Tagged: sharma

ಎಷ್ಟೇ ವ್ಯವಧಾನ ಇದ್ದರೂ, ಅಷ್ಟಾವಧಾನ ಕಷ್ಟವೇ…! 21

ಎಷ್ಟೇ ವ್ಯವಧಾನ ಇದ್ದರೂ, ಅಷ್ಟಾವಧಾನ ಕಷ್ಟವೇ…!

ಅವಧಾನಲ್ಲಿ ಹೆಚ್ಚಾಗಿ ಇಪ್ಪದು ಆಶುಕವಿತ್ವವೇ ಆದರೂ, ಇದೊಂದು ಸುತ್ತು ಅದಕ್ಕೆ ಹೇಳಿಯೇ ಇಪ್ಪಂತಾದ್ದು; ಆಶುಕವಿತೆ – ಹೇದು.
ಕೊಟ್ಟ ಸನ್ನಿವೇಶವ, ಸಂದರ್ಭವ ವರ್ಣನೆ ಮಾಡಿಂಡು ಕೊಟ್ಟ ಛಂದಸ್ಸು / ಆಧುನಿಕ ಕಾವ್ಯಂಗಳ ರೂಪಲ್ಲಿ ರಚನೆ ಮಾಡೇಕಾದ್ಸು ಆಶುಕವಿತ್ವ. ವಿದ್ವಾನಣ್ಣನ ಪ್ರಕಾರ, ಎಲ್ಲಾ ಅವಧಾನಿಗೊಕ್ಕೂ ಇದೊಂದು ಮೂಲಭೂತ ಸಾಮರ್ಥ್ಯ.

ರುದ್ರ ಗೀತೆ : (ಅನುವಾಕ – 10) 5

ರುದ್ರ ಗೀತೆ : (ಅನುವಾಕ – 10)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -10

ರುದ್ರ ಗೀತೆ : (ಅನುವಾಕ – 08) 4

ರುದ್ರ ಗೀತೆ : (ಅನುವಾಕ – 08)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -8

ರುದ್ರ, ಚಮಕಾಧ್ಯಾಯ ಭಾಷ್ಯ. 11

ರುದ್ರ, ಚಮಕಾಧ್ಯಾಯ ಭಾಷ್ಯ.

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಂಕಲ್ಪ ಮತ್ತೆ ಪ್ರೇರಣೆಂದಾಗಿ ನಮ್ಮ ಸಮಾಜಲ್ಲಿ ರುದ್ರ ‘ಕ್ರಮ ಪಾಠ’ ಕಲಿತ್ತವರ ಸಂಖ್ಯೆ ಜಾಸ್ತಿ ಆವ್ತಾ ಇದ್ದು. ಉದ್ಯೋಗಲ್ಲಿ ಇಪ್ಪವು, ಡಾಕ್ಟ್ರಕ್ಕೊ, ಎಂಜಿನಿಯರ್ ಗೊ, ವಿದ್ಯಾರ್ಥಿಗೊ, ಸಮಾಜದ ವಿವಿಧ ಸ್ತರಲ್ಲಿ ಇಪ್ಪ ಬೇರೆ ಬೇರೆ...

ರುದ್ರ ಗೀತೆ : (ಅನುವಾಕ – 07) 8

ರುದ್ರ ಗೀತೆ : (ಅನುವಾಕ – 07)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -7

ಒಪ್ಪಣ್ಣನ ಬೈಲಿಲ್ಲಿ ಒಂದು ಸ್ವಗತ… 37

ಒಪ್ಪಣ್ಣನ ಬೈಲಿಲ್ಲಿ ಒಂದು ಸ್ವಗತ…

ಹಾಂಗೆ ಮಾರ್ಚ್ 5 ರ ಒಂಭತ್ತು ಗಂಟೆಯ ಶುಭ ಗಳಿಗೆಲಿ ಮೊದಲಾಣ ಸೆಸಿ, ಬೈಲಿಲ್ಲಿ ನೆಟ್ಟು ಆತು. ಅದಕ್ಕೆ ನಮ್ಮ ನೆರೆಕರೆಯವು ಬಂದು ನೀರು ಗೊಬ್ಬರ ಹಾಕಿ ಪೋಚಕಾನ ಮಾಡಿದವು. ಇನ್ನೂದೆ ಸೆಸಿ ನೆಡ್ಲಕ್ಕು ಹೇಳಿ ಧೈರ್ಯ ಬಂತು.

ಗೋಕರ್ಣಕ್ಕೊಂದು ಪ್ರಯಾಣ, ರುದ್ರ ಸಮರ್ಪಣೆ 29

ಗೋಕರ್ಣಕ್ಕೊಂದು ಪ್ರಯಾಣ, ರುದ್ರ ಸಮರ್ಪಣೆ

ಲಘುನ್ಯಾಸ ಆಗಿ, ಏಕ ಸ್ವರಲ್ಲಿ ಸುರು ಮಾಡಿದೆಯೊ° “ಓಂ ನಮೋ ಭಗವತೇ ರುದ್ರಾಯ….”

ರುದ್ರ ಗೀತೆ : (ಅನುವಾಕ – 06) 12

ರುದ್ರ ಗೀತೆ : (ಅನುವಾಕ – 06)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -6

ರುದ್ರ ಗೀತೆ : (ಅನುವಾಕ – 05) 5

ರುದ್ರ ಗೀತೆ : (ಅನುವಾಕ – 05)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ” – ಅನುವಾಕ -5

ರುದ್ರ ಗೀತೆ : (ಅನುವಾಕ – 04) 9

ರುದ್ರ ಗೀತೆ : (ಅನುವಾಕ – 04)

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಶ್ರೀ ರುದ್ರ ಗೀತೆ”

e-ಬೇಂಕ್-ಡೆಬಿಟ್ ಕಾರ್ಡ್ 26

e-ಬೇಂಕ್-ಡೆಬಿಟ್ ಕಾರ್ಡ್

ನಮ್ಮ ಕಾಲವ ರೆಜಾ ಹಿಂದಂಗೆ ಓಡಿಸಿರೆ, ಅಂದ್ರಾಣ ಕಾಲಲ್ಲಿ ನವಗೆ ಪೈಸೆ ಅಗತ್ಯ ಇಪ್ಪಗ ಬೇಂಕಿನ ವ್ಯವಹಾರ ಹೇಂಗೆ ಇತ್ತಿದ್ದು ಹೇಳಿ ಆಲೋಚನೆ ಮಾಡುವೊ°. ನಮ್ಮ ಅಗತ್ಯಕ್ಕೆ ಬೇಕು ಹೇಳಿ ನಾವು ಬೇಂಕಿಲ್ಲಿ ಪೈಸೆ ಮಡುಗುವದು ಮೊದಲಿಂದಲೇ ಬಂದ ರೂಢಿ. ಬೇರೆ...

ಅಂಗವಿಕಲರಿಂಗೆ  ಸಹಾಯ ಹಸ್ತವ ಸದಾ ನೀಡುವ ಕೊಡಕ್ಕಲ್ ಶಿವಪ್ರಸಾದ 10

ಅಂಗವಿಕಲರಿಂಗೆ ಸಹಾಯ ಹಸ್ತವ ಸದಾ ನೀಡುವ ಕೊಡಕ್ಕಲ್ ಶಿವಪ್ರಸಾದ

ಸಾದಿಸೆಕ್ಕು ಹೇಳ್ತ ಛಲ ಇದ್ದರೆ ಅಂಗ ವಿಕಲತೆ ಶಾಪ ಅಲ್ಲ ಹೇಳಿ ಜಗತ್ತಿಂಗೆ ತೋರಿಸಿ ಕೊಟ್ಟವು ಶಿವಮೊಗ್ಗಲ್ಲಿ ಸಮಾಜ ಸೇವಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಇಪ್ಪ ಕೊಡಕ್ಕಲ್ ಶಿವಪ್ರಸಾದ.
ತಾವು ಮಾತ್ರ ಅಂಗ ವೈಕಲ್ಯವ ಮೆಟ್ಟಿ ಎದ್ದು ನಿಂದದಲ್ಲದ್ದೆ ಹಲವಾರು ವಿಕಲ ಚೇತರಿಂಗೆ ಧೈರ್ಯ ಹೇಳುವ ಮತ್ತೆ ದಾರಿ ತೋರುಸುವ ಕೆಲಸ ನಿರಂತರವಾಗಿ ಮಾಡ್ತಾ ಇದ್ದವು.

ಈ ನಿಟ್ಟಿಲ್ಲಿ ಅವು ಅನೇಕ ಸರಕಾರೇತರ ಸಂಘ ಸಂಸ್ಥೆಗಳೊಟ್ಟಿಂಗೆ ತನ್ನ ಗುರುತಿಸಿಗೊಂಡು, ಅಗತ್ಯ ಇಪ್ಪವಕ್ಕೆ ಸಹಾಯ ಹಸ್ತ ಜೋಡುಸುತ್ತ ಇದ್ದವು.

ಮಾವಿನ ಕಾಯಿ ಚಿತ್ರಾನ್ನ, ಹಸಿರು ಚಾಯ 19

ಮಾವಿನ ಕಾಯಿ ಚಿತ್ರಾನ್ನ, ಹಸಿರು ಚಾಯ

ಆದಿತ್ಯವಾರ ಪೇಪರಿಲ್ಲಿ ಜೋಶಿಯ “ಪರಾಗ ಸ್ಪರ್ಷ” ಓದಿಂಡು ಇಪ್ಪಗ ಎನ್ನ “ಶ್ರೀಶ” ಬಂದ.
ಆನೂ ಶ್ರೀಶನೂ ಹೆಚ್ಚಾಗಿ ಒಟ್ಟಿಂಗೆ ಇಪ್ಪದು. ನಮ್ಮ ಬೈಲಿಂಗೆ ಒಂದೆರಡಿ ಸರ್ತಿ ಬಂದು ಒಪ್ಪ ಕೊಟ್ಟಿಕ್ಕಿ ಹೋಯಿದ. ಆನೂ ಅವನೂ ಚೆಙಾಯಿಗೊ ಹೇಳ್ತಕ್ಕಿಂತಲೂ ಹೆಚ್ಚು ಆತ್ಮೀಯರು. ಎನ್ನ ಅವ “ಶರ್ಮ” ಹೇಳಿಯೇ ದೆನುಗೊಳಿರೆ ಆನು ಅವನ “ಶ್ರೀಶ” ಹೇಳಿಯೇ ದೆನಿಗೊಳುದು. ತುಂಬಾ ಹತ್ತರೆ ಆದ ಮತ್ತೆ ಸಂಬಂಧ ಹೇಳಿ ಹೇಳುದಕ್ಕಿಂತಲೂ ನಿಜ ಹೆಸರೋ ಅಡ್ಡ ಹೆಸರೋ ಹಿಡುದು ಮಾತಾಡ್ಸಿ ಹೋವ್ತಷ್ಟೆ ಅಲ್ಲದ. ಹಾಂಗೆ. ಒಂದೇ ಪ್ರಾಯದವು, ಒಟ್ಟಿಂಗೇ ಇಪ್ಪವು, ಒಂದೇ ಅಭಿರುಚಿಯವು. ಎಲ್ಲವುದೇ. ಇಲ್ಲೇ ಹತ್ರೆ ಮನೆ ಮಾಡಿಂಡು ಇದ್ದ.
ಎಂತ ಶ್ರೀಶ ಆಸರಿಂಗೆ ಬೇಕಾ ಕೇಳಿದೆ.

ಸಮಯ, ಚೈನ್, ಬ್ಲೇಡ್, ಮುಂಡಾಸು, ಟೊಪ್ಪಿ ಇತ್ಯಾದಿ… 5

ಸಮಯ, ಚೈನ್, ಬ್ಲೇಡ್, ಮುಂಡಾಸು, ಟೊಪ್ಪಿ ಇತ್ಯಾದಿ…

ಆನೆಯ ಕ್ರಯ ಮಾಡುವ ಬಗ್ಗೆ ಒಪ್ಪಣ್ಣಲ್ಲಿ ಒಂದು ಲೆಕ್ಕ ಕೊಟ್ಟಿ ಅಲ್ಲದಾ, ಅದರಲ್ಲಿ ಬಙ ಎಂತ ಇದ್ದು. Excell sheet ಲ್ಲಿ ಆನು ಒಂದೇ ನಿಮಿಷಲ್ಲಿ ಮಾಡಿ ಕೊಡುವೆ, ಶರ್ಮ ಮಾವ” ಹೇಳಿದ 2 ನೇ ವರ್ಷ PUC ಕಲಿವ ನೆರೆಕರೆ ಮಾಣಿ.

ಖಂಡಿತಾ ಎಡಿಗು ಮಾಣಿ, ದೊಡ್ಡ ಲೆಕ್ಕ ಎಂತ ಅಲ್ಲ ಅದು. ಲೆಕ್ಕ ಮಾಡ್ಲೆ ಹೇಳಿ ಅಪ್ಪಗ ನಿನಗೆ ಅದಕ್ಕೆ ಒಂದು ಉತ್ತರ ಸಿಕ್ಕೆಕ್ಕು ಹೇಳಿ ಕಾರ್ಯ ರೂಪಕ್ಕೆ ಇಳುಸಿದೆ. ಆದರೆ ನಾವು ಅದರ ನಮ್ಮ ಜೀವನಲ್ಲಿ ಹೇಂಗೆ ಅಳವಡುಸುತ್ತು ಹೇಳುವದರಲ್ಲಿ ಇಪ್ಪದು ಹೇಳಿದೆ.
ನೀನು ಈಗ II PUC ಲಿ ಕಲಿತ್ತಾ ಇಪ್ಪದಲ್ಲದ, ಮೊನ್ನೆ I PUC ಪರೀಕ್ಷೆಗೆ ಅಪ್ಪಗ ಇರುಳು ಇಡೀ ಕೂದೊಂಡು ಎಂತಕೆ ಓದಿದೆ? ಅಂದಂದ್ರಾಣದ್ದು ಅಂದಂದು ಕಲ್ತಿದ್ದರೆ ಈ ಬಙ ಬತ್ತಿತ್ತಾ? ಕೇಳಿದೆ.

ಕಣ್ಯಾರಲ್ಲಿ ಒಂದು ಸುತ್ತು.. 31

ಕಣ್ಯಾರಲ್ಲಿ ಒಂದು ಸುತ್ತು..

ಮೊನ್ನೆ ಶೇಡಿಗುಮ್ಮೆ ಭಾವ ಮನಗೆ ಬಂದಿತ್ತಿದ್ದ (ನಮ್ಮ ಬೈಲಿಂಗೆ ಗೊಂತಿಪ್ಪವ ಅಲ್ಲ).
ಎಂಗೊ ಇಬ್ರೂ, ಆನು ಹುಟ್ಟಿದಲ್ಲಿಂದ ಡಿಗ್ರಿ ಮುಗುಸುವವರೆಗೆ ಒಂದೇ ಮನೆಲಿ ಬೆಳದವು, ಒಟ್ಟಿಂಗೆ ಆಡಿದವು, ಓದಿದವು. ಒಂದೇ ಶಾಲೆ, ಒಂದೇ ಕ್ಲಾಸ್, ಒಂದೇ ಕಾಲೇಜ್, ಒಂದೇ ಹೋಸ್ಟೆಲ್, ಒಂದೇ ರೂಂ. ಸಣ್ಣ ಇಪ್ಪಗ ಸಣ್ಣ ಸಣ್ಣ ಜಗಳಂಗೊ ಮಾಡಿದ್ದಿಲ್ಲೆ ಹೇಳ್ಲೆ ಎಡಿಯ. ಎಲ್ಲಿಗೆ ಹೋವುತ್ತರೂ ಒಟ್ಟೊಟ್ಟಿಂಗೆ. ನಿಂಗೊ ಅಣ್ಣ ತಮ್ಮಂದಿರೋ? ಆರು ಅಣ್ಣ, ಆರು ತಮ್ಮ ಹೇಳಿ ಕೇಳಿದವು ಎಷ್ಟೋ ಜನಂಗೊ. ಅಷ್ಟೊಂದು ಅನ್ಯೋನ್ಯತೆ. ಪ್ರಾಯಲ್ಲಿ 5 ತಿಂಗಳಿಂಗೆ ಅವ ದೊಡ್ಡವ. ಎನ್ನ ಮಾವನ ಮಗನೇ ಅಲ್ಲದ. ರಜ ಸಾಮ್ಯತೆ ಇಲ್ಲದ್ದೆ ಇರ ಕಾಂಬವಕ್ಕೆ.