ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಶಾಂತತ್ತೆಯೇನಂಕೂಡ್ಳು ಅಣ್ಣಡಾಮಹೇಶಣ್ಣಪುತ್ತೂರಿನ ಪುಟ್ಟಕ್ಕದೊಡ್ಡಭಾವಡೈಮಂಡು ಭಾವಒಪ್ಪಕ್ಕಬಲ್ನಾಡುಮಾಣಿಮಂಗ್ಳೂರ ಮಾಣಿಪೆಂಗಣ್ಣ°ಗಣೇಶ ಮಾವ°ತೆಕ್ಕುಂಜ ಕುಮಾರ ಮಾವ°ಕೆದೂರು ಡಾಕ್ಟ್ರುಬಾವ°ಚೆನ್ನಬೆಟ್ಟಣ್ಣವಿದ್ವಾನಣ್ಣಅನುಶ್ರೀ ಬಂಡಾಡಿದೊಡ್ಡಮಾವ°ಚೆನ್ನೈ ಭಾವ°ಶ್ಯಾಮಣ್ಣಬಟ್ಟಮಾವ°ಡಾಗುಟ್ರಕ್ಕ°ಪವನಜಮಾವಕಾವಿನಮೂಲೆ ಮಾಣಿಪೆರ್ಲದಣ್ಣಪುಟ್ಟಬಾವ°ಸಂಪಾದಕ° (editor)ಅಜ್ಜಕಾನ ಭಾವಚುಬ್ಬಣ್ಣಸರ್ಪಮಲೆ ಮಾವ°ಶೇಡಿಗುಮ್ಮೆ ಪುಳ್ಳಿಚೂರಿಬೈಲು ದೀಪಕ್ಕಹಳೆಮನೆ ಅಣ್ಣಕಳಾಯಿ ಗೀತತ್ತೆಮಾಷ್ಟ್ರುಮಾವ°ವೇಣೂರಣ್ಣನೆಗೆಗಾರ°ಗೋಪಾಲಣ್ಣಶ್ರೀಅಕ್ಕ°ಬೊಳುಂಬು ಮಾವ°ಅನು ಉಡುಪುಮೂಲೆವೇಣಿಯಕ್ಕ°ಅಡ್ಕತ್ತಿಮಾರುಮಾವ°ಶುದ್ದಿಕ್ಕಾರ°ಬಂಡಾಡಿ ಅಜ್ಜಿಅಕ್ಷರದಣ್ಣದೇವಸ್ಯ ಮಾಣಿಮುಳಿಯ ಭಾವದೀಪಿಕಾಸುಭಗಪುತ್ತೂರುಬಾವವಸಂತರಾಜ್ ಹಳೆಮನೆಜಯಶ್ರೀ ನೀರಮೂಲೆಕೇಜಿಮಾವ°ನೀರ್ಕಜೆ ಮಹೇಶಎರುಂಬು ಅಪ್ಪಚ್ಚಿಅಕ್ಷರ°ಶರ್ಮಪ್ಪಚ್ಚಿಸುವರ್ಣಿನೀ ಕೊಣಲೆ


ವೇಣಿಅಕ್ಕನ ರುಚಿರುಚಿ ಅಡಿಗೆ ಬೈಲಿಲಿ ಹಶು ತಣಿಶಲಿ

November 28, 2011 ರ 9:30 amಗೆ ನಮ್ಮ ಗುರಿಕ್ಕಾರ° ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಬೈಲಿಲಿ ಹೀಂಗೇ ತಿರುಗುವಗ, ಒಂದು ರುಚಿರುಚೀ ಅಡಿಗೆಯ ಪರಿಮ್ಮಳ ಬಪ್ಪಲೆ ಸುರು ಆತು.
ಚೆಲ, ಶ್ರೀಅಕ್ಕ ಇಂದು ಬದಿಯಡ್ಕಕ್ಕೆ ಹೋಯಿದವು, ದೊಡ್ಡಮಾಣಿ ದೊಡ್ಡಕ್ಕ ಬೆಂಗುಳೂರಿಂಗೆ ಹೋಯಿದವು, ಚೂರಿಬೈಲು ದೀಪಕ್ಕ ಮೂಡಬಿದ್ರೆ ವಿರಾಸತ್ತು ಮುಗುಶಲೆ ಹೋಯಿದು.. ಅಂಬಗ ಇದಾರು?!
ಇಷ್ಟೊಳ್ಳೆ ರುಚಿರುಚಿ ಅಡಿಗೆ ಮಾಡ್ತ ಇವಾರು…? – ಬದಿಯಡ್ಕಂದ ಬಂದ ಶ್ರೀಅಕ್ಕನ ಹತ್ತರೆ ಕೇಳಿಯೇ ಬಿಟ್ಟೆ!

ರುಚಿರುಚಿ ಅಡಿಗೆಯ ಅಕ್ಕ ಆರು – ಹೇದು.
ಅಂಬಗ ಗೊಂತಾದು, ಅವು ನಮ್ಮ ಕಾನಾವಜ್ಜಿಯ ಪುಳ್ಳಿ ಅಡ! ಅಡಿಗೆಯ ರುಚಿ ನೋಡುವಗಳೇ ಅಂದಾಜಿ ಆಯಿದು ನವಗೆ! ;-)
ವೃತ್ತಿಲಿ ಕಂಪ್ಲೀಟ್ರು ಇಂಜಿನಿಯರು, ಆದ್ದರೆ ಪ್ರವೃತ್ತಿಲಿ ಶುದ್ಧ ಗೃಹಿಣಿ. ಅದರ್ಲಿಯೂ – ಅಡಿಗೆಲಿ ಒಂದು ಕೈ ಮೇಗೆಯೇ!
ಸುಮಾರು ನಾಲ್ಕೊರಿಶಂದ ನಿರಂತರವಾಗಿ ಬೈಲಿಲಿ ಅಡಿಗೆಯ ಬಗ್ಗೆ, ಅದರ್ಲಿಯೂ ಹವ್ಯಕ ಅಡಿಗೆಯ ಬಗೆಗೆ ಲೋಕಕ್ಕೇ ತಿಳಿಶಿಗೊಂಡು ಇದ್ದವು.
ಸಾವಿರಾರು ಜೆನ ಆ ಸಂಗ್ರಹವ ಓದಿಗೊಂಡು ಉಪಯೋಗ ಮಾಡಿಗೊಂಡಿದವು.

ಓ ಮೊನ್ನೆ ಕೊಡೆಯಾಲಲ್ಲಿ ಸಿಕ್ಕಿಪ್ಪಗ ಶ್ರೀಅಕ್ಕ ಕೇಳಿದವಡ – ಬೈಲಿಂಗೆ ಬಂದು ಶುದ್ದಿ ಹೇಳುವೊರೋ – ಹೇಳಿಗೊಂಡು.
ಸಂತೋಶಲ್ಲಿ ಒಪ್ಪಿಗೊಂಡು – ಒಂದೊಂದೇ ಆಗಿ ಹೇಳ್ತೆ, ಎಲ್ಲ ಒಂದೇ ಸರ್ತಿ ಹೇಳಿದರೆ ಅಜೀರ್ಣ ಅಪ್ಪಲಾಗನ್ನೇ – ಹೇದು ನೆಗೆ ಮಾಡಿದವಡ.
ಆಜೀರ್ಣ ಆದರೆ ಸುವರ್ಣಿನಿ ಅಕ್ಕನೇ ಆಯೆಕ್ಕಟ್ಟೆ ಮತ್ತೆ, ಅಲ್ಲದೋ?

ವೇಣಿಅಕ್ಕ ಅಡಿಗೆಕೋಣೆಂದಲೇ ಹೆರಂಗೆ ನೋಡಿಗೊಂಡಿಪ್ಪದು!

ವೇಣಿಅಕ್ಕನ ಬೈಲಿಂಗೆ ಸಂತೋಶಲ್ಲಿ ಸ್ವಾಗತ ಮಾಡುವೊ.
ಬೈಲಿಲಿ ಅವರ ರುಚಿರುಚಿ ಅಡಿಗೆ (ಸಾಹಿತ್ಯದ) ಹಶು ಅಡಗುಸಲಿ – ಹೇಳ್ತದು ನಮ್ಮ ಹಾರಯಿಕೆ.

