ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಯೋಗ್ಯ ವಿದ್ಯಾರ್ಥಿಗೊಕ್ಕೆ ವಿದ್ಯಾನಿಧಿ ಸಮರ್ಪಣೆ

ಮಂಗಳೂರು, 11 ಜುಲೈ 2015:
ವಿದ್ಯಾರ್ಥಿಗೊ ಜೀವನಲ್ಲಿ ಶಿಸ್ತು ಅಳವಡುಸಿಗೊಂಡು ಕಲಿಯೇಕು. ಸಾಧನೆಗೆ ಶಿಸ್ತು ತುಂಬ ಅಗತ್ಯ – ಹೇದು ಮಂಗಳೂರು ಹವ್ಯಕದ ಅಧ್ಯಕ್ಷರೂ, ನಮ್ಮ ಹಿರಿಯ ಮಾರ್ಗದರ್ಶಕರೂ ಆದ ಎಂ.ಟಿ.ಭಟ್ ಇವು ಅಭಿಪ್ರಾಯ ಮಾತಾಡಿದವು. ಇಂದು ನಮ್ಮ ಬೈಲ ಪ್ರತಿಷ್ಠಾನ ಕೊಡಮಾಡಿದ ವಿದ್ಯಾನಿಧಿಯ ಸಮರ್ಪಿಸಿ ಅಧ್ಯಕ್ಷೀಯವಾಗಿ ಮಾತಾಡಿದವು.

ಬೈಲ ಪ್ರತಿಷ್ಠಾನ ಯೋಗ್ಯ ವಿದ್ಯಾರ್ಥಿಗಳ ಹುಡ್ಕಿ ಅವಕ್ಕೆ ವಿದ್ಯಾನಿಧಿ ಒದಗುಸಿ ಕೊಡುವ ಸಮಾಜಮುಖೀ ಕಾರ್ಯಕ್ರಮ ಕಳುದ ಕೆಲವೊರಿಶಂದ ಮಾಡ್ತಾ ಇದ್ದು. ಈ ವರ್ಷದ ವಿದ್ಯಾನಿಧಿ ಸಮರ್ಪಣೆ ಕಾರ್ಯಕ್ರಮವ ಸರಳವಾಗಿ ಮಂಗ್ಳೂರಿಲಿ ಮಾಡಿತ್ತು.
ಬೈಲಿನ ನೆಂಟ್ರಾದ ಶರ್ಮಪ್ಪಚ್ಚಿ, ಬೊಳುಂಬು ಮಾವ, ಕಿಶೋರಣ್ಣ, ಮಂಗ್ಳೂರು ಮಾಣಿ, ಶೇಡಿಗುಮ್ಮೆ ವಿದ್ಯಕ್ಕ, ಕೋಂಗೋಟು ಭಾವ ಇವೆಲ್ಲ ಸೇರಿ ಕಾರ್ಯಕ್ರಮ ಚೆಂದಗಾಣುಸಿ ಕೊಟ್ಟವು. ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಪ್ಪಚ್ಚಿ ಸ್ವಾಗತ ಮಾಡಿದವು, ಮಂಗ್ಳೂರು ಮಾಣಿ ನಂದಕಿಶೋರ ಎಲ್ಲೋರಿಂಗೂ ಧನ್ಯವಾದ ಸಮರ್ಪಣೆ ಮಾಡಿದವು.

~*~

ಕನ್ನಡ ವರದಿ:

