Tagged: ಶುದ್ದಿಗೊ

ಬೆಶಿ ಬೆಶಿ ಶುದ್ದಿಗೊ.. (ತಣುದಿದ್ದರೆ ಬೆಶಿಮಾಡಿಗೊಳ್ಳಿ!)

ಕನ್ನಟಿಯೊಳಾಣ ಶುದ್ದಿಯ “ಗೆಂಟು” – ಕೈಯೊಳ..! 15

ಕನ್ನಟಿಯೊಳಾಣ ಶುದ್ದಿಯ “ಗೆಂಟು” – ಕೈಯೊಳ..!

ಕಣ್ಣಾಟಿಯೊಳದಿಕೆ ಇದ್ದಿದ್ದ ಶುದ್ದಿಯ ಗೆಂಟು ಪುಸ್ತಕ ರೂಪಕ್ಕೆ ಇಳುದು ಕೈಯೊಳ ಅಪ್ಪ ಸಂದರ್ಭಲ್ಲಿ ಬೈಲಿನ ಎಲ್ಲಾ ಒಪ್ಪಣ್ಣ ಒಪ್ಪಕ್ಕಂದ್ರೂ ನಮ್ಮ ಒಟ್ಟಿಂಗೆ ಇರೇಕು ಹೇಳ್ತದು ಅಪೇಕ್ಷೆ. ಒಪ್ಪಣ್ಣನ ಒಪ್ಪಂಗಳೂ, ಹದಿನಾರು ಸಂಸ್ಕಾರಂಗಳೂ ನಮ್ಮ ಮನಸ್ಸಿಂಗೆ ಇಳುದು, ಸಂಸ್ಕಾರವಂತರಾಗಿ, ಸನಾತನಿಗೊ ಆಗಿಪ್ಪೊ°.
ಅಂಬಗ, ನಾಳ್ತು ಶೆನಿವಾರ ಎಲ್ಲೋರುದೇ ಮಠಕ್ಕೆ ಬನ್ನಿ. ಮಜ್ಜಾಂತಿರುಗಿ ಇಪ್ಪ “ಬೈಲಿನ ಪುಸ್ತಕ ಬಿಡುಗಡೆ” ಕಾರ್ಯಕ್ರಮವ ಎಲ್ಲೋರುದೇ ನೋಡುವೊ. ಗುರುಗೊ ಆಶಿರ್ವಾದ ಮಾಡುವಗ ಪಡಕ್ಕೊಂಬೊ.
ಹರೇರಾಮ.

ರೂವಿ-ಮುಕ್ಕಾಲು-ಆಣೆ: ಪೈಶೆಲೆಕ್ಕ ಕಾಣೆ, ದೇವರಾಣೆ..! 15

ರೂವಿ-ಮುಕ್ಕಾಲು-ಆಣೆ: ಪೈಶೆಲೆಕ್ಕ ಕಾಣೆ, ದೇವರಾಣೆ..!

ಮೊನ್ನೆ ಕೊಳಚ್ಚಿಪ್ಪು ಭಾವನ ಮದುವೆ ಕಳಾತೋ – ಅದೇ ದಿನ ಕುಕ್ಕುಜೆಲಿ ಸಟ್ಟುಮುಡಿ. ನವಗೆಲ್ಲ ಎರಡೆರಡರನ್ನೇ ಒಟ್ಟೊಟ್ಟಿಂಗೆ ಸುದರ್ಸಿಕ್ಕಲೆ ಎಡಿತ್ತಿಲ್ಲೆ, ಈ ಮಾಪ್ಳೆಗೊ ನಾಕರ ಹೇಂಗೆ ಸುದಾರುಸುತ್ತವಪ್ಪಾ – ಹೇಳಿ ಸುಭಗಣ್ಣ ಮೀಸೆಡೆಲಿ ನೆಗೆಮಾಡಿದ್ದು ಸತ್ಯ! ಕೊಳಚ್ಚಿಪ್ಪು ಮದುವೆಗೆ ಬಂದ ಅಡ್ಕತ್ತಿಮಾರುಮಾವ,...

ನಿಷ್ಠೆಯ ದೇವಸ್ಥಾನಲ್ಲಿ ’ಕಮ್ಮಿನಿಷ್ಟೆ’ಯ ವಾಸನೆ..!? 33

ನಿಷ್ಠೆಯ ದೇವಸ್ಥಾನಲ್ಲಿ ’ಕಮ್ಮಿನಿಷ್ಟೆ’ಯ ವಾಸನೆ..!?

ಹೋಪ್ಪ!! ಒಂದು ತಿಂಗಳು ಕಳುದು ಮೊನ್ನೆ ಓಟಿನ ಲೆಕ್ಕಾಚಾರ ಅಪ್ಪನ್ನಾರ ಅದೊಂದು ಕಾದುನೋಡ್ಳೆ ಬಾಕಿಒಳುದಿತ್ತು. ದೊಡ್ಡಬಾವ° ಮದಲೇ ಹೇಳಿಗೊಂಡಿತ್ತಿದ್ದ° ‘ಇನ್ನೂ ಸಮಯ ಬಯಿಂದಿಲ್ಲೆ; ಕುದ್ಕ° ಕಾದ ಹಾಂಗೆ ಕಾದು ನೋಡ್ಳೆ ಎಂತೂ ಇಲ್ಲೆ, ಉಪವೀತಿ-ಪ್ರಾಚೀನಾವೀತಿ  ಹೇಳಿ ತಿತಿದಿನ ಬಟ್ಟಮಾವ° ಹೇಳಿದ ನಮುನೆ...

ಲಡಾಯಿ ಕಟ್ಟಿದ ಲಾಡೆನ್ನಿನ ತಿಂಬಗ ಮೀನುಗಳೂ ಲಡಾಯಿ ಮಾಡಿಕ್ಕೋ? 34

ಲಡಾಯಿ ಕಟ್ಟಿದ ಲಾಡೆನ್ನಿನ ತಿಂಬಗ ಮೀನುಗಳೂ ಲಡಾಯಿ ಮಾಡಿಕ್ಕೋ?

ಮೊನ್ನೆ ದೇಂತಡ್ಕಲ್ಲಿ ಗವುಜಿ ಗಮ್ಮತ್ತು. ಬೈಲಿಂದ ಗಣೇಶಮಾವ, ಆಚಮನೆ ದೊಡ್ಡಣ್ಣ, ಬಲ್ನಾಡುಮಾಣಿ – ಎಲ್ಲೋರುದೇ ಹೋಗಿತ್ತವಿದಾ. ಅಯಿದು ಯಜ್ಞಂಗೊ ಇದ್ದಾಡ, ಅದಕ್ಕೆ ಐದು ಜೆನ ಅಧ್ವರ್ಯುಗೊ ಅಡ, ಗುರುಗೊ ಬತ್ತವಡ. ಅವು ಇದ್ದೇ ಪೂರ್ಣಾಹುತಿ ಅಪ್ಪದಾಡ –  ಹೀಂಗೆಲ್ಲ ಮಾತಾಡಿಗೊಂಡವು ಬೈಲಿಲಿ....

ಇರುವಾರ : ಶುದ್ದಿ ಹೇಳುಗಾ..? 12

ಇರುವಾರ : ಶುದ್ದಿ ಹೇಳುಗಾ..?

ಮೊದಲಾಣದ್ದಕ್ಕೆ ಒಪ್ಪ ಬಂದದರಿಂದ ಪ್ರೇರಿತ – ಈಗ ಇದಾ, ಎರಡ್ಣೇ ತುಂಡು.

ಅವನ ಕಂಡ್ರೆ ಆವ್ತಿಲ್ಲೆ ಎನಗೆ. , ಎರಡ್ಡು ಮಡುಗೆಕು. 15

ಅವನ ಕಂಡ್ರೆ ಆವ್ತಿಲ್ಲೆ ಎನಗೆ. , ಎರಡ್ಡು ಮಡುಗೆಕು.

ಎಂತಾರು ಅವಂಗೆ ಇನ್ನು ಎರಡು ಒಗೇಕು ಹೇಳಿ ಅಪ್ಪದು. ಗಡಿಬಿಡಿ ಮಾಡಿ ನಿಂಗೊ ಇದರ ಮಾಡಿದಿರೋ ಮತ್ತೆ ‘ಕೆಟ್ಟತ್ತನ್ನೆ ಮುಕುಟ’ ಅಕ್ಕು…

ಶಾಲಗೆ ಸೇರ್ಸಲೆ ಅಂಬೇರ್ಪು ಮಾಡಿಕ್ಕೆಡಿ 11

ಶಾಲಗೆ ಸೇರ್ಸಲೆ ಅಂಬೇರ್ಪು ಮಾಡಿಕ್ಕೆಡಿ

ಮಕ್ಕಳ ವಿಷಯಲ್ಲಿ ರಜಾ ಯೋಚನೆ ಮಾಡುವ° ಆಗದೋ?

ಇದಾ ಯಕ್ಷಗಾನ.. 7

ಇದಾ ಯಕ್ಷಗಾನ..

ಆದರೆ , ಈ ಯಕ್ಷಗಾನ ಕೂಟಕ್ಕೋ ಆಟಕ್ಕೋ ಜೆನ ಸೇರೋದೆಷ್ಟು?!

ಹುಂಡು ಪದ್ಯಂಗೊ. 19

ಹುಂಡು ಪದ್ಯಂಗೊ.

ಅಲ್ಲ ನೋಡಿ ಇದು ಗದ್ಯ
ಇದ್ರಿಂದ ಹೆಚ್ಚಿಗೆ ಎನಗೆ ಅಸಾಧ್ಯ

ಎಂಗಳದ್ದು ಚೆನ್ನೈ., ನಿಂಗಳದ್ದೋ ?! 17

ಎಂಗಳದ್ದು ಚೆನ್ನೈ., ನಿಂಗಳದ್ದೋ ?!

ಇದಾ ಹೀಂಗೇ ಗುರುಟಿಯೊಂಡು ಇಪ್ಪಗ ಎನಕಂಡತ್ತು – ನಾವೆಲ್ಲಿ ಇಪ್ಪದು, ಇಲ್ಲ್ಯಾಣ ವಿಶೇಷ ಎಂತರ ಹೇಳಿ ನೋಡುವ ತಿಳಿವ ಹೇದು.

ನಮ್ಮ ಬಾವುಟವ ಹೀಂಗೂ ಮಾಡುಲಕ್ಕೋ 11

ನಮ್ಮ ಬಾವುಟವ ಹೀಂಗೂ ಮಾಡುಲಕ್ಕೋ

ಈ ಪಟ ಕಂಡದು ನಮ್ಮ ದೊಡ್ಡಗೌಡ್ರ ಸಣ್ಣ ಮಗನ ಊರಿಲಿ..

ಅಂತರ್ವಾಣಿ 17

ಅಂತರ್ವಾಣಿ

ಇಷ್ಟು ದಿನ ಅಧ್ಯಾತ್ಮ ವಿಷಯಲ್ಲಿ ಶುದ್ಧಿ ಹೇಳಿದ್ದಿಲ್ಲೆ.ಹಾಂಗೆ ಈ ಸರ್ತಿ ಎನ್ನ ಅನುಭವದ ಒಂದು ವಿಷಯದ ಬಗ್ಗೆ ಶುದ್ಧಿ ಹೇಳ್ತೆ.

ತಿಂಗಳು ಮುಗಿತ್ತ ಶೆಂಕ್ರಾಂತಿ, ತಿಂಗಳು ಸುರು ಆವುತ್ತ ತಿಂಗ್ಳೋಡು! 53

ತಿಂಗಳು ಮುಗಿತ್ತ ಶೆಂಕ್ರಾಂತಿ, ತಿಂಗಳು ಸುರು ಆವುತ್ತ ತಿಂಗ್ಳೋಡು!

ಚಳಿಗಾಲದ ಛಳಿ, ಧನುರ್ಮಾಸದ ಮುರುಟಾಣ, ಧನುಪೂಜೆಯ ವಿಶೇಷ – ಇದೆಲ್ಲ ನಾವು ಕಳುದ ವಾರ ಮಾತಾಡಿಕ್ಕಿದ್ದು. ಅಲ್ಲದೋ?
ಧನುಪೂಜೆ ಶುದ್ದಿ ಮಾತಾಡಿಗೊಂಡಿದ್ದ ಹಾಂಗೇ, ಧನುಪೂಜೆ ಉತ್ಥಾನವೂ ಆಗಿ ಬಿಟ್ಟತ್ತು! ಬೈಲಿನ ಕೆಲವು ಜೆನ ಅವಕಾಶಲ್ಲಿ ಹೋಯಿಕ್ಕಿದ್ದವುದೇ!

ಎಲ್ಲ ಸರಿ, ಈವಾರಕ್ಕೆಂತರ ಶುದ್ದಿ?
ಬೇರೆಂತಾರು ಊರಶುದ್ದಿ ಮಾತಾಡುವೊ ಹೇಳಿ ಗ್ರೇಶಿಗೊಂಡಿಪ್ಪದ್ದೇ – ಅದಾ, ಬಂದೇ ಬಿಟ್ಟತ್ತು ಶೆಂಕ್ರಾಂತಿ!
ಪರ್ವಕಾಲ ಆಗಿಪ್ಪ ಮಕರಶೆಂಕ್ರಾಂತಿಯ ಬಿಟ್ಟು ಬೇರೇವದೋ ನೇರಂಪೋಕು ಮಾತಾಡಿರೆ ರಂಗಮಾವ ಪುನಾ ಪರಂಚುಗು!! 🙁
ಅವಕ್ಕೆ ಹಾಂಗೇ – ಏನಾರು ಬಿಂಗಿ ಮಾತಾಡಿ ಹೊತ್ತುಕಳವದು ಕಂಡ್ರೆ ಆಗಲೇ ಆಗ; ಅದಿರಳಿ!
ಶೆಂಕ್ರಾಂತಿ – ಅದರ್ಲಿಯೂ ಮಕರಶೆಂಕ್ರಾಂತಿ, ಅದಕ್ಕೆ ಹೊಂದಿಗೊಂಡ ಊರ ಆಚಾರಂಗೊ, ಮಕರದ ವಿಳಕ್ಕು (ಬೆಣಚ್ಚು) – ಇದೆಲ್ಲದರ ಬಗ್ಗೆ ಬೈಲಿಲಿ ಒಂದರಿ ನೆಂಪು ಮಾಡಿಗೊಂಬ, ಆಗದೋ?

ಧನುರ್ಮಾಸದ ಚಳಿಲಿಯೂ ಧನುಪೂಜೆಯ ಬೆಶಿ..! 46

ಧನುರ್ಮಾಸದ ಚಳಿಲಿಯೂ ಧನುಪೂಜೆಯ ಬೆಶಿ..!

ಒರಕ್ಕಿಂಗೂ ಚಳಿಗೂ ಸೋದರ ಸಮ್ಮಂದ.
– ಹಾಂಗೊಂದು ಸಂಶಯ ಬಯಿಂದು ಒಪ್ಪಣ್ಣಂಗೆ.
ಅದಕ್ಕೆ ಕಾರಣ ಇಲ್ಲದ್ದೆ ಅಲ್ಲ – ಚಳಿ ಜೋರಾದ ಹಾಂಗೇ ಒರಕ್ಕುದೇ ಜೋರು!
ಉದೆಕಾಲ ಆರು ಗಂಟಗೆ ಏಳುವ ಜವ್ವನಿಗರು – ಈಗ ಗಡಿಯಾರವೂ ಏಳು ಹೇಳಿದ ಮೇಗೆಯೇ ಏಳುದಿದಾ!
ನೆಗೆಮಾಣಿ ಅಂತೂ ಹತ್ತು ಗಂಟೆ ಆದರೂ ಏಳ° ಹೇಳಿ ಬಂಡಾಡಿಅಜ್ಜಿ ನೆಗೆಮಾಡಿಗೊಂಡು ಪರಂಚುಗು –
ಅಜ್ಜಿಗೆ ಈಗ ಪ್ರಾಯ ಆಗಿ ಒರಕ್ಕು ಕಮ್ಮಿ ಆಯಿದು; ಛಳಿ ಇರಲಿ, ಮಳೆ ಇರಲಿ – ನಾಕು ಗಂಟಗೆ ಎದ್ದು ಕೂದೊಂಗು..!
ಅದು ಬೇರೆ ಸಂಗತಿ!

ಫಕ್ಕನೆ ನೆಂಪಾದ ಚೊಕ್ಕ ಶುದ್ದಿಗೊ! 79

ಫಕ್ಕನೆ ನೆಂಪಾದ ಚೊಕ್ಕ ಶುದ್ದಿಗೊ!

ಹೋ – ಅದಪ್ಪು!
ಪಕ್ಕನೆ ಹೇಳುವಗ ನೆಂಪಾತು, ಮನಿಶ್ಶರಿಂಗೆ ಎಂತಾರು ಹೇಳುವಗ/ ಕೇಳುವಗ/ಮಾಡುವಗ / ಮಾತಾಡುವಗ ಅದಕ್ಕೆ ಸಮ್ಮಂದಪಟ್ಟ ಯೇವದಾರು ಶೆಬ್ದ / ಕಾರ್ಯ/ ಕೃತಿ / ವಸ್ತು ನೆಂಪಪ್ಪದು.
ಒಂದರ ಕೇಳುವಗ ಮತ್ತೊಂದು ನೆಂಪಪ್ಪದು, ಒಂದರ ಹೇಳುವಗ ಇನ್ನೊಂದು ನೆಂಪಪ್ಪದು – ಅವೆರಡಕ್ಕೆ ಸಮ್ಮಂದವೇ ಇರ, ಅತವಾ ಇಪ್ಪಲೂ ಸಾಕು. ಆದರೂ ನೆಂಪಾವುತ್ತು. ಬೇಕೂಳಿರೂ ನೆಂಪಾಗದ್ದದು ಕೆಲವು ಬೇಡ ಹೇಳಿರೂ ನೆಂಪಾವುತ್ತು!
ಇದಕ್ಕೆ ಕಾರಣ ಎಂತರ!? – ಅವೆರಡಕ್ಕೆ ಏನಾರು ಸಾಮ್ಯತೆ ಇರ್ತು.
ನಮ್ಮ ಮನಸ್ಸಿಂಗೆ ಈ ವಸ್ತುವಿಂಗೂ ಆ ವಸ್ತುವಿಂಗೂ ತಾಳೆ ಹಾಕಿ ಆವುತ್ತು. ಹಾಂಗಾಗಿ ಈ ವಿಶಯ ಹೇಳುವಗ ಆ ವಿಶಯ ನೆಂಪಪ್ಪದು.
ವಿಶಯಂದಲೂ ಈ ವಿಶಯಲ್ಲಿಪ್ಪ ಆ ಶೆಬ್ದ ಕೇಳಿ ಅಪ್ಪಗ ಆ ವಿಶಯಲ್ಲಿಪ್ಪ ಅದೇ ಶಬ್ದ ನೆಂಪಪ್ಪದು.

ಪ್ರಾಯ ಆಗಿ ರಜ ಮರವಲೆ ಸುರು ಆದರೆ ಅಂತೂ ಈ ಸಂಗತಿ ಜೋರೇ ಜೋರು!
ಆರಾರು ಎಂತಾರು ಹೇಳಿರೆ ಒರಕ್ಕಿಲಿ ಕಿಚ್ಚುಮುಟ್ಟಿ ಎಚ್ಚರಿಗೆ ಆದ ಹಾಂಗೆ, ಪಕ್ಕನೆ ಬೇರೆಂತದೋ ಯೋಚನೆ ಮಾಡಿ ತಲೆ ಅಲ್ಲಿಗೆ ಓಡುಸುಗು.
ಎಷ್ಟೋ ಸರ್ತಿ ಇದು ಒಳ್ಳೆದೇ ಆದರೂ, ಕೆಲವು ಸರ್ತಿ ಇದು ಗಮ್ಮತ್ತಿನ ನೆಗೆಗೆ ಕಾರಣ ಆವುತ್ತು. ಅತವಾ, ಮತ್ತೆ ನೆಂಪು ಮಾಡುವಗ ನೆಗೆಬತ್ತು.

ಶುದ್ದಿಒಪ್ಪಣ್ಣಂಗೂ – ಶುದ್ದಿ ಹೇಳುವಗ ಹಾಂಗೇ ಆದರೆ ಹೇಂಗಕ್ಕು?
ಈ ವಾರ ಅದೇಶುದ್ದಿ ಮಾತಾಡುವೊ ಆಗದೋ..?