ವೇಣಿ ಅಕ್ಕಾ, ನಿಂಗೊಗೆ ಸ್ವಾಗತಮ್.
ಬೈಲ ನೆರೆಕರೆಲಿ ಒಂದಾಗಿ ಶುದ್ದಿ ಹೇಳುಲೆ ಸುರುಮಾಡಿ..
~
ಒಪ್ಪಣ್ಣ

ವೇಣಿಅಕ್ಕನ ಪುಟಂಗೊ:
ನೆರೆಕರೆ ಪುಟ: http://oppanna.com/nerekare/krishnaveni
ರುಚಿರುಚಿ
ಅಡಿಗೆಯ ಪುಟ:  http://ruchiruchiadige.blogspot.com
ಮೋರೆಪುಟ: http://www.facebook.com/profile.php?id=100001389232016
ಓರುಕುಟ್ಟುತ್ತ ಪುಟ: http://www.orkut.co.in/Main#Profile?uid=387308150053965517

ವೇಣಿಅಕ್ಕನ ರುಚಿರುಚಿ ಅಡಿಗೆ ಬೈಲಿಲಿ ಹಶು ತಣಿಶಲಿ, 5.0 out of 5 based on 1 rating
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗುರಿಕ್ಕಾರ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

  1. Sumana Sankahithlu
    VA:F [1.9.3_1094]
    Rating: 0 (from 0 votes)

    ವೇಣಿಯ ಎನಗೆ collage ದಿನಂಗಳಿಂದಲೇ ಗೊಂತಿದ್ದು, ಅದರ ರುಚಿ ರುಚಿ ಅಡಿಗೆ ಬರಹಂಗಳ ಸುಮರು ೪ ವರ್ಷ್ಂದ ಹಿಂದೆಯೇ ಓದುತ್ತಾ ಇದ್ದೆ. ನಿಜವಾಗಿ ಅದರ ಬರವ ರೀತಿಯೇ ಅದ್ಭುತ ಇದ್ದು, ಪ್ರತಿ ಒಂದು ಹಂತವನ್ನು ಯಾವ ಸಂಶಯವೂ ಬರದ್ದ ಹಾಂಗೆ ಅಷ್ಟು ಲಾಯಿಕಲ್ಲಿ ಬರೆತ್ತು, ಪಟಂಗಳ ಒಟ್ಟಿಂಗೆ. ಅದರ ಬಗ್ಗೆ ಆನು ಹೆಚ್ಚು ಬರೆಯೆಕು ಹೇಳಿ ಇಲ್ಲೆ, ಸದ್ಯಲ್ಲಿ ನಿಂಗೊಗೆ ಗೊಂತಕ್ಕು. ಸ್ವಾಗತ ವೇಣಿ ನಿನಗೆ…. ಕಾಯ್ತಾ ಇರ್ತೆ ಇಲ್ಲಿದೆ ಓದುಲೆ ಆತಾ?
    ~ಸುಮನಕ್ಕ…

    [ಉತ್ತರುಸಿ]

  2. jayashree.neeramoole
    ಜಯಶ್ರೀ ನೀರಮೂಲೆ
    VA:F [1.9.3_1094]
    Rating: 0 (from 0 votes)

    ಬೈಲಿಂಗೆ ರುಚಿ ರುಚಿಯಾದ ಹವ್ಯಕ ಅಡಿಗೆಯ ಒದಗಿಸಲೇ ಬಪ್ಪ ವೇಣಿ ಗೆ ಸ್ವಾಗತ…

    [ಉತ್ತರುಸಿ]

  3. ಚೆನ್ನೈ ಭಾವ
    ಚೆನ್ನೈ ಭಾವ°
    VN:F [1.9.3_1094]
    Rating: 0 (from 0 votes)

    ಅಕ್ಕಂಗೆ ಬೈಲಿಂಗೆ ಸ್ವಾಗತ. ಈಗಂತೂ ಜೆಂಬ್ರಂಗಳೂ ಕಮ್ಮಿ. ಅರಿಷ್ಟಕುಪ್ಪಿಯೂ ಶುದ್ದಿಂದ ದೂರ ಆಯ್ದು. ಬರ್ಲಿ ಒಂದೊಂದೇ

    [ಉತ್ತರುಸಿ]

  4. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°
    VN:F [1.9.3_1094]
    Rating: 0 (from 0 votes)

    ವೇಣಿ ಅಕ್ಕಂಗೆ ಸ್ವಾಗತ.
    ಹೊಸ ಹೊಸ ರುಚಿ ಬೈಲಿಂಗೆ ಬೇಗ ಹಾಕಿಕ್ಕಿ. ರುಚಿ ರುಚಿಯಾಗಿ ಮಾಡಿ ಬಳುಸುತ್ತೆ ಹೇಳಿ ಶ್ರೀ ಅಕ್ಕ ಮನ್ನೆ ಹೇಳಿದ್ದವು.

    [ಉತ್ತರುಸಿ]

  5. ವೇಣಿಯಕ್ಕ°
    ವೇಣಿಯಕ್ಕ°
    VN:F [1.9.3_1094]
    Rating: 0 (from 0 votes)

    ಸ್ವಾಗತ ಕೋರಿದ ಎಲ್ಲರಿಂಗೂ (ಒಪ್ಪಣ್ಣನನ್ನೂ ಸೇರ್ಸಿ) ಧನ್ಯವಾದಂಗೊ.
    ನಿಂಗಳ ಪ್ರೋತ್ಸಾಹ ಸದಾ ಇರಲಿ. ಃ)

    [ಉತ್ತರುಸಿ]

  6. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.3_1094]
    Rating: 0 (from 0 votes)

    ವೇಣಿಯಕ್ಕಂಗೆ ಸ್ವಾಗತ…ರುಚಿ ರುಚಿ ಅಡಿಗೆ ಇಲ್ಲಿಯೂ ಎಲ್ಲೋರಿಂಗೂ ಕಲಿಶೆಕ್ಕು ಆತಾ…

    [ಉತ್ತರುಸಿ]

  7. jayashree.neeramoole
    ಜಯಶ್ರೀ ನೀರಮೂಲೆ
    VA:F [1.9.3_1094]
    Rating: 0 (from 0 votes)

    ಎನ್ನ ಮಗಂಗೆ ರುಚಿ ರುಚಿಯಾದ ಪಲಾವಿನ ಹಾಂಗಿಪ್ಪ ತಿಂಡಿಗೋ ತುಂಬಾ ಇಷ್ಟ… ಆದರೆ ನಮ್ಮ ಹವ್ಯಕರ ಅಡಿಗೆಲ್ಲಿ ನೀರುಳ್ಳಿ,ಬೆಳ್ಳುಳ್ಳಿ ಉಪಯೋಗಿಸುಲೇ ಇಲ್ಲೆ… ಗುರುಗೋ ಹೆಳುತ್ತ ಹಾಂಗೆ “ಹಿತವೂ ಅಯೆಕ್ಕು,ಪ್ರಿಯವೂ ಅಗಿರೆಕ್ಕು”. ಒಂದೋ ಹವ್ಯಕರ ಸಾಂಪ್ರದಾಯಿಕ ಅಡಿಗೆಲ್ಲಿ ರುಚಿಯಾದ್ದು ಇದ್ದದರ ಹುಡುಕ್ಕೆಕ್ಕು… ಇಲ್ಲದ್ದರೆ ರುಚಿಯಾದ ಅಡಿಗೆಗಳ ಹವ್ಯಕರ ಕ್ರಮಲ್ಲಿ ಮಾಡುಲೆ ಕಲಿಯೆಕ್ಕು…ಇದು ಭಾರಿ ಕಷ್ಟದ ಕೆಲಸ ಆತನ್ನೇ ಹೇಳಿ ಆಲೋಚನೆ ಮಾಡಿಗೊಂಡು ಇತ್ತಿದ್ದೆ… ಅಷ್ಟಪ್ಪಗ “ರುಚಿ ರುಚಿಯಾದ ಹವ್ಯಕರ ಅಡಿಗೆ” ಕಲಿಶುಲೇ ಬೈಲಿಂಗೆ ವೇಣಿ ಬತ್ತು ಹೇಳುವ ಸುದ್ದಿ ಬಂತು… ತುಂಬಾ ಖುಷಿ ಆತು…

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಫೋಟೋ ಸ್ಪರ್ಧೆ : ಪ್ರಥಮ - ನಾಗೇಂದ್ರ ಮುತ್ಮುರ್ಡುಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME