Tagged: ಊದು ವನಮಾಲಿ ಮುರಳಿಯಾ

ಊದು ವನಮಾಲಿ ಮುರಳಿಯಾ 19

ಊದು ವನಮಾಲಿ ಮುರಳಿಯಾ

ಅರ್ಧ ಕಟ್ಟಿ ಮಡುಗಿದ ಕಾಡು ಹೂಗುಗಳ ಮಾಲೆಯ ಜೋಡ್ಸಿ ತಂದು ಅವನ ಕೊರಳಿಂಗೆ ಹಾಕಿತ್ತದು.
“ಒಳುದ ಹೂಗುಗಳ ಬೇರೆ ಆರಾರು ಕಟ್ಟಿ ನಿನ್ನ ಕೊರಳಿಂಗೆ ಹಾಕಲಿ ವನಮಾಲೀ..ಎನ್ನ ಲೆಕ್ಕದ್ದು ಇಷ್ಟೇ ಸಾಕಲ್ಲದಾ?”….
ಅದರ ಕೈಯ ಮೆಲ್ಲಂಗೆ ಹಿಡ್ಕೊಂಡ ಅಂವ.
” ಬೇರೆ ಆರು ಎಷ್ಟು ಚೆಂದದ ಹೂಗುಗಳ ತಂದು ಮಾಲೆ ಮಾಡಿ ಹಾಕಿರೂ ನೀನು ಹಾಕಿದ ಈ ಮಾಲೆಯ ಹತ್ರಂಗೂ ಬಾರ ರಾದೇ‌….