Tagged: ಒಪ್ಪಂಗೊ

ಒಪ್ಪಣ್ಣನ ಒಪ್ಪಂಗೊ…

ಮಾರ್ಗಸೂಚಿಗೊ ಹಲವಿರಳಿ; ದಾರಿ ನಮ್ಮದೇ ಇರಳಿ.. 19

ಮಾರ್ಗಸೂಚಿಗೊ ಹಲವಿರಳಿ; ದಾರಿ ನಮ್ಮದೇ ಇರಳಿ..

ಹಬ್ಬ, ಪಟಾಕಿ, ಬೆಡಿ – ಈ ಅಂಬೆರ್ಪಿಲಿ ಊರೊಳದಿಕ್ಕೇ ಇದ್ದವು ಮಾತಾಡ್ಳೆ ಸಿಕ್ಕುತ್ತವಿಲ್ಲೆ ಇದಾ! ಸುಮಾರು ಸಮೆಯ ಕಳುದ ಮತ್ತೆ ನಿನ್ನೆ ಮಾಷ್ಟ್ರುಮಾವನ ಹತ್ತರೆ ಮಾತಾಡ್ಳೆ ಸಿಕ್ಕಿತ್ತು. ಗೋಪೂಜೆ ಏರ್ಪಾಡಿಲಿ ಅತ್ತೆ ಅಂಬೆರ್ಪಿಲಿ ಇದ್ದರೂ, ಮಾಷ್ಟ್ರುಮಾವ ಎಲೆತಟ್ಟೆ ಬುಡಲ್ಲಿ ಪುರುಸೋತಿಲೇ ಇದ್ದಿದ್ದವು....

ನಿಷ್ಠೆಯ ದೇವಸ್ಥಾನಲ್ಲಿ ’ಕಮ್ಮಿನಿಷ್ಟೆ’ಯ ವಾಸನೆ..!? 33

ನಿಷ್ಠೆಯ ದೇವಸ್ಥಾನಲ್ಲಿ ’ಕಮ್ಮಿನಿಷ್ಟೆ’ಯ ವಾಸನೆ..!?

ಹೋಪ್ಪ!! ಒಂದು ತಿಂಗಳು ಕಳುದು ಮೊನ್ನೆ ಓಟಿನ ಲೆಕ್ಕಾಚಾರ ಅಪ್ಪನ್ನಾರ ಅದೊಂದು ಕಾದುನೋಡ್ಳೆ ಬಾಕಿಒಳುದಿತ್ತು. ದೊಡ್ಡಬಾವ° ಮದಲೇ ಹೇಳಿಗೊಂಡಿತ್ತಿದ್ದ° ‘ಇನ್ನೂ ಸಮಯ ಬಯಿಂದಿಲ್ಲೆ; ಕುದ್ಕ° ಕಾದ ಹಾಂಗೆ ಕಾದು ನೋಡ್ಳೆ ಎಂತೂ ಇಲ್ಲೆ, ಉಪವೀತಿ-ಪ್ರಾಚೀನಾವೀತಿ  ಹೇಳಿ ತಿತಿದಿನ ಬಟ್ಟಮಾವ° ಹೇಳಿದ ನಮುನೆ...

ತಪ್ಪಿದ ಒಪ್ಪವ ತಿದ್ದಲೆಡಿತ್ತು! 18

ತಪ್ಪಿದ ಒಪ್ಪವ ತಿದ್ದಲೆಡಿತ್ತು!

ಎಲ್ಲೋರುದೇ ಈ ಅವಕಾಶವ ಉಪಯೋಗುಸಿಗೊಂಡು, ಬೈಲಿಲಿ ತಪ್ಪಿಲ್ಲದ್ದೆ ಒಪ್ಪುವ ಒಪ್ಪಂಗಳ ಕೊಡೇಕು
– ಹೇಳ್ತದು ಬೈಲಿನ ಪರವಾಗಿ ಕೋರಿಕೆ.

ಧನುರ್ಮಾಸದ ಚಳಿಲಿಯೂ ಧನುಪೂಜೆಯ ಬೆಶಿ..! 46

ಧನುರ್ಮಾಸದ ಚಳಿಲಿಯೂ ಧನುಪೂಜೆಯ ಬೆಶಿ..!

ಒರಕ್ಕಿಂಗೂ ಚಳಿಗೂ ಸೋದರ ಸಮ್ಮಂದ.
– ಹಾಂಗೊಂದು ಸಂಶಯ ಬಯಿಂದು ಒಪ್ಪಣ್ಣಂಗೆ.
ಅದಕ್ಕೆ ಕಾರಣ ಇಲ್ಲದ್ದೆ ಅಲ್ಲ – ಚಳಿ ಜೋರಾದ ಹಾಂಗೇ ಒರಕ್ಕುದೇ ಜೋರು!
ಉದೆಕಾಲ ಆರು ಗಂಟಗೆ ಏಳುವ ಜವ್ವನಿಗರು – ಈಗ ಗಡಿಯಾರವೂ ಏಳು ಹೇಳಿದ ಮೇಗೆಯೇ ಏಳುದಿದಾ!
ನೆಗೆಮಾಣಿ ಅಂತೂ ಹತ್ತು ಗಂಟೆ ಆದರೂ ಏಳ° ಹೇಳಿ ಬಂಡಾಡಿಅಜ್ಜಿ ನೆಗೆಮಾಡಿಗೊಂಡು ಪರಂಚುಗು –
ಅಜ್ಜಿಗೆ ಈಗ ಪ್ರಾಯ ಆಗಿ ಒರಕ್ಕು ಕಮ್ಮಿ ಆಯಿದು; ಛಳಿ ಇರಲಿ, ಮಳೆ ಇರಲಿ – ನಾಕು ಗಂಟಗೆ ಎದ್ದು ಕೂದೊಂಗು..!
ಅದು ಬೇರೆ ಸಂಗತಿ!

ಅಯ್ಯೋ ರಾಮಾ – ಯಾಲ್ಲಾ!! ಅಯ್ಯೋ ಅಯ್ಯೋ ಅಯೋಧ್ಯಾ…!! 61

ಅಯ್ಯೋ ರಾಮಾ – ಯಾಲ್ಲಾ!! ಅಯ್ಯೋ ಅಯ್ಯೋ ಅಯೋಧ್ಯಾ…!!

ಹ್ಮ್, ಚಾತುರ್ಮಾಸ್ಯದ ಗವುಜಿ ಮುಗಾತು.
ಎರಡು ತಿಂಗಳುಗಳ ಕಾಲ ಒಂದೇ ಜಾಗೆಲಿ ಕೂದಂಡು ಒಂದೇ ಧ್ಯಾನಲ್ಲಿ ರಾಮ-ಲಕ್ಷ್ಮಣ-ಸೀತೆ ಯ ವಿಗ್ರಹವ ಪೂಜೆ ಮಾಡಿಂಡು, ಮನಸ್ಸಿಲಿ ನಿತ್ಯ ರಾಮನ ಧ್ಯಾನ ಮಾಡ್ತ ನಮ್ಮ ಗುರುಗೊ ಚಾತುರ್ಮಾಸ್ಯ ವ್ರತವ ಮುಗುಶಿಗೊಂಡು, ಸೀಮೋಲ್ಲಂಘನ ಮಾಡಿಂಡು ಇಪ್ಪ ಕಾಲ.
ನಮ್ಮ ಬೈಲಿಂದ ಸುಮಾರು ಜೆನ ಹೋಯಿದವು.
ಅಲ್ಯಾಣ ಗವುಜಿ ಎಂತರ ಹೇಳಿಗೊಂಡು ಬಂದ ಮೇಗೆ ಗೊಂತಾಯೆಕ್ಕಷ್ಟೆ.
ಅದಿರಳಿ, ಈ ವಾರಕ್ಕೆ ಎಂತರ ಶುದ್ದಿ ಮಾತಾಡ್ತದು?
ಸಾವಿರಾರು ಒರಿಶ ಇತಿಹಾಸ ಇದ್ದಂಡು, ರಾಮರಾಜ್ಯದ ಕೇಂದ್ರ ಆಗಿಂಡು, ನಮ್ಮೆಲ್ಲರ ಶ್ರದ್ಧಾಭಕ್ತಿಗೆ ಕಾರಣ ಆಗಿಂಡು ಇದ್ದಿದ್ದ, ಸುಮಾರು ಜಗಳಕ್ಕೂ, ಮನಸ್ತಾಪಕ್ಕೂ ಕಾರಣ ಆದ / ಆಗಿಪ್ಪ ನಮ್ಮೆಲ್ಲರ ಪ್ರೀತಿಯ ಅಯೋಧ್ಯೆಯ ಬಗೆಗೆ ರಜ್ಜ ಶುದ್ದಿ ಮಾತಾಡುವೊ, ಆಗದೋ?

ಗೆದ್ದೋರೂ ಸೋತವು; ಸೋತೋರೂ ಸೋತವು!! 38

ಗೆದ್ದೋರೂ ಸೋತವು; ಸೋತೋರೂ ಸೋತವು!!

ನಮ್ಮೋರ ಒಳದಿಕ್ಕೆ ಹೋಕುವರುಕ್ಕು ಇಲ್ಲದ್ದರ ಬಗ್ಗೆ – ಜಗಳಂಗೊ ಇರ್ತಬಗ್ಗೆ ನಾವು ಹಿಂದೆ ಒಂದರಿ ಮಾತಾಡಿಗೊಂಡಿದು. ಅಲ್ಲದೋ?
ಹಾಂಗೇ ಮಾಣಿಪ್ಪಾಡಿಯ ಮಾಣಿಯಂಗಳ ಬಗ್ಗೆಯೂ ಅಂದೊಂದರಿ ಮಾತಾಡಿದ್ದು, ನೆಂಪಿದ್ದೋ?
ಅದೆರಡೂ ಶುದ್ದಿಗೆ ಹತ್ತರೆ ಸಂಬಂದ ಇಪ್ಪ ಶುದ್ದಿ ಈ ವಾರ! 🙁

ಅಷ್ಟೆಂತ ಕೊಶಿಯ ವಿಶಯ ಅಲ್ಲ, ಹೇಳಲೇ ಬೇಜಾರಾವುತ್ತು!
ಎಂತ್ಸರ ಮಾಡುತ್ಸು! ಹೇಳುವೊ ಹೇಳಿ ಕಂಡತ್ತು, ಅದಕ್ಕೆ ಸುರುಮಾಡಿದ್ದು.
ಪೂರ್ತಿ ಹೇಳುಲೆ ಎಡಿತ್ತೋ ಇಲ್ಲೆಯೋ ಗೊಂತಿಲ್ಲೆ. ಎಡಿತ್ತಷ್ಟು ಹೇಳುವೊ°.
ಒಳುದ್ದರ ನಿಂಗೊ ಯೋಚನೆ ಮಾಡಿಗೊಳ್ಳಿ. ಆತೋ?

ಶುಬತ್ತೆಯ ದೇವರೊಳ ನಾಯಿಗೇ ಜಾಗೆ ಇಲ್ಲೆಡ! 84

ಶುಬತ್ತೆಯ ದೇವರೊಳ ನಾಯಿಗೇ ಜಾಗೆ ಇಲ್ಲೆಡ!

ಕುಂಡಡ್ಕಲ್ಲಿ ಅಪುರೂಪದ ದೇವಕಾರ್ಯ ಕಳುದ್ದರ ನಾವು ಕಳುದವಾರ ಮಾತಾಡಿದ್ದು.
ದೊಡ್ಡ ದೇವರೊಳ ಬಟ್ಟಮಾವ ಮಣೆಮಡಿಕ್ಕೊಂಡು ಕೂದು ಮಂತ್ರ ಹೇಳುವಗ,
ಕುಂಡಡ್ಕ ಮಾವ ದೇವರ ಮಂಟಪದ ಎದುರು ಕೂದಂಡು ದೈವೀಕ ಕಾರ್ಯಂಗಳ ಮಾಡುದರೊಟ್ಟಿಂಗೆ,
ಉಂಬಲೆ ಕೂದೋರಿಂಗೆ ಬಳುಸಿ, ದೇವರಿಂಗೂ ಅವಕ್ಕೂ ಉಣುಸಿ, ಸಂತೋಷಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿದ್ದರ –
ಕೂದು ನೋಡಿಗೊಂಡೇ ಇತ್ತಿದ್ದೆ ಮೊನ್ನೆ.
ಆ ಶುದ್ದಿಯ ನಾವು ಮಾತಾಡಿದ್ದನ್ನೇ!

ಅಲ್ಲಿಂದ ಊರಿಂಗೆ ಬಂದೂ ಆತು. ಊರಿಲಿ ಕೆಲವು ಕಾರ್ಯಂಗಳೂ ಕಳಾತು.

ಬಿಂಗಿ ಪುಟ್ಟಂಗೆ ಶಾಲೆ ಮುಗುತ್ತು, ಮುಂದೆಂತರ ?

ಬಿಂಗಿ ಪುಟ್ಟಂಗೆ ಶಾಲೆ ಮುಗುತ್ತು, ಮುಂದೆಂತರ ?

ಹ್ಮ್, ಈ ಬಿಂಗಿ ಪುಟ್ಟನ ಶುದ್ದಿ ನಾವು ಮಾತಾಡಿದ್ದಿಲ್ಲೆ, ಅಲ್ಲದೋ?
ಓ ಮೊನ್ನೆ ಒಂದರಿ ಹೇಳುದೋ ಗ್ರೇಶಿದೆ, ಅಂಬಗ ಅವ° ಪರೀಕ್ಷೆಯ ಅಂಬೆರ್ಪಿಲಿ ಇತ್ತಿದ್ದ°.
ಪರೀಕ್ಷೆ ಇದ್ದರೆ ಯಮನೂ ಕಾದು ಕೂರ್ತ°ನಡ, ಮತ್ತೆ ಅಂಬಗ ಬೇಡ ಹೇಳಿ ಕಂಡತ್ತು! 🙂
ಈಗ ಪರೀಕ್ಷೆ ಎಲ್ಲ ಮುಗುದು ಒಂದು ಸಂಕ್ರಮಣ ಹಂತಕ್ಕೆ ಎತ್ತಿದ°, ಹಾಂಗೆ ಅವನ ಶುದ್ದಿ ಒಂದರಿ ಹೇಳಿಕ್ಕುವೊ° – ಹೇಳಿಗೊಂಡು ಈಗ ಸುರುಮಾಡಿದ್ದು.
~
ಈ ಪುಟ್ಟ ಮೊದಲಾಣ ಹಾಂಗೆ ಈಗ ಬರೇ ಸಣ್ಣ ಏನಲ್ಲ. ಈಗ ರಾಮಜ್ಜನ ಕೋಲೇಜು.
ಮೊದಲಾದರೆ ಸಮ, ಸಣ್ಣ ಶಾಲಗೆ ಹೋಯ್ಕೊಂಡಿದ್ದದು. ಮಹಾ ಲೂಟಿ. ಹಾಂಗೆ ಕೆಲವು ಜೆನ ಲೂಟಿಪುಟ್ಟ° / ಬಿಂಗಿಪುಟ್ಟ° ಹೇಳಿಯೂ ಹೇಳುಗು…

ಪರ್ವ-ಸಾರ್ಥ-ಆವರಣ; ಭರತಪರ್ವದ ಸಾರ್ಥಕತೆಯ ಅನಾವರಣ..! 65

ಪರ್ವ-ಸಾರ್ಥ-ಆವರಣ; ಭರತಪರ್ವದ ಸಾರ್ಥಕತೆಯ ಅನಾವರಣ..!

ಮಾಷ್ಟ್ರುಮಾವನ ಮನೆಲಿ ಓ ಮೊನ್ನೆ ಒಂದು ಜೆಂಬ್ರ ಕಳಾತು!
ನಿಂಗೊಗೆಲ್ಲ ಗೊಂತಿಕ್ಕು, ಅಮೇರಿಕಲ್ಲಿಪ್ಪ ಅವರ ಮಗ° ಅಂಬೆರ್ಪಿಲಿ ಬಂದು, ಮತ್ತೂ ಅಂಬೆರ್ಪಿಲಿ ಮದುವೆ ಆಗಿ, ಅದರಿಂದಲೂ ಅಂಬೆರ್ಪಿಲಿ ಒಪಾಸು ಹೆರಟಾಯಿದು..
ಎಂಗೊ ಎಲ್ಲ ಎಂತ ಆವುತ್ತಾ ಇದ್ದು ಹೇಳಿ ನೋಡುವಗ ಮದುವೆ ಕಳುದು ಬಾಳೆಲಿ ನಾಕು ನಾಕು ಹೋಳಿಗೆ ಬಿದ್ದಿತ್ತಿದ್ದು!! ತಿನ್ನದ್ದೆ ಪೋಕಿಲ್ಲೆ, ಇನ್ನೊಂದು ಬೀಳುಗು.
ಕಟ್ಟಿಕೊಡಿ; ತೆಕ್ಕೊಂಡೋವುತ್ತೆ – ಹೇಳಿದ° ಅಜ್ಜಕಾನಬಾವ° – ಅವಂಗೆ ಆರರಿಂದ ಹೆಚ್ಚಿಗೆ ಒಂದೇ ಸರ್ತಿ ತಿಂಬಲೆಡಿಗಾಯಿದಿಲ್ಲೆಡ.. ಪ್ರುಠ್‌ಸಲಾಡು ಇತ್ತಡ, ಹಾಂಗೆ. ಎಲ್ಲ ಬಿರುದ ಮತ್ತೆ ಹೇಳಿದ°. 🙁
ಅದಿರಳಿ, ಎಂತದೋ ಹೇಳುಲೆ ಹೆರಟು ಎಲ್ಲೆಲ್ಲಿಗೋ ಎತ್ತುತ್ತು!
~

ಮದುವೆ ಕಳಾತು, ಮತ್ತೆ ಒಂದು ವಾರಲ್ಲಿ ಮಾಣಿ ಹೆರಟ°..

ಮನಸಿದ್ದರೆ ಕಲಿವಲೊಂದೇ ’ಗಳಿಗೆ’..! 24

ಮನಸಿದ್ದರೆ ಕಲಿವಲೊಂದೇ ’ಗಳಿಗೆ’..!

ರೂಪತ್ತೆಯ ಮಗ° ಕಳುದ ವಾರ ಊರಿಂಗೆ ಬಂದ ಅಡ!
ಅಜ್ಜಕಾನಬಾವ ಓ ಮೊನ್ನೆ ಕಲ್ಮಡ್ಕ ಅನಂತನ ಮನೆಲಿ ಪೂಜಗೆ ಹೋದಿಪ್ಪಗ ಸಿಕ್ಕಿ ಮಾತಾಡಿದನಾಡ!
ಎಂಗಳತ್ರೆ ಅವ° ಹಾಂಗೇ ಬಂದು ಹೇಳಿ, ಎಂಗೊಗೆ ತಲೆ ಗಿರ್ಮಿಟ್ಟು ಮಾಡಿ ಹಾಕಿದ°:
ಕಳುದ ಟ್ಯೂಸ್-ಡೇ ಈವುನಿಂಗು ಸೆವೆನ್ ಪೀಯಮ್ಮಿಂಗೆ ಅಲ್ಲಿಂದ ವಿಮಾನ ಅಡ, ಎಯಿಟು ಅವರ್ ಜರ್ನಿ ಅಡ, ನಮ್ಮ ಫೋರ್ ಏಯಮ್ಮಿಂಗೆ ಬೆಂಗುಳೂರಿಂಗೆ ಎತ್ತಿದನಡ, ಏರುಪೋರ್ಟಿಂದ ಬಷ್ಟೇಂಡಿಂಗೆ ತರ್ಟಿ ಮಿನಟ್ಸು ಅಡ, ನೈನೋಕ್ಲೋಕು ಬಸ್ಸಡ ಊರಿಂಗೆ, ತ್ರೀತರ್ಟಿ ಪೀಯಮ್ಮಿಂಗೆ ಉಪ್ಪಿನಂಗಡಿಲಿ ಇಳುದನಡ!!
ಉಪ್ಪಿನಂಗಡಿಗೆ ರೂಪತ್ತೆಯ ಕಾರು ಹೋಯಿದನ್ನೇ! ಹಾಂಗೆ ಮನಗೆ ಬಂದನಡ!
ಊರಿಂಗೆ ಎತ್ತಿ ಮತ್ತೆಂತ ಮಾಡಿದನೋ ಒಪ್ಪಣ್ಣಂಗರಡಿಯ…!

ಉಸ್ಸಪ್ಪ!
ಒಂದರಿಯಂಗೇ ಅರ್ತ ಆಗದ್ರೂ, ನಮ್ಮ ಶೇಡಿಗುಮ್ಮೆ ಬಾವ° ವಿವರುಸಿಅಪ್ಪಗ ಆತು!
ರೂಪತ್ತೆಮಗಂಗೆ ಅಲ್ಲಿಂದ ಇಲ್ಲಿಗೆ ಬಪ್ಪದರಿಂದಲೂ ಬಂಙ ಆ ಮಾತುಗೊ ಅರ್ತ ಅಪ್ಪಲೆ ಆತು!

ಬಿದಿಗೆ ರಟ್ಟೆ ಸಂತೆ – ಮಂತ್ರ ಬಾರ ಅಂತೆ ಅಂತೆ! 19

ಬಿದಿಗೆ ರಟ್ಟೆ ಸಂತೆ – ಮಂತ್ರ ಬಾರ ಅಂತೆ ಅಂತೆ!

ಬೈಲಕರೆ ಜೋಯಿಶಪ್ಪಚ್ಚಿ ಮನೆಲಿ ತಿತಿ ಕಳಾತು, ಕಳುದ ವಾರ!
ಈ ಅದಿಕಮಾಸಲ್ಲಿ ಎಲ್ಲಿಯೂ ಜೆಂಬ್ರ ವಿಶೇಷ ಇಲ್ಲೆ, ಹಾಂಗಿರ್ತಲ್ಲಿ ಒರಿಶಾವದಿ ಬತ್ತ ತಿತಿಯೋ,
ಪೂಜೆಯೋ ಮತ್ತೊ ಮಾಂತ್ರ ಇಕ್ಕಷ್ಟೆ ಇದಾ!
ಬೈಲಿಂದ ಕೆಲವು ಹೋಗಿತ್ತಿದ್ದೆಯೊ°, ಊರಿಲೇ ಇದ್ದಂಡು ಪುರುಸೋತಿಲಿಪ್ಪವು.
ಹೋಪಗ ದಾರಿಗೆ ಹೀಂಗೇ ಶುದ್ದಿ ಮಾತಾಡಿಗೊಂಡು ಹೋದ್ದು, ನೇರಂಪೋಕು – ಅದರ ಬಗ್ಗೆ ಕಳುದ ವಾರ
ಮಾತಾಡಿದ್ದು ಇದಾ, ನೀರಿನ ವಿಶಯ!

ತಿತಿ ದಿನ ಮಾತು ಕಂಡಾಬಟ್ಟೆ, ಈ ಸರ್ತಿಯುದೇ ಹಾಂಗೇ ಇತ್ತು.
ಆಚಕರೆ ತರವಾಡು ಮನೆಲಿ ಆದರೆ ಪಿಡಿ ಆಡಿ ಹೊತ್ತುಕಳಗು, ಜೋಯಿಶಪ್ಪಚ್ಚಿಯಲ್ಲಿಗೆ ಈಗ ಪಿಡಿ
ತತ್ತವಿಲ್ಲೆ – ಮಕ್ಕೊ ಹಾಳಾವುತ್ತವು ಹೇಳಿಗೊಂಡು!

ಒಣಗಿದ ಗೆದ್ದೆ ನೋಡಿ ಕೆರೆಯ ತೂಂಬು ಬಿಡುಸಿದವು..! 7

ಒಣಗಿದ ಗೆದ್ದೆ ನೋಡಿ ಕೆರೆಯ ತೂಂಬು ಬಿಡುಸಿದವು..!

ಇದು ಶಂಬಜ್ಜನ ಕಾಲದ ಶುದ್ದಿ, ಅಲ್ಲ ಅದರಿಂದಲೂ ಮದಲಾಣ ವೆಂಕಪ್ಪಜ್ಜನ ಕಾಲದ್ದೋ ಏನೋ! ಕಂಡಿಗೆದೊಡ್ಡಪ್ಪ° ಹೇಳಿದ್ದು ಮೊನ್ನೆ. ಕಂಡಿಗೆದೊಡ್ಡಪ್ಪ, ನೆರಿಯದೊಡ್ಡಪ್ಪನತ್ರೆ ಹೀಂಗಿರ್ತ ಕತೆಗೊ ಸುಮಾರಿರ್ತು. ಹಳಬ್ಬರು, ಹಳಬ್ಬರ – ಹಳಬ್ಬರು ಹೇಳಿಗೊಂಡಿದ್ದ ಅವರ ಹಳಬ್ಬರ ಕತೆಗೊ ಎಲ್ಲವುದೇ ಸ್ಮೃತಿ ಕೋಶಲ್ಲಿ ಒಟ್ಟಾಗಿರ್ತು, ಅಗಾಧ...

ಒಯಿಶಾಕದ ಉರಿಸೆಕಗೆ ಹಾಳೆಬೀಸಾಳೆಯ ತಂಗಾಳಿ..! 13

ಒಯಿಶಾಕದ ಉರಿಸೆಕಗೆ ಹಾಳೆಬೀಸಾಳೆಯ ತಂಗಾಳಿ..!

ಯಬಾ, ಒಯಿಶಾಕದ ಅಬ್ಬರ. ಸೆಕೆಯೋ ಸೆಕೆ – ಉರಿ ಸೆಕೆ.
ಎಂತದೂ ಬೇಡ, ಯೇವದಕ್ಕೂ ಮನಸ್ಸು ಕೇಳ್ತಿಲ್ಲೆ.
ಸೀತ ಹೋಗಿ ನೀರ ಗುಂಡಿಲಿ ಹೋಗಿ ಬಿದ್ದುಗೊಂಬ ಕಾಣ್ತು, ತರವಾಡುಮನೆ ಗೋಣಂಗಳ ಹಾಂಗೆ!
ಚೆ, ಅವರ ಜೀವನ ಎಷ್ಟು ಆರಾಮ! – ಅಜ್ಜಕಾನ ಬಾವಂಗೆ ಬೇಜಾರಾವುತ್ತು ಒಂದೊಂದರಿ.

ಕಾಲ ನಿಲ್ಲುತ್ತೋ – ಚಳಿಗಾಲ, ಮಳೆಗಾಲ, ಒಯಿಶಾಕ – ಮೂರನ್ನೂ ಕೊಟ್ಟೇ ಕೊಡ್ತು.
ಆಯಾ ಕಾಲಕ್ಕೆ ನಮ್ಮ ಜನಜೀವನ ಅದಕ್ಕೆ ಹೊಂದಿಗೊಳೆಕ್ಕು / ಹೊಂದಿಗೊಳ್ತು.
ಬೇಗ ಹೊಂದಿಗೊಂಡವ ಉಶಾರಿ, ನಿಧಾನಕ್ಕೆ ಹೊಂದಿಗೊಂಬವ ಕಷ್ಟಪಡ್ತ!
ಶಿವರಾತ್ರಿ ಕಳಾತು ಹೇಳಿ ಆದರೆ ಚಳಿ ಹೋತು ಹೇಳಿಯೇ ಅರ್ತ. ಹಾಂಗೇ ಆಯಿದುದೇ!
ಕಳುದ ವಾರ ಅಂತೂ ಬೆಶಿಲಿನ ದಗೆ ಹೇಳಿಕ್ಕಲೆಡಿಯ – ಸಿಕ್ಕಾಪಟ್ಟೆ…

ಕೋಟಿಯ ಪುಳ್ಳಿ ಬರತನಾಟ್ಯಲ್ಲಿ ಪಷ್ಟಡ…! 6

ಕೋಟಿಯ ಪುಳ್ಳಿ ಬರತನಾಟ್ಯಲ್ಲಿ ಪಷ್ಟಡ…!

ಎಲ್ಲ ನೆರೆಕರೆಯ ಹಾಂಗೆ, ನಮ್ಮ ನೆರೆಕರೆಲಿದೇ ಎಲ್ಲರುದೇ ಇರ್ತವು.
ಪೂಜೆ ಮಾಡ್ತ ಬಟ್ಟಮಾವನಿಂದ ಹಿಡುದು, ಬೂತಕಟ್ಟುತ್ತ ಕೋಟಿಯ ಒರೆಂಗೆ..
ಎಣ್ಣೆ ತೆಗೆತ್ತ ಪಾಟಾಳಿಂದ ಕಳ್ಳು ತೆಗೆತ್ತ ಸಂಕಪ್ಪುವಿನ ಒರೆಂಗೆ..
ಹೂಗು ಮಾರ್ತ ರೋಸಮ್ಮನಿಂದ – ಮರ ಕಡಿತ್ತ ಇಬ್ರಾಯಿಯ ಒರೆಂಗೆ – ಎಲ್ಲರುದೇ..!
ಊರೇ ಹಾಂಗೇ ಅಲ್ಲದೋ – ಸಮಷ್ಟಿಯ ಜೀವನ!

ಈಗಾಣ ಈ ಇಪ್ಪತ್ತೊಂದನೇ ಶೆತಮಾನ ಹೇಳಿತ್ತುಕಂಡ್ರೆ, ತೀರಾ ಮದಲಾಣ ಹಾಂಗೆ – ಇಂತವಂಗೆ ಇಂತಾದ್ದೇ – ಹೇಳಿ ಏನೂ ಇಲ್ಲೆ.
ಮದಲಿಂಗೆ ಆದರೆ ಸಮ – ಬಟ್ಟಮಾವನ ಮಗ ಬಟ್ಟತ್ತಿಗೆ ಕಲಿತ್ತದು. ಜೋಯಿಷಪ್ಪಚ್ಚಿಯ ಮಗ ಜೋಯಿಷತ್ತಿಗೆ (ಜ್ಯೋತಿಷ್ಯ) ಕಲಿತ್ತದು, ಗುರುಗಳ ಮಗ ಅಧ್ಯಯನ ಮಾಡಿ ಅಧ್ಯಾಪನ ಸುರುಮಾಡುದು, ಓಡಾರಿಯ ಮಗ ಮಣ್ಣಳಗೆ ಮಾಡುದು, ಹೀಂಗೆ..
ಈ ಕೆಲಸಂಗಳಿಂದಾಗಿ ‘ಇಂತ ಪಂಗಡದವಂಗೆ ಇಂತ ಕೆಲಸ’ ಹೇಳುದು ನಿಗಂಟಾತು.
ಆರುದೇ ಮಾಡಿದ್ದಲ್ಲ, ಅದರಷ್ಟಕ್ಕೇ ಆದ್ದದು!

ಶಂಬಜ್ಜನ ಕಾಂಬುಗೆ ನಿತ್ಯವೂ ‘ಪ್ರೇಮಿಗಳ ದಿನ’ …!! 27

ಶಂಬಜ್ಜನ ಕಾಂಬುಗೆ ನಿತ್ಯವೂ ‘ಪ್ರೇಮಿಗಳ ದಿನ’ …!!

ಆಚಕರೆ ತರವಾಡುಮನೆಯ ಶಂಬಜ್ಜº ಈಗ ಇಲ್ಲೆ!
ಅವರ ಯೆಜಮಾಂತಿ ಕಾಂಬುಅಜ್ಜಿಯುದೇ ಇಲ್ಲೆ..!!
‘ಒಪ್ಪಣ್ಣ ಅತ್ತೆಕ್ಕಳ ಶುದ್ದಿ ಬಾರೀ ಜೋರು ಮಾತಾಡ್ತº’ ಹೇಳಿ ಅಜ್ಜಕಾನಬಾವ ಕೋಂಗಿ ಮಾಡ್ತºಲ್ದ, ಅದಕ್ಕೆ ಈ ವಾರ ಅಜ್ಜಿಯ ಬಗ್ಗೆ. 😉
ಶಂಬಜ್ಜನ ಶ್ರಮಕ್ಕೆ ಹೆಗಲಾಗಿ, ಧರ್ಮಕ್ಕೆ ಸಹಚಾರಿಣಿ ಆಗಿ ಜೀವನವ ಸೌಖ್ಯಲ್ಲಿ ಕಳದ ಆ ಕಾಂಬುಅಜ್ಜಿಯ ಶುದ್ದಿ ಈ ವಾರ ಮಾತಾಡುವೊº!

ಈ ಅಜ್ಜಿದು ನಿಜವಾಗಿ ಮೂಕಾಂಬಿಕಾ ಹೇಳಿ ಹೆಸರು. ಆದರೆ, ಸಣ್ಣ ಇಪ್ಪಗಳೇ ದಿನಿಗೆಳಿದ ಅಡ್ಡಹೆಸರು ‘ಕಾಂಬು’ ಜೀವಮಾನ ಇಡೀ ಗಟ್ಟಿ ನಿಂದಿದು.
ನಾಮಕರಣದ ದಿನ ಬಟ್ಟಮಾವº ಮಾಂತ್ರ ಅವರ ಪೂರ್ತಿ ಹೆಸರು ಹೇಳಿದ್ದಾಯಿಕ್ಕು ಆ ಮನೆಲಿ – ಮತ್ತೆ ಆರುದೇ ಆ ಹೆಸರು ಬಳಸಿದ್ದಿರವು…