Oppanna.com

ಮತಾಂಧರ ಕಣ್ಣಿಂಗೆ ಕಾಣದ್ದೇ ಹೋದ ದೇಶಭಕ್ತಿಯ ವಿಶ್ವರೂಪ!

ಬರದೋರು :   ಮಂಗ್ಳೂರ ಮಾಣಿ    on   04/02/2013    8 ಒಪ್ಪಂಗೊ

ಮಂಗ್ಳೂರ ಮಾಣಿ

ಓ ಮೊನ್ನೆಂದ ಪೇಪರಿಲಿ ಒಂದೇ ಶುದ್ದಿ. ಕಮಲ್ ಹಾಸನ್ನಿನ ವಿಶ್ವರೂಪದ್ದು.

ಅವ° ಹಾಂಗೇ,
ಹೇ ರಾಮ್ ಮಾಡಿದ° – ಶುದ್ದಿ ಆತು
ದಶಾವತಾರ ತೋರ್ಸಿದ° – ಅದೂ ಶುದ್ದಿ ಆತು
ಈಗ ವಿಶ್ವರೂಪ – ಶುದ್ದಿ ಆಯೆಕಿದ್ದದೇ…
ಆದರೆ ಈ ಸರ್ತಿ ಮಾತ್ರ ಬೇಕಾದ್ದಕ್ಕಿಂತ ಬೇಡದ್ದೇ ಶುದ್ದಿ ಆತು ಹೇಳುದು ಬೇಜಾರಿನ ಸಂಗತಿ. 🙁

ಸಿನೆಮಾ ಮಾಡುವವ° ರಜ್ಜ ಜಾಗ್ರತೆಲಿ ಇರೆಕಿತ್ತು. ಇವ° “ಆನು ಎಡವೂ ಅಲ್ಲ ಬಲವೂ ಅಲ್ಲ – ಆನೆ ಹೋದ್ದೇ ದಾರಿ” ಹೇಳಿಂಡು ಇದ್ದ ರೂಲ್ಸುಗಳ ಎಲ್ಲ ಬಿಟ್ಟು ನೆಡದ°.

ಸಿನೆಮ ನಿಜವಾಗಿಯೂ ಲಾಯಕಿದ್ದು. ಓ ಅಂದು ಆಚಕರೆ ಮಾಣಿ ಎನ್ನ ಇಂಗ್ಲೀಶಿನ ಜೇಮ್ಸು ಬೋಂಡಿನ ತೋರ್ಸುಲೆ ಕರಕ್ಕೊಂಡು ಹೋಗಿತ್ತ°, ಇದು ತಮಿಳಿನ ಜೇಮ್ಸು ಬೋಂಡು ನೋಡಿದ ಹಾಂಗೆ ಅವುತ್ತು. ಕಥಾನಾಯಕ ತಮಿಳ°, ತಾಲಿಬಾನುಗಳೊಟ್ಟಿಂಗೇ ಇದ್ದೊಂಡು ಅವರ ಎಲ್ಲೋರ ಮಂಗ ಮಾಡಿ ಹೇಂಗೆ ಅವನ ದೇಶವ ಒಳಿಶುತ್ತ°? ಹೇಳುದು ಕಥೆ. ಆದರೆ ಅದರ ಶೂಟಿಂಗು ಮಾಡಿದ ಕ್ರಮ ಇದ್ದಲ್ಲದಾ ಫಷ್ಟು ಕ್ಲಾಸು 🙂 ಅಫಗಾನಿಸ್ತಾನದ ಚಿತ್ರಣ, ಅಲ್ಲಿಯಾಣ ತಾಲಿಬಾನುಗಳ ಕ್ರೌರ್ಯದ ಮನಸ್ಥಿತಿ, ಬಂಧಿತರ ಅಸಹಾಯಕತೆ, ಜೀವದ ಹಂಗಿಲ್ಲದ್ದೆ ಹೋರಾಡುವ ದೇಶ ಭಕ್ತ ಸೈನಿಕರು, ಈಗಾಣ ಸಮಾಜದ ಕೊರತೆಗೊ, ಗೆಂಡ-ಹೆಂಡತ್ತಿಯರ ನಡುವಿನ ಅಭಿಪ್ರಾಯಬೇಧ ಹಾಂಗೇ, ಎಲ್ಲದರ ಸುರೂವಿಂಗೆ ಒಂದು ಚೆಂದದ ಕಥಕ್…

ನಟನೆಲಿ ಮತ್ತೆ ನೃತ್ಯಲ್ಲಿಕಮಲ್ ಹಾಸನ್ನಿಂಗೆ ಎರಡು ಮಾತಿಲ್ಲೆ. ಸೂಪರು 🙂
ಆದರೆ,

  • ರಾಜಕೀಯದವರ ಕೈ ಇಪ್ಪ ಟಾಕೀಸಿಂಗೆ ಸಿನೆಮ ಕೊಡ್ತಿಲ್ಲೆ ಹೇಳ್ಲಾಗ,
  • ಟಾಕೀಸಿಂದ ಮದಲು ಟೀವಿಗೆ ಕೊಡ್ಳಾಗ,
  • ನೀನು ಬ್ಯಾರಿ ಅಲ್ಲದ್ರೆ ಸಿನೆಮಲ್ಲಿ ‘ಅಲ್ಲಾಹೊ ಅಕ್ಬರ್’ ಹೇಳಿ ಹೇಳುಲೇ ಆಗ.

ಈ ಮನುಷ್ಯ ಕೇಳ°.

  • ಜಯಲಲಿತನ ಸಂಬಂದಿಕರ ಟಾಕೀಸಿನವು ಹೇಳಿದ ರೇಟಿಂದ ಬೇರೆ ಟಾಕೀಸಿಲ್ಲಿ ಹೆಚ್ಚು ಕೊಡ್ತವು ಹೇಳಿ ಬೇರೆಯವಕ್ಕೆ ಕೊಟ್ಟತ್ತು.
  • ಟಾಕೀಸಿನವು ಸಿನೆವ ಕೋಪಿ ಮಾಡಿ ಮಾರ್ತವು, ಅಷ್ಟಪ್ಪಗ ಲೋಸು ಆವುತ್ತು ಹೇಳಿ, ‘movie on demand’ ಹೇಳಿಯೊಂಡು Dish TV ಲಿ ಕೊಟ್ಟತ್ತು.
  • ತಾಲಿಬಾನುಗಳ ಬಗ್ಗೆ ಹೇಳ್ತರೆ ಯಾವುದಾರು ಬ್ಯಾರಿಯನ್ನೇ ಹಾಕೆಕಿತ್ತು ಸಿನೆಮಕ್ಕೆ.  ‘ಹತ್ತತ್ತು ಮಾಡಿ ಅಭ್ಯಾಸ ಉಂಟು ನನಗೆ, ಇದನ್ನು ನಾನೇ ಮಾಡ್ತೇನೆ’ ಹೇಳಿ ಹೆರಟರೆ ಹೀಂಗೇ ಅಪ್ಪದು. 🙁

ಸೆನ್ಸಾರು ಪಾಸು ಮಾಡಿರೂ ತಮಿಳುನಾಡು ಸರಕಾರ “ಬೇಡ ಬೇಡ ನಮ್ಮ ಮುಸಲ್ಮಾನರಿಂಗೆ ಬೇಜಾರಕ್ಕು” ಹೇಳಿತ್ತು, ಅಲ್ಲಿಯಾಣ ಮುಸಲ್ಮಾನರು “ಅಪ್ಪಪ್ಪು” ಹೇಳಿದವು, ಸಿನೆಮಾ ನೋಡದ್ದೆ ಅವಕ್ಕೆ ಹೇಂಗೆ ಗೊಂತಾತೋ ಎನಗರಡಿಯ. “ಬೇರೆ ರಾಜ್ಯದ ಮುಸಲ್ಮಾನರಿಂಗೆ ಬೇಜಾರಾಯಿದಿಲ್ಲೆ ನಿಂಗೊಗೆ ಮಾತ್ರ ಎಂತಕೆ?” ಹೇಳಿ ಕೇಳುಲೆ ಟೀವಿಯವಕ್ಕೂ ಬೆಟ್ರಿ ಇಲ್ಲೆ 🙁

ಪಾಪ 🙁Kamal Hassan in Viswaroopam Movie First Look - designs
ಹೀಂಗಕ್ಕು ಹೇದು ಅವಂಗೂ ಅಂದಾಜಿ ಇತ್ತಿಲ್ಲೆ, ಸುರುವಾಣದ್ದು ಬಿಡುಗಡೆ ಅಪ್ಪ ಮದಲೇ ಎರಡ್ಣೇದರ ಮುಕ್ಕಾಲು ಪಾಲು ತೆಗದಾಯಿದು. ಈಗಳೇ ಮನೆ ಎಲ್ಲ ಅಡವು ಮಡಗಿದ್ದ° ಅಡ. ಪೈಶೆ ಬಾರದ್ದರೆ ಇನ್ನೆಂತ ಮಾಡುಗು? “ಆನು ಜಾತ್ಯಾತೀತ ದೇಶಕ್ಕೆ ಹೋವ್ತೆ” ಹೇಳಿದ್ದಾ°ಡ, ಈಗಳಾದರೂ ನಮ್ಮ ದೇಶ ಜಾತ್ಯಾತೀತ ಅಲ್ಲ ಹೇಳಿ ಗೊಂತಾತನ್ನೆ. 🙁
ದಶಾವತಾರಂ ಹೇಳಿ ಒಂದು ಸಿನೆಮಾ ಬಂದಿತ್ತಿದ, ಶೈವ ವೈಷ್ಣವರ ಯುದ್ಧ ತೋರುಸಿತ್ತಿದ್ದವು ಅದರಲ್ಲಿ. ೧೦ ಪಾರ್ಟು ಒಬ್ಬನೇ ಮಾಡಿದ್ದ° ಹೇಳುದರೆಡೆಲಿ ಆ ವಿಷಯ ಮುಚ್ಚಿ ಹೋತು. ಅರ್ಥ ಆದವು ‘ಇದು ಸತ್ಯ, ನಾವೆಂತ ಹೇಳುದು’ ಹೇಳಿ  ಸುಮ್ಮನೇ ಕೂದವು. ಒಳುದ ಕೆಲವು ಅತಿ ಹಿಂದುಗೊಕ್ಕೆ ಅದು ಅರ್ಥವೇ ಆಯಿದಿಲ್ಲೆ. ಹಾಂಗಾಗಿ ಬಾಕಿ – ಅವ° ಅಂದು ಹೇಳಿದ್ದು ಜಾತ್ಯಾತೀತ ಆಗಿ ಹೋತು.
ಇಂದು ಹಾಂಗಪ್ಪದು ಹೇಂಗೆ? ಇವು ಅರ್ಥ ಆದರೂ ಆಗದ್ದರೂ ಸುಮ್ಮನೆ ಕೂಪ ಜೆನಂಗೊ ಅಲ್ಲ. 🙁

ಸಿನೆಮಾ ಮುಖ್ಯವಾಗಿ ಹೇಳಿದ್ದು – ತಾಲಿಬಾನಿಗಳ ಕೈಂದ ದೇಶವ ಒಳಿಶುತ್ತೆ, ಅವರ ಭಾರತಕ್ಕೆ ಬಪ್ಪಲೆ ಬಿಡೆ ಹೇಳ್ತ ಕಥಾ ನಾಯಕನ ದೇಶಭಕ್ತಿಯ – ಶುದ್ದಿ ಆದ್ದು ತಾಲಿಬಾನುಗೊ ಬ್ಯಾರಿಗೊ ಹೇಳಿ!
ಸಿನೆಮಾಲ್ಲಿ ಮಾಣಿಗೆ ಕಂಡದು ನಾಯಕನ ಸಮದರ್ಶಿತ್ವ  – ಮತಾಂಧರಿಂಗೆ ಕಂಡದು ಬೋಂಬುಹೊಟ್ಟುಸುವ ಮದಲು ಆತಂಕವಾದಿ ನಮಾಜು ಮಾಡಿತ್ತು ಹೇಳಿ!
ಕಾಣೆಕಿದ್ದದು ಪೈರೆಸಿಯ ವಿರುದ್ಧ “They are steeling my 50%, I’m just taking back 1% of it” ಹೇಳಿದ ಕಮಲ್ ಹಾಸನ್ನಿನ ಕೆಣಿ – ಕಂಡದು ತಮಿಳುನಾಡಿನ ಬ್ಯಾರಿಗಳ ಪ್ರತಿರೋಧ!

ಒಂಭತ್ತು ಸೀನು ತೆಗದು ಹಾಕಲೆ ಕಮಲ್ ಹಾಸನ್ ಒಪ್ಪಿಯೊಂಡಿದಡ – ಅದರ ತೆಗದರೆ ನೋಡ್ಳೆ ಮತ್ತೆಂತೂ ಇಲ್ಲೆ ಅದರಲ್ಲಿ. ಹಾಂಗಾಗಿ ಅದರ ಮದಲೇ ಎಡಿಗಾರೆ ನೋಡಿಕ್ಕಿ 🙂

ಕಾಂಬೊ° 🙂

8 thoughts on “ಮತಾಂಧರ ಕಣ್ಣಿಂಗೆ ಕಾಣದ್ದೇ ಹೋದ ದೇಶಭಕ್ತಿಯ ವಿಶ್ವರೂಪ!

  1. ರಾಜಕೀಯ ದುರುದ್ದೇಶ ಮಡಗಿ ಇಷ್ಟೆಲ್ಲಾ ಸುದ್ಧಿ ಮಾಡಿದ್ದಲ್ಲದ್ದೆ ಅದರಲ್ಲಿ ಹಾಂಗಿಪ್ಪ ಎಂತ ಇಲ್ಲೆ..ಇದು ಇನ್ನು ಸರಿ ಅಪ್ಪಲೆ ಇಲ್ಲೆ..

  2. ಅಪ್ಪು ಸಿನೆಮಾ ಲಾಯಕ್ಕಿದ್ದು.. ಬ್ಯಾರಿಗಳು ಹೆಮ್ಮೆ ಪಡೆಕ್ಕು ಹಾ೦ಗೆ ಇದ್ದಪಾ. ಬ್ಯಾನ್ ಮಾಡುವ೦ಥದ್ದು ಎ೦ತೂ ಕ೦ಡಿದ್ದಿಲ್ಲೆ ಈ ಮಾಣಿಗೂವಾ..

  3. ಅಂತೂ ದೃಶ್ಯ ಕಿತ್ತುಹಾಕುವ ಮೊದಲು ನೋಡಿ ಬಂದಿರನ್ನೆ…
    ಬುದ್ಧಿಜೀವಿಗಳ ಸೊಲ್ಲು ಇಲ್ಲೆ…
    ಹೀಂಗಾದರೆ ಮುಂದೆ ಕತೆ ಬರವಲೆ ಎಡಿಯ ನಮ್ಮ ಭಾರತಲ್ಲಿ…

    1. ಅವ್ವು ಸಂಖ್ಯೆಲಿ ಮಾತ್ರ ಬೆಳೆತ್ತಾ ಇಪ್ಪದನ್ನೇ 🙁
      ಅವರ ಧರ್ಮವೂ ಅದರೊಟ್ಟಿಂಗೇ update ಅಪ್ಪಲೆ ತಯಾರಿದ್ದಿದ್ದರೆ??

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×