಾದಂಗೊ.

 

ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಮಾನೀರ್ ಮಾಣಿ
  ಮಾನೀರ್ ಮಾಣಿ

  ವಾಣಿ ಚಿಕ್ಕಮ್ಮ೦ಗೆ ಬೈಲಿ೦ಗೆ ಸ್ವಾಗತ. ಹೊಸ ಹೊಸ ಶುದ್ದಿಗೆ ಕಾಯ್ತಾ ಇದ್ದೋ…

  ವಾಣಿ ಚಿಕ್ಕಮ್ಮ

  ವಾಣಿ ಚಿಕ್ಕಮ್ಮ Reply:

  ಒಪ್ಪಕ್ಕೆ ಧನ್ಯವಾದಂಗೋ

  VN:F [1.9.22_1171]
  Rating: +1 (from 1 vote)
 2. Shivaram

  enna akkange bailinge swagatha.parichaya odi kushi athu.ottinge kannili neeru banthu.enna balyada nenapu kanna eduringe banthu.’harini’ kavyanama layka iddu.anu kavana odale kaytha idde.hechhechu kavana,kathe kalusu heli keligollutha idde.ella olledagali heli shubha haraisutha idde.

  ಎಮ್.ಕೆ. Reply:

  ಹೆಚ್.ಎಸ್ ನ ಮೋರೆ,ಬರವಣಿಗೆ ನೋಡಿ ಕುಶಿ ಆತು. ಎವತ್ತಾರದರೂ ಕಾ೦ಬೋ.ಸದ್ಯ ಬನ್ನಿ ಹೇಳಿತ್ತು.

  VA:F [1.9.22_1171]
  Rating: 0 (from 0 votes)
  ವಾಣಿ ಚಿಕ್ಕಮ್ಮ

  ವಾಣಿ ಚಿಕ್ಕಮ್ಮ Reply:

  ಪ್ರೀತಿಯ ಶುಭ ಹಾರೈಕೆಗೆ ಧನ್ಯವಾದ

  VN:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ‘ಹರಿಯೊಲ್ಮೆ’ ಬೈಲಿಲಿ ಎಲ್ಲೋರಿ೦ಗೂ ಗೊ೦ತಿಪ್ಪ ಹೆಸರು.ಈಗ ಈ ಮನೆಯವರ,ಚಿಕ್ಕಮ್ಮನ ಪರಿಚಯ ಓದಿ ಕೊಶಿ ಆತು.
  ಬೈಲಿನ ಬಳಗಕ್ಕೆ ಸ್ವಾಗತ,ಶುಭಾಶಯ೦ಗೊ.

  ವಾಣಿ ಚಿಕ್ಕಮ್ಮ

  ವಾಣಿ ಚಿಕ್ಕಮ್ಮ Reply:

  ಶುಭಾಶಯಕ್ಕೆ ಧನ್ಯವಾದ

  VN:F [1.9.22_1171]
  Rating: 0 (from 0 votes)
 4. ಭಾಗ್ಯಶ್ರೀ

  ಅಬ್ಬೆಗೆ ಸ್ವಾಗತ. ಎನ್ನ ಅಬ್ಬೆ ಕವನ,ಕಥೆ ಬರವದು ಎಲ್ಲರಿಂಗೆ ಗೊನ್ತಾದ್ದು ಈಗ ರಜ್ಜ ದಿನದ ಹಿಂದೆ. ಇದರ ಸುರು ಮಾಡಿದ ಮತ್ತೆ ಅಬ್ಬೆ ತುಂಬ ಖುಶಿಲಿ ಇರ್ತವು. ಜೀವನಲ್ಲಿ ಯಾವುದನ್ನು ಕಲಿವಲೆ ಎಡಿಗು ಹೇಳ್ತವು. ಎಂಗೊಗೆ ಎಲ್ಲ ಭಾರೀ ಸಂತೋಷ ಆವುತ್ತಾ ಇದ್ದು. ಆಬ್ಬೆ ನಿಂಗೊಗೆ ಒಳ್ಳೆದಾಗಲಿ. ಆಬ್ಬೆಯ ಬೆಳಕಿಂಗೆ ತಪ್ಪಲೆ ಸಹಕಾರ ಕೊಟ್ಟ ಅಪ್ಪ,ದೊಡ್ಡಪ್ಪ,ಮಾಷ್ತ್ರು ಮಾವ,ಒಪ್ಪಣ್ಣ,ಗಣೀಶ ಮಾವ ಎಲ್ಲರಿಂಗು ಎನ್ನ ಧನ್ಯವಾದಂಗೊ.

  VA:F [1.9.22_1171]
  Rating: 0 (from 0 votes)
 5. ವಾಣಿ ಚಿಕ್ಕಮ್ಮ,
  ಆನು ನಿಶ, ಭಾಗ್ಯನ ಸ್ನೇಹಿತೆ. ಎನಗೆ ನಿಂಗೊ ಬರವದು ಗೊಂತಾಗಿ ಬಹಳ ಖೊಶಿ ಆತು. ಭಾಗ್ಯ ಹೆಳಿದ ಮೆಲೆ ಓದಿದೆ.. ಬರೆತ್ತಾ ಇರಿ. ಶುಭ ಹಾರೈಕೆಗೊ.
  ಹೀಂಗಿಪ್ಪ ೧ ವೇದಿಕೆ ಕಲ್ಪಿಸಿದ್ದಕ್ಕೆ ಒಪ್ಪಣ್ಣಂಗೆ ಧನ್ಯವಾದಂಗೊ.

  VA:F [1.9.22_1171]
  Rating: 0 (from 0 votes)

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವಜಯಶ್ರೀ ನೀರಮೂಲೆಕಜೆವಸಂತ°ಚುಬ್ಬಣ್ಣವಿಜಯತ್ತೆವಾಣಿ ಚಿಕ್ಕಮ್ಮಬಂಡಾಡಿ ಅಜ್ಜಿವೇಣಿಯಕ್ಕ°ಡಾಮಹೇಶಣ್ಣಅಕ್ಷರ°ತೆಕ್ಕುಂಜ ಕುಮಾರ ಮಾವ°ಶುದ್ದಿಕ್ಕಾರ°ಸುಭಗಅಕ್ಷರದಣ್ಣಶಾಂತತ್ತೆಗಣೇಶ ಮಾವ°ಪುಟ್ಟಬಾವ°ಡೈಮಂಡು ಭಾವನೆಗೆಗಾರ°ವಿದ್ವಾನಣ್ಣಎರುಂಬು ಅಪ್ಪಚ್ಚಿಅಡ್ಕತ್ತಿಮಾರುಮಾವ°ವೆಂಕಟ್ ಕೋಟೂರುಬೊಳುಂಬು ಮಾವ°ಕಾವಿನಮೂಲೆ ಮಾಣಿಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