ಯಜುರುಪಾಕರ್ಮ, ರಕ್ಷಾಬಂಧನದ ಶುಭಾಶಯಂಗೊ…

August 24, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇರಾಮ ಎಲ್ಲೊರಿಂಗೂ..
ಗೋಕರ್ಣಲ್ಲಿ ಚಾತುರ್ಮಾಸ್ಯದ ಹಬ್ಬದ ಗವುಜಿ ಎಲ್ಲೋರಿಂಗೂ.
ಇದರೆಡಕ್ಕಿಲಿದೇ ಕೆಲವು ನಮ್ಮದೇ ಆದ ಹಬ್ಬಂಗೊ ಇದ್ದೇ ಇದ್ದು.

ಮಿತ್ತೂರಜ್ಜನಲ್ಲಿಂದ ತಂದ ತೆಳುಎಳೆಯ ಜೆನಿವಾರ!

ಮೊನ್ನೆ ಇತ್ಲಾಗಿ ನಾಗರಪಂಚಮಿ, ಸ್ವಾತಂತ್ರ ಎಲ್ಲ ಬಂದಿತಾ..
ಹಾಂಗೇ ಇಂದು ಇನ್ನೊಂದು ಗವುಜಿ!
ಅದುವೇ ಶ್ರಾವಣ ಹುಣ್ಣಮೆ..!

ಯಜುರ್ವೇದಿಗೊಕ್ಕೆ ಉಪಾಕರ್ಮವುದೇ ಇಂದೇ ಆದ ಕಾರಣ ಯಜುರುಪಾಕರ್ಮ ಹೇಳಿಯೂ ಹೇಳ್ತವು.
ಉಪನಯನ ಆದ ಎಲ್ಲಾ ಬ್ರಹ್ಮಚಾರಿ, ಗೃಹಸ್ಥರು ಇಂದು ಛಿದ್ರ-ಕಲ್ಮಶ ಸಂಯುತವಾದ ಹಳೆಯ ಜೆನಿವಾರದ ಬದಲಿಂಗೆ ಶುಭ್ರ-ಸ್ವಚ್ಛವಾದ ಹೊಸ ಜೆನಿವಾರ ಹಾಕುದು.
ಹಾಂಗಾಗಿ ಇಂದು ನೂಲಹುಣ್ಣಮೆಯೂ ಆಗಿದ್ದು.

ಅಂತೆಯೇ,
ಇಂದು ಇನ್ನೊಂದು ವಿಶೇಷವಾದ ಹಬ್ಬ!
ಅದುವೇ ರಕ್ಷಾಬಂಧನ!

ದೇಶರಕ್ಷಣೆ ಎಲ್ಲೊರ ಹೊಣೆ. ಅದರ ಆರಂಭ ನಮ್ಮ ಮನೆಲೇ ಆಗಲಿ.

ಕೊಡೆಯಾಲದ ಅಕ್ಷರದಣ್ಣ ಮಾಡಿದ ಶುಭಾಶಯ ಕಾಗತ.
ಕೊಡೆಯಾಲದ ಅಕ್ಷರದಣ್ಣ ಮಾಡಿದ ಶುಭಾಶಯ ಕಾಗತ.

ನಮ್ಮ ಅಕ್ಕ, ತಂಗೆಕ್ಕಳ ರಕ್ಷಣೆಮಾಡುವೊ°. ಅಣ್ಣ, ತಮ್ಮಂದ್ರಿಂಗೆ ಶೆಗ್ತಿ ಕೊಡುವೊ°.
ಸಿಹಿ ಹಂಚಿಗೊಂಡು ಮತ್ತೊಂದರಿ ನಾವೆಲ್ಲ ಒಟ್ಟಪ್ಪ.
ಇಡೀ ದೇಶವ ರಕ್ಷಣೆಮಾಡ್ತ ಕಾರ್ಯವ ಮನೆಯ ರಕ್ಷಣೆ ಮಾಡ್ತ ಮೂಲಕ ಆರಂಭ ಮಾಡುವೊ°.
ಅಕ್ಕತಂಗೆಕ್ಕೊ ಅವರವರ ಅಣ್ಣತಮ್ಮಂದ್ರಿಂಗೆ ರಕ್ಷೆಕಟ್ಟುವ ಮೂಲಕ ಈ ಸೂಚನೆಯ ಕೊಟ್ಟೊಳ್ತ ಶುಭ ದಿನ ಇಂದು.

ಯಜುರುಪಾಕರ್ಮ, ರಕ್ಷಾಬಂಧನದ ಶುಭದಿನ ನಿಂಗಳದ್ದಾಗಲಿ.
ಗುರು-ದೇವರ ಆಶೀರ್ವಾದ ನವಗಿರಳಿ.
ಎಲ್ಲೋರಿಂಗೂ ಒಳ್ಳೆದಾಗಲಿ.
ಹರೇರಾಮ.

ನಿಂಗಳ ಪ್ರೀತಿಯ,
ಗುರಿಕ್ಕಾರ°

ಯಜುರುಪಾಕರ್ಮ, ರಕ್ಷಾಬಂಧನದ ಶುಭಾಶಯಂಗೊ..., 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ನೆಗೆಗಾರ°
  ನೆಗೆಗಾರ°

  ಗುರಿಕ್ಕಾರ ಮಹೋದಯಃ, ಕಿಮರ್ಥಂ ಚತ್ವಾರಿ ಉಪವೀತಾಣಿ? ಬ್ರಹ್ಮಚಾರಿಣಃ ಏಕಂ, ವಿವಾಹಿತಾನಿ ದ್ವಯಂ, ಗುರಿಕ್ಕಾರಾಣಾಂ ಚತ್ವಾರಿ ಇತಿ ನಿಯಮಂ ಅಸ್ತಿವಾ?
  (ನಾಲ್ಕುದೇ ಒಬ್ಬಂಗೆ ಅಲ್ಲ ಹೇಳಿ ಎನಗೆ ಗೊಂತಿದ್ದು. ಎನಗೆ ಸಂಸ್ಕೃತ ಬತ್ತು ಹೇಳಿ ಗೊಂತಪ್ಪಲೆ ಹೇಳಿ ಬರೆದ್ದು. ಇಂದು ಸಂಸ್ಕೃತ ದಿನ ಅಡ!)

  [Reply]

  ಶ್ರೀಶಣ್ಣ

  ಶ್ರೀಶ. ಹೊಸಬೆಟ್ಟು Reply:

  ಚತ್ವಾರಿ ಇತಿ ಗುರಿಕ್ಕಾರ ಮಹೋದಯ ಕುತ್ರ ಲಿಖಿತವಾನ್? ಸಂಯಕ್ ಪಶ್ಯಂತು.
  ಸಂಸ್ಕೃತಂ ಕಿಂಚಿತ್ ಜಾನಮಿ. ಅತಃ ಲಿಖಿತವಾನ್. ಶಾಲಾಯಾಮ್ ನ ಪಠಿತವಾನ್
  ತತ್ರ ಸಂಸ್ಕೃತೇನ ಅಭ್ಯಾಸಂ ನ ಆಸೀತ್
  (ತಪ್ಪಿದ್ದರೆ ಸರಿ ಮಾಡಿ ಓದು ಆತ?)

  [Reply]

  ಡಾಮಹೇಶಣ್ಣ

  ಮಹೇಶ Reply:

  ನೆಗೆಗಾರಃ, ಶ್ರೀಶಃ ಚ ಸಂಸ್ಕೃತ-ದಿನಂ ಸಾರ್ಥಕಂ ಕೃತವಂತೌ! ಅಭಿನಂದನಂ !!

  [Reply]

  VA:F [1.9.22_1171]
  Rating: 0 (from 0 votes)
 2. ಗಣೇಶ ಮಾವ°

  ಬೈಲಿನ ಎಲ್ಲೋರಿಂಗೂ ರಕ್ಷಾ ಬಂಧನದ ಹಾರ್ದಿಕ ಶುಭಾಶಯಂಗ …
  ಅಣ್ಣ ತಮ್ಮಂದ್ರು,ಅಕ್ಕ ತಂಗೆಕ್ಕಳ ಪ್ರೀತಿಯ ಈ ಹಬ್ಬ ಜಗತ್ತಿನಾದ್ಯಂತ ಭ್ರಾತ್ರತ್ವದ ನಂಟಿನ ಬೆಸೆಯಲಿ,
  ವಸುದೈವ ಕುಟುಂಬಕಂ ಹೇಳುವ ವಾಕ್ಯ ನಮ್ಮೆಲ್ಲರ ಧ್ಯೇಯ ಆಗಲಿ

  [Reply]

  VN:F [1.9.22_1171]
  Rating: 0 (from 0 votes)
 3. ಒಪ್ಪಕ್ಕ
  ಒಪ್ಪಕ್ಕ

  ಬೈಲಿನ ಎಲ್ಲೊರಿಂಗೂ ರಕ್ಷಾಬಂಧನದ ಶುಭಾಶಯಂಗೊ……. :-)

  [Reply]

  VA:F [1.9.22_1171]
  Rating: 0 (from 0 votes)
 4. ಡಾಗುಟ್ರಕ್ಕ°
  ಡಾ.ಸೌಮ್ಯ ಪ್ರಶಾಂತ

  ಬೈಲಿನ ಎಲ್ಲಾ ಅಣ್ಣ ತಮ್ಮಂದ್ರಿಂಗೆ ರಕ್ಷಾಬಂಧನ ಹಬ್ಬದ ಶುಭಾಶಯಂಗೊ..
  सर्वॆ जना सुखिनॊ भवंतु सर्वॆ संतु निरामयाः ।
  सर्वॆ भद्राणि पश्यंतु मा क्श्चिद् दुःख भाग्भवॆत् ॥

  [Reply]

  VA:F [1.9.22_1171]
  Rating: 0 (from 0 votes)
 5. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಗುರಿಕ್ಕಾರ್ರು ಹೇಳಿದ ಹಾಂಗೆ ದೇಶ ರಕ್ಷಣೆ ನಮ್ಮ ಕರ್ತವ್ಯ ಅದು ನಮ್ಮ ಮನೆಂದಲೇ ಆರಂಭ ಆಗಲಿ ಹೇಳಿ. ನಮ್ಮ ಸಂಸ್ಕೃತಿಲಿ ಮಾತ್ರವೇ ಅಲ್ಲದಾ ನಮ್ಮ ಮೂಲಭೂತ ಜವಾಬ್ದಾರಿಗಳನ್ನೂ ಹಬ್ಬವಾಗಿ ಆಚರಿಸಿ ಮುಂದಾಣವಕ್ಕೆ ಹೇಳಿ ಕೊಡುದು ಇಪ್ಪದು?
  ನಮ್ಮ ಯಾವುದೇ ಆಚರಣೆಯ ಹಿಂದೆಯೂ ಒಂದು ಸಂಸ್ಕಾರದ ಶಿಕ್ಷಣ ಇದ್ದು. ಈ ಶಿಕ್ಷಣ, ಸಂಸ್ಥಾನ ಹೇಳುವ ಹಾಂಗೆ ಮಕ್ಕೊಗೆ ಕಲಿತ್ತಾ ಇಪ್ಪದು ಗೊಂತಾಗದ್ದ ಹಾಂಗೆ ಅವಕ್ಕೆ ಕಲಿಶುವ, ಅವು ಅದರ ಮುಂದುವರಿಶಿಗೊಂಡು ಹೋಪ ಹಾಂಗೆ ನೋಡಿಗೊಂಬದು ಹೇಳಿ. ಇದು ನಮ್ಮ ಜವಾಬ್ದಾರಿ.
  ನಮ್ಮ ಮುಂದಾಣವಕ್ಕೆ ಇದರ ನವಗೆ ಸಿಕ್ಕಿದ ಹಾಂಗೆ ಕೊಡುವ°. ನಮ್ಮ ಸಮಾಜ ಬೆಳೆಯಲಿ. ನಮ್ಮ ಸಂಸ್ಕಾರ ಉಳಿಯಲಿ. ನಾಡು ಬೆಳಗಲಿ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆಕಜೆವಸಂತ°ಡೈಮಂಡು ಭಾವಶ್ಯಾಮಣ್ಣವಿಜಯತ್ತೆವಿದ್ವಾನಣ್ಣಕೆದೂರು ಡಾಕ್ಟ್ರುಬಾವ°ಅಕ್ಷರದಣ್ಣಉಡುಪುಮೂಲೆ ಅಪ್ಪಚ್ಚಿಶ್ರೀಅಕ್ಕ°ಶಾ...ರೀಅಡ್ಕತ್ತಿಮಾರುಮಾವ°ವೇಣಿಯಕ್ಕ°ಪುತ್ತೂರುಬಾವಅನುಶ್ರೀ ಬಂಡಾಡಿಮಾಲಕ್ಕ°ಪಟಿಕಲ್ಲಪ್ಪಚ್ಚಿವಾಣಿ ಚಿಕ್ಕಮ್ಮಪೆಂಗಣ್ಣ°ವೆಂಕಟ್ ಕೋಟೂರುಡಾಗುಟ್ರಕ್ಕ°ಮುಳಿಯ ಭಾವಕೇಜಿಮಾವ°ಕಾವಿನಮೂಲೆ ಮಾಣಿಎರುಂಬು ಅಪ್ಪಚ್ಚಿಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