ಚಿ| ವೇಣುಗೋಪಾಲಂಗೆ ಸಹಾಯಹಸ್ತ ಕೊಡುವಿರೋ?

ಬೈಲಿನ ಎಲ್ಲೋರಿಂಗೂ ನಮಸ್ಕಾರ.
ಸಮಾಜಂದ ಸಮಾಜಕ್ಕೆ ಕೊಡುವ ನಮ್ಮ ಬೈಲು, ತುರ್ತಿನ ಅಗತ್ಯ ಇಪ್ಪ ಸಂದರ್ಭಂಗಳಲ್ಲಿ ಮತ್ತೆ ಮತ್ತೆ ಒಗ್ಗಟ್ಟು ತೋರ್ಸಿ ಎದ್ದು ನಿಲ್ಲುತ್ತಾ ಇದ್ದು.
ಈಗ ಅಂತದ್ದೇ ಒಂದು ಸಂದರ್ಭ ಬಯಿಂದು, ಎಲ್ಲೋರ ಸಹಕಾರದ ನಿರೀಕ್ಷೆಲಿದ್ದು.

ಚೌಕ್ಕಾರಿನ ಶಂಕರನಾರಾಯಣ ಭಟ್, ವೀಣಾ ದಂಪತಿಯ ಸುಪುತ್ರ, ಚಿರಂಜೀವಿ ವೇಣುಗೋಪಾಲ ಈಗ ಒಂಭತ್ತನೇ ಕ್ಲಾಸು ಕಳಿಶಿ ಹತ್ತನೇ ಕ್ಲಾಸಿಲಿ ಇರೆಕ್ಕಾತು.
ಆದರೆ ವಿಧಿಬರಹ ಬೇರೆಯೇ ಇದ್ದತ್ತು, ಈಗ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಲಿ ಕೀಮೋಥೆರಪಿ ಪಡೆತ್ತಾ ಇದ್ದ°! 🙁
ಅಪ್ಪು, ಮಾಣಿಗೆ ರಕ್ತಕ್ಯಾನ್ಸರ್ ಇದ್ದು ಹೇಳುದು ಗೊಂತಾಗಿ ಆ ಕುಟುಂಬವೇ ಕಂಗಾಲಾಯಿದು.

ಚಿರಂಜೀವಿ ವೇಣುಗೋಪಾಲ

ಚಿರಂಜೀವಿ ವೇಣುಗೋಪಾಲ

ವೇಣುಗೋಪಾಲ ಕಳೆದ ಆರು ತಿಂಗಳಿಂದ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಲಿ – ಥೆರಪಿ, ಇಂಜೆಕ್ಷನು, ಔಷಧೋಪಚಾರಂಗಳ ಪಡೆತ್ತಾ ಇದ್ದು, ಕ್ಯಾನ್ಸರ್ ಮಾರಿಯ ಎದುರು ಹೋರಾಡ್ತಾ ಇದ್ದ°.
ಮಾಣಿಯ ಅಪ್ಪ ಶಂಕರನಾರಾಯಣ ಭಟ್ಟರದ್ದು ಕೃಷಿ ವೃತ್ತಿ, ಅಡಿಗೆ ಪ್ರವೃತ್ತಿ. ತೀರಾ ಸಾಧಾರಣ ಅನುಕೂಲದ, ಸ್ವಾಭಿಮಾನಿಯಾದ ಭಟ್ಟರಿಂಗೆ ಈಗ ಸಂಪಾದನೆಯಷ್ಟೂ ಮಗನ ಚಿಕಿತ್ಸೆಗೇ ಮುಗಿತ್ತಾ ಇದ್ದು.
ಪೈಕಿಯೋರ ಹತ್ತರೆ, ಆತ್ಮೀಯರ ಹತ್ತರೆ ಸಾಲಮೂಲ ಮಾಡಿ ರಜ ಪೈಸೆ ಹೊಂದುಸಿದ್ದದು – ಅಷ್ಟೂ ಈಗ ಮುಗುದು ಹೋಯಿದು.

ಇದುವರೆಗೆ ಸುಮಾರು ಎರಡೂವರೆ ಲಕ್ಷ ರುಪಾಯಿಯಷ್ಟು ಮುಗುತ್ತು; ಇನ್ನೂ ಅಷ್ಟೇ ಬೇಕಕ್ಕು ಹೇಳಿ ಆಸ್ಪತ್ರೆಯವರ ಅಭಿಪ್ರಾಯ.
ಅಮ್ಮ ಮಗನೊಟ್ಟಿಂಗೆ ಆಸ್ಪತ್ರೆಲಿ ಇಪ್ಪ ಕಾರಣ, ಸಣ್ಣ ಮಗ ಒಬ್ಬನೇ ಮನೆಲಿಪ್ಪ ಕಾರಣ – ಅಡಿಗೆ ವೃತ್ತಿಗೂ ಸರಿಯಾಗಿ ಹೋಪಲೆಡಿತ್ತಿಲ್ಲೆ ಹೇಳುದು ಅವರ ಚಿಂತೆ.
ಎಲ್ಲ ತೊಂದರೆಗಳ ದೂರೀಕರಿಸಿ, ಆ ಮಾಣಿ ಆರೋಗ್ಯಲ್ಲಿ ಮನೆಗೆ ಬಪ್ಪ ಹಾಂಗೆ ಆಯೆಕ್ಕಾರೆ ಅವಕ್ಕೆ ಈಗ ನಮ್ಮೆಲ್ಲರ ಸಹಾಯಹಸ್ತ ಬೇಕಾಯಿದು.
ತನು-ಮನ-ಧನರೂಪಲ್ಲಿ ನಾವು ಕೈಜೋಡುಸಿರೆ ಮಾಣಿಗೆ ಬೇಕಾದ ಆರೈಕೆ ಕೊಡ್ಳೆ ಮನೆಯೋರಿಂಗೆ ಬಂಙ ಆಗ.
ಹಾಂಗಾಗಿ, ಆಟ ಆಡೆಕ್ಕಾದ ಮಾಣಿಯ ಆಸ್ಪತ್ರೆಂದ ಕರಕ್ಕೊಂಡು ಬಪ್ಪ°, ಸಮಾಜಲ್ಲಿ ಸಾಧನೆ ಮಾಡಿ ಎತ್ತರಕ್ಕೆ ಎತ್ತುವ ಹಾಂಗೆ ಪ್ರೋತ್ಸಾಹ ಕೊಡುವ°. ಮಾಣಿಯ ಜೀವನಕ್ಕೆ ಬೆನ್ನೆಲೆಬು ಆಗಿ ನಾವು ನಿಂಬ°.

ಧನಸಹಾಯ ಮಾಡುವವರ ಅವಗಾಹನೆಗೆ ವಿವರಂಗೊ ಇಲ್ಲಿದ್ದು:

ಮಾಣಿಯ ಪೈಕಿಯೋರ ಅಧಿಕೃತ ಸಂಪರ್ಕ:
ಉಂಡೆಮನೆ ಕುಮಾರಪ್ಪಚ್ಚಿ (9448999173)

ಶಂಕರನಾರಾಯಣ ಭಟ್ಟರ (ವೇಣುಗೋಪಾಲನ ಅಪ್ಪ) ಅಕೌಂಟ್ ವಿವರ:

Name & Address K Shankaranarayana Bhat
S/O Gopalakrishna Bhat,
Gendodu Chowkkaru House,
Post : Bela, Via Kumbla,
Kasaragod District
Bank /
Branch
North Malabar Grameena Bank /
Puthige Branch
Account No 18108052693
IFSC code NMGB0000017

 

ತಾಂತ್ರಿಕ ಕಾರಣಲ್ಲಿ ಅಲ್ಲಿಗೆ ಕಳುಸುಲೆ ಎಡಿಯದ್ದರೆ,
ಬೈಲಿನ ಪ್ರತಿಷ್ಠಾನದ ಎಕೌಂಟಿಂಗೆ ಕಳುಸಿರೆ ಮಾಣಿಗೆ ಎತ್ತುಸುತ್ತು.

Name OPPANNA NEREKARE PRATISHTAANA
Bank /
Branch
State Bank of India /
Panambur
Account No 32272527608
IFSC code SBIN0002249

ಸೂ:

 • ಪ್ರತಿಷ್ಠಾನ ಖಾತೆಗೆ ಆರೋಗ್ಯನಿಧಿ ಕಳುಸಿದ ವಿವರವ, ನಿಂಗಳ ವಿಳಾಸವ trust@oppanna.org ಗೆ ಕಳುಸಿಕೊಟ್ರೆ 80G ವಿವರ ಇಪ್ಪ ರಶೀದಿ ನಿಂಗೊಗೆ ಕಳುಸಿಕೊಡ್ಳಕ್ಕು.
 • ಹೆಚ್ಚಿನ ವಿವರಕ್ಕಾಗಿ ಪ್ರತಿಷ್ಠಾನದ ಆರೋಗ್ಯನಿಧಿಯ ಸಂಚಾಲಕರಾದ ತೆಕ್ಕುಂಜೆಮಾವನ ಸಂಪರ್ಕ ಮಾಡ್ಳಕ್ಕು (+91 9535354380)

ಸಾಧ್ಯ ಇಪ್ಪ ಎಲ್ಲ ದಿಕ್ಕಂಗೂ ಈ ಮಾಹಿತಿಯ ಎತ್ತುಸಿಕೊಡಿ.
ನಾವೆಲ್ಲರೂ ಹನಿಹನಿ ಸೇರ್ಸಿ ದೊಡ್ಡ ಒಂದು ಮೊತ್ತವ ಆ ಕುಟುಂಬದ ಕೈಗೆ ಎತ್ತುಸಿರೆ, ಬೈಲಿಂಗೆ ಅವು ಆಭಾರಿ, ಬೈಲು ನಿಂಗೊಗೆ ಆಭಾರಿ ಆಗಿರ್ತು.
ತಡವೆಂತಕೆ, ಬನ್ನಿ; ನಿಂಗಳ ಶಕ್ತ್ಯಾನುಸಾರ ಒಂದು ಮೊತ್ತವ ಈಗಳೇ ದಾಂಟುಸಿಬಿಡಿ.

ವೇಣುಗೋಪಾಲನ ಬಾಳಿಲಿ ವೇಣುನಾದ ಮೊಳಗಲಿ..

~

ಹರೇರಾಮ,
ಬೈಲಿನ ಪರವಾಗಿ
Admin@Oppanna.com

Admin | ಗುರಿಕ್ಕಾರ°

   

You may also like...

14 Responses

 1. ಉದಯ ಶಂಕರ says:

  ಹರೇರಾಮ,ವೇಣುಗೋಪಾಲನ ಆರೋಗ್ಯ ಬೇಗ ಸುಧಾರಿಸಲಿ,ಇದು ಒಂದು ಹೋರಾಟ ,ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದವರ ಸಾಲಿಗೆ ವೇಣುಗೋಪಾಲ ಕೂಡ ಸೇರಲಿ ಎಂದು ದೇವರಲ್ಲಿ ಪ್ರಾರ್ಥನೆ ,ಹಾಗೇ ಸಮಾಜದ ಎಲ್ಲಾ ಜನರಿಂದ ಸಹಾಯ ಹರಿದು ಬರಲಿ

 2. ಕೃಷ್ಣ ಭಟ್, ಶೇಡಿಗುಮ್ಮೆ says:

  ಚಿ.ವೇಣುಗೋಪಾಲ ಆದಷ್ಟು ಬೇಗ ಗುಣಮುಖನಾಗಿ ವಿದ್ಯಾಭ್ಯಾಸ ಮುಂದುವರಿಸುವ ಹಾಂಗೆ ಆಗಲಿ

 3. ಜಯಲಕ್ಷ್ಮಿ says:

  ಚಿ.ವೇಣುಗೋಪಾಲನ ಆರೋಗ್ಯ ಹೇಗಿದೆ?ಭಗವಂತನ ಕೃಪೆಯಿಂದ ಆ ಮಗು ಹುಷಾರಾಗಿದೆ ಎಂದು ತಿಳಿಯುತ್ತೇನೆ

  • ರಘು ಮುಳಿಯ says:

   ಚಿ.ವೇಣುಗೋಪಾಲ ಜೂನ್ ಎ೦ಟರ೦ದು ದೇವರ ಪಾದ ಸೇರಿದ್ದ ಹೇಳುಲೆ ಬೇಜಾರು ಆವುತ್ತು.ಆ ಶುದ್ದಿಯ ಬೈಲಿಲಿ ಹೇಳಿದ್ದು ಅಕ್ಕ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *