ವಸ೦ತವೇದಪಾಠಶಾಲೆ – ಪೆರಡಾಲ

ಅಡೂರು, ಮಧೂರು, ಕಾವು, ಕಣ್ಯಾರ ಹೇಳಿ ಕುಂಬ್ಳೆ  ಸೀಮೆಯ ನಾಲ್ಕು ವಿಶೇಷ ಕ್ಷೇತ್ರ೦ಗೊ.  ಇದರ ಮತ್ತಾಣ ಸಾಲಿಲಿ ಬಪ್ಪ ಗ್ರಾಮದೇವಸ್ಥಾನ೦ಗಳ ಪೈಕಿ ಇಪ್ಪ ಪ್ರಸಿದ್ಧ ಪುಣ್ಯಕ್ಷೇತ್ರವೇ ‘ಪೆರಡಾಲ’. ಸುಮಾರು ೯೦೦ ವರುಷ೦ದಲೂ ಹೆಚ್ಚಿನ ಇತಿಹಾಸ ಇಪ್ಪ ಈ ಕ್ಷೇತ್ರಲ್ಲಿ ಪ್ರತಿಷ್ಟಾಪನೆ ಆಗಿ ಊರ ಪರವೂರ ಭಕ್ತಾದಿಗೊ ಪೂಜಿಸಿಗೊ೦ಡು ಬ೦ದ ದೇವರು ಶ್ರೀ ಉದನೇಶ್ವರ°. ಕಾಶೀ ಕ್ಷೇತಕ್ಕೆ ಹೋದ ಒಬ್ಬ° ಮಹಾತಪಸ್ವಿ ಗ೦ಗೆಲಿ ಇಳುದು ಪ್ರಾರ್ಥಿಸಿ ಮುಳುಗಿಯಪ್ಪಗ ಸಿಕ್ಕಿದ ಶಿವನ ಲಿ೦ಗವ ತ೦ದು ವರದಾ ಹೊಳೆಯ ಕರೆಲಿಪ್ಪ ಈ ಕ್ಷೇತ್ರಲ್ಲಿ ಪ್ರತಿಷ್ಟಾಪನೆ ಮಾಡಿದ° ಹೇಳಿಯೂ, ಮು೦ದೆ ಊರಿನ ಭಕ್ತಾದಿಗೊ ಸೇರಿ ಅಲ್ಲಿ ಒ೦ದು ದೇವಸ್ಥಾನ ಕಟ್ಟಿದವು ಹೇಳಿಯೂ ಇತಿಹಾಸಜ್ಞರ ಅಭಿಪ್ರಾಯ. ಅರ್ಧನಾರೀಶ್ವರನ ಲಕ್ಷಣ೦ಗೊ ಇದ್ದ ಕಾರಣ ಉಮಾ ಸಹಿತನಾದ ಈಶ್ವರ ಅಥವಾ ಉದನೇಶ್ವರ ಹೇಳುವ ಹೆಸರು ಬ೦ತು ಹೇಳಿ ಹೆರಿಯೋರು ಹೇಳ್ತವು.

ಮದಾಲು, ಸುಮಾರು ನೂರು ವರುಷದ ಹಿ೦ದೆ ಪೆರಡಾಲ ಗ್ರಾಮಲ್ಲಿ ಸರಿಯಾದ ಶಾಲೆಗೊ ಇಲ್ಲದ್ದ ಕಾರಣ ವಿದ್ಯಾಭ್ಯಾಸಲ್ಲಿ ಈ ಊರು ಹಿ೦ದೆ ಒಳುದಿತ್ತು. ಆಧುನಿಕ ಶಿಕ್ಷಣಕ್ಕೆ ದೂರದೂರದ ಊರುಗೊಕ್ಕೆ ಮಕ್ಕಳ ಕಳುಸೆಕ್ಕಾದ ಅನಿವಾರ್ಯತೆ ಇತ್ತು. ಸ೦ಸ್ಕೃತಿಯ ಆಧಾರಲ್ಲಿ ಗಟ್ಟಿ ನಿಲ್ಲೆಕ್ಕಾರೆ ಸ೦ಸ್ಕೃತ ವಿದ್ಯಾಭ್ಯಾಸ ಅಗತ್ಯ ಹೇಳಿ ೧೯೧೧ ರಲ್ಲಿ ದಿ. ಖ೦ಡಿಗೆ ಈಶ್ವರ ಭಟ್ಟರು “ಹವ್ಯಕ ದ್ರಾವಿಡ ಬ್ರಾಹ್ಮಣರ ವಿದ್ಯಾವರ್ಧಕ ಸ೦ಘ” ಹೇಳ್ತ ಹೆಸರಿಲಿ ಶ್ರೀ ಉದನೇಶ್ವರನ ಸನ್ನಿಧಿಲಿ “ಮಹಾಜನ ಸ೦ಸ್ಕೃತ ಶಾಲೆ” ಹೇಳ್ತ ಸ೦ಸ್ಥೆಯ ಶುರುಮಾಡಿದವು. ಮು೦ದೆ ೧೯೧೫ ರಲ್ಲಿ ಈ ಶಾಲೆ ನೀರ್ಚಾಲಿ೦ಗೆ ಸ್ಥಳಾ೦ತರ ಆತು. ನಮ್ಮ ದೊಡ್ಡಭಾವ° ಈಗ ಇದೇ ಶಾಲೆಲಿ ಅಧ್ಯಾಪಕ° ಆಗಿದ್ದವು ಹೇಳ್ತದು ಬೈಲಿ೦ಗೆ ಹೆಮ್ಮೆಯ ವಿಷಯ. ಬೈಲಿನ ಸುಮಾರು ಜೆನ ನೀರ್ಚಾಲು ಶಾಲೆಲಿ ಕಲ್ತು ಗಟ್ಟಿ ಪ೦ಚಾ೦ಗದ ಮೇಲೆ ಉಜ್ವಲ ಭವಿಷ್ಯವ ಕಟ್ಟಿ ನೆಲೆನಿ೦ದಿದವು.

ಇತ್ಲಾಗಿ ಪೆರಡಾಲಲ್ಲಿ,  ಶ್ರೀ ಉದನೇಶ್ವರನ ಸನ್ನಿಧಿಲಿ ವಸ೦ತವೇದಪಾಠಶಾಲೆಯ ಮುಖಾ೦ತರ ಉಪನಯನ ಆದ ವಟುಗೊಕ್ಕೆ ವೇದಾಧ್ಯಯನ ಮು೦ದುವರುಕ್ಕೊಂಡು ಬತ್ತಾ ಇದ್ದು.  ಕಳುದ ೫೦ ವರುಷದ ಅವಧಿಲಿ ಕಾಸರಗೋಡು – ಹೊಸದುರ್ಗ ಹೈವ ಬ್ರಾಹ್ಮಣ ಮಹಾಸಭೆಯ ಪೋಷಕತ್ವದ ಸಕಾಯ೦ದ ಸಮಾಜಕ್ಕೆ ವೇದಶಿಕ್ಷಣದ ಒರತೆಯಾಗಿ ಹನಿಕಡಿಯದ್ದೆ ನಿ೦ದಿದು. ಪ್ರತಿವರುಷ ಮಕ್ಕಳ ದೊಡ್ಡರಜೆಯ ಅವಧಿಲಿ, ಎಪ್ರಿಲ್-ಮೇ ತಿ೦ಗಳಿಲಿ ಇಲ್ಲಿ ವೇದಪಾಠ ನಿರ೦ತರವಾಗಿ ನೆಡೆತ್ತಾ ಇದ್ದು.
ಪ್ರಕೃತ  ವೇದಮೂರ್ತಿ ಶ್ರೀ ತುಪ್ಪೆಕ್ಕಲ್ಲು  ಸತ್ಯೇಶ್ವರ ಭಟ್, ವೇದಮೂರ್ತಿ ಶ್ರೀ ತುಪ್ಪೆಕಲ್ಲು ಶಿವರಾಮ ಭಟ್, ವೇದಮೂರ್ತಿ ಶ್ರೀ ಪಟ್ಟಾಜೆ ವೆ೦ಕಟೇಶ್ವರ ಭಟ್,  ಶ್ರೀ ಸರವು ಸದಾಶಿವ ಭಟ್   ಹೀ೦ಗೆ ಸುಮಾರು ಜೆನ ಗುರುಗೊ ತಮ್ಮ ವೈಯಕ್ತಿಕ ಕಾರ್ಯ೦ಗಳ, ಕಾರ್ಯಕ್ರಮ೦ಗಳ ಕರೇಲಿ ಮಡಗಿ ಮಕ್ಕೊಗೆ ವೇದ ಶಿಕ್ಷಣವ ಧಾರೆ ಎರೆತ್ತಾ ಬತ್ತಾ ಇದ್ದವು.

ಈ ವರುಷ ನೆಡೆತ್ತಾ ಇಪ್ಪ ಶಿಬಿರದ ಸಮಾರೋಪ ಮೇ ೨೬ ರ ಭಾನುವಾರ ಏರ್ಪಾಡಾಯಿದು.

ಒಟ್ಟು ನಾಲ್ಕು ವರುಷದ ಅವಧಿಲಿ ಸ೦ಧ್ಯಾವ೦ದನೆ, ಸೂಕ್ತ೦ಗೊ, ರುದ್ರ, ನಿತ್ಯಪೂಜೆ ಅನುಷ್ಟಾನ೦ಗಳ ಸರಿಯಾಗಿ ಹೇಳಿಕೊಟ್ಟು ನಮ್ಮ ಸ೦ಸ್ಕಾರ ಮಕ್ಕಳಲ್ಲಿ ಎಳೆಪ್ರಾಯಲ್ಲೇ ಗಟ್ಟಿಯಪ್ಪಲೆ ಈ ವೇದಪಾಠಶಾಲೆ ಮಾರ್ಗದರ್ಶನ ಮಾಡ್ತಾ ಬಯಿ೦ದು. ಪ್ರತಿ ವರುಷ ೧೦೦ ಕ್ಕೂ ಹೆಚ್ಚು ಮಕ್ಕೊ ಇಲ್ಲಿ ವೇದಾಧ್ಯಯನ ಮಾಡ್ತಾ ಇದ್ದವು.
ಇಲ್ಲಿ ಅಧ್ಯಯನ ಮಾಡುವ ಮಕ್ಕೊಗೆ ಮಧ್ಯಾಹ್ನದ ಊಟದ ವೆವಸ್ತೆಯ ಶಾಲೆಯೇ ನೋಡಿಗೊಳ್ಳುತ್ತು. ಎರಡು ತಿ೦ಗಳ ಈ ಶಿಬಿರಕ್ಕೆ ಸುಮಾರು ಒ೦ದು ಲಕ್ಷ ರೂಪಾಯಿ ಖರ್ಚು ಇದ್ದು. ಈಗ ವಿದ್ಯಾರ್ಥಿಗಳ ಕೈ೦ದ ರ‍ೂ.೨೫೦/- ಪ್ರವೇಶಧನ ನಿಘ೦ಟು ಮಾಡಿದ್ದವು. ಇಲ್ಲಿ ಅಧ್ಯಯನ ಮಾಡ್ತಾ ಇಪ್ಪ ಮಕ್ಕಳ ಮನೆಯವ್ವು ಉದಾರ ಧನಸಹಾಯ ಮಾಡಿಗೊ೦ಡಿದ್ದರೂ ಇ೦ತಹಾ ಒ೦ದು ಮಾದರಿ ಪಾಠಶಾಲೆ ಶಾಶ್ವತವಾಗಿ ಮು೦ದುವರಿಯೆಕ್ಕಾರೆ ಒ೦ದು “ಶಾಶ್ವತನಿಧಿ” ಇದ್ದರೆ ಅನುಕೂಲ ಅಕ್ಕು.

ಸಮಾಜದ ಬ೦ಧುಗೊ ಸಹಾಯದ ಕೈಜೋಡುಸಿರೆ ಈ ಶಾಲೆಗೊ ಗಟ್ಟಿಯಾಗಿ ನಮ್ಮ ಮು೦ದಾಣ ತಲೆಮಾರುಗೊ ವೇದಾಧ್ಯಯನ ಮಾಡುಲೆ ಸಹಕಾರಿ ಅಕ್ಕು. ಇತ್ತೀಚಿನ ವರುಷ೦ಗಳಲ್ಲಿ ಬೆರಳೆಣಿಕೆಯಷ್ಟು ವೇದಪಾಠಶಾಲೆಗೊ ಮಾ೦ತ್ರ ನೆಡೆತ್ತಾ ಇಪ್ಪದು ನವಗೆ ಗೊ೦ತಿಪ್ಪ ಸ೦ಗತಿ. ಮು೦ದಾಣ ಪೀಳಿಗೆಗೆ ವೇದಾಧ್ಯಯನದ ಪ್ರಾಥಮಿಕ ಪಾಠ ಸಿಕ್ಕೆಕ್ಕಾರೆ ಈ ಶಾಲೆಗಳ ಭದ್ರತೆ, ನಿ೦ದುಹೋದ ಶಾಲೆಗಳ ಪುನರುತ್ಥಾನಕ್ಕೆ ನಮ್ಮ ಪ್ರಯತ್ನದ ಅಗತ್ಯ ಖ೦ಡಿತಾ ಇದ್ದು.DSC00182DSC00174DSC00166

ಮುಳಿಯ ಭಾವ

   

You may also like...

4 Responses

 1. ಚೆನ್ನೈ ಭಾವ° says:

  ಪೆರಡಾಲ, ಪೆರಡಾಲ ವೇದಪಾಠ ಶುದ್ಧಿಗೆ ಧನ್ಯವಾದಂಗೊ ಭಾವಯ್ಯ. ಪೆರಡಾಲಲ್ಲಿ ಕಲ್ತವರಲ್ಲಿ ಆನೂ ಒಬ್ಬ ಹೇಳ್ವ ಹೆಮ್ಮೆ ಇದ್ದು. ಸಾವಿರಾರು ಸಂಖ್ಯೆಲಿ ವಟುಗೊ ಇಲ್ಲಿ ಪ್ರಾಥಮಿಕ ವೇದಾಧ್ಯಯನ ಮಾಡಿ ಧನ್ಯರಾಯ್ದವು ಹೇಳ್ತರ್ಲಿ ಎರಡು ಮಾತಿಲ್ಲೆ. ಅಲ್ಲಿಯಾಣ ಪರಿಸರವೂ, ವಾತಾವರಣವೂ ಇದಕ್ಕೆ ಒಳ್ಳೆತ ಪೂರಕವಾಗಿದ್ದು. ಈಗ ನಡಕ್ಕೊಂಡು ಬಪ್ಪ ವೇದಪಾಠ ಶಿಬಿರ ಬಹುಕಾಲಂದ ಅವಿರತವಾಗಿ ನಡಕ್ಕೊಂಡು ಬತ್ತಾ ಇದ್ದು ಹೇಳ್ವದು ನಿಜಕ್ಕೂ ಶ್ಲಾಘನೀಯ ಮತ್ತು ಹೆಮ್ಮೆಯ ವಿಷಯ. ಇದರ ಅಭಿಮಾನಂದ ನಡೆಶಿಗೊಂಡು ಬತ್ತವಕ್ಕೆ, ಸಂಯಮಂದ ಪಾಠಮಾಡಿಗೊಂಡು ಬಪ್ಪ ಅಧ್ಯಾಪನಾಗುರುಗೊಕ್ಕೆ ಖಂಡಿತವಾಗಿಯೂ ನಮೋ ನಮಃ.

  ಪ್ರಕೃತ ಪರಿಸ್ಥಿತಿಲಿ ಇದರ ಕಾಪಾಡುವ, ಉಳುಶುವ, ಬೆಳೆಶುವ ಜವಬ್ದಾರಿ ನಮ್ಮೆಲ್ಲರ ಮೇಲೆ ಇದ್ದು. ಅದರ ನಾವು ಕರ್ತವ್ಯ ಹೇದು ತಿಳ್ಕೊಂಡು ಸಹಕರುಸುವೊ. ನಮ್ಮಿಂದ ಯಥಾ ಸಾಧ್ಯ ಸಹಾಯವ ಜೋಡುಸುವೊ ಹೇಳಿ ಸಹಮತ. ಬೈಲ ಹತ್ತು ಸಮಸ್ತರು ಸೇರಿರೆ ಇದೊಂದು ದೊಡ್ಡ ಹೊರೆ ಆಗ.

  ಶಾಶ್ವತ ನಿಧಿಯ ಸಲಹೆ ಅತ್ಯುತ್ತಮ ಅಭಿಪ್ರಾಯ. ಆ ಪ್ರಯುಕ್ತ ಬೈಲ ಪ್ರತಿಷ್ಠಾನಕ್ಕೆ ಎಲ್ಲೋರು ಯಥಾನುಶಕ್ತಿ ಸೇರ್ಸಿ ಅಲ್ಲಿಂದ ಆ ಶಾಶ್ವತ ನಿಧಿಗೆ ವರ್ಗಾವಣೆ ಆಗಲಿ ಹೇಳ್ವದು ಎನ್ನ ವೈಯಕ್ತಿಕ ಅಭಿಪ್ರಾಯ. ಈ ಬಾಬ್ತು ಸದ್ರಿ ರೂ೧೦೦೧/- ಪ್ರತಿಷ್ಠಾನ ಖಾತೆಗೆ ಜಮೆ ಮಾಡಿದ್ದೆ. ಹರೇ ರಾಮ.

 2. ಹರೇ ರಾಮ,
  ಆನುದೇ ಅಲ್ಯಾಣ ವಿದ್ಯಾರ್ಥಿ. ಪೆರಡಾಲದ ಮಂತ್ರಪಾಠ, ಹೊಳೆ, ನಾಗ ಸಂಪಿಗೆ ಮರದ ಬುಡಲ್ಲಿ ಹಾರಿದ್ದು ನವಗೆ ಮರದು ಹೋಗ. ಪ್ರೀತಿಲಿ ವೇದ ಶಿಕ್ಷಣ ಕೊಡ್ತ ಗುರುಗೊ ಅಲ್ಲಿದ್ದವು. ಅವಕ್ಕೆ ನಾವು ಸಹಕಾರಿಗೊ ಆಯೆಕ್ಕು.

 3. ಶರ್ಮಪ್ಪಚ್ಚಿ says:

  1964-65 ರಲ್ಲಿ ಅಲ್ಲಿ ಆನೂದೆ ವಸಂತ ವೇದ ಪಾಠ ಶಾಲೆಯ ವಿದ್ಯಾರ್ಥಿ ಆಗಿತ್ತಿದ್ದೆ. ಮನೆಂದ ಹೋಗಿ ಬಪ್ಪ ಸೌಕರ್ಯ ಅಂಬಗ ಸರಿಗಟ್ಟು ಇಲ್ಲದ್ದ ಕಾರಣ, ಆನೂ ಎನ್ನ ಭಾವನೂ ಅಲ್ಲಿಯೇ ಉಳ್ಕೊಂಡು ಇತ್ತಿದ್ದೆಯೊ. ಮರೆಯದ್ದ ದಿನಂಗೊ.
  ಮುಂದಿನ ದಿನಂಗಳಲ್ಲಿ ಇನೂ ಹೆಚ್ಚೆಚ್ಹು ಮಾಣಿಯಂಗೊ ಅಲ್ಲಿ ಕಲ್ತು ಸಂಸ್ಕಾರವಂತರಾಗಲಿ.
  ಚೆನ್ನೈ ಭಾವ ಹೇಳಿದ ಹಾಂಗೆ ನಮ್ಮ ಬೈಲಿಂದ ಒಂದು ನಿಧಿ ಸಂಗ್ರಹ ಮಾಡಿ ಕೊಟ್ಟರೆ ಆ ಪುಣ್ಯ ಕಾರ್ಯಲ್ಲಿ ನಾವೂ ಭಾಗಿಗೊ ಆವ್ತ ಅವಕಾಶ ಸಿಕ್ಕಿದ ಹಾಂಗಾವ್ತು.

 4. ರಘುಮುಳಿಯ says:

  ಓದಿದ,ಒಪ್ಪ ಕೊಟ್ಟ ಎಲ್ಲೋರಿ೦ಗೂ ಧನ್ಯವಾದ.ತಾನು ಕಲ್ತ ಶಾಲೆಯ ಮೇಗೆ ಪ್ರೀತಿಲಿ ಧನಸಹಾಯ ಮಾಡಿದ ಚೆನ್ನೈಭಾವ೦ಗೆ ಧನ್ಯವಾದ.ಒಟ್ಟು ಜಮೆ ಆದ ಪೈಸೆಯ ಹಸ್ತಾ೦ತರ ಮಾಡುವ°.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *