Tagged: ಒಪ್ಪಣ್ಣ

1

ನಾವು ದನವ ಕಟ್ಟಿ ಹಾಕುದೋ, ದನವೇ ನಮ್ಮ ಕಟ್ಟಿ ಹಾಕುದೋ?

ಒಂದೊಂದರಿ ನಾವು ಯೇವದರ ನಮ್ಮ ವಶಲ್ಲಿ ಮಡಗಿದ್ದು ಹೇದು ಗ್ರೇಶುತ್ತೋ – ನಿಜವಾಗಿ ನೋಡಿದರೆ ನಾವೇ ಅದರ ಕೈವಶ ಆಗಿರ್ತು – ಹೇದು ಮಗುಮಾವ ಹೇಳಿದ ವಿಚಾರ ಅಪ್ಪನ್ನೇ ಹೇದು ಆಲೋಚನೆಗೆ ಬಂತು. ಮುಂದೆ ಓದಿ >>

ಬೆಳವ ಬೈಲಿಂಗೆ ಎಂಟರ ನಂಟು; ನಂಟಿನ ಅಂಟು 5

ಬೆಳವ ಬೈಲಿಂಗೆ ಎಂಟರ ನಂಟು; ನಂಟಿನ ಅಂಟು

ಬೈಲಿನ ಬೆಳೆಶುವಲ್ಲಿ ಪ್ರತ್ಯಕ್ಷ – ಪರೋಕ್ಷವಾಗಿ ಕೈಜೋಡುಸಿಗೊಂಡ ಎಲ್ಲ ಮಹನೀಯರಿಂಗೂ, ಹಿರಿಯರಿಂಗೂ ಒಪ್ಪಣ್ಣನ ಅನಂತ ಕೃತಜ್ಞತೆಗೊ.
ಎಂಟನೇ ಒರಿಶಕ್ಕೆ ಎತ್ತಿದ್ದು. ಇನ್ನೂ ಈ ನೆಂಟು ಬ್ರಹ್ಮಗೇಂಟಾಗಿ ಇರಳಿ.
ಬೆಳವಗ ಒಟ್ಟಿಂಗೇ ಬೆಳವ. ಎಲ್ಲೋರುದೇ ಕೊಶಿಲಿಪ್ಪ.

9

ನಿಂಗಳತ್ರೆ ಪಟಂಗೊಕ್ಕೆ ಶೀರ್ಷಿಕೆ ಇದ್ದೋ?

ಹರೇರಾಮ! ಬೈಲಿಂಗೆ ತಲೆ ಹಾಕದ್ದೆ ಸಮಯ ಆತು! ಕ್ಷಮೆ ಇರಳಿ! ಕೆಲವು ಪಟ ಅಂಟುಸಿದ್ದೆ! , ನಿಂಗಳ ತಲೆಗೆ ಏನಾರೂ ಶೀರ್ಷಿಕೆ ಹೊಳೆತ್ತೋ!?? ಒಳ್ಳೆ ಶೀರ್ಷಿಕೆ ಕೊಟ್ಟೋರಿಂಗೆ ಸುವರ್ಣಿನಿಯಕ್ಕನ ಕೈರುಚಿಯ ಸ್ಪೆಷಲ್ ಮಜ್ಜಿಗೆ ನೀರು/ಶರಬತ್ತು ಕೊಡಲಾಗುವುದು!

ಏಪುಲು ಹಣ್ಣೇ ತಿಂತವಕ್ಕೆ ‘ಕೇಪುಳು ಹಣ್ಣು’ ಮೆಚ್ಚುಗೋ? 78

ಏಪುಲು ಹಣ್ಣೇ ತಿಂತವಕ್ಕೆ ‘ಕೇಪುಳು ಹಣ್ಣು’ ಮೆಚ್ಚುಗೋ?

ಕೇಪುಳೆಹಣ್ಣು ತಿಂತ ಸರಿಯಾದ ಕ್ರಮ ಹೇಂಗೆ? ಅದರ ಮಕ್ಕಳತ್ರೇ ಕೇಳೇಕು – ಕೇಪುಳೆ ಹಣ್ಣಿನ ಗುಳ ತಿಂದು, ಒಳುದ ಬಿತ್ತಿನ ಹಲ್ಲಿಲಿ ಕಚ್ಚಿ ಒಡದು – ಅದರೊಳ ಇಪ್ಪ ಚಮ್ಚದ ಹಾಂಗಿರ್ತ ಬೆಳೀ ಆಕೃತಿಯ ತೆಗದು ಚೆಂಙಾಯಿಗೊಕ್ಕೆ ತೋರುಸುದು! ಚಮ್ಚ ತೆಗವಲೆಡಿಯದ್ದೋನು ಬೂಸು – ಹೇದು ಲೆಕ್ಕ!

ಜೀವನ ವಿಕಾಸ 15

ಜೀವನ ವಿಕಾಸ

ಇಂದು ಹುಟ್ಟಿ ನಾಳೆ ಉಳುದು ನಾಡದು ಸಾಯ್ವ ಈ ಜೀವನಕ್ಕೆ ಮೂರು ದಿನದ ಬಾಳ್ವೆ ಹೇಳಿದ್ದವು.

ಯೇನಂಕೂಡ್ಲಿಲ್ಲಿ ಕೂಡಿದ ಬೈಲು 35

ಯೇನಂಕೂಡ್ಲಿಲ್ಲಿ ಕೂಡಿದ ಬೈಲು

ಬೈಲಿನ ಮಿಲನ ಸುದ್ದಿ ತಿಳಿವಲೆ ಶ್ರೀಶ ಮನೆಗೆ ಬಂದ. ಆನು ಬರೆತ್ತರ ಓದಲೆ ಸುರು ಮಾಡಿದ.
ಅಲ್ಲ ಅಪ್ಪಚ್ಚಿ, ಗುರಿಕ್ಕಾರ್ರು ಸುದ್ದಿ ಬರೆಯಿ ಹೇಳಿರೆ ನಿಂಗೊ ಪೋಲಿ ಕಟ್ಟುತ್ತಾ ಇದ್ದಿ ಅಲ್ಲದಾ, ಅಕ್ಷೇಪಿಸಿದ. ಅತ್ಮೀಯತೆ ಇಪ್ಪಲ್ಲಿ ರೆಜ ಸಲಿಗೆ ಜಾಸ್ತಿ ಅಲ್ಲದಾ
ಎಂತ ಮಾಡುವದು ಶ್ರೀಶ, ಮೂನ್ನೆಯ ಕಾರ್ಯಕ್ರಮ ಕಳುದ ಮತ್ತೆ ಒಂದು ಹತ್ತು ವರ್ಶ ಕಮ್ಮಿ ಆದ ಹಾಂಗೆ ಅನುಭವ ಆವ್ತಾ ಇದ್ದು. ಹಾಂಗೆ ರೆಜ ಪೋಲಿ ಕಟ್ಟಿದೆ. ಇನ್ನು ನೇರ್ಪಕೆ ಬರೆತ್ತೆ ಹೇಳಿದೆ.

ಧನುರ್ಮಾಸದ ಚಳಿಲಿಯೂ ಧನುಪೂಜೆಯ ಬೆಶಿ..! 46

ಧನುರ್ಮಾಸದ ಚಳಿಲಿಯೂ ಧನುಪೂಜೆಯ ಬೆಶಿ..!

ಒರಕ್ಕಿಂಗೂ ಚಳಿಗೂ ಸೋದರ ಸಮ್ಮಂದ.
– ಹಾಂಗೊಂದು ಸಂಶಯ ಬಯಿಂದು ಒಪ್ಪಣ್ಣಂಗೆ.
ಅದಕ್ಕೆ ಕಾರಣ ಇಲ್ಲದ್ದೆ ಅಲ್ಲ – ಚಳಿ ಜೋರಾದ ಹಾಂಗೇ ಒರಕ್ಕುದೇ ಜೋರು!
ಉದೆಕಾಲ ಆರು ಗಂಟಗೆ ಏಳುವ ಜವ್ವನಿಗರು – ಈಗ ಗಡಿಯಾರವೂ ಏಳು ಹೇಳಿದ ಮೇಗೆಯೇ ಏಳುದಿದಾ!
ನೆಗೆಮಾಣಿ ಅಂತೂ ಹತ್ತು ಗಂಟೆ ಆದರೂ ಏಳ° ಹೇಳಿ ಬಂಡಾಡಿಅಜ್ಜಿ ನೆಗೆಮಾಡಿಗೊಂಡು ಪರಂಚುಗು –
ಅಜ್ಜಿಗೆ ಈಗ ಪ್ರಾಯ ಆಗಿ ಒರಕ್ಕು ಕಮ್ಮಿ ಆಯಿದು; ಛಳಿ ಇರಲಿ, ಮಳೆ ಇರಲಿ – ನಾಕು ಗಂಟಗೆ ಎದ್ದು ಕೂದೊಂಗು..!
ಅದು ಬೇರೆ ಸಂಗತಿ!

ಲಕ್ಷ್ಯಂದಲೂ ಮೇಗೆ, ಲಕ್ಷಂದಲೂ ಮೇಗೆ..!! 58

ಲಕ್ಷ್ಯಂದಲೂ ಮೇಗೆ, ಲಕ್ಷಂದಲೂ ಮೇಗೆ..!!

ಈಗ ಇನ್ನೊಂದು ಶುದ್ದಿ, ನಮ್ಮೆಲ್ಲೊರಿಂಗೂ ಕೊಶಿ ಇಪ್ಪದು!
ನಾಳೆಂದ ಜೆನವರಿ. ನಾಳೆ ಒಂದನೇ ತಾರೀಕು.
ಒಪ್ಪಣ್ಣ ಶುದ್ದಿ ಹೇಳುಲೆ ಸುರು ಮಾಡಿದ ದಿನವೇ! ಸರಿಯಾಗಿ ಎರಡೊರಿಶ ಆವುತ್ತು!!
ಬೈಲಿನ ಈ ವೆಬುಸೈಟು ಹುಟ್ಟಿದ ದಿನವೂ ಅಪ್ಪು. ಸರಿಯಾಗಿ ಒಂದೊರಿಶ ಆವುತ್ತು!!
ಕೊಶಿಯೇ ಅಲ್ಲದೋ?
~
ಎಲ್ಲಾ ಕೊಶಿಯ ಸಂದರ್ಭಲ್ಲಿಯೂ ಅದಕ್ಕೆ ಪ್ರೇರೇಪಣೆ ಆದ ಶೆಗ್ತಿಗೆ ಮೊದಲೊಂದನೆ ಮಾಡೆಕ್ಕಡ.
ಹಾಂಗೆ, ಇಂದು ಆರಂಭಲ್ಲಿ ಗುರುವಂದನೆ..

ಅಂದ್ರಾಣ ವಿಜಯಡ್ಕವೂ; ಇಂದ್ರಾಣ ವಿಜಯಕರ್ನಾಟಕವೂ..!! 19

ಅಂದ್ರಾಣ ವಿಜಯಡ್ಕವೂ; ಇಂದ್ರಾಣ ವಿಜಯಕರ್ನಾಟಕವೂ..!!

ಕುಡ್ಪಲ್ತಡ್ಕ ಭಾವನ ಗುರ್ತ ಇದ್ದಲ್ಲದೋ ನಿಂಗೊಗೆ?
ನಮ್ಮದೇ ಬೈಲಿಲಿ ಇದ್ದಂಡು, ಸಂಗೀತಲ್ಲಿ ತುಂಬಾ ತೊಡಗುಸಿಗೊಂಡು, ಶೃಂಗೇರಿಲಿ ಸಂಗೀತ ಗುರುಗೊ ಆಗಿ ಇದ್ದ°!
ಧಾರಾಳ ಗೊಂತಿಪ್ಪಲೂ ಸಾಕು.
ಕುಡ್ಪಲ್ತಡ್ಕ ಮಾವನ ಅರಡಿಗೋ?
ಒಂದರಿ ಅವರ ಬಗ್ಗೆ ಗೊಂತಾಗಿದ್ದರೆ ನಿಂಗೊಗೆ ಗುರ್ತ ಮರೆಯ; ಎಂದೆಂದಿಂಗೂ ನೆಂಪೊಳಿತ್ತ ಅಭಿಮಾನ ಬಂದಿಕ್ಕುಗು.
ಬೈಲಿಲಿ ಕೆಲವು ಜೆನಕ್ಕೆ ಗೊಂತಿಪ್ಪಲೂ ಸಾಕು; ಆದರೆ ಎಲ್ಲೋರಿಂಗೂ ಅವರ ಹಿನ್ನಲೆ ಅರಡಿಯ ಇದಾ..

ಈಗ ಪ್ರಸ್ತುತ ಎಲ್ಲ ಹೆರಿಯರ ಹಾಂಗೇ ಪ್ರಾಯ ಆಯಿದು; ಸಂಸಾರದಷ್ಟಕೇ ಇದ್ದವು.
ಆದರೆ, ಒಂದು ತಲೆಮಾರು ಹಿಂದೆ ಕುಡ್ಪಲ್ತಡ್ಕಮಾವ° ಅವರ ಊರಿಂಗಾಗಿ ಕೊಟ್ಟ ಕೊಡುಗೆಯೇ ಇಂದಿಂಗೆ ಅವರ ಗೌರವ ಸ್ಥಾನಲ್ಲಿ ಮಾಡಿದ್ದು.
ಆ ಸಮೆಯಲ್ಲಿ ಅವರ ಊರಿಲಿ ಆದ ಒಂದು ಸಂಕ್ರಮಣ, ಒಂದು ಕ್ರಾಂತಿ; ನಮ್ಮತ್ವವ ಒಳಿಶಲೆ ಇರ್ತ ಆ ಆಂತರ್ಯದ ಪ್ರೇರೇಪಣೆ – ಅತ್ಯಮೋಘವಾದ್ದು.
ಅದರ ಗ್ರೇಶಿರೆ ಎಂತವಂಗೂ ಒಂದರಿ ಹೆತ್ತಬ್ಬೆಯ ನೆಂಪಕ್ಕು..!
ಅದೆಂತರ..?

ಬೈಲಿಂಗಿಡೀ ಮಂಗನ ಉಪದ್ರ 50

ಬೈಲಿಂಗಿಡೀ ಮಂಗನ ಉಪದ್ರ

ಅಬ, ಪುರುಸೋತಿಲಿ ಶುದ್ದಿ ಹೇಳೆಕ್ಕು ಗ್ರೇಶುದು, ಈ ನಮುನೆ ಬದ್ಕಾಣಲ್ಲಿ ಒಂದಲ್ಲಾ ಒಂದು ಒಯಿವಾಟುಗೊ, ಪುರುಸೊತ್ತೆಲ್ಲಿಂದ.!
ಒಯಿವಾಟು ನಮ್ಮ ಬೆಂಗುಳೂರಿನ ಪ್ರಕಾಶಮಾವನ ಹಾಂಗೆ ಕೋಟಿಗಟ್ಳೆದಲ್ಲ; ಒರಕ್ಕಿಲ್ಲದ್ದೆ ತಲೆತಿಂಬಂತಾದ್ದಲ್ಲ – ಹೊತ್ತು ತಿಂಬಂತಾದ್ದು.

ಬೈಲಿಲಿ ಬೆಳೆತ್ತವಂಗೆ ಹಾಂಗೆ ಅಲ್ಲದೋ – ಊರಿಲಿ ಇಪ್ಪ ಮನುಶ್ಶರತ್ರೆ ಮಾತಾಡುಸಿಗೊಳೆಕ್ಕು, ಹಟ್ಟಿಲಿಪ್ಪ ದನಗಳ ಮಾತಾಡುಸಿಗೊಳೆಕ್ಕು, ಮನೆಕಾಯ್ತ ನಾಯಿಯತ್ರೆ ಮಾತಾಡಿಗೊಳೆಕ್ಕು, ಪಾಡಿಗೆದ್ದೆ ಕರೆಲಿ ನೆಡಕ್ಕೊಂಡು ಹೋವುತ್ತ ಜೆನಂಗಳತ್ರೆ ಮಾತಾಡುಸಿಗೊಳೆಕ್ಕು, ಪೋನು ಮಾಡಿದ ಚೆಂಙಾಯಿಗಳತ್ರೆ ಮಾತಾಡಿಗೊಳೆಕ್ಕು – ಎಲ್ಲರತ್ರುದೇ ರಜ ರಜ ಮಾತಾಡಿಗೊಳೆಕ್ಕು!
ಇದರೆಡಕ್ಕಿಲಿ ಹೊಸತ್ತೊಂದಿದ್ದು – ತೋಟಕ್ಕೆ ಬತ್ತ ಮಂಗಂಗಳತ್ರೂ ಮಾತಾಡಿಗೊಳೆಕ್ಕು.
ಹ್ಮ್, ಅಪ್ಪೂಳಿ, ಈಗ ಅದೊಂದು ಹೊಸತ್ತು ಸುರುಆಯಿದು!

ಮೊನ್ನೆ ದೀಪಾವಳಿಗೆ ನಮ್ಮ ಬೈಲಿನ ಕೆಲವು ಮನೆಲಿ ಪಟಾಕಿ ರಜ ಜಾಸ್ತಿಯೇ ತಯಿಂದವು, ಕೆಲವು ಮನೆಲಿ ತರೆಕ್ಕಾಯಿದೇ ಇಲ್ಲೆ!
ಕೆಲವು ಮನೆಲಿ ತೋಟಲ್ಲೇ ಪಟಾಕಿ ಹೊಟ್ಟುಸಿದವು. ಕೆಲವು ಮನೆಲಿ ಪಟಾಕಿಯೇ ಹೊಟ್ಟುಸಿದ್ದವಿಲ್ಲೆ, ನಾಳ್ತಿಂಗೆ ಬೇಕು ಹೇಳಿ ಮಡಿಕ್ಕೊಂಡಿದವು.
ಕೆಲವು ದಿಕೆ ಬೊಬ್ಬೆ ಹೊಡಕ್ಕೊಂಡೇ ಪಟಾಕಿ ಹೊಟ್ಟುಸಿದವು, ಕೆಲವು ದಿಕೆ ಕೊಶಿಲಿ ಹೊಟ್ಟುಸಿದವು, ಕೆಲವು ದಿಕೆ ಬೆಶಿಲಿ ಪಟಾಕಿ ಹೊಟ್ಟುಸಿದವು.

ಅಂಬಗ ಎಂತ ಇವರ ಗವುಜಿ? ಅದುವೇ “ಮಂಗನ ಉಪದ್ರ”….!

ತರವಾಡುಮನೆಲಿ ಈ ಸರ್ತಿ ಟೀವಿಬುಡಲ್ಲೇ ದೀಪಾವಳಿ..!? 20

ತರವಾಡುಮನೆಲಿ ಈ ಸರ್ತಿ ಟೀವಿಬುಡಲ್ಲೇ ದೀಪಾವಳಿ..!?

ಅದಾ, ಮತ್ತೊಂದರಿ ಬೆಣಚ್ಚಿನ ಹಬ್ಬದ ಗವುಜಿ ಬಂತು!
ಒಂದೊರಿಶ ಕತ್ತಲೆಲೇ ಒರಕ್ಕುತೂಗಿದ ಲೋಕ ಮತ್ತೊಂದರಿ ಬೆಣಚ್ಚಿಲಿ ಬೆಳಗುತ್ತ ಪುಣ್ಯಪರ್ವ.
ನರಕಾಸುರನ ಕೊಂದು ಕೃಷ್ಣಚಾಮಿ ಲೋಕೋದ್ಧಾರಮಾಡಿದ ನೆಂಪಿಂಗೆ ಹಬ್ಬ ಆಚರಣೆ ಮಾಡ್ತ ಪುಣ್ಯದಿನ..
ಚಕ್ರವರ್ತಿ ಬಲಿ ಫಲಪುಷ್ಪ ಸಮೃದ್ಧಿಯಾಗಿಪ್ಪ ಭೂಲೋಕದ ಅವನ ರಾಜ್ಯವ ಮತ್ತೊಂದರಿ ನೋಡ್ಳೆ ಬತ್ತ ಕಾಲ..
ಹಳ್ಳಿಮನೆಗಳ ಹಟ್ಟಿಲಿಪ್ಪ ಉಂಬೆದನಗಳ ಚೆಂದಕೆ ಮೀಶಿ, ಕುಂಕುಮದ ಬೊಟ್ಟುಮಡಗಿ ಆರತಿಎತ್ತಿ ಗೋಪೂಜೆನೈವೇದ್ಯ ಮಾಡ್ತ ಕಾಲ..
ಮಕ್ಕೊ ಎಲ್ಲ ಎಣ್ಣೆಕಿಟ್ಟಿ ಮಿಂದು, ಗುದ್ದುಪಟಾಕಿ ಗುದ್ದಿ, ಕೈಬೇನೆ ಮಾಡಿಗೊಂಡು, ಲಡಾಯಿ ಬೊಬ್ಬೆ ಕೊಡ್ತ ಸಮೆಯ..
ಊರೋರಿಂಗೆ ಹೊಸ ಅಂಗಿ, ಹೊಸ ಒಸ್ತ್ರಂಗಳ ಹಾಕಿಂಡು, ಗವುಜಿ ಮಾಡ್ತ ಸಮೆಯ..
ಅಂಗುಡಿಯವಕ್ಕೆ ಅಂಗುಡಿಪೂಜೆಮಾಡಿ ಜೆನಂಗಳ ಎಳಕ್ಕೊಳ್ತ ಸಮೆಯ..
ಚತುರ್ದಶಿಂದ ತೊಡಗಿ, ಮುಂದಾಣ ದ್ವಾದಶಿ ಒರೆಂಗೆ ಒಂದಲ್ಲಾ ಒಂದು ರೀತಿಲಿ ಆಚರುಸಿ, ತಂದ ಪಟಾಕಿಗಳ ಪೂರ್ತ ಮುಗುಶಿ, ಬಣ್ಣ ಬಣ್ಣದ ಬೆಣಚ್ಚಿನ ನೋಡ್ತ ಕಾಲ!
ಒಟ್ಟಾರೆಯಾಗಿ ಲೋಕ ಇಡೀಕ ಹೊಸ ಬೆಣಚ್ಚಿಲಿ ಬೆಳಗ್ಗುತ್ತ ಪುಣ್ಯಪರ್ವಕಾಲ!
ದೀಪಾವಳಿಗೆ ಲೋಕವೇ ಬೆಳಗುತ್ತಡ, ಇನ್ನು ಬೈಲು ಬೆಳಗದ್ದೆ ಇಕ್ಕೋ…!

ಪಾತಿಅತ್ತೆಯ ದಾಸುವೂ, ಶುಬತ್ತೆಯ ರೋಸಿಯೂ..!!! 22

ಪಾತಿಅತ್ತೆಯ ದಾಸುವೂ, ಶುಬತ್ತೆಯ ರೋಸಿಯೂ..!!!

ತರವಾಡುಮನೆಲಿ ದಿನ ಉದಿಯಾದರೆ ಪಾತಿಅತ್ತೆಗೆ ಕೆಲಸ ಸುರು!
ಮುನ್ನಾಣ ದಿನ ಇರುಳೇ ಒಲೆಲಿ ಮಡಗಿ, ತೆಯಾರಾಗಿದ್ದ ಮಡ್ಡಿಯನ್ನುದೇ, ಒಳುದ ಅಶನ ಇತ್ಯಾದಿ ಆಹಾರಂಗಳನ್ನೋ ಎಲ್ಲ ಪಾತ್ರಂಗಳಲ್ಲಿ ಹಿಡ್ಕೊಂಡು ಜಾಲಿಂಗಿಳಿಗು ಪಾತಿಅತ್ತೆ.
ಹಟ್ಟಿಎದುರೆ ಎಲ್ಲ ತಂದು ಮಡಗಿ, ಬೇರೆಬೇರೆ ಬಾಲ್ದಿಗಳಲ್ಲಿ ಸಮಪಾಲು ಮಾಡಿ ಎಲ್ಲ ದನಗೊಕ್ಕೆ ಕೊಟ್ಟು, ಮಾತಾಡುಸಿಗೊಂಬದರ್ಲೇ ಪಾತಿಅತ್ತೆಗೆ ಸಮಾದಾನ.

ಅತ್ತೆ ಜಾಲಿಂಗಿಳುದ ಕೂಡ್ಳೇ ಜಾಲಕರೆಲಿ ಮನುಗಿದ ಕರಿ ನಾಯಿಗೆ ದಿನ ಸುರು!
ಇರುಳಿಡೀ ಜಾಲಿಲಿ ಮನುಗಿ ಮೈಗೆ ಹಿಡುದ ದೂಳಿನ ಕಟಕಟಕಟನೆ ಕುಡುಗಿ ಎದ್ದು ನಿಂಗು ಆ ಮನೆಯ ನಾಯಿ ದಾಸು!
ಅಕ್ಕಚ್ಚುಕೊಡುವ ಅಷ್ಟೂ ಹೊತ್ತು ಪಾತಿ ಅತ್ತೆಗೆ ಕಾಲಿಂಗೆ ತಾಂಟಿಗೊಂಡು ಇಕ್ಕು ಆ ನಾಯಿ…

ಹೂಗಿಂಗೂ ನವಗೂ ಸಾಮ್ಯತೆ; ಒಳುದ್ದೆಲ್ಲವೂ ಸನಾತನತೆ! 9

ಹೂಗಿಂಗೂ ನವಗೂ ಸಾಮ್ಯತೆ; ಒಳುದ್ದೆಲ್ಲವೂ ಸನಾತನತೆ!

ನಮ್ಮದು ಸನಾತನ ಧರ್ಮ.
– ಹಾಂಗೆ ಹೇಳುಲೆ ನವಗೆಲ್ಲ ಅಭಿಮಾನ.
ಸನಾತನ ಹೇಳಿರೆ ಹಳತ್ತು (ಪುರಾತನ) ಹೇಳಿ ಅರ್ತ ಅಡ.
ಎಷ್ಟೇ ಹಳತ್ತಾದರೂ, ಸನಾತನ ಧರ್ಮ ನಿತ್ಯನೂತನ, ನವ ವಿನೂತನ.
ಅಡಕ್ಕೆಯ ಹಳತ್ತಿಂಗೆ ಮಡಗಿರೆ ಬೆಲೆ ಜಾಸ್ತಿ ಅಲ್ಲದೋ? ಸಾಗುವಾನಿ, ಚಿರ್ಪು – ಹೀಂಗಿತ್ತ – ಜಾತಿಮರಂಗೊ ಹಳತ್ತಾದಷ್ಟೂ ಗಟ್ಟಿ ಅಲ್ಲದೋ – ಹಾಂಗೆಯೇ!

ಈ ಧರ್ಮ – ಇದು ಯೇವತ್ತು ಹುಟ್ಟಿದ್ದು? ಉಮ್ಮ, ಆರಿಂಗೂ ಗೊಂತಿಲ್ಲೆ! ಯೇವತ್ತು ಮುಗಿಗು? ಉಮ್ಮಪ್ಪ.. ಅದುದೇ ಆರಿಂಗೂ ಗೊಂತಿಲ್ಲೆ!
ಹುಟ್ಟೇ ಇಲ್ಲದ್ದಕ್ಕೆ ಸಾವಿರ್ತೋ? ಖಂಡಿತ ಇಲ್ಲೆ!

ಒಪ್ಪಣ್ಣನ ಬೈಲಿಲ್ಲಿ ‘ಡೈಮಂಡು ಭಾವ’… 2

ಒಪ್ಪಣ್ಣನ ಬೈಲಿಲ್ಲಿ ‘ಡೈಮಂಡು ಭಾವ’…

ಒಪ್ಪಣ್ಣನ ಆನು ಭೇಟಿಯಾದ್ದು  ಆಕಸ್ಮಿಕ..   ‘ಅವಲಂಬನ’ದ ಲೆಕ್ಕಲ್ಲಿ ಎಲ್ಲರೂ ಮೇಲುಕೋಟೆಗೆ ಪ್ರವಾಸ ಹೋಪ ಸಂದರ್ಭಲ್ಲಿ ಆನು ಅವನ ಭೇಟಿಯಾದ್ದು.  ಅವ° ಇನ್ನೊಂದು  ಬಸ್ಸಿಲ್ಲಿ ಇತ್ತ. ಆನು ಮತ್ತೊಂದರಲ್ಲಿ. ಕಾಪಿ ಕುಡಿವಲೆ ಬಸ್ಸಿನ ನಿಲ್ಲಿಸಿತ್ತವು. ಅಂಬಗ ಹೀಂಗೆ ಮಾತಾಡಿಯಪ್ಪಗ ಗುರ್ತ ಆತು. ಅಲ್ಲಿಂದ...

ಕಣ್ಯಾರ ಆಯನ / ಕುಂಬ್ಳೆ ಬೆಡಿ : ಗಳಿಗೆಗಾದರೂ ಹೋಗದ್ದೆ ಇರೆಡಿ!! 16

ಕಣ್ಯಾರ ಆಯನ / ಕುಂಬ್ಳೆ ಬೆಡಿ : ಗಳಿಗೆಗಾದರೂ ಹೋಗದ್ದೆ ಇರೆಡಿ!!

ಕುಂಬಳೆ ಸೀಮೆಯ ಇತಿಹಾಸಲ್ಲಿ ನಾಲ್ಕು ಪ್ರಸಿದ್ಧ ದೇವಸ್ಥಾನಂಗೊ.
ಅಡೂರು – ಮಧೂರು – ಕಾವು – ಕಣ್ಯಾರ. ಅದರ “ಸೀಮೆ ದೇವಸ್ಥಾನ” ಹೇಳಿಯೂ ಹೇಳ್ತವು.
ಸೀಮೆಯ ಉದ್ದಗಲಕ್ಕೆ ಹರಡಿಗೊಂಡಿಪ್ಪ ಈ ಧರ್ಮಕೇಂದ್ರದ ವ್ಯಾಪ್ತಿಲಿ ನಿತ್ಯ ದೇವತಾ ವಿನಿಯೋಗ, ಒರಿಷಕ್ಕೊಂದರಿ ಉತ್ಸವ – ಇತ್ಯಾದಿಗೊ ನೆಡಕ್ಕೊಂಡು ಇತ್ತು.
ಊರಿಂಗೆ ಎಂತದೇ ಕಷ್ಟ – ಕೋಟಲೆ ಬಂದರೂ ಈ ಸೀಮೆ ದೇವಸ್ಥಾನಂಗೊಕ್ಕೆ ಹೋಗಿ ಪ್ರಾರ್ಥನೆ ಮಾಡ್ತ ಪರಿವಾಡಿ ನಮ್ಮೋರಲ್ಲಿ ಇತ್ತು.
ಸೀಮೆಯ ಕಾವ ದೈವೀ ಶಕ್ತಿಗೊ ಅವು ಹೇಳ್ತ ನಂಬಿಕೆ ನಮ್ಮ ಹಿರಿಯೋರದ್ದು..