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ರೂಢಿಯಾಗಿಸಿಕೊಂಡು ಕಲಿಯುವಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸಾಧನೆಗೆ ಶಿಸ್ತೇ ಮುಖ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಯನ್ನು ಮಾಡಿ ಸಮಾಜಕ್ಕೆ, ದೇಶಕ್ಕೆ ಕೀರ್ತಿಯನ್ನು ತರಬೇಕು ಎಂದು ಮಂಗಳೂರು ಹವ್ಯಕದ ಅಧ್ಯಕ್ಷರಾದ ಎಂ.ಟ್. ಭಟ್ ಅಭಿಪ್ರಾಯ ಪಟ್ಟರು.
ಅವರು 11/07/15 ಶನಿವಾರ ಮಂಗಳೂರಿನಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ಹವ್ಯಕ ಭಾಷೆಯ ಬೆಳವಣಿಗೆಗಾಗಿ ಅಂತರ್ಜಾಲದಲ್ಲಿ ರೂಪುಗೊಂಡಿರುವ ಒಪ್ಪಣ್ಣ ಡಾಟ್ ಕಾಮ್, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ವಿದ್ಯಾರ್ಥಿಗಳಿಗಾಗಿ ಕೊಡಮಾಡಿದ ವಿದ್ಯಾನಿಧಿಯ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರತಿಷ್ಠಾನವು ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಧನಸಹಾಯವನ್ನು ಮಾಡುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ಸಭೆಯಲ್ಲಿ ಬೊಳುಂಬು ಗೋಪಾಲಕೃಷ್ಣ ಭಟ್, ಯೇನಂಕೋಡ್ಲು ಕಿಶೋರ, ವಿದ್ಯಾ ಶೇಡಿಗುಮ್ಮೆ, ಕೋಂಗೋಟು ಗಣೇಶ, ನಂದ ಕಿಶೋರ, ಫಲಾನುಭವಿಗಳು ಹಾಗೂ ಅವರ ಹೆತ್ತವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಕೃಷ್ಣ ಶರ್ಮ ಹಳೆಮನೆಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಕಿಶೋರ ಧನ್ಯವಾದ ಅರ್ಪಿಸಿದರು.

~*~

ಬೊಳುಂಬು ಮಾವ°

   

You may also like...

4 Responses

 1. ಕೀರ್ತನಾ ಮಳಿ says:

  ಎನ್ನಂತಹ ವಿದ್ಯಾರ್ಥಿ ಗೊಕ್ಕೆ ಕಲಿವಲೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಕೊಡುವ ಪ್ರೋತ್ಸಾಹವ ನಿಜಕ್ಕೂ ಮೆಚ್ಚೆಕ್ಕಾದ್ದೇ.. ಮಂಗಳೂರು ಹವ್ಯಕದ ಅಧ್ಯಕ್ಷರಾದ ಎಂ.ಟಿ.ಭಟ್ ವಿದ್ಯಾರ್ಥಿಗೊಕ್ಕೆ ಕೊಟ್ಟ ಸಲಹೆಗೊ ಉತ್ತಮವಾದ್ದು. ಕರ್ಯಕ್ರಮಲ್ಲಿ ಭಾಗವಹಿಸಿದ್ದು ಖುಷಿ ಆತು.

 2. ತೆಕ್ಕುಂಜ ಕುಮಾರ ಮಾವ° says:

  ಬೈಲ ಪ್ರತಿಷ್ಠಾನದ ಸಮಾಜಮುಖೀ ಕೆಲಸಂಗೊ ಇನ್ನೂ ಮುಂದುವರಿಯಲಿ.

 3. ರಘು ಮುಳಿಯ says:

  ಸರಳವಾಗಿ ನಡೆಸಿಕೊಟ್ಟ ಕಾರ್ಯಕ್ರಮದ ಅಚ್ಚುಕಟ್ಟಿನ ವರದಿಗೆ ಧನ್ಯವಾದ, ಬೊಳು೦ಬು ಮಾವ.
  ಭಾಷೆಯ ಮೇಗಾಣ ಪ್ರೀತಿಲಿ ಒಟ್ಟು ಸೇರಿದ ಬೈಲಿನ ನೆರೆಕರೆ ಇ೦ದು ಸಮಾಜಕ್ಕೆ ಸಹಕಾರಿಯಾಗಿದೆ ಬೆಳೆತ್ತಾ ಇದ್ದು ಹೇಳ್ತದು ನವಗೆಲ್ಲಾ ಹೆಮ್ಮೆಯ ಸ೦ಗತಿ.ಬೈಲು ಹೀ೦ಗೆಯೇ ಬೆಳೆಯಲಿ,ನೆ೦ಟ್ರೆಲ್ಲಾ ಸಹಾಯಹಸ್ತ ಚಾಚಿ ಮುನ್ನಡೆಸುವ ಹಾ೦ಗಾಗಲಿ ಹೇಳಿ ಹಾರೈಕೆಗೊ.ಸಹಾಯ ಪಡದ ವಿದ್ಯಾರ್ಥಿಗೊ ಕಲ್ತು ಮು೦ದೆ ಸಮಾಜಕ್ಕೆ ಸಹಾಯ ಕೊಡುವ ದಿನ ಬರಲಿ ಹೇಳಿ ಪ್ರಾರ್ಥನೆ.

 4. ಚೆನ್ನೈ ಭಾವ° says:

  ಹರೇ ರಾಮ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *